ಹೈಡ್ ಅಂಡ್ ಸೀಕ್ ಫಸ್ಟ್ ಲುಕ್ ಬಿಡುಗಡೆ ಲಕ್ಷ್ಮಣ ಖ್ಯಾತಿಯ ನಟ ಅನೂಪ್ ರೇವಣ್ಣ ನಟಿಸಿರುವ ಹೈಡ್ ಅಂಡ್ ಸೀಕ್ ಚಿತ್ರವು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ. ಪುನೀತ್ ನಾಗರಾಜು ಅವರ ನಿರ್ದೇಶನದ ಈ ಚಿತ್ರದಲ್ಲಿ ಅನೂಪ್ ರೇವಣ್ಣ ಒಬ್ಬ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೇಕಿಂಗ್ ವೀಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದರೆ, ಮಾಜಿಸಚಿವ ಹೆಚ್.ಎಂ.ರೇವಣ್ಣ ಅವರು ಮೇಕಿಂಗ್ ವೀಡಿಯೋ ಲಾಂಚ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಎಂ.ರೇವಣ್ಣ ಪುನೀತ್ ....
ಪ್ರಭುತ್ವ ಹಾಡುಗಳ ಸಮಯ
ರವಿರಾಜ್.ಎಸ್.ಕುಮಾರ್ ನಿರ್ಮಾಣ, ಆರ್.ರಂಗನಾಥ್ ನಿರ್ದೇಶನ ‘ಪ್ರಭುತ್ವ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಮತದಾನದ ಮಹತ್ವ ಸಾರುವ ಅಂಶಗಳು ಇರಲಿದೆ. ಇಂಡಿಯನ್ ಪಾಲಿಟಿಕ್ಸ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಚೇತನ್ಚಂದ್ರ ನಾಯಕ. ಪಾವನಗೌಡ ನಾಯಕಿ. ಉಳಿದಂತೆ ಶರತ್ಲೋಹಿತಾಶ್ವ, ವಿಜಯ್ಚೆಂಡೂರು, ಡ್ಯಾನಿ ಮುಂತಾದವರು ನಟಿಸಿದ್ದಾರೆ.
ಫ್ಲೆಮಿಂಗೋ ಸೆಲೆಬ್ರೀಟೀಸ್ ವಲ್ಡ್ ಪ್ರೈ.ಲಿ ಫಿಲಂ ಸಂಸ್ಥೆಗೆ 2023 ರ ಎರೆಡು (2 ) ಪ್ರಶಸ್ತಿಗಳು :- ನಟಿ ಪೂಜಾ ಹೆಗ್ಡೆ ಯಿಂದ , ಇಂಡಿಯನ್ ಐಕಾನಿಕ್ ಫಿಲಂ ಇನ್ಟಿಟ್ಯೂಟ್ ಆಫ್ ದಿ ಇಯರ್ 2023 ರ ಪ್ರಶಸ್ತಿ ಲಭಿಸಿದೆ , ಬೆಂಗಳೂರು ನಗರದ ಶಾಂಗ್ರಿ ಲಾ ಹೋಟೆಲ್ ನಲ್ಲಿ 25/02/2023 ರ ಶನಿವಾರ ದಂದು , ಪ್ರೈಡ್ ಇಂಡಿಯ ಅವಾರ್ಡ್ಸ್ ರವರು - ಇಂಡಿಯನ್ ಐಕಾನ್ ಅವಾರ್ಡ್ಸ್ 2023 ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಿದ್ದರು. ಆ ಸಮಾರಂಭದಲ್ಲಿ ಫ್ಲೆಮಿಂಗೋ ಸೆಲೆಬ್ರೀಟೀಸ್ ವಲ್ಡ್ ಪ್ರೈ.ಲಿ ಫಿಲಂ ಸಂಸ್ಥೆಯ ದಶಕಗಳ ಸಾಧನೆಗೆ , ಡಿಕೇಟ್ ಆಫ್ ಅಚೀವ್ಮೆಂಟ್ ಎಂದು - ನಟಿ ಪೂಜಾ ಹೆಗ್ಡೆ ಅವರು , ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಆದ ದವನ್ ಸೋಹ ಅವರಿಗೆ “ ಇಂಡಿಯನ್ ಐಕಾನಿಕ್ ಫಿಲಂ ಇನ್ಟಿಟ್ಯೂಟ್ ಆಫ್ ದಿ ಇಯರ್ ....
*ಮಾರ್ಚ್ ಹತ್ತರಂದು ಬರಲಿದೆ ಮನಸೂರೆಗೊಳ್ಳುವ "ಚೌಕಾಬಾರ".*
ಕನ್ನಡದಲ್ಲಿ ಈಗ ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಅಂತಹುದೇ ವಿಭಿನ್ನ ಕಂಟೆಂಟ್ ವುಳ್ಳ " ಚೌಕಾಬಾರ " ಚಿತ್ರ ಇದೇ ಮಾರ್ಚ್ 10ರಂದು ಕರ್ನಾಟಕದಾದ್ಯಂತ ಐವತ್ತಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗಲಿದೆ.
ಮಾರ್ಚ್ 24, 25 ಹಾಗೂ 26 ಅಮೇರಿಕಾದ ಐದು ರಾಜ್ಯಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.
ಸುಮಾರು ವರ್ಷಗಳಿಂದ ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ಸಕ್ರಿಯರಾಗಿರುವ ನಮಿತಾರಾವ್ ಹಾಗೂ ವಿಕ್ರಮ್ ಸೂರಿ ದಂಪತಿಗಳ ಕನಸಿನ ಕೂಸು ಈ "ಚೌಕಾಬಾರ".
" *ಟ್ರೇಲರ್ ಮೂಲಕ ಗಮನ ಸೆಳೆದಿರುವ "ಚೌಕಾಬಾರ" ಚಿತ್ರ ಮಾರ್ಚ್ ಹತ್ತರಂದು ತೆರೆಗೆ* " *ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಲವು ಗಣ್ಯರು ಭಾಗಿ* .ನವಿ ನಿರ್ಮಿತಿ ಲಾಂಛನದಲ್ಲಿ ನಮಿತಾರಾವ್ ನಿರ್ಮಿಸಿರುವ, ವಿಕ್ರಮ್ ಸೂರಿ ನಿರ್ದೇಶನದ "ಚೌಕಾಬಾರ" ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಖ್ಯಾತ ಸಾಹಿತಿಗಳಾದ ಹೆಚ್ ಎಸ್ ವೆಂಕಟೇಶ್ ಮೂರ್ತಿ, ಬಿ.ಆರ್ ಲಕ್ಷ್ಮಣರಾವ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಭಾ.ಮ.ಹರೀಶ್, ನಟ ಸುಂದರರಾಜ್, ಲಹರಿ ವೇಲು, ರಘು ಭಟ್, ನಿರ್ಮಾಪಕ ಸಂಜಯ್ ಗೌಡ , ಸಚಿವ ಆರ್ ಅಶೋಕ್ ಪುತ್ರ ಶರತ್, ಉದ್ಯಮಿ ಉಮೇಶ್ ಕುಮಾರ್, ಸಂಜಯ್ ಸೂರಿ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ....
*ಅಪಾರ ಜನಸಾಗರದ ನಡುವೆ ಶಿಡ್ಲಘಟ್ಟದಲ್ಲಿ ನಡೆಯಿತು ‘ಕಬ್ಜ’ ಹಬ್ಬ* *ಕಲರ್ ಫುಲ್ ವೇದಿಕೆಯಲ್ಲಿ ರಿಲೀಸ್ ಆಯ್ತು ಚಿತ್ರದ ‘ಚುಮ್ ಚುಮ್ ಚಳಿ ಚಳಿ ...’ ಮಾಸ್ ಸಾಂಗ್* ಸದ್ಯ ಪ್ಯಾನ್ ಇಂಡಿಯಾ ಹಂತದಲ್ಲಿ ಟ್ರೆಂಡಿಂಗ್ನಲ್ಲಿರುವ ಸಿನಿಮಾ ಎಂದರೆ ‘ಕಬ್ಜ’. ಈಗಾಗಲೇ ತನ್ನ ಟೀಸರ್, ಎರಡು ಹಾಡುಗಳಿಂದ ಜನರ ಮನ ಗೆದ್ದಿರುವ ‘ಕಬ್ಜ’ ಚಿತ್ರದಿಂದ ಇದೀಗ ಪಡ್ಡೆ ಹುಡುಗರ ಹೃದಯಕ್ಕೆ ಹತ್ತಿರವಾಗುವ ಹಾಡೊಂದು ಬಿಡುಗಡೆಯಾಗಿದೆ. ಹೌದು ಇತ್ತೀಚೆಗೆ ಆರ್.ಚಂದ್ರು ಅವರ ತವರು ಶಿಡ್ಲಘಟ್ಟದಲ್ಲಿ "ಕಬ್ಜ" ಚಿತ್ರದ ‘ಚುಮ್ ಚುಮ್ ಚಳಿ ಚಳಿ . ತಬ್ಕೊ ಚಳುವಳಿ’ ಎಂಬ ಮಾಸ್ ಹಾಡು ಅಪಾರ ಜನಸಾಗರದ ನಡುವೆ ಬಿಡುಗಡೆಯಾಯಿತು. ಪ್ರಮೋದ್ ಮರವಂತೆ ಬರೆದಿರುವ ಈ ....
*ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ "ಮಾರ್ಟಿನ್" ಚಿತ್ರದ ಟೀಸರ್ ಗೆ ಪ್ರಶಂಸೆಯ ಸುರಿಮಳೆ* . *ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಬಿಡುಗಡೆಯಾಯಿತು ಈ ಚಿತ್ರದ ಟೀಸರ್.* ಸಾಮಾನ್ಯವಾಗಿ ಚಿತ್ರಗಳ ಪ್ರೀಮಿಯರ್ ಶೋ ನಡೆಯುವುದು ವಾಡಿಕೆ. ಆದರೆ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ "ಮಾರ್ಟಿನ್" ಚಿತ್ರದ ಟೀಸರ್ ಗೆ ಪ್ರೀಮಿಯರ್ ನಡೆದಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವೀರೇಶ ಚಿತ್ರಮಂದಿರದಲ್ಲಿ "ಮಾರ್ಟಿನ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಬೇರೆ ಯಾವ ಚಿತ್ರರಂಗದಲ್ಲೂ ಈ ರೀತಿ ಟೀಸರ್ ಪ್ರೀಮಿಯರ್ ನಡೆದಿರುವುದು ತಿಳಿದಿಲ್ಲ. ಇದೇ ಮೊದಲು ಎನ್ನಬಹುದು. ಇತ್ತೀಚೆಗೆ ಕನ್ನಡ ಸೇರಿದಂತೆ ....
ಸೌತ್ ಇಂಡಿಯನ್ ಹೀರೋಗೆ ಉಪ್ಪಿ ಸಾಥ್ ಈ ಹಿಂದೆ ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ನಂಥ ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನರೇಶ್ಕುಮಾರ್ ಹೆಚ್.ಎನ್. ಹೊಸಳ್ಳಿ ಈಗ ಮತ್ತೊಂದು ಚಿತ್ರವನ್ನು ತೆರೆಗೆ ತರಲು ಅಣಿಯಾಗಿದ್ದಾರೆ. ಆ ಚಿತ್ರದ ಹೆಸರು ಸೌತ್ ಇಂಡಿಯನ್ ಹೀರೋ. ನಿರ್ದೇಶನದ ಜೊತೆಗೆ ಪತ್ನಿ ಶಿಲ್ಪಾ ಅವರ ಜೊತೆಗೂಡಿ ಚಿತ್ರಕ್ಕೆ ಬಂಡವಾಳವನ್ನೂ ಸಹ ಹಾಕಿದ್ದಾರೆ. ಈ ಚಿತ್ರದಲ್ಲಿ ಕಿರುತೆರೆ ನಟ ಸಾರ್ಥಕ್ ನಾಯಕನಾಗಿದ್ದು, ನಾಯಕಿಯರಾಗಿ ಕಾಶಿಮಾ ಹಾಗೂ ಮುಂಬೈ ಮೂಲದ ಊರ್ವಶಿ ನಟಿಸಿದ್ದಾರೆ. ಇದೇ ತಿಂಗಳ ೨೪ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಈ ಚಿತ್ರದ ಟ್ರೈಲರ್ ಬಿಡುಗಡೆ ....
ನೈಜ ಹಾಗೂ ಕಾಲ್ಪನಿಕ ಕಾಣೆಯಾಗಿದ್ದಾಳೆ
ವಿನೂತನ ಶೀರ್ಷಿಕೆ ಹೊಂದಿರುವ ‘ಕಾಣೆಯಾಗಿದ್ದಾಳೆ’ ಚಿತ್ರವನ್ನು ಆರ್ಕೆ ನಿರ್ದೇಶನ ಮಾಡಿದ್ದಾರೆ. ಹುಡುಕಿಕೊಟ್ಟವರಿಗೆ ಬಹುಮಾನ ಎಂಬುದಾಗಿ ಅಡಿಬರಹವಿದೆ. ಸಾಮಾಜಿಕ ಕಳಕಳಿಯ ಚಿತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹಳ್ಳಿಯಿಂದ ನಗರಕ್ಕೆ ಬಂದ ಹೆಣ್ಣುಮಗಳೊಬ್ಬಳಿಗೆ ನಗರದಲ್ಲಿ ಯಾವೆಲ್ಲಾ ಸಮಸ್ಯೆಗಳು ಕಾಡುತ್ತವೆ. ಆಕೆ ಎದುರಿಸುವ ಸವಾಲುಗಳೇನು? ಐಎಎಸ್ ಅಧಿಕಾರಿ ಆಗುತ್ತಾಳಾ? ಪ್ರಸ್ತುತ ಸನ್ನಿವೇಶದಲ್ಲಿ ಹೆಣ್ಣುಮಕ್ಕಳು ಎದುರಿಸುವ ಸಮಸ್ಯೆಗಳ ವಿಚಾರವನ್ನು ಯಾಕೆ ಜನರ ಮುಂದಿಡಬಾರದು ಎನ್ನುವಂತಹ ವಿಷಯಗಳನ್ನು ತೋರಿಸಲಾಗಿದೆ.
*"ಸಿನಿ ಬಜಾರ್" ಇದು ನಿರ್ಮಾಪಕರ ಸ್ನೇಹಿ ಓಟಿಟಿ.* ತಂತ್ರಜ್ಞಾನ ಮುಂದುವರಿದ ಹಾಗೆ ಜೀವನಶೈಲಿ ಕೂಡ ಬದಲಾಗುತ್ತಿದೆ. ಜನರಿಗೆ ಆಧುನಿಕ ತಂತ್ರಜ್ಞಾನದಿಂದ ಸಾಕಷ್ಟು ಅನುಕೂಲವಾಗುತ್ತಿದೆ. ಇಂತಹುದೇ ವಿಶೇಷ ತಂತ್ರಜ್ಞಾನವುಳ್ಳ "ಸಿನಿಬಜಾರ್" ಎಂಬ ಓಟಿಟಿ ಬಿಡುಗಡೆಯಾಗಿದ್ದು, ಈ ಓಟಿಟಿ ಮೂಲಕ ವಿಶ್ವದ ಅನೇಕ ರಾಷ್ಟ್ರಗಳ ಜನರು ತಮ್ಮ ನೆಚ್ಚಿನ ಸಿನಿಮಾಗಳನ್ನು ತಾವು ಇದ್ದಲ್ಲಿಯೇ ನೋಡಬಹುದು. ಇದರಿಂದ ನಿರ್ಮಾಪಕರಿಗೆ ಹೆಚ್ಚು ಅನುಕೂಲವಾಗಲಿದೆ. ಇತ್ತೀಚಿಗೆ "ಸಿನಿಬಜಾರ್" ಓಟಿಟಿ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. "ಸಿನಿಬಜಾರ್" ಓಟಿಟಿಯಲ್ಲಿ ಪ್ರತಿ ಶುಕ್ರವಾರ ಸಿನಿಮಾಗಳು ಫ್ಯಾನ್ ವಲ್ಡ್ ವಿಶ್ವದ 177 ದೇಶಗಳಲ್ಲಿ ....
ಮನಸೂರೆಗೊಳ್ಳುತ್ತಿರುವ ಜೂಲಿಯೆಟ್-೨ ಟ್ರೇಲರ್
ಉತ್ತಮ ಅಂಶಗಳನ್ನು ಒಳಗೊಂಡಿರುವ ‘ಜೂಲೆಯಟ್-೨’ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಂಡಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಗೊಂಡು ಎಲ್ಲಾ ಕಡೆಗಳಿಂದಲೂ ಪ್ರಶಂಸೆಗಳು ಬರುತ್ತಿದೆ. ‘ಪ್ರೇಮಂಪೂಜ್ಯಂ’ ಖ್ಯಾತಿಯ ಬೃಂದಾಆಚಾರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿರಾಟ್.ಬಿ.ಗೌಡ ನಿರ್ದೇಶನ ಮಾಡಿದ್ದು, ಲಿಖಿತ್.ಆರ್.ಕೋಟ್ಯಾನ್ ಬಂಡವಾಳ ಹೂಡಿದ್ದಾರೆ.
ತೆರೆಗೆ ಸಿದ್ದ ಅಸ್ಥಿರ ನಿರ್ದೇಶಕ ಹೊರತುಪಡಿಸಿ ಬಹುತೇಕ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅಸ್ಥಿರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಎಸ್ಆರ್ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಉಪಾಧ್ಯಕ್ಷ ಮತ್ತು ಹಿರಿಯಪತ್ರಕರ್ತ ಎನ್ಆರ್ಕೆ.ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಸ್ಥಿರವಲ್ಲದ್ದನ್ನು ಅಸ್ಥಿರ ಎಂದು ಕರೆಯುವುದುಂಟು. ಅದೇ ರೀತಿ ಸೀಮಿತ ಮನಸ್ಥಿತಿ ಇಲ್ಲದೆ ಇರುವ ವ್ಯಕ್ತಿಯು ಪ್ರೀತಿಯಲ್ಲಿ ಸೋತಾಗ ಸಾಮಾನ್ಯ ಹುಡುಗನಾದವನು ಯಾವ ರೀತಿ ಇರುತ್ತಾನೆ ಎಂಬುದನ್ನು ಹೇಳಲಾಗಿದೆ. ತ್ರಿಕೋನ ಪ್ರೇಮ ಕಥೆಯು ....
ಲಂಕಾಸುರದಲ್ಲಿ ಮಾಡರ್ನ್ ಮಹಾಲಕ್ಷೀ ಗೀತೆ
ವಿನೋದ್ಪ್ರಭಾಕರ್ ನಾಯಕನಾಗಿ ನಟಿಸಿರುವ ‘ಲಂಕಾಸುರ’ ಚಿತ್ರದ ‘ಮಾಡರ್ನ್ ಮಹಾಲಕ್ಷೀ’ ಹಾಡನ್ನು ಮಾಲಾಶ್ರೀ ಬಿಡುಗಡೆ ಮಾಡಿದರು. ನಂತರ ಮಾತನಾಡಿ ನಾನು ವಿನೋದ್ಪ್ರಭಾಕರ್ ದೊಡ್ಡ ಅಭಿಮಾನಿ. ಅವರ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಟೈಗರ್ ಟಾಕೀಸ್ ಮೂಲಕ ಪತ್ನಿ ನಿಶಾ ಹೆಸರಿನಲ್ಲಿ ಮೊದಲ ಬಾರಿ ಬಂಡವಾಳ ಹೂಡಿದ್ದಾರೆ.
ಅಮೋಘ ಸಾಲುಗಳಿಂದ ಸಂಗೀತ ಪ್ರಿಯರ ಮನಗೆಲ್ಲುತ್ತಿರುವ ಜೂಲಿಯೆಟ್ 2 ಚಿತ್ರದ "ನೆನಪೆಲ್ಲಿ ಈಗ" ವಿಡಿಯೋ ಸಾಂಗ್ ಇದೀಗ 5 ಲಕ್ಷ ವೀಕ್ಷಣೆಯನ್ನು ಪಡೆಯುವತ್ತ ದಾಪುಗಾಲಿಟ್ಟಿದೆ
*ಗಾಂಧಿ ಬಜಾರ್ ನಲ್ಲಿ ಆರಂಭವಾಯಿತು "Combat warriors"* . *ಇದು ಚಲನಚಿತ್ರದಲ್ಲಿ ನಟಿಸಲು ಬಯಸುವವರಿಗೆ ಫಿಸಿಕಲ್ ಫಿಟ್ನೆಸ್ ಮತ್ತು ಸೆಲ್ಫ್ ಡಿಫೆನ್ಸ್ ಕುರಿತು ಶಿಕ್ಷಣ ನೀಡುವ ಸಂಸ್ಥೆ* . ಪ್ರತಿಯೊಬ್ಬ ಮನುಷ್ಯನು ತಾನು ದೈಹಿಕವಾಗಿ ಆರೋಗ್ಯವಾಗಿರಬೇಕೆಂದು ಬಯಸುತ್ತಾನೆ. ಅದರಲ್ಲೂ ಸಿನಿಮಾದಲ್ಲಿ ನಟಿಸಬೇಕೆಂಬ ಆಸಕ್ತಿ ಇರುವವರಿಗಂತೂ ಫಿಸಿಕಲ್ ಫಿಟ್ನೆಸ್ ಬಹು ಮುಖ್ಯ. ಇದರ ಬಗ್ಗೆ ಸರಿಯಾದ ಶಿಕ್ಷಣ ನೀಡಲು ಬೆಂಗಳೂರಿನ ಹೃದಯ ಭಾಗವಾದ ಗಾಂಧಿ ಬಜಾರ್ ನಲ್ಲಿ "Combat warriors"* ಎಂಬ ಸಂಸ್ಥೆ ಆರಂಭವಾಗಿದೆ. ಇತ್ತೀಚೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಗ್ರ್ಯಾಂಡ್ ಮಾಸ್ಟರ್ ಎಂ ಹೆಚ್ ಅಬೀದ್, ನಾನು ಈ ತನಕ ದೇಶ ಹಾಗೂ ....
ಅದ್ದೂರಿಯಾಗಿ ರಿಲೀಸ್ ಆಯ್ತು ’ಸರ್ವೈವರ್’ ಟ್ರೇಲರ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಹಾಲಿವುಡ್ ಶೈಲಿಯ ಈ ಕಿರುಚಿತ್ರ ಯುವ ಪ್ರತಿಭೆಗಳು ತಮ್ಮನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿ ಕಿರುಚಿತ್ರಗಳು ಹಾಗೂ ಅಲ್ಬಮ್ ಸಾಂಗ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಈ ಸಾಲಿಗೆ ಯುವ ಪ್ರತಿಭೆ ರಜತ್ ರಜನಿಕಾಂತ್ ಸೇರಿದ್ದಾರೆ. ಹೌದು ಸಿನಿಮಾ ಮಾಡುವ ಕನಸನ್ನು ಹೊತ್ತು ಇಂಡಸ್ಟ್ರಿಗೆ ಬಂದಿರುವ ಇವರು ಮೊದಲ ಪ್ರಯತ್ನವಾಗಿ ’ದ ಸರ್ವೈವರ್’ ಎಂಬ ಕಿರುಚಿತ್ರವನ್ನು ಸಿದ್ದಪಡಿಸಿದ್ದಾರೆ. ಈ ಚಿತ್ರಕ್ಕೆ ರಜತ್ ರಜನಿಕಾಂತ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಕಲನ, ನಿರ್ದೇಶನದ ಜೊತೆಗೆ ನಾಯಕರಾಗಿ ನಟಿಸಿದ್ದಾರೆ. ....
‘೪.೩೦–೬.೦೦ ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’ ಮೇಲಿನ ವಾಕ್ಯ ಚಿತ್ರದ ಶೀರ್ಷಿಕೆಯಾಗಿದೆ. ಚಂದನವನದ ಹಿರಿಯ ನಿರ್ದೇಶಕರುಗಳಾದ ದೊರೆ-ಭಗsವಾನ್ ಇದ್ದಂತೆ ಕಾಲಿವುಡ್ನ ಶಿವರಾಜ್ ಮತ್ತು ಪೂವೈಸುರೇಶ್ ಜಂಟಿಯಾಗಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿರುವ ಡಿ.ಯೋಗರಾಜ್ ಅವರು ನೀಲಕಂಠ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುವ ಜತೆಗೆ ಛಾಯಾಗ್ರಹಣ-ಸಂಕಲನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕೈಗಾರಿಕೋದ್ಯಮಿ ಹೂಸೂರು ಮೂಲದ ಮಹೇಂದ್ರನ್ ಸಹ ....
ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ ಕನ್ನಡ ಚಿತ್ರರಂಗದ ಮೊದಲ ಪ್ರಚಾರಕರ್ತರೆಂಬ ಬಿರುದಿಗೆ ಪಾತ್ರರಾಗಿದ್ದ ಡಿ.ವಿ.ಸುದೀಂದ್ರ ಹುಟ್ಟುಹಾಕಿದ್ದ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ೨೫ ವರ್ಷ ತುಂಬಿದ ಸಂದರ್ಭದಲ್ಲಿ, ತನಗೆ ಅನ್ನ ನೀಡಿದವರನ್ನು ಮರೆಯದೆ ಹಿರಿಯ ನಿರ್ಮಾಪಕರು ಹಾಗೂ ಅನುಭವಿ ಪತ್ರಕರ್ತರುಗಳಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದರು. ಅದು ಮುಂದುವರೆದು ಪ್ರತಿ ವರ್ಷ ನಡೆಯುತ್ತಾ ಬಂದಿದೆ. ಸದ್ಯ ಸುದೀಂದ್ರವೆಂಕಟೇಶ್ ಅಧೀನದಲ್ಲಿ ಸುನಿಲ್ ಹಾಗೂ ವಾಸು ....
*ಶ್ರೀಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಆರಂಭವಾಯಿತು ಆದಿತ್ಯ ಅಭಿನಯದ "ಟೆರರ್"* . ಸಿಲ್ಕ್ ಮಂಜು ನಿರ್ಮಿಸುತ್ತಿರುವ, ರಂಜನ್ ಶಿವರಾಮ ಗೌಡ ನಿರ್ದೇಶನದ ಹಾಗೂ ಆದಿತ್ಯ ನಾಯಕರಾಗಿ ನಟಿಸುತ್ತಿರುವ "ಟೆರರ್" ಚಿತ್ರದ ಮುಹೂರ್ತ ಸಮಾರಂಭ ಶ್ರೀಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನಡೆಯಿತು. ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಐ ಪಿ ಎಸ್ ಅಧಿಕಾರಿ ರವಿಕಾಂತೇಗೌಡ ಅವರು ಕ್ಯಾಮೆರಾ ಚಾಲನೆ ಮಾಡಿದರು. ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಲಹರಿ ವೇಲು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ನನ್ನ ಮೊದಲ ನಿರ್ದೇಶನದ ಚಿತ್ರ. ಹೊಸ ಮಾಫಿಯಾ ಸುತ್ತ ಕಥೆ ಇದೆ. ....
ಗಣರಾಜೋತ್ಸವ ಸಂಭ್ರಮಕ್ಕಾಗಿಯೇ ರಿಲೀಸ್ ಆಯ್ತು ‘ಪ್ರಜಾರಾಜ್ಯ’ ಟ್ರೇಲರ್ ‘ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ’ ಎಂಬ ಟ್ಯಾಗ್ ಲೈನ್ ಹೊಂದಿರುವ ‘ಪ್ರಜಾರಾಜ್ಯ’ ಚಿತ್ರ ಸದ್ಯ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ. ಪ್ರತಿಯೊಬ್ಬ ಭಾರತೀಯ ನೋಡಲೇ ಬೇಕಾದ ಸಿನಿಮಾ ಇದಾಗಿದೆ. ಯಾಕಂದ್ರೆ ಪ್ರಜೆಗಳು ಮನಸು ಮಾಡಿದ್ರೆ ಎನೆಲ್ಲಾ ಮಾಡಬಹುದು ಎಂಬ ಅಂಶದ ಮೇಲೆ ಈ ಸಿನಿಮಾ ಮಾಡಲಾಗಿದೆ. ಇದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಸಾಕ್ಷಿ. ಗಣರಾಜೋತ್ಸವ ಸಂಭ್ರಮದಲ್ಲಿ ‘ಪ್ರಜಾರಾಜ್ಯ’ ಟ್ರೇಲರ್ ಬಿಡುಗಡೆ ಆಗಿರುವುದು ಕುತೂಹಲ ಹುಟ್ಟಿಸಿದೆ. ಸದ್ಯ ವಿಧಾನಸಭಾ ಚುನಾವಣೆಗೆ ರಾಜ್ಯ ಸಿದ್ದವಾಗುತ್ತಿದ್ದು, ಈ ಸಂದರ್ಭದಲ್ಲೇ ಸಿನಿಮಾ ಇದೇ ಫೆಬ್ರವರಿ 24ರಂದು ....