' *ಪಾರ್ಟ್ನರ್’* *ಲವಲವಿಕೆಯಲ್ಲೇ* *ರಿಲೀಸಾಯ್ತು ಲವಲವಿಕೆ* *ಸಾಂಗ್* ಕೆಲ ಸಿನಿಮಾಗಳು ತನ್ನ ಕಂಟೆಂಟ್, ಸಾಂಗ್, ಮೇಕಿಂಗ್ ಮೂಲಕ ಸುದ್ದಿಯಾಗುತ್ತವೆ, ಇತ್ತೀಚೆಗೆ ’ಪಾರ್ಟ್ನರ್’ ಚಿತ್ರವೂ ಸಹ ತನ್ನ ಮೆಲೋಡಿ ಹಾಡು, ಮೇಕಿಂಗ್ನಲ್ಲೇ ಸಿನಿರಸಿಕರ ಗಮನ ಸೆಳೆಯುತ್ತಿದೆ. ಮಳೆ, ಧೈರ್ಯಂ, ದಿಲ್ ಪಸಂದ್ ಖ್ಯಾತಿಯ ಶಿವತೇಜಸ್ ಅವರ ಸಾರಥ್ಯದ ಮತ್ತೊಂದು ಲವ್, ಫ್ಯಾಮಿಲಿ ಎಂಟರ್ ಟೈನರ್ ಇದಾಗಿದ್ದು, ಚಿತ್ರದ ಅಮೋರಾ ಸಾಂಗ್ ವೈರಲ್ ಆಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಸಾಂಗ್ ಲವಲವಿಕೆ ರಿಲೀಸಾಗಿ, ಎಲ್ಲರನ್ನೂ ಆಕರ್ಷಿಸುತ್ತಿದೆ. ಬೃಂದಾ ಆಚಾರ್ಯ, ಕೃಷ್ಣ ಅಜಯ್ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ, ಈಗಿನ ಜಂಝಿಗಳ ಲೈಫ್ ಸ್ಟೈಲ್, ಲವ್, ಬ್ರೇಕಪ್, ....
*ಇಟಗಿ ಶ್ರೀಗಳಿಂದ ಅಭಿಜಿತ್ ಅಭಿನಯದ "ಶ್ರೀಅನ್ನದಾನೀಶ್ವರ ಮಹಾತ್ಮೆ" ಚಿತ್ರದ ಟ್ರೇಲರ್ ಅನಾವರಣ* ಮಮತಾ ಎನ್. ಎಸ್. ನಿರ್ಮಾಣದ, ಗೌರಿ ಎಲ್. ರಾಮೇಗೌಡ ಅವರ ನಿರ್ದೇಶನದ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಡೆದಾಡುವ ದೇವರು, ಪುಸ್ತಕದ ಜಗದ್ಗುರು, ನಾಡೋಜ ಪ್ರಶಸ್ತಿ ಪುರಸ್ಕೃತ ಶ್ರೀ ಜಗದ್ಗುರು ಡಾ||ಅನ್ನದಾನೀಶ್ವರ ಮಹಾಸ್ವಾಮಿಗಳ ಜೀವನ ಚರಿತ್ರೆ ಆಧಾರಿತ "ಶ್ರೀಅನ್ನದಾನೀಶ್ವರ ಮಹಾತ್ಮೆ" ಚಿತ್ರದ ಟ್ರೇಲರ್ ಅನಾವರಣ ಸಮಾರಂಭ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. " ಚಿತ್ರದ ಟ್ರೇಲರ್ ಅನ್ನು ಪರಮಪೂಜ್ಯ ಇಟಗಿ ಶ್ರೀಗಳು ಬಿಡುಗಡೆ ಮಾಡಿ"ಶ್ರೀ ಅನ್ನದಾನೀಶ್ವರ ಸ್ವಾಮಿಗಳ" ಕುರಿತು ಭಕ್ತಿತುಂಬಿದ ಮಾತುಗಳನ್ನಾಡಿ, ....
*ಧಗೆ ಚಿತ್ರದಲ್ಲಿ ಸುರಕ್ಷ ಚಹಾ ಪಾತ್ರವಾಗಿ ಮೂಡಿಬಂದಿದೆ* *’ಧಗೆ’* ಚಿತ್ರದ ಪೋಸ್ಟರ್ ಹಾಗೂ *’ಸುರಕ್ಷ ಟೀ’* ಫ್ರಾಂಚೈಸಿ ಮತ್ತು ಡಿಸ್ಟ್ರಿಬ್ಯೂಟರ್ ಅನಾವರಣ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೀ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಹಾಸ್ಯ ರತ್ನ ಗಂಗಾವತಿ ಪ್ರಾಣೇಶ್, ನಟ ನವೀನ್ ಶಂಕರ್, ನಟಿ ಮಮತಾ ರಾವುತ್, ಕನ್ನಡ ಸೇನೆ ಅಧ್ಯಕ್ಷ ಕುಮಾರ್, ಚಾಣಾಕ್ಯ ಕ್ಯಾರಿಯರ್ ಅಕಾಡೆಮಿ ಸ್ಥಾಪಕ ಎನ್.ಎಂ.ಬಿರೆದಾರ್, ಬಸವರಾಜ ಮಹಾಮನಿ, ಶ್ರೀಮತಿ ಲತಾ ಕುಂದರಗಿ ಮುಂತಾದವರು ಉಪಸ್ತಿತರಿದ್ದರು. ....
*ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ಅನಾವರಣವಾಯಿತು “ರಾವೆನ್” ಚಿತ್ರದ ಟ್ರೇಲರ್* *ಕಾಗೆಯ ಕುರಿತಾದ ಈ ಚಿತ್ರದ ಟ್ರೇಲರ್ ಪಿತೃಪಕ್ಷದಲ್ಲಿ ಬಿಡುಗಡೆಯಾಗಿರುವುದು ವಿಶೇಷ* . ಕನ್ನಡದಲ್ಲಿ ವಿವಿಧ ಪ್ರಾಣಿ ಹಾಗೂ ಪಕ್ಷಿಗಳನ್ನು ಕೇಂದ್ರವಾಗಿಟ್ಟಿಕೊಂಡು ನಿರ್ಮಾಣವಾಗಿರುವ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ, ಇಲ್ಲಿಯವರೆಗೂ ಕಾಗೆಯನ್ನು ಪ್ರಧಾನವಾಗಿಟ್ಟಿಕೊಂಡು ಮಾಡಿರುವ ಚಿತ್ರ ಹೆಚ್ಚು ಬಂದಿಲ್ಲ. ವಿಶ್ವ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಶ್ವನಾಥ್ ಜಿ.ಪಿ ಅವರು "ರಾವೆನ್" ಚಿತ್ರವನ್ನು ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ....
*ಶಿವರಾಜ್‌ಕುಮಾರ್ ನಟನೆಯ ‘ಬೇಲ್’ ಚಿತ್ರದ ʻಶಿವಣ್ಣ ಆಂಥೆಮ್ʼ ಬಿಡುಗಡೆ; ಅಕ್ಟೋಬರ್ 2ರಂದು ಗ್ರ್ಯಾಂಡ್ ರಿಲೀಸ್* ಬೆಂಗಳೂರು: ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ, ಪವನ್ ಒಡೆಯರ್ ನಿರ್ದೇಶನದ ಬಹುನಿರೀಕ್ಷಿತ ’ಬೇಲ್’ ಚಿತ್ರದ ’ಶಿವಣ್ಣ ಆಂಥೆಮ್’ ಲಿರಿಕಲ್ ಸಾಂಗ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಾಂಗ್ ರಿಲೀಸ್ ಸಮಾರಂಭದಲ್ಲಿ ನಾಯಕ ನಟ ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ಪವನ್ ಒಡೆಯರ್ ತಮ್ಮ ವೈಯಕ್ತಿಕ ಬದುಕಿನ ನೋವು-ಸವಾಲುಗಳು ಹಾಗೂ ಚಿತ್ರೀಕರಣದ ದಿನಗಳ ಭಾವನಾತ್ಮಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಶಿವರಾಜ್‌ಕುಮಾರ್, ತಾವು ಚಿಕಿತ್ಸೆ ಪಡೆಯುತ್ತಿದ್ದ ಕಠಿಣ ....
*ʼಸಂಗೀತ ಬಾರ್ʼನಲ್ಲಿ 30 ಎಂ.ಎಲ್ ಕಿಕ್!* *ʼದೇವರ ತಾಣʼದಲ್ಲಿ ಕಿಕ್ ನೀಡುವ ಮೊದಲ ಝಲಕ್!* *ʼಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼನಲ್ಲಿ ಪ್ರಚಾರ ಕಾರ್ಯ ಶುರು* *ʼಬಾರ್ʼನಲ್ಲಿ ಕಮಾಲ್ ಮಾಡಲು ಕೋಮಲ್ ರೆಡಿ...* ಬೆಂಗಳೂರು, ಸೆ. 26: 'ಸೆನ್ಸೇಶನಲ್ ಸ್ಟಾರ್’ ಕೋಮಲ್ ಕುಮಾರ್, ಮೇಘನಾ ರಾಜ್, ಅನುಷಾ ರೈ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ʼಸಂಗೀತ ಬಾರ್ ಅಂಡ್ ರೆಸ್ಟೋರೆಂಟ್ʼ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ’ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದ ....
*ಬಲಮುರಿ ಪ್ರಸಿದ್ದಿ ಶ್ರೀವಿನಾಯಕ ದೇವಸ್ಥಾನದಲ್ಲಿ "ಬ್ಯಾಂಗಲ್ ಬಂಗಾರಿ" ಚಿತ್ರಕ್ಕೆ ಚಾಲನೆ* . *ಜನಪ್ರಿಯ ಗೀತೆಯ ಮೊದಲ ಸಾಲೇ ಈಗ ನೂತನ ಚಿತ್ರದ ಶೀರ್ಷಿಕೆ* . ಯುವ ರಾಜಕುಮಾರ್ ಅಭಿನಯದ "ಎಕ್ಕಾ" ಚಿತ್ರದ "ಬ್ಯಾಂಗಲ್ ಬಂಗಾರಿ" ತುಂಬಾ ಜನಪ್ರಿಯವಾದ ಹಾಡು. ಈಗ ಆ ಹಾಡಿನ ಮೊದಲ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. ಹೌದು. ಶಂಕರ್ ರಾಮರೆಡ್ಡಿ ನಿರ್ಮಿಸಿ, ಮರಡಿಹಳ್ಳಿ ಚಂದ್ರ ನಾಗ್ ಅವರು ನಿರ್ದೇಶಿಸುತ್ತಿರುವ ನೂತನ ಚಿತ್ರಕ್ಕೆ "ಬ್ಯಾಂಗಲ್ ಬಂಗಾರಿ" ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಂದಿನಿ ಬಡಾವಣೆಯ ....
*ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಅನಾವರಣವಾಯಿತು ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ ಐದನೇ ಹಾಡು* .. *ನಾಡಹಬ್ಬ ದಸರಾ ಸಂದರ್ಭದಲ್ಲಿ ಅಕ್ಟೋಬರ್ 16 ರಂದು ಬಹು ನಿರೀಕ್ಷಿತ ಈ ಚಿತ್ರ ತೆರೆಗೆ* . ಸಮೃದ್ಧಿ ಮಂಜುನಾಥ್ ನಿರ್ಮಾಣದ, ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಹಾಗೂ ಶ್ರೀನಿವಾಸರಾಜು ನಿರ್ದೇಶನದ "ಬೃಂದಾವಿಹಾರಿ" ಚಿತ್ರದ ಐದನೇ ಹಾಡು "ಒಂದೇ ಒಂದು" ಇತ್ತೀಚಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಅನಾವರಣವಾಯಿತು. ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರ ಪತ್ನಿ ಪದ್ಮ ಮಂಜುನಾಥ್ ಅವರು ಈ ಹಾಡನ್ನು ಬಿಡುಗಡೆ ಮಾಡಿದರು. ಕವಿರತ್ನ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ ಈ ಹಾಡನ್ನು ....
ಗಡಿ ಭಾಗದ ನೈಜ ಕಥೆಯುಳ್ಳ ‘ಬಾರ್ಡರ್ ಡೈರೀಸ್’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್: ಕವಿರಾಜ್ ಮೆಚ್ಚುಗೆ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಹೊಸಬರ ಸಿನಿಮಾಗಳು ಸದ್ದು ಮಾಡುತ್ತಿದ್ದು, ಆ ಸಾಲಿಗೆ ಇದೀಗ ‘ಬಾರ್ಡರ್ ಡೈರೀಸ್’ ಸಿನಿಮಾ ಸೇರ್ಪಡೆಯಾಗಿದೆ. ನೈಜ ಘಟನೆ ಹಾಗೂ ಜೀವಂತ ಪಾತ್ರಗಳ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ಚಿತ್ರದ ‘ಯಾರೋ ನೀನು ಯಾರೋ ನೀನು’ ಎಂಬ ಸುಮಧುರ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಹೊಯ್ಸಳ ಫಿಲಂಸ್ ಬ್ಯಾನರ್‌ನಡಿಯಲ್ಲಿ ಹೊಯ್ಸಳ ಕೊಣನೂರು ಈ ಚಿತ್ರವನ್ನು ನಿರ್ಮಿಸಿದ್ದು, ಯುವ ಪ್ರತಿಭೆ ಎಎಸ್‌ಜಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೂಡಾ ....
ಅನಂತರ ಕಿಸ್ಸಾನ್ ಟಿವಿ-2 ಚಿತ್ರದ ಟ್ರೈಲರ್ ಬಿಡುಗಡೆ ಪೀಣ್ಯದಲ್ಲಿ ಇಂಡಸ್ಟ್ರಿ ನಡೆಸುತ್ತಿರುವ ಡಿ.ತ್ರಿಲೋಕ್ ಚಂದರ್ ಅವರೀಗ ಹೊಸ ಚಲನಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಜತೆಗೆ ತರು ಫಿಲಂ ಅಕಾಡೆಮಿ ಸಂಸ್ಥೆ ಅಡಿ "ಅನಂತರ ಇ ಕಿಸ್ಸಾನ್ ಟಿವಿ-2" ಎಂಬ ಈ ಚಲನಚಿತ್ರವನ್ನು ತಾವೇ ನಿರ್ಮಾಣ ಸಹ ಮಾಡಿದ್ದಾರೆ. ಈಗಾಗಲೇ ತನ್ನ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಚಿತ್ರದ ನಾಯಕನಾಗಿ ಯೋಗೇಶ್ ಗೌಡ, ನಾಯಕಿಯರಾಗಿ ಯಶಸ್ವಿನಿ, ರಮ್ಯ, ಸುಧಾ, ಪವನ್ ಚಾರಿ, ವಾತ್ಸಲ್ಯ ಮುಂತಾದವರು ನಟಿಸಿದ್ದಾರೆ. ಸೃಜನ್, ....
*ತ್ರಿಕಾರಂ ಟ್ರೇಲರ್ ಮತ್ತು ಹಾಡು ಬಿಡುಗಡೆ* *’ತ್ರಿಕಾರಂ’* ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಮಾಸ್ ಟ್ರೇಲರ್, ನವಿರಾದ ಪ್ರೇಮಗೀತೆ, ಮೊನ್ನೆಯಷ್ಟೇ ಹೊಸದುರ್ಗದಲ್ಲಿ 50 ಅಡಿ ಕಟ್‌ಔಟ್ ಅನಾವರಣ ಕಾರ್ಯಕ್ರಮ ಮತ್ತು ಸಾಹಸ ದೃಶ್ಯ ಮಾಡುವಾಗ ಬೆಂಕಿ ಅವಘಡದಿಂದ ನಾಯಕ, ನಾಯಕಿ ಪಾರಾದ ತುಣುಕುಗಳು ದೊಡ್ಡ ಪರದೆ ಮೇಲೆ ಬಿತ್ತರಗೊಂಡಿತು. ’ಇದು ಸ್ಮಶಾನ ಅಲ್ಲ’ ಎಂಬ ಕ್ಯಾಚಿ ಅಡಿಬರಹ ಇರಲಿದೆ. ರಾಜಕೀಯ ಮುಖಂಡ ರವೀಂದ್ರ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ನಾಟಕ ಪ್ರೇಮಿ *ಜಿ.ಗಣೇಶ್ ಮೂರ್ತಿ ಅವರು ಸದ್ಗುರು ಸಿನಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ....
*ಕೊನೆಯಪತ್ರ ಮೋಷನ್ ಪೋಸ್ಟರ್ ಅನಾವರಣ* ಆಕರ್ಷಕ ಶೀರ್ಷಿಕೆಯಲ್ಲೆ ಗಮನ ಸೆಳೆದಿರುವ *’ಕೊನೆಯಪತ್ರ’* ಚಿತ್ರದ ಎರಡು ರೀತಿಯ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಮಮತಾದೇವರಾಜು, ಡಾಗ್ ಸತೀಶ್ ಹಾಗೂ ಸಿನಿಪಂಡಿತರು ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು. ಕೋಸಲ ಕ್ರಿಯೇಟೀವ್ ವರ್ಕ್ಸ್ ಪ್ರೈವೆಟ್ ಲಿಮಿಟಿಡ್ ಬ್ಯಾನರ್ ಅಡಿಯಲ್ಲಿ ಅನಂತಪುರ ಮೂಲದ ರಾಜಕೀಯ ಮುಖಂಡ *ಬಿ.ನಾಗರಾಜು ನಿರ್ಮಾಣ* ಮಾಡುತ್ತಿರುವುದು ನೂತನ ಅನುಭವ. ಚಂದನವನದಲ್ಲಿ ಹತ್ತು ವರ್ಷಗಳ ಕಾಲ ಏಳು ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಸ್ಪುರದ್ರೂಪಿ *ಭಾರ್ಗವ್.ಬಿ.ವಿ ಹೊಸ ಪ್ರಯೋಗ ....
"ಬೆಟಾಲಿಯನ್" ಚಿತ್ರಕ್ಕೆ ಮುಹೂರ್ತ ತರ್ಲೆ ಮಾಡೋ ಹುಡುಗರ ಕಥೆ ಆಕಾಶ ಪಿಕ್ಚರ್ಸ್ ಮೂಲಕ ಪ್ರಕಾಶ್ ಎಸ್. ಬೂದೂರು ಅವರು ನಿರ್ಮಿಸುತ್ತಿರುವ, ಕೆ.ಎಸ್.ಕೃಷ್ಣಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಬೆಟಾಲಿಯನ್ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಕುಮಾರ ಪಾರ್ಕ್ ನ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಥಮ ದೃಶ್ಯಕ್ಕೆ ನಿರ್ಮಾಪಕ ಪ್ರಕಾಶ್ ಬೂದೂರು ಅವರು ಆರಂಭ ಫಲಕ ತೋರಿಸಿದರೆ, ಪಿ.ಸಿ. ಶೇಖರ್ ಕ್ಯಾಮೆರಾ ಚಾಲನೆ ಮಾಡಿದರು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು. ನಿರ್ದೇಶಕ ಕೃಷ್ಣಕುಮಾರ್ ಮಾತನಾಡುತ್ತ ಕಳರದ 15 ವರ್ಷಗಳಿಂದ ಸಹ, ....
*ಪುನರ್ಜನ್ಮದ ಕಥೆ ಹೊತ್ತು ಬರುತ್ತಿದೆ ’ತರಂಗಾಂತರಂಗ’* *ನವ ಪ್ರತಿಭೆ ಶ್ರೀಷ ಅಭಿನಯದ ’ತರಂಗಾಂತರಂಗ’ ಚಿತ್ರದ ಟೀಸರ್ ಬಿಡುಗಡೆ* ಕರ್ನಾಟಕದ ಕಡಲ ತೀರದ ಅನೇಕ ಪ್ರತಿಭೆಗಳು ಪ್ರತಿ ವರ್ಷ ಕನ್ನಡ ಚಿತ್ರರಂಗಕ್ಕೆ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ತಂತ್ರಜ್ಞರಾಗಿ ಪರಿಚಯವಾಗುತ್ತಲೇ ಇರುತ್ತಾರೆ. ಈಗ ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಹೆಸರು ಶ್ರೀಷ ಅವರದ್ದು. ಹೌದು, ಉಡುಪಿಯ ಬೈಂದೂರು ಮೂಲದ ಯುವ ಪ್ರತಿಭೆ ಶ್ರೀಷ ಇದೀಗ ’ತರಂಗಾಂತರಂಗ’ ಚಿತ್ರದ ಮೂಲಕ ನಾಯಕ ನಟನಾಗಿ ಮತ್ತು ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಗ್ರಾಫಿಕ್ಸ್ ಡಿಸೈನರ್ ಆಗಿ ಮತ್ತು ಇವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅನುಭವ ....
*ಟ್ರೈಲರ್ ನಲ್ಲಿ ’ಕಾಮನ್* *ಮ್ಯಾನ್’* *ಸೆಪ್ಟೆಂಬರ್* *25ರಂದು* *ತೆರೆಗೆ* ಸಾಮಾನ್ಯನೊಬ್ಬ ರಾಜ್ಯದ ಸಿಎಂ ಆದರೆ ಹೇಗೆ ಆಡಳಿತ ನಡೆಸಬಹುದು, ಏನೆಲ್ಲ ಸುಧಾರಣೆ ಮಾಡಬಹುದು, ಎದುರಿಸುವ ಸವಾಲುಗಳೇನು ಎಂದು ಹೇಳುವ ಕಾಮನ್ ಮ್ಯಾನ್ ಚಿತ್ರ ಇದೇ ತಿಂಗಳ 25ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಡಾ. ಎನ್.ನರಸಿಂಹ ಮೂರ್ತಿ ಅವರೇ ಕಥೆ ಬರೆದು ಸುರಭಿ ಫಿಲಂಸ್ ಅಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರವಿದು. ಕೆರೆಬೇಟೆ ಖ್ಯಾತಿಯ ....
*ಒಂಬತ್ತು ರಸಗಳು, ಒಂದು ಕಥೆ ಮತ್ತು ಅಂತ್ಯ* ಚಂದನವನದಲ್ಲಿ ಮೊದಲು ಎನ್ನುವಂತೆ ಒಂಬತ್ತು ರಸಗಳು, ಒಂದು ಕಥೆ ಮತ್ತು ಅಂತ್ಯ ಇರುವ *’ರೌಶಾಬಿ’* ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಸ್ಪೂರ್ತಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಹಾವೇರಿ ಮೂಲದ ಉದ್ಯಮಿ *ಶರಣಪ್ಪ ಅಂಗಡಿ ನಿರ್ಮಾಣ* ಮಾಡಿದ್ದಾರೆ. ನಟ *ಎಸ್.ಆರ್.ಪ್ರಮೋದ್ ಆಕ್ಷನ್ ಕಟ್* ಹೇಳಿರುವ ಆರನೇ ಚಿತ್ರವಾಗಿದೆ. ಪ್ರಚಾರದ ಕೊನೆ ಹಂತವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಡುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ‍್ಕೆ ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಹಿರಿಯ ....
'ಕನಸಲು..’ ಆಲ್ಬಮ್ ಹಾಡು ಬಿಡುಗಡೆ ದರ್ಜಿಯ ಪ್ರೇಮಕಥೆ ಹೇಳುವ ’ಕನಸಲು.’ ಆಲ್ಬಮ್ ಹಾಡು ರಿಲೀಸ್ ನವಿರಾದ ಪ್ರೇಮವನ್ನು ಸಾರುವ ಆಲ್ಬಮ್ ಗೀತೆಯೊಂದು ’ಕನಸಲು..’ ಹೆಸರಲ್ಲಿ ಬಿಡುಗಡೆಯಾಗಿದೆ. ಯುವ ಪ್ರತಿಭೆ ಶ್ರೀರಾಮ್ ಗಂಧರ್ವ ಸಾರಥ್ಯದಲ್ಲಿನ ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದ ಯುವ ಪ್ರತಿಭೆಗಳ ಸಂಗಮವೇ ನಡೆದಿತ್ತು. ಕನಸಲು.. ಹಾಡನ್ನು ವೇದಿಕೆ ಮೇಲೆ ಸಾಂಕೇತಿಕವಾಗಿ ಬಿಡುಗಡೆಗೊಳಿಸಿ, ಪರದೆಯ ಮೇಲೆ ಪ್ರದರ್ಶಿಸಲಾಯಿತು. ಅತಿಥಿಯಾಗಿ ಆಗಮಿಸಿ ಶುಭಕೋರಿದ ’ಕಂಗ್ರಾಜುಲೇಶನ್ಸ್ ಬ್ರದರ್ಸ್’ ಚಿತ್ರದ ನಾಯಕ ರಕ್ಷಿತ್ ನಾಗ್ ಮಾತನಾಡಿ, "ಶ್ರೀರಾಮ್ ನಿಮ್ಮ ಕೆಲಸವನ್ನು ಇಷ್ಟಕ್ಕೆ ನಿಲ್ಲಿಸಬೇಡಿ. ಜನ ಬಹಳ ಬೇಗ ....
*-- 'ಚಿಟ್ಟೀ ಅಯೀ ಹೈ’ ಸಂಗೀತ ಕಾರ್ಯಕ್ರಮದ ಪತ್ರಿಕಾಗೋಷ್ಠಿಯ ಸುದ್ದಿ --* (’Chitti Aaye Hai' music event Press meet coverage Press release news) *ಸಂಗೀತ ಹೂರಣ ಹೊತ್ತು ಬರುತ್ತಿದೆ ‘ಚಿಟ್ಟೀ ಆಯೀ ಹೈ’* *ಖ್ಯಾತ ಗಾಯಕಿ ದಿ. ಲತಾ ಮಂಗೇಶ್ಕರ್ ಸವಿ ನೆನಪಿನಲ್ಲಿ ವೈವಿದ್ಯಮಯ ಗೀತೆಗಳ ಸಂಗೀತ ಸಂಜೆ* *ಅಪರೂಪದ ಸುಮಧುರ ಗೀತೆಗಳಿಗೆ ನಟ ಕಂ ನಿರ್ಮಾಪಕ ಕಮಲ್ ರಾಜ್ ವೇದಿಕೆ* *’ಚಿಟ್ಟೀ ಆಯೀ ಹೈ’ ಸಂಗೀತ ಸಂಜೆಯ ಪೋಸ್ಟರ್, ಆಮಂತ್ರಣ ಬಿಡುಗಡೆ* *ಭಾರತದ ವಿಭಿನ್ನ ಸಂಗೀತ ಪ್ರಾಕಾರಗಳನ್ನು ಆಸ್ವಾಧಿಸಲು ಬೆಂಗಳೂರು ಸಜ್ಜು* *’ಚಿಟ್ಟೀ ಆಯೀ ಹೈ’ ಸಂಗೀತ ಸಂಜೆಗೆ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರದ ಗಣ್ಯರ ದಂಡು* *12 ಸೆ. 2026, ....
*ಉತ್ತರ ಕನ್ನಡ ಜಿಲ್ಲೆಯನ್ನು ಬಣ್ಣಿಸಲು ಪದಗಳು ಸಾಲದು - ಹಿರಿಯ ನಟ ದೊಡ್ಡಣ್ಣ* 1801 ರಿಂದ 2026ರ ವರೆಗಿನ ಮೂರು ಕಾಲಘಟ್ಟ, ಉತ್ತರ ಕನ್ನಡ ಜಿಲ್ಲೆಯ ನೆಲದ ಕಥೆಯನ್ನು ಸಾರುವ *’ಕಾನ್ಧಾರಿ’* ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಹಿರಿಯ ನಟ ದೊಡ್ಡಣ್ಣ ಟ್ರೇಲರ್ ಬಿಡುಗಡೆ ಮಾಡಿ, ಜಿಲ್ಲೆಯ ಬಗ್ಗೆ ಸಕರಾತ್ಮಕವಾಗಿ ಖುಷಿ ಹಂಚಿಕೊಂಡರು. ಅಲ್ಲಿನವರೇ ಆಗಿರುವ *ಸುಪ್ರೀತ್ ಹೆಗಡೆ ಸೋಮನಮನೆ ಅವರು ಅಖ್ಯಾನ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ* ಮಾಡಿದ್ದಾರೆ. *ಪರಿಕಲ್ಪನೆ ಮತ್ತು ನಿರ್ದೇಶನ ವಿನಾಯಕ ಹೆಗಡೆ ಬೊಮ್ಮನಳ್ಳಿ* ಅವರದಾಗಿದೆ. ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ಐಎಎಸ್ ಅಧಿಕಾರಿ ಸಂಜಯ ಶೆಟ್ಟನ್ನವರ್ ಮತ್ತು ಇತಿಹಾಸಕಾರ ಹಾಗೂ ....
*ಶರಣ್ ಕಂಠಸಿರಿಯಲ್ಲಿ "ನೀ ನಂಗೆ ಅಲ್ಲವಾ" ಚಿತ್ರದ "ಜಿಗಿ ಜಿಕ್ಕ ಜಿಕ್ಕ" ಹಾಡು* . *ಹಾಡು ಬಿಡುಗಡೆ ಮಾಡಿ ಹಾರೈಸಿದ ನವೀನ್ ಶಂಕರ್, ವಿಕಾಶ್ ಉತ್ತಯ್ಯ ಹಾಗೂ ಸಿದ್ದು ಮೂಲಿಮನಿ* . ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ಹಾಗೂ ರಾಹುಲ್ ಆರ್ಕಟ್, ಕಾಶಿ ಮಾ ನಾಯಕ - ನಾಯಕಿಯಾಗಿ ನಟಿಸಿರುವ "ನೀ ನಂಗೆ ಅಲ್ಲವಾ" ಚಿತ್ರದ ಮೊದಲ ಹಾಡು "ನೋ ನೋ" ಜನಪ್ರಿಯವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಾಡು "ಜಿಗಿ ಜಿಕ್ಕ ಜಿಕ್ಕ" ಸರಿಗಮ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಮನೋಜ್ ಪಿ ನಡಲುಮನೆ ....