ಕನ್ನಡದ ಮಿ.ನಟ್ವರ್ಲಾಲ್
೭೦ ದಶಕದಲ್ಲಿ ಅಮಿತಾಬ್ಬಚ್ಚನ್ ಅಭಿನಯದ ‘ಮಿ.ನಟ್ವರ್ಲಾಲ್’ ಚಿತ್ರ ಬಿಡುಗಡೆಗೊಂಡು ಹಿಟ್ ಆಗಿತ್ತು. ಬರೋಬ್ಬರಿ ನಾಲ್ಕು ದಶಕದ ನಂತರ ಇದೇ ಹೆಸರಿನಲ್ಲಿ ಕನ್ನಡ ಸಿನಿಮಾವೊಂದು ತೆರೆಗೆ ಬರಲು ತಯಾರಿ ಮಾಡಿಕೊಂಡಿದೆ. ಪ್ರಚಾರದ ಮೊದಲ ಹಂತವಾಗಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿ ತಂಡಕ್ಕೆ ಶುಭಹಾರೈಸಿದರು.
ಸಮೃದ್ದಿಶೆಟ್ಟಿ ಮಿಸ್ ಕ್ವೀನ್ ಆಫ್ ಇಂಡಿಯಾ
ಉಡುಪಿ ಮೂಲದ ಸಮೃದ್ದಿಶೆಟ್ಟಿ ಕೇರಳದ ಕೊಚ್ಚಿಯಲ್ಲಿ ನಡೆದ ಮಿಸ್ ಕ್ವೀನ್ ಆಫ್ ಇಂಡಿಯಾ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. ೩೦ ರಾಜ್ಯಗಳ ಸ್ಪರ್ಧಿಗಳ ಜೊತೆ ಗುರುತಿಸಿಕೊಂಡು ಅಂತಿಮವಾಗಿ ಗೆಲುವನ್ನು ಕಂಡು ಅಂತರಾಷ್ಟ್ರೀಯ ಮಟ್ಟದ ಮಿಸ್ ಗ್ಲಾಮ್ ವರ್ಲ್ಡ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಉದ್ಯಮಿ ವಿಶ್ವನಾಥಶೆಟ್ಟಿ ಮತ್ತು ಮಮತಾಶೆಟ್ಟಿ ಪುತ್ರಿಯಾಗಿದ್ದು ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಸದ್ಯ ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕಂಠೀರವದಲ್ಲಿ ಧೀರ ಭಗತ್ರಾಯ್ ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟದ ಕಥೆ ಹೊಂದಿರುವ ‘ಧೀರ ಭಗತ್ರಾಯ್’ ಸಿನಿಮಾದ ಕೊನೆ ಹಂತದ ಚಿತ್ರೀಕರಣವು ಕಂಠೀರವ ಸ್ಟುಡಿಯೋದಲ್ಲಿ ಹಾಕಲಾದ ಕೋರ್ಟ್ ಹಾಲ್ ಸೆಟ್ದಲ್ಲಿ ನಡೆದಿದೆ. ಈ ಸನ್ನಿವೇಶ ಚಿತ್ರದ ಜೀವಾಳವಾಗಿದ್ದು, ಇನ್ನು ಆರು ದಿವಸ ನಡೆಸಿದರೆ ಕುಂಬಳಕಾಯಿ ಒಡೆಯಲಾಗುವುದು. ಇಲ್ಲಿಯವರೆಗೂ ಯಾರು ತೆಗೆದುಕೊಳ್ಳದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ. ಭೂ ಸುಧಾರಣೆ ಕಾಯ್ದೆ ಜತೆಗೆ ಪ್ರಿವೆಂಶನ್ ಆಫ್ ಎಸ್.ಸಿ/ಎಸ್.ಟಿ ಅಟ್ರಾಸಿಟಿ ಕಾಯ್ದೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೇಳುವ ಪ್ರಯತ್ನ ಮಾಡಲಾಗಿದೆ. ಇಂತಹ ಅಂಶಗಳನ್ನು ಸರ್ವೆ ನಡೆಸಿ ....
*ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು "ನೆನಪಿನ ಹಾದಿಯಲಿ ಒಂಟಿ ಪಯಣ" ಆಲ್ಬಂ ಸಾಂಗ್.* ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ಮೂಲಕ ಈ ಹಿಂದೆ ಸಂಚಾರಿ ವಿಜಯ್ ಅಭಿನಯದ "6 ನೇ ಮೈಲಿ" ಹಾಗೂ ಪ್ರಸ್ತುತ ವಸಿಷ್ಠ ಸಿಂಹ ಅಭಿನಯದ "ತಲ್ವಾರ್ ಪೇಟೆ" ಚಿತ್ರಗಳ ನಿರ್ಮಾಪಕ ಡಾ||ಶೈಲೇಶ್ ಕುಮಾರ್ ಅವರು ಎಸ್ ಎನ್ ಸಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಅದರ ಮೊದಲ ಹಜ್ಜೆಯಾಗಿ "ನೆನಪಿನ ಹಾದಿಯಲ್ಲಿ ಒಂಟಿ ಪಯಣ" ಎಂಬ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ. ಡಾ||ಶಶಿಕಲಾ ಪುಟ್ಟಸ್ವಾಮಿ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಟ ಪ್ರವೀಣ್ ತೇಜ್ ಹಾಗೂ ನಟಿ ಯಶಾ ....
ಲವ್ ಬರ್ಡ್ಸ್ ಟೀಸರ್ ಬಿಡುಗಡೆ ಸದಭಿರುಚಿಯ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ ‘ಲವ್ ಬರ್ಡ್ಸ್’ ಚಿತ್ರದ ಟೀಸರ್ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು. ರಿಯಲ್ ಜೋಡಿಗಳಾದ ಕೃಷ್ಣ, ಮಿಲನನಾಗರಾಜ್ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ. ನಾಯಕ, ನಾಯಕಿಯ ಪಾತ್ರವನ್ನು ಪರಿಚಯಿಸುವ ತುಣುಕುಗಳನ್ನು ನಟರಾದ ವಿಜಯರಾಘವೇಂದ್ರ ಮತ್ತು ಅಜಯ್ರಾವ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡಿದ ನಿರ್ದೇಶಕರು ನಾನು ಸಾಮಾನ್ಯವಾಗಿ ಒಂದೇ ತರಹದ ಸಿನಿಮಾ ಮಾಡುವುದಿಲ್ಲ. ಬೇರೆ ಬೇರೆ ರೀತಿಯ ಚಿತ್ರಗಳನ್ನು ಮಾಡುತ್ತಾ ಬಂದಿರುತ್ತೇನೆ. ಲಾಕ್ಡೌನ್ ಸಮಯದಲ್ಲಿ ಬರೆದ ಕಥೆ ಇದಾಗಿದೆ. ....
ಚಾಲನೆಗೊಂಡಿತು ಚಲನಚಿತ್ರ ಪತ್ರಕರ್ತರ ಸಂಘ ರಾಷ್ಟ್ರ ಪ್ರಶಸ್ತಿ ವಿಜೇತ, ಪದ್ಮಶ್ರೀ ಡಾ.ಗಿರೀಶ್ಕಾಸರವಳ್ಳಿ ‘ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ’ವನ್ನು ಉದ್ಗಾಟಿಸಿ, ಲಾಂಛನ ಬಿಡುಗಡೆ ಮಾಡಿ ಶುಭಹಾರೈಸಿದರು. ನಂತರ ಮಾತನಾಡುತ್ತಾ ಅಂದು ಎರಡು ಪತ್ರಕರ್ತರ ಸಂಘಗಳು ಇದ್ದವು. ಆದರೆ ಕಾರಣಾಂತದಿಂದ ನಿಂತುಹೋಯಿತು. ಮಾಧ್ಯಮದವರು ಉದ್ಯಮವನ್ನು ಬೆಳಸುವ ಸಲುವಾಗಿ ಸಂವಾದ ನಡೆಸುತ್ತಿದ್ದರು. ‘ಸಂಸ್ಕಾರ’ ‘ಸ್ಕೂಲ್ ಮಾಸ್ಟರ್’ ರೀತಿಯ ಸಿನಿಮಾಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಆಗಿಲ್ಲ. ರೌಡಿಸಂ ಮಾದರಿಯ ಚಿತ್ರಗಳನ್ನು ಜಾಸ್ತಿ ಬಿಂಬಿಸಿ ರಾಜ್ಯದ ಹೊರಗೂ ನಮ್ಮ ಚಿತ್ರಗಳ ಕುರಿತಂತೆ ನಾವೇ ....
ಶೂಟಿಂಗ್ ಮುಗಿಸಿದ ಕರಿ ಹೈದ ಕರಿ ಅಜ್ಜ ತ್ರಿವಿಕ್ರಮ ಸಪಲ್ಯ ನಿರ್ಮಾಣ, ಸುಧೀರ್ ಅತ್ತಾವರ್ ನಿರ್ದೇಶನದ ‘ಕರಿ ಹೈದ ಕರಿ ಅಜ್ಜ’ ಸಿನಿಮಾದ ಚಿತ್ರೀಕರಣವು ಅಂದುಕೊಂಡಂತೆ ಮುಗಿದಿದೆ. ಪವಾಡ ಪುರುಷ ಕೊರಗಜ್ಜ ಜೀವನಧಾರಿತ ಕಥೆಯನ್ನು ಹೊಂದಿದೆ. ಶೂಟಿಂಗ್ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭವಕ್ಕೆ ಬಂದಿದೆ. ಕೊರಗಜ್ಜ ಎಂದು ಕರೆಯುವ ೨೨,೨೩ ವರ್ಷ ಬದುಕಿದ್ದ ತನಿಯ ಅಥವಾ ಕಾಂತಾರ ಎನ್ನುವ ಕರಾವಳಿ ಭಾಗದ ಆದಿವಾಸಿಗಳು ಎನ್ನಬಹುದಾದ ಕೊರಗ ಜನಾಂಗದ ಹುಡುಗ ದೈವತ್ವ ಪಡೆದುಕೊಂಡ ರೋಚಕ ಕಥನ ಇದರಲ್ಲಿದೆ. ಹಾಲಿವುಡ್-ಬಾಲಿವುಡ್ ನೃತ್ಯಸಂಯೋಜಕ ಸುದೀಪ್ ಸೋಪರ್ಕರ್ ದೈವದ ಪಾತ್ರವನ್ನು ....
*ವಿನಯ್ ನಟಿಸಿ ನಿರ್ದೇಶಿಸಿರುವ ‘ದಿ’ ಸಿನಿಮಾ ಟ್ರೇಲರ್ ರಿಲೀಸ್- ಮಾರ್ಚ್ ನಲ್ಲಿ ಸಿನಿಮಾ ತೆರೆಗೆ* ‘ಕಡೆಮನೆ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ವಿನಯ್ ‘ದಿ’ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ‘ದಿ’ ಮೂಲಕ ನಾಯಕ ಹಾಗೂ ನಿರ್ದೇಶಕನಾಗಿ ವಿನಯ್ ತೆರೆ ಮೇಲೆ ಬರ್ತಿದ್ದು ಇಂದು ಚಿತ್ರದ ಇಂಟ್ರಸ್ಟಿಂಗ್ ಟ್ರೇಲರ್ ಬಿಡುಗಡೆಯಾಗಿದೆ. ‘ದಿ’ ಚಿತ್ರಕ್ಕೆ ವಿನಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ದಿಲದೇ ಸೆಟ್ಟೇರಿ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ ಮಾಹಿತಿ ....
ಪ್ರಜಾರಾಜ್ಯದಲ್ಲಿ ಅನ್ನದಾತನ ಹಾಡು
ವೃತ್ತಿಯಲ್ಲಿ ನ್ಯೂರೋ ಸರ್ಜನ್, ಪ್ರವೃತ್ತಿ ಸಿನಿಮಾ ನಿರ್ಮಾಪಕ ಆಗಿರುವ ಡಾ.ವರದರಾಜ್ ‘ಪ್ರಜಾರಾಜ್ಯ’ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆಯುವ ಜೊತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಾರಗಣದಲ್ಲಿ ಸುಧಾರಾಣಿ, ಸುಧಾಬೆಳವಾಡಿ, ತಬಲನಾಣಿ, ಸಂಪತ್, ಮೈತ್ರೇಯಾ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಉಪೇಂದ್ರ ಹಾಡಿರುವ ಜೈ ಎಲೆಕ್ಷನ್ ಗೀತೆ ಬಿಡುಗಡೆಯಾಗಿದ್ದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ.
ನವ ನಾಯಕಿಯರಿಗೆ ಒಬ್ಬರೇ ನಾಯಕ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಮೊದಲ ಮಳೆ’ ಚಿತ್ರಕ್ಕೆ ರಾಜನರಸಿಂಹ ನಾಯಕ ಮತ್ತು ನಿರ್ಮಾಪಕ. ಇವರಿಗೆ ಒಂಬತ್ತು ನಾಯಕಿಯರು ಇರುವುದು ವಿಶೇಷ. ಕಥೆ ಬರೆದು ನಿರ್ದೇಶನ ಮಾಡಿರುವುದು ರಾಜಶರಣ್. ಯಾವ ಹುಡುಗಿಯೂ ಇಷ್ಟಪಡದಂಥ ರೂಪವುಳ್ಳ ಹುಡುಗನೊಬ್ಬ ಮದುವೆಯಾಗಲು ಹೊರಟಾಗ ಎದುರಾಗುವ ಸನ್ನಿವೇಶಗಳನ್ನು ಕಟ್ಟಿಕೊಂಡು ಅದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ. ಜತೆಗೆ ಮರ್ಡರ್ ಮಸ್ಟ್ರಿ ಹಾರರ್ ಇರಲಿದೆ. ಮಮತಾಗೌಡ, ಸಾಹಿತ್ಯ, ಉಷಾ, ಪ್ರಿಯಾಶೆಟ್ಟಿ ಮುಂತಾದವರು ಇದ್ದಾರೆ.
ವೀರಗಾಸೆ ಕುರಿತಾದ ಪರಂವ ಹೊಸಬರ ‘ಪರಂವ’ ಸಿನಿಮಾವು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಈಗ ಪ್ರಚಾರಕಾರ್ಯವನ್ನು ಶುರು ಮಾಡಿಕೊಂಡಿದೆ. ಟೀಸರ್ ಬಿಡುಗಡೆ ಮಾಡಿದ ಡಾರ್ಲಿಂಗ್ ಕೃಷ್ಣ ತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕ ಸಂತೋಷ್ ಹೇಳುವಂತೆ ನಾಟಕ, ಸಿನಿಮಾ ನೋಡುತ್ತಾ ಬೆಳೆದವನು. ಆರ್ಯನ್ ಚಿತ್ರದ ಮೂಲಕ ತಂತ್ರಜ್ಘನಾಗಿ ಪಾದಾರ್ಪಣೆ ಮಾಡಿದೆ. ಗೆಳಯ ಪ್ರೇಮ್ ಅವರೊಂದಿಗೆ ಸೇರಿಕೊಂಡು ಒಳ್ಳೆಯ ಕಥೆ ಮಾಡಿಕೊಂಡೆವು. ಸುಮಾರು ೨೦೦ ಜನ ಹಣ ಹಾಕಿದ್ದಾರೆ. ಒಂಥರ ಕ್ರೌಡ್ ಫಂಡಿಂಗ್ ಎನ್ನಬಹದು. ತುಮಕೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ವೀರಗಾಸೆಯನ್ನೆ ವೃತ್ತಿಯನ್ನಾಗಿ ಬಳಸಿಕೊಂಡ ಕುಟುಂಬದ ಕಥೆಯು ಇಂದಿನ ಯುವ ಜನಾಂಗದ ಜೀವನ ....
ಬಾಲಿವುಡ್ ಸಿನಿಮಾದಲ್ಲಿ ರಾಗಿಣಿ
ಚಂದನವನದಲ್ಲಿ ತಮ್ಮದೆ ಛಾಪನ್ನು ಮೂಡಿಸಿಕೊಂಡು ತುಪ್ಪದ ರಾಣಿ ಎಂದೇ ಖ್ಯಾತರಾಗಿರುವ ರಾಗಿಣಿ ಮೊದಲ ಬಾರಿ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಒಂದು ಹಂತದ ಚಿತ್ರೀಕರಣವು ಲಂಡನ್ದಲ್ಲಿ ಮುಗಿದಿದೆ. ಇದರನ್ವಯ ಮಾದ್ಯಮದವರನ್ನು ಭೇಟಿ ಮಾಡಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 47ನೇ ವಾರ್ಷಿಕೋತ್ಸವ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪ್ರಶಸ್ತಿಗಳ ವಿವರ ಕಳೆದ 47 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿರುವುದು ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ಈ ಸುಧೀರ್ಘ ಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದ್ದರು. ಕೇವಲ ಎರಡು ಪ್ರಶಸ್ತಿಗಳಿಂದ ....
*ತೆರೆಯ ಮೇಲೆ ಚಿತ್ರಕಲಾವಿದನ "ಪರಿಸ್ಥಿತಿ"..* ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಜೀವನದಲ್ಲಿ ಅನೇಕ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಕೆಲ ಪರಿಸ್ಥಿತಿಗಳನ್ನು ನಿಭಾಯಿಸಲು ಆ ವ್ಯಕ್ತಿ ಅಥವಾ ಆತನ ಸುತ್ತಲೂ ಇರುವ ಜನ ತೆಗೆದುಕೊಳ್ಳುವ ನಿರ್ಧಾರಗಳು ಆತನ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ಅದೇರೀತಿ ರಸ್ತೆಯಲ್ಲಿ ಚಿತ್ರಬಿಡಿಸುತ್ತ ಜೀವನ ಸಾಗಿಸುವ ಕಲಾವಿದನೊಬ್ಬನ ಜೀವನದಲ್ಲಿ ಎದುರಾದ "ಪರಿಸ್ಥಿತಿ"ಯನ್ನು ಹೇಳುವ ಚಿತ್ರವೇ "ಪರಿಸ್ಥಿತಿ". "ಹಾರ್ಟ್ ಬೀಟ್" ಸೇರಿದಂತೆ ಸಾಕಷ್ಟು ಪ್ರಸಿದ್ಧ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಆರ್.ಎಸ್. ಗಣೇಶ್ ನಾರಾಯಣ್ ಈ ಚಿತ್ರದ ಮೂಲಕ ....
ಹೊಸಬರ ಒಂದೊಳ್ಳೆ ಲವ್ ಸ್ಟೋರಿ ಹೊಸ ಪ್ರತಿಭೆಗಳು ಸೇರಿಕೊಂಡು ಸಿದ್ದಪಡಿಸಿರುವ ‘ಒಂದೊಳ್ಳೆ ಲವ್ ಸ್ಟೋರಿ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಎಸ್ಆರ್ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ನಡೆಯಿತು. ಅನಿವಾಸಿ ಭಾರತೀಯ ಮೈಸೂರಿನ ನಿರಂಜನ್ಬಾಬು ಪಿನಕಿನ್ ಸಿನಿಮಾಸ್ ಬ್ಯಾನರ್ನಡಿಯಲ್ಲಿ ನಿರ್ಮಾಣ ಮಾಡಿ, ನಾಯಕನ ತಂದೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರು ಅಮೇರಿಕಾದಲ್ಲಿದ್ದರೂ ಕನ್ನಡ ಭಾಷೆಯ ಅಭಿಮಾನದಿಂದ ಹಲವಾರು ಸಮಾಜ ಸೇವೆಗಳನ್ನು ಮಾಡುತ್ತಾ, ಇಂದು ಅಮೆಜಾನ್ದಲ್ಲಿ ಕನ್ನಡ ಚಿತ್ರಗಳು ಪ್ರಸಾರಗೊಳ್ಳಲು ಮೂಲ ಕಾರಣಕರ್ತರಾಗಿರುತ್ತಾರೆ. ಈಗಾಗಲೇ ಶಿವರಾಜ್ಕುಮಾರ್, ....
13 ಶೂಟಿಂಗ್ ಮುಗಿಸಿದ ಸಾಹಸಗಾಥೆ....! ಈ ಹಿಂದೆ ಪಲ್ಲಕ್ಕಿ, ಅಮೃತವಾಹಿನಿಯಂಥ ಚಿತ್ರಗಳನ್ನು ನಿರ್ದೇಶಿಸಿದ ಕೆ.ನರೇಂದ್ರಬಾಬು ಅವರ ನಿರ್ದೇಶನದಲ್ಲಿ, ರಾಘವೇಂದ್ರ ರಾಜ್ಕುಮಾರ್, ಶ್ರುತಿ, ಪ್ರಮೋದ್ ಶೆಟ್ಟಿ ಅಭಿನಯಿಸಿರುವ ಚಿತ್ರ ‘13’ ಯುವಿ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ಸಂಪತ್ ಕುಮಾರ್, ಮಂಜುನಾಥ್, ಮಂಜುನಾಥಗೌಡ ಸೇರಿ ನಿರ್ಮಿಸುತ್ತಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಹಾಗೂ ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಶ್ರುತಿ ಅವರು ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ....
ಮಂಡ್ಯ ಹೈದನಾದ ಅಭಯ್ ಯುವನಟ ಅಭಯ್ ಚಂದ್ರಶೇಖರ್ ವಿಭಿನ್ನ ಪ್ರೇಮಕಥೆಯುಳ್ಳ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು. ಈಗವರು ಮತ್ತೊಂದು ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಮಂಗಳವಾರ ಅಭಯ್ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಚಿತ್ರದ ಹೆಸರು ಮಂಡ್ಯಹೈದ. ಈ ಚಿತ್ರವನ್ನು ಅಭಯ್ ತಂದೆ ಚಂದ್ರಶೇಖರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ, ಅಲ್ಲದೆ ಈ ಚಿತ್ರಕ್ಕೆ ವಿ. ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳ ೧೮ರಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ....
*ವೈರಂ ಚಿತ್ರದ ಟೀಸರ್ ಬಿಡುಗಡೆ* ಒಬ್ಬ ಆಂಗ್ರಿ ಯಂಗ್ ಮ್ಯಾನ್ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ಚಿತ್ರ ವೈರಂ. ಹಿರಿಯನಟ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಅಭಿನಯದ ದ್ವಿತೀಯ ಚಿತ್ರವೂ ಇದಾಗಿದ್ದು, ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಟೀಸರ್ ಬಿಡುಗಡೆ ಮಾಡಿದ ದೇವರಾಜ್ ಅವರು ಮಾತನಾಡುತ್ತಾ, ಕನ್ನಡ ಚಿತ್ರರಂಗ ಈಗ ಮತ್ತೆ ಬ್ಯುಸಿಯಾಗಿದೆ. ಇಂತಹ ಸಮಯದಲ್ಲಿ ನನ್ನ ಮಗನ 2ನೇ ಸಿನಿಮಾ ಬರುತ್ತಿದೆ. ನಿರ್ದೇಶಕ ಸಾಯಿಶಿವನ್ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ....
ಸುರಪಾನ ಸೇವಿಸುವವನು ಸುರಾರಿ
ಕನ್ನಡ ಅಲ್ಲದೆ ಹಿಂದಿ,ತೆಲುಗು ಮತ್ತು ತಮಿಳು ಭಾಷೆಯಲ್ಲಿ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಸುರಾರಿ’ ಚಿತ್ರದ ಟೀಸರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ರಚನೆ,ಚಿತ್ರಕಥೆ,ಸಂಭಾಷಣೆ,ನಿರ್ದೇಶನ ಹಾಗೂ ನಾಯಕನಾಗಿ ಅಭಿನಯಿಸಿರುವುದು ವಿಶಾಲಜಯ. ಐರಿಸ್ ಸ್ಟುಡಿಯೋ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.
ಆಗೋದೆಲ್ಲಾ ಒಳ್ಳೇದಕ್ಕೆ ಹಾಡುಗಳ ಬಿಡುಗಡೆ
ಗಿನ್ನಿಸ್ ದಾಖಲೆಯ ‘ದರ್ಪಣ’ ಮತ್ತು ಬಿಡುಗಡೆಯಾಗಬೇಕಾದ ‘ಪರಿಶುದ್ದಂ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಆರೋನ್ ಕಾರ್ತಿಕ್ ವೆಂಕಟೇಶ್ ಈಗ ‘ಆಗೋದೆಲ್ಲಾ ಒಳ್ಳೇದಕ್ಕೆ’ ಸಿನಿಮಾಕ್ಕೆ ರಚನೆ, ಚಿತ್ರಕಥೆ, ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಸೀಗೆಹಳ್ಳಿಯ ಎ.ಎಸ್.ಲೋಹಿತ್ ಅವರು ಬಿನಿಶಾ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.