*ಸದ್ದು ಮಾಡುತ್ತಿದೆ "ಸಾವಿತ್ರಿ" ಚಿತ್ರದ ಹಾಡುಗಳು..* ಪಿ ಎನ್ ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಶಾಂತ್ ಕುಮಾರ್ ಹೀಲಲಿಗೆ ನಿರ್ಮಿಸಿರುವ "ಸಾವಿತ್ರಿ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಚಿತ್ರದ ಮೂರು ಹಾಡುಗಳು ಹಾಗೂ ಟ್ರೇಲರನ್ನು ಪ್ರದರ್ಶಿಸಲಾಯಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಮುಖ್ಯ ಅತಿಥಿಯಾಗಿ ಹ ಆಗಮಿಸಿ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಾನು ಮಾಡುವ ಎಲ್ಲಾ ಕಾರ್ಯದಲ್ಲೂ ಅಪ್ಪು ಅವರಿರುತ್ತಾರೆ. ಈ ನೂತನ ವರ್ಷದಲ್ಲಿ ತಮ್ಮನೆಲ್ಲಾ ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದೇನೆ. ಎಲ್ಲರಿಗೂ ಶುಭಾಶಯ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ....
ಇದೇ ಶುಕ್ರವಾರಜಾಡಘಟ್ಟ ಬಿಡುಗಡೆ
ಯುವ ಪಡೆಗಳೇ ಸೇರಿಕೊಂಡು ಸಿದ್ದಪಡಿಸಿರುವ ‘ಜಾಡಘಟ್ಟ’ ಚಿತ್ರವುಇದೇ ಶುಕ್ರವಾರದಂದುತೆರೆಕಾಣುತ್ತಿದೆ. ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಂಕಲನಕಾರನಾಗಿಕಿರುತೆರೆ, ಹಿರಿತೆರೆಯಲ್ಲಿಅನುಭವ ಪಡೆದುಕೊಂಡಿರುವಎಸ್.ರಘು ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಸಂಕಲನ, ನಿರ್ದೇಶನಮತ್ತುನಾಯಕನಾಗಿ ಅಭಿನಯಿಸಿರುವುದು ವಿಶೇಷ. ಸೋದರ ನಾಯಕ,ನಿರ್ದೇಶಕಆಗುತ್ತಿರುವುದರಿಂದ ಶಶಿಮಣಿ ನಿರ್ಮಾಣ ಮಾಡುವುದರಜತೆಗೆಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೋಕಿನಲ್ಲಿಜಾಡಘಟ್ಟಎನ್ನುವ ಸ್ಥಳವಿದೆ.
ಚಿತ್ರೀಕರಣ ಮುಗಿಸಿದ ಯುಟರ್ನ್ ೨
ಹಾರರ್ ಅಂಶಗಳನ್ನು ಒಳಗೊಂಡಿದ್ದು, ಪಿಜ್ಜಾ ಸರಬರಾಜು ಮಾಡುವ ವ್ಯಕ್ತಿಯ ಸುತ್ತಕಥೆ ಹೋಗುವ ‘ಯುಟರ್ನ್ ೨’ ಸಿನಿಮಾದಚಿತ್ರೀಕರಣವು ಬೆಂಗಳೂರು, ಬಿಡದಿ, ಹೊನ್ನಾವರ ಸುಂದರ ತಾಣಗಳಲ್ಲಿ ನಡೆದಿದೆ.ನೋಡುಗರುಇಷ್ಟಪಡುವಂತಹಚಿತ್ರಕಥೆಇರಲಿದ್ದು, ಜತೆಗೆ ಸಾಮಾಜಿಕ ಸಂದರ್ಭಗಳ ಸನ್ನಿವೇಶಗಳು ಕಾಣಿಸಿಕೊಳ್ಳಲಿದೆ. ಸಿನಿಮಾಕ್ಕೆಚಿತ್ರಕಥೆ,ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ ಮಾಡಿರುವಚಂದ್ರುಓಬಯ್ಯಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದಕ್ಕೂ ಮುನ್ನಇವರುಎರಡುಕಾದಂಬರಿ ಮತ್ತುಎರಡು ಕಿರುಕಥೆಗಳನ್ನು ಬರೆದಿದ್ದು,
*ಫೆಬ್ರವರಿಯಲ್ಲಿ ಫೋರ್ ವಾಲ್ಸ್ ಸಿನಿಮಾ ತೆರೆಗೆ...ಅಚ್ಯುತ್ ಸಿನಿಮಾ ವಿತರಣೆ ಮಾಡಲಿದ್ದಾರೆ ಸತ್ಯಪ್ರಕಾಶ್* ಟೈಟಲ್, ಪೋಸ್ಟರ್, ಟೀಸರ್ ಹೀಗೆ ಪ್ರತಿ ಹಂತದಲ್ಲೂ ಕ್ಯೂರಿಯಾಸಿಟಿ ಹುಟ್ಟಿಸಿರುವ ಸಿನಿಮಾ ಫೋರ್ ವಾಲ್ಸ್.. ಫರ್ ದ ಫಸ್ಟ್ ಟೈಮ್ ಖ್ಯಾತ ನಟ ಅಚ್ಯುತ್ ಕುಮಾರ್ ಹೀರೋ ಆಗಿ ನಟಿಸಿರುವ ‘ಫೋರ್ ವಾಲ್ಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿತು. ಅಚ್ಯುತ್, ಸುಜಯ್, ಜಾಹ್ನವಿ, ಭಾಸ್ಕರ್ ನೀನಾಸಂ, ಡಾ.ಪವಿತ್ರ, ರಚನಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಫೆಬ್ರವರಿಯಲ್ಲಿ ‘ಫೋರ್ ವಾಲ್ಸ್’ ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ....
*ಕಣ್ಮನ ಸೆಳೆಯುತ್ತಿದೆ "ಕಡಲೂರ ಕಣ್ಮಣಿ" ಚಿತ್ರದ ಹಾಡು.* ರಾಮ್ ಪ್ರಸನ್ನ ಹುಣಸೂರು ನಿರ್ದೇಶನದ "ಕಡಲೂರ ಕಣ್ಮಣಿ" ಚಿತ್ರಕ್ಕಾಗಿ ಮಧುರಾಮ್ ಅವರು ಬರೆದಿರುವ "ಎದೆಯೊಳಗೆ ಈ ಪ್ರೀತಿ ಶುರುವಾಯಿತು ನನಗೆ" ಎಂಬ ಹಾಡು ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಯಿತು. ನನಗೆ ಹದಿನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು. ಈ ಚಿತ್ರ ಆರಂಭವಾದ ಒಂದು ಪ್ರಸಂಗ ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ಜೀವನದಲ್ಲಿ ನೊಂದ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರದ ಬಳಿ ಹೋಗುತ್ತಿದೆ. ಇನೇನ್ನೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟರಲ್ಲಿ ಹಿಂದೆ ನನ್ನ ತಂದೆ-ತಾಯಿ ಕಂಡರು. ಆಗ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿದೆ. ಈ ಸಿನಿಮಾದ ನಿರ್ಮಾಪಕರು ನನ್ನ ಸ್ನೇಹಿತರು. ....
*ಬಿಡುಗಡೆಯಾಯಿತು "ಖಡಕ್ ಹಳ್ಳಿಹುಡುಗರು" ಚಿತ್ರದ ಕನ್ನಡಾಭಿಮಾನದ ಗೀತೆ.* *ರಾಘವೇಂದ್ರ ರಾಜಕುಮಾರ್ ಹಾಡಿರುವ ಹಾಡಿಗೆ ಭಾರಿ ಮೆಚ್ಚುಗೆ.* ಹೊಸಬರ ತಂಡವೊಂದು ಹೊಸರೀತಿಯ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಆ ಚಿತ್ರಕ್ಕೆ "ಖಡಕ್ ಹಳ್ಳಿ ಹುಡುಗರು" ಎಂದು ಹೆಸರಿಡಲಾಗಿದೆ. ಹಳ್ಳಿ ಹಿನ್ನೆಲೆಯಿಂದ ಬಂದಿರುವ ಎಂ ಯು ಪ್ರಸನ್ನ ಹಳ್ಳಿ ನಿರ್ದೇಶಿಸಲಿರುವ ಈ ಚಿತ್ರದ ಕನ್ನಡಾಭಿಮಾನದ ಹಾಡೊಂದನ್ನು ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ. ಈ ಹಾಡಿನ ಬಿಡುಗಡೆ ಸಮಾರಂಭ ಗಣರಾಜ್ಯೋತ್ಸವದ ಶುಭದಿನ ನೆರವೇರಿತು. ಖ್ಯಾತ ನಿರ್ಮಾಪಕ ರೆಹಮಾನ್ ಹಾಡನ್ನು ಬಿಡುಗಡೆ ಮಾಡಿದರು. ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಮಾರಂಭದ ....
*ವಿಭಿನ್ನ ಕಥಾಹಂದರದ "ಸ್ಥಬ್ಧ" ಚಿತ್ರಕ್ಕೆ ಚಾಲನೆ.* *ಪ್ರಮುಖಪಾತ್ರಗಳಲ್ಲಿ ರಾಘವೇಂದ್ರ ರಾಜಕುಮಾರ್ , ಪ್ರತಾಪ್ ಸಿಂಹ - ಹರ್ಷಿಕಾ ಪೂಣಚ್ಛ.* ರಾಘವೇಂದ್ರ ರಾಜಕುಮಾರ್ ಅಭಿನಯದ "ಸ್ತಬ್ಧ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಶಾಸಕ ರಾಮಲಿಂಗ ರೆಡ್ಡಿ ಅವರ ಪುತ್ರ ಶ್ರೀರಾಜ್ ರಾಮಲಿಂಗಾರೆಡ್ಡಿ ಆರಂಭಫಲಕ ತೋರಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ||ಸಿ.ಸೋಮಶೇಖರ್ ಕ್ಯಾಮೆರಾ ಚಾಲನೆ ಮಾಡಿದರು. ವೈದ್ಯರಾಗಿರುವ ಡಾ||ಡಿ.ವಿ.ವಿದ್ಯಾಸಾಗರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಲಾಲಿರಾಘವ ನಿರ್ದೇಶಿಸುತ್ತಿದ್ದಾರೆ. ....
ಡಾ.ರಾಜ್ಕುಮಾರ್ ಪಾತ್ರಕ್ಕೆಜೀವತುಂಬುತ್ತಿದ್ದರು–ಎಸ್.ಎ.ಚಿನ್ನೆಗೌಡ ನೂರಐವತ್ತು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಗೌರಿಶ್ರೀ ಹೊಸ ಪ್ರಯತ್ನಎನ್ನುವಂತೆ ‘ಜನರಕ್ಷಕ’ ಚಿತ್ರಕ್ಕೆ ನಿರ್ಮಾಣ, ನಿರ್ದೇಶನಜೊತೆಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಡಿಬರಹದಲ್ಲಿ ‘ನಾ ಭಕ್ಷಕ’ ಎಂದು ಹೇಳಿಕೊಂಡಿದೆ.ಸಿನಿಮಾದ ಪೋಸ್ಟರ್ನ್ನು ಬಿಡುಗಡೆ ಮಾಡಿದ ಹಿರಿಯ ನಿರ್ಮಾಪಕಎಸ್.ಎ.ಚಿನ್ನೆಗೌಡ ಮಾತನಾಡಿಡಾ.ರಾಜ್ಕುಮಾರ್ ಹೆಸರು ಮೊದಲು ಮುತ್ತುರಾಜ್ಎಂಬುದಾಗಿಇತ್ತು. ‘ಬೇಡರಕಣ್ಣಪ್ಪ’ ನಿರ್ದೇಶಕ ಹೆಚ್.ಎಲ್.ಎನ್.ಸಿಂಹ ರವರು ....
*ಪ್ರಣಯರಾಜನ ಕನಸಿನ ಕೂಸು "ಆರ್ಟ್ ಎನ್ ಯು" ಗೆ ಅಧಿಕೃತ ಚಾಲನೆ* . ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ, ಕಳೆದ 54 ವರ್ಷಗಳಿಂದ ಕನ್ನಡ ಕಲಾದೇವಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರಣಯರಾಜ ಶ್ರೀನಾಥ್ ಅವರ ಕನಸಿನ ಕೂಸು "ಆರ್ಟ್ ಎನ್ ಯು". ಈ ಸಂಸ್ಥೆಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಖ್ಯಾತ ನಟ ಉಪೇಂದ್ರ ಈ ಸಂಸ್ಥೆಯನ್ನು ಉದ್ಘಾಟಿಸಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ನಾನು ಬರಲಿಕ್ಕೆ ಆಗುತ್ತಿಲ್ಲ. ಶ್ರೀನಾಥ್ ಸರ್ ಅವರ ಈ ಪ್ರಯತ್ನಕ್ಕೆ ಒಳ್ಳೆಯದಾಗಲಿ. ಸದಾ ನಾನು ಅವರೊಂದಿಗಿರುತ್ತೇನೆ ಎಂಬ ಧ್ವನಿ ಸಂದೇಶ ಕಳುಹಿಸಿ ಉಪೇಂದ್ರ ಶುಭ ಕೋರಿದರು. " ಆರ್ಟ್ ಎನ್ ಯು" ಸಂಸ್ಥೆಯಲ್ಲಿ ನಟನೆ, ನಿರ್ದೇಶನ, ಕಥೆ ಹಾಗೂ ....
ಸಚಿತ್ ಫಿಲಂಸ್ ಲಾಂಛನದಲ್ಲಿ ವೆಂಕಟ ಗೌಡ ಮತ್ತು ಮೀನಾ ವೆಂಕಟ್ ಗೌಡ ನಿರ್ಮಾಣ, ಶಶಾಂಕ್ ರಾಜ್ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ನಾಚಿ. ಗೂಳಿಹಟ್ಟಿ, ಹಾಲು ತುಪ್ಪ ಮತ್ತು ಉಡುಂಬಾ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದವರು ಪವನ್ ಶೌರ್ಯ. ಈಗ ನಾಚಿ ಚಿತ್ರದಲ್ಲಿಯೂ ನಾಯಕನಟನಾಗಿ ನಟಿಸುತ್ತಿದ್ದಾರೆ. ಕ್ರೇಜ಼ಿಸ್ಟಾರ್ ರವಿಚಂದ್ರನ್ ಅವರ ಗರಡಿಯಲ್ಲಿ ಕೆಲಸ ಕಲಿತು, ನಂತರ ಯುಗಯುಗಗಳೇ ಸಾಗಲಿ, ಉಡ, ಮಾವಳ್ಳಿ ಮಿಲ್ಟ್ರಿ ಹೋಟೆಲ್, ಗೂಳಿಹಟ್ಟಿ, ಹನಿ ಹನಿ ಇಬ್ಬನಿ, ಹಾಲುತುಪ್ಪ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಶಶಾಂಕ್ ರಾಜ್ `ನಾಚಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಅಕ್ಟೋಬರ್ 29ರಂದು ಅದ್ದೂರಿ ....
*ಸತ್ಯಹೆಗಡೆ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿದೆ ಎರಡು ಮನಸೆಳೆಯುವ ಕಿರುಚಿತ್ರಗಳು.* ಅಭಿಷೇಕ್ ಕಾಸರಗೋಡು ನಿರ್ದೇಶನದ "ಪಪ್ಪೆಟ್ಸ್" ಹಾಗೂ ಮಂಸೋರೆ ನಿರ್ದೇಶನದ "ದಿ ಕ್ರಿಟಿಕ್" ಹತ್ತು ನಿಮಿಷ ಅವಧಿಯ ಈ ಎರಡು ಕಿರುಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಕಳೆದ ಇಪ್ಪತ್ತಾರು ವರ್ಷಗಳಿಂದ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸತ್ಯ ಹೆಗಡೆ ಈ ಕಿರುಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿದ್ದಾರೆ. ಮೊದಲು ಅಭಿಷೇಕ್ ಕಾಸರಗೋಡು ನಿರ್ದೇಶನದ "ಪಪ್ಪೆಟ್ಸ್" ಕಿರುಚಿತ್ರದ ಪ್ರದರ್ಶನ ನಡೆಯಿತು. ಗೌತಮಿ ಜಾಧವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. . ನನಗೆ ಅವಕಾಶ ನೀಡಿದ ಸತ್ಯ ಹೆಗಡೆ ....
*ವಾಗೀಶ್ ಆರ್ ಕಟ್ಡಿ ನಿರ್ದೇಶನದಲ್ಲಿ ಮೂಡಿಬಂದಿದೆ "ಕರ್ನಾಟಕದ ಜಲಿಯನ್ ವಾಲಾಬಾಗ್" ಕಿರುಚಿತ್ರ.* ಪ್ರತಿಭಾವಂತರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಕಿರುಚಿತ್ರ. ಎಷ್ಟೋ ಕಿರುಚಿತ್ರಗಳಲ್ಲಿ ದೊಡ್ಡ ವಿಷಯಗಳನ್ನು ಹೇಳಬಹುದು. ಅಂತಹ ಒಂದು ಪ್ರಯತ್ನ ಮಾಡಿದ್ದಾರೆ ವಾಗೀಶ್ ಆರ್ ಕಟ್ಟಿ. ನಾನು ಮೂಲತಃ ಸಾಫ್ಟ್ವೇರ್ ಇಂಜಿನಿಯರ್. ನನ್ನೂರು ಗೌರಿಬಿದನೂರು. ನಮ್ಮೂರಿನ ಬಳಿ ವಿದುರಾಶ್ವಥ ಎಂಬ ಪುರಾಣ ಪ್ರಸಿದ್ದವಾದ ಹಳ್ಳಿಯಿದೆ. ಇದು ಪುರಾಣ ಪ್ರಸಿದ್ಧವೂ ಹೌದು. ಇತಿಹಾಸ ಪ್ರಸಿದ್ದವೂ ಹೌದು. ಏಕೆಂದರೆ 1938ರಲ್ಲಿ ಈ ಊರಿನಲ್ಲಿ ಸ್ವತಂತ್ರಕ್ಕಾಗಿ ಸುಮಾರು ನಲವತ್ತಕ್ಕೂ ಅಧಿಕ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಇದನ್ನು "ಸೌತ್ ಇಂಡಿಯಾ ....
*ಸಂದೇಶ್ ಶೆಟ್ಟಿ ಅಜ್ರಿ ನಿರ್ದೇಶನದಲ್ಲಿ "ಇನಾಮ್ದಾರ್* ". *ಜನಾಂಗೀಯ ಘರ್ಷಣೆ ಸುತ್ತ ಹೆಣೆದಿರುವ ಕಥೆ.* ಕೆಲವು ವರ್ಷಗಳ ಹಿಂದೆ " ಕತ್ತಲೆಕೋಣೆ" ಎಂಬ ಚಿತ್ರ ನಿರ್ದೇಶಿಸಿದ್ದ ಸಂದೇಶ್ ಶೆಟ್ಟಿ ಅಜ್ರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ "ಇನಾಮ್ದಾರ್". ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಪಶ್ಚಿಮಘಟ್ಟದ ತಪ್ಪಲಿನಲ್ಲಿ ವಾಸಿಸುವ ಕಾಡಿನ ಜನರಿಗೆ ಹಾಗೂ ಉತ್ತರ ಕರ್ನಾಟಕದ ಇನಾಮ್ದಾರ್ ಕುಟುಂಬಕ್ಕೆ ಇರುವ ನಂಟನ್ನು ಹಾಗೂ ಕಪ್ಪು - ಬಿಳುಪು ವರ್ಣದ ಜನರ ಘರ್ಷಣೆ ಸುತ್ತ ಈ ಚಿತ್ರಕಥೆ ಹೆಣೆದಿದ್ದೇನೆ. ಕಾಡಿನ ಮುಗ್ಧ ಜನರಿಗೆ ಆಗುತ್ತಿರುವ ಅನ್ಯಾಯ ಎತ್ತಿಹಿಡಿಯುವ ಪ್ರಯತ್ನ ....
*ಅಗ್ನಿ ಶ್ರೀಧರ್ ಸಾರಥ್ಯದಲ್ಲಿ ಬರಲಿದೆ "ಕ್ರೀಂ".* *ಸಂಯುಕ್ತ ಹೆಗಡೆ ನಾಯಕಿಯಾಗಿ ನಟಿಸಲಿರುವ ಈ ಚಿತ್ರಕ್ಕೆ ಅಭಿಷೇಕ್ ಬಸಂತ್ ನಿರ್ದೇಶನ.* ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ ಚಿತ್ರಗಳು ಕನ್ನಡ ಚಿತ್ರರಸಿಕರ ಮನಗೆದ್ದಿದೆ. ಈಗ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ "ಕ್ರೀಂ" ಚಿತ್ರ ಸದ್ಯದಲ್ಲೇ ಆರಂಭವಾಗಲಿದೆ. ಅಭಿಷೇಕ್ ಬಸಂತ್ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. "ಕಿರಿಕ್ ಪಾರ್ಟಿ" ಖ್ಯಾತಿಯ ಸಂಯುಕ್ತ ಹೆಗಡೆ ನಾಯಕಿಯಾಗಿ ನಟಿಸಲಿದ್ದಾರೆ. ಡಿ.ಕೆ.ದೇವೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ನೂತನ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಚಿಕ್ಕಂದಿನಿಂದಲೂ ನನಗೆ ....
ಬಿಡುಗಡೆಯಾಯ್ತು ’ಜಯ ಹೇ’ ಹಾಡು.. ಖ್ಯಾತ ಸಿಂಗರ್ ಆದರ್ಶ್ ಅಯ್ಯಂಗಾರ್ ಕಂಠದಲ್ಲಿ ಕೇಳಿ ದೇಶಭಕ್ತಿ ಗೀತೆ... ಸಂಗೀತ ಅನ್ನೋದೇ ಹಾಗೇ.. ಎಂತಹವರನ್ನು ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಒತ್ತಡಗಳನ್ನು ನಿವಾರಿಸಿ ಮನಕ್ಕೆ ಮುದ ನೀಡುವ ಮದ್ದು ಸಂಗೀತ ಅಂದ್ರು ತಪ್ಪಾಗಲಿಕ್ಕಿಲ್ಲ. ಸಂಗೀತವೆಂಬ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದು ದೈವಾನುಗ್ರಹದಿಂದ ಬಂದಿದ್ದರೂ ಪರಿಣತಿ ಹೊಂದಲು ಬೆವರು ಹರಿಸಲೇಬೇಕು ಎಂಬ ಮಾತನ್ನು ನಂಬಿರುವ ಗಾಯಕ ಆದರ್ಶ್ ಅಯ್ಯಂಗಾರ್. ಸಂಗೀತವೇ ತಮ್ಮ ಸಂಗಾತಿ ಅಂತಾ ಆರಾಧಿಸುತ್ತಿರುವ ಆದರ್ಶ್, ಜಯ ಹೇ ಎಂಬ ಗೀತೆ ಮೂಲಕ ಕರುನಾಡಿನ ಮನೆ-ಮನ ತಲುಪಲು ಬರುತ್ತಿದ್ದಾರೆ. ಆದರ್ಶ್ ಪ್ರೀತಿಯಿಂದ ಮಾಡಿರುವ ಜಯ ಹೇ ಹಾಡನ್ನು ವಿಂಗ್ ....
*"ಸರ್ವಸ್ಯ ನಾಟ್ಯಂ" ನಲ್ಲಿ ರಿಶಿಕುಮಾರ ಸ್ವಾಮಿ.* *ನೃತ್ಯಪ್ರಧಾನ ಈ ಚಿತ್ರ ಯುಗಾದಿ ವೇಳೆ ತೆರೆಗೆ.* ಬಿಗ್ ಬಾಸ್ ಮೂಲಕ ಅಪಾರ ಜನಮನ್ನಣೆ ಪಡೆದುಕೊಂಡಿರುವ ಶ್ರೀ ಯೋಗೇಶ್ವರ ರಿಶಿಕುಮಾರಸ್ವಾಮಿ(ಕಾಳಿ ಮಠ) ಮುಖ್ಯಪಾತ್ರದಲ್ಲಿ ನಟಿಸಿರುವ "ಸರ್ವಸ್ಯ ನಾಟ್ಯಂ" ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ನೆರವೇರಿತು.ಕುಂಚಿಘಟ್ಟ ಮಾಹಾಸಂಸ್ಥಾನದ ಶ್ರೀಹನುಮಂತನಾಥ ಮಹಾಸ್ವಾಮಿಗಳು, ಕುಣಿಗಲ್ ನ ಹರೇಶಂಕರ ಮಹಾಸಂಸ್ಥಾನದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರ ಉಪಸ್ಥಿತಿ ಯಲ್ಲಿ ಈ ಚಿತ್ರದ ಹಾಡುಗಳ ಲೋಕಾರ್ಪಣೆ ಸಿರಿ ಮ್ಯೂಸಿಕ್ ಮೂಲಕ ಆಯಿತು. ನಾನು ನೃತ್ಯ ನಿರ್ದೇಶಕ. ಕರ್ನಾಟಕ ಚಲನಚಿತ್ರ ....
*ಸುಂದರವಾಗಿದೆ "ಸುಮನ್" ಚಿತ್ರದ ಹಾಡುಗಳು.* ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ "ಸುಮನ್" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಎಸ್ ಆರ್ ವಿ ಥಿಯೇಟರ್ ನಲ್ಲಿ ನಡೆಯಿತು. ಎ.ಶಾಂತ್ ಕುಕ್ಕೂರ್ ಸಾಹಿತ್ಯದ ಹಾಗೂ ಜುಬಿನ್ ಪಾಲ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಖ್ಯಾತ ನಿರ್ದೇಶಕ ನಂದಕಿಶೋರ್ ಬಿಡುಗಡೆ ಮಾಡಿದರು. ಅವರ ತಂದೆ ಕೀರ್ತಿ ರಾಜ್ ಹಾಗೂ ನನ್ನ ತಂದೆ ಸುಧೀರ್ ಆತ್ಮೀಯ ಸ್ನೇಹಿತರು. ನಾನು ಮತ್ತು ಧರ್ಮ ಕೀರ್ತಿ ಕೂಡ ಹಾಗೆ. ಧರ್ಮ ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದಾನೆ. ಅವನಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ನಂದಕಿಶೋರ್. ಇದೊಂದು ತ್ರಿಕೋನ ಪ್ರೇಮಕಥೆ. ಐದು ಹಾಡುಗಳು ಹಾಗೂ ಐದು ಸಾಹಸ ಸನ್ನಿವೇಶಗಳಿದೆ. ಸುಮಾರು ....
*ತರುಣ್ ಟಾಕೀಸ್ ನ 5ನೇ ಚಿತ್ರಕ್ಕೆ ಶರಣ್ ನಾಯಕ.* *ಗಣಪತಿ ಸನ್ನಿಧಿಯಲ್ಲಿ ನವನೀತ್ ನಿರ್ದೇಶನದ ನೂತನ ಚಿತ್ರಕ್ಕೆ ಚಾಲನೆ.* "ರೋಜ್", "ಮಾಸ್ ಲೀಡರ್", " ವಿಕ್ಟರಿ 2" ಹಾಗೂ "ಖಾಕಿ" ಚಿತ್ರಗಳ ನಿರ್ಮಾಣ ಮಾಡಿದ್ದ ತರುಣ್ ಟಾಕೀಸ್ ಸಂಸ್ಥೆಯಿಂದ "ಪ್ರೊಡಕ್ಷನ್ ನಂ 5" ನೂತನ ಚಿತ್ರ ನಿರ್ಮಾಣವಾಗುತ್ತಿದೆ ಶರಣ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು "ಕರ್ವ" ಖ್ಯಾತಿಯ ನವನೀತ್ ನಿರ್ದೇಶಿಸುತ್ತಿದ್ದಾರೆ. ಈ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಮಾನಸ ತರುಣ್ ಆರಂಭ ಫಲಕ ತೋರಿದರು. ಖ್ಯಾತ ನಿರ್ದೇಶಕ ತರುಣ್ ಸುಧೀರ್ ....
*ಏಷ್ಯಾ ಸ್ಟಾರ್ ಗಾಲಾದಲ್ಲಿ ಸ್ಟಾರ್ ಡಿಸೈನರ್ ಫಾರೆವರ್ ನವೀನ್ ಕುಮಾರ್* ಫ್ಯಾಶನ್ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿರುವ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ಕನ್ನಡದ ಪ್ರತಿಭೆ ಫಾರೆವರ್ ನವೀನ್ ಕುಮಾರ್. ತಮ್ಮ ವಿಭಿನ್ನ, ವಿಶಿಷ್ಟ ವಿನ್ಯಾಸಗಳಿಂದ ಮನೆಮಾತಾಗಿರುವ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನವನ್ನು ಪಡೆದದುಕೊಂಡಿರುವ, ಫಾರೆವರ್ ನವೀನ್ ಕುಮಾರ್, ಸದಾ ಹೊಸತನದ ಮೂಲಕ ಫ್ಯಾಶನ್ ಇವೆಂಟ್ ಎದುರುಗೊಳ್ಳುತ್ತಿದ್ದಾರೆ.ಇಂತಹ ಫಾರೆವರ್ ನವೀನ್ ಕುಮಾರ್ ಅವರ ಖ್ಯಾತಿಗೆ ಈಗ ಇನ್ನೊಂದು ಗರಿ ಸೇರಿದೆ. ಮೆಟ್ ಗಾಲಾ ನಡೆಸಿದ ಏಷ್ಯಾ ಸ್ಟಾರ್ ಗಾಲಾ ಫ್ಯಾಶನ್ ಇವೆಂಟ್ ಇತ್ತೀಚೆಗೆ ಕೊಲಂಬೋದಲ್ಲಿ ....
*ಸದ್ಯದಲ್ಲೇ ಬರಲಿದೆ ಪ್ರಥಮ್ ಅಭಿನಯದ "ನಟ ಭಯಂಕರ" ಚಿತ್ರದ ಥ್ರಿಲ್ಲಿಂಗ್ ಟ್ರೇಲರ್..*
ಪ್ರಥಮ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ " ನಟ ಭಯಂಕರ" ಚಿತ್ರದ ಥ್ರಿಲ್ಲಿಂಗ್ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹಾರಾರ್, ಕಾಮಿಡಿ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಯಾವಾಗ ಬಿಡುಗಡೆಯಾಗುತ್ತದೆ? ಎಂಬ ಕಾತುರ ಪ್ರಥಮ್ ಅವರ ಅಭಿಮಾನಿಗಳಿಗಿದೆ.
ಸ್ವಾರಸ್ಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಜನವರಿ ಕೊನೆ ಅಥವಾ ಫೆಬ್ರವರಿ ಮೊದಲವಾರದಲ್ಲಿ ತೆರೆಗೆ ಬರಲಿದೆ. ಹೆಚ್ ಪಿ ನಿತೇಶ್ ಈ ಚಿತ್ರದ ಸಹ ನಿರ್ಮಾಪಕರು.