ಮಂಡ್ಯಹೈದನ ಮಾಸ್ ಟ್ರೈಲರ್ ಬಿಗ್‌ಬಾಸ್ ಕಾರ್ತೀಕ್ ಮಹೇಶ್- ಮಂಡ್ಯ ಶಾಸಕ ರವಿಕುಮಾರ್‌ಗೌಡ, ಪುಟ್ಟರಾಜು ಬಿಡುಗಡೆ ಮಂಡ್ಯ ಭಾಗದ ಕಥೆಗಳು ಯಾವತ್ತೂ ಸೌಂಡ್ ಮಾಡುತ್ತಲೇ ಬಂದಿವೆ. ಅದೇರೀತಿ ಈಗ ಮತ್ತೊಂದು ಚಿತ್ರ ಸುದ್ದಿಯಲ್ಲಿದೆ. ಆ ಚಿತ್ರದ ಹೆಸರೇ ಮಂಡ್ಯಹೈದ. ಅಭಯ್ ಚಂದ್ರಶೇಖರ್ ನಾಯಕನಾಗಿ ನಟಿಸಿರುವ ಮಂಡ್ಯ ಗ್ರಾಮೀಣ ಶೈಲಿಯ ಸಾಹಸಮಯ ಪ್ರೇಮಕಥೆ ಇರುವ ಈ ಚಿತ್ರ ಇದೇ ತಿಂಗಳ ೧೬ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬುಧವಾರ ಸಂಜೆ ಎಸ್.ಆರ್.ವಿ. ಥಿಯೇಟರಿನಲ್ಲಿ ನೆರವೇರಿತು. ಈ ವರ್ಷದ ಬಿಗ್‌ಬಾಸ್ ವಿಜೇತ ಕಾರ್ತೀಕ್ ಮಹೇಶ್, ಮಂಡ್ಯ ಶಾಸಕ ರವಿಕುಮಾರ್‌ಗೌಡ ಹಾಗೂ ನಿರ್ಮಾಪಕ ....
ಧೀರಸಾಮ್ರಾಟ್‌ಗೆ ಪ್ರಜ್ವಲ್ ದೇವರಾಜ್ ಸಾಥ್ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರಸಾಮ್ರಾಟ್’ ಚಿತ್ರಕ್ಕೆ ತನ್ವಿ ಪ್ರೊಡಕ್ಷನ್ ಹೌಸ್ ಮುಖಾಂತರ ಗುಲ್ಬರ್ಗಾದ ಗುರುಬಂಡಿ ನಿರ್ಮಾಣ ಮಾಡಿರುವುದು ಎರಡನೇ ಅನುಭವ. ಈಗಾಗಲೇ ಎರಡು ಹಾಡುಗಳು ಬಿಡುಗಡೆಗೊಂಡಿದ್ದು, ವೈರಲ್ ಆಗಿ ಸದ್ದು ಮಾಡುತ್ತಿದೆ. ಮೊನ್ನೆ ನಡೆದ ಸಮಾರಂಭದಲ್ಲಿ ಪ್ರಜ್ವಲ್‌ದೇವರಾಜ್ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದ್ದಾರೆ. ಈ ಸಂದರ್ಭದಲ್ಲಿ ನಾಯಕ ರಾಕೇಶ್‌ಬಿರದಾರ್, ನಾಯಕಿ ಅದ್ವಿತಿಶೆಟ್ಟಿ, ನಾಗೇಂದ್ರಅರಸು, ಯತಿರಾಜ್, ರವೀಂದ್ರನಾಥ್, ಇಂಚರ, ಸಂಕಲ್ಪ್‌ಪಾಟೀಲ್, ಹರೀಶ್‌ಅರಸು, ಸಾಹಸ ಸಂಯೋಜಕ ಕೌರವ ....
ಬಿಡುಗಡೆಯಾಯ್ತು ಪ್ರೇಕ್ಷಕರನ್ನು ಬೆರಗಾಗಿಸುವಂಥ `ಸಾರಾಂಶ’ ಟ್ರೈಲರ್! ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಆ ಮೂಲಕ ಸಿನಿಮಾ ಮೇಲೆ ಮೂಡಿಕೊಂಡಿದ್ದ ಕುತೂಹಲ ತಣಿಸುವಂತೆ ಇದೀಗ ಟ್ರೈಲರ್ ಬಿಡುಗಡೆಗೊಂಡಿದೆ. ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಸಾರಾಂಶ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಈ ಟ್ರೈಲರ್ ಮೂಡಿ ಬಂದಿರುವ ರೀತಿಯನ್ನು ಮೆಚ್ಚಿಕೊಳ್ಳುತ್ತಾ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಅಂದಹಾಗೆ, ಈ ಚಿತ್ರ ಇದೇ ಫೆಬ್ರವರಿ 15ರಂದು ತೆರೆಗಾಣಲಿದೆ. `ಸಾರಾಂಶ’ದ ಬಗೆಗಿನ ಒಂದಷ್ಟು ವಿಚಾರಗಳನ್ನು ....
*ಟ್ರೇಲರ್ ನಲ್ಲಿ ಜೂನಿ…ಫೆಬ್ರವರಿ 9ಕ್ಕೆ ತೆರೆಗೆ ಬರ್ತಿದೆ ಪೃಥ್ವಿ ಅಂಬಾರ್ ಸಿನಿಮಾ..* ಪೃಥ್ವಿ ಅಂಬಾರ್ ಒಂದರ ಹಿಂದೊಂದು ವಿಶಿಷ್ಠ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಹೊಸ ಸಿನಿಮಾವೊಂದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಆ ಸಿನಿಮಾವೇ ’ಜೂನಿ’. ಟೈಟಲ್ನಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದ ಟ್ರೇಲರ್, ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಮಾಧ್ಯಮದರೊಂದಿಗೆ ಮಾಹಿತಿ ಹಂಚಿಕೊಂಡಿದೆ. ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ವೈಭವ್ ಎಷ್ಟು ಕ್ಲಾರಿಟಿಯಾಗಿ ಮಾತನಾಡಿದರೋ, ಅಷ್ಟೇ ಕ್ಲಾರಿಟಿಯಾಗಿ ಸಿನಿಮಾ ಮಾಡಿದ್ದಾರೆ. ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ....
*ವಿಭಿನ್ನ ಕಥಾಹಂದರ ಹೊಂದಿರುವ "ಅಲೆಮಾರಿ ಈ ಬದುಕು" ಚಿತ್ರ ಫೆಬ್ರವರಿ 16 ರಂದು ತೆರೆಗೆ* . ದಿವ್ಯಕುಮಾರ್ H N ನಿರ್ಮಾಣದ ಹಾಗೂ ಸಿದ್ದು ಸಿ ಕಟ್ಟಿಮನಿ ನಿರ್ದೇಶನದ "ಅಲೆಮಾರಿ ಈ ಬದುಕು" ಚಿತ್ರ ಫೆಬ್ರವರಿ 16 ರಂದು ತೆರೆಗೆ ಬರುತ್ತಿದೆ. ಬಿಡುಗಡೆಗೂ ಪೂರ್ವದಲ್ಲಿ ಇತ್ತೀಚಿಗೆ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಟ ಹಾಗೂ ಸಮಾಜಿಕ ಹೋರಾಟಗಾರ ಚೇತನ್ ಅಹಿಂಸ ಹಾಗೂ ಪರಿಸರ ಪ್ರೇಮಿ ಪ್ರಕೃತಿ ಪ್ರಸನ್ನ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಸರ್, ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ....
*ಧರ್ಮ ಕೀರ್ತಿರಾಜ್ ಅವರಿಂದ ಅನಾವರಣವಾಯಿತು "ಲೇಡಿಸ್ ಬಾರ್" ಚಿತ್ರದ ಟ್ರೇಲರ್* . ಡಿ.ಎಂ.ಸಿ. ಪ್ರೊಡಕ್ಷನ್ಸ್ ಮೂಲಕ ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ "ಲೇಡಿಸ್‌ಬಾರ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಧರ್ಮ ಕೀರ್ತಿರಾಜ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಟ್ರೇಲರ್ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಟ ಧರ್ಮ ಕೀರ್ತಿರಾಜ್, ಟ್ರೇಲರ್ ....
*ಮುತ್ತಣ್ಣನ ಮಗನಾಗಿ ಬಂದ ಪ್ರಣಮ್ ದೇವರಾಜ್..ಹೇಗಿದೆ ‘S/o ಮುತ್ತಣ್ಣ’ ಫಸ್ಟ್ ಫಸ್ಟ್ ಲುಕ್?* ಯಂಗ್ ಡೈನಾಮಿಕ್ ಪ್ರಣಮ್ ದೇವರಾಜ್ ನಟನೆಯ S/O ಮುತ್ತಣ್ಣ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಪ್ರಣಮ್ ಜನ್ಮದಿನದ ವಿಶೇಷವಾಗಿ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡ ಶುಭ ಕೋರಿದೆ. ಬೆಂಗಳೂರಿನ ಜಿಟಿ ಮಾಲ್ ನಲ್ಲಿರುವ ಎಂಎಂ ಲೆಗಸಿಯಲ್ಲಿ ಯಂಗ್ ಡೈನಾಮಿಕ್ ಪ್ರಣಮ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ, ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಾಯಕ ಪ್ರಣಮ್ ದೇವರಾಜ್ ಮಾತನಾಡಿ, S/o ಮುತ್ತಣ್ಣ ಶ್ರೀಕಾಂತ್ ಸರ್ ಫಸ್ಟ್ ಟೈಮ್ ಮನೆಗೆ ಬಂದಾಗ ಅವರು ಮಾತನಾಡಿದ ರೀತಿ ಕಥೆ ಹೇಳಿದ ರೀತಿಯಲ್ಲಿ ನಂಬಿಕೆ ಬಂತು. ....
*ಚಿತ್ರರಂಗದ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು ಶ್ರೀ ರಾಘವೇಂದ್ರ ಚಿತ್ರವಾಣಿ 48 ನೇ ವಾರ್ಷಿಕೋತ್ಸವ ಹಾಗೂ 23 ನೇ ಪ್ರಶಸ್ತಿ ಪ್ರದಾನ* . ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ .ಡಿ.ವಿ ಸುಧೀಂದ್ರ ಅವರಿಂದ ಸ್ಥಾಪಿತವಾದ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 48 ನೇ ವಾರ್ಷಿಕೋತ್ಸವ ಹಾಗೂ 23 ನೇ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚಿಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಿರಿಯ ನಟ ಶಶಿಕುಮಾರ್, ತಾರಾ ಅನುರಾಧ, ಡಾ. ವಿಜಯಮ್ಮ, ಪೂರ್ಣಿಮ ರಾಮಕುಮಾರ್, ವಿನೋದ್ ಪ್ರಭಾಕರ್ ....
*ಫೆಬ್ರವರಿ 23ಕ್ಕೆ ‘ಫಾರ್ ರಿಜಿಸ್ಟ್ರೇಷನ್’ ರಿಲೀಸ್...ಅದೃಷ್ಟದ ತಿಂಗಳಲ್ಲೇ ಅಖಾಡಕ್ಕಿಳಿದ ಮಿಲನಾ-ಪೃಥ್ವಿ* ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇಂದು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರತಂಡ ಸುದ್ದಿ ಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದೆ. ಫೆಬ್ರವರಿ 23ಕ್ಕೆ ಸಿನಿಮಾವನ್ನು ತೆರೆಗೆ ತರೋದಾಗಿ ಚಿತ್ರತಂಡ ತಿಳಿಸಿದೆ. ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ನಮಗೆ ಇದೊಂದು ರೀತಿ ಚಾಲೆಂಜಿಂಗ್ ಟೈಮ್. ತಡವಾಗಿದೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನೇ ಹೊಣೆ ತೆಗೆದುಕೊಳ್ಳುತ್ತೇನೆ. ತುಂಬಾ ....
"ವಿಷ್ಣುಪ್ರಿಯ"ರ ಚಿಗುರು ಪ್ರೇಮಗೀತೆ ಶರಣ್- ರುಕ್ಮಿಣಿ ವಸಂತ್ ಬಿಡುಗಡೆ ವಿಷ್ಣುಪ್ರಿಯ 1990ರ ಕಾಲದಲ್ಲಿ ನಡೆದಂಥ ಮಾಸ್ ಲವ್ ಸ್ಟೋರಿ. ಕನ್ನಡದಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವ ಯುವನಟ ಶ್ರೇಯಸ್ ಮಂಜು ಈ ಚಿತ್ರದಲ್ಲಿ ಲವರ್ ಬಾಯ್ ವಿಷ್ಣು ಆಗಿ ಪ್ರೇಕ್ಷಕರೆದುರು ಬರಲು ಅಣಿಯಾಗಿದ್ದಾರೆ. ಅಲ್ಲದೆ ಪ್ರಿಯಾ ಪಾತ್ರದಲ್ಲಿ ಮಲಯಾಳಂನ ಪ್ರಿಯಾ ವಾರಿಯರ್ ನಟಿಸಿದ್ದಾರೆ. ತೊಂಭತ್ತರ ದಶಕದಲ್ಲಿ ನಡೆದಂಥ ಒಂದು ಇನ್ ಟೆನ್ಸ್ ಲವ್ ಸ್ಟೋರಿಯನ್ನು ಈ ಚಿತ್ರದ ಮೂಲಕ ನಿರ್ದೇಶಕ ವಿ.ಕೆ. ಪ್ರಕಾಶ್ ಅವರು ನಿರೂಪಿಸಿದ್ದಾರೆ. ವಿಷ್ಣುಪ್ರಿಯ ಸಿನಿಮಾದ ಮೊದಲ ಪ್ರೇಮ ಗೀತೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಟ ಶರಣ್ ಹಾಗೂ ನಟಿ ರುಕ್ಮಿಣಿ ....
*’ಮಾದೇವ’ನ ಮಾಸ್ ಟೀಸರ್..ಭರ್ಜರಿ ಆಕ್ಷನ್ ಮೂಲಕ ಮರಿ ಟೈಗರ್ ಎಂಟ್ರಿ* *ಮಾದೇವ ಟೀಸರ್ ರಿಲೀಸ್..ಮರಿ ಟೈಗರ್ ಗೆ ಸಾಥ್ ಕೊಟ್ಟ ಗಜ ಪಡೆ..* *ಮಾದೇವ’ನ ಮಾಸ್ ಮೆರವಣಿಗೆ..ರಗಡ್ ಅವತಾರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್..* ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾದೇವ. ಪೋಸ್ಟರ್ ಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಟೀಸರ್ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಯಕ ವಿನೋದ್ ಪ್ರಭಾಕರ್, ನಾಯಕಿ ಸೋನಲ್, ಹಿರಿಯ ನಟಿ ಶೃತಿ, ನಿರ್ದೇಶಕ ನವೀನ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ನಿರ್ದೇಶಕ ತರುಣ್ ಸುಧೀರ್, ನಟರಾದ ....
*ಟ್ರೆಂಡಿಂಗ್ ನಲ್ಲಿ "ಜಸ್ಟ್ ಪಾಸ್" ಚಿತ್ರದ ಫಸ್ಟ್ ಕ್ಲಾಸ್ ಟ್ರೇಲರ್* *ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಫೆಬ್ರವರಿ 9ರಂದು ಬಿಡುಗಡೆ* ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದಿರುವ "ಜಸ್ಟ್ ಪಾಸ್" ಚಿತ್ರದ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ರೇಲರ್ ಬಿಡುಗಡೆ ಮಾಡಬೇಕಿತ್ತು. ಕಾರಣಾಂತರದಿಂದ ಅವರು ಸಮಾರಂಭಕ್ಕೆ ಬಂದಿರಲಿಲ್ಲ . ಟ್ರೇಲರ್ ಅನ್ನು ನಿರ್ಮಾಪಕರ ತಾಯಿ ಶ್ರೀಮತಿ ಪ್ರೇಮ ಬಿಡುಗಡೆ ಮಾಡಿದರು. ಟ್ರೇಲರ್ ಕೂಡ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ನೋಡಿದವರು ಇದು "ಜಸ್ಟ್ ಪಾಸ್" ಚಿತ್ರದ ಫಸ್ಟ್ ಕ್ಲಾಸ್ ಟ್ರೇಲರ್ ಎನ್ನುತ್ತಿದ್ದಾರೆ. ಟ್ರೇಲರ್ ....
*ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆರ್ ಚಂದ್ರು ಅವರ ಆರ್ ಸಿ ಸ್ಟುಡಿಯೋಸ್ ಅನಾವರಣ* . *ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಸಲ ಐದು ಚಿತ್ರಗಳಿಗೆ ಚಾಲನೆ* ಖ್ಯಾತ ನಿರ್ದೇಶಕ, ನಿರ್ಮಾಪಕ ಆರ್ ಚಂದ್ರು ಸಾರಥ್ಯದ ಆರ್ ಸಿ ಸ್ಟುಡಿಯೋಸ್ ಉದ್ಘಾಟನೆಯಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆರ್ ಸಿ ಸ್ಟುಡಿಯೋಸ್ ಉದ್ಘಾಟಿಸಿದರು. ಆರ್ ಸಿ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಲಿರುವ ಐದು ಚಿತ್ರಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ರಿಯಲ್ ಸ್ಟಾರ್ ಉಪೇಂದ್ರ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮುಂಬೈನ ಖ್ಯಾತ ನಿರ್ಮಾಪಕ ಮತ್ತು ವಿತರಕರಾದ ಆನಂದ್ ಪಂಡಿತ್, ನಿರ್ಮಾಪಕ ಜಾಕ್ ಮಂಜು, ಅಲಂಕಾರ್ ....
*"ಮೇಘ" ಸಂದೇಶ ಹೊತ್ತು ಬರಲಿದ್ದಾರೆ ಕಿರಣ್ ರಾಜ್* . *ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚರಣ್ ನಿರ್ದೇಶನ* . "ಕನ್ನಡತಿ" ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್ ನಾಯಕನಾಗಿ ನಟಿಸಿರುವ, ಚರಣ್ ನಿರ್ದೇಶನದ "ಮೇಘ" ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಗೀತರಚನೆಕಾರ ಡಾ||ವಿ.ನಾಗೇಂದ್ರ ಪ್ರಸಾದ್ "ಮೇಘ" ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು "ಮೇಘ" ಚಿತ್ರದ ಕುರಿತು ಮಾತನಾಡಿದರು. ನಾನು ಮೂಲತಃ ಐಟಿ ಉದ್ಯೋಗಿ. ಕೋವಿಡ್ ನಂತರ ಐಟಿ ಕೆಲಸ ಬಿಟ್ಟು ಡಾ||ವಿ.ನಾಗೇಂದ್ರಪ್ರಸಾದ್ ಅವರ ಬಳಿ ಸಿನಿಮಾ ಕೆಲಸ ಕಲಿಯಲು ....
*ಫೆಬ್ರವರಿ 2 ರಂದು ಯತಿರಾಜ್ ನಿರ್ದೇಶನದ "ಸತ್ಯಂ ಶಿವಂ" ಬಿಡುಗಡೆ* . ಪತ್ರಕರ್ತ ಹಾಗೂ ಕಲಾವಿದ ಯತಿರಾಜ್ ನಿರ್ದೇಶನದ "ಸತ್ಯಂ ಶಿವಂ" ಚಿತ್ರ ಫೆಬ್ರವರಿ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟ್ರೇಲರ್ ಹಾಗೂ ಹಾಡುಗಳ ಮೂಲಕ ಈ ಚಿತ್ರ ಈಗಾಗಲೇ ಜನಪ್ರಿಯವಾಗಿದೆ. ಚಿತ್ರದ ಬಿಡುಗಡೆ ಬಗ್ಗೆ ಮಾತನಾಡಿದ ನಿರ್ದೇಶಕ ಯತಿರಾಜ್ , ವಿಭಿನ್ನ ಕಥಾಹಂದರ ಹೊಂದಿರುವ "ಸತ್ಯಂ ಶಿವಂ" ಚಿತ್ರ ಫೆಬ್ರವರಿ 2ರಂದು ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರದ ನಿರ್ಮಾಪಕ ಬುಲೆಟ್ ರಾಜು ಅವರೆ ನಾಯನಾಗೂ ನಟಿಸಿದ್ದಾರೆ. ಸಂಜನ ನಾಯ್ಡು ಈ ಚಿತ್ರದ ನಾಯಕಿ. ಮೈಕೋ ನಾಗರಾಜ್, ಬಾಲ ರಾಜವಾಡಿ, ಅರವಿಂದ್ ರಾವ್, ಸಂಗೀತ, ಸುಂದರಶ್ರೀ, ತೇಜಸ್ವಿನಿ, ತನುಜ ಮುಂತಾದವರು ಈ ಚಿತ್ರದ ....
ಕನ್ನಡದ ಮೊದಲ ಹೈಪರ್ ಲಿಂಕ್ ರಾಮ್ ಕಾಮ್ ಚಿತ್ರ `ಚೌ ಚೌ ಬಾತ್’ ಟ್ರೈಲರ್ ಬಿಡುಗಡೆ! ಕೇಂಜ ಚೇತನ್ ಕುಮಾರ್ ನಿರ್ದೇಶನದ `ಚೌ ಚೌ ಬಾತ್’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಇಂದು ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರದ ಎಸ್ ಆರ್ ವಿ ಥಿಯೇಟರ್ ನಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಈ ಟ್ರೈಲರ್ ಅನ್ನು ಚಿತ್ರದ ನಿರ್ಮಾಪಕರಾದ ಸತೀಶ್ ಎಸ್.ಬಿ ತಮ್ಮ ಧರ್ಮಪತ್ನಿಯೊಂದಿಗೆ ಲೋಕಾರ್ಪಣೆಗೊಳಿಸಿದ್ದಾರೆ. ಬಿಗ್ ಬಾಸ್‍ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಅವಿನಾಶ್ ಶೆಟ್ಟಿ ಈ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಇನ್ನುಳಿದಂತೆ ಗೀತಸಾಹಿತಿ ಪ್ರಮೋದ್ ಮರವಂತೆ, ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್, ಛಾಯಾಗ್ರಾಹಕ ರುದ್ರಮೂರ್ತಿ ಬೆಳಗೆರೆ, ....
ನಿರ್ಮಾಣದ ಜೊತೆಗೆ ವಿತರಣೆ ಆರಂಭಿಸಿದ ಮುನೀಂದ್ರ ಚಿತ್ರರಂಗದಲ್ಲಿ ಕಳೆದ 15 ವರ್ಷಗಳಿಂದ ನಿರ್ಮಾಣ ಸೇರಿದಂತೆ ವಿವಿಧ ವಲಯಗಳಲ್ಲಿ ಅನುಭವ ಪಡೆದಿರುವ ಮನೀಂದ್ರ ಕೆ ಪುರ, ಇದೀಗ ನಿರ್ಮಾಣದ ಜೊತೆಗೆ ವಿತರಣಾ ಕ್ಷೇತ್ರಕ್ಕೂ ಕಾಲಿಟ್ಡಿದ್ದಾರೆ. ಮಾಧ್ಯಮಿಕ ಎಂಟರ್ ಪ್ರೈಸಸ್ ಮೂಲಕ ಗಾಂಧಿನಗರದಲ್ಲಿ ಹೊಸ ಕಛೇರಿ ಆರಂಭಿಸಿದ್ದು ಸದ್ಯದಲ್ಲಿಯೇ ತಮ್ಮ ಸಂಸ್ಥೆಯ ಮೂಲಕ ಮೂಲಕ ನಿರ್ಮಾಣ ಮಾಡುವ ಜೊತೆಗೆ ಚಿತ್ರರಂಗದಲ್ಲಿ ನಿರ್ಮಾಣ ಮಾಡಿ ವಿತರಣೆಗೆ ಪರದಾಡುವ ಮಂದಿಗೆ ನೆರವಾಗುವ ಉದ್ದೇಶದಿಂದ ವಿರತರಣಾ ಸಂಸ್ಥೆ ಶೀಘ್ರದಲ್ಲೇ ಆರಂಭ ಮಾಡಲಿದ್ದಾರೆ. ಹೊಸ ಸಂಸ್ಥೆಯ ಆರಂಭಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಮ್ ಸುರೇಶ್, ಸೇರಿದಂತೆ ಹಲವು ಮಂದಿ ....
*"ಹಂಸಗೀತೆ"ಗೆ ಹೆಜ್ಜೆ ಹಾಕಲಿದ್ದಾರೆ ಭಾವನಾ ರಾಮಣ್ಣ* . "ಚಂದ್ರಮುಖಿ ಪ್ರಾಣಸಖಿ" ಸೇರಿದಂತೆ ಅನೇಕ ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಭಾವನಾ ರಾಮಣ್ಣ ಅತ್ಯುತ್ತಮ ನೃತ್ಯಗಾರ್ತಿಯೂ ಹೌದು. ಕನ್ನಡದ ಜನಪ್ರಿಯ ಕಾದಂಬರಿಕಾರ ತ.ರಾ.ಸುಬ್ಬರಾಯರ ‘ಹಂಸಗೀತೆ’ ಕಾದಂಬರಿಯನ್ನು ಜಿ.ವಿ.ಅಯ್ಯರ್ ಅವರು ಚಲನಚಿತ್ರವಾಗಿಸಿದ್ದರು. ಈಗ ನಟಿ ಭಾವನ "ಹಂಸಗೀತೆ" ಯನ್ನು ನೃತ್ಯ ರೂಪಕವಾಗಿ ತರುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಭಾವನ ರಾಮಣ್ಣ ತಮ್ಮ ಮನೆಯಲ್ಲೇ ಪತ್ರಿಕಾಗೋಷ್ಟಿ ಆಯೋಜಿಸಿದ್ದರು.ನಟಿ ಭಾವನಾ, ಅವರ ಸಹೋದರ ಅರವಿಂದ್ ರಾಮಣ್ಣ, ಸಹೋದರಿ ಶ್ಯಾಲಿನಿ ರಾಮಣ್ಣ ಹಾಗೂ ಬರಹಗಾರ ವಿಕ್ರಂ ಹತ್ವಾರ್ ಪತ್ರಿಕಾಗೋಷ್ಠಿಯಲ್ಲಿ ....
*ಸರಿಗಮಪ ಖ್ಯಾತಿಯ ತನುಶ್ರೀ ಕಂಠಸಿರಿಯಲಿ ಮೂಡಿಬಂದಿದೆ "ಸನಾತನ ಅಯೋಧ್ಯಾ ಕಾ ರಾಮ್"* . *ಅಯೋಧ್ಯೆಯ ಶ್ರೀರಾಮ ಪ್ರತಿಷ್ಟಾಪನೆ ಸಂದರ್ಭದಲ್ಲಿ ಖ್ಯಾತ ಲಹರಿ ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆ* . ಜನವರಿ 22 ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಟಾಪನೆ. ಈ ಶುಭ ಸಂದರ್ಭದಲ್ಲಿ ಸರಿಗಮಪ ಖ್ಯಾತಿಯ ಮೈಸೂರಿನ ತನುಶ್ರೀ ಆರ್ "ಸನಾತನ ಅಯೋಧ್ಯಾ ಕಾ ರಾಮ್" ಎಂಬ ಹಾಡನ್ನು ಹಾಡಿದ್ದಾರೆ. ಅವರೆ ಸಂಗೀತವನ್ನು ಸಂಯೋಜಿಸಿದ್ದಾರೆ. ಖ್ಯಾತ ಮ್ಯೂಸಿಕ್ ಸಂಸ್ಥೆ ಮೂಲಕ ಈ ಹಾಡು ಲೋಕಾರ್ಪಣೆಯಾಗಿದೆ. ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಟಾಪನೆ ಆಗುತ್ತಿರುವ ಈ ಶುಭ ಸಂದರ್ಭದಲ್ಲಿ ಮೈಸೂರಿನ ತನುಶ್ರೀ ತಾವೇ ಸಂಗೀತ ನೀಡಿ, ಹಾಡಿರುವ ಈ ....
ಪೋಸ್ಟ್ ಪ್ರೊಡಕ್ಷನ್ ಮುಕ್ತಾಯ ಘಟ್ಟದಲ್ಲಿ `ಜರ್ನಿ ಆಫ್ ಬೆಳ್ಳಿ’! ಹೊಸಾ ಹರಿವಿನತ್ತ ಒಡ್ಡಿಕೊಂಡಿರುವ ಕನ್ನಡ ಚಿತ್ರರಂಗದಲ್ಲಿ ನಾನಾ ಥರದ ಪ್ರಯತ್ನ, ಪ್ರಯೋಗಗಳು ನಡೆಯುತ್ತಿವೆ. ಅದೆಲ್ಲದರಾಚೆಗೂ ಒಂದಷ್ಟು ಪ್ರಕಾರಗಳ ಸಿನಿಮಾಗಳ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿವೆ. ಆ ಸಾಲಿನಲ್ಲಿ ಮಕ್ಕಳ ಚಿತ್ರಗಳದ್ದು ಮುಂಚೂಣಿಯ ಸ್ಥಾನ. ಇದೀಗ ಅದನ್ನು ನೀಗುತ್ತಲೇ, ಈ ಜಾನರಿನಲ್ಲೇ ಹೊಸತನದಿಂದ ದಾಖಲಾಗುವಂಥಾ ಚಿತ್ರವೊಂದು ಸಂಪೂರ್ಣವಾಗಿ ಇದೀಗ ಪೋಸ್ಟ್ ಪ್ರೊಡಕ್ಷನ್ ಮುಕ್ತಾಯ ಘಟ್ಟದಲ್ಲಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿಯ ಆಗಮನವೂ ಆಗಿದೆ. ಅಂದಹಾಗೆ, ಹೀಗೊಂದು ಪೀಠಿಕೆಗೆ ಕಾರಣವಾಗಿರೋದು ಗೌರಿ ಶ್ರೀನಿವಾಸ್ ನಿರ್ದೇಶನದಲ್ಲಿ ರೂಪುಗೊಂಡಿರುವ `ಜರ್ನಿ ....