ಮೊದಲ ರಾತ್ರಿಯ ಮಹಾಕಾವ್ಯ ಮಜ್ಜಿಗೆ ಹುಳಿ ಹಾಸ್ಯ ಚಿತ್ರ ‘ಮಜ್ಜಿಗೆ ಹುಳಿ’ ಒಳ್ಳೆ ಬಾಡೂಟ ಗುರು ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಸನಿಹದಲ್ಲಿ ತೆರೆಕಾಣುತ್ತಿರುವುದರಿಂದ ಸಿನಿಮಾದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ಎರಡನೆ ಬಾರಿ ಮಾದ್ಯಮದವರನ್ನು ತಂಡವು ಭೇಟಿ ಮಾಡಿತು. ರಚನೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿರುವ ರವೀಂದ್ರಕೊಟಕಿ ಮಾತನಾಡಿ ಒಂದು ಕೋಣೆಯೊಳಗೆ ನಡೆಯುವ ಕತೆಯಲ್ಲಿ ೨೮ ಪಾತ್ರಗಳು ಬರುತ್ತವೆ. ನವಜೋಡಿಗಳು ಮೊದಲ ರಾತ್ರಿ ಸುಖವನ್ನು ಅನುಭವಿಸಲು ಗೋವಾದ ಹೋಟೆಲ್‌ಗೆ ಬಂದಾಗ ಅಲ್ಲಿ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ....
ಎಸ್.ಎ.ಚಿನ್ನೆಗೌಡರ ಹುಟ್ಟುಹಬ್ಬ ಮತ್ತು ವಿವಾಹ ಮಹೋತ್ಸವ
ಶಕ್ತಿ ಕೇಂದ್ರವನ್ನು ವಿಶ್ವವಿದ್ಯಾಲಯ ಮಾಡಬೇಕು - ಉಪೇಂದ್ರ ಉಪೇಂದ್ರ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಗ್ಯಾಪ್‌ನಲ್ಲಿ ಪ್ರಜಾಕೀಯ ಕುರಿತಂತೆ ಒಂದು ಡೈಲಾಗ್ ಹೇಳಿ ಮಾತು ಮುಗಿಸುತ್ತಾರೆ. ಲಿಂಗರಾಜ್ ಸಾರಥ್ಯದಲ್ಲಿ ‘ಸಿನಿಮಾ-ಟಿವಿ ಡೈರಕ್ಟರಿ’ ಮಾಹಿತಿ ಪುಸ್ತಕದ ೮ನೇ ಆವೃತ್ತಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಪ್ರಥಮ ಪ್ರತಿಯನ್ನು ಬಿಡುಗಡೆ ಮಾಡಿದ್ದು ನೆನಪು ಇದೆ. ಇಂದು ಸಂತೋಷ ಪಡುವ ವಿಷಯವಾಗಿದೆ. ಆದರೆ ಕೊನೆ ಪ್ರಯತ್ನವೆಂದು ಹೇಳಿರುವುದು ಸರಿಯಲ್ಲ. ಎಲ್ಲಿ ಮೊದಲು ಇರುತ್ತದೆಯೋ ಅಲ್ಲಿ ಕೊನೆ ಇರುತ್ತೆ. ....
ಧಾರವಾಹಿ ಸ್ಟಾರ್ ನಟ ಮತ್ತು ಅಭಿಮಾನಿಯ ಕಥನ ರಂಗಭೂಮಿ, ರಿಯಾಲಿಟಿ, ಸಿನಿಮಾರಂಗ ಅಂಶಗಳನ್ನು ತೆಗೆದುಕೊಂಡ ಚಿತ್ರಗಳು ಬಂದಿರುವುದು ತಿಳಿದಿರುವ ಸಂಗತಿಯಾಗಿದೆ. ಇಲ್ಲೋಂದು ತಂಡವು ತಮ್ಮದು ಅದ್ಬುತ, ವಿನೂತನ ಅಲ್ಲದ, ಹೊಸತನದ ಏಳೆ ಹೊಂದಿರುವ ‘ಫ್ಯಾನ್’ ಚಿತ್ರದ ಕತೆಯಾಗಿದೆ ಎಂಬುದಾಗಿ ಹೇಳಿಕೊಂಡಿದೆ. ಪ್ರತಿ ದಿನ ಕಡಿಮೆ ಎಂದರೂ ಎಲ್ಲಾ ಚಾನಲ್‌ಗಳಲ್ಲಿ ೫೦ಕ್ಕೂ ಹೆಚ್ಚು ಸೀರಿಯಲ್‌ಗಳು ಪ್ರಸಾರವಾಗುತ್ತಿದ್ದು, ಇದನ್ನು ನೋಡುವ ಒಂದು ಬಳಗವಿದೆ. ಫೇಸ್‌ಬುಕ್, ವ್ಯಾಟ್ಸ್‌ಪ್, ಟ್ವಿಟರ್ ಮೂಲಕ ಇವುಗಳ ಕುರಿತಂತೆ ಪ್ರತಿಕ್ರಿಯೆಗಳು, ವಿಮರ್ಶೆ, ಕಟುಟೀಕೆಗಳು ಬರುತ್ತಲೆ ....
ಲಯನ್ಸ್ ಕ್ಲಬ್ಗೆ ಚಂದನವನದ ತಾರೆಯರು
ಚಿತ್ರಕಥಾದಲ್ಲೊಂದು ಸಿನಿಮಾ ಸಿನಿಮಾದೊಳಗೊಂದು ಚಿತ್ರಕತೆಗಳು ಬರುವುದು ಸಾಮಾನ್ಯವಾಗಿದೆ. ಈ ಸಾಲಿಗೆ ‘ಚಿತ್ರಕಥಾ’ ಸೇರ್ಪಡೆಯಾಗಿದೆ. ಇದಕ್ಕೆ ಪೂರಕವಾಗುವಂತೆ ದಿ ಪೈಟಿಂಗ್ ಟ್ಯಾಗ್‌ಲೈನ್ ಎಂದು ಹೇಳಿಕೊಂಡಿದ್ದಾರೆ. ಒಬ್ಬ ಕಲಾವಿದ ಕಷ್ಟಪಟ್ಟು ಒಂದು ಹಂತ ದಾಟಿದ ಮೇಲೆ, ಆತನ ಗುರಿ,ಕಲೆಗೆ ಗುರುತು ಸಿಗುತ್ತದೆ. ಅದನ್ನು ಗಳಿಸಲು ಬಣ್ಣದ ಲೋಕದ ಪಯಣದಲ್ಲಿ ಯಾವ ರೀತಿಯಲ್ಲಿ ಮಾನಸಿಕವಾಗಿ ಸಿದ್ದನಾಗುತ್ತಾನೆ, ಈ ದಾರಿಯ ಮಧ್ಯೆ ಬರುವ ಅವಘಡಗಳನ್ನು ಹೇಗೆ ಎದುರಿಸುತ್ತಾನೆ ಎಂಬುದನ್ನು ಸೆಸ್ಪನ್ಸ್ ,ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಆನಿಮೇಶನ್‌ದಲ್ಲಿ ಪರಣಿತರಾಗಿರುವ ಯಶಸ್ವಿಬಾಲಾದಿತ್ಯಾ ಕತೆ ಬರೆದು ನಿರ್ದೇಶನ ....
ಚಂದನ್ ಅಭಿಮಾನಿಯ ಆಲ್ಬಂ ಸಾಹಿತಿ, ನಟ, ಗಾಯಕ, ಬಿಗ್‌ಬಾಸ್ ವಿಜೇತ ಚಂದನ್‌ರವರ ಮೂರು ಪೆಗ್, ಚಾಕಲೇಟ್ ಗರ್ಲ್, ಟಕೀಲಾ,ಗಾಂಚಲಿ ಇನ್ನು ಮುಂತಾದ ವಿಡಿಯೋ ಆಲ್ಬಂ ಗೀತೆಗಳು ಹಿಟ್ ಆಗಿ, ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಅದರಲ್ಲೂ ನನ್‌ಗನ್‌ಸಿದ್ದು ಹಾಡು ಸಾಕಷ್ಟು ಟ್ರೋಲ್ ಆಗಿತ್ತು. ಈ ಕುರಿತಂತೆ ಅಭಿಮಾನಿಗಳು ಪರ,ವಿರೋದವಾಗಿಯು ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದರು. ಇವೆಲ್ಲಾ ಅಂಶಗಳನ್ನು ಆಧರಿಸಿ ಶಿರಾದ ಅಭಿಮಾನಿ ರವಿಚಂದ್ರಶಿವಣ್ಣ ಸಾಹಿತ್ಯ, ಗಾಯನ, ನಿರ್ದೇಶನ ಜೊತೆಗೆ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು ವಿಶ್ವ ಕ್ರಿಕೆಟ್ ಪಂದ್ಯಾವಳಿ ಬರುತ್ತಿರುವುದರಿಂದ ಇದರ ಪರಿಕಲ್ಪನೆ ....
ಕ್ಷತ್ರಿಯನಾಗಿ ಚಿರಂಜೀವಿಸರ್ಜಾ ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕುತ್ತಿರುವ ಚಿರಂಜೀವಿಸರ್ಜಾ ಖಾತೆಗೆ ‘ಕ್ಷತ್ರಿಯಾ’ ಸೇರ್ಪಡೆಯಾಗಿದೆ. ಸಮಾಜದ ಒಳಿತಿಗಾಗಿ ಹೋರಾಡುವ ಒಬ್ಬ ಆಧುನಿಕ ಕ್ಷತ್ರಿಯ ಮತ್ತು ಸಮಾಜಕ್ಕೆ ದುಡಿಯುವ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಫೋನ್‌ನಲ್ಲಿ ಒನ್ ಲೈನ್ ಹೇಳಿದ್ದು ಇಷ್ಟವಾಗಿ ಆಮೇಲೆ ಇಡೀ ಕತೆ ಕೇಳಿ ಥ್ರಿಲ್ ಆಗಿ ನಟಿಸುತ್ತಿದ್ದಾರೆ. ಮೊದಲಾರ್ಧದಲ್ಲಿ ಸೆಂಟಿಮೆಂಟ್ ಅಂಶಗಳು, ವಿರಾಮದ ನಂತರ ಪಕ್ಕಾ ಕಮರ್ಷಿಯಲ್ ಆಗಿ ಇರುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಘಟನೆಗಳೇ ಸನ್ನಿವೇಶಗಳಾಗಿ ಬರುತ್ತದೆ. ಜೊತೆಗೆ ಪ್ರೀತಿಯ ಅಕ್ಕ ತಮ್ಮ ನಡುವಿನ ಬಾಂದವ್ಯವು ಸೇರಿಕೊಂಡಿರುತ್ತದೆ. ....
ಚಿತ್ರದುರ್ಗದ ಒನಕೆ ಓಬವ್ವ ಗಾನಲಹರಿ ಕಲ್ಲಿನ ಕೋಟೆ ಅಂದರೆ ಚಿತ್ರದುರ್ಗ, ಒನಕೆ ಓಬವ್ವ ಕಣ್ಣ ಮುಂದೆ ಬರುತ್ತದೆ. ಭಕ್ತಿ ಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿರುವ ಬಿ.ಎ.ಪುರುಷೋತ್ತಮ್ ಈ ಬಾರಿ ಐತಿಹಾಸಿಕ ಕಥನ ಹೊಂದಿರುವ ‘ಚಿತ್ರದುರ್ಗದ ಒನಕೆ ಓಬವ್ವ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಒಂದು ಗೀತೆಗೆ ಸಾಹಿತ್ಯ ರಚಿಸಿದಾರೆ. ಓಬವ್ವನ ಬಾಲ್ಯ, ಯೌವ್ವನ, ಗಂಡ, ಆಕೆಯ ವ್ಯಕ್ತಿತ್ವವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಕೋಟೆ ಕಾಯುವವನ ಹೆಂಡತಿ, ಛಲವಾದಿ ಹೆಣ್ಣು ಮಗಳಾಗಿ ಎದುರಾಳಿ ಸೈನಿಕರನ್ನು ಒನಕೆಯಿಂದ ಹೇಗೆ ಕೊಂದಳು. ವೀರಮಗಳು ಅವತ್ತಿನ ವಿಜಯಕ್ಕೆ ಕಾರಣರಾಗಿದ್ದರು. ....
ಸುವರ್ಣ ಸುಂದರಿ ಒಂದು ಬೊಂಬೆ ಹೊಸಬರ ‘ಸುವರ್ಣ ಸುಂದರಿ’ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುವ ಕಾರಣ ಯಾರು ಶೀರ್ಷಿಕೆ ಎಂಬುದನ್ನು ತಂಡವು ಗೌಪ್ಯತೆಯನ್ನು ಕಾಪಾಡಿಕೊಂಡಿತು. ಬಿಡುಗಡೆಗೆ ಹತ್ತಿರವಾಗಿದ್ದರಿಂದ ಒಂದಷ್ಟು ಮಾಹಿತಿಯು ಲಭ್ಯವಾಗಿದೆ. ಸುಂದರ ಬೊಂಬೆಯು ಸುವರ್ಣ ಸುಂದರಿಯಾಗಿದ್ದು, ಇದರ ಮೂಲಕ ಕತೆಯು ತೆರೆದುಕೊಳ್ಳುತ್ತದೆ. ಕ್ರಿ.ಶ ೧೫೦೮ ರಿಂದ ಪ್ರಸಕ್ತ ೨೦೧೮ರ ವರೆಗಿನ ನಾಲ್ಕು ತಲೆಮಾರು ಮತ್ತು ಕಾಲಘಟ್ಟದ ಕತೆಯಾಗಿದೆ. ಕೃಷ್ಣದೇವರಾಯ ಅವಧಿಯಲ್ಲಿ ರಾಜಾ ಮಹಾದೇವಿರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಸನ್ನಿವೇಶಕ್ಕೆ ....
ಜೂನ್ ಹದಿನಾಲ್ಕರಂದು ಹ್ಯಾಂಗ್ ಓವರ್ ಪ್ರೀತಿಕಿತಾಬು ನಿರ್ದೇಶನ ಮಾಡಿದ್ದ ವಿಠಲ್‌ಭಟ್ ಎರಡನೆ ಬಾರಿ ಕತೆ ಬರೆದು ಆಕ್ಷನ್ ಕಟ್ ಹೇಳಿರುವ ‘ಹ್ಯಾಂಗ್ ಓವರ್’ ಚಿತ್ರವು ಜೂನ್ ಹದಿನಾಲ್ಕರಂದು ತೆರೆಗೆ ಬರಲಿದೆ. ಪ್ರಸಕ್ತ ಸಮಾಜ ಮತ್ತು ತಂದೆ-ತಾಯಿ ನಮಗೆ ಕೊಟ್ಟ ಸ್ವಾತಂತ್ರವನ್ನು ದುರುಪಯೋಗಪಡಿಸಿಕೊಳ್ಳದೇ ಯೌವ್ವನವನ್ನು ಜವಬ್ದಾರಿಯುತವಾಗಿ ಅನುಭವಿಸಿ ಎಂದು ಯುವ ಜನಾಂಗಕ್ಕೆ ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಕತೆಯಲ್ಲಿ ಮೂವರು ಹುಡುಗರು ಮತ್ತು ಹುಡುಗಿಯರು ಕಾಕ್ಟೇಲ್ ಪಾರ್ಟಿಗೆ ದೂರದ ಫಾರ್ಮ್ ಹೌಸ್‌ಗೆ ತೆರೆಳುತ್ತಾರೆ. ಎಲ್ಲರೂ ಎಂಜಾಯ್ ....
ತೆರೆಗೆ ಸಿದ್ದ ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ ಇತ್ತೀಚೆಗೆ ಚಂದನವನದ ಅಭಿಮಾನದ ಮೇಲೆ ಬೇರೆ ಭಾಷೆಯವರು ಕನ್ನಡ ಚಿತ್ರಗಳಿಗೆ ಹಣ ಹೂಡುತ್ತಿದ್ದಾರೆ. ಅದರಂತೆ ಟಾಲಿವುಡ್ ಸಿನಿಪಂಡಿತರು ಲವ್, ಸೈಕಲಾಜಿಕಲ್ ಥ್ರಿಲ್ಲರ್ ಇರುವ ‘’ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ’ ನಿರ್ಮಾಣ ಮಾಡಿರುವ ಚಿತ್ರವು ತೆರೆಗೆ ಬರಲು ಸನ್ನಿಹಿತವಾಗಿದೆ. ಆಹ್ಲಾದಕರ ಉತ್ತಮ ಸಂಗೀತಮಯ ಪ್ರೇಮಕತೆಯೊಂದಿರುವ ಕತೆಯಲ್ಲಿ ಯಾವುದಾದರೊಂದು ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ತಿರುವುಗಳು ಪಡೆದುಕೊಳ್ಳುತ್ತವೆ. ಅದರಿಂದ ಬದುಕಿ ಹೇಗೆ ....
ಐ ಲವ್ ಯು ಅಂದರು ಸುದೀಪ್ ೨೦೧೯ರ ಅದ್ದೂರಿ ಚಿತ್ರ ‘ಐ ಲವ್ ಯು’ ಕನ್ನಡ, ತೆಲುಗು ಭಾಷೆಗಳಲ್ಲಿ ಸಿದ್ದಗೊಂಡಿದೆ. ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆಯಾಗಿದ್ದು ಸಾಕಷ್ಟು ವೈರಲ್ ಆಗಿದ್ದು, ಜನರು ಇದರ ಬಗ್ಗೆ ಕಾಳಜಿ ವಹಿಸಿದ್ದಾರೆ. ಪ್ರಚಾರದ ಕೊನೆ ಹಂತವಾಗಿ ಎರಡನೆ ಟ್ರೈಲರ್‌ನ್ನು ಸುದೀಪ್ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡುತ್ತಾ ತುಣುಕುಗಳು ತುಂಬಾ ಶ್ರೀಮಂತವಾಗಿದೆ. ಮಧ್ಯದಲ್ಲೊಂದು ಸೋನುಗೌಡ ಪಾತ್ರವು ಎಂಟ್ರಿಯಾಗಿ ಕುತೂಹಲ ಮೂಡಿಸಿದೆ. ಉಪೇಂದ್ರ ಕುಟುಂಬ ನಂತರ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ಯಾರೇ ಹಾಡಿಗೆ ಹೆಜ್ಜೆ ಹಾಕಿದ್ದನ್ನು ನೋಡುತ್ತಾ ಖುಷಿ ....
ರೌಡಿಸಂ ಹಿನ್ನಲೆಯ ಪಂಟ್ರು ಸಮಾಜದಲ್ಲಿ ಹುಟ್ಟುತ್ತಾ ಯಾರು ರೌಡಿಗಳು ಆಗುವುದಿಲ್ಲ. ಗೊತ್ತಿದ್ದೋ, ಗೊತ್ತಿಲ್ಲದಯೋ ಸಣ್ಣ ತಪ್ಪು ಮಾಡಿ ಶಿಕ್ಷೆ ಅನುಭವಿಸಿ ಹೊರಬಂದಾಗ, ಜನರು ಅವರ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರಲು ಪ್ರಯತ್ನ ಮಾಡದೆ ಅವರನ್ನು ರೌಡಿಗಳಂತೆ ಬಿಂಬಿಸುತ್ತಾರೆ. ಇದರಿಂದ ಅವರುಗಳು ತಮ್ಮ ಛಾಪನ್ನು ಉಳಿಸಿಕೊಳ್ಳುವುದಕ್ಕಾದರೂ ಇದರಲ್ಲೆ ಮುಂದು ವರೆಯುತ್ತಾರೆ. ಇದಕ್ಕೆ ವಿದ್ಯಾಭ್ಯಾಸ ಬೇಕಾಗಿಲ್ಲ. ಇಂತಹದೆ ಅಂಶಗಳನ್ನು ಹೆಕ್ಕಿಕೊಂಡು ‘ಪಂಟ್ರು’ ಟ್ಯಾಗ್‌ಲೈನ್‌ದಲ್ಲಿ ನಮ್ಗೆ ನಾವೇ ಎಂದು ಹೇಳಿಕೊಂಡಿದ್ದಾರೆ. ಮೂವರು ಅಮಾಯಕ ಹುಡುಗರನ್ನು ಇಲ್ಲಿನವರು ಹೇಗೆ ....
ಶ್ರೀದೇವಿಯ ಹಾಡುಗಳೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ ಸಂದೀಪ್ ಮಲಾನಿ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಶ್ರೀದೇವಿ ಲೈವ್ಸ್ ಫಾರೆವರ್ …’ ಹೌದು, ನಟ-ನಿರ್ದೇಶಕ ಸಂದೀಪ್ ಮಲಾನಿಯವರು ದಿ. ನಟಿ ಶ್ರೀದೇವಿಯವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಅವರೀಗ ಶ್ರೀದೇವಿಯವರ ಕುರಿತಂತೆ ಒಂದು ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಹೌದು, ಸಂದೀಪ್ ....
ಅರ್ಧ ಶತಕ ಮತ್ತು ಶತಕದ ನಡುವಿನ ಸಂಭ್ರಮ ೫೦,೧೦೦ ಮತ್ತು ೧೨೫ ದಿನ ಪ್ರದರ್ಶನ ಕಂಡರೆ ಕಾರ್ಯಕ್ರಮ ಏರ್ಪಡಿಸುವುದು ಚಂದನವನದಲ್ಲಿ ನಡೆದು ಬಂದ ಸಂಪ್ರದಾಯವಾಗಿದೆ. ಸೋಜಿಗ ಎನ್ನುವಂತೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸತತ ೬೩ ದಿನಗಳ ಕಾಲ ಚಿತ್ರಮಂದಿರದಲ್ಲಿ ಇರುವುದರಿಂದ ನಿರ್ಮಾಪಕರು ಸಣ್ಣದೊಂದು ಸಮಾರಂಭ ನಡೆಸಿ ಫಲಕಗಳನ್ನು ಗಣ್ಯರ ಮೂಲಕ ಕಲಾವಿದರು, ತಂತ್ರಜ್ಘರಿಗೆ ವಿತರಿಸಿದರು. ಸತ್ಯ ಘಟನೆಯ ಸೂಕ್ಷ ವಿಷಯಗಳ ಚಿತ್ರಕ್ಕೆ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವುದು ಇತರರಿಗೆ ನಾಂದಿಯಾಗಿದೆ. ಒಳ್ಳೆಯ ಅಂಶಗಳು ಇದ್ದರೆ ಅದೇ ಹೀರೋ ....
ಖನನ ಕುತೂಹಲಕ್ಕೆ ಶುಕ್ರವಾರ ತೆರೆ ಬೀಳಲಿದೆ ಎರಡು ವರ್ಷದಿಂದ ಸುದ್ದಿಯಾಗಿದ್ದ ಕುತೂಹಲ ಕೆರಳಿಸಿದ್ದ ‘ಖನನ’ ಚಿತ್ರ ಕೊನೆಗೂ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಅಂದು ಕೊಂಡಿದ್ದೆಲ್ಲಾ ಆದರೆ ಜೀವನ ಹೇಗಾಗುತ್ತೇ. ಹನಿ ಐ ಯಾಮ್ ಹೋಮ್ ಎಂದು ಎರಡು ಬಾರಿ ಹೇಳವುದು. ಹೀಗೆ ಟ್ರೈಲರ್‌ದಲ್ಲಿ ಬರುವ ಪವರ್‌ಫುಲ್ ಡೈಲಾಗ್‌ಗಳಲ್ಲಿ ಇದು ಒಂದಾಗಿದೆ. ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ರಾಧಾ ಪ್ರಕಾರ ಸಿನಿಮಾದಲ್ಲಿ ಪಾಪ ಮಾಡುವವನಿಗೆ ಆಯಾಗಿ, ಖುಷಿಯಾಗಿರುತ್ತದೆ. ಅದು ಶಾಪವಾಗಿ ಪರಿಣಿಮಿಸಿದಾಗ ಅದರ ಪ್ರತಿಕ್ರಿಯೆ ಹೇಗಿರುತ್ತದೆ. ....
ಮುನಿರತ್ನ ಕುರುಕ್ಷೇತ್ರ ಆಗಸ್ಟ್ ೯ಕ್ಕೆ ಫಿಕ್ಸ್ ಚಂದನವನದ ಅದ್ದೂರಿ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಎಂದು ಬಿಡುಗಡೆಯಾಗುತ್ತದೆ ಎಂಬುದರ ಪ್ರಶ್ನೆಗೆ ನಿರ್ಮಾಪಕ ಮುನಿರತ್ನ ಸದ್ಯದಲ್ಲೆ ತಿಳಿಸುವುದಾಗಿ ಜಾರಿಕೊಳ್ಳುತ್ತಿದ್ದರು. ಶನಿವಾರ ಖುದ್ದು ಮಾದ್ಯಮದವರನ್ನು ಭೇಟಿ ಮಾಡಿ ಸಾಕಷ್ಟು ವಿಷಯಗಳು ಮತ್ತು ಬಿಡುಗಡೆ ದಿನಾಂಕವನ್ನು ತಿಳಿಸಿದ್ದಾರೆ. ವಿಳಂಬವಾಗಿರುವುದಕ್ಕೆ ೩ಡಿ ಕಾರಣವಾಗಿದೆ. ಸಾಮಾಜಿಕ ಸಿನಿಮಾವನ್ನು ೩ಡಿ ಮಾಡುವುದು ಸುಲಭ. ಆದರೆ ಪೌರಾಣಿಕ ಚಿತ್ರಕ್ಕೆ ಇದನ್ನು ಮಾಡಲು ಶ್ರಮ, ಸಮಯ ಜಾಸ್ತಿ ತೆಗೆದುಕೊಂಡಿದೆ. ದರ್ಶನ್ ಮುಖ್ಯ ಪಾತ್ರದಲ್ಲಿ ....
ಅನಂತ್‌ನಾಗ್ ಸಲುವಾಗಿ ಸಿದ್ದಗೊಂಡ ಸಿನಿಮಾ ನಿರ್ದೇಶಕ ಶ್ರೀಂಗೇರಿಸುರೇಶ್ ೨-೩ ಕತೆಗಳನ್ನು ನಿರ್ಮಾಪಕರಿಗೆ ಹೇಳಿದ್ದಾರೆ. ಅವರು ಒಂದನ್ನು ಆಯ್ಕೆ ಮಾಡಿ ಅನಂತ್‌ನಾಗ್ ಒಪ್ಪಿಕೊಂಡರೆ ಮಾತ್ರ ನಿರ್ಮಾಣ ಮಾಡುವುದಾಗಿ ಷರತ್ತು ಹಾಕಿದ್ದಾರೆ. ಕೊನೆಗೆ ಸಾಹಸ ಮಾಡಿ ಚಿತ್ರಕತೆ,ಸಂಭಾಷಣೆ ಬರೆದು, ಹಿರಿಯ ಕಲಾವಿದರನ್ನು ಒಪ್ಪಿಸಿ ಸಿದ್ದಗೊಂಡಿರುವ ಚಿತ್ರವೇ ‘ವೀಕೆಂಡ್’. ಸದರಿ ಮಾಹಿತಿಯನ್ನು ನಿರ್ದೇಶಕರು ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಬಿಚ್ಚಿಟ್ಟರು. ಚಿತ್ರದ ಕುರಿತು ಹೇಳುವುದಾದರೆ ಇಂಜಿನಿಯರ್‌ಗಳನ್ನು ಚಿಕ್ಕದಾಗಿ ಟೆಕ್ಕಿಗಳು ಅಂತ ಕರೆಯುತ್ತಾರೆ. ಇವರ ....
ಭಿಕ್ಷುಕನ ಪಾತ್ರಕ್ಕೆ ಬಣ್ಣ ಹಚ್ಚಲು ಸಿದ್ದರಿದ್ದ ರಜನಿಕಾಂತ್ ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಕಾಲ್‌ಶೀಟ್ ನೀಡಿದರೆ ನಿರ್ಮಾಪಕ,ನಿರ್ದೇಶಕನ ಭವಿಷ್ಯ ಸೂಪರ್ ಎಂದು ಸಿನಿಪಂಡಿತರು ಹೇಳುತ್ತಾರೆ. ಅಂತಹುದರಲ್ಲಿ ಸ್ವತ: ತಾವೇ ನಟಿಸಲು ಸಿದ್ದ, ಅದು ಭಿಕ್ಷುಕನ ಪಾತ್ರವಾದರೂ ಸರಿ ಅಂತ ಕೋರಿಕೊಂಡಿರುವ ಸುದ್ದಿ ‘ಅಮರ್’ ಸಿನಿಮಾದ ಸುದ್ದಿಗೋಷ್ಟಿಯಲ್ಲಿ ಚಿತ್ರತಂಡವು ವಿಷಯವನ್ನು ಬಹಿರಂಗಪಡಿಸಿದೆ. ಅಂಬರೀಷ್‌ಗೆ ಖಾಸಾ ದೋಸ್ತ್‌ಗಳಾಗಿ ಶತ್ರಘ್ನಾಸಿನ್ನಾ, ಮೋಹನ್ ಬಾಬು ಮತ್ತು ರಜನಿಕಾಂತ್ ಕೊನೆವರೆಗೂ ಇದ್ದರು. ಪುತ್ರ ಅಭಿಷೇಕ್‌ಅಂಬರೀಷ್ ....