*RGV ಶಿಷ್ಯನ ’ಸ್ಟಾಕರ್’ ಸಿನಿಮಾ ರಿಲೀಸ್ ಗೆ ರೆಡಿ...* ಬಣ್ಣದ ಜಗತ್ತಿನಲ್ಲಿ ಕನಸುಗಳ ಹೊತ್ತು ಬರುವ ಮಂದಿಗೇನು ಕಮ್ಮಿ ಇಲ್ಲ. ಪ್ರತಿಭೆ, ಅದೃಷ್ಟ ಇದ್ದವರು ಗಟ್ಟಿಯಾಗಿ ನೆಲೆಯೂರ್ತಾರೆ. ಇಂತಹ ಪ್ರತಿಭೆಯೊಬ್ಬರು ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಗರಡಿ *ಇಂದ* ಪ್ರತ್ಯಕ್ಷರಾಗಿದ್ದಾರೆ. ಹಾಗಂತ ಅವ್ರು ತೆಲುಗಿನವರಲ್ಲ. ಅಪ್ಪಟ ಕನ್ನಡದವರೇ. ಅವರೇ ಕಿಶೋರ್ ಭಾರ್ಗವ್. ಸ್ಯಾಂಡಲ್ ವುಡ್ ನ ಭರವಸೆ ನಿರ್ದೇಶಕರಾಗಿ ಕಿಶೋರ್ ರ್ಭಾರ್ಗವ್ ಗಮನ ಸೆಳೆಯುತ್ತಿದ್ದಾರೆ. ಆರ್ ಜಿವಿ ಕ್ಯಾಂಪ್ ನಲ್ಲಿ ಐದಾರು ವರ್ಷಗಳ ಕಾಲ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿ ಸೈಕೋ ಎಂಬ *ತೆಲುಗು* ಸಿನಿಮಾ ಮಾಡಿದ್ದ ಕಿಶೋರ್ ಭಾರ್ಗವ್ ನಿರ್ದೇಶಿಸಿರುವ ....
KVN ಪ್ರೊಡಕ್ಷನ್ ಜೊತೆ ರಾಜಮೌಳಿ ಸಿನಿಮಾ….? ರಾಜಮೌಳಿ RRR ಬಳಗದ ಕನ್ನಡ ಮಾತು ಬಲು ಚೆನ್ನ! ಸಿನಿಮಾದ ಅಂಗಳದ ಯಾವುದೇ ಮೂಲೆ..ಗಲ್ಲಿ ಗಲ್ಲಿಯಲ್ಲಿಯೂ ಈಗ ಬರೀ RRR ಸಿನಿಮಾದ್ದೇ ಜಪ-ತಪ.. ಯೂಟ್ಯೂಬ್ ನಲ್ಲಿ ಬೆಂಕಿ ಬಿರುಗಾಳಿ ಸೃಷ್ಟಿಸ್ತಿರುವ RRR ಟ್ರೇಲರ್ ನೋಡಿ ಚಿತ್ರಪ್ರೇಮಿಗಳು ಬಹುಪರಾಕ್ ಅಂತಿದ್ದಾರೆ. ಜಕ್ಕಣ್ಣ ಈಸ್ ಗ್ರೇಟ್.. ರಿಯಲ್ ಹೀರೋ ಅಂತಾ ಶಹಬ್ಬಾಸ್ ಗಿರಿ ಕೊಡ್ತಿದ್ದಾರೆ. ಅದ್ಧೂರಿ.. ವೈಭೋಗದ RRR ಟ್ರೇಲರ್ ಲಾಂಚ್ ಇವೆಂಟ್ ಗೆ ಇವತ್ತು ಜಕ್ಕಣ್ಣಗಾರು ತಮ್ಮ ಬಳಗದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ನಗರದ ಓರಿಯನ್ ಮಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ RRR ಬಳಗ ಮಾಧ್ಯಮದವರ ಒಟ್ಟಿಗೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು. ಕನ್ನಡದಲ್ಲಿ ....
ಬಂಧನ-೨ ಚಿತ್ರಕ್ಕೆ ಅಶೋಕ ಹೋಟೆಲ್ ನಲ್ಲೇ ಚಾಲನೆ ಬಂಧನ ಕನ್ನಡದ ಎವರ್ ಗ್ರೀನ್ ಸಿನಿಮಾಗಳಲ್ಲೊಂದು. ವಿಷ್ಣುವರ್ಧನ್, ಸುಹಾಸಿನಿ, ರಾಜೇಂದ್ರಸಿಂಗ್ ಬಾಬು ಕಾಂಬಿನೇಶನ್ ನಲ್ಲಿ ಮೂಡಿಬಂದ ಅಪರೂಪದ ಕೃತಿ ಯಾಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಬಂಧನ-೨ ನಿರ್ಮಾಣವಾಗುತ್ತಿದೆ. ೩೭ ವರ್ಷಗಳ ಹಿಂದೆ ಎಲ್ಲಿ ಮುಹೂರ್ತ ನಡೆದಿತ್ತೋ ಅದೇ ಅಶೋಕ ಹೋಟೆಲಿನ ಸ್ವಿಮ್ಮಿಂಗ್ ಫೂಲ್ ಆವರಣದಲ್ಲೇ ಶುಕ್ರವಾರ ಈ ಚಿತ್ರದ ಮಹೂರ್ತ ನಡೆಯಿತು. ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನ ಸಾರಥ್ಯದಲ್ಲಿ ೧೯೮೪ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿದ್ದ ಉಷಾ ನವತ್ನರಾಮ್ ಅವರ ಅತ್ಯುತ್ತಮ ಕಥೆ, ವಿಷ್ಣು, ಸುಹಾಸಿನಿ ಅವರ ಮನೋಜ್ಞ ....
ಆಡು ಭಾಷೆಆಲ್ಬಂ ಶೀರ್ಷಿಕೆ ನಾವು ಸಾಮಾನ್ಯವಾಗಿ ಮಾತನಾಡುವಾಗ ‘ಅಲ್ಲಾ ಹೀಗೇಕೆ, ಅಲ್ಲಾ ನೀನೇನು ಮಾಡಿದೆ’ ಹೀಗೆ ತರೆಹವಾರಿ ಮಾತುಗಳ ಜತೆಗೆಅಲ್ಲಾ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತೇವೆ. ಇದನ್ನೆಕ್ಯಾಚ್ ಮಾಡಿಕೊಂಡಯುವ ಪ್ರತಿಭೆಗಳ ತಂಡವೊಂದು ‘ಅಲ್ಲಾ ನವೀನಾ’ ಎನ್ನುವ ನಾಲ್ಕು ನಿಮಿಷದ ವಿಡಿಯೋಆಲ್ಬಂನ್ನುಆರು ಲಕ್ಷದಲ್ಲಿಸಿದ್ದಪಡಿಸಿದ್ದಾರೆ. ‘ಅವನ್ನೆ ಶ್ರೀಮನ್ನಾರಾಯಣ’, ‘ಸಲಗ’ ಚಿತ್ರಗಳಿಗೆ ಹಾಡನ್ನು ಬರೆದಿರುವ ನಾಗಾರ್ಜುನ್ಶರ್ಮಾ ಸಾಹಿತ್ಯಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ಹಾಡಿಗೆ ಚಾಲನೆ ನೀಡಿದದುನಿಯಾ ವಿಜಯ್ ಮಾತನಾಡಿ ಮುಂದೆ ನಾಗಾರ್ಜುನಶರ್ಮ ನಿರ್ದೇಶಕನಾಗಿ ಬರಲಿ. ‘ಬೇಕಾ ಪ್ರೀತಿ ....
ನಾಯಕ ವರ್ಸಸ್ ಖಳನಾಯಕ ಹಿರಿಯ ನಿರ್ದೇಶಕಆರ್.ಅನಂತರಾಜು ಹನ್ನೊಂದನೇಚಿತ್ರ ‘ಕ್ಯಾಪಿಟಲ್ ಸಿಟಿ’ಗೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದುಆಕ್ಷನ್ಕಟ್ ಹೇಳುತ್ತಿರುವ ಸಿನಿಮಾದ ಮಹೂರ್ತ ಸಮಾರಂಭವು‘ಏಲಾ ಎಸ್ಟೇಟ್’ದಲ್ಲಿ ಸರಳವಾಗಿ ನಡೆಯಿತು. ಮೊದಲ ದೃಶ್ಯಕ್ಕೆ ಹಿರಿಯ ನಿರ್ಮಾಪಕ ಕೆ.ಮಂಜುಕ್ಲಾಪ್ ಮಾಡಿದರೆ, ಐಎಂಎಫ್ಎ ಸಂಸ್ಥೆಯದಿಲೀಪ್ಕ್ಯಾಮಾರಾ ಸ್ವಿಚ್ ಆನ್ ಮಾಡಿಚಿತ್ರಕ್ಕೆ ಶುಭ ಹಾರೈಸಿದರು.ಇನ್ಫಿನಿಟಿಕ್ರಿಯೇಷನ್ಸ್ಅಡಿಯಲ್ಲಿ ೨೩ ಸಿನಿಮಾ ಮೋಹಿಗಳು ಬಂಡವಾಳ ಹೂಡುತ್ತಿದ್ದು, ಇದರಲ್ಲಿಎಂಟು ಮಂದಿ ಬಣ್ಣ ಹಚ್ಚುತ್ತಿದ್ದಾರೆ.ಕರ್ನಾಟಕದರಾಜಧಾನಿ ಬೆಂಗಳೂರು.ಇಲ್ಲಿ ನಡೆಯುವಭೂಗತ ಲೋಕದ ಚಟುವಟಿಕೆಗಳು, ನಾಯಕಮತ್ತು ಖಳನಾಯಕನ ....
ಹೊರಬಂತುರೈಡರ್ಟ್ರೇಲರ್
‘ರೈಡರ್’ ಚಿತ್ರದಟ್ರೇಲರ್ಇತ್ತೀಚೆಗೆ ಬಿಡುಗಡೆಯಾಗಿದೆ. ಟಾಲಿವುಡ್ ನಿರ್ದೇಶಕ ವಿಜಯಕುಮಾರ್ಕೊಂಡಆಕ್ಷನ್ಕಟ್ ಹೇಳಿದ್ದಾರೆ. ಚಂದ್ರು ಮನೋಹರ್ ಮತ್ತು ಸುನಿಲ್ಗೌಡಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ನಿಖಿಲ್ಕುಮಾರ್ ಸೆಂಟಿಮೆಂಟ್, ಪ್ರೀತಿ, ಪ್ರೇಮ ಹೀಗೆ ಹಲವಾರುಕೌಟಂಬಿಕ ಅಂಶಗಳನ್ನು ಒಳಗೊಂಡಿದೆ.ಆಕ್ಷನ್ ದೃಶ್ಯಗಳನ್ನು ಬಹಳ ರಿಸ್ಕ್ತೆಗೆದುಕೊಂಡು ಚಿತ್ರೀಕರಿಸಿದ್ದೇವೆ.
ಎಲ್ಲರೂ ಸೇರಿ ಹೋರಾಟ ಮಾಡೋಣ - ಶಿವರಾಜ್ಕುಮಾರ್ ಚಿತ್ರರಂಗದಲ್ಲಿ ನಾಯಕತ್ವಕೊರತೆಇದೆ. ಅದನ್ನುತುಂಬಲು ಶಿವರಾಜ್ಕುಮಾರ್ ಸಮರ್ಥರುಎಂಬುದು ‘ಬಡವರಾಸ್ಕಲ್’ ಚಿತ್ರದ ಬಿಡುಗಡೆಪೂರ್ವಕಾರ್ಯಕ್ರಮದಲ್ಲಿ ಹಲವರುಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಇದರಕುರಿತಂತೆ ಮಾತನಾಡಿದ ಶಿವರಾಜ್ಕುಮಾರ್ ಲೀಡರ್ಅನ್ನೋದು ಬೇಡ.ಎಲ್ಲರಜತೆಗೆ ನಾನೂ ಒಬ್ಬನಾಗಿಇರ್ತೀನಿ.ನಾಯಕಎನ್ನುವದೊಡ್ಡಪಟ್ಟ ಬೇಡ.ಎಲ್ಲರೂ ಸೇರಿಒಟ್ಟಿಗೆ ಹೋರಾಟ ಮಾಡೋಣ.ಕನ್ನಡಧ್ವಜ ಸುಟ್ಟ ಮತ್ತು ಸಂಗೋಳ್ಳಿರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಘಟನೆಗೆ ಬೇಸರ ವ್ಯಕ್ತಿಪಡಿಸಿದರು.ಬಾವುಟವನ್ನು ಸುಡುವುದಕ್ಕೆ ಹೇಗೆ ....
ಅರ್ಜುನ್ಗೌಡದಲ್ಲಿರಾಮುಗೆ ಶ್ರದ್ದಾಂಜಲಿ ನಿರ್ಮಾಪಕರಾಮು ಬಂಡವಾಳ ಹೂಡಿರುವ ೩೯ನೇ ಚಿತ್ರ ‘ಅರ್ಜುನ್ಗೌಡ’ ವರ್ಷದ ಕೊನೆ ದಿನದಂದುತೆರೆಗೆ ಬರುತ್ತಿರುವುದಿರಿಂದಚಿತ್ರದಕುರಿತುಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ತಂಡವು ಮಾದ್ಯಮದ ಮುಂದೆ ಬಂದಿತ್ತು. ನಾಯಕ ಪ್ರಜ್ವಲ್ದೇವರಾಜ್ ಮಾತನಾಡಿರಾಮು ಸರ್ ನಿರ್ಮಾಣ ಶುರು ಮಾಡಿದ್ದುಅಪ್ಪನಜತೆಗೆ, ಅವರಕೊನೆಯ ಸಿನಿಮಾ ನನ್ನೋಂದಿಗೆ.ಇದನ್ನು ಹೇಳಲು ಬೇಸರವಾಗುತ್ತದೆ.ಚಿತ್ರ ನೋಡಿದಾಗಇದು ನಾನು ಮಾಡಿದಚಿತ್ರನಾ ಅನಿಸಿತ್ತು. ಶೂಟಿಂಗ್ದಲ್ಲಿಆಗಿದ್ದೆ ಬೇರೆ.ಎಡಿಟಿಂಗ್ರೂಮ್ದಲ್ಲಿ ಬೇರೆತರಹ ಮಾಡಿದ್ದಾರೆ.ಅವರು ಸಿನಿಮಾದ ಬಗ್ಗೆ ಹೆಚ್ಚು ....
ಕಿಚ್ಚ ಸುದೀಪ್ ತೆರೆಗೆ ಅರ್ಪಿಸಲಿದ್ದಾರೆ ಕನ್ನಡದ ‘83’ ಇಡೀ ಭಾರತೀಯ ಚಿತ್ರ ರಂಗವೇ ಎದುರು ನೋಡುತ್ತಿರುವ ಬಹು ಭಾಷಾ ಫ್ಯಾನ್ ಇಂಡಿಯ ಸಿನಿಮಾ ‘83’; ಭಾರತ ಏಕ ದಿನದ ವಿಶ್ವ ಕಪ್ ಕ್ರಿಕೆಟ್ ತನ್ನ ಮಡಿಲಿಗೆ ಪಡೆದ ವರ್ಷ ಕುರಿತಾದ ಸಿನಿಮಾ ಡಿಸೆಂಬರ್ ತಿಂಗಳ ಕ್ರಿಸ್ಮಸ್ ಬಿಡುಗಡೆ ಆಗಲು ಸಜ್ಜಾಗಿದೆ. ‘83’ ಕನ್ನಡದಲ್ಲಿ ಡಬ್ ಮಾಡಲಾದ ಚಿತ್ರವನ್ನು ಕ್ರಿಕೆಟ್ ಪ್ರೇಮಿ, ನಟ, ನಿರ್ದೇಶಕ, ನಿರ್ಮಾಪಕ ಕಿಚ್ಚ ಸುದೀಪ್ ಅವರು ತೆರೆಗೆ ಅರ್ಪಿಸುತ್ತಿದ್ದಾರೆ ಎಂಬುದು ಈ ಕ್ಷಣದ ಗೌರವಾನ್ವಿತ ವಿಷಯ. ಇಂದರೊಂದಿಗೆ ಕಿಚ್ಚ ಸುದೀಪ್ ರಿಲಯನ್ಸ್ ಎಂಟರ್ಟೈನ್ಮೇಂಟ್ ಜೊತೆ ಸೇರಿ ಬಹು ನಿರೀಕ್ಷಿತ ಸಿನಿಮಾ ’83’ ತೆರೆಗೆ ಅರ್ಪಣೆ ಮಾಡುತ್ತಿದ್ದಾರೆ. ಕಳೆದ ಎರಡೂವರೆ ....
ಗಂಡುಲಿ ಚಿತ್ರದ ಟ್ರೈಲರ್ ಬಿಡುಗಡೆ ಕೆಲವರ್ಷಗಳ ಹಿಂದೆ ಇಂಜಿನಿಯರ್ಸ್ ಎಂಬ ಚಿತ್ರ ಬಂದಿತ್ತು. ಅದರ ನಿರ್ದೇಶಕ ಹಾಗೂ ನಾಯಕನೂ ಆಗಿದ್ದ ವಿನಯ್ ರತ್ನಸಿದ್ಧಿ ಅವರೀಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೇನು ತೆರೆಗೆ ಬರಲು ಅಣಿಯಾಗಿ ನಿಂತಿರುವ ಈ ಚಿತ್ರದ ಹೆಸರು ಗಂಡುಲಿ. ವಿನಯ್ ರತ್ನಸಿದ್ದಿ ಜೊತೆ ನಾಯಕಿಯಾಗಿ ಛಾಯಾದೇವಿ ನಟಿಸಿದ್ದು, ನಾಯಕನ ತಾಯಿಯ ಪಾತ್ರವನ್ನು ಹಿರಿಯ ಕಲಾವಿದೆ ಸುಧಾನರಸಿಂಹರಾಜು ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಹೆಚ್ಚು ಹೆಚ್ಚು ವೀಕ್ಷಣೆಯಾಗುವ ಮೂಲಕ ಜನರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಚಿತ್ರವನ್ನು ಬರುವ ಸಂಕ್ರಾಂತಿ ಹಬ್ಬಕ್ಕೆ ....
ಅನೇಕ ಗಣ್ಯರ ಉಪಸ್ಥಿತಿಯಲ್ಲಿ *"ಆ್ಯಂಗರ್"* ಹಾಡುಗಳ ಲೋಕಾರ್ಪಣೆ. *ವಿಭಿನ್ನ ಕಥಾಹಂದರದ ಈ ಚಿತ್ರದ ನಾಯಕನಾಗಿ ಮೈಸೂರಿನ ಮನ್ವಿತ್ ಅಭಿನಯ* ಮೈಸೂರಿನ ಹೊಸತಂಡದ ಹೊಸಪ್ರಯತ್ನ *"ಆ್ಯಂಗರ್". ಈ* ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಉಮೇಶ್ ಬಣಕಾರ್, ಕನ್ನಡಪರ ಹೋರಾಟಗಾರರಾದ ರೂಪೇಶ್ ರಾಜಣ್ಣ ಸೇರಿದಂತೆ ಅನೇಕ ಗಣ್ಯರು ಹಾಡುಗಳನ್ನು ಲೋಕಾರ್ಪಣೆ ಮಾಡಿ, ಶುಭ ಕೋರಿದರು. ರೊಮ್ಯಾಂಟಿಕ್ ಕ್ರೈಂ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಚಿತ್ರದ ನಾಯಕ ಬಾಲ್ಯದ ಕೆಲವು ಘಟನೆಗಳಿಂದ ತುಂಬಾ ಮುಂಗೋಪಿಯಾಗಿರುತ್ತಾನೆ. ನಾಯಕಿಯ ಪ್ರವೇಶದ ನಂತರ ಆತನ ಜೀವನದಲ್ಲಿ ....
*ಬೆಂಗಳೂರಿನಲ್ಲಿ "ಡವ್ ಮಾಸ್ಟರ್" ಗೆ ಬಿರುಸಿನ ಚಿತ್ರೀಕರಣ.* *ಮಾನವ ಹಾಗೂ ಸಾಕುಪ್ರಾಣಿಯ ಸಂಬಂಧದ ಸುತ್ತಲ್ಲಿನ ಕಥೆ.* ಕೆಲವರು ತಮ್ಮ ಮಕ್ಕಳಷ್ಟೇ ಪ್ರೀತಿ - ವಾತ್ಸಲ್ಯದಿಂದ ಸಾಕುಪ್ರಾಣಿಗಳನ್ನು ಸಾಕಿರುತ್ತಾರೆ. ಆ ಪ್ರಾಣಿಗೂ ತನ್ನ ಯಜಮಾನನೇ ಸರ್ವಸ್ವ. ಇದೇ ಅಂಶವನ್ನು ಮುಖ್ಯವಾಗಿಟ್ಟುಕೊಂಡು ನಿರ್ಮಾಣವಾಗಿತ್ತಿರುವ ಚಿತ್ರ "ಡವ್ ಮಾಸ್ಟರ್". ತಬಲ ನಾಣಿ ಹಾಗೂ ರಾಕಿ(ನಾಯಿ) ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಉತ್ತರಹಳ್ಳಿ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದೆ. ನಾನು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರ. ....
ಹನುಮ ಜಯಂತಿ ದಿನದಂದು ಜಿ ಸಿನಿಮಾಸ್ ನಿರ್ಮಾಣದ ‘ಲವ್ ಯುರಚ್ಚು’ ಚಿತ್ರದಟ್ರೇಲರ್ ಬಿಡುಗಡೆಗೆಆಕ್ಷನ್ ಪ್ರಿನ್ಸ್ಧ್ರುವಸರ್ಜಾ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಟಿಪ್ಸ್ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ. ಕನ್ನಡ ಬಾವುಟವನ್ನು ಸುಟ್ಟುಹಾಕಿರುವುದುಖಂಡನೀಯ.ಮೊದಲು ನಾವುಗಳು ಕನ್ನಡ ಭಾಷೆಗೆಗೌರವಕೊಡಬೇಕು.ತುಣುಕುಗಳುಚೆನ್ನಾಗಿ ಬಂದಿದೆ.ತಂಡಕ್ಕೆ ಒಳ್ಳೆಯದಾಗಲಿ ಎಂದರು.
‘ಸಖತ್’ ಖುಷಿಯಲ್ಲಿ ಗಣಿ-ಸುನಿ… 25ನೇ ದಿನದತ್ತ ‘ಸಖತ್’ ಜರ್ನಿ! ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ಸಖತ್ ಸಿನಿಮಾ ಗೆಲುವಿನ ನಾಗಲೋಟ ಮುಂದುವರೆಸಿದೆ. ಮೂರು ವಾರದ ಹಿಂದಷ್ಟೇ ರಿಲೀಸ್ ಆಗಿದ್ದ ಸಖತ್ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ತಿತ್ತು. ಇದೀಗ ಸಖತ್ ಸಿನಿಮಾ 25ನೇ ದಿನದತ್ತ ದಾಪುಗಾಲಿಟ್ಟಿದೆ. ಮತ್ತೊಮ್ಮೆ ಗಣಿ-ಸುನಿ ಕಾಂಬೋ ವರ್ಕ್ ಆಗಿದೆ. ಇದೇ ಖುಷಿಯಲ್ಲಿ ಸಖತ್ ಬಳಗ ಸಕ್ಸಸ್ ಮೀಟ್ ಆಯೋಜಿಸಿ, ಒಂದಷ್ಟು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಸಖತ್ ಸಿನಿಮಾ ಬಗ್ಗೆ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಫ್ಯಾಮಿಲಿ ಆಡಿಯನ್ಸ್ ಸಿನಿಮಾ ಎಂಜಾಯ್ ....
*"ಎನ್ ಟಿ ಆರ್" ಅಗಲಿದ್ದಾರೆ ಹಾಸ್ಯನಟ ಕೆಂಪೇಗೌಡ.* *ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ ಪ್ರಜ್ವಲ್ ದೇವರಾಜ್.* ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳಿಂದ ಹಾಸ್ಯನಟರಾಗಿ ಜನಮನಸೂರೆಗೊಂಡಿರುವ ಕೆಂಪೇಗೌಡ ಅವರು ನಾಯಕನಾಗಿ ಅಭಿನಯಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮೋಷನ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ .ಮಾಡಿದರು. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗಬಹಿಸಿದ್ದರು. ಚಿತ್ರಕ್ಕೆ "ಎನ್ ಟಿ ಆರ್" ಎಂದು ಹೆಸರಿಡಲಾಗಿದೆ. "ಎನ್ ಟಿ ಆರ್" ಅಂದರೆ "ನಮ್ಮ ತಾಲ್ಲೂಕಿನ ರೂಲರ್" ....
*"ಸ್ನೇಹಿತ" ನಿಗೆ ಇಪ್ಪತ್ತೈದರ ಸಂಭ್ರಮ.* ಈ ಹಿಂದೆ "ಪ್ಯಾರ್ ಕಾ ಗೋಲ್ ಗುಂಬಜ್" ಚಿತ್ರದಲ್ಲಿ ನಟಿಸಿ ಮನೆಮಾತಾಗಿದ್ದ ಧನುಷ್ ನಾಯಕನಾಗಿ ನಟಿಸಿರುವ "ಸ್ನೇಹಿತ" ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಇಪ್ಪತ್ತೈದು ದಿನಗಳನ್ನು ಪೂರೈಸಿದೆ.ಈ ಸಂತಸವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು. ನಮ್ಮ ಚಿತ್ರ ಬಿಡುಗಡೆಗೂ ಮುನ್ನ ಏನಾಗುವುದು ಎಂಬ ಆತಂಕವಿತ್ತು. ಬಿಡುಗಡೆ ಆದ ಮೇಲೆ ಸಿಗುತ್ತಿರುವ ಪ್ರತಿಕ್ರಿಯೆ ನಿಜಕ್ಕೂ ಸಂತಸ ತಂದಿದೆ. ಬೆಂಗಳೂರು ಮಾತ್ರವಲ್ಲ. ಮೈಸೂರು ಹಾಗೂ ಉತ್ತರ ಕರ್ನಾಟಕದ ಸಾಕಷ್ಟು ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಾನೇ ಪ್ರತಿಯೊಂದು ಕಡೆ ಹೋಗಿ ಬಂದಿದ್ದೀನಿ. ನೋಡುಗರು ತೋರುತ್ತಿರುವ ....
*"ಬಡವ ರಾಸ್ಕಲ್" ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ..* ಡಾಲಿ ಧನಂಜಯ ಅಭಿನಯದ "ಬಡವ ರಾಸ್ಕಲ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರೀಕ್ಷೆಗೂ ಮೀರಿ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು. ಇದೊಂದು ಮಧ್ಯಮವರ್ಗದ ಕಥೆ. ಆಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಯುವಕ ಕೆಲಸಕ್ಕಾಗಿ ಹುಡುಕುವ ಸನ್ನಿವೇಶಗಳೇ ಮುಖ್ಯ ಕಥಾವಸ್ತು. ಅಪ್ಪ-ಅಮ್ಮನ ಜೊತೆ ಮಗನ ಬಾಂಧವ್ಯವನ್ನು ಮನತಟ್ಟುವಂತೆ ನಿರ್ದೇಶಕರು ತೋರಿಸಿದ್ದಾರೆ. ಕೆ.ಆರ್.ಜಿ ಸ್ಟುಡಿಯೋದವರು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಇದೇ 24ರಂದು ಚಿತ್ರ ತೆರೆಗೆ ಬರಲಿದೆ. ನಿಮ್ಮ ಬೆಂಬಲವಿರಲಿ ....
*ಸುಮುಹೂರ್ತದಲ್ಲಿ ನಡೆಯಿತು* *"ನಮ್ ನಾಣಿ ಮದ್ವೆ ಪ್ರಸಂಗ".* *ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಅವರಿಂದ ಹೇಮಂತ್ ಹೆಗಡೆ ನಿರ್ದೇಶನದ ಈ ಚಿತ್ರಕ್ಕೆ ಚಾಲನೆ.* *ಚಿತ್ರತಂಡಕ್ಕೆ ಶುಭಕೋರಿದ ಸನ್ಮಾನ್ಯ ಸಚಿವರಾದ ಎಸ್ ಟಿ. ಸೋಮಶೇಖರ್.* ಅನ್ವಿತಾ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಹೇಮಂತ್ ಹೆಗಡೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ "ನಮ್ ನಾಣಿ ಮದ್ವೆ ಪ್ರಸಂಗ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಸನ್ಮಾನ್ಯ ಸಚಿವರಾದ ಎಸ್ ಟಿ ಸೋಮಶೇಖರ್ ಚಿತ್ರತಂಡಕ್ಕೆ ಶುಭ ಕೋರಿದರು. ಅನೇಕ ....
*ಅದ್ದೂರಿ ಸೆಟ್ ನಲ್ಲಿ "ಮಾಫಿಯಾ" ಚಿತ್ರೀಕರಣ.* ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ "ಮಾಫಿಯಾ" ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ಕಲಾ ನಿರ್ದೇಶಕ ಶ್ರೀನಿವಾಸ್ ಪೊಲೀಸ್ ಕಂಟ್ರೋಲ್ ರೂಂ ನ ಸೆಟ್ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್, ದೇವರಾಜ್ ಹಾಗೂ ಸಾಧುಕೋಕಿಲ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಾನು ನನ್ನ ಮಗ ಇಬ್ಬರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಅದಕ್ಕೂ ಖುಷಿಯ ವಿಚಾರವೆಂದರೆ ನಾನು, ಪ್ರಜ್ವಲ್ ಇಬ್ಬರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ. ನಿರ್ದೇಶಕ ಲೋಹಿತ್ ಇನ್ನು ಚಿಕ್ಕ ....
*ಕಂಠೀರವ ಸ್ಟುಡಿಯೋದಲ್ಲಿ ಆರಂಭವಾಯಿತು "ರಾಜಿ".* *ರಾಘವೇಂದ್ರ ರಾಜಕುಮಾರ್ ಅಭಿನಯದ ಈ ಚಿತ್ರಕ್ಕೆ ಪ್ರೀತಿ ಎಸ್ ಬಾಬು ನಿರ್ದೇಶನ.* ರಾಘವೇಂದ್ರ ರಾಜಕುಮಾರ್ ಅಭಿನಯದ " ರಾಜಿ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಾಯಕ ಶ್ರೀಮುರಳಿ ಆರಂಭ ಫಲಕ ತೋರಿದರು. ನಾಯಕಿ ಹರ್ಷಿಕಾ ಪೂಣ್ಣಚ್ಛ ಕ್ಯಾಮೆರಾ ಚಾಲನೆ ಮಾಡಿದರು. ಕನ್ನಡ ಹಲವಾರು ಚಿತ್ರಗಳಲ್ಲಿ ಸಹ ಕಲಾವಿದೆಯಾಗಿ ಅಭಿನಯಿಸಿರುವ ಪ್ರೀತಿ ಎಸ್ ಬಾಬು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುವ ನಿರ್ದೇಶಕಿಯರ ಸಾಲಿಗೆ ಪ್ರೀತಿ ಎಸ್ ಬಾಬು ಸೇರ್ಪಡೆಯಾಗಿದ್ದಾರೆ. ....