*ವೈರಂ ಚಿತ್ರದ ಟೀಸರ್ ಬಿಡುಗಡೆ* ಒಬ್ಬ ಆಂಗ್ರಿ ಯಂಗ್ ಮ್ಯಾನ್ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ಚಿತ್ರ ವೈರಂ. ಹಿರಿಯನಟ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಅಭಿನಯದ ದ್ವಿತೀಯ ಚಿತ್ರವೂ ಇದಾಗಿದ್ದು, ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಟೀಸರ್ ಬಿಡುಗಡೆ ಮಾಡಿದ ದೇವರಾಜ್ ಅವರು ಮಾತನಾಡುತ್ತಾ, ಕನ್ನಡ ಚಿತ್ರರಂಗ ಈಗ ಮತ್ತೆ ಬ್ಯುಸಿಯಾಗಿದೆ. ಇಂತಹ ಸಮಯದಲ್ಲಿ ನನ್ನ ಮಗನ 2ನೇ ಸಿನಿಮಾ ಬರುತ್ತಿದೆ. ನಿರ್ದೇಶಕ ಸಾಯಿಶಿವನ್ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ....
ಸುರಪಾನ ಸೇವಿಸುವವನು ಸುರಾರಿ
ಕನ್ನಡ ಅಲ್ಲದೆ ಹಿಂದಿ,ತೆಲುಗು ಮತ್ತು ತಮಿಳು ಭಾಷೆಯಲ್ಲಿ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಸುರಾರಿ’ ಚಿತ್ರದ ಟೀಸರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ರಚನೆ,ಚಿತ್ರಕಥೆ,ಸಂಭಾಷಣೆ,ನಿರ್ದೇಶನ ಹಾಗೂ ನಾಯಕನಾಗಿ ಅಭಿನಯಿಸಿರುವುದು ವಿಶಾಲಜಯ. ಐರಿಸ್ ಸ್ಟುಡಿಯೋ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.
ಆಗೋದೆಲ್ಲಾ ಒಳ್ಳೇದಕ್ಕೆ ಹಾಡುಗಳ ಬಿಡುಗಡೆ
ಗಿನ್ನಿಸ್ ದಾಖಲೆಯ ‘ದರ್ಪಣ’ ಮತ್ತು ಬಿಡುಗಡೆಯಾಗಬೇಕಾದ ‘ಪರಿಶುದ್ದಂ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಆರೋನ್ ಕಾರ್ತಿಕ್ ವೆಂಕಟೇಶ್ ಈಗ ‘ಆಗೋದೆಲ್ಲಾ ಒಳ್ಳೇದಕ್ಕೆ’ ಸಿನಿಮಾಕ್ಕೆ ರಚನೆ, ಚಿತ್ರಕಥೆ, ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಸೀಗೆಹಳ್ಳಿಯ ಎ.ಎಸ್.ಲೋಹಿತ್ ಅವರು ಬಿನಿಶಾ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
೫ಡಿ ಲಿರಿಕಲ್ ಸಾಂಗ್ ಬಿಡುಗಡೆ, ಬ್ಲಡ್ ಮಾಫಿಯಾ ಸುತ್ತ ನಡೆಯೋ ಕಥೆ ಕನ್ನಡ ಚಿತ್ರರಂಗಕ್ಕೆ ಹಲವಾರು ಯಶಸ್ವೀ ಚಲನಚಿತ್ರಗಳನ್ನು ಕೊಟ್ಟಂಥ ನಿರ್ದೇಶಕ ಎಸ್.ನಾರಾಯಣ್ ಬಹಳ ದಿನಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿಸಿರುವ ಚಿತ್ರ 5ಡಿ. ನಾರಾಯಣ್ ಅವರು ತಮ್ಮ೩೦ ವರ್ಷಗಳ ಅನುಭವವನ್ನು ಈ ಸಿನಿಮಾ ಮೇಲೆ ಹಾಕಿದ್ದಾರೆ. 1ಟು 100 ಡ್ರೀಮ್ ಮೂವೀಸ್ ಲಾಂಚನದಲ್ಲಿ ಸ್ವಾತಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರದಲ್ಲಿ ನಟ ಆದಿತ್ಯ, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಸು ಪಿಸು ಮಾತು ಹಾಗೂ ಅಮ್ಮ ಎಂಬ ಲಿರಿಕಲ್ ಹಾಡನ್ನು ಫಿಲಂ ....
ಕೊನೆ ಹಂತದಲ್ಲಿ ಗರಡಿ ಸೌಮ್ಯ ಫಿಲಿಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ವನಜಾಪಾಟೀಲ್ ನಿರ್ಮಾಣ ಮಾಡುತ್ತಿರುವ ‘ಗರಡಿ’ ಸಿನಿಮಾದ ಕೊನೆ ದಿನದ ಚಿತ್ರೀಕರಣವು ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಮಾಧ್ಯಮದವರು ಸೆಟ್ಗೆ ಭೇಟಿ ನೀಡಿದಾಗ ತಂಡವು ಅನುಭವಗಳನ್ನು ಹಂಚಿಕೊಂಡಿತು. ನಿರ್ದೇಶಕ ಯೋಗರಾಜಭಟ್ಟರು ಮಾತನಾಡಿ ಇಲ್ಲಿಯವರೆಗೂ ೭೦ ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಕಳೆದ ವರ್ಷ ಶುರುಮಾಡಿದ್ದು ಹೊಸ ವರ್ಷದಲ್ಲಿ ಮುಗಿಯುತ್ತಿದೆ. ಬಹುದೊಡ್ಡ ತಾರಗಣವಿದೆ. ವಿಕಾಸ್ ಚೆನ್ನಾಗಿ ಕಥೆ ಮಾಡಿಕೊಟ್ಟಿದ್ದಾರೆ. ದರ್ಶನ್ ಆರಂಭದಿಂದಲೂ ನಮಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ....
ಪ್ರೇಮ್, ಸಪ್ತಮಿಗೌಡ ಅವರಿಗೆ ಫ್ಲೆಮಿಂಗೋ ಪ್ರಶಸ್ತಿ ಕಳೆದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಹಲವಾರು ಕಲಾವಿದ, ತಂತ್ರಜ್ಞರನ್ನು ಕೊಡುಗೆಯಾಗಿ ನೀಡಿದ ಫ್ಲೆಮಿಂಗೋ ಸೆಲಬ್ರಟೀಸ್ ವರ್ಲ್ಡ್ ಸಂಸ್ಥೆ ಈಗ ದಶಕದ ಸಂಭ್ರಮದಲ್ಲಿದೆ. ಯುವನಟ ದವನ್ ಸೋಹಾ ಅವರ ಸಾರಥ್ಯದಲ್ಲಿ ಬೆಳೆದುಬಂದಿರುವ ಈ ಸಂಸ್ಥೆಯಲ್ಲಿ ಕನ್ನಡದ ಹಲವಾರು ಹಿರಿಯರು ಕೆಲಸ ಮಾಡಿದ್ದಾರೆ. ಬೂದಾಳು ಕೃಷ್ಣಮೂರ್ತಿ, ರೇಖಾದಾಸ್, ಸರಿಗಮವಿಜಿ, ಆರ್.ಟಿ.ರಮಾ, ಮೋಹನ್ ಮುಂತಾದವರು ಇಲ್ಲಿ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಸೋಮವಾರ ಈ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ರಾಜಾಜಿನಗರದಲ್ಲಿರುವ ಸಂಸ್ಥೆಯ ಆವರಣದಲ್ಲಿ ನಡೆಯಿತು. ಪ್ರೇಮಂ ....
*ತ್ರಿಕೋನ ಪ್ರೇಮಕಥೆಯ "ಓ ಮನಸೇ" ಚಿತ್ರದ ಟೀಸರ್ ಬಿಡುಗಡೆ.* ಶ್ರೀ ಫ್ರೆಂಡ್ಸ್ ಮೂವೀ ಮೇಕರ್ ಲಾಂಛನದಲ್ಲಿ ನಿರ್ಮಾಣವಾಗಿರುವ, ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಪ್ರಮುಖಪಾತ್ರದಲ್ಲಿ ನಟಿಸಿರುವ "ಓ ಮನಸೇ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಈ ಚಿತ್ರದ ಕುರಿತು ಮಾತನಾಡಿದರು. ನಾನು ಕೊರೋನ ಒಂದನೇ ಅಲೆ ಮುಗಿದ ಮೇಲೆ ನಿರ್ಮಾಪಕರಲೊಬ್ಬರಾದ ರಾಮು ಅವರ ಬಳಿ ಈ ಚಿತ್ರದ ಕಥೆ ಹೇಳಿದೆ. ಅವರಿಗೆ ಕಥೆ ಇಷ್ಟವಾಗಿ, ತಮ್ಮ ಮಿತ್ರರ ಒಡಗೂಡಿ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಆನಂತರ ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಅವರಿಗೆ ಚಿತ್ರದ ಕಥೆ ಹೇಳಲಾಯಿತು. ಅವರು ಸಹ ನಟಿಸಲು ಒಪ್ಪಿದರು. ಸಂಚಿತಾ ....
*ಸ್ನೇಹಿತರಿಂದ ಸ್ನೇಹಿತರಿಗಾಗಿ "ಮಧುಪಾನ ದ ಹೊಸಪಾಠ".* *ಹೊಸವರ್ಷಕ್ಕೆ ಬಂತು ಹೊಸ ಪಾರ್ಟಿ ಸಾಂಗ್.* ಅವರೆಲ್ಲಾ ಸುಮಾರು ಇಪ್ಪತ್ತಕ್ಕೂ ಅಧಿಕ ವರ್ಷಗಳ ಸ್ನೇಹಿತರು. ಅಂತಹ ಸ್ನೇಹವೃಂದದಿಂದ "ಮಧುಪಾನದ ಹೊಸಪಾಠ" ಎಂಬ ಪಾರ್ಟಿ ಸಾಂಗ್ ಹೊಸವರ್ಷದ ಹೊಸ್ತಿಲಿನಲ್ಲಿ ಬಿಡುಗಡೆಯಾಗಿದೆ. ಈ ಕರಿತು ಆಲ್ಬಂ ಸಾಂಗ್ ತಂಡದ ಸದಸ್ಯರು ಮಾಧ್ಯಮದ ಮುಂದೆ ಮಾಹಿತಿ ನೀಡಿದರು. ನನಗೆ ಕೆಲವುವರ್ಷಗಳಿಂದ rap singer ಆಗಬೇಕೆಂದು ಕನಸು. ಎಷ್ಟೋ ಜನ ಖ್ಯಾತ rap singers ನನಗೆ ಸ್ಪೂರ್ತಿ. ಇಪ್ಪತ್ತು ವರ್ಷಗಳಾದರೂ ನಾನು ಒಂದು ಆಲ್ಬಂ ಸಾಂಗ್ ಬಿಡುಗಡೆ ಮಾಡಲು ಆಗಿರಲಿಲ್ಲ. ಆನಂತರ ನನ್ನ ಗೆಳೆಯ ದಕ್ಷಿಣಮೂರ್ತಿ ಸಿಗುತ್ತಾರೆ. ಈ ಆಲ್ಬಂ ಸಾಂಗ್ ಮಾಡುವ ವಿಚಾರ ತಿಳಿಸುತ್ತಾರೆ. ಆಗ " ....
*ರೂಪೇಶ್ ಶೆಟ್ಟಿ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಚಿತ್ರದ ಟ್ರೇಲರ್ ರಿಲೀಸ್- ಜನವರಿ 13ಕ್ಕೆ ಸಿನಿಮಾ ಬಿಡುಗಡೆ* ಗಗನ್. ಎಂ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ಜನವರಿ13ಕ್ಕೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ, ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ, ಪಂಚಮಿ ರಾವ್ ಮುಖ್ಯ ಭೂಮಿಕೆಯ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದಿರುವ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಗಗನ್. ಎಂ ಮಾತನಾಡಿ ಕಿರುಚಿತ್ರ, ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದೇನೆ. ತುಳು ....
*"ಬಾನ ದಾರಿಯಲ್ಲಿ" ಬಂತು ಇಂಪಾದ ಹಾಡು..* ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ "ಬಾನದಾರಿಯಲ್ಲಿ" ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ "ನಿನ್ನನ್ನು ನೋಡಿದ ನಂತರ" ಎಂಬ ಗೀತೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು "ಬಾನ ದಾರಿಯಲ್ಲಿ" ಬಗ್ಗೆ ಮಾತನಾಡಿದರು. ಇದು ಕೊರೋನ ಸಮಯದಲ್ಲಿ ಅಂದರೆ ಸುಮಾರು ಎರಡುವರೆ ವರ್ಷಗಳ ಹಿಂದೆ ನಾನು ಹಾಗೂ ಪ್ರೀತಾ ಜಯರಾಂ ಸೇರಿ ಮಾಡಿದ ಕಥೆ. ಈಗ ಚಿತ್ರೀಕರಣ ....
ಹೀಗೊಂದು ಕೈ ಜಾರಿದ ಪ್ರೀತಿ
ಪ್ರೀತಿಯ ಕುರಿತಂತೆ ಅರ್ಥಪೂರ್ಣ ಸಂದೇಶ ಸಾರಿರುವ ‘ಕೈ ಜಾರಿದ ಪ್ರೀತಿ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕಥೆ, ಚಿತ್ರಕಥೆ,ಸಂಭಾಷಣೆ, ಐದು ಹಾಡುಗಳಿಗೆ ಸಾಹಿತ್ಯ, ನಿರ್ದೇಶನ ಮಾಡುವ ಜತೆಗೆ ಚೈತ್ರಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಎರಡನೇ ಬಾರಿ ಪುಷ್ಪಭದ್ರಾವತಿ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ‘ನಾವೆಲ್ಲಾ ಭಾರತೀಯರು’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇವರ ಮಗಳು ಮಂಜುಶ್ರೀಶೆಟ್ಟಿ.ಕೆ.ಆರ್ ನಾಯಕಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ತಂಗಿ ಮಧುಶೆಟ್ಟಿ.ಕೆ.ಆರ್ ಸಹ ನಾಯಕಿಯಾಗಿದ್ದಾರೆ.
*ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ ಡಾಲಿ ಗೆಳೆಯರ ಬಳಗದ "ಆರ್ಕೇಸ್ಟ್ರಾ ಮೈಸೂರು"* *ಸಂಕ್ರಾಂತಿ ಸಮಯಕ್ಕೆ ಬರುತ್ತಿದೆ ಕನ್ನಡದ ಸಿನಿಮಾ* ಗಣೇಶನ ಹಬ್ಬ, ರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಎಲ್ಲಾ ಕಡೆ "ಆರ್ಕೇಸ್ಟ್ರಾ" ಗಳದೇ ಕಾರುಬಾರು. ಇಂತಹ "ಆರ್ಕೇಸ್ಟ್ರಾ" ಆರಂಭವಾಗಿದ್ದು ಮೈಸೂರಿನಲ್ಲೇ ಎನ್ನುತ್ತಾರೆ. "ಆರ್ಕೇಸ್ಟ್ರಾ" ಕಥೆ ಆಧರಿಸಿರುವ "ಆರ್ಕೇಸ್ಟ್ರಾ ಮೈಸೂರು" ಎಂಬ ಚಿತ್ರ ಜನವರಿ 12 ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಮೂಲತಃ ಮೈಸೂರಿನವರಾದ ಡಾಲಿ ಧನಂಜಯ್ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾವಿದು. ಅದರಲ್ಲೂ ಡಾಲಿ ....
ಛೂ ಮಂತರ್ ಅಂತಾರೆ ಶರಣ್ ಜನರನ್ನು ನಗಿಸುತ್ತಿರುವ ಶರಣ್ ಈಗ ಹಾರರ್ ಚಿತ್ರ ‘ಛೂ ಮಂತರ್’ದಲ್ಲಿ ನಟಿಸಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭವು ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶರಣ್ ನಾನು ಚಿಕ್ಕ ವಯಸ್ಸಿನಿಂದಲೂ ಹಾರರ್ ಚಿತ್ರಗಳ ಅಭಿಮಾನಿ. ಇಂತಹ ಸಿನಿಮಾಗಳನ್ನು ಸಾಕಷ್ಟು ನೋಡಿದ್ದೇನೆ. ನವನೀತ್ ಚೆನ್ನಾಗಿ ಕಥೆಯನ್ನು ಮಾಡಿಕೊಂಡಿದ್ದಾರೆ. ಮಿತ್ರ ತರುಣ್ಸುಧೀರ್ ಸಾರಾಂಶ ಕೇಳಿ ಖುಷಿಪಟ್ಟಿದ್ದಾರೆ. ಚಿಕ್ಕಣ್ಣ ಜೊತೆಗಿನ ಕಾಂಬಿನೇಷನ್ ಇದರಲ್ಲಿ ಮುಂದುವರೆದಿದೆ. ಅನೂಪ್ಕಟ್ಟಿಕಾರನ್ ಛಾಯಾಗ್ರಹಣ ಹೈಲೈಟ್ ಆಗಿದೆ ಎಂದರು. ಸರ್ ಅವರೊಂದಿಗೆ ಕೆಲಸ ....
ಪ್ರೇಕ್ಷಕರು ಮೆಚ್ಚಿಕೊಂಡ ಪದವಿಪೂರ್ವ ವರ್ಷದ ಕೊನೆವಾರದಲ್ಲಿ ತೆರೆಕಂಡ ‘ಪದವಿಪೂರ್ವ’ ಚಿತ್ರವು ನೋಡುಗರಿಂದ ಮೆಚ್ಚುಗೆಗೆ ವ್ಯಕ್ತವಾಗಿದೆ. ಪಕ್ಕಾ ಯೂತ್ಫುಲ್ ಕಥೆ ಹೊಂದಿದ್ದು, ಕಾಲೇಜು ಹಿನ್ನಲೆಯಲ್ಲಿ ನಡೆಯುವ ಕಥೆಯು ಮನರಂಜನೆಯಿಂದ ಕೂಡಿರುವುದರಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೃಥ್ವಿಶಾಮನೂರು ಭವಿಷ್ಯದ ನಾಯಕನಾಗುತ್ತಾರೆ. ಈಗಾಗಲೇ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಯೋಗರಾಜಭಟ್ ಹಾಗೂ ರವಿಶಾಮನೂರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಸಿಗುತ್ತಿರುವ ಪ್ರೋತ್ಸಾಹದಿಂದ ಚಿತ್ರತಂಡವು ಖುಷಿಯಾಗಿದ್ದು ಮಾದ್ಯಮದ ಮುಂದೆ ಬಂದು ಸಂತಸವನ್ನು ....
ಕಾಣದಶಕ್ತಿಯಲ್ಲಿ ಲತಾಹಂಸಲೇಖಾ ಹಾಡು
ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಕಾಣದ ಶಕ್ತಿ’ ಸಿನಿಮಾದ ಚಿತ್ರೀಕರಣವು ಬೆಂಗಳೂರು, ಹಾವೇರಿ, ಚಿಕ್ಕಮಗಳೂರು ಕಡೆಗಳಲ್ಲಿ ಮುಗಿದಿದೆ. ಮೊನ್ನೆಯಷ್ಟೇ ಕೆ.ಎಂ.ಇಂದ್ರ ಸಾಹಿತ್ಯ ಮತ್ತು ಸಂಗೀತದ ‘ಅಮ್ಮಾನೇ ನೀನಾದೆ, ಅಮ್ಮ ನೀ ನನಗಾದೆ, ಅಕ್ಕ ಅನ್ನೋ ಅಕ್ಕರೆಯವಳೇ’ ಹಾಡಿನ ಧ್ವನಿಮುದ್ರಣವು ನಾದಬ್ರಹ್ಮ ಹಂಸಲೇಖಾ ಸ್ಟುಡಿಯೋದಲ್ಲಿ ನಡೆಯಿತು. ಅಕ್ಕನ ಸೆಂಟಿಮೆಂಟ್ ಕುರಿತಾದ ಗೀತೆಗೆ ಲತಾಹಂಸಲೇಖಾ ಧ್ವನಿಯಾದರು. ಶೃತಿ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಶೃತಿ.ಎಂ. ಮತ್ತು ಎಸ್.ಆರ್.ಸತೀಶ್ಬಾಬು ಇವರೊಂದಿಗೆ ಗೆಳೆಯರು ಸೇರಿಕೊಂಡು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
*"ದೊಡ್ಡಹಟ್ಟಿ ಬೋರೇಗೌಡ" ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ.* *ಪ್ರಶಸ್ತಿ ವಿಜೇತ, ಗ್ರಾಮೀಣ ಸೊಗಡಿನ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ.* ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಗೆಲುತ್ತಿದೆ. ಆ ಸಾಲಿಗೆ ಸೇರುವ ಗ್ರಾಮೀಣ ಸೊಗಡಿನ "ದೊಡ್ಡಹಟ್ಟಿ ಬೋರೇಗೌಡ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ. ನಾನು ಈ ಹಿಂದೆ "ತರ್ಲೆ ವಿಲೇಜ್", "ಪರಸಂಗ" ಚಿತ್ರಗಳನ್ನು ನಿರ್ದೇಶಿಸಿದ್ದೆ. ಈಗ ಗ್ರಾಮೀಣ ಸೊಗಡಿನ ....
ಕಾಕ್ಟೈಲ್ ಟ್ರೇಲರ್ ಬಿಡುಗಡೆ
ವಿಜಯಲಕ್ಷೀ ಕಂಬೈನ್ಸ್ ಬ್ಯಾನರ್ನಲ್ಲಿ ಡಾ.ಶಿವಪ್ಪ ನಿರ್ಮಾಣದ ವಿನೂತನ ಅವಿಷ್ಕಾರದ ‘ಕಾಕ್ಟೈಲ್’ ಸಿನಿಮಾದ ಟ್ರೇಲರ್ನ್ನು ಅಶ್ವಿನಿಪುನೀತ್ರಾಜ್ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಎ೨ ಮ್ಯೂಸಿಕ್ ಸಂಸ್ಥೆಯಿಂದ ಹಾಡುಗಳು ಹೊರಬಂದಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಶ್ರೀರಾಮ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ವಿರೇನ್ ಕೇಶವ್ ನಾಯಕ, ಚರಿಷ್ಮಾ ನಾಯಕಿ. ಇವರೊಂದಿಗೆ ಶೋಭರಾಜ್, ರಮೇಶ್ಪಂಡಿತ್, ಮಹಾಂತೇಶ್ ಹಿರೇಮಠ್, ಶಿವಮಣಿ, ಚಂದ್ರಕಲಾಮೋಹನ್, ಕರಿಸುಬ್ಬು, ಮುಂತಾದವರ ತಾರಗಣವಿದೆ.
ಕಿರುಚಿತ್ರ ಸಾವಿರುಪಾಯಿಗೆ ಸ್ವರ್ಗ
ಟಿಕ್ ಟಾಕ್ ಮೂಲಕ ಹೆಸರು ಮಾಡಿರುವ ಅಲ್ಲುರಘು ಹೊಸ ಅನುಭವ ಎನ್ನುವಂತೆ ‘ಸಾವಿರುಪಾಯಿಗೆ ಸ್ವರ್ಗ’ ಎಂಬ ಕಿರುಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕರು ಮಾತನಾಡಿ ಇದು ನನ್ನ ಮೊದಲ ಚಿತ್ರ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವು ಜನರು ಸಹಾಯ ಮಾಡಿದ್ದಾರೆ. ಅವರೆಲ್ಲರ ಪ್ರೋತ್ಸಾಹದಿಂದಲೇ ಇದನ್ನು ಮಾಡಲು ಸಾಧ್ಯವಾಯಿತು. ಉಪೇಂದ್ರ, ಕಾಶಿನಾಥ್ ನನಗೆ ಸ್ಪೂರ್ತಿ. ಒಂದು ಪ್ರಯತ್ನ ಮಾಡಿದ್ದೇನೆ. ಏನೇ ತಪ್ಪಿದ್ದರೂ ತಿಳಿಸಿ ಎಂದು ಕೋರಿದರು.
ಗೆಳೆಯನಿಗೆ ಪ್ರಾರಂಭದಲ್ಲಿ ಸಿನಿಮಾ ಮಾಡಬೇಕು ಅಂತ ಆಸೆ ಇತ್ತು.
ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಟ್ರೇಲರ್ ಬಿಡುಗಡೆ
ಆಕರ್ಷಕ ಶೀರ್ಷಿಕೆ ಹೊಂದಿರುವ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರದ ಟ್ರೇಲರ್ ಮೊನ್ನೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬಿಡುಗಡೆಗೊಂಡಿತು. ‘ಗಂಧದಗುಡಿ’ ನಿರ್ದೇಶಕ ಅಮೋಘವರ್ಷ ಮತ್ತು ಶಿಶಿರ್ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಬೆಸೆಯುವ ವೈಶಂಪಾಯನ ತೀರ ಹಿರಿಯ ರಂಗಕರ್ಮಿ ರಮೇಶ್ ಬೇಗಾರಿ ಮೊದಲಬಾರಿ ನಿರ್ದೇಶನ ಮಾಡಿರುವ ‘ವೈಶಂಪಾಯನ ತೀರ’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿತು. ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕಥೆ ಆಧರಿಸಿದ್ದು, ಯಕ್ಷಗಾನವನ್ನು ಹಿನ್ನಲೆಯಾಗಿಟ್ಟುಕೊಂಡು ಪ್ರಕೃತಿ ಮತ್ತು ಮನುಷ್ಯನ ಸಂಬಂಧವನ್ನು ವಿಭಿನ್ನವಾದ ಧಾಟಿಯಲ್ಲಿ ತೋರಿಸಲಾಗಿದೆ. ಮುಖ್ಯ ಅತಿಥಿಯಾಗಿದ್ದ ಗಿರೀಶ್ಕಾಸರವಳ್ಳಿ ಮಾತನಾಡಿ ನಿರ್ದೇಶಕರು ಮೂರು ದಶಕಗಳಿಂದ ಕಲಾಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಅವರಿಗೆ ಹೆಚ್ಚಿನ ....