Nahi Jnanena Sadrushyam.Film News

Thursday, October 13, 2022

ಕೃಷ್ಣನ ಶ್ಲೋಕ ಚಿತ್ರದ ಹೆಸರು         ಮಹಾಭಾರತದ ಭಗವದ್ಗಿತೆಯ ನಾಲ್ಕನೇ ಅಧ್ಯಾಯದಲ್ಲಿ ಬರುವ ‘ನಹಿ ಜ್ಞಾನೇನ ಸದೃಶಂ’ ಶ್ಲೋಕವನ್ನು ಕೃಷ್ಣನು ಅರ್ಜುನನಿಗೆ ಯುದ್ದ ಪ್ರಾರಂಭವಾಗುವ ಮುನ್ನ ಹೇಳುತ್ತಾರೆ. ಈಗ ಇದೇ ಹೆಸರಿನಲ್ಲಿ ಮಕ್ಕಳ ಚಿತ್ರವೊಂದು ಸದ್ದಿಲ್ಲದೆ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಪ್ರಚಾರದ ಹಂತವಾಗಿ ಪೋಸ್ಟರ್ ಬಿಡುಗಡೆ ಸಮಾರಂಭವನ್ನು  ಏರ್ಪಾಟು ಮಾಡಿಕೊಂಡಿದ್ದರು. ಶಿಕ್ಷಣ ಜತೆಗೆ ಮನರಂಜನೆ ಅಂತ ಇಂಗ್ಲೀಷ್ ಅಡಿಬರಹವಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಮತ್ತು ಪದಾಧಿಕಾರಿಗಳಾದ ಸುಂದರರಾಜ್, ಕುಶಾಲ್, ಟಿ.ಪಿ.ಸಿದ್ದರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ....

339

Read More...

Aba Jaba Daba.Film News

Thursday, October 13, 2022

  *ಮುಕ್ತಾಯ ಹಂತದಲ್ಲಿ "ಅಬ ಜಬ ದಬ" ಚಿತ್ರದ ಚಿತ್ರೀಕರಣ.*   ಕಳೆದವರ್ಷ "ಕನ್ನಡ್ ಗೊತ್ತಿಲ್ಲ" ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಮಯೂರ ರಾಘವೇಂದ್ರ ನಿರ್ದೇಶನದ, ಅನಂತ ಕೃಷ್ಣ ನಿರ್ಮಾಣದ, ಪೃಥ್ವಿ ಅಂಬರ್ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ "ಅಬ ಜಬ ದಬ" ಚಿತ್ರರ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಇನ್ನು ಹತ್ತು ದಿನಗಳ ಚಿತ್ರೀಕರಣವಾದರೆ ಚಿತ್ರೀಕರಣ ಮುಕ್ತಾಯವಾಗಲಿದೆ.   "ಕನ್ನಡ್ ಗೊತ್ತಿಲ್ಲ" ಚಿತ್ರದ ನಂತರ ನಾನು ರಚಿತಾ ರಾಮ್ ಅವರಿಗೊಂದು ಸಿನಿಮಾ ಮಾಡಬೇಕಿತ್ತು. ಅದು ದೊಡ್ಡ ಬಜೆಟ್ ನ ಚಿತ್ರವಾಗಿರುವುದರಿಂದ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಈ ಔಟ್ ಎಂಡ್ ಔಟ್ ಕಾಮಿಡಿಯಿರುವ ಈ ಚಿತ್ರದ ಕಥೆ ....

335

Read More...

Kaveripura.Film News

Thursday, October 13, 2022

  ಉತ್ತರ ಕರ್ನಾಟಕದ ಕಾವೇರಿ ಪುರ          ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಕಾವೇರಿ ಪುರ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ನಟ ವಿಜಯರಾಘವೇಂದ್ರ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿದ್ದರು. ರಾಯಚೂರಿನಲ್ಲಿ ಹಾರ್ಡ್‌ವೇರ್ ಶಾಪ್ ಮತ್ತು ರಿಯಲ್ ಎಸ್ಟೇಟ್ ನಡೆಸುತ್ತಿರುವ ಶಾಂತಕುಮಾರ್.ವಿ.ಪಾಟೀಲ್ ಅವರು ಡಿವಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಹೆಸರಾಂತ ನಿರ್ದೇಶಕರುಗಳ ಬಳಿ ಅನುಭವ ಪಡೆದುಕೊಂಡು, ಎರಡು ಸಿನಿಮಾಗಳಿಗೆ ಬರಹಗಾರನಾಗಿ ....

332

Read More...

Champion.Film News

Wednesday, October 12, 2022

  *ಈ ವಾರ ತೆರೆಗೆ "ಚಾಂಪಿಯನ್".*   ಶಿವಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿವಾನಂದ್ ಎಸ್ ನೀಲಣ್ಣನವರ್ ನಿರ್ಮಿಸಿರುವ, ಶಾಹುರಾಜ್ ಶಿಂಧೆ ನಿರ್ದೇಶನದ " ಚಾಂಪಿಯನ್ " ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.   ಕ್ರೀಡಾ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ಸಚಿನ್ ಧನಪಾಲ್ ಅಭಿನಯಿಸಿದ್ದಾರೆ. ಅದಿತಿ ಪ್ರಭುದೇವ "ಚಾಂಪಿಯನ್" ಚಿತ್ರದ ನಾಯಕಿ.  ಹಿರಿಯ ನಟ ದೇವರಾಜ್, ಸುಮನ್, ಪ್ರದೀಪ್ ರಾಹುತ್, ಚಿಕ್ಕಣ್ಣ, ಆದಿ ಲೋಕೇಶ್, ರಂಗಾಯಣ ರಘು, ಅವಿನಾಶ್, ಕಾಕ್ರೋಜ್ ಸುಧಿ, ಶೋಭರಾಜ್, ಅಶೋಕ್ ಶರ್ಮ, ಪ್ರಶಾಂತ್ ಸಿದ್ದಿ, ಗಿರಿ, ಮಂಡ್ಯ ರಮೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌. ಖ್ಯಾತ ನಟಿ ಸನ್ನಿಲಿಯೋನ್ ಸಹ ಈ ಚಿತ್ರದಲ್ಲಿ ....

401

Read More...

MRP.Film Press Meet

Tuesday, October 11, 2022

 

'ಈವಾರ ತೆರೆಮೇಲೆ ಎಂಆರ್‌ಪಿ

 

   ಸ್ಥೂಲಕಾಯದ ವ್ಯಕ್ತಿಗಳು ಸಮಾಜದಲ್ಲಿ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ, ಅದನ್ನು ಸಮಸ್ಯೆ ಎಂದುಕೊಳ್ಳದೆ ವರವೆಂದು ಭಾವಿಸಿ ಕೆಲಸದ ಕಡೆ ಗಮನ ಕೊಟ್ಟರೆ  ಅವರೂ ಸಮಾಜ ಗುರುತಿಸುವಂಥ ವ್ಯಕ್ತಿಯಾಗಿ ಬೆಳೆಯಬಹುದು ಎಂಬ ಸಂದೇಶವಿರುವ ಚಿತ್ರ "ಎಂಆರ್‌ಪಿ" ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.  ಈ ಚಿತ್ರಕ್ಕೆ ಬಾಹುಬಲಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರ ಪ್ರಕಾರ ಎಂಆರ್ ಪಿ ಎಂದರೆ  ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್.  ಎಂ.ಡಿ.ಶ್ರೀಧರ್, ಎ.ವಿ.ಕೃಷ್ಣಕುಮಾರ್, ಮೋಹನ್‌ಕುಮಾರ್ ಎನ್.ಜಿ. ಹಾಗೂ ರಂಗಸ್ವಾಮಿ  ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

369

Read More...

Ambuja.Film News

Monday, October 10, 2022

ಅಂಬುಜಾ ಟೀಸರ್ ಬಿಡುಗಡೆ

      ನೈಜ ಘಟನೆ ಆಧಾರಿತ ‘ಅಂಬುಜ’ ಚಿತ್ರದ ಟೀಸರ್ ಕಲಾವಿದರ ಸಂಘದಲ್ಲಿ ಬಿಡುಗಡೆಗೊಂಡಿತು. ಕಥೆ,ಸಾಹಿತ್ಯ ಬರೆದು ನಿರ್ಮಾಣ ಮಾಡಿರುವುದು ಕಾಶಿನಾಥ್.ಡಿ.ಮಡಿವಾಳರ್. ನಿರ್ದೇಶಕ ಶ್ರೀನಿಹನುಮಂತರಾಜು ಅವರಿಗೆ ಎರಡನೇ ಅವಕಾಶ. ರಜನಿ ಮಾತನಾಡಿ ಸಿನಿಮಾ ತುಂಬಾ ವಿಶೇಷವಾಗಿದೆ. ಲಂಬಾಣಿ ವೇಷ ಭೂಷಣ ಕಣ್ಣಿಗೆ ಹಬ್ಬ, ಚಿತ್ರೀಕರಣದಲ್ಲಿ ಅವರು ನಮ್ಮನ್ನು ಸ್ವೀಕರಿಸಿದ ರೀತಿ ಎಲ್ಲವು ಮರೆಯಲಿಕ್ಕೆ ಆಗುವುದಿಲ್ಲ. ಮೊದಲ ದಿನ ಲಂಬಾಣಿ ವೇಷ ಹಾಕಿಕೊಂಡಾಗ ತಲೆ ನೋವಾಗುತ್ತಿತ್ತು. ಆಮೇಲೆ ಸರಿಹೊಂದಿತು ಎಂದರು.

316

Read More...

Film 3.0 News

Monday, October 10, 2022

 

ಮಿಸ್ಟ್ರಿ ಥ್ರಿಲ್ಲರ್ "3.0" ಈವಾರ ತೆರೆಗೆ

 

  ಒರಾಕಲ್ ಕಲಾ ಕ್ರಿಯೇಶನ್ಸ್ ಲಾಛನದಲ್ಲಿ  ತಯಾರಾಗಿರುವ  ಕ್ರೈಂ, ಥ್ರಿಲ್ಲರ್ ಕಥಾಹಂದರದ ಚಿತ್ರ "3.O" ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.  ಇಂದ್ರಜಿತ್ ಅವರು  ಚಿತ್ರದ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳಿದ್ದಾರೆ.

  ಹೊಸ ಪ್ರತಿಭೆಗಳಾದ  ಶಶಿಕಿರಣ್, ಶಿವರಾಜ್ ಮತ್ತು ಲೋಹಿತ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದು, ಅವರೇ  ಬಂಡವಾಳವನ್ನೂ  ಹಾಕಿದ್ದಾರೆ. ನಾಯಕಿಯಾಗಿ ನಿಶ್ಕಲಗೌಡ ನಟಿಸಿದ್ದಾರೆ.

310

Read More...

Gajarama.Film News

Monday, October 10, 2022

ಗಜರಾಮ ಕ್ಲೈಮಾಕ್ಸ್ ಫೈಟ್

      ‘ಗಜರಾಮ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇತ್ತೀಚೆಗೆ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಈಗ ಆಕ್ಷನ್ ದೃಶ್ಯಗಳ ಶೂಟಿಂಗ್ ಹೆಚ್‌ಎಂಟಿಯಲ್ಲಿ ನಡೆಯುತ್ತಿತು. ಮಾದ್ಯಮದವರು ಭೇಟಿ ನೀಡಿದಾಗ ನಾಯಕ ರಾಜವರ್ಧನ್ ಮತ್ತು ಖಳನಟ ಕಬೀರ್‌ಸಿಂಗ್ ಹೊಡೆದಾಟದ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ಕಬೀರ್‌ಸಿಂಗ್ ಮಾತನಾಡಿ ಇದರಲ್ಲಿ ನಾನು ರೌಡಿಯಾಗಿ ಕಾಣಿಸಿಕೊಂಡಿದ್ದೇನೆ. ಬೇರೆ ಭಾಷೆಯಿಂದ ಇಲ್ಲಿಗೆ ಬಂದಿದ್ದೇನೆ. ಸಿನಿಮಾಗೆ ಭಾಷೆಗಳ ಮಿತಿಯಿಲ್ಲ. ಸದ್ಯ ಹಿಂದಿ ವೆಬ್ ಸೀರೀಸ್‌ದಲ್ಲಿ ನಟಿಸುತ್ತಿದ್ದೇನೆ. ಯಾವ ಭಾಷೆಯಾದರೂ ಅಭಿನಯಿಸುತ್ತೇನೆ ಎಂದರು.

287

Read More...

Film 1900.Film Pooja.News

Monday, October 10, 2022

  ಸೆಟ್ಟೇರಿದ 1900 ಚಿತ್ರ        ಹಾರರ್, ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿರುವ ’1900’ ಚಿತ್ರದ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಮೊದಲ ದೃಶ್ಯಕ್ಕೆ ಲವ್ ಮಾಕ್ಟೆಲ್ ಖ್ಯಾತಿಯ ಕೃಷ್ಣ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಪದ್ಮಾವತಿ ಪ್ರೊಡಕ್ಷನ್ ಅಡಿಯಲ್ಲಿ ರಾಜೇಶ್.ಬಿ ಮತ್ತು ಉಮೇಶ್.ಕೆ.ಎನ್ ಬಂಡವಾಳ ಹೂಡುತ್ತಿದ್ದಾರೆ. ಮೂಡಿಬಿದರೆಯ ರಾಜೇಶ್.ಬಿ ಮೂಲತ: ನಟನಾಗಿ ಗುರುತಿಸಿಕೊಂಡಿದ್ದು, ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ, ನಿರ್ದೇಶನ ಮಾಡುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಉಮೇಶ್.ಕೆ.ಎನ್ ದುಡಿದ ಹಣವನ್ನು ಚಿತ್ರಕ್ಕೆ ವಿನಿಯೋಗಿಸುತ್ತಿದ್ದು ಅಲ್ಲದೆ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಶಾಪ ....

288

Read More...

Suthradaari.Film News

Friday, October 07, 2022

ಸೂತ್ರಧಾರಿಯಾಗಿ ಚಂದನ್‌ಶೆಟ್ಟಿ         ‘ಎಲ್ರ ಕಾಲೆಳೆಯುತ್ತೆ ಕಾ’ ಚಿತ್ರದ ಮೂಲಕ ನಾಯಕನಾಗಿ ಪರಿಚಯಗೊಂಡಿದ್ದ ರಾಪರ್ ಚಂದನ್‌ಶೆಟ್ಟಿ ಈಗ ‘ಸೂತ್ರಧಾರಿ’ ಸಿನಿಮಾದಲ್ಲಿ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರಣ್‌ಕುಮಾರ್ ನಿರ್ದೇಶನ ಮಾಡುತ್ತಿದ್ದು, ನವರಸನ್ ಬಂಡವಾಳ ಹೂಡುತ್ತಿದ್ದಾರೆ. ಮೊನ್ನೆ ನಡೆದ ಸಮಾರಂಭದಲ್ಲಿ ಹಿರಿಯ ಪ್ರಚಾರಕರ್ತ ಸುಧೀಂದ್ರವೆಂಕಟೇಶ್ ಶೀರ್ಷಿಕೆ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನವರಸನ್ ನನ್ನ ನಿರ್ಮಾಣದ ಐದನೇ ಚಿತ್ರವಿದು, ಈವರೆಗೂ ನಮ್ಮ ಸಂಸ್ಥೆಯ ಮೂಲಕ ೧೮೦ಕ್ಕೂ ಹೆಚ್ಚು ಚಿತ್ರಗಳ ಇವೆಂಟ್ ....

282

Read More...

Ardhambardha Prema Kathe

Wednesday, October 05, 2022

  *ತೆರೆಯಲ್ಲೂ ಜೋಡಿಯಾದರು ಅರವಿಂದ್-ದಿವ್ಯಾ ಉರುಡುಗ*   -ಇದು ಆರ್ಧಂಬರ್ಧ ಪ್ರೇಮಕಥೆಯ ವಿಚಾರ-        ಬಿಗ್‌ಬಾಸ್ ಖ್ಯಾತಿಯ ಯುವಜೋಡಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯಮೇಲೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ಅರ್ಧಂಬರ್ಧ ಪ್ರೇಮಕಥೆ. ಹುಲಿರಾಯ, ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಗುರುತಿಸಿಕೊಂಡ ಅರವಿಂದ್ ಕೌಶಿಕ್, ರಕ್ಷಿತ್‌ಶೆಟ್ಟಿ, ರಿಶಬ್‌ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಅನೇಕ ಕಲಾವಿದರನ್ನು ಪರಿಚಯಿಸಿದ್ದರು. ಈಗ ಬೈಕ್ ರೇಸರ್ ಅರವಿಂದ್‌ರನ್ನು ನಾಯಕನಾಗಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ. ....

273

Read More...

Production No-1.Film News

Wednesday, October 05, 2022

ಪ್ರೊಡಕ್ಷನ್ ನಂ.೧ ಚಿತ್ರಕ್ಕೆ ಮುಹೂರ್ತ        ಹೆಸರಿಡದ ಚಿತ್ರ ‘ಪ್ರೊಡಕ್ಷನ್ ನಂ.೧’ ಸಿನಿಮಾದ ಮುಹೂರ್ತ ಸಮಾರಂಭವು ವಿಜಯ ದಶಮಿ ದಿನದಂದು ನಂದಿನಿ ಲೇಔಟ್‌ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಮಾಜಿ ಕಾರ್ಪೋರೇಟರ್ ರಾಜೇಂದ್ರಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ‘ಪುಟಾಣಿಸಫಾರಿ’ ‘ವರ್ಣಮಯ’ ‘ಮಠ’ ‘ನೈಟ್‌ಕರ್ಫ್ಯೂ’ ಹಾಗೂ ಇದೇ ತಿಂಗಳು ಬಿಡುಗಡೆಯಾಗುತ್ತಿರುವ ‘ವಾಸಂತಿ ನಲಿದಾಗ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ರವೀಂದ್ರವೆಂಶಿ ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೈತ, ಉದ್ಯಮಿಯಾಗಿರುವ ಚಿಕ್ಕಬದರಿಕಲ್ಲು ....

296

Read More...

Shabhash Baddimagne.News

Wednesday, October 05, 2022

ಪ್ರಮೋದ್‌ಶೆಟ್ಟಿ ಈಗ ಶಭಾಷ್ ಬಡ್ಡಿಮಗ್ನೆ        ‘ಲಾಫಿಂಗ್ ಬುದ್ದ’ ‘ಕಾಶಿಯಾತ್ರೆ’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರಮೋದ್‌ಶೆಟ್ಟಿ ಮೂರನೇ ಚಿತ್ರ ‘ಶಭಾಷ್ ಬಡ್ಡಿಮಗ್ನೆ’ ಸಿನಿಮಾದ ಮಹೂರ್ತ ಕಂಠೀರವ ಸ್ಟುಡಿಯೋದಲ್ಲಿ ವಿಜಯದಶಮಿ ಹಬ್ಬದಂದು ಅದ್ದೂರಿಯಾಗಿ ನಡೆಯಿತು. ನಟ ಅಜಯ್‌ರಾವ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು. ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ  ಹರೀಶ್.ಸಾ.ರಾ ನಿರ್ದೇಶಕರಾಗಿ ಬಡ್ತಿಗೊಂಡು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ ಬರೆದಿರುವ ಬಿ.ಎಸ್.ರಾಜಶೇಖರ್ ಸಿನಿಮಾಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ....

251

Read More...

Gadayuddha.Film News

Wednesday, September 28, 2022

ಐದು ಭಾಷೆಗಳ ಗದಾಯುದ್ದ       ಈ ಹಿಂದೆ ‘ಮೃಗಶಿರ’ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀವತ್ಸ ಅವರು ‘ಗದಾಯುದ್ದ’ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರಪಂಚದಲ್ಲಿ ಭೂತಪ್ರೇತಗಳು ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ ವಾಮಾಚಾರ ಎನ್ನುವುದು ಮಾತ್ರ ಇಂದಿಗೂ ಜೀವಂತವಾಗಿದೆ. ಕೇವಲ ವೈಯಕ್ತಿಕ ದ್ವೇಷ, ಧನದಾಹದಿಂದ ಮನುಷ್ಯರ ಜೀವ ತೆಗೆಯುವುದಕ್ಕಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹುದೆ ವಿಷಯಗಳನ್ನು ಇಟ್ಟುಕೊಂಡು ಸಿನಿಮಾವನ್ನು ಮಾಡಲಾಗಿದೆ. ಬೆಳಗಾವಿ ಮೂಲದ ನಿತಿನ್‌ಶಿರಗುರ್‌ಕರ್ ನಿರ್ಮಾಣ ಮಾಡಿದ್ದು, ಇವರ ಪುತ್ರ ಸುಮಿತ್ ನಾಯಕನಾಗಿ ನಟಿಸಿದ್ದಾರೆ. ಧನ್ಯಪಾಟೀಲ್ ನಾಯಕಿ. ....

1102

Read More...

Gajarama.Film Pooja News

Wednesday, September 28, 2022

  *ಸೆಟ್ಟೇರಿತು ರಾಜವರ್ಧನ್ ನಾಲ್ಕನೇ ಚಿತ್ರ - ’ಗಜರಾಮ’ನಿಗೆ ಕ್ಲ್ಯಾಪ್ ಮಾಡಿದ ಜೂನಿಯರ್ ರೆಬೆಲ್ ಸ್ಟಾರ್*   ‘ಮ್ಯಾಸಿವ್ ಸ್ಟಾರ್’ ರಾಜವರ್ಧನ್ ಬಿಚ್ಚುಗತ್ತಿ ಸಿನಿಮಾ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಯಕ‌ ನಟನಾಗಿ ಅಭಿನಯಿಸುತ್ತಿರುವ ಪ್ರಣಯಂ, ಹಿರಣ್ಯ ಸಿನಿಮಾ ಬಿಡುಗಡೆಗೆ ಮೊದಲೇ ಮಾಸ್ ಸಬ್ಜೆಕ್ಟ್ ಸಿನಿಮಾವೊಂದು ರಾಜವರ್ಧನ್ ಬತ್ತಳಿಕೆ ಸೇರಿದೆ.  ಅದುವೇ ’ಗಜರಾಮ’. ಫಸ್ಟ್ ಲುಕ್ ಪೋಸ್ಟರ್ ಮೂಲಕ ಕಿಕ್ ಕೊಟ್ಟ  ಈ ಚಿತ್ರದ ಮುಹೂರ್ತ ಇಂದು ನೆರವೇರಿದೆ.   ನಿರ್ದೇಶಕ ಸುನೀಲ್ ಕುಮಾರ್ ವಿ.ಎ ಹೆಣೆದ ಕಥೆ ಕೇಳಿ ಇಂಪ್ರೆಸ್ ಆಗಿರುವ ರಾಜವರ್ಧನ್  ’ಗಜರಾಮ’ನಾಗಿ ಅಬ್ಬರಿಸಲು  ಗ್ರೀನ್ ಸಿಗ್ನಲ್ ....

313

Read More...

The Checkmate.Film News

Tuesday, September 27, 2022

ಪ್ರೀತಿ ಸ್ನೇಹ ಬದುಕು ಸಾರುವ ದಿ ಚೆಕ್ ಮೇಟ್       ‘ದಿ ಚೆಕ್ ಮೇಟ್’ ಚಿತ್ರವೊಂದು ಕರೋನ ಮುಂಚೆ ಶುರುವಾಗಿ, ಈಗ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಅಕ್ಟೋಬರ್ ೭ರಂದು ಜನರಿಗೆ ತೋರಿಸಲು ಸಜ್ಜಾಗಿದೆ. ಭಾರತೀಶ ವಷಿಷ್ಟ ಹಾಗೂ ಸಂತೋಷಚಿಪ್ಪಾಡಿ ನಿರ್ದೇಶಕರುಗಳು. ರಂಜನ್‌ಹಾಸನ್ ನಾಯಕನಾಗಿ ನಟಿಸುವ ಜತೆಗೆ ಜಗದ್ ಜ್ಯೋತಿ ಮೂವಿ ಮೇಕರ‍್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಸಿನಿಮಾದ ಹಾಡು, ಟ್ರೇಲರ್‌ನ್ನು ಬಿಡುಗಡೆಗೊಳಿಸಿದೆ. ಚದುರಂಗ ಅಂದರೆ ಬುದ್ದಿವಂತರ ಆಟ ಎಂದೇ ಪ್ರಖ್ಯಾತಿ. ಚೆಸ್ ಆಧಾರವಾಗಿಟ್ಟುಕೊಂಡು ತಯಾರಿಸಿದ ಕಥೆ ಇದಾಗಿದೆ. ಪ್ರೀತಿ, ....

416

Read More...

Banaras.Film Trailer

Monday, September 26, 2022

ಬನಾರಸ್ ಟ್ರೇಲರ್ ಲೋಕಾರ್ಪಣೆ         ಶಾಸಕ ಜಮೀರ್‌ಅಹ್ಮದ್‌ಖಾನ್ ಪುತ್ರ ಝೈದ್‌ಖಾನ್ ಪ್ರಪ್ರಥಮ ಬಾರಿ ನಟಿಸಿರುವ ‘ಬನಾರಸ್’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಲ್ಮಾನ್‌ಖಾನ್ ಸಹೋದರ ಅರ್ಬಾಜ್‌ಖಾನ್ ಹಿಂದಿ ಭಾಷೆ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಭಾಷೆಯ ಟ್ರೇಲರ್‌ನ್ನು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅರ್ಬಾಜ್‌ಖಾನ್ ಚಿತ್ರವು ಅದ್ಬುತವಾಗಿ ಮೂಡಿಬಂದಿದೆ ಎಂಬುದು ತುಣುಕುಗಳನ್ನು ನೋಡಿದರೆ ತಿಳಿಯುತ್ತದೆ. ಕನ್ನಡ ಸಿನಿಮಾಗಳನ್ನು ನೋಡುತ್ತೇನೆ. ಇಲ್ಲಿನ ಚಿತ್ರರಂಗವು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಒಳ್ಳೆಯ ಕಥೆಗಳನ್ನು ಜನ ಖಂಡಿತಾ ಮೆಚ್ಚುತ್ತಾರೆ. ಅದರಲ್ಲೂ ....

292

Read More...

Bond Ravi.Film News

Saturday, September 24, 2022

ಕುತೂಹಲ ಹುಟ್ಟಿಸಿದ ಬಾಂಡ್ ರವಿ ಟೀಸರ್         ‘ಪ್ರೀಮಿಯರ್ ಪದ್ಮಿನಿ’ದಲ್ಲಿ ಕಾರು ಚಾಲಕ, ‘ರತ್ನನ್ ಪ್ರಪಂಚ’ದಲ್ಲಿ ಉಡಾಳ್‌ಬಾಬು ಆಗಿ ಗುರುತಿಸಿಕೊಂಡಿದ್ದ ಪ್ರಮೋದ್ ಈಗ ‘ಬಾಂಡ್ ರವಿ’ ಚಿತ್ರದಲ್ಲಿ ಡಾ.ಪುನೀತ್‌ರಾಜ್‌ಕುಮಾರ್ ಅಭಿಮಾನಿಯಾಗಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆ ಬಿಡುಗಡೆಯಾದ ಟೀಸರ್‌ದಲ್ಲಿ ಪಂಚಿಂಗ್ ಹಾಗೂ ಮಾಸ್ ಡೈಲಾಗ್‌ಗಳು ಗಮನ ಸೆಳೆದಿದೆ. ಸಂಗೀತ ಸಂಯೋಜಕ ಮನೋಮೂರ್ತಿ ಮಾತನಾಡಿ ಈ ಸಿನಿಮಾದ ಬಗ್ಗೆ ಅಪಾರವಾದ ಭರವಸೆ ಇದೆ. ‘ಮುಂಗಾರು ಮಳೆ’ ಕೂಡ ಹೀಗೆ ಶುರುವಾಗಿ, ನಂತರ ಹಿಟ್ ಆಗಿತ್ತು. ನಾಯಕನಿಗೆ ತುಂಬಾ ಶೇಡ್ಸ್ ಇದೆ ಎಂದರು.         ನಾನು ಈ ....

296

Read More...

Nano Narayanappa.Film News

Wednesday, September 21, 2022

ನ್ಯಾನೋ ನಾರಾಯಣಪ್ಪ ಟ್ರೇಲರ್ ಬಿಡುಗಡೆ

       ‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ನಿರ್ದೇಶನ ಮಾಡಿದ್ದ ಕುಮಾರ್ ಈಗ ‘ನ್ಯಾನೋ ನಾರಾಯಣಪ್ಪ’ ಚಿತ್ರಕ್ಕೆ ರಚನೆ,ಚಿತ್ರಕಥೆ,ಆಕ್ಷನ್ ಕಟ್ ಹೇಳುವ ಜತೆಗೆ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆ ಟ್ರೇಲರ್ ಅನಾವರಣ ಸಮಾರಂಭ ನಡೆಯಿತು. ಇದೊಂದು ಕಾಮಿಡಿ, ಎಮೋಷನಲ್ ಡ್ರಾಮಾ ಒಳಗೊಂಡ ಚಿತ್ರವಾಗಿದ್ದು, ನೋಡುಗರನ್ನು ತುಂಬಾ ಕಾಡುವಂಥ ತಾತನ ಕಥೆಯನ್ನು ಹೇಳಲಿದ್ದಾರೆ. ಕೆಜಿಎಫ್ ಖ್ಯಾತಿಯ ಕೃಷ್ಣೋಜಿರಾವ್ ಶೀರ್ಷಿಕೆ ಹೆಸರಿನಲ್ಲಿ ಕಾಣಿಸಿಕೊಂಡಿದ್ದು, ನ್ಯಾನೋ ಕಾರು ಕೂಡ ಪ್ರಮುಖ ಪಾತ್ರವಹಿಸಿರುವುದು ವಿಶೇಷ.

281

Read More...

Lovely.Film News

Wednesday, September 21, 2022

ಕಿಂಗ್ಸ್ ಕ್ಲಬ್‌ದಲ್ಲಿ ಲವ್‌ಲೀ ಚಿತ್ರೀಕರಣ          ‘ಲವ್ ಲೀ’ ಸಿನಿಮಾದ ಚಿತ್ರೀಕರಣ ನಾಗರಬಾವಿ ಬಳಿ ಇರುವ ಕಿಂಗ್ಸ್ ಕ್ಲಬ್‌ನಲ್ಲಿ ನಡೆಯುತ್ತಿತ್ತು. ಮಾದ್ಯಮದವರು ಸೆಟ್‌ಗೆ ಹೋದಾಗ ವಸಿಷ್ಠಸಿಂಹ,  ಉಪನಾಯಕಿ ಸಮೀಕ್ಷಾ, ಸಾಧುಕೋಕಿಲ ದೃಶ್ಯದಲ್ಲಿ ಭಾಗವಹಿಸಿದ್ದರು. ಬಿಡುವು ಮಾಡಿಕೊಂಡು ತಂಡವು ಮಾತಿಗೆ ಕುಳಿತುಕೊಂಡಿತು. ವಸಿಷ್ಠಸಿಂಹ ಮಾತನಾಡಿ ಕೊನೆ ಹಂತದ ಶೂಟಿಂಗ್ ನಡೆಯುತ್ತಿದೆ. ಇದಾದ ನಂತರ ಉಡುಪಿ, ಮಂಗಳೂರು, ಹಾಗೂ ವಿದೇಶಕ್ಕೆ ಹೋಗುವ ಇರಾದೆ ಇದೆ. ಇಂಥಾ ಜಾನರ್ ಸಿನಿಮಾ ಅಂತ ಹೇಳಲಾಗುವುದಿಲ್ಲ. ೮-೧೦ ವರ್ಷಗಳ ಹಿಂದೆ ನಡೆದಂಥ ಒಂದಷ್ಟು ನೈಜ ಘಟನೆಗಳನ್ನು ....

302

Read More...
Copyright@2018 Chitralahari | All Rights Reserved. Photo Journalist K.S. Mokshendra,