ಯಲ್ಲೋ ಗ್ಯಾಂಗ್ಸ್ ಟ್ರೇಲರ್ ಬಿಡುಗಡೆ ಕ್ರೈಂ ಜಗತ್ತಿನ ಕಥೆ ಹೊಂದಿರುವ ‘ಯಲ್ಲೋ ಗ್ಯಾಂಗ್ಸ್’ ಚಿತ್ರವು ನವೆಂಬರ್ ೧೧ರಂದು ತೆರೆಕಾಣುತ್ತಿದೆ. ಎರಡು ಹಂತದಲ್ಲಿ ಬೆಂಗಳೂರು ಸುತ್ತಮುತ್ತ ೩೫ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕತೆ ಮತ್ತು ನಿರ್ದೇಶನ ರವೀಂದ್ರಪರಮೇಶ್ವರಪ್ಪ. ತಾರಗಣದಲ್ಲಿ ಬಲರಾಜವಾಡಿ, ನಾಟ್ಯರಂಗ, ನವೀನ್ದೇವಯ್ಯ, ಅರ್ಚನಾಕೊಟ್ಟಿಗೆ, ಸತ್ಯಉಮ್ಮತ್ತಾಲ್, ಪ್ರದೀಪ್ಪೂಜಾರಿ, ವಿನೀತ್ಕಟ್ಟಿ, ಮಲ್ಲಿಕಾರ್ಜುನದೇವರಮನೆ, ನಂದಗೋಪಾಲ್, ರವಿಗಜಜಿಗಣಿ, ಪವನ್ಕುಮಾರ್, ನೀನಾಸಂ ದಯಾನಂದ್, ಸತ್ಯ, ಬಿಜಿ.ವಿಠಲ್ಪರೀಟ, ಅರುಣ್ಕುಮಾರ್, ಶ್ರೀಹರ್ಷ, ಸಂಚಾರಿಮಧು, ಪ್ರವೀಣ್.ಕೆ.ಬಿ. ಮುಂತಾದವರು ....
ಕಾಣೆಯಾಗಿದ್ದಾಳೆ ಹಾಡುಗಳ ಸಮಯ
ವಿನೂತನ ಶೀರ್ಷಿಕೆ ಹೊಂದಿರುವ ‘ಕಾಣೆಯಾಗಿದ್ದಾಳೆ’ ಚಿತ್ರದ ಹಾಡುಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಹುಡುಕಿ ಕೊಟ್ಟವರಿಗೆ ಬಹುಮಾನವೆಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಆರ್.ಕೆ ನಿರ್ದೇಶನ ಮಾಡಿದ್ದಾರೆ. ಸಾಮಾಜಿಕ ಕಳಕಳಿಯ ಚಿತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹಳ್ಳಿಯಿಂದ ನಗರಕ್ಕೆ ಬಂದ ಹೆಣ್ಣುಮಗಳೊಬ್ಬಳಿಗೆ ನಗರದಲ್ಲಿ ಯಾವೆಲ್ಲಾ ಸಮಸ್ಯೆಗಳು ಕಾಡುತ್ತವೆ.
ಕನ್ನಡದ ಕಾಶ್ಮೀರ್ ಫೈಲ್ಸ್ ಮೂರು ದಶಕಗಳ ಹಿಂದೆ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ಇರಲಾದ ಹಿಂದಿ ಚಿತ್ರ ‘ಕಾಶ್ಮೀರಿ ಫೈಲ್ಸ್’ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. ಭಯೋತ್ಪಾದಕರ ಅಟ್ಟಹಾಸ, ಕಾಶ್ಮೀರಿ ಪಂಡಿತರ ನೋವಿನ ಸುತ್ತ ಕಥೆಯನ್ನು ಹಣೆಯಲಾಗಿತ್ತು. ಸರ್ಕಾರವು ವಿಧಿ ೩೭೦ನ್ನು ಹಿಂಪಡೆಯಲಾಗಿದ್ದು, ಮತ್ತೆ ಪಂಡಿತರನ್ನು ಕಾಶ್ಮೀರಕ್ಕೆ ಕರೆದೊಯ್ಯುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾದರೆ ಈಗ ಅಲ್ಲಿನ ಪರಿಸ್ಥಿತಿ ಹೇಗಿದೆ? ಈಗಲೂ ಉಗ್ರರ ಉಪಟಳ ಮೊದಲಿನಂತೆಯೇ ಇದೆಯಾ? ಎಲ್ಲಾ ವಿಷಯಗಳ ಕುರಿತಂತೆ ಕನ್ನಡದಲ್ಲಿ ಚಿತ್ರವೊಂದು ಸಿದ್ದಗೊಂಡಿದೆ. ಅದಕ್ಕೆ ‘ವಿಧಿ (ಆರ್ಟಿಕಲ್)೩೭೦’ ಅಂತ ಶೀರ್ಷಿಕೆ ಇಡಲಾಗಿದೆ. ಕೆ.ಶಂಕರ್ ರಚಸಿ ....
*ಸುಂದರ ಶೀರ್ಷಿಕೆಯ "ಕೌಸಲ್ಯಾ ಸುಪ್ರಜಾ ರಾಮ" ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ.* *ಶಶಾಂಕ್ ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ.* ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿ ಕನ್ನಡಿಗರ. ಮನಗೆದ್ದಿರುವ ನಿರ್ದೇಶಕ ಶಶಾಂಕ್ ಹಾಗೂ ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ಡಾರ್ಲಿಂಗ್ ಕೃಷ್ಣ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರಕ್ಕೆ "ಕೌಸಲ್ಯಾ ಸುಪ್ರಜಾ ರಾಮ" ಎಂಬ ಸುಂದರ ಶೀರ್ಷಿಕೆ ಇಡಲಾಗಿದೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ನಡೆಯಿತು. ಒಂದು ವಿಭಿನ್ನ ವಿಡಿಯೋ ಮೂಲಕ ಶಶಾಂಕ್ ತಮ್ಮ ಚಿತ್ರದ ಟೈಟಲ್ ಬಿಡುಗಡೆ ಮಾಡಿರುವುದು ವಿಶೇಷ. "ಕೌಸಲ್ಯಾ ಸುಪ್ರಜಾ ರಾಮ" ನಾವು ದಿನ ಬೆಳಗ್ಗೆ ....
ಆ ರಹಸ್ಯ ಪತ್ತೆದಾರಿ ಸಿನಿಮಾ ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ಅನುಭವ ಹೊಂದಿರುವ ಮಂಡ್ಯಾನಾಗರಾಜ್ ಅವರ ೧೭ನೇ ನಿರ್ದೇಶನದ ‘ಆ ರಹಸ್ಯ’ ಚಿತ್ರಕ್ಕೆ ಕಥೆ,ಚಿತ್ರಕಥೆ, ಒಂದು ಹಾಡಿಗೆ ಸಾಹಿತ್ಯ ಮತ್ತು ಕಂಠದಾನ ಮಾಡಿದ್ದು ಅಲ್ಲದೆ ಶ್ರೀ ಶಿವಶಂಕರ ಸಿನಿ ಪ್ರೊಡಕ್ಷನ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಭೀಮಣ್ಣನಾಯಕ್ ಪ್ರಮುಖ ಪಾತ್ರದಲ್ಲಿ ನಟಿಸುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರು. ಪ್ರಚಾರದ ಸಲುವಾಗಿ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಶಾಸಕ ರಾಜಾವೆಂಕಟಪ್ಪ ನಾಯಕ್, ಶ್ರೀ ಶ್ರೀ ವರ್ದಾನಂದ ಸ್ವಾಮಿಗಳು, ವಾಲ್ಮೀಕಿ ಗುರುಪೀಠ, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ಬಣಕಾರ್, ಮಾಜಿ ಅಧ್ಯಕ್ಷರಾದ ....
*"ವಸುಂಧರದೇವಿ" ಚಿತ್ರದ ಟೀಸರ್ ಗೆ ಮೆಚ್ಚುಗೆಯ ಮಹಾಪೂರ.* ಧರ್ಮ ಕೀರ್ತಿರಾಜ್ ಹಾಗೂ ಸೋನುಗೌಡ ನಾಯಕ - ನಾಯಕಿಯಾಗಿ ನಟಿಸಿರುವ "ವಸುಂಧರದೇವಿ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಸಂತೋಷವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು. ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಧರ್ಮ ಕೀರ್ತಿರಾಜ್ ಅವರೊಡನೆ ಇದು ಎರಡನೇ ಚಿತ್ರ. "ವಸುಂಧರದೇವಿ" ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಮುಖ್ಯಮಂತ್ರಿಗಳ ಮಗಳೊಬ್ಬಳು ತಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಮುಖ್ಯಮಂತ್ರಿ ಆಗುತ್ತಾಳೆ. ನಂತರ ಆಕೆಯ ಕೊಲೆಯಾಗುತ್ತದೆ. ಆ ಕೊಲೆ ಮಾಡಿದ್ದು ಯಾರು? ಎಂದು ಕಂಡು ಹಿಡಿಯಲು ತನಿಖಾಧಿಕಾರಿ ....
*ವಿಷ್ಣು ಮಂಚು ಅಭಿನಯದ ’ಜಿನ್ನಾ’ ಚಿತ್ರ ಅಕ್ಟೋಬರ್ 21 ರಂದು ವಿಶ್ವದಾದ್ಯಂತ ಬಿಡುಗಡೆ* ತೆಲಗು ನಟ ವಿಷ್ಣು ಮಂಚು ನಾಯಕರಾಗಿ ಅಭಿನಯಿಸಿರುವ ಆ್ಯಕ್ಷನ್, ಕಾಮಿಡಿ ಜಾನರ್ ನ ’ಜಿನ್ನಾ’ ಸಿನಿಮಾ ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಇದೇ ಅಕ್ಟೋಬರ್ 21 ರಂದು ವಿಶ್ವಾದಾದ್ಯಂತ ತೆರೆಗೆ ಬರುತ್ತಿದೆ. ಆ ಸಲುವಾಗಿ ಇತ್ತೀಚೆಗೆ ನಟ ವಿಷ್ಣು ಮಂಚು ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿಷ್ಣು ಮಂಚು, ಈ ಮೊದಲು ನಾನು ೨೦೧೨ರಲ್ಲಿ ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದೆ. ಆಗ ನನಗೆ ಅಂಬರೀಶ್ ಅವರು ತುಂಬಾ ಸಪೋರ್ಟ್ ಮಾಡಿದ್ದರು. ಅವರು ....
ಕೃಷ್ಣನ ಶ್ಲೋಕ ಚಿತ್ರದ ಹೆಸರು ಮಹಾಭಾರತದ ಭಗವದ್ಗಿತೆಯ ನಾಲ್ಕನೇ ಅಧ್ಯಾಯದಲ್ಲಿ ಬರುವ ‘ನಹಿ ಜ್ಞಾನೇನ ಸದೃಶಂ’ ಶ್ಲೋಕವನ್ನು ಕೃಷ್ಣನು ಅರ್ಜುನನಿಗೆ ಯುದ್ದ ಪ್ರಾರಂಭವಾಗುವ ಮುನ್ನ ಹೇಳುತ್ತಾರೆ. ಈಗ ಇದೇ ಹೆಸರಿನಲ್ಲಿ ಮಕ್ಕಳ ಚಿತ್ರವೊಂದು ಸದ್ದಿಲ್ಲದೆ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಪ್ರಚಾರದ ಹಂತವಾಗಿ ಪೋಸ್ಟರ್ ಬಿಡುಗಡೆ ಸಮಾರಂಭವನ್ನು ಏರ್ಪಾಟು ಮಾಡಿಕೊಂಡಿದ್ದರು. ಶಿಕ್ಷಣ ಜತೆಗೆ ಮನರಂಜನೆ ಅಂತ ಇಂಗ್ಲೀಷ್ ಅಡಿಬರಹವಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಮತ್ತು ಪದಾಧಿಕಾರಿಗಳಾದ ಸುಂದರರಾಜ್, ಕುಶಾಲ್, ಟಿ.ಪಿ.ಸಿದ್ದರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ....
*ಮುಕ್ತಾಯ ಹಂತದಲ್ಲಿ "ಅಬ ಜಬ ದಬ" ಚಿತ್ರದ ಚಿತ್ರೀಕರಣ.* ಕಳೆದವರ್ಷ "ಕನ್ನಡ್ ಗೊತ್ತಿಲ್ಲ" ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಮಯೂರ ರಾಘವೇಂದ್ರ ನಿರ್ದೇಶನದ, ಅನಂತ ಕೃಷ್ಣ ನಿರ್ಮಾಣದ, ಪೃಥ್ವಿ ಅಂಬರ್ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ "ಅಬ ಜಬ ದಬ" ಚಿತ್ರರ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಇನ್ನು ಹತ್ತು ದಿನಗಳ ಚಿತ್ರೀಕರಣವಾದರೆ ಚಿತ್ರೀಕರಣ ಮುಕ್ತಾಯವಾಗಲಿದೆ. "ಕನ್ನಡ್ ಗೊತ್ತಿಲ್ಲ" ಚಿತ್ರದ ನಂತರ ನಾನು ರಚಿತಾ ರಾಮ್ ಅವರಿಗೊಂದು ಸಿನಿಮಾ ಮಾಡಬೇಕಿತ್ತು. ಅದು ದೊಡ್ಡ ಬಜೆಟ್ ನ ಚಿತ್ರವಾಗಿರುವುದರಿಂದ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಈ ಔಟ್ ಎಂಡ್ ಔಟ್ ಕಾಮಿಡಿಯಿರುವ ಈ ಚಿತ್ರದ ಕಥೆ ....
ಉತ್ತರ ಕರ್ನಾಟಕದ ಕಾವೇರಿ ಪುರ ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಕಾವೇರಿ ಪುರ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ನಟ ವಿಜಯರಾಘವೇಂದ್ರ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿದ್ದರು. ರಾಯಚೂರಿನಲ್ಲಿ ಹಾರ್ಡ್ವೇರ್ ಶಾಪ್ ಮತ್ತು ರಿಯಲ್ ಎಸ್ಟೇಟ್ ನಡೆಸುತ್ತಿರುವ ಶಾಂತಕುಮಾರ್.ವಿ.ಪಾಟೀಲ್ ಅವರು ಡಿವಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಹೆಸರಾಂತ ನಿರ್ದೇಶಕರುಗಳ ಬಳಿ ಅನುಭವ ಪಡೆದುಕೊಂಡು, ಎರಡು ಸಿನಿಮಾಗಳಿಗೆ ಬರಹಗಾರನಾಗಿ ....
*ಈ ವಾರ ತೆರೆಗೆ "ಚಾಂಪಿಯನ್".* ಶಿವಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿವಾನಂದ್ ಎಸ್ ನೀಲಣ್ಣನವರ್ ನಿರ್ಮಿಸಿರುವ, ಶಾಹುರಾಜ್ ಶಿಂಧೆ ನಿರ್ದೇಶನದ " ಚಾಂಪಿಯನ್ " ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕ್ರೀಡಾ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ಸಚಿನ್ ಧನಪಾಲ್ ಅಭಿನಯಿಸಿದ್ದಾರೆ. ಅದಿತಿ ಪ್ರಭುದೇವ "ಚಾಂಪಿಯನ್" ಚಿತ್ರದ ನಾಯಕಿ. ಹಿರಿಯ ನಟ ದೇವರಾಜ್, ಸುಮನ್, ಪ್ರದೀಪ್ ರಾಹುತ್, ಚಿಕ್ಕಣ್ಣ, ಆದಿ ಲೋಕೇಶ್, ರಂಗಾಯಣ ರಘು, ಅವಿನಾಶ್, ಕಾಕ್ರೋಜ್ ಸುಧಿ, ಶೋಭರಾಜ್, ಅಶೋಕ್ ಶರ್ಮ, ಪ್ರಶಾಂತ್ ಸಿದ್ದಿ, ಗಿರಿ, ಮಂಡ್ಯ ರಮೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟಿ ಸನ್ನಿಲಿಯೋನ್ ಸಹ ಈ ಚಿತ್ರದಲ್ಲಿ ....
'ಈವಾರ ತೆರೆಮೇಲೆ ಎಂಆರ್ಪಿ
ಸ್ಥೂಲಕಾಯದ ವ್ಯಕ್ತಿಗಳು ಸಮಾಜದಲ್ಲಿ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ, ಅದನ್ನು ಸಮಸ್ಯೆ ಎಂದುಕೊಳ್ಳದೆ ವರವೆಂದು ಭಾವಿಸಿ ಕೆಲಸದ ಕಡೆ ಗಮನ ಕೊಟ್ಟರೆ ಅವರೂ ಸಮಾಜ ಗುರುತಿಸುವಂಥ ವ್ಯಕ್ತಿಯಾಗಿ ಬೆಳೆಯಬಹುದು ಎಂಬ ಸಂದೇಶವಿರುವ ಚಿತ್ರ "ಎಂಆರ್ಪಿ" ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರಕ್ಕೆ ಬಾಹುಬಲಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರ ಪ್ರಕಾರ ಎಂಆರ್ ಪಿ ಎಂದರೆ ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್. ಎಂ.ಡಿ.ಶ್ರೀಧರ್, ಎ.ವಿ.ಕೃಷ್ಣಕುಮಾರ್, ಮೋಹನ್ಕುಮಾರ್ ಎನ್.ಜಿ. ಹಾಗೂ ರಂಗಸ್ವಾಮಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಅಂಬುಜಾ ಟೀಸರ್ ಬಿಡುಗಡೆ
ನೈಜ ಘಟನೆ ಆಧಾರಿತ ‘ಅಂಬುಜ’ ಚಿತ್ರದ ಟೀಸರ್ ಕಲಾವಿದರ ಸಂಘದಲ್ಲಿ ಬಿಡುಗಡೆಗೊಂಡಿತು. ಕಥೆ,ಸಾಹಿತ್ಯ ಬರೆದು ನಿರ್ಮಾಣ ಮಾಡಿರುವುದು ಕಾಶಿನಾಥ್.ಡಿ.ಮಡಿವಾಳರ್. ನಿರ್ದೇಶಕ ಶ್ರೀನಿಹನುಮಂತರಾಜು ಅವರಿಗೆ ಎರಡನೇ ಅವಕಾಶ. ರಜನಿ ಮಾತನಾಡಿ ಸಿನಿಮಾ ತುಂಬಾ ವಿಶೇಷವಾಗಿದೆ. ಲಂಬಾಣಿ ವೇಷ ಭೂಷಣ ಕಣ್ಣಿಗೆ ಹಬ್ಬ, ಚಿತ್ರೀಕರಣದಲ್ಲಿ ಅವರು ನಮ್ಮನ್ನು ಸ್ವೀಕರಿಸಿದ ರೀತಿ ಎಲ್ಲವು ಮರೆಯಲಿಕ್ಕೆ ಆಗುವುದಿಲ್ಲ. ಮೊದಲ ದಿನ ಲಂಬಾಣಿ ವೇಷ ಹಾಕಿಕೊಂಡಾಗ ತಲೆ ನೋವಾಗುತ್ತಿತ್ತು. ಆಮೇಲೆ ಸರಿಹೊಂದಿತು ಎಂದರು.
ಮಿಸ್ಟ್ರಿ ಥ್ರಿಲ್ಲರ್ "3.0" ಈವಾರ ತೆರೆಗೆ
ಒರಾಕಲ್ ಕಲಾ ಕ್ರಿಯೇಶನ್ಸ್ ಲಾಛನದಲ್ಲಿ ತಯಾರಾಗಿರುವ ಕ್ರೈಂ, ಥ್ರಿಲ್ಲರ್ ಕಥಾಹಂದರದ ಚಿತ್ರ "3.O" ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇಂದ್ರಜಿತ್ ಅವರು ಚಿತ್ರದ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳಿದ್ದಾರೆ.
ಹೊಸ ಪ್ರತಿಭೆಗಳಾದ ಶಶಿಕಿರಣ್, ಶಿವರಾಜ್ ಮತ್ತು ಲೋಹಿತ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದು, ಅವರೇ ಬಂಡವಾಳವನ್ನೂ ಹಾಕಿದ್ದಾರೆ. ನಾಯಕಿಯಾಗಿ ನಿಶ್ಕಲಗೌಡ ನಟಿಸಿದ್ದಾರೆ.
ಗಜರಾಮ ಕ್ಲೈಮಾಕ್ಸ್ ಫೈಟ್
‘ಗಜರಾಮ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇತ್ತೀಚೆಗೆ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಈಗ ಆಕ್ಷನ್ ದೃಶ್ಯಗಳ ಶೂಟಿಂಗ್ ಹೆಚ್ಎಂಟಿಯಲ್ಲಿ ನಡೆಯುತ್ತಿತು. ಮಾದ್ಯಮದವರು ಭೇಟಿ ನೀಡಿದಾಗ ನಾಯಕ ರಾಜವರ್ಧನ್ ಮತ್ತು ಖಳನಟ ಕಬೀರ್ಸಿಂಗ್ ಹೊಡೆದಾಟದ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ಕಬೀರ್ಸಿಂಗ್ ಮಾತನಾಡಿ ಇದರಲ್ಲಿ ನಾನು ರೌಡಿಯಾಗಿ ಕಾಣಿಸಿಕೊಂಡಿದ್ದೇನೆ. ಬೇರೆ ಭಾಷೆಯಿಂದ ಇಲ್ಲಿಗೆ ಬಂದಿದ್ದೇನೆ. ಸಿನಿಮಾಗೆ ಭಾಷೆಗಳ ಮಿತಿಯಿಲ್ಲ. ಸದ್ಯ ಹಿಂದಿ ವೆಬ್ ಸೀರೀಸ್ದಲ್ಲಿ ನಟಿಸುತ್ತಿದ್ದೇನೆ. ಯಾವ ಭಾಷೆಯಾದರೂ ಅಭಿನಯಿಸುತ್ತೇನೆ ಎಂದರು.
ಸೆಟ್ಟೇರಿದ 1900 ಚಿತ್ರ ಹಾರರ್, ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿರುವ ’1900’ ಚಿತ್ರದ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಮೊದಲ ದೃಶ್ಯಕ್ಕೆ ಲವ್ ಮಾಕ್ಟೆಲ್ ಖ್ಯಾತಿಯ ಕೃಷ್ಣ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಪದ್ಮಾವತಿ ಪ್ರೊಡಕ್ಷನ್ ಅಡಿಯಲ್ಲಿ ರಾಜೇಶ್.ಬಿ ಮತ್ತು ಉಮೇಶ್.ಕೆ.ಎನ್ ಬಂಡವಾಳ ಹೂಡುತ್ತಿದ್ದಾರೆ. ಮೂಡಿಬಿದರೆಯ ರಾಜೇಶ್.ಬಿ ಮೂಲತ: ನಟನಾಗಿ ಗುರುತಿಸಿಕೊಂಡಿದ್ದು, ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ, ನಿರ್ದೇಶನ ಮಾಡುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಉಮೇಶ್.ಕೆ.ಎನ್ ದುಡಿದ ಹಣವನ್ನು ಚಿತ್ರಕ್ಕೆ ವಿನಿಯೋಗಿಸುತ್ತಿದ್ದು ಅಲ್ಲದೆ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಶಾಪ ....
ಸೂತ್ರಧಾರಿಯಾಗಿ ಚಂದನ್ಶೆಟ್ಟಿ ‘ಎಲ್ರ ಕಾಲೆಳೆಯುತ್ತೆ ಕಾ’ ಚಿತ್ರದ ಮೂಲಕ ನಾಯಕನಾಗಿ ಪರಿಚಯಗೊಂಡಿದ್ದ ರಾಪರ್ ಚಂದನ್ಶೆಟ್ಟಿ ಈಗ ‘ಸೂತ್ರಧಾರಿ’ ಸಿನಿಮಾದಲ್ಲಿ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರಣ್ಕುಮಾರ್ ನಿರ್ದೇಶನ ಮಾಡುತ್ತಿದ್ದು, ನವರಸನ್ ಬಂಡವಾಳ ಹೂಡುತ್ತಿದ್ದಾರೆ. ಮೊನ್ನೆ ನಡೆದ ಸಮಾರಂಭದಲ್ಲಿ ಹಿರಿಯ ಪ್ರಚಾರಕರ್ತ ಸುಧೀಂದ್ರವೆಂಕಟೇಶ್ ಶೀರ್ಷಿಕೆ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನವರಸನ್ ನನ್ನ ನಿರ್ಮಾಣದ ಐದನೇ ಚಿತ್ರವಿದು, ಈವರೆಗೂ ನಮ್ಮ ಸಂಸ್ಥೆಯ ಮೂಲಕ ೧೮೦ಕ್ಕೂ ಹೆಚ್ಚು ಚಿತ್ರಗಳ ಇವೆಂಟ್ ....
*ತೆರೆಯಲ್ಲೂ ಜೋಡಿಯಾದರು ಅರವಿಂದ್-ದಿವ್ಯಾ ಉರುಡುಗ* -ಇದು ಆರ್ಧಂಬರ್ಧ ಪ್ರೇಮಕಥೆಯ ವಿಚಾರ- ಬಿಗ್ಬಾಸ್ ಖ್ಯಾತಿಯ ಯುವಜೋಡಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯಮೇಲೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ಅರ್ಧಂಬರ್ಧ ಪ್ರೇಮಕಥೆ. ಹುಲಿರಾಯ, ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಗುರುತಿಸಿಕೊಂಡ ಅರವಿಂದ್ ಕೌಶಿಕ್, ರಕ್ಷಿತ್ಶೆಟ್ಟಿ, ರಿಶಬ್ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಅನೇಕ ಕಲಾವಿದರನ್ನು ಪರಿಚಯಿಸಿದ್ದರು. ಈಗ ಬೈಕ್ ರೇಸರ್ ಅರವಿಂದ್ರನ್ನು ನಾಯಕನಾಗಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ. ....
ಪ್ರೊಡಕ್ಷನ್ ನಂ.೧ ಚಿತ್ರಕ್ಕೆ ಮುಹೂರ್ತ ಹೆಸರಿಡದ ಚಿತ್ರ ‘ಪ್ರೊಡಕ್ಷನ್ ನಂ.೧’ ಸಿನಿಮಾದ ಮುಹೂರ್ತ ಸಮಾರಂಭವು ವಿಜಯ ದಶಮಿ ದಿನದಂದು ನಂದಿನಿ ಲೇಔಟ್ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಮಾಜಿ ಕಾರ್ಪೋರೇಟರ್ ರಾಜೇಂದ್ರಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ‘ಪುಟಾಣಿಸಫಾರಿ’ ‘ವರ್ಣಮಯ’ ‘ಮಠ’ ‘ನೈಟ್ಕರ್ಫ್ಯೂ’ ಹಾಗೂ ಇದೇ ತಿಂಗಳು ಬಿಡುಗಡೆಯಾಗುತ್ತಿರುವ ‘ವಾಸಂತಿ ನಲಿದಾಗ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ರವೀಂದ್ರವೆಂಶಿ ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೈತ, ಉದ್ಯಮಿಯಾಗಿರುವ ಚಿಕ್ಕಬದರಿಕಲ್ಲು ....
ಪ್ರಮೋದ್ಶೆಟ್ಟಿ ಈಗ ಶಭಾಷ್ ಬಡ್ಡಿಮಗ್ನೆ ‘ಲಾಫಿಂಗ್ ಬುದ್ದ’ ‘ಕಾಶಿಯಾತ್ರೆ’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರಮೋದ್ಶೆಟ್ಟಿ ಮೂರನೇ ಚಿತ್ರ ‘ಶಭಾಷ್ ಬಡ್ಡಿಮಗ್ನೆ’ ಸಿನಿಮಾದ ಮಹೂರ್ತ ಕಂಠೀರವ ಸ್ಟುಡಿಯೋದಲ್ಲಿ ವಿಜಯದಶಮಿ ಹಬ್ಬದಂದು ಅದ್ದೂರಿಯಾಗಿ ನಡೆಯಿತು. ನಟ ಅಜಯ್ರಾವ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು. ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಹರೀಶ್.ಸಾ.ರಾ ನಿರ್ದೇಶಕರಾಗಿ ಬಡ್ತಿಗೊಂಡು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ ಬರೆದಿರುವ ಬಿ.ಎಸ್.ರಾಜಶೇಖರ್ ಸಿನಿಮಾಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ....