ಹೊಸಬರ ಅಲೆಗಳಿಲ್ಲದ ಸಾಗರ
ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಅಲೆಗಳಿಲ್ಲದ ಸಾಗರ’ ಚಿತ್ರದ ಮುಹೂರ್ತ ಸಮಾರಂಭವು ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ಸಾಗರ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಕರುಣಾಕರ್ ರಾವಣ್ ಮತ್ತು ನಿರಂಜನ್‌ಮೂರ್ತಿ.ಟಿ.ಎಸ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಸಾಗರ್ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡುವ ಜತೆಗೆ ಕಂಪನಿ ಸಿಇಒ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ರಾಣಾನಿಗೆ ಕೆಡಿ ಸಾಥ್ ‘ರಾಣ’ ಚಿತ್ರದ ಭರ್ಜರಿ ಆಕ್ಷನ್ ಟ್ರೇಲರ್‌ನ್ನು ಧ್ರುವಸರ್ಜಾ ಬಿಡುಗಡೆ ಮಾಡಿದರು. ನಂತರ ಮಾತನಾಡಿ ಶ್ರೇಯಸ್ ನನ್ನ ಆತ್ಮೀಯ ಗೆಳೆಯ. ಈ ಸಿನಿಮಾಕ್ಕಾಗಿ ಆತ ಪಟ್ಟಿರುವ ಪರಿಶ್ರಮ ತುಣುಕುಗಳಲ್ಲಿ ಕಾಣಿಸುತ್ತದೆ. ಉತ್ತಮ ತಂತ್ರಜ್ಘರ ಹಾಗೂ ಕಲಾವಿದರ ಸಂಗಮದಲ್ಲಿ ಚಿತ್ರವು ಚೆನ್ನಾಗಿ ಮೂಡಿಬಂದಿರುತ್ತದೆ. ನಾನು ಮೊದಲ ದಿನವೇ ನೋಡುತ್ತೇನೆಂದು ತಂಡಕ್ಕೆ ಶುಭ ಹಾರೈಸಿದರು. ಸಿನಿಮಾ ಕುರಿತಂತೆ ಮಾಹಿತಿ ಹಂಚಿಕೊಂಡ ನಾಯಕ ಶ್ರೇಯಸ್ ಮೂರುವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರವು ತೆರೆಕಾಣುತ್ತಿದೆ. ಇಂತಹ ಬಿಡುಗಡೆ ದಿನಕ್ಕೆ ಕಾಯುತ್ತಿದ್ದೆ. ಒಂದೊಳ್ಳೇ ಚಿತ್ರ ಮಾಡಿದ್ದು ಖುಷಿ ನೀಡಿದೆ ....
ಭಾಷೆ ಜೊತೆಗೆ ಸಿನಿಮಾ ಬೆಳೆಯುತ್ತದೆ – ಟಿ.ಎಸ್.ನಾಗಭರಣ ‘ಮಾರಿಗುಡ್ಡದ ಗಡ್ಡಧಾರಿಗಳು’ ಚಿತ್ರದ ಹೊಸ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ನಿರ್ದೇಶಕ ಟಿ.ಎಸ್.ನಾಗಭರಣ ಶಿಷ್ಯ ನಿರ್ದೇಶನ ಮಾಡಿರುವ ಚಿತ್ರದ ಕುರಿತಂತೆ ಮಾತನಾಡಿದರು. ಅದ್ಬುತವಾದ ಕ್ರಿಯೆಯನ್ನು ಇವತ್ತಿನ ಕಾಲಘಟ್ಟದಲ್ಲಿ ಗಡ್ಡಧಾರಿಗಳು ಮಾಡಿದ್ದಾರೆ. ಸೂರಿ ಆಕಾರ ಆಗಿದೆ. ಆದರೆ ಹೃದಯ ಬಹಳ ಚೆನ್ನಾಗಿದೆ. ನಿಜವಾಗಿಯೂ ಎಲ್ಲಾ ವಿಲನ್‌ಗಳು ಹಾಗೆಯೇ ಇದ್ದರು. ....
ಪುನೀತ್ ಹಾಡಿದ ಗೀತೆ ಬಿಡುಗಡೆ ಸದಾ ಹೊಸಬರಿಗೆ ಪ್ರೋತ್ಸಾಹ ಕೊಡುತ್ತಿದ್ದ ಪುನೀತ್‌ರಾಜ್‌ಕುಮಾರ್ ‘ಓ’ ಚಿತ್ರದಲ್ಲಿ ಬರುವ ‘ಏನೋ ಆಗಿದೆ ಜಾದೂ ಆಗಿದೆ’ ಗೀತೆಗೆ ಧ್ವನಿಯಾಗಿದ್ದಾರೆ. ಇದೇ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಾರರ್, ಥ್ರಿಲ್ಲರ್ ಜಾನರ್ ಇರಲಿದ್ದು ಮಹೇಶ್.ಸಿ.ಅಮ್ಮಲ್ಲಿದೊಡ್ಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಪ್ಪು ಅವರ ಕೈಲಿ ಹಾಡಿಸಬೇಕೆಂದು ಅವರ ಮ್ಯಾನೇಜರ್‌ರನ್ನು ಸಂಪರ್ಕಿಸಿದಾಗ ನಮ್ಮ ಬಜೆಟ್‌ಗೆ ಒಪ್ಪದೆ, ನಿಮ್ಮಂಥವರು ನೂರಾರು ಜನ ಬರ್ತಾರೆ. ಇಷ್ಟವಾದರೆ ಹಾಡುತ್ತಾರೆಂದು ಹೇಳಿ ಕಳುಹಿಸಿದರು. ಮುಂದೆ ನೇರವಾಗಿ ಪುನೀತ್ ಸರ್ ....
ಡಿಸೆಂಬರ್ಗೆ ವಾಸಂತಿ ನಲಿದಾಗ
‘ವಾಸಂತಿ ನಲಿದಾಗ’ ಜನಪ್ರಿಯ ಹಾಡು ಈಗ ಚಿತ್ರದ ಶೀರ್ಷಿಕೆಯಾಗಿದೆ. ಈ ಹಿಂದೆ ‘ಪುಟಾಣಿ ಸಫಾರಿ’ ‘ವರ್ಣಮಯ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ರವೀಂದ್ರವೆಂಶಿ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ರೋಹಿತ್‌ಶ್ರೀಧರ್ ನಾಯಕ ಮತ್ತು ಭಾವನಾಶ್ರೀನಿವಾಸ್ ನಾಯಕಿ. ಇವರೊಂದಿಗೆ ಜೀವಿತವಸಿಷ್ಟ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜುಪಾವಗಡ, ಮಿಮಿಕ್ರಿಗೋಪಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಇನ್ನು ಉದ್ಯಮ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿಕುಮಾರ್ ಮೊದಲು ನಟಿಸಿದ್ದ ಸಿನಿಮಾದಲ್ಲಿ ಸುಧಾರಾಣಿ ಜೋಡಿಯಾಗಿದ್ದರು.
ತಬಲಾನಾಣಿ, ಕುರಿಪ್ರತಾಪ್ ಆರ್‌ಸಿ ಬ್ರದರ‍್ಸ್ ‘ಆರ್‌ಸಿ ಬ್ರದರ‍್ಸ್’ ಚಿತ್ರದಲ್ಲಿ ತಬಲಾನಾಣಿ ಮತ್ತು ಕುರಿಪ್ರತಾಪ್ ಅಣ್ಣತಮ್ಮನಾಗಿ ನಟಿಸಿದ್ದಾರೆ. ಸಂಭ್ರಮಶ್ರೀ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಹಾಗೂ ನೀತುರಾಯ್ ನಾಯಕಿಯರು. ಪ್ರಕಾಶ್‌ಕುಮಾರ್ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಣಿಶಶಾಂಕ್ ಬಂಡವಾಳ ಹೂಡಿದ್ದು, ಸಹನಾಗಿರೀಶ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಮೊನ್ನೆಯಷ್ಟೆ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕರು ಮಾತನಾಡಿ ೨೦೧೧ರಲ್ಲಿ ಚಿತ್ರರಂಗಕ್ಕೆ ಬಂದು, ಪಿ.ಕುಮಾರ್, ಪ್ರೀತಂಗುಬ್ಬಿ ಅವರ ಬಳಿ ಕೆಲಸ ....
ಹಾಡಿನ ಸಾಲು ಚಿತ್ರದ ಶೀರ್ಷಿಕೆ ಶ್ರೀನಗರಕಿಟ್ಟಿ, ರಮ್ಯಾ ಅಭಿನಯದ ‘ಸಂಜು ವೆಡ್ಸ್ ಗೀತಾ’ ಚಿತ್ರದ ‘ಸಂಜು ಮತ್ತು ಗೀತಾ’ ಹಾಡು ಜನಪ್ರಿಯವಾಗಿತ್ತು. ಈಗ ಇದೇ ಹೆಸರಿನಲ್ಲಿ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಆರ್.ಕೆ.(ರಾಜು) ನಿರ್ದೇಶನದಲ್ಲಿ, ಸಂಜಯಮಾಗನೂರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ೫ ರೋಜ್‌ಗಳು ಒಂದೊಂದು ಕಥೆಯನ್ನು ಹೇಳುತ್ತಾ ಹೋಗುತ್ತದೆ. ಅವುಗಳ ಮಹತ್ವವನ್ನು ಹೇಳಲಾಗಿದೆ. ನಮ್ಮ ಪ್ರೀತಿಯನ್ನು ಮನೆಯವರು ಸ್ವೀಕರಿಸಬೇಕು. ನಮ್ಮನ್ನು ಸಮಾಜ ಒಪ್ಪಬೇಕು. ನಾವು ಮಾದರಿಯಾಗಬೇಕು ಎಂದು ನಿರ್ಧರಿಸಿದ ಪ್ರೇಮಿಗಳ ಕಥೆ ....
ಕಾಳಿದಾಸನಾಗಿ ಧ್ರುವಸರ್ಜಾ
ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‌ದಲ್ಲಿ ಹೊಸ ಪ್ರಾಜೆಕ್ಟ್ ಬಂದಿತ್ತು. ಇದೀಗ ಸಿನಿಮಾದ ಟೈಟಲ್ ಘೋಷಣೆಯಾಗಿದ್ದು ಅದ್ದೂರಿಯಾಗಿ ನಿರ್ಮಾಣವಾಗಲಿರುವ ಚಿತ್ರಕ್ಕೆ ‘ಕೆಡಿ’ (ಕಾಳಿದಾಸ) ಎಂಬ ಹೆಸರನ್ನು ಇಡಲಾಗಿದೆ. ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಬಾಲಿವುಡ್‌ನ ಸಂಜಯ್‌ದತ್ ಇದರಲ್ಲೂ ಪಾತ್ರ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ ದತ್ ತಂಡಕ್ಕೆ ಶುಭಕೋರಿದರು. ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣದ ನಾಲ್ಕನೇ ಚಿತ್ರವಾಗಿದೆ.
ಎಲ್ಲರ ಜೀವನದ ಹೊಸ ದಿನಚರಿ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಹೊಸ ದಿನಚರಿ’ ಚಿತ್ರದ ಪೋಸ್ಟರ್‌ನ್ನು ಹಿರಿಯ ನಿರ್ದೇಶಕ ಟಿ.ಎಸ್.ನಾಗಭರಣ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ಸಿನಿಮಾರಂಗದಲ್ಲಿ ಎರಡು ದಶಕಕ್ಕೊಮ್ಮೆ ಒಂದು ಬದಲಾವಣೆ ಆಗುತ್ತಿರುತ್ತದೆ. ಎಂಭತ್ತರಲ್ಲಿ, ಎರಡು ಸಾವಿರದಲ್ಲಿ. ಈಗ ಎರಡು ಸಾವಿರದ ಇಪ್ಪತ್ತರಲ್ಲಿ ಆಗಿರುವ ಬದಲಾವಣೆ ನಿಮಗೆಲ್ಲ ತಿಳಿದಿದೆ. ಟ್ರೇಲರ್ ನೋಡಿದರೆ ಇವರಿಂದ ಒಳ್ಳೆ ಚಿತ್ರ ಹೊರಬರುವ ನಿರೀಕ್ಷೆಯಿದೆ. ಇಂತಹ ಯುವ ಉತ್ಸಾಹಿ ಪ್ರತಿಭಾವಂತರ ತಂಡಗಳು ಹೆಚ್ಚು ಬಂದು ಎರಡು ದಶಕಗಳಿಗಾಗುತ್ತಿರುವ ಬದಲಾವಣೆ, ಮುಂದೆ ಒಂದೇ ದಶಕಕ್ಕೆ ಆಗುವಂತಾಗಲಿ ಎಂದು ತಂಡಕ್ಕೆ ಶುಭ ....
ಯಲ್ಲೋ ಗ್ಯಾಂಗ್ಸ್ ಟ್ರೇಲರ್ ಬಿಡುಗಡೆ ಕ್ರೈಂ ಜಗತ್ತಿನ ಕಥೆ ಹೊಂದಿರುವ ‘ಯಲ್ಲೋ ಗ್ಯಾಂಗ್ಸ್’ ಚಿತ್ರವು ನವೆಂಬರ್ ೧೧ರಂದು ತೆರೆಕಾಣುತ್ತಿದೆ. ಎರಡು ಹಂತದಲ್ಲಿ ಬೆಂಗಳೂರು ಸುತ್ತಮುತ್ತ ೩೫ ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕತೆ ಮತ್ತು ನಿರ್ದೇಶನ ರವೀಂದ್ರಪರಮೇಶ್ವರಪ್ಪ. ತಾರಗಣದಲ್ಲಿ ಬಲರಾಜವಾಡಿ, ನಾಟ್ಯರಂಗ, ನವೀನ್‌ದೇವಯ್ಯ, ಅರ್ಚನಾಕೊಟ್ಟಿಗೆ, ಸತ್ಯಉಮ್ಮತ್ತಾಲ್, ಪ್ರದೀಪ್‌ಪೂಜಾರಿ, ವಿನೀತ್‌ಕಟ್ಟಿ, ಮಲ್ಲಿಕಾರ್ಜುನದೇವರಮನೆ, ನಂದಗೋಪಾಲ್, ರವಿಗಜಜಿಗಣಿ, ಪವನ್‌ಕುಮಾರ್, ನೀನಾಸಂ ದಯಾನಂದ್, ಸತ್ಯ, ಬಿಜಿ.ವಿಠಲ್‌ಪರೀಟ, ಅರುಣ್‌ಕುಮಾರ್, ಶ್ರೀಹರ್ಷ, ಸಂಚಾರಿಮಧು, ಪ್ರವೀಣ್.ಕೆ.ಬಿ. ಮುಂತಾದವರು ....
ಕಾಣೆಯಾಗಿದ್ದಾಳೆ ಹಾಡುಗಳ ಸಮಯ
ವಿನೂತನ ಶೀರ್ಷಿಕೆ ಹೊಂದಿರುವ ‘ಕಾಣೆಯಾಗಿದ್ದಾಳೆ’ ಚಿತ್ರದ ಹಾಡುಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಹುಡುಕಿ ಕೊಟ್ಟವರಿಗೆ ಬಹುಮಾನವೆಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಆರ್.ಕೆ ನಿರ್ದೇಶನ ಮಾಡಿದ್ದಾರೆ. ಸಾಮಾಜಿಕ ಕಳಕಳಿಯ ಚಿತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹಳ್ಳಿಯಿಂದ ನಗರಕ್ಕೆ ಬಂದ ಹೆಣ್ಣುಮಗಳೊಬ್ಬಳಿಗೆ ನಗರದಲ್ಲಿ ಯಾವೆಲ್ಲಾ ಸಮಸ್ಯೆಗಳು ಕಾಡುತ್ತವೆ.
ಕನ್ನಡದ ಕಾಶ್ಮೀರ್ ಫೈಲ್ಸ್ ಮೂರು ದಶಕಗಳ ಹಿಂದೆ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ಇರಲಾದ ಹಿಂದಿ ಚಿತ್ರ ‘ಕಾಶ್ಮೀರಿ ಫೈಲ್ಸ್’ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. ಭಯೋತ್ಪಾದಕರ ಅಟ್ಟಹಾಸ, ಕಾಶ್ಮೀರಿ ಪಂಡಿತರ ನೋವಿನ ಸುತ್ತ ಕಥೆಯನ್ನು ಹಣೆಯಲಾಗಿತ್ತು. ಸರ್ಕಾರವು ವಿಧಿ ೩೭೦ನ್ನು ಹಿಂಪಡೆಯಲಾಗಿದ್ದು, ಮತ್ತೆ ಪಂಡಿತರನ್ನು ಕಾಶ್ಮೀರಕ್ಕೆ ಕರೆದೊಯ್ಯುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾದರೆ ಈಗ ಅಲ್ಲಿನ ಪರಿಸ್ಥಿತಿ ಹೇಗಿದೆ? ಈಗಲೂ ಉಗ್ರರ ಉಪಟಳ ಮೊದಲಿನಂತೆಯೇ ಇದೆಯಾ? ಎಲ್ಲಾ ವಿಷಯಗಳ ಕುರಿತಂತೆ ಕನ್ನಡದಲ್ಲಿ ಚಿತ್ರವೊಂದು ಸಿದ್ದಗೊಂಡಿದೆ. ಅದಕ್ಕೆ ‘ವಿಧಿ (ಆರ್ಟಿಕಲ್)೩೭೦’ ಅಂತ ಶೀರ್ಷಿಕೆ ಇಡಲಾಗಿದೆ. ಕೆ.ಶಂಕರ್ ರಚಸಿ ....
*ಸುಂದರ ಶೀರ್ಷಿಕೆಯ "ಕೌಸಲ್ಯಾ ಸುಪ್ರಜಾ ರಾಮ" ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ.* *ಶಶಾಂಕ್ ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ.* ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿ ಕನ್ನಡಿಗರ. ಮನಗೆದ್ದಿರುವ ನಿರ್ದೇಶಕ ಶಶಾಂಕ್ ಹಾಗೂ ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ಡಾರ್ಲಿಂಗ್ ಕೃಷ್ಣ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರಕ್ಕೆ "ಕೌಸಲ್ಯಾ ಸುಪ್ರಜಾ ರಾಮ" ಎಂಬ ಸುಂದರ ಶೀರ್ಷಿಕೆ ಇಡಲಾಗಿದೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ನಡೆಯಿತು. ಒಂದು ವಿಭಿನ್ನ ವಿಡಿಯೋ ಮೂಲಕ ಶಶಾಂಕ್ ತಮ್ಮ ಚಿತ್ರದ ಟೈಟಲ್ ಬಿಡುಗಡೆ ಮಾಡಿರುವುದು ವಿಶೇಷ. "ಕೌಸಲ್ಯಾ ಸುಪ್ರಜಾ ರಾಮ" ನಾವು ದಿನ ಬೆಳಗ್ಗೆ ....
ಆ ರಹಸ್ಯ ಪತ್ತೆದಾರಿ ಸಿನಿಮಾ ಚಿತ್ರರಂಗದಲ್ಲಿ ಮೂರು ದಶಕಗಳ ಕಾಲ ಅನುಭವ ಹೊಂದಿರುವ ಮಂಡ್ಯಾನಾಗರಾಜ್ ಅವರ ೧೭ನೇ ನಿರ್ದೇಶನದ ‘ಆ ರಹಸ್ಯ’ ಚಿತ್ರಕ್ಕೆ ಕಥೆ,ಚಿತ್ರಕಥೆ, ಒಂದು ಹಾಡಿಗೆ ಸಾಹಿತ್ಯ ಮತ್ತು ಕಂಠದಾನ ಮಾಡಿದ್ದು ಅಲ್ಲದೆ ಶ್ರೀ ಶಿವಶಂಕರ ಸಿನಿ ಪ್ರೊಡಕ್ಷನ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಭೀಮಣ್ಣನಾಯಕ್ ಪ್ರಮುಖ ಪಾತ್ರದಲ್ಲಿ ನಟಿಸುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರು. ಪ್ರಚಾರದ ಸಲುವಾಗಿ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಶಾಸಕ ರಾಜಾವೆಂಕಟಪ್ಪ ನಾಯಕ್, ಶ್ರೀ ಶ್ರೀ ವರ್ದಾನಂದ ಸ್ವಾಮಿಗಳು, ವಾಲ್ಮೀಕಿ ಗುರುಪೀಠ, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್‌ಬಣಕಾರ್, ಮಾಜಿ ಅಧ್ಯಕ್ಷರಾದ ....
*"ವಸುಂಧರದೇವಿ" ಚಿತ್ರದ ಟೀಸರ್ ಗೆ ಮೆಚ್ಚುಗೆಯ ಮಹಾಪೂರ.* ಧರ್ಮ ಕೀರ್ತಿರಾಜ್ ಹಾಗೂ ಸೋನುಗೌಡ ನಾಯಕ - ನಾಯಕಿಯಾಗಿ ನಟಿಸಿರುವ "ವಸುಂಧರದೇವಿ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಸಂತೋಷವನ್ನು ಚಿತ್ರತಂಡ ಮಾಧ್ಯಮದ ಮುಂದೆ ಹಂಚಿಕೊಂಡರು. ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಧರ್ಮ ಕೀರ್ತಿರಾಜ್ ಅವರೊಡನೆ ಇದು ಎರಡನೇ ಚಿತ್ರ. "ವಸುಂಧರದೇವಿ" ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಮುಖ್ಯಮಂತ್ರಿಗಳ ಮಗಳೊಬ್ಬಳು ತಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಮುಖ್ಯಮಂತ್ರಿ ಆಗುತ್ತಾಳೆ. ನಂತರ ಆಕೆಯ ಕೊಲೆಯಾಗುತ್ತದೆ. ಆ ಕೊಲೆ ಮಾಡಿದ್ದು ಯಾರು? ಎಂದು ಕಂಡು ಹಿಡಿಯಲು ತನಿಖಾಧಿಕಾರಿ ....
*ವಿಷ್ಣು ಮಂಚು ಅಭಿನಯದ ’ಜಿನ್ನಾ’ ಚಿತ್ರ ಅಕ್ಟೋಬರ್ 21 ರಂದು ವಿಶ್ವದಾದ್ಯಂತ ಬಿಡುಗಡೆ* ತೆಲಗು ನಟ ವಿಷ್ಣು ಮಂಚು ನಾಯಕರಾಗಿ ಅಭಿನಯಿಸಿರುವ ಆ್ಯಕ್ಷನ್, ಕಾಮಿಡಿ ಜಾನರ್ ನ ’ಜಿನ್ನಾ’ ಸಿನಿಮಾ ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಇದೇ ಅಕ್ಟೋಬರ್ 21 ರಂದು ವಿಶ್ವಾದಾದ್ಯಂತ ತೆರೆಗೆ ಬರುತ್ತಿದೆ. ಆ ಸಲುವಾಗಿ ಇತ್ತೀಚೆಗೆ ನಟ ವಿಷ್ಣು ಮಂಚು ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿಷ್ಣು ಮಂಚು, ಈ ಮೊದಲು ನಾನು ೨೦೧೨ರಲ್ಲಿ ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದೆ. ಆಗ ನನಗೆ ಅಂಬರೀಶ್ ಅವರು ತುಂಬಾ ಸಪೋರ್ಟ್ ಮಾಡಿದ್ದರು. ಅವರು ....
ಕೃಷ್ಣನ ಶ್ಲೋಕ ಚಿತ್ರದ ಹೆಸರು ಮಹಾಭಾರತದ ಭಗವದ್ಗಿತೆಯ ನಾಲ್ಕನೇ ಅಧ್ಯಾಯದಲ್ಲಿ ಬರುವ ‘ನಹಿ ಜ್ಞಾನೇನ ಸದೃಶಂ’ ಶ್ಲೋಕವನ್ನು ಕೃಷ್ಣನು ಅರ್ಜುನನಿಗೆ ಯುದ್ದ ಪ್ರಾರಂಭವಾಗುವ ಮುನ್ನ ಹೇಳುತ್ತಾರೆ. ಈಗ ಇದೇ ಹೆಸರಿನಲ್ಲಿ ಮಕ್ಕಳ ಚಿತ್ರವೊಂದು ಸದ್ದಿಲ್ಲದೆ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಪ್ರಚಾರದ ಹಂತವಾಗಿ ಪೋಸ್ಟರ್ ಬಿಡುಗಡೆ ಸಮಾರಂಭವನ್ನು ಏರ್ಪಾಟು ಮಾಡಿಕೊಂಡಿದ್ದರು. ಶಿಕ್ಷಣ ಜತೆಗೆ ಮನರಂಜನೆ ಅಂತ ಇಂಗ್ಲೀಷ್ ಅಡಿಬರಹವಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಮತ್ತು ಪದಾಧಿಕಾರಿಗಳಾದ ಸುಂದರರಾಜ್, ಕುಶಾಲ್, ಟಿ.ಪಿ.ಸಿದ್ದರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ....
*ಮುಕ್ತಾಯ ಹಂತದಲ್ಲಿ "ಅಬ ಜಬ ದಬ" ಚಿತ್ರದ ಚಿತ್ರೀಕರಣ.* ಕಳೆದವರ್ಷ "ಕನ್ನಡ್ ಗೊತ್ತಿಲ್ಲ" ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಮಯೂರ ರಾಘವೇಂದ್ರ ನಿರ್ದೇಶನದ, ಅನಂತ ಕೃಷ್ಣ ನಿರ್ಮಾಣದ, ಪೃಥ್ವಿ ಅಂಬರ್ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ "ಅಬ ಜಬ ದಬ" ಚಿತ್ರರ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಇನ್ನು ಹತ್ತು ದಿನಗಳ ಚಿತ್ರೀಕರಣವಾದರೆ ಚಿತ್ರೀಕರಣ ಮುಕ್ತಾಯವಾಗಲಿದೆ. "ಕನ್ನಡ್ ಗೊತ್ತಿಲ್ಲ" ಚಿತ್ರದ ನಂತರ ನಾನು ರಚಿತಾ ರಾಮ್ ಅವರಿಗೊಂದು ಸಿನಿಮಾ ಮಾಡಬೇಕಿತ್ತು. ಅದು ದೊಡ್ಡ ಬಜೆಟ್ ನ ಚಿತ್ರವಾಗಿರುವುದರಿಂದ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಈ ಔಟ್ ಎಂಡ್ ಔಟ್ ಕಾಮಿಡಿಯಿರುವ ಈ ಚಿತ್ರದ ಕಥೆ ....
ಉತ್ತರ ಕರ್ನಾಟಕದ ಕಾವೇರಿ ಪುರ ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಕಾವೇರಿ ಪುರ’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ನಟ ವಿಜಯರಾಘವೇಂದ್ರ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿದ್ದರು. ರಾಯಚೂರಿನಲ್ಲಿ ಹಾರ್ಡ್‌ವೇರ್ ಶಾಪ್ ಮತ್ತು ರಿಯಲ್ ಎಸ್ಟೇಟ್ ನಡೆಸುತ್ತಿರುವ ಶಾಂತಕುಮಾರ್.ವಿ.ಪಾಟೀಲ್ ಅವರು ಡಿವಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಹೆಸರಾಂತ ನಿರ್ದೇಶಕರುಗಳ ಬಳಿ ಅನುಭವ ಪಡೆದುಕೊಂಡು, ಎರಡು ಸಿನಿಮಾಗಳಿಗೆ ಬರಹಗಾರನಾಗಿ ....
*ಈ ವಾರ ತೆರೆಗೆ "ಚಾಂಪಿಯನ್".* ಶಿವಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿವಾನಂದ್ ಎಸ್ ನೀಲಣ್ಣನವರ್ ನಿರ್ಮಿಸಿರುವ, ಶಾಹುರಾಜ್ ಶಿಂಧೆ ನಿರ್ದೇಶನದ " ಚಾಂಪಿಯನ್ " ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕ್ರೀಡಾ ಕಥಾಹಂದರ ಹೊಂದಿರುವ ಈ ಚಿತ್ರದ ನಾಯಕನಾಗಿ ಸಚಿನ್ ಧನಪಾಲ್ ಅಭಿನಯಿಸಿದ್ದಾರೆ. ಅದಿತಿ ಪ್ರಭುದೇವ "ಚಾಂಪಿಯನ್" ಚಿತ್ರದ ನಾಯಕಿ. ಹಿರಿಯ ನಟ ದೇವರಾಜ್, ಸುಮನ್, ಪ್ರದೀಪ್ ರಾಹುತ್, ಚಿಕ್ಕಣ್ಣ, ಆದಿ ಲೋಕೇಶ್, ರಂಗಾಯಣ ರಘು, ಅವಿನಾಶ್, ಕಾಕ್ರೋಜ್ ಸುಧಿ, ಶೋಭರಾಜ್, ಅಶೋಕ್ ಶರ್ಮ, ಪ್ರಶಾಂತ್ ಸಿದ್ದಿ, ಗಿರಿ, ಮಂಡ್ಯ ರಮೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟಿ ಸನ್ನಿಲಿಯೋನ್ ಸಹ ಈ ಚಿತ್ರದಲ್ಲಿ ....