‘೪.೩೦–೬.೦೦ ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’ ಮೇಲಿನ ವಾಕ್ಯ ಚಿತ್ರದ ಶೀರ್ಷಿಕೆಯಾಗಿದೆ. ಚಂದನವನದ ಹಿರಿಯ ನಿರ್ದೇಶಕರುಗಳಾದ ದೊರೆ-ಭಗsವಾನ್ ಇದ್ದಂತೆ ಕಾಲಿವುಡ್ನ ಶಿವರಾಜ್ ಮತ್ತು ಪೂವೈಸುರೇಶ್ ಜಂಟಿಯಾಗಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿರುವ ಡಿ.ಯೋಗರಾಜ್ ಅವರು ನೀಲಕಂಠ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುವ ಜತೆಗೆ ಛಾಯಾಗ್ರಹಣ-ಸಂಕಲನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕೈಗಾರಿಕೋದ್ಯಮಿ ಹೂಸೂರು ಮೂಲದ ಮಹೇಂದ್ರನ್ ಸಹ ....
ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ ಕನ್ನಡ ಚಿತ್ರರಂಗದ ಮೊದಲ ಪ್ರಚಾರಕರ್ತರೆಂಬ ಬಿರುದಿಗೆ ಪಾತ್ರರಾಗಿದ್ದ ಡಿ.ವಿ.ಸುದೀಂದ್ರ ಹುಟ್ಟುಹಾಕಿದ್ದ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ೨೫ ವರ್ಷ ತುಂಬಿದ ಸಂದರ್ಭದಲ್ಲಿ, ತನಗೆ ಅನ್ನ ನೀಡಿದವರನ್ನು ಮರೆಯದೆ ಹಿರಿಯ ನಿರ್ಮಾಪಕರು ಹಾಗೂ ಅನುಭವಿ ಪತ್ರಕರ್ತರುಗಳಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದರು. ಅದು ಮುಂದುವರೆದು ಪ್ರತಿ ವರ್ಷ ನಡೆಯುತ್ತಾ ಬಂದಿದೆ. ಸದ್ಯ ಸುದೀಂದ್ರವೆಂಕಟೇಶ್ ಅಧೀನದಲ್ಲಿ ಸುನಿಲ್ ಹಾಗೂ ವಾಸು ....
*ಶ್ರೀಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಆರಂಭವಾಯಿತು ಆದಿತ್ಯ ಅಭಿನಯದ "ಟೆರರ್"* . ಸಿಲ್ಕ್ ಮಂಜು ನಿರ್ಮಿಸುತ್ತಿರುವ, ರಂಜನ್ ಶಿವರಾಮ ಗೌಡ ನಿರ್ದೇಶನದ ಹಾಗೂ ಆದಿತ್ಯ ನಾಯಕರಾಗಿ ನಟಿಸುತ್ತಿರುವ "ಟೆರರ್" ಚಿತ್ರದ ಮುಹೂರ್ತ ಸಮಾರಂಭ ಶ್ರೀಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನಡೆಯಿತು. ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಐ ಪಿ ಎಸ್ ಅಧಿಕಾರಿ ರವಿಕಾಂತೇಗೌಡ ಅವರು ಕ್ಯಾಮೆರಾ ಚಾಲನೆ ಮಾಡಿದರು. ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಲಹರಿ ವೇಲು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ನನ್ನ ಮೊದಲ ನಿರ್ದೇಶನದ ಚಿತ್ರ. ಹೊಸ ಮಾಫಿಯಾ ಸುತ್ತ ಕಥೆ ಇದೆ. ....
ಗಣರಾಜೋತ್ಸವ ಸಂಭ್ರಮಕ್ಕಾಗಿಯೇ ರಿಲೀಸ್ ಆಯ್ತು ‘ಪ್ರಜಾರಾಜ್ಯ’ ಟ್ರೇಲರ್ ‘ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ’ ಎಂಬ ಟ್ಯಾಗ್ ಲೈನ್ ಹೊಂದಿರುವ ‘ಪ್ರಜಾರಾಜ್ಯ’ ಚಿತ್ರ ಸದ್ಯ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ. ಪ್ರತಿಯೊಬ್ಬ ಭಾರತೀಯ ನೋಡಲೇ ಬೇಕಾದ ಸಿನಿಮಾ ಇದಾಗಿದೆ. ಯಾಕಂದ್ರೆ ಪ್ರಜೆಗಳು ಮನಸು ಮಾಡಿದ್ರೆ ಎನೆಲ್ಲಾ ಮಾಡಬಹುದು ಎಂಬ ಅಂಶದ ಮೇಲೆ ಈ ಸಿನಿಮಾ ಮಾಡಲಾಗಿದೆ. ಇದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಸಾಕ್ಷಿ. ಗಣರಾಜೋತ್ಸವ ಸಂಭ್ರಮದಲ್ಲಿ ‘ಪ್ರಜಾರಾಜ್ಯ’ ಟ್ರೇಲರ್ ಬಿಡುಗಡೆ ಆಗಿರುವುದು ಕುತೂಹಲ ಹುಟ್ಟಿಸಿದೆ. ಸದ್ಯ ವಿಧಾನಸಭಾ ಚುನಾವಣೆಗೆ ರಾಜ್ಯ ಸಿದ್ದವಾಗುತ್ತಿದ್ದು, ಈ ಸಂದರ್ಭದಲ್ಲೇ ಸಿನಿಮಾ ಇದೇ ಫೆಬ್ರವರಿ 24ರಂದು ....
ನಟ ಭಯಂಕರ ಟ್ರೇಲರ್ ಬಿಡುಗಡೆ ಬಿಗ್ ಬಾಸ್ ವಿಜೇತ ಪ್ರಥಮ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ‘ನಟ ಭಯಂಕರ’ ಚಿತ್ರದ ಟ್ರೇಲರ್ನ್ನು ಧ್ರುವಸರ್ಜಾ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಸ್ವಾರಸ್ಯ ಸಿನಿ ಕ್ರಿಯೇಶನ್ಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಉದಯ್.ಕೆ.ಮಹ್ತಾ ಕಥೆ ಇರಲಿದೆ. ಡಾ.ವಿ.ನಾಗೇಂದ್ರಪ್ರಸಾದ್, ನಾಗತ್ತಿಹಳ್ಳಿ ಚಂದ್ರಶೇಖರ್,ಬಹದ್ದೂರ್ಚೇತನ್, ಅರಸುಅಂತಾರೆ ಸಾಹಿತ್ಯಕ್ಕೆ ಪ್ರದ್ಯೋತನ್ ಸಂಗೀತ ಒದಗಿಸಿದ್ದಾರೆ. ತಾರಗಣದಲ್ಲಿ ಸಾಯಿಕುಮಾರ್, ಓಂಪ್ರಕಾಶ್ರಾವ್, ನಿಹಾರಿಕಾಶಣೈ, ಸುಷ್ಮತಾಜೋಷಿ, ಶೋಭರಾಜ್, ಕುರಿಪ್ರತಾಪ್, ಚಂದನಾರಾಘವೇಂದ್ರ, ಶಂಕರ್ಅಶ್ವಥ್, ....
ಸದ್ದು ಮಾಡುತ್ತಿದೆ ಸೈರನ್ ಹಾಡುಗಳು
ಗಾಯಕಿ ಮಂಗ್ಲಿ ಹಾಡಿರುವ ‘ಎಣ್ಣೆ ಹೊಡೆಯೋ ಟೈಮಲ್ಲಿ’ ಗೀತೆ ಬಿಡುಗಡೆಗೊಂಡು ಎಲ್ಲಡೆ ಸದ್ದು ಮಾಡುತ್ತಿದೆ. ಚಿನ್ಮಯ್ ಸಾಹಿತ್ಯದಲ್ಲಿ ಭಾರಧ್ವಜ್ ಸಂಗೀತ ಸಂಯೋಜಿಸಿದ್ದಾರೆ. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಲಹರಿ ವೇಲು ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ತನಿಖಾ ಜಾನರ್ ಕಥೆಯಲ್ಲಿ ಕೊಲೆಯ ಹಿನ್ನಲೆ ಬೇಧಿಸಿಕೊಂಡು ಹೊರಡುವ ಪೋಲೀಸ್ ಅಧಿಕಾರಿಯ ಸನ್ನಿವೇಶಗಳು ತುಂಬಾ ಕುತೂಹಲಕಾರಿಯಾಗಿ ಮೂಡಿಬಂದಿದೆ. ಪ್ರವೀರ್ಶೆಟ್ಟಿ ಪೋಲೀಸ್ ಅಧಿಕಾರಿಯಾಗಿ ನಾಯಕ, ಮಾಲಿವುಡ್ನ ಲಾಸ್ಯ ನಾಯಕಿಯಾಗಿ ಅವರೂ ಸಹ ಖಾಕಿಧಾರಣಿಯಾಗಿ ಕಾಣಿಸಿಕೊಂಡಿದ್ದಾರೆ.
ಕೆಂಡದ ಸೆರಗು ಟೀಸರ್ ಬಿಡುಗಡೆ
ರಾಕಿ ಸೋಮ್ಲಿ ಮೊದಲ ನಿರ್ದೇಶನದ ‘ಕೆಂಡದ ಸೆರಗು’ ಚಿತ್ರದ ಟೀಸರ್ ಬಿಡುಗಡೆಗೊಂಡಿತು. ಭೂಮಿಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಮಾಲಾಶ್ರೀ ಪೋಲೀಸ್ ಆಯುಕ್ತರಾಗಿ ಕಾಣಿಸಿಕೊಂಡಿದ್ದಾರೆ. ಕಾದಂಬರಿ ಆಧಾರಿತ ಕಥೆಯಾಗಿದ್ದು, ಕುಸ್ತಿ ಸುತ್ತ ಸಾರಲಿದೆ. ಕೇವಲ ಕುಸ್ತಿ ಇರದೆ ಹೆಣ್ಣುಮಗಳ ನೋವಿನ ಸನ್ನಿವೇಶಗಳ ಜತೆಗೆ ಒಂದೊಳ್ಳೆ ಸಂದೇಶ ಇರಲಿದೆ.
ಫೆಬ್ರವರಿ ೩ರಂದು ತನುಜಾ ಹಾಜರ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರಭಟ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ತನುಜಾ’ ಚಿತ್ರವು ಫೆಬ್ರವರಿ ೩ರಂದು ತೆರೆಕಾಣಲಿದೆ. ಕೊರೋನಾ ವೇಳೆ ನಿಟ್ ಪರೀಕ್ಷೆ ಬರೆಯಲಾಗದೆ ಒದ್ದಾಡಿದ ಹುಡುಗಿಗೆ ಮುಖ್ಯಮಂತ್ರಿಗಳೇ ಕೇಂದ್ರದ ನೆರವು ಪಡೆದು ಪರೀಕ್ಷೆ ಬರೆಯಲು ಸಹಕರಿಸುವ ಕಥೆ ಇದಾಗಿದೆ. ಅಂದು ಸುದ್ದಿಯು ಕರ್ನಾಟಕ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಶಿವಮೊಗ್ಗ ಜಿಲ್ಲೆಯ ಕುಗ್ರಾಮದ ಹುಡುಗಿ ತನುಜಾ ಬೆಂಗಳೂರಿಗೆ ಬಂದು ನೀಟ್ ಎಕ್ಸಾಂ ಬರೆದ ಅಂಶಗಳನ್ನು ತೆಗೆದುಕೊಂಡು ಸಿನಿಮಾ ರೂಪಕ್ಕೆ ....
*ಸುಂದರ ಹಾಡುಗಳಿಂದ ಪ್ರೇಕ್ಷಕರ ಗಮನ ಸೆಳೆದ ‘ಓ ಮನಸೇ’* ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಓ ಮನಸೇ’ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಯೂಟ್ಯೂಬ್ ನಲ್ಲೂ ಹಾಡುಗಳು ಟ್ರೆಂಡ್ ಕ್ರಿಯೇಟ್ ಮಾಡಿದೆ. ‘ಶ್ರೀ ಫ್ರೆಂಡ್ಸ್ ಮೂವಿ ಮೆಕರ್ಸ್’ ಲಾಂಛನದಲ್ಲಿ ಎಂ.ಎನ್ ಭೈರೆಗೌಡ, ಕೆ.ಹೆಚ್. ಧನಂಜಯ, ಕೆ.ವೆಂಕಟೇಶ್, ಸು.ಕಾ ರಾಮು, ಯುವರಾಜ್ ಕೆ.ಎ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ನಡೆದ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರು, ‘ಇದು ನಮ್ಮ ಬ್ಯಾನರ್ ನಲ್ಲಿ ನಿರ್ಮಿಸಿರುವ ಮೊದಲ ಸಿನಿಮಾ. ಮುಂದೆಯೂ ಜನರಿಗೆ ಸದಭಿರುಚಿ ಸಿನಿಮಾ ಕೊಡುವ ಉದ್ದೇಶದಿಂದ ....
*"ಡ್ಯಾಶ್" ಹಾಡಿನ ಮೂಲಕ ಕೋಟಿ ಜನರ ಮನಸೆಳೆದ "ಸೂತ್ರಧಾರಿ"* ಹೊಸ ವರ್ಷದ ಸಂಭ್ರಮಕ್ಕಾಗಿ ಡಿಸೆಂಬರ್ ಕೊನೆಯಲ್ಲಿ ’ಸೂತ್ರಧಾರಿ’ ಚಿತ್ರದ "ಡ್ಯಾಶ್" ’ ಹಾಡು ಬಿಡುಗಡೆಯಾಗಿತ್ತು. ಈ ಹಾಡಿಗೆ ಪ್ರೇಕ್ಷಕರಿಂದ ಅದ್ಭುತ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಡಿಮೆ ಸಮಯದಲ್ಲೇ ಈ ಹಾಡು 10 ಮಿಲಿಯನ್ ಗೂ ಅಧಿಕ ಬಾರಿ ವೀಕ್ಷಣೆ ಗೊಂಡು ದಾಖಲೆ ನಿರ್ಮಿಸಿದೆ. ಇತ್ತೀಚಿಗೆ ಕೇಕ್ ಕಟ್ ಮಾಡುವ ಮೂಲಕ ಚಿತ್ರತಂಡ ಸಂಭ್ರಮಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ನವರಸನ್, ’ನನಗೆ ಈ ಸಂಭ್ರಮ ವಿಶೇಷ. ನಾನು ಇಷ್ಟು ದಿನ ಮಾಡಿರುವ ಸಿನಿಮಾಗಳ ಪೈಕಿ ಇಷ್ಟು ಒಳ್ಳೆಯ ರೆಸ್ಪಾನ್ಸ್ ಯಾವ ಹಾಡಿಗೂ ಸಿಕ್ಕಿಲ್ಲ. ನನ್ನ ಚಿತ್ರದಲ್ಲಿ ಹಿಟ್ ....
*ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಬಿಡುಗಡೆಯಾಯಿತು "ಲವ್ ಬರ್ಡ್ಸ್" ಚಿತ್ರದ ಸುಮಧುರ ಹಾಡು* . ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ನಿರ್ಮಿಸಿರುವ "ಲವ್ ಬರ್ಡ್ಸ್" ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ "ನೀನೇ ದೊರೆತ ಮೇಲೆ" ಎಂಬ ಹಾಡು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇತ್ತೀಚೆಗೆ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಮಾಸ್ತಿ ಮುಂತಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕೌಟುಂಬಿಕ ಚಿತ್ರಗಳು ಇತ್ತೀಚೆಗೆ ಬರುತ್ತಿರುವುದು ಸ್ವಲ್ಪ ಕಡಿಮೆ. ಆ ಸಮಯದಲ್ಲಿ ....
ಆರ್ಸಿ ಬ್ರದರ್ಸ್ ಟ್ರೈಲರ್, 26ಕ್ಕೆ ತೆರೆಗೆ ಸಹೋದರರಿಬ್ಬರ ನಡುವಿನ ಬಾಂಧವ್ಯದ ಕಥೆಯನ್ನು ಹಾಸ್ಯಮಯ ಘಟನೆಗಳನ್ನಿಟ್ಟುಕೊಂಡು ನಿರೂಪಿಸಿರುವ ಚಿತ್ರ ಆರ್ಸಿ ಬ್ರದರ್ಸ್. ತಬಲಾನಾಣಿ ಹಾಗೂ ಕುರಿಪ್ರತಾಪ್ ಅಣ್ಣ ತಮ್ಮನಾಗಿ ನಟಿಸಿರುವ ಈ ಚಿತ್ರಕ್ಕೆ ಪ್ರಕಾಶ್ಕುಮಾರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ಕಟ್ ಹೇಳಿದ್ದಾರೆ. ಸಂಭ್ರಮಶ್ರೀ, ನಯನ (ಕಾಮಿಡಿ ಕಿಲಾಡಿಗಳು)ಹಾಗೂ ನೀತುರಾಯ್ ಚಿತ್ರದ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚಿಗೆ ನಡೆಯಿತು. ಮಣಿ ಶಶಾಂಕ್ ಈ ಚಿತ್ರದ ನಿರ್ಮಾಪಕರಾಗಿದ್ದು, ಶ್ರೀಮತಿ ಸಹನಾ ಗಿರೀಶ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಈ ....
‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ ತಂಡದಿಂದ ಬಂತು ಮತ್ತೊಂದು ಸದಬಿರುಚಿ ಚಿತ್ರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಪ್ರಶಂಸೆಯ ಜೊತೆಗೆ ಪ್ರಶಸ್ತಿ ಬಾಚಿದ ‘ಕೋಳಿ ಎಸ್ರು’ ನಾಲ್ಕು ವರ್ಷಗಳ ಹಿಂದೆ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ ರಾಷ್ಟೀಯ, ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದಿತ್ತು. ಅಲ್ಲದೆ ಥಿಯೇಟರ್ನಲ್ಲಿ ರಿಲೀಸ್ ಕೂಡ ಆಗಿ ಯಶಸ್ವಿ 31 ದಿನಗಳ ಕಾಲ ಪ್ರದರ್ಶನವಾಗಿತ್ತು. ಇದೀಗ ಅದೇ ತಂಡದಿಂದ ‘ಕೋಳಿ ಎಸ್ರು’ ಎಂಬ ವಿಭಿನ್ನ ಸಿನಿಮಾ ಸಿದ್ಧವಾಗಿದೆ. ಈಗಾಗಲೇ ರಾಷ್ಟ್ರೀಯ, ಅಂತರಾಷ್ಟ್ರೀಯ ಫಿಲ್ಮ ಪೆಸ್ಟಿವೆಲ್ಗಳಲ್ಲಿ ಪ್ರದರ್ಶನಗೊಂಡ ‘ಕೋಳಿ ....
ಐದು ಕಥೆಗಳ ಪೆಂಟಗನ್
ನಿರ್ದೇಶಕ ಮತ್ತು ನಿರ್ಮಾಪಕ ಗುರುದೇಶಪಾಂಡೆ ತಮ್ಮ ಜಿ ಸಿನಿಮಾಸ್ ಬ್ಯಾನರ್ನಡಿ ಸಿದ್ದಪಡಿಸಿರುವ ‘ಪೆಂಟಗನ್’ ಸಿನಿಮಾದಲ್ಲಿ ಐದು ಕಥೆಗಳು ಇರಲಿದ್ದು, ಐದು ನಿರ್ದೇಶಕರು ಆಕ್ಷನ್ ಕಟ್ ಹೇಳಿರುವುದು ವಿಶೇಷ. ಆ ಪೈಕಿ ಒಂದು ಕಥೆಯು ಕಿಶೋರ್ ಸುತ್ತ ಸಾಗುತ್ತದೆ. ಕನ್ನಡ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದು, ಇದರಲ್ಲಿ ಬರುವ ಸಂಭಾಷಣೆಗಳು ಚರ್ಚೆಗೆ ಗ್ರಾಸವಾಗಿದೆ. ಕನ್ನಡಪರ ಸಂಘಟನೆಯ ಮುಖ್ಯಸ್ಥನೊಬ್ಬನ ಭ್ರಷ್ಟಚಾರದ ಬಗ್ಗೆ ಟೀಸರ್ನಲ್ಲಿ ಹೇಳಿರುವುದು ಕುತೂಹಲ ಹೆಚ್ಚಿಸಿದೆ.
ಕನ್ನಡದ ಮಿ.ನಟ್ವರ್ಲಾಲ್
೭೦ ದಶಕದಲ್ಲಿ ಅಮಿತಾಬ್ಬಚ್ಚನ್ ಅಭಿನಯದ ‘ಮಿ.ನಟ್ವರ್ಲಾಲ್’ ಚಿತ್ರ ಬಿಡುಗಡೆಗೊಂಡು ಹಿಟ್ ಆಗಿತ್ತು. ಬರೋಬ್ಬರಿ ನಾಲ್ಕು ದಶಕದ ನಂತರ ಇದೇ ಹೆಸರಿನಲ್ಲಿ ಕನ್ನಡ ಸಿನಿಮಾವೊಂದು ತೆರೆಗೆ ಬರಲು ತಯಾರಿ ಮಾಡಿಕೊಂಡಿದೆ. ಪ್ರಚಾರದ ಮೊದಲ ಹಂತವಾಗಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿ ತಂಡಕ್ಕೆ ಶುಭಹಾರೈಸಿದರು.
ಸಮೃದ್ದಿಶೆಟ್ಟಿ ಮಿಸ್ ಕ್ವೀನ್ ಆಫ್ ಇಂಡಿಯಾ
ಉಡುಪಿ ಮೂಲದ ಸಮೃದ್ದಿಶೆಟ್ಟಿ ಕೇರಳದ ಕೊಚ್ಚಿಯಲ್ಲಿ ನಡೆದ ಮಿಸ್ ಕ್ವೀನ್ ಆಫ್ ಇಂಡಿಯಾ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. ೩೦ ರಾಜ್ಯಗಳ ಸ್ಪರ್ಧಿಗಳ ಜೊತೆ ಗುರುತಿಸಿಕೊಂಡು ಅಂತಿಮವಾಗಿ ಗೆಲುವನ್ನು ಕಂಡು ಅಂತರಾಷ್ಟ್ರೀಯ ಮಟ್ಟದ ಮಿಸ್ ಗ್ಲಾಮ್ ವರ್ಲ್ಡ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಉದ್ಯಮಿ ವಿಶ್ವನಾಥಶೆಟ್ಟಿ ಮತ್ತು ಮಮತಾಶೆಟ್ಟಿ ಪುತ್ರಿಯಾಗಿದ್ದು ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಸದ್ಯ ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕಂಠೀರವದಲ್ಲಿ ಧೀರ ಭಗತ್ರಾಯ್ ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟದ ಕಥೆ ಹೊಂದಿರುವ ‘ಧೀರ ಭಗತ್ರಾಯ್’ ಸಿನಿಮಾದ ಕೊನೆ ಹಂತದ ಚಿತ್ರೀಕರಣವು ಕಂಠೀರವ ಸ್ಟುಡಿಯೋದಲ್ಲಿ ಹಾಕಲಾದ ಕೋರ್ಟ್ ಹಾಲ್ ಸೆಟ್ದಲ್ಲಿ ನಡೆದಿದೆ. ಈ ಸನ್ನಿವೇಶ ಚಿತ್ರದ ಜೀವಾಳವಾಗಿದ್ದು, ಇನ್ನು ಆರು ದಿವಸ ನಡೆಸಿದರೆ ಕುಂಬಳಕಾಯಿ ಒಡೆಯಲಾಗುವುದು. ಇಲ್ಲಿಯವರೆಗೂ ಯಾರು ತೆಗೆದುಕೊಳ್ಳದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ. ಭೂ ಸುಧಾರಣೆ ಕಾಯ್ದೆ ಜತೆಗೆ ಪ್ರಿವೆಂಶನ್ ಆಫ್ ಎಸ್.ಸಿ/ಎಸ್.ಟಿ ಅಟ್ರಾಸಿಟಿ ಕಾಯ್ದೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೇಳುವ ಪ್ರಯತ್ನ ಮಾಡಲಾಗಿದೆ. ಇಂತಹ ಅಂಶಗಳನ್ನು ಸರ್ವೆ ನಡೆಸಿ ....
*ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು "ನೆನಪಿನ ಹಾದಿಯಲಿ ಒಂಟಿ ಪಯಣ" ಆಲ್ಬಂ ಸಾಂಗ್.* ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ಮೂಲಕ ಈ ಹಿಂದೆ ಸಂಚಾರಿ ವಿಜಯ್ ಅಭಿನಯದ "6 ನೇ ಮೈಲಿ" ಹಾಗೂ ಪ್ರಸ್ತುತ ವಸಿಷ್ಠ ಸಿಂಹ ಅಭಿನಯದ "ತಲ್ವಾರ್ ಪೇಟೆ" ಚಿತ್ರಗಳ ನಿರ್ಮಾಪಕ ಡಾ||ಶೈಲೇಶ್ ಕುಮಾರ್ ಅವರು ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಅದರ ಮೊದಲ ಹಜ್ಜೆಯಾಗಿ "ನೆನಪಿನ ಹಾದಿಯಲ್ಲಿ ಒಂಟಿ ಪಯಣ" ಎಂಬ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ. ಡಾ||ಶಶಿಕಲಾ ಪುಟ್ಟಸ್ವಾಮಿ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಟ ಪ್ರವೀಣ್ ತೇಜ್ ಹಾಗೂ ನಟಿ ಯಶಾ ....
ಲವ್ ಬರ್ಡ್ಸ್ ಟೀಸರ್ ಬಿಡುಗಡೆ ಸದಭಿರುಚಿಯ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ ‘ಲವ್ ಬರ್ಡ್ಸ್’ ಚಿತ್ರದ ಟೀಸರ್ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು. ರಿಯಲ್ ಜೋಡಿಗಳಾದ ಕೃಷ್ಣ, ಮಿಲನನಾಗರಾಜ್ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ. ನಾಯಕ, ನಾಯಕಿಯ ಪಾತ್ರವನ್ನು ಪರಿಚಯಿಸುವ ತುಣುಕುಗಳನ್ನು ನಟರಾದ ವಿಜಯರಾಘವೇಂದ್ರ ಮತ್ತು ಅಜಯ್ರಾವ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡಿದ ನಿರ್ದೇಶಕರು ನಾನು ಸಾಮಾನ್ಯವಾಗಿ ಒಂದೇ ತರಹದ ಸಿನಿಮಾ ಮಾಡುವುದಿಲ್ಲ. ಬೇರೆ ಬೇರೆ ರೀತಿಯ ಚಿತ್ರಗಳನ್ನು ಮಾಡುತ್ತಾ ಬಂದಿರುತ್ತೇನೆ. ಲಾಕ್ಡೌನ್ ಸಮಯದಲ್ಲಿ ಬರೆದ ಕಥೆ ಇದಾಗಿದೆ. ....
ಚಾಲನೆಗೊಂಡಿತು ಚಲನಚಿತ್ರ ಪತ್ರಕರ್ತರ ಸಂಘ ರಾಷ್ಟ್ರ ಪ್ರಶಸ್ತಿ ವಿಜೇತ, ಪದ್ಮಶ್ರೀ ಡಾ.ಗಿರೀಶ್ಕಾಸರವಳ್ಳಿ ‘ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ’ವನ್ನು ಉದ್ಗಾಟಿಸಿ, ಲಾಂಛನ ಬಿಡುಗಡೆ ಮಾಡಿ ಶುಭಹಾರೈಸಿದರು. ನಂತರ ಮಾತನಾಡುತ್ತಾ ಅಂದು ಎರಡು ಪತ್ರಕರ್ತರ ಸಂಘಗಳು ಇದ್ದವು. ಆದರೆ ಕಾರಣಾಂತದಿಂದ ನಿಂತುಹೋಯಿತು. ಮಾಧ್ಯಮದವರು ಉದ್ಯಮವನ್ನು ಬೆಳಸುವ ಸಲುವಾಗಿ ಸಂವಾದ ನಡೆಸುತ್ತಿದ್ದರು. ‘ಸಂಸ್ಕಾರ’ ‘ಸ್ಕೂಲ್ ಮಾಸ್ಟರ್’ ರೀತಿಯ ಸಿನಿಮಾಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಆಗಿಲ್ಲ. ರೌಡಿಸಂ ಮಾದರಿಯ ಚಿತ್ರಗಳನ್ನು ಜಾಸ್ತಿ ಬಿಂಬಿಸಿ ರಾಜ್ಯದ ಹೊರಗೂ ನಮ್ಮ ಚಿತ್ರಗಳ ಕುರಿತಂತೆ ನಾವೇ ....