ಈವಾರ ಟೆಂಪರ್ ಹುಡುಗನ ಲವ್ ಸ್ಟೋರಿ ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಶೀರ್ಷಿಕೆಗಳನ್ನು ಹೊತ್ತ ಸಿನಿಮಾಗಳೇ ಹೆಚ್ಚು ಜನಪ್ರಿಯವಾಗುತ್ತಿವೆ. ಅಂಥಾ ಮತ್ತೊಂದು ಚಿತ್ರ ದಿ.೧೬ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಸಾಹಿತಿ, ಸಂಗೀತ ನಿರ್ದೇಶಕ ಮಂಜುಕವಿ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಆ ಚಿತ್ರದ ಹೆಸರು ಟೆಂಪರ್. ಸೋಮವಾರ ನಡೆದ ಬಿಡುಗಡೆಪೂರ್ವ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಕನ್ನಡ ಹಾಗೂ ತೆಲುಗು ಸೇರಿದಂತೆ ೨ ಭಾಷೆಗಳಲ್ಲಿ ನಿರ್ಮಾಣವಾಗಿದೆ. ತಮ್ಮ ಮಕ್ಕಳನ್ನು ಚಿಕ್ಕವರಿದ್ದಾಗಲೇ ಸುಸಂಸ್ಕೃತರನ್ನಾಗಿ ಬೆಳೆಸದೆ ಹೋದರೆ ಮುಂದೆ ಅವರು ಯಾವರೀತಿ ಬದಲಾಗ್ತಾರೆ ಅಲ್ಲದೆ ಮಕ್ಕಳ ....
ಉಳಿದವರಾರು" ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ. ಬಹಳಷ್ಟು ಯುವ ಪ್ರತಿಭೆಗಳು ಹೊಸ ಆಲೋಚನೆಯೊಂದಿಗೆ ಸಿನಿ ರಂಗದಲ್ಲಿ ಭದ್ರ ನೆಲೆಯನ್ನು ಕಾಣಲು ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ನೇಸರ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿರುವ "ಉಳಿದವರಾರು" ಚಿತ್ರದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರೇಣುಕಾಂಬ ಪ್ರಿವ್ಯೂ ಥೇಟರ್ ನಲ್ಲಿ ಮುಖ್ಯ ಅತಿಥಿಗಳಾಗಿ ಬಂದ ನಿರ್ದೇಶಕರಾದ ವಿಕ್ಟರಿ ವಾಸು, ನಾಗೇಂದ್ರ ಅರಸ್, ನಾಗಚಂದ್ರ, ನಟ ಕೆಂಪೇಗೌಡ ಸೇರಿದಂತೆ ಹಲವಾರು ಗಣ್ಯರು ಪೋಸ್ಟರ್ ಲಾಂಚ್ ಮಾಡಿ ತಂಡಕ್ಕೆ ಶುಭವನ್ನು ಹಾರೈಸಿದರು. ಚಿತ್ರದ ಕುರಿತು ನಿರ್ದೇಶಕ ಸತೀಶ್ ಪಾಟೀಲ್ ಮಾತನಾಡುತ್ತಾ ಈಗಾಗಲೇ ನಾನು ಬಿಸಿನೆಸ್ ಅನ್ನುವ ....
*ಸೊಗಸಾಗಿದೆ "Mr ಬ್ಯಾಚುಲರ್" ಚಿತ್ರದ ಹಾಡು.* *ಡಾರ್ಲಿಂಗ್ ಕೃಷ್ಣ ಅಭಿನಯದ ಈ ಚಿತ್ರ ಜನವರಿ 6 ರಂದು ತೆರೆಗೆ.* ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ "Mr ಬ್ಯಾಚುಲರ್" ಚಿತ್ರಕ್ಕಾಗಿ ಮಾರುತಿ ಅವರು ಬರೆದಿರುವ "ಮದುವೆ ಯಾವಾಗ" ಎಂಬ ಸೊಗಸಾದ ಹಾಡು ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ನಾನು "ಲವ್ ಮಾಕ್ಟೇಲ್" ಚಿತ್ರ ಆರಂಭಿಸುವುದಕ್ಕೂ ಮುನ್ನ ಆರಂಭವಾದ ಚಿತ್ರವಿದು. ಈ ಚಿತ್ರದ ಸಂಭಾವನೆಯಿಂದಲೇ ನಾನು "ಲವ್ ಮಾಕ್ಟೇಲ್" ಶುರು ಮಾಡಿದ್ದು. ....
*ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ "ಗೌರಿ" ಚಿತ್ರಕ್ಕೆ ಚಾಲನೆ.* ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಎನ್.ಎಸ್.ರಾಜಕುಮಾರ್ - ವಿ.ಎಸ್ ರಾಜಕುಮಾರ್ ನಿರ್ಮಾಣದ "ಗೌರಿ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಶೇಷಾದ್ರಿಪುರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ ಶುಭ ಕೋರಿದರು. ಮೂವತ್ತಕ್ಕೂ ಅಧಿಕ ವರ್ಷಗಳ ಕಾಲ ಡಾ||ರಾಜಕುಮಾರ್ ಅವರ ಬಳಿ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವ ಚನ್ನ ಅವರು ಕ್ಯಾಮೆರಾ ಚಾಲನೆ ಮಾಡಿದರು. ಕನ್ನಡ ಚಿತ್ರರಂಗಕ್ಕೆ ಈಗ ಒಳ್ಳೆಯ ಕಾಲ. ವಿಶ್ವದಾದ್ಯಂತ ಕನ್ನಡ ಸಿನಿಮಾಗಳು ಹೆಸರು ಮಾಡುತ್ತಿದೆ. ಅದರಲ್ಲೂ ....
*ಪಾರ್ಟಿ ಪ್ರಿಯರ ಪ್ರಿಯವಾದ ಹಾಡು ಬಿಡುಗಡೆಯಾಗಿದೆ "ಶುಗರ್ ಫ್ಯಾಕ್ಟರಿ" ಯಲ್ಲಿ.* ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ "ಶುಗರ್ ಫ್ಯಾಕ್ಟರಿ" ಚಿತ್ರ ಆರಂಭದ ದಿನದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್ ಮಂತ್ರಿಮಾಲ್ ನಲ್ಲಿ ಬಿಡುಗಡೆಯಾಯಿತು. ಅಲ್ಲಿ ನೆರದಿದ್ದ ಅಪಾರ ಜನಸ್ತೋಮ ಶೀರ್ಷಿಕೆ ಹಾಡು ಬಿಡುಗಡೆಗೆ ಸಾಕ್ಷಿಯಾದರು. ಅಲ್ಲಿದ್ದ ಆರು ಜನ ಸಿನಿಪ್ರೇಕ್ಷಕರೆ, ಈ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಪಾರ್ಟಿಯಲ್ಲಿ ಹಾಡಿ, ಕುಣಿಯುವ ಈ ಹಾಡು, ಪಾರ್ಟಿ ಪ್ರಿಯರಿಗೆ ಸರ್ವಕಾಲಕ್ಕೂ ಮೆಚ್ಚುಗೆಯ ಗೀತೆಯಾಗಲಿದೆ. ತಮ್ಮ ವಿಶಿಷ್ಟ ಕಂಠದ ಮೂಲಕ ....
ಯದ್ಬಾವಂ ತದ್ಭವತಿ ಟೀಸರ್ ಅನಾವರಣ ಏಕ ವ್ತಕ್ತಿ ಅಭಿನಯದ ‘ಯದ್ಬಾವಂ ತದ್ಭವತಿ’ ಚಿತ್ರದ ಟೀಸರ್‌ನ್ನು ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಸಿನಿಮಾ ಮತ್ತು ಕಿರುತೆರೆಯಲ್ಲಿ ನಟನಾಗಿರುವ ಅಮಿತ್‌ರಾವ್ ವಿನೂತನ ರೀತಿಯ ಪ್ರಯೋಗಕ್ಕೆ ನಾಯಕ ಹಾಗೂ ನಿರ್ದೇಶನ ಮಾಡಿರುವುದು ವಿಶೇಷ. ಈ ಕುರಿತಂತೆ ಮಾತನಾಡಿರುವ ಅವರು ಇದೊಂದು ಒಬ್ಬನೇ ನಟಿಸಿರುವ ಚಿತ್ರ. ಕನ್ನಡದಲ್ಲಿ ಒಂದೇ ಪಾತ್ರದ ಸಿನಿಮಾಗಳು ಬಂದಿದ್ದರೂ, ಇದು ಅದೆಲ್ಲಕ್ಕಿಂತ ಭಿನ್ನವಾಗಿ ಮೂಡಿಬಂದಿದೆ. ನಾನು ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆ ಹೇಳುವಂತೆ ನಾವು ನೋಡುವ ....
ಟೀನೇಜ್ ಹುಡುಗರ ಹುಡುಕಾಟ, ತುಂಟಾಟ ‘ಯೋಗರಾಜ ಸಿನಿಮಾಸ್’ ಹಾಗೂ ‘ರವಿ ಶಾಮನೂರು ಫಿಲಿಂಸ್’ ಜಂಟಿಯಾಗಿ ನಿರ್ಮಾಣ ಮಾಡಿರುವ ‘ಪದವಿ ಪೂರ್ವ’ ಚಿತ್ರವು ಡಿಸೆಂಬರ್ ೩೦ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಪ್ರಚಾರ ಕಾರ್ಯ ಶುರುವಾಗಿದೆ. ಅದರಂತೆ ಮೊನ್ನೆಯಷ್ಟೇ ಟೀಸರ್‌ನ್ನು ಜಗ್ಗೇಶ್ ಬಿಡುಗಡೆ ಮಾಡಿದರು. ನಂತರ ಮಾತನಾಡಿ ಬಹುತೇಕ ಹೊಸ ಹುಡುಗರೇ ಕಾಣಿಸಿಕೊಂಡಿದ್ದು, ತುಣುಕುಗಳು ಗಮನ ಸೆಳೆಯುವಂತಿದ್ದು, ನಮ್ಮ ಟೀನೇಜ್ ದಿನಗಳನ್ನು ನೆನಪಿಸುವಂತಿದೆ. ಇಬ್ಬರು ಮೂಗರು ಮದುವೆ ಆದರೆ ಬದುಕು ಸುಂದರ. ಮಾತೇ ಮರೆತಂತೆ ಕೆಲಸ ಮಾಡುವ ನಿರ್ದೇಶಕ, ಛಾಯಾಗ್ರಾಹಕ ಇವರಿಬ್ಬರ ಶ್ರಮ ನೋಡಿದಾಗ ಸಿನಿಮಾನೂ ಸೂಪರ್ ....
ಜಗತ್ತಿನಾದ್ಯಂತ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಾಳೆ ’ವಿಜಯಾನಂದ’ ಬಿಡುಗಡೆ ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ’ವಿಜಯಾನಂದ’ ಚಿತ್ರವು ಡಿಸೆಂಬರ್ 9ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಜಗತ್ತಿನಾದ್ಯಂತ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. 1976ರಲ್ಲಿ ಒಂದು ಟ್ರಕ್ನಿಂದ ಪ್ರಾರಂಭವಾಗಿ ಇಂದು ಭಾರತದ ಅತೀ ದೊಡ್ಡ ಲಾಜಿಸ್ಟಿಕ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಆರ್ಲ್ ಸಂಸ್ಥೆಯ ಮಾಲೀಕರಾಗಿರುವ ವಿಜಯ ....
*ಜನವರಿ 6ಕ್ಕೆ "ಮರೆಯದೆ ಕ್ಷಮಿಸು "* ಆರ್.ವಿ.ಎಸ್ ಪ್ರೊಡಕ್ಷನ್ ನಡಿ , ವಿ. ಶಿವರಾಂ ನಿರ್ಮಾಣದ, ಕೆ. ರಾಘವ್ ನಿರ್ದೇಶನದ ’ಮರೆಯದೆ ಕ್ಷಮಿಸು ’ ಚಿತ್ರ 2023 ರ ಜನವರಿ 6 ರಂದು ಬಿಡುಗಡೆಯಾಗಲಿದೆ. ಬಿಡುಗಡೆ ದಿನಾಂಕ ಘೋಷಿಸಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಡಿ.ಸಿ.ಪಿ ಮಂಜುನಾಥ್ ಬಾಬು ಹಾಗೂ ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ, ಬಿಡುಗಡೆ ದಿನಾಂಕ ಘೋಷಣೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಇಲ್ಲಿ ಯಾರಿಗೆ ಯಾರು ಕ್ಷಮಿಸು ಎನ್ನುತ್ತಾರೆ ಎನ್ನುವುದನ್ನು ಚಿತ್ರ ನೋಡಿಯೇ ತಿಳಿಯಬೇಕು. ಉತ್ತಮ ಕಥಾಹಂದರದೊಂದಿಗೆ, ಉತ್ತಮ ತಂಡದೊಂದಿಗೆ ಈ ಚಿತ್ರ ಸಿದ್ದವಾಗಿದೆ. ಹೊಸವರ್ಷಕ್ಕೆ ನಮ್ಮ ಚಿತ್ರ ....
*"ಕುದ್ರು"ವಿನಲ್ಲಿ ಸಾಮರಸ್ಯ ಹಾಗೂ ಸಹಬಾಳ್ವೆ.* *ಉತ್ತಮ ಸಂದೇಶ ಹೊತ್ತು ಬರುತ್ತಿದೆ ಮತ್ತೊಂದು ಕರಾವಳಿ ಭಾಗದ ಚಿತ್ರ.* ಇತ್ತೀಚಿಗೆ ದಕ್ಷಿಣ ಕನ್ನಡದ ಭವ್ಯ ಪರಂಪರೆಯ ಕುರಿತಾದ ಚಿತ್ರಗಳು ಹೆಚ್ಚು ಬರುತ್ತಿದೆ. "ಕುದ್ರು" ಸಹ ಅದೇ ಸುಂದರ ಪರಿಸರದಲ್ಲಿ ನಡೆಯವ ಕಥೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದರು. ನಾನು ಮೂಲತಃ ಉಡುಪಿಯವನು. ನೀರಿನಿಂದ ಸುತ್ತುವರೆದ ದ್ವೀಪವನ್ನು ತುಳುವಿನಲ್ಲಿ "ಕುದ್ರು ಎನ್ನುತ್ತಾರೆ. ಈ ಚಿತ್ರದ ಕಥೆಯನ್ನು ನಾನೇ ಬರೆದಿದ್ದೇನೆ. ಮಧು ವೈ ಜಿ ಹಳ್ಳಿ ನಿರ್ದೇಶನ ಮಾಡಿದ್ದಾರೆ. "ಕುದ್ರು" ದ್ವೀಪದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮೂರು ....
*ಜಾಕ್ ಮಂಜು ನಿರ್ಮಾಣದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ - ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ ‘ಪಾದರಾಯ’ ಚಿತ್ರ.* ಚಕ್ರವರ್ತಿ ಚಂದ್ರಚೂಡ್ ಮತ್ತೆ ನಿರ್ದೇಶನ ಟ್ರ್ಯಾಕ್ ಗೆ ಮರಳಿದ್ದಾರೆ. ಹನುಮ ಜಯಂತಿಯಂದೇ ತಮ್ಮ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಟೈಟಲ್ ಅನಾವರಣ ಮಾಡಿದ್ದಾರೆ. ಚಿತ್ರಕ್ಕೆ ‘ಪಾದರಾಯ’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ‘ಮೈನಾ’. ‘ಸಂಜು ವೆಡ್ಸ್ ಗೀತಾ’ ಖ್ಯಾತಿಯ ನಿರ್ದೇಶಕ ನಾಗಶೇಖರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ನೈಜ ಘಟನೆ ಆಧರಿಸಿದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ....
ತನುಜಾ ಟ್ರೇಲರ್ ಬಿಡುಗಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರಭಟ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ತನುಜಾ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಗೊಂಡಿತು. ಕೊರೋನಾ ವೇಳೆ ನಿಟ್ ಪರೀಕ್ಷೆ ಬರೆಯಲಾಗದೆ ಒದ್ದಾಡಿದ ಹುಡುಗಿಗೆ ಮುಖ್ಯಮಂತ್ರಿಗಳೇ ಕೇಂದ್ರದ ನೆರವು ಪಡೆದು ಪರೀಕ್ಷೆ ಬರೆಯಲು ಸಹಕರಿಸುವ ಕಥೆ ಇದಾಗಿದೆ. ಅಂದು ಸುದ್ದಿಯು ಕರ್ನಾಟಕ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಶಿವಮೊಗ್ಗ ಜಿಲ್ಲೆಯ ಕುಗ್ರಾಮದ ಹುಡುಗಿ ತನುಜಾ ಬೆಂಗಳೂರಿಗೆ ಬಂದು ನೀಟ್ ಎಕ್ಸಾಂ ಬರೆದ ಅಂಶಗಳನ್ನು ತೆಗೆದುಕೊಂಡು ಸಿನಿಮಾ ರೂಪಕ್ಕೆ ....
*ಟೀಸರ್ ಮೂಲಕ ಕುತೂಹಲ ಹುಟ್ಟಿಸಿರುವ ’ರಾಕ್ಷಸರು’* ಹಿರಿಯ ನಟ ಸಾಯಿಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ’ರಾಕ್ಷಸರು’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ಇದೇ ಡಿಸೆಂಬರ್ 16 ರಂದು ತೆರೆ ಕಾಣುತ್ತಿದೆ. ಟೀಸರ್ ಸಹ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ’ಗಟ್ಟಿ ಗುಂಡಿಗೆ ಇರೋರ್ಗೆ ಮಾತ್ರ’ ಎಂಬ ಅಡಿಬರಹ ಈ ಚಿತ್ರಕ್ಕಿದೆ. ಚಿತ್ರಕ್ಕೆ ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿದ್ದು ಸಂಭಾಷಣೆಗೆ ರಾಜಶೇಖರ್ ಪೆನ್ನು ಕೆಲಸ ಮಾಡಿದೆ. ರಜತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಯಶಸ್ವಿ ನಿರ್ಮಾಪಕ ರಮೇಶ್ ಕಶ್ಯಪ್ ’ಗರುಡಾದ್ರಿ ....
ಹೊಸಬರ ’ವಿಚಾರಣೆ’ ಚಿತ್ರಕ್ಕೆ ಅದ್ಧೂರಿ ಮುಹೂರ್ತ ಸಮಾರಂಭ ಕನ್ನಡದಲ್ಲಿ ಈಗ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಿದೆ. ಹೊಸ ಬಗೆಯ ಸಿನಿಮಾಗಳು ಕೂಡ ಸೆಟ್ಟೇರುತ್ತಿವೆ. ಆ ಸಾಲಿಗೆ ’ವಿಚಾರಣೆ’ ಎಂಬ ಚಿತ್ರವೂ ಸೇರಿದೆ. ಹೌದು, ಡಿಸೆಂಬರ್ 2 ರಂದು ಬನ್ನೇರಘಟ್ಟ ರಸ್ತೆಯ ಶಾಂತಿನಿಕೇತನ್ ಅರೆಕೆರೆಯ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ನೆರವೇರಿತು. ಯಶ ಫಿಲಂಸ್ ಬ್ಯಾನರ್ ನಡಿ ಈ ಚಿತ್ರವನ್ನು ಆರ್. ಭಾಗ್ಯ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣಕ್ಕೂ ಮೊದಲು ನಿರ್ಮಾಪಕಿ ಭಾಗ್ಯ ಅವರು, ’ಪಟ್ಟಾಭಿಷೇಕ’, ’ಬೆಲ್’ ಮತ್ತು ’ ಎಫ್ ಐ ಆರ್’ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ....
" *ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4"ರ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ.* 2019 ರಲ್ಲಿ ಆರಂಭವಾಗಿ 3 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ "ಟೆಲಿವಿಷನ್ ಕ್ರಿಕೆಟ್ ಲೀಗ್" ನ 4 ನೇ ಆವೃತ್ತಿ (ಸೀಸನ್ 4) ಸದ್ಯದಲ್ಲೇ ಆರಂಭವಾಗಲಿದೆ. ಇತ್ತೀಚಿಗೆ ಈ ಕ್ರಿಕೆಟ್ ಪಂದ್ಯಾವಳಿಯ ಜರ್ಸಿ ಹಾಗೂ ಟ್ರೋಫಿ ಬಿಡೆಗಡೆ ಸಮಾರಂಭ ಲುಲು ಗ್ಲೋಬಲ್ ಮಾಲ್ ನಲ್ಲಿ ನಡೆಯಿತು. ಖ್ಯಾತ ನಟ ನೀನಾಸಂ ಸತೀಶ್, ಹೊಂಬಾಳೆ ಸಂಸ್ಥೆಯ ಶೈಲಜಾ ವಿಜಯ್ ಕಿರಗಂದೂರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೋಫಿ ಹಾಗೂ ಜರ್ಸಿ ಬಿಡುಗಡೆ ಮಾಡಿದರು. ದೀಪಕ್ "ಟೆಲಿವಿಷನ್ ಕ್ರಿಕೆಟ್ ಲೀಗ್" ನ ಫೌಂಡರ್. ಮಂಜೇಶ್ ಮತ್ತು ದಿವ್ಯ ....
*'ಥಗ್ಸ್ ಆಫ್ ರಾಮಘಡ’ ಮೊದಲ ಸಾಂಗ್ ಬಿಡುಗಡೆ- ಮುಂದಿನ ವರ್ಷ ಸಿನಿಮಾ ತೆರೆಗೆ* ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ ಹಾಡನ್ನು ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ನಿರ್ದೇಶಕ ಕಾರ್ತಿಕ್ ನಿರ್ದೇಶಿಸಿರುವ ಮೊದಲ ಸಿನಿಮಾ ಇದಾಗಿದ್ದು, ಹಾಡು ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಚಿತ್ರತಂಡ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು ಪ್ರೀತಿಯ ಹಾಡಿಗೆ ಹೆಸರಾಂತ ಗಾಯಕರಾದ ....
*ವಿವಿಧ ಮಠಾಧೀಶರ ಹಾಗೂ ಗಣ್ಯರ ಸಮ್ಮುಖದಲ್ಲಿ "ವಿರಾಟಪುರ ವಿರಾಗಿ" ಚಿತ್ರದ ಮೊದಲ ನೋಟ ಅನಾವರಣ.* *ಇದು ಆಧುನಿಕ ಬಸವಣ್ಣ ಪೂಜ್ಯ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧಾರಿತ ಚಿತ್ರ.* ಆಧುನಿಕ ಬಸವಣ್ಣ ಎಂದೇ ಖ್ಯಾತರಾಗಿರುವ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧಾರಿತ "ವಿರಾಟಪುರ ವಿರಾಗಿ" ಚಿತ್ರದ ಮೊದಲ ನೋಟ ಇತ್ತೀಚಿಗೆ ಬಿಡುಗಡೆಯಾಯಿತು. ಶ್ರೀಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀ ಸದಾಶಿವ ಮಹಾಸ್ವಾಮಿಗಳು ಹಾವೇರಿ, ಶ್ರೀ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಘನಬಸವ ಅಮರೇಶ್ವರ ಮಹಾಸ್ವಾಮಿಗಳು ಶಿವಮೊಗ್ಗ, ಕರ್ನಾಟಕ ಚಲನಚಿತ್ರ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಪದ್ಮಶ್ರೀ ಪುರಸ್ಕೃತ ....
*"ಹೇ ಬ್ರೋ" ಎನ್ನುತ್ತಾ ಬಂದ ಸೂರಜ್ ಮುಖೇಶ್* *ಅದ್ದೂರಿ ಆಲ್ಬಮ್ ಸಾಂಗ್ ಬಿಡುಗಡೆ ಮಾಡಿ ಹಾರೈಸಿದ ಸಿನಿ ದಿಗ್ಗಜರು.* ಚಿಕ್ಕ ವಯಸ್ಸಿನಿಂದಲೂ ಅಭಿನಯದ ಬಗ್ಗೆ ಆಸಕ್ತಿ ಹೊಂದಿರುವ ಸೂರಜ್ ಮುಖೇಶ್ ತಮ್ಮ ಮೊದಲ ಹೆಜ್ಜೆಯಾಗಿ "ಹೇ ಬ್ರೋ" ಎಂಬ ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಈ ಆಲ್ಬಂ ಸಾಂಗ್ ನ ಬಿಡುಗಡೆ ಹಾಗೂ ತನ್ವಿ ಪಿಕ್ಚರ್ಸ್ ಬ್ಯಾನರ್ ನ ಅನಾವರಣ ಸಮಾರಂಭ ನಡೆಯಿತು. ಆನಂದ್ ಆಡಿಯೋ ಮೂಲಕ "ಹೇ ಬ್ರೋ" ಹಾಡು ಬಿಡುಗಡೆಯಾಗಿದೆ. ಖ್ಯಾತ ನಟ ನೀನಾಸಂ ಸತೀಶ್ ಹಾಗೂ ಖ್ಯಾತ ಸಿಂಗರ್ ALL OK "ಹೇ ಬ್ರೋ" ವಿಡಿಯೋ ಹಾಡನ್ನು ಬಿಡುಗಡೆ ಮಾಡಿದರು. ನಟ ಪ್ರಮೋದ್ ಹಾಗೂ ಚಿತ್ರರಂಗದ ಹೆಸರಾಂತ ನಿರ್ಮಾಪಕರು ಸೇರಿ ತನ್ವಿ ಪಿಕ್ಚರ್ಸ್ ಬ್ಯಾನರ್ ....
*ಡಿಸೆಂಬರ್ 9 ರಿಂದ ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ "ಹೊಸ ದಿನಚರಿ".* ಬೆಳಗ್ಗಿನಿಂದ ಸಂಜೆಯ ತನಕ ಇಡೀ ದಿನ ಏನೆಲ್ಲಾ ಮಾಡಬೇಕೆಂಬ ದಿನಚರಿಯನ್ನು ಸಾಮಾನ್ಯವಾಗಿ ಎಲ್ಲರೂ ರೂಡಿಸಿಕೊಂಡಿರುತ್ತಾರೆ. ಆದರೆ ಏನಿದು " ಹೊಸ ದಿನಚರಿ"? ಈ ಪ್ರಶ್ನೆಗೆ ಉತ್ತರ ಡಿಸೆಂಬರ್ 9 ರಂದು ಸಿಗಲಿದೆ. ಇದೇ ಹೆಸರಿನ ಚಿತ್ರ ಕರ್ನಾಟಕದಾದ್ಯಂತ ಅಂದು ಬಿಡುಗಡೆಯಾಗಲಿದೆ. ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಕೆಲವು ವಿಷಯಗಳನ್ನು ಹಂಚಿಕೊಂಡರು. ನಾನು ಈ ಹಿಂದೆ "ಆಯನ" ಎಂಬ ಚಿತ್ರ ನಿರ್ದೇಶಿಸಿದ್ದೆ. ಈಗ "ಹೊಸ ದಿನಚರಿ" ಚಿತ್ರವನ್ನು ನಿರ್ಮಾಣ ಮಾಡಿದ್ದೀನಿ. ನನ್ನ ಮಿತ್ರರಾದ ಮೃತ್ಯುಂಜಯ ಶುಕ್ಲ ಹಾಗೂ ಅಲೋಕ್ ಚೌರಾಸಿಯಾ ....
ಕ್ರೈಂ ಥ್ರಿಲ್ಲರ್ ಕುರಿತಾದ ಪ್ರಾಯಶ: ಕಿರುತೆರೆಯಲ್ಲಿ ಕೆಲಸ ಮಾಡಿರುವ ಪ್ರತಿಭೆಗಳು ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಆಗಿದೆ. ಅದರಂತೆ ಹತ್ತು ವರ್ಷಗಳ ಕಾಲ ಧಾರವಾಹಿಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಕುಂದಾಪುರದ ರಂಜಿತ್‌ರಾವ್ ಮೊದಲಬಾರಿ ‘ಪ್ರಾಯಶ:’ ಎನ್ನುವ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಮೂರು ಹಾಡುಗಳಿಗೆ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಅರ್ಹ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಕ್ರೈಂ ಥ್ರಿಲ್ಲರ್ ಕಥೆಯಲ್ಲಿ ಪ್ರೀತಿಯ ಏಳೆಯೊಂದು ಸೇರಿಕೊಂಡಿರುತ್ತದೆ. ಚಿತ್ರದಲ್ಲಿ ರೇಪ್ ಅಂಡ್ ....