ರಾಜಿಚಿತ್ರದಲ್ಲಿ ಏಳು ಹಾಡುಗಳು
‘ರಾಜಿ’ ಚಿತ್ರದಧ್ವನಿಸಾಂದ್ರಿಕೆ ಬಿಡುಗಡೆಕಾರ್ಯಕ್ರಮವುಕಲಾವಿದರ ಸಂಘದಲ್ಲಿ ನಡೆಯಿತು. ಸಮಾರಂಭಕ್ಕೆ ಚಾಲನೆ ನೀಡಿದ ಶ್ರೀನಗರಕಿಟ್ಟಿ ‘ಹುಡುಗರು’ ಸಿನಿಮಾದ ೪೨ ದಿನಗಳ ಚಿತ್ರೀಕರಣದ ಅನುಭವಗಳನ್ನು ಮೆಲುಕು ಹಾಕುತ್ತಾ ಪುನೀತ್ರಾಜ್ಕುಮಾರ್ಅವರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಬಿಚ್ಚಿಟ್ಟರು.ರಾಘಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಚಿತ್ರರಂಗಕ್ಕೆ ಬರಲುಅವರೇ ನನಗೆ ಪ್ರೇರಣೆಎಂದು ವಿಜಯರಾಘವೇಂದ್ರ ಹೇಳಿದರು.
*ಕಿರಂಗದೂರಿನ ಮನೆಯಲ್ಲಿ ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು.*
ಹೊಂಬಾಳೆ ಫಿಲಂಸ್ ಸ್ಥಾಪಕ, ಕೆ ಜಿ ಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು.
ವಿಜಯ್ ಅವರ ನಿರ್ಮಾಣದಲ್ಲಿ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಾಯಕರಾಗಿ ನಟಿಸಿರುವ "ಕೆ ಜಿ ಎಫ್" ಚಿತ್ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಕೆಜಿಎಫ್ ೨ ಕೌಂಟ್ಡೌನ್ ಶುರು ‘ಕೆಜಿಎಫ್-೨’ ಚಿತ್ರವುಏಪ್ರಿಲ್ ೧೪ರಂದು ವಿಶ್ವದಾದ್ಯಂತತೆರೆಕಾಣುತ್ತಿರುವುದರಿಂದ ಕೊನೆ ಬಾರಿಚಿತ್ರತಂಡವು ಮಾದ್ಯಮದವರನ್ನು ಭೇಟಿ ಮಾಡಿತು.ನಿರ್ದೇಶಕ ಪ್ರಶಾಂತ್ನೀಲ್ ಮಾತನಾಡಿ ನಿರ್ಮಾಪಕರುತೋರಿದಧೈರ್ಯದಿಂದ ನಮ್ಮನ್ನುಎಲ್ಲಾ ಕಡೆಗಳಲ್ಲಿ ಗುರುತಿಸುವಂತಾಯಿತು.ಚಿತ್ರಕ್ಕೆ ಹಾಕಲಾಗಿದ್ದ ಸೆಟ್ ಮಳೆ ಇತ್ಯಾದಿ ಕಾರಣದಿಂದ ಕಳಚಿ ಬಿತ್ತು. ಆಗಲೇ ಅದನ್ನು ನಿರ್ಮಿಸಲು ನಾಲ್ಕು ಕೋಟಿ ವೆಚ್ಚವಾಗಿತ್ತು.ಈ ಸಮಯದಲ್ಲಿಅವರಿಗೆ ಹೇಗೆ ಹೇಳುವುದು ಎನ್ನುವಚಿಂತೆಯಲ್ಲಿದ್ದಾಗ, ನಿರ್ಮಾಪಕರು ಹೇಳಿದ್ದು ಒಂದೇ ಮಾತು.ಸೆಟ್ ಕಳಚಿಬಿದ್ದ ಬಗ್ಗೆ ಚಿಂತೆ ಬಿಡಿ, ಮತ್ತೆಅದನ್ನೆ ಹಾಕಿ ....
*"ಸಂಸಾರ ಸಾಗರ"ದಲ್ಲಿ ಕಲಾವಿದರ ದಂಡು.* *ಮಿರಾಕಲ್ ಮಂಜು ನಿರ್ದೇಶನದ ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ರಾಘವೇಂದ್ರ ರಾಜಕುಮಾರ್.* ಕೊರೋನ ದೂರವಾಗಿದೆ. ಯುಗಾದಿ ಮರಳಿ ಬಂದಿದೆ. ಹೊಸಹೊಸ ಚಿತ್ರಗಳು ಆರಂಭವಾಗುತ್ತಿದೆ.. ಸಂಗೀತ ಹಾಗೂ ಗೀತರಚನೆಕಾರರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಿರಕಲ್ ಮಂಜು ನಿರ್ದೇಶನದ ಎರಡನೇ ಚಿತ್ರ "ಸಂಸಾರ ಸಾಗರ" . ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. ಚಿತ್ರದ ಪ್ರಮುಖಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯಿಸುತ್ತಿದ್ದಾರೆ. ದೀಕ್ಷಿತ್ ಧನುಷ್ ಹಾಗೂ ಆನಂದ್ ಆರ್ಯ ಈ ಚಿತ್ರದ ನಾಯಕರು. ರಕ್ಷ, ಭೂಮಿಕ ಹಾಗೂ ಲಕ್ಷ ಶೆಟ್ಟಿ ನಾಯಕಿಯರು. ಎಸ್ ....
*ಏಪ್ರಿಲ್ 1 ರ ಬದಲು ಏಪ್ರಿಲ್ 8ಕ್ಕೆ ಬರಲಿದೆ "ತ್ರಿಕೋನ"* . ಏ.1ರಂದು ಬಿಡುಗಡೆಯಾಗಬೇಕಿದ್ದ ತ್ರಿಕೋನ ಚಿತ್ರವು ಈಗ ಏ.8ಕ್ಕೆ ಮುಂದೂಡಲ್ಪಟ್ಟಿದೆ. ಈ ಸಂಬಂಧ ನಿರ್ಮಾಪಕ ರಾಜಶೇಖರ್, ರಾಯಭಾರಿ ಸುಚೇಂದ್ರ ಪ್ರಸಾದ್ ಮತ್ತು ನಿರ್ದೇಶಕ ಚಂದ್ರಕಾಂತ್ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ಹಂಚಿಕೊಂಡರು. ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್" ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ವಿತರಕರ ಜತೆಗೆ ಮಾತನಾಡುವಾಗ, "ಜೇಮ್ಸ್' ಚಿತ್ರವು ಎಲ್ಲೆಲ್ಲಿ ಪ್ರದರ್ಶನವಾಗುತ್ತಿದೆ, ಆ ಕೆಲವು ಚಿತ್ರಮಂದಿರಗಳನ್ನು ಕೊಡಿಸುವುದಾಗಿ ಹೇಳಿದರು. ನಾನು ಪುನೀತ್ ಅಭಿಮಾನಿಯಾಗಿ, ಅವರ ಚಿತ್ರ ಓಡುತ್ತಿರುವ ಚಿತ್ರಮಂದಿರಗಳಲ್ಲಿ ....
*ಇಬ್ಬರು ಹೆಣ್ಣುಮಕ್ಕಳ ಉಸ್ತುವಾರಿಯಲ್ಲಿ "ಅಂತು ಇಂತು" ಚಿತ್ರ ಬರಲಿದೆ.* *ಕನ್ನಡದಿಂದ ಕೆನಡಾಕ್ಕೆ ಬಾಂಧವ್ಯ ಬೆಸೆಯುವ ಈ ಚಿತ್ರಕ್ಕೆ ದಿಗಂತ್ ನಾಯಕ.* ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಎಂಬ ಮಾತು ದೂರವಾಗುವ ಸಮಯ ಬಂದಿದೆ. ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕಿಯರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕೆನಡಾ ನಿವಾಸಿ ಬೃಂದಾ ಮುರಳೀಧರ್ "ಅಂತು ಇಂತು" ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಿರುತೆರೆ, ಹಿರಿತೆರೆ ನಟಿ ಹಾಗೂ ನಿರ್ಮಾಪಕಿ ಜಯಶ್ರೀ ರಾಜ್, ಬೃಂದಾ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಲಿದ್ದಾರೆ. ದಿಗಂತ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. ಈ ಕುರಿತು ಚಿತ್ರತಂಡ ಮಾಧ್ಯಮದ ....
ಕೆಜಿಎಫ್ ಟ್ರೇಲರ್ಗೆ ಅಭಿಮಾನಿಗಳು ಫಿದಾ
ಸಿನಿಪ್ರಿಯರು ಮತ್ತು ಅಭಿಮಾನಿಗಳು ಬಹು ದಿನಗಳಿಂದ ಕಾದು ಕುಳಿತಿದ್ದ ಬಹು ನಿರೀಕ್ಷಿತ ‘ಕೆಜಿಎಫ್’-೨’ ಚಿತ್ರದ ಮೊದಲ ಟ್ರೇಲರ್ ಐದು ರಾಜ್ಯಗಳ ಪತ್ರಕರ್ತರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು. ಬಾಲಿವುಡ್ನ ಕರಣ್ಜೋಹರ್ ನಿರೂಪಣೆ ಮಾಡಿದ್ದು ವಿಶೇಷವೆನಿಸಿತ್ತು. ಕನ್ನಡ ಟ್ರೇಲರ್ಗೆ ಚಾಲನೆ ನೀಡಿದ ಶಿವರಾಜ್ಕುಮಾರ್ ಮಾತನಾಡಿ ಯಶ್ ಮೊದಲಿನಿಂದಲೂ ನನಗೆ ಇಷ್ಟ. ತಮ್ಮನ ಹಾಗೆ ಇರುವವರು. ಎಲ್ಲರಂತೆ ನಾನು ಸಿನಿಮಾ ನೋಡಲು ಕಾಯುತ್ತಿದ್ದೇನೆ. ಫಸ್ಟ್ ಡೇ ಫಸ್ಟ್ ಷೋಗೆ ಹೋಗಲು ಕಾತುರನಾಗಿದ್ದೇನೆ ಎಂದರು.
*ದುಬೈನ ಅಂತಾರಾಷ್ಟ್ರೀಯ ಫ್ಯಾಷನ್ ಸ್ಪರ್ಧೆಯಲ್ಲಿ ಫಾರೆವರ್ ನವೀನ್ಕುಮಾರ್ಗೆ (Forever Naveen Kumar) ಮತ್ತೊಂದು ಪ್ರಶಸ್ತಿ* *- ಅಂತಾರಾಷ್ಟ್ರೀಯ ಸೆಲೆಬ್ರಿಟಿ ಡಿಸೈನರ್ ಟೈಟಲ್* ತಮ್ಮ ವಿಭಿನ್ನ, ವಿಶಿಷ್ಟ ವಿನ್ಯಾಸಗಳಿಂದ ಮನೆಮಾತಾಗಿರುವ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನವನ್ನು ಪಡೆದದುಕೊಂಡಿರುವ, ಫಾರೆವರ್ ನವೀನ್ ಕುಮಾರ್ (Forever Naveen Kumar), ಸದಾ ಹೊಸತನದ ಮೂಲಕ ಫ್ಯಾಶನ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ದೇಶ ವಿದೇಶಗಳಲ್ಲಿನ ಇವೆಂಟ್ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಅದೇ ರೀತಿ ಇದೀಗ ಇತ್ತೀಚೆಗೆ ದುಬೈನಲ್ಲಿ ಇನ್ವಿಕ್ಟಾ ಟ್ರಿಯೋ ಸಹಯೋಗದಲ್ಲಿ ನಡೆದ ಗ್ಲಿಟ್ಜ್ ಆ್ಯಂಡ್ ಗ್ಲಿಟ್ರೇಟಿ ಸೀಸನ್ 2 ....
ಜೇಮ್ಸ್ ಸಂತೋಷಕೂಟದಲ್ಲಿತಾರೆಯರು
ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ಅಭಿನಯದ ಕೊನೆ ಚಿತ್ರ ‘ಜೇಮ್ಸ್’ ಅಂದುಕೊಂಡಂತೆಎಲ್ಲಡೆ ಗಳಿಕೆ ಚೆನ್ನಾಗಿ ಬರುತ್ತಿದೆ.ಬಾಕ್ಸ್ಆಫೀಸ್ದಲ್ಲೂದೊಡ್ಡ ಮಟ್ಟದ ಸೌಂಡ್ ಮಾಡಿದಾಖಲೆಯನ್ನು ಹುಟ್ಟುಹಾಕಿದೆ.ಇದರನ್ವಯ ಸಂತೋಷಕೂಟವನ್ನು ನಿರ್ಮಾಪಕಕಿಶೋರ್ಪತ್ತಿಕೊಂಡ ಆಯೋಜಿಸಿದ್ದರು.
*"ಮಾಯಾಮೃಗ" ದ ಬೆನ್ನೇರಿ ಹೊರಟ ಯತಿರಾಜ್.* *ಆರಂಭ ಫಲಕ ತೋರಿ ಶುಭ ಕೋರಿದ ಡಾರ್ಲಿಂಗ್ ಕೃಷ್ಣ.* ಪತ್ರಕರ್ತನಾಗಿ, ಕಲಾವಿದನಾಗಿ, ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿರುವ ಯತಿರಾಜ್ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ "ಮಾಯಾಮೃಗ" ಚಿತ್ರಕ್ಕೆ ಇತ್ತೀಚೆಗೆ ನಟ ಡಾರ್ಲಿಂಗ್ ಕೃಷ್ಣ ಚಾಲನೆ ನೀಡಿ ಶುಭ ಕೋರಿದರು. ರಾಮಾಯಣದ ಮಾಯಮೃಗ ಪ್ರಸಂಗ ಎಲ್ಲರಿಗೂ ಗೊತ್ತು. ತನ್ನ ಗಂಡನಿಗಾಗಿ ಅಷ್ಟು ವೈಭೋಗಗಳನ್ನು ತ್ಯಾಗ ಮಾಡಿ ಬಂದ ಮಹಾ ಪತಿವ್ರತೆ ಸೀತಾದೇವಿ. ಕಾಡಿನಲ್ಲಿ "ಮಾಯಾಮೃಗ"ಕ್ಕೆ ಆಸೆಪಟ್ಟಿದ್ದು, ಅದನ್ನು ಬೆನ್ನಟ್ಟಿ ರಾಮ ಹೋಗಿದ್ದು, ಇದರಲ್ಲಿ ಏನೋ ಇದೆ ಎಂದು ಲಕ್ಷ್ಮಣ ಹೇಳಿದ್ದು.ಕೊನೆಗೆ ಅದು ಮಾರೀಚ ಎಂದು ತಿಳಿದ್ದಿದ್ದು, ಈ ....
*ಸಾಮಾಜಿಕ ಸಮಸ್ಯೆಗಳ ವಿರುದ್ಧ ನಡೆಸುವ ಹೋರಾಟದ ಕಥಾಹಂದರವೇ "ಕೈಲಾಸ ಕಾಸಿದ್ರೆ"* *ತಾರಕಾಸುರ ಖ್ಯಾತಿಯ ವೈಭವ್ ನಾಯಕ.* ಅನಂತಪುರದ ವಾಸಿಕ್ ಅನ್ಸಾದ್ ಅವರು ನಿರ್ಮಿಸಿರುವ, ನಾಗ್ ವೆಂಕಟ್ ನಿರ್ದೇಶನದಲ್ಲಿ "ತಾರಕಾಸುರ" ಖ್ಯಾತಿಯ ವೈಭವ್ ನಾಯಕನಾಗಿ ನಟಿಸಿರುವ "ಕೈಲಾಸ ಕಾಸಿದ್ರೆ" ಚಿತ್ರ ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಮಾಧ್ಯಮದ ಮುಂದೆ ಚಿತ್ರತಂಡ ಚಿತ್ರದ ಕುರಿತು ಮಾಹಿತಿ ನೀಡಿತು. ನಮ್ಮ ಈ ಸಮಾಜದಲ್ಲಿ ಯುವಜನತೆ ಡ್ರಗ್ ಮಾಫಿಯಾ ಸೇರಿದಂತೆ ಅನೇಕ ದುಷ್ಟ ಚಟುವಟಿಕೆಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ಈ ಚಿತ್ರವನ್ನು ....
*"ನಟ ಭಯಂಕರ" ನಿಗೆ ಸಾಥ್ ನೀಡಿದ "ಮದಗಜ".* ತಮ್ಮ ಮಾತಿನ ಮೂಲಕವೇ ಮನೆಮಾತಾಗಿರುವ ಒಳ್ಳೆ ಹುಡುಗ ಪ್ರಥಮ್ ಪ್ರಥಮ ಬಾರಿಗೆ ನಿರ್ದೇಶಿಸಿರುವ ಚಿತ್ರ " ನಟ ಭಯಂಕರ". ಈ ಚಿತ್ರದ ನಾಯಕ ಕೂಡ ಪ್ರಥಮ್ ಅವರೆ. ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. "ಮದಗಜ" ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಡುಗಳನ್ನು ಬಿಡುಗಡೆ ಮಾಡಿದರು. ಲಹರಿ ಸಂಸ್ಥೆಯ ವೇಲು, ಜಿಲ್ಲಾಧಿಕಾರಿ ದಯಾನಂದ್, ಗೀತರಚನೆಕಾರ ಡಾ||ವಿ.ನಾಗೇಂದ್ರಪ್ರಸಾದ್, ಗಿರೀಶ್, ಅರ್ಜುನ್ ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಆಡಿಯೋ ರಿಲೀಸ್ ಗೆ ಸಾಕ್ಷಿಯಾದರು. ಪ್ರಥಮ್ ಕಾನ್ಫಿಡೆನ್ಸ್ ಇರುವ ಹುಡುಗ. ಬಿಗ ಬಾಸ್ ನ ಆರಂಭದಲ್ಲಿ ಇವರನ್ನು ನೋಡಿ, ಏನಪ್ಪಾ, ಹೀಗೆ ....
*ಹೌಸ್ ಪಾರ್ಟಿ ಮೂಡ್ನಲ್ಲಿ ALL OK* -------------- *ಕಲರ್ ಫುಲ್ ಹಾಡಿಗೆ ಹೆಜ್ಜೆ ಹಾಕಿದ ಅದ್ವಿಕಾ* ಹೊಸ ಪ್ರಯೋಗಗಳ ಮೂಲಕ ಯೂಟ್ಯೂಬ್ನಲ್ಲಿ ಸದಾ ಸುದ್ದಿಯಲ್ಲಿರುವ ರ್ಯಾಪರ್, ಸಿಂಗರ್, ಕಂಪೋಸರ್ ALL OK ಅಲಿಯಾಸ್ ಅಲೋಕ್. ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಹಾಡನ್ನು ಹೊರತಂದಿದ್ದಾರೆ. ಅದರ ಹೆಸರು "ಹೌಸ್ ಪಾರ್ಟಿ’. ಈ ಹಾಡಿನ ವಿಶೇಷತೆ ಹೇಳಿಕೊಳ್ಳಲೆಂದೆ ಇಡೀ ತಂಡ ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಂದಿತ್ತು. ಹಾಡಿನ ಬಗ್ಗೆ, ಶೂಟಿಂಗ್ ಅನುಭವದ ಬಗ್ಗೆಯೂ ತಂಡ ಮಾಹಿತಿ ಹಂಚಿಕೊಂಡಿತು. ಮೊದಲಿಗೆ ಮಾತನಾಡಿದ ಹಾಡಿಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣವನ್ನೂ ಮಾಡಿರುವ ಅಲೋಕ್, ಇದು "ಕೋವಿಡ್ ಸಮಯದಲ್ಲಿನ ....
*ಏಪ್ರಿಲ್ ಒಂದರಂದು ಬಹುಭಾಷಾ ನಟ ಸುಮನ್ ಅಭಿನಯದ"ಸೇವಾ ದಾಸ್" ತೆರೆಗೆ .* *ಬಂಜಾರ ಭಾಷೆಯ ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆ.* ಕೊರೋನ ಕಳೆದ ಮೇಲೆ ಸಿನಿರಂಗದಲ್ಲಿ ಸುಗ್ಗಿ ಸಂಭ್ರಮ. ಮತ್ತೆ ಹಳೆ ವೈಭವ ಮರಳಿ ಬರುತ್ತಿದೆ. ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ನಟಿಸಿರುವ ಬಹಭಾಷಾ ನಟ ಸುಮನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಸೇವಾ ದಾಸ್" ಬಂಜಾರ ಚಿತ್ರ ಏಪ್ರಿಲ್ ಒಂದರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ನಾನು ಚಿತ್ರರಂಗಕ್ಕೆ ಬಂದು ನಲವತ್ತು ವರ್ಷ ಕಳೆದಿದೆ. ನನ್ನ ತಂದೆ-ತಾಯಿ ಮಂಗಳೂರಿನವರು. ನಾನು ಹುಟ್ಟಿದ್ದು ಚೆನ್ನೈ ನಲ್ಲಿ. ಈ ತನಕ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಇದೇ ಮೊದಲ ....
*ಶುರುವಾಯಿತು "ಶಂಭೋ ಶಿವ ಶಂಕರ" ಚಿತ್ರದ ಹಾಡುಗಳ ದಿಬ್ಬಣ್ಣ.*
ವರ್ತೂರು ಮಂಜು ನಿರ್ಮಾಣದ, ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ ಮೂಡಿಬಂದಿರುವ "ಶಂಭೋ ಶಿವ ಶಂಕರ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.
ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಹಾಗೂ ನಾಯಕ ವಸಿಷ್ಠ ಸಿಂಹ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ
ಶುಭ ಕೋರಿದರು.
ನವೀನ್ ಸಜ್ಜು ಹಾಡಿರುವ "ನಾಟಿಕೋಳಿ" ಹಾಡು ಸಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡತ್ತಿದೆ.
"ನಾನ್ ಪೋಲಿ" ಆದ್ರೂ ಸ್ನೇಹಕ್ಕೆ ಬದ್ದ, ಯಾವುದೇ ಜವಾಬ್ದಾರಿ ಇಲ್ಲದೆ ಪೋಲಿ ಥರ ಇದ್ದ ಹುಡುಗನೊಬ್ಬನ ಜೀವನ ಹೇಗೆಲ್ಲಾ ತಿರುವು ತೆಗೆದುಕೊಂಡಿತು ಎಂಬ ಕಥಾನಕ ಹೊಂದಿರುವ ಚಿತ್ರ ನಾನ್ ಪೋಲಿ. ಎಂ.ಯಶವಂತ್ ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಹರೀಶ್ ವಿ. ಈ ಚಿತ್ರದ ನಾಯಕ ಮತ್ತು ನಿರ್ಮಾಪಕ, ದಿಶಾ ಶೆಟ್ಟಿ ನಾಯಕಿ, ಕೀರ್ತಿ ವರ್ಧನ್ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದ್ದು, ಚೇತನ್ ಸಿ.ವಿ. ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ....
*ಗಣ್ಯರ ಸಮ್ಮುಖದಲ್ಲಿ "ದಂಡಿ" ಹಾಡುಗಳ ಲೋಕಾರ್ಪಣೆ.* ಕಲ್ಯಾಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಷಾರಾಣಿ. ಎಸ್.ಸಿ ಅವರು ನಿರ್ಮಿಸಿರುವ, ವಿಶಾಲ್ ರಾಜ್ ನಿರ್ದೇಶಿಸಿರುವ "ದಂಡಿ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಮೇಜರ್ ಸಿ.ಆರ್.ರಮೇಶ್, ಎನ್.ಮುನಿರಾಜುಗೌಡ ಮುಂತಾದ ಗಣ್ಯರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಲೋಕಾರ್ಪಣೆಯಾದವು. ಪೂಜ್ಯ ಶ್ರೀಗಳು ತಮ್ಮ ಹಿತನುಡಿಗಳ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. ಉಳಿದ ಗಣ್ಯರು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡಿದರು. ಪ್ರೊಫೆಸರ್ ರಾಜಶೇಖರ ಮಠಪತಿ ಅವರ ಕಾದಂಬರಿ ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. 1904 ರಿಂದ 1942 ....
*ಏಪ್ರಿಲ್ ಒಂದರಿಂದ ರಾಜ್ಯಾದ್ಯಂತ "ಲೋಕಲ್ ಟ್ರೈನ್" ಸಂಚಾರ.* ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ "ಲೋಕಲ್ ಟ್ರೈನ್" ಚಿತ್ರ ಇದೇ ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಗಿತ್ತು. ಚಿತ್ರ ಬಿಡುಗಡೆಗೆ ಕೊರೋನ ಕಾರಣವಾಗಿತ್ತು. ಈಗ ಮೊದಲಿನ ವಾತಾವರಣ ಮರುಕಳಿಸಿದ್ದು, ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರಕ್ಕೆ ಸಹಕಾರ ನೀಡಿದ ನಾಯಕ ಡಾರ್ಲಿಂಗ್ ಕೃಷ್ಣ ಆದಿಯಾಗಿ ಸಮಸ್ತರಿಗೂ ಧನ್ಯವಾದ ಅರ್ಪಿಸಿದರು ನಿರ್ಮಾಪಕ ಸುಬ್ರಾಯ ವಾಳ್ಕೆ. ಬೆಂಗಳೂರಿಗೆ ಸುತ್ತಮುತ್ತಲಿನ ಊರಿನ ಜನರು ಕಾರ್ಯದ ನಿಮಿತ್ತವಾಗಿ, ಓದಿನ ಸಲುವಾಗಿ ಸಾಕಷ್ಟು ಜನರು ದಿನ ....
ಪುನೀತ್ಇಲ್ಲದಜೇಮ್ಸ್ ಪ್ರಿ ರಿಲೀಸ್ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ಅಭಿನಯದ ಕೊನೆ ಚಿತ್ರ ‘ಜೇಮ್ಸ್’ ಚಿತ್ರವುಅವರ ಹುಟ್ಟುಹಬ್ಬ ಮಾರ್ಚ್ ೧೭ರಂದು ತೆರೆಕಾಣತ್ತಿದೆ.ಇದರನ್ವಯ ಭಾನುವಾರದಂದುಅರಮನೆ ಮೈದಾನದಲ್ಲಿ ಬೃಹತ್ ಪ್ರಿ ರಿಲೀಸ್ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಿನಿಮಾದಲ್ಲಿ ನಟಿಸಿದ ಬಹುತೇಕಕಲಾವಿದರು, ಡಾ.ರಾಜ್ಕುಮಾರ್ಕುಟುಂಬದವರು ಪಾಲ್ಗೋಂಡಿದ್ದರು.ರಾಘವೇಂದ್ರರಾಜ್ಕುಮಾರ್ ಮಾತನಾಡುತ್ತಾದೇವರುಓಡುವಗಾಡಿಯನ್ನು ನಿಲ್ಲಿಸಿಬಿಟ್ಟ.ನನಗೆ ಹಲವು ಅನಾರೋಗ್ಯಗಳು ಬಂದರೂ ನಾನಿನ್ನೂ ಬದುಕಿದ್ದೇನೆ. ಆದರೆಆರೋಗ್ಯವಾಗಿದ್ದ ನನ್ನಅಪ್ಪುನನ್ನುಕರೆದುಕೊಂಡ.ನಾನು ಅವನನ್ನು ....
*ಕಂಠೀರವದಲ್ಲಿ "ಟಾರ್ಗೆಟ್” ಚಿತ್ರಕ್ಕೆ ಚಾಲನೆ.* *ಇದು ಈಗಿನ ಜನರೇಶನ್ ಕಥೆ* ಮೋಹನ್ರೆಡ್ಡಿ , ಸುಬ್ಬಾರೆಡ್ಡಿ ಹಾಗೂ ಮಧು ಬಾಬು ಅವರ ನಿರ್ಮಾಣದ "ಟಾರ್ಗೆಟ್" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಆರ್ಜಿವಿ, ಪೂರಿ ಜಗನ್ನಾಥ್ರಂಥ ನಿರ್ದೇಶಕರ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸಮಾಡಿದ ಅನುಭವವಿರುವ ರವಿವರ್ಮ ಅವರ ಸ್ವತಂತ್ರ ನಿರ್ದೇಶನದ ಪ್ರಥಮಚಿತ್ರ ಟಾರ್ಗೆಟ್. ಕನ್ನಡ ಹಾಗೂ ತೆಲುಗು ಸೇರಿದಂತೆ ೨ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ....