'ಸೆಪ್ಟೆಂಬರ್ 10' ಸೆ. 12ರಂದು ಬಿಡುಗದೆ ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ, ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ ಎಂಬ ಸಾಮಾಜಿಕ ಸಂದೇಶ ಇಟ್ಟುಕೊಂಡು ಶತ ಚಿತ್ರಗಳ ಸರದಾರ ಓಂ ಸಾಯಿಪ್ರಕಾಶ್ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರ ’ಸೆಪ್ಟೆಂಬರ್ 10' ವಿಶ್ವ ಆತ್ಮಹತ್ಯೆ ತಡೆ ದಿನದ ಸಂದರ್ಭದಲ್ಲೇ ಬಿಡುಗಡೆಯಾಗಲಿದೆ. ಸೆ.12 ರಂದು ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸೆಪ್ಟೆಂಬರ್ 10 ಚಿತ್ರಕ್ಕೆ ಹಿಂದಿನಿಂದಲೂ ಬೆಂಬಲವಾಗಿ ನಿಂತಿರುವ ವೈದ್ಯ ಡಾ.ರಾಜು ಅವರು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದರು. ನಟ, ನಿರ್ಮಾಪಕ ಕಮಲ್ ಅವರು ಸೆಪ್ಟೆಂಬರ್ 10 ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಜವಾಬ್ದಾರಿ ....
ಶಾರ್ಟ್ ಫಿಲಂ ಅಮೃತಾಂಜನ್, ಈಗ ಸಿನಿಮಾ ಆಗಿ ಪ್ರೇಕ್ಷಕರ ಮುಂದೆ.. ’ಅಮೃತ ಅಂಜನ’ ತಂದೆ ಮಗನ ಭಾಂಧವ್ಯದ ಕಥೆ.. ನಾಲ್ಕು ವರ್ಷಗಳ ಹಿಂದೆ ರಿಲೀಸಾಗಿ ಅತಿ ಹೆಚ್ಚು ವೀಕ್ಷಣೆಯಾಗಿ ಹೆಸರು ಮಾಡಿದ್ದ ಕಿರುಚಿತ್ರ ಅಮೃತಾಂಜನ್. ಜಯರಾಮ್ ಮೋಹಿತ್ (ಜೆ.ಆರ್.ಎಂ.) ಅವರ ನಿರ್ದೇಶನದ ಈ ಶಾರ್ಟ್ ಫಿಲಂ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ಅದೇ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ದೇಶಕ ಜಯರಾಮ್ ಅವರು ’ಅಮೃತ- ಅಂಜನ’ ಎಂಬ ಚಲನಚಿತ್ರ ನಿರ್ದೇಶನ ಮಾಡಿದ್ದಾರೆ. ಆ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು ರಿಲೀಸ್ ಅನೌನ್ಸ್ ಮೆಂಟ್ ಗಾಗೇ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಸುಧಾಕರ ಗೌಡ, ಗೌರವ್ ಶೆಟ್ಡಿ, ಕಾರ್ತೀಕ್ ರುವರಿ, ....
ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ ಸೆನ್ಸಾರ್ ಮಂಡಳಿ ನಿರ್ಲಕ್ಷ್ಯ ರವಿ ಶ್ರೀವತ್ಸ ಬೇಸರ ಡೆಡ್ಲಿ ಸೋಮ, ಮಾದೇಶ ಖ್ಯಾತಿಯ ರವಿ ಶ್ರೀವತ್ಸ ಅವರ ನಿರ್ಮಾಣ ಹಾಗೂ ನಿರ್ದೇಶನದ ’ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದ ಹಾಡು ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ರಿಯಲ್ ಸ್ಟಾರ್ ಉಪೇಂದ್ರ ಅವರು ಟ್ರೈಲರ್ ಗೆ ಚಾಲನೆ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ನಿರ್ಮಾಪಕ ಕೆ.ಮಂಜು, ಉಮೇಶ್ ಬಣಕಾರ್, ನ್ಯಾಯವಾದಿ ಟಿ.ಪ್ರಸನ್ನಕುಮಾರ್, ರಾಧಾಕೃಷ್ಣ ಅಡಿಗ, ಪ್ರವೀಣ್, ಉದಯ್, ಸೇತು ಮುಕುಂದನ್, ಥ್ರಿಲ್ಲರ್ ಮಂಜು ಹಾಗೂ ರವಿ ಶ್ರೀವತ್ಸ ಅವರ ಹಿತೈಶಿಗಳು ಹಾಗೂ ಸ್ನೇಹಿತರನೇಕರು ಹಾಜರಿದ್ದರು. ....
*'ಸೀಟ್ ಎಡ್ಜ್’ನಲ್ಲಿ ಕಂಡಿತು ಸಸ್ಪೆನ್ಸ್-ಥ್ರಿಲ್ಲರ್ ಝಲಕ್* *ಹೊರಬಂತು ’ವ್ಲಾಗ್-1 ದಿ ಲೂಪ್’ ಕಂಟೆಂಟ್ ವಿಡಿಯೋ* *ತೆರೆಗೆ ಬರಲು ತಯಾರಾಗುತ್ತಿದೆ ’ಸೀಟ್ ಎಡ್ಜ್’ ಚಿತ್ರ* ಯುವನಟ ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ’ಸೀಟ್ ಎಡ್ಜ್’ ತೆರೆಗೆ ಬರಲು ತಯಾರಾಗುತ್ತಿದೆ. ಡಾರ್ಕ್ ಕಾಮಿಡಿಯ ಜೊತೆಗೆ ಹಾರರ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ’ಸೀಟ್ ಎಡ್ಜ್’ ಸಿನಿಮಾದಲ್ಲಿ ನಾಯಕ ಸಿದ್ಧು ಮೂಲಿಮನಿ ಅವರಿಗೆ ರವೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ....
*ಕಲಿಯುಗ ಕೃಷ್ಣನ ಮಿಡಲ್ ಕ್ಲಾಸ್ ರಾಮಾಯಣ* *ಮಿಡಲ್ ಕ್ಲಾಸ್ ರಾಮಾಯಣ ಟ್ರೇಲರ್ ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತಿರಾ..!* ಸಿನಿಮಾ ಅಂದ್ರೆನೆ ಒಂದೊಳ್ಳೆ ಮನರಂಜನೆ. ಆ ಮನರಂಜನೆಗಾಗಿಯೇ ಸಿನಿಪ್ರೇಮಿಗಳು ಥಿಯೇಟರ್ ಹೋಗೋದು. ನೋವು, ಟೆನ್ಶನ್ ಎಲ್ಲಾ ಮರೆತು ಬರಬೇಕು ಅಂದ್ರೆ ಅಲ್ಲಿ ಬರಪೂರವಾದಂತ ನಗು ಇರಬೇಕು. ಅಂಥ ನಗು ಇರುವ ಸಿನಿಮಾವೊಂದು ರಿಲೀಸ್ ಗೆ ರೆಡಿಯಾಗಿದೆ. ಅದುವೆ ಮಿಡಲ್ ಕ್ಲಾಸ್ ರಾಮಾಯಣ. ಸೆಪ್ಟೆಂಬರ್ 12ಕ್ಕೆ ಸಿನಿಮಾ ರಿಲೀಸ್ ಆಗ್ತಾ ಇದೆ. ಈಗಷ್ಟೇ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ನಲ್ಲಂತೂ ಮಿಡಲ್ ಕ್ಲಾಸ್ ಮಂದಿಯ ಮದುವೆಯ ಅದೆಷ್ಟೋ ಸಂಕಷ್ಟಗಳನ್ನ ತೋರಿಸಿದ್ದಾರೆ. ಅಷ್ಟೇ ನಗು ಇದೆ. ಮೋಕ್ಷಿತಾ ಪೈ ಅಂತು ತಮ್ಮ ರಿಯಲ್ ಕಲರ್ ....
. *ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಿಂದ "ದೈವ" ಚಿತ್ರದ ಟೀಸರ್ ಬಿಡುಗಡೆ .* *ಮೂಲತಃ ಅಧ್ಯಾಪಕರಾಗಿದ್ದ MJ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಶಿಕ್ಷಕರ ದಿನದಂದೇ ಬಿಡುಗಡೆ.* ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಜಯಮ್ಮ ಪದ್ಮರಾಜ್ ನಿರ್ಮಿಸಿರುವ, ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ ಪಟ್ಟಣಶೆಟ್ಟಿ ಅವರ ಸಹ ನಿರ್ಮಾಣವಿರುವ ಹಾಗೂ MJ ಅವರು ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ "ದೈವ" ಚಿತ್ರದ ಟೀಸರ್ ಶಿಕ್ಷಕರ ದಿನಾಚರಣೆಯ ದಿನದಂದು ಬಿಡುಗಡೆಯಾಯಿತು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಗುರು ದೇಶಪಾಂಡೆ, ಹರಿ ಸಂತೋಷ್, ಭರ್ಜರಿ ಚೇತನ್, ಜಡೇಶ್ ಕೆ ಹಂಪಿ ಹಾಗೂ ನಿರ್ದೇಶಕರ ಸಂಘದ ....
*ಶ್ರೀದುರ್ಗಾ ಪರಮೇಶ್ವರಿ ಸನ್ನಿಧಾನದಲ್ಲಿ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ "ಕೊನಾರ್ಕ್" ಚಿತ್ರಕ್ಕೆ ಚಾಲನೆ* . *ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಧನುಷ್ ಹಾಗೂ ಫಾಲ್ಗುಣಿ ಖನ್ನ ನಾಯಕ - ನಾಯಕಿ* . "ನಾನು ಮತ್ತು ಗುಂಡ" ಖ್ಯಾತಿಯ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ, ಮಾವಿನಮರ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಧನುಷ್ - ಫಾಲ್ಗುಣಿ ಖನ್ನ ನಾಯಕ - ನಾಯಕಿಯಾಗಿ ನಟಿಸುತ್ತಿರುವ "ಕೊನಾರ್ಕ್" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಾಗರಭಾವಿಯ ಶ್ರೀದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಆರಂಭವಾಯಿತು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಆರಂಭ ಫಲಕ ತೋರಿ "ಕೊನಾರ್ಕ್" ಚಿತ್ರಕ್ಕೆ ....
*"ಭೀಮ" ಖ್ಯಾತಿಯ ಪ್ರಿಯಾ ಅಭಿನಯದ "ಕುಂಭ ಸಂಭವ" ಚಿತ್ರದ ಟೀಸರ್ ಬಿಡುಗಡೆ* . *ಚಿತ್ರೀಕರಣr ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ ಟಿ.ಎನ್.ನಾಗೇಶ್ ನಿರ್ದೇಶನದ ಈ ಚಿತ್ರ* . "ಭೀಮ" ಚಿತ್ರದ ಗಿರಿಜಾ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಪ್ರಿಯಾ ಅವರು ಟಿ.ಎನ್.ನಾಗೇಶ್ ನಿರ್ದೇಶನದ "ಕುಂಭ ಸಂಭವ" ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲೂ ಪೊಲೀಸ್ ಅಧಿಕಾರಿಯಾಗಿ ಪ್ರಿಯಾ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟೀಸರ್ ಬಿಡುಗಡೆ ಅದ್ದೂರಿಯಾಗಿ ನೆರವೇರಿತು. ಪರಿಪೂರ್ಣ ಸನಾತನ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸಂಸ್ಥಾಪಕರಾದ ಗುರೂಜಿ ಡಾ. ಶ್ರೀ ಎ. ವಿ. ಶ್ರೀನಿವಾಸನ್ ....
*ಯುವ ರಾಜಕುಮಾರ್ ಅವರಿಂದ ಅನಾವರಣವಾಯಿತು "ಅರಸಯ್ಯನ ಪ್ರೇಮ ಪ್ರಸಂಗ" ಚಿತ್ರದ ಟ್ರೇಲರ್* . *ಗ್ರಾಮೀಣಾ ಸೊಗಡಿನ ಈ ಕಾಮಿಡಿ ಕಥಾನಕ ಸೆಪ್ಟೆಂಬರ್ 19ರಂದು ಬಿಡುಗಡೆ* . ಮೇಘಶ್ರೀ ರಾಜೇಶ್ ನಿರ್ಮಾಣದ, ಜೆ.ವಿ.ಆರ್ ದೀಪು ನಿರ್ದೇಶನದ ಹಾಗೂ "ಫ್ರೆಂಚ್ ಬಿರಿಯಾನಿ" ಖ್ಯಾತಿಯ ಮಹಾಂತೇಶ್ ಹಿರೇಮಠ ನಾಯಕನಾಗಿ ನಟಿಸಿರುವ ಗ್ರಾಮೀಣ ಸೊಗಡಿನ ಕಾಮಿಡಿ ಕಥಾಹಂದರ ಹೊಂದಿರುವ "ಅರಸಯ್ಯನ ಪ್ರೇಮ ಪ್ರಸಂಗ" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಯುವ ರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಮಸಾಲ ಜಯರಾಮ್, ಸುಬ್ರಹ್ಮಣ್ಯ, ರೂಪಾಲಿ,ನಿರ್ಮಾಪಕರಾದ ನವರಸನ್, ರಮೇಶ್, ಸುರೇಶ್, ನಟಿ ಕಾರುಣ್ಯ ರಾಮ್ ಹಾಗೂ ನಿರ್ದೇಶಕರಾದ ....
'ಸ್ವಾಮಿ’ ಎನ್ನುವ ಹಂತಕನ ಸಂಚು..! ಚಿತ್ರ: ರಿಪ್ಪನ್ ಸ್ವಾಮಿ ನಿರ್ದೇಶನ: ಕಿಶೋರ್ ಮೂಡುಬಿದಿರೆ ನಿರ್ಮಾಣ: ಪಂಚಾನನ ಫಿಲ್ಮ್ಸ್ ತಾರಾಗಣ: ವಿಜಯ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್ ಮೊದಲಾದವರು. ಸ್ವಾಮಿ ಎನ್ನುವ ಹೆಸರಿಗೂ ಈತನ ವರ್ತನೆಗೂ ಸಂಬಂಧವೇ ಇಲ್ಲ. ಯಾಕೆಂದರೆ ಅಷ್ಟೊಂದು ಕ್ರೌರ್ಯ ತುಂಬಿದ ಬದುಕು ರಿಪ್ಪನ್ ಸ್ವಾಮಿಯದು. ತನ್ನ ಸಾಕು ಹಂದಿಯನ್ನೇ ಮಾಂಸಕ್ಕಾಗಿ ಬಲಿಕೊಡುವ ಸಂದರ್ಭದಲ್ಲಿ ಗುಂಡು ಹೊಡೆದು ಕೊಲ್ಲುವಂಥ ವಿಚಿತ್ರ ಮನುಷ್ಯ. ಈತ ಉರಿಗಣ್ಣು ಬಿಟ್ಟು ಯಾರ ವಿರುದ್ಧ ಯಾವಾಗ ಸಿಡಿದು ನಿಲ್ಲುತ್ತಾನೆಂದೇ ಹೇಳಲಾಗದು. ಇಂಥ ರಿಪ್ಪನ್ ಸ್ವಾಮಿಗೆ ಒಬ್ಬಳು ಅಂದದ ಮಡದಿ ಇರುತ್ತಾಳೆ. ವೃತ್ತಿಯಲ್ಲಿ ಆಯುರ್ವೇದಿಕ್ ವೈದ್ಯೆ. ಈ ....
"ಜೈ" ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ. ಗೌರಿ ಗಣೇಶ ಹಬ್ಬದ ವಿಶೇಷ ಸಂದರ್ಭದಲ್ಲಿ ಕರಾವಳಿ ಭಾಗದ ಪ್ರತಿಭೆ ಬಿಗ್ ಬಾಸ್ ಖ್ಯಾತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವಂತಹ ತುಳು ಹಾಗೂ ಕನ್ನಡ ಚಿತ್ರದ ಟೀಸರ್ ಬಿಡುಗಡೆ ಸಮಾರಂಭವನ್ನು ಆಯೋಜನೆ ಮಾಡಿದ್ದು , ವಿಶೇಷವಾಗಿ ಕರಾವಳಿ ಚಂಡೆ ವಾದ್ಯದ ಮೂಲಕ ರೋರಿಂಗ್ ಸ್ಟಾರ್ ಶ್ರೀ ಮುರಳಿಯನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡು ದೀಪವನ್ನು ಬೆಳಗುವುದರ ಮೂಲಕ ಚಾಲನೆ ನೀಡಿದರು. ಇನ್ನು ವಿಶೇಷವಾಗಿ ಮೈಸೂರು ಮೂಲದ ರಾಪ್ ಗಾಯಕರು ಜೈ ಚಿತ್ರಕ್ಕೆ ಸೈ ಎಂಬ ಹಿಪಪ್ ರಾಪ್ ಸಾಂಗ್ ಮೂಲಕ ಗಮನ ಸೆಳೆದರು. ಇನ್ನು ಈ ಚಿತ್ರದ ಮುಖ್ಯ ಅತಿಥಿಯಾಗಿ ಆಗಮಿಸಿದ ನಟ ....
ಮನಸೆಳೆಯುವ ತಾಯಿ ಮಗನ ಸಾಂಗ್... ಇದೇ 29ರಂದು "ಅಂದೊಂದಿತ್ತು ಕಾಲ" ರಿಲೀಸ್. ಗೌರಿ ಗಣೇಶನಿಗೆ ಪೂಜೆ ಸಲ್ಲಿಸಿ ಪತ್ರಿಕಾಗೋಷ್ಠಿ ಆರಂಭಿಸಿದ ಚಿತ್ರತಂಡ. ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ "ಅಂದೊಂದಿತ್ತು ಕಾಲ" ಚಿತ್ರದ ’ ಮಹಾರಾಜ ಹಾಗೆಂದು.. ಮನಸಾರೆ ಹಾರೈಸಿದೆ ನೀನಮ್ಮ’... ಎಂಬ ತಾಯಿ ಮಗನ ಬಾಂಧವ್ಯದ ಮನಮುಟ್ಟುವ ಹಾಡು ಇಂದು ಅಧಿಕೃತವಾಗಿ ಬಿಡುಗಡೆಗೊಂಡಿದೆ. ಕೆಜಿಎಫ್ ಖ್ಯಾತಿಯ ಕಿನ್ನಾಲ್ ರಾಜ್ ಸಾಹಿತ್ಯ ಬರೆದಿರುವ ಈ ಹಾಡನ್ನು ಸುನಿಲ್ ಕಶ್ಯಪ್ ಹಾಡಿದ್ದಾರೆ. ತಾಯಿ-ಮಗನ ಪ್ಯಾತೋ ಸಾಂಗ್ ಇದಾಗಿದ್ದು , ಮದರ್ ಆ್ಯಂತಮ್ ಎಂದೇ ಹೇಳಬಹುದು. ಈ ಚಿತ್ರದ ಪ್ರತಿಯೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು , ಈಗಾಗಲೇ ಎರಡು ....
ಕುಂಟೆಬಿಲ್ಲೆ ಆಡಿದ ರೋಬೋಟ್ ನಾಯಕಿ ಬರದಿದ್ದರೇನಂತೆ ವಿಶೇಷ ಅತಿಥಿಯಿಂದ ಟ್ರೇಲರ್ ಬಿಡುಗಡೆ ಮಾಡಿಸಿದ ಚಿತ್ರತಂಡ ಸಾಮಾನ್ಯವಾಗಿ ಸ್ಟಾರ್ ಕಲಾವಿದರಿಂದಲೋ ಅಥವಾ ರಾಜಕಾರಣಿ ಅಥವಾ ವಿಐಪಿಗಳಿಂದಲೋ ಸಿನಿಮಾ ಟ್ರೇಲರ್, ಟೀಸರ್, ಪೋಸ್ಟರ್, ಆಡಿಯೋ ಬಿಡುಗಡೆ ಮಾಡಿಸಲಾಗುತ್ತದೆ. ಆದರೆ, "ಕುಂಟೆಬಿಲ್ಲೆ’ ಚಿತ್ರತಂಡ ಸ್ನಾ$ಪಿ ಎಂಬ ಶ್ವಾನದಂತೆ ಓಡಾಡುವ ರೋಬೋಟ್ನಿಂದ ತಮ್ಮ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿಸಿದೆ. ಹೌದು, ಕಳೆದ ಐಪಿಎಲ್ ಸೀಸನ್ 18ರಲ್ಲಿ ಮೈದಾನದ ತುಂಬೆಲ್ಲ ಓಡಾಡುತ್ತಿದ್ದ "ಚಂಪಕ್' ರೋಬೋಟ್ ಹೋಲುವ "ಸ್ನಾ$ಪಿ’ಯನ್ನು ಮೈಸೂರು ಮೂಲದ ಪವನ್ ಎಂಬುವವರು ಹಾಂಕಾಂಗ್ನಿಂದ ಆಮದು ಮಾಡಿಸಿಕೊಂಡಿದ್ದು, ರೋಬೋಟ್ಗೂ "ಕುಂಟೆಬಿಲ್ಲೆ’ ....
*ಹಾಡು ಮತ್ತು ಟ್ರೇಲರಿನಲ್ಲಿ ಹೊರಬಂದ ‘ಮಾಯಾವಿ’* *ಹೊಸ ಪ್ರತಿಭೆಗಳ ‘ಮಾಯಾವಿ’ ಟ್ರೇಲರ್ ಮತ್ತು ಆಡಿಯೋ ರಿಲೀಸ್* *ಹಾಡಲ್ಲಿ ‘ಮಾಯಾವಿ’ ಗುಣಗಾನ, ಟ್ರೇಲರ್ ನಲ್ಲಿ ‘ಮಾಯಾವಿ’ ದರ್ಶನ* *ತೆರೆಗೆ ಬರಲು ತಯಾರಾದ ನವಪ್ರತಿಭೆಗಳ ‘ಮಾಯಾವಿ’* *ಸಸ್ಪೆನ್ಸ್-ಥ್ರಿಲ್ಲರ್ ಕಥೆಯನ್ನು ಹೊತ್ತು ಬರಲಿರುವ ‘ಮಾಯಾವಿ’* ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಮಾಯಾವಿ’ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಈಗಾಗಲೇ ‘ಮಾಯಾವಿ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ‘ಮಾಯಾವಿ’ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿದೆ. ‘ಮಾಯಾವಿ’ಯ ....
*ಹೆಸರಾಂತ ನಿರ್ದೇಶಕ ಸಿಂಪಲ್ ಸುನಿ ಅವರಿಂದ ಅನಾವರಣವಾಯಿತು ’ಓಂ ಶಿವಂ’ ಚಿತ್ರದ ಟ್ರೇಲರ್* . *ಟ್ರೇಲರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರ ಸೆಪ್ಟೆಂಬರ್ 5 ರಂದು ತೆರೆಗೆ* . ಚಿತ್ರರಂಗದೊಂದಿಗೆ ಹಲವು ವರ್ಷಗಳ ನಂಟಿರುವ ಅಲ್ವಿನ್ ನಿರ್ದೇಶನದ, ದೀಪಾ ಮೂವೀಸ್ ಲಾಂಛನದಲ್ಲಿ ಕೆ.ಎನ್.ಕೃಷ್ಣ ಅವರು ನಿರ್ಮಿಸಿರುವ ಹಾಗೂ ಭಾರ್ಗವ ಕೃಷ್ಣ ಮತ್ತು ವಿರಾನಿಕ ಶೆಟ್ಟಿ ನಾಯಕ - ನಾಯಕಿಯಾಗಿ ನಟಿಸಿರುವ "ಓಂ ಶಿವಂ" ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಹೆಸರಾಂತ ನಿರ್ದೇಶಕ ಸಿಂಪಲ್ ಸುನಿ ಟ್ರೇಲರ್ ಅನಾವರಣ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ....
*ಟ್ರೇಲರ್ ನಲ್ಲೇ ಗಮನ ಸೆಳೆದ "s/o ಮುತ್ತಣ್ಣ"* . *ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 12 ರಂದು ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ* . ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ನಾಯಕನಾಗಿ ಹಾಗೂ "ದಿಯಾ" ಖ್ಯಾತಿಯ ಖುಷಿ ರವಿ ನಾಯಕಿಯಾಗಿ ನಟಿಸಿರುವ "S/O ಮುತ್ತಣ್ಣ" ಚಿತ್ರದ ಟ್ರೇಲರ್ ಇತ್ತೀಚೆಗೆ ವಿಕ್ಟರಿ ಸಿನಿಮಾಸ್ ನಲ್ಲಿ ಬಿಡುಗಡೆಯಾಯಿತು. ಚಿತ್ರತಂಡದ ಸದಸ್ಯರು ಹಾಗೂ ಸಾಕಷ್ಟು ಕನ್ನಡ ಸಿನಿಮಾಸಕ್ತರು ಉಪಸ್ಥಿತರಿದ್ದರು. ನಂತರ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾತನಾಡಿದರು. ಈ ಚಿತ್ರದಲ್ಲಿ ....
*ಡಿಸೆಂಬರ್ 25 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ ಚಿತ್ರ "45"* . ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ “45”, ಆಗಸ್ಟ್ 15ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಸಿಜಿ ವರ್ಕ್ ಇನ್ನೂ ಪೂರ್ಣವಾಗಿರದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈಗ ಡಿಸೆಂಬರ್ 25 ರಂದು "45" ಚಿತ್ರ ಅದ್ದೂರಿಯಾಗಿ ....
*ಬಿಡುಗಡೆಯಾಯಿತು "ನಿದ್ರಾದೇವಿ Next Door" ಚಿತ್ರದ ಶೀರ್ಷಿಕೆ ಹಾಡು* . *"ಅಮ್ಮ - ಮಗನ ಬಾಂಧವ್ಯದ ಹಾಡಿಗೆ ತಲೆದೂಗುತ್ತಿದೆ ಕರುನಾಡು* .*. *ಸೆಪ್ಟೆಂಬರ್ 12 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆ* . ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಸುರಾಗ್ ನಿರ್ದೇಶನದ ಹಾಗೂ ಪ್ರವೀರ್ - ರಿಷಿಕಾ ನಾಯಕ - ನಾಯಕಿಯಾಗಿ ನಟಿಸಿರುವ "ನಿದ್ರಾದೇವಿ next door" ಚಿತ್ರಕ್ಕಾಗಿ ಪವನ್ ಭಟ್ ಅವರು ಬರೆದಿರುವ "ನಿದ್ರಾದೇವಿ ಬಾ" ಎಂಬ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಯಿತು. ನಕುಲ ಅಭಯಂಕರ್ ಸಂಗೀತ ನೀಡಿರುವ ಈ ಹಾಡನ್ನು ಶ್ರೀಲಕ್ಷ್ಮೀ ಬೆಳ್ಮಣು ಹಾಡಿದ್ದಾರೆ. ತಾಯಿ - ಮಗನ ಬಾಂಧವ್ಯದ ಈ ಹಾಡಿನಲ್ಲಿ ಹಿರಿಯ ನಟಿ ಸುಧಾರಾಣಿ ಹಾಗೂ ....
"ನಾನು ಮತ್ತು ಗುಂಡ 2" ವಿಜಯಪ್ರಸಾದ್ ಕಂಠದಲ್ಲಿ ಶಿವನ ಹಾಡು ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಆರ್.ಪಿ.ಪಟ್ನಾಯಕ್ ಸಂಗೀತ ಗುಂಡ(ನಾಯಿ) ಮತ್ತು ಅದರ ಮಾಲೀಕ ಶಂಕರನ ನಡುವಿನ ಅವಿನಾಭಾವ ಸಂಬಂಧದ ಕಥೆಯಿದ್ದ ಚಿತ್ರ ’ನಾನು ಮತ್ತು ಗುಂಡ’ ಈಗಾಗಲೇ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ ನಾಯಕನಾಗಿ ನಟಿಸಿದ ಆ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳಿದ್ದರು. ಈಗ ಅದರ ಮುಂದುವರೆದ ಭಾಗವಾದ ’ನಾನು ಮತ್ತು ಗುಂಡ-2' ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದು ,ಆ ಚಿತ್ರವೀಗ ತೆರೆಗೆ ಬರಲು ಸಿದ್ದವಾಗಿದೆ. ಸೆಪ್ಟೆಂಬರ್ 5ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ....
*ಗೌರಿ ಗಣೇಶ ಹಬ್ಬದ ಸಲುವಾಗಿ ಗಂಗೆ ಗೌರಿ ಟ್ರೇಲರ್ ಮತ್ತು ಹಾಡು ಬಿಡುಗಡೆ* ಗೌರಿ ಗಣೇಶ ಹಬ್ಬದ ಪ್ರಯುಕ್ತ *ಗಂಗೆ ಗೌರಿ* ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕುಡುಚಿ ಕ್ಷೇತ್ರದ ಮಾಜಿ ಶಾಸಕ ಪಿ.ರಾಜೀವ್, ಬಂಜಾರ ಸಂಸ್ಕ್ರತಿ ಹಾಗೂ ಭಾಷಾ ಆಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ, ಡೇರಿಂಗ್ ಸ್ಟಾರ್ ಪ್ರಿಯಾಹಾಸನ್ ಮತ್ತು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ಕೆ ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಹಿರಿಯ ನಟ *ಗಣೇಶ್ರಾವ್ ಕೇಸರ್ಕರ್ ಶಿವನಾಗಿ ಕಾಣಿಸಿಕೊಂಡಿದ್ದು, ಇದು ಅವರ 350ನೇ ಚಿತ್ರ* ....