ಚಂದನವನದ ಬಿಲ್‌ಗೇಟ್ಸ್ ಮೈಕ್ರೋಸಾಫ್ಟ್ ಪಿತಾಮಹ ‘ಬಿಲ್‌ಗೇಟ್ಸ್’ ಎಲ್ಲರಿಗೂ ತಿಳಿದಿದೆ. ಸ್ಯಾಂಡಲ್‌ವುಡ್‌ದಲ್ಲಿ ಇದೇ ಹೆಸರಿನ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಇದು ಅವರ ಕುರಿತಾದ ಕತೆ ಆಗಿರುವುದಿಲ್ಲ. ಹಳ್ಳಿಯಲ್ಲಿ ಪಾಂಡು-ಗಿರಿ ಆತ್ಮೀಯ ಸ್ನೇಹಿತರು. ಊರು ಮತ್ತು ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವಾಗಲೇ ತರಲೆ, ತುಂಟಾಟ ಮಾಡುತ್ತಿರುತ್ತಾರೆ. ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆ ಕೊಡುತ್ತಾರೆ. ಆವಾಗ ಇವರ ವಿಷಯ ಕೇಳಿ ತಾವು ಅವರಂತೆ ಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ. ಇಲ್ಲಿಗೆ ಬಂದಾಗ ಏನೇನು ನಡೆಯುತ್ತದೆ. ....
ಮತ್ತೋಂದು ಮಂಗಳಮುಖಿ ಚಿತ್ರ ರಥಾವರ, ಹಫ್ತಾ ಚಿತ್ರಗಳಲ್ಲಿ ಮಂಗಳಮುಖಿ ಪಾತ್ರವು ಪ್ರಧಾನವಾಗಿ ಕಾಣಿಸಿಕೊಂಡಿತ್ತು. ಅದೇ ಸಾಲಿಗೆ ‘ತ್ರಿನೇತ್ರಂ’ ಚಿತ್ರ ಉಪಶೀರ್ಷಿಕೆಯಾಗಿ ತ್ಯಾಗಂ ಎಂದು ಹೇಳಿಕೊಂಡಿದೆ. ಬಹುತೇಕ ಹೊಸಬರು ಸೇರಿಕೊಂಡು ಸಿದ್ದಪಡಿಸುತ್ತಿರುವುದು ವಿಶೇಷ. ಮೂರು ಕಣ್ಣುಗಳಿಗೆ ಶೀರ್ಷಿಕೆ ಅಂತ ಕರೆಯುತ್ತಾರೆ. ಒಂದೊಂದು ಕಣ್ಣಿಗೂ ಒಂದು ಪಾತ್ರ ಇರುತ್ತದೆ. ಹುಡುಗ, ಹುಡುಗಿ ಹಾಗೂ ಮೂರನೆ ಕಣ್ಣು ಮಂಗಳಮುಖಿ. ನಾಯಕ ಅರ್ಪಿತ್‌ಗೌಡ ಅಧಿಕಾರಯಾಗಬೇಂದು ಹಳ್ಳಿಯಿಂದ ಪಟ್ಟಣಕ್ಕೆ ಬಂದಾಗ ಮೂರನೆಯವ ಸಹಾಯ ಮಾಡುತ್ತಾನೆ. ಕಾಲೇಜು ಹುಡುಗಿಯಾಗಿ ಕವಿತಾಗೌಡ ನಾಯಕಿ ಮತ್ತು ನಿರ್ಮಾಪಕಿ. ....
ಗೋರಿ ಆದ್ಮೇಲೆ ಹುಟ್ಟಿದ ಸ್ಟೋರಿ ಮೇಲೆ ತಿಳಿಸಿರುವ ವ್ಯಾಕವು ಯಾವುದೇ ಚಿತ್ರದ ಹೆಸರು ಆಗಿರುವುದಿಲ್ಲ. ‘ಕಾಣದಂತೆ ಮಾಯವಾದನು’ ಸಿನಿಮಾಕ್ಕೆ ಅಡಿಬರಹವೆಂದು ಹೇಳಲಾಗಿದೆ. ಇದರಲ್ಲಿ ವಿಶೇಷತೆ ಇದೆ. ಪ್ರಸಕ್ತ ಜನರು ಶೀರ್ಷಿಕೆ ಜೊತೆಗೆ ಟ್ಯಾಗ್ ಲೈನ್ ನೋಡಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆಂದು ಸಿನಿ ಪಂಡಿತರು ಹೇಳಿದ್ದಾರಂತೆ. ಸಿನಿಮಾವು ಬಿಡುಗಡೆ ಹಂತಕ್ಕೆ ಬಂದಿದ್ದು, ಆಕರ್ಷಣೆ ತರುವ ಸಲುವಾಗಿ ಅಡಿಬರಹ ಬರೆದುಕೊಡುವ ಸ್ಫರ್ಧೆಯನ್ನು ಏರ್ಪಡಿಸಿದೆ. ೩೦೦೦ಕ್ಕೂ ಹೆಚ್ಚು ವ್ಯಾಕ್ಯಗಳ ಪೈಕಿ ‘ಕಾಲವಾದವನ ಪ್ರೇಮಕಾಲ’ ‘ಜೀವ ನಿಂತರೂ ಪ್ರೇಮ ತುಂತರು’ ‘ಜೀವ ಹೋದ ಪ್ರೇಮ ಯೋಧ’ ಹೀಗೆ ....
ದರ್ಶನ್ ಬಿಡುಗಡೆ ಮಾಡಿದ ನ್ಯೂರಾನ್ ಹಾಡುಗಳು ಉತ್ಸವ ಮೂರ್ತಿ ಎನ್ನುವಂತೆ ದರ್ಶನ್ ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಪ್ರತಿಭೆಗಳಿಗೆ ಧೈರ್ಯ ಬಂದಂತೆ ಆಗುತ್ತಿದೆ. ಸೈಂಟಿಫಿಕ್ ಸೆಸ್ಪನ್ಸ್, ಥ್ರಿಲ್ಲರ್ ‘ನ್ಯೂರಾನ್’ ಚಿತ್ರದ ಹಾಡುಗಳನ್ನು ದುರ್ಯೋಧನ ಅನಾವರಣ ಗೊಳಿಸಿದರು. ನಂತರ ಮಾತನಾಡಿ ಮೊದಲನಿಂದಲೂ ಹೊಸಬರಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯವಾಗಿದೆ. ಮೂವರು ನಾಯಕಿಯರು, ಒಬ್ಬ ನಾಯಕ ಇದ್ದಾರೆ. ನ್ಯೂರಾನ್ ದೇಹದ ಎಲ್ಲಾ ಭಾಗದಲ್ಲಿ ಇರುತ್ತದೆಂದು ನಿರ್ದೇಶಕರು ....
ಕನ್ನಡ ಚಿತ್ರಕ್ಕೆ ತಮಿಳು ನಟ ಶುಭ ಹಾರೈಕೆ ಕನ್ನಡ ಚಿತ್ರಗಳು ಬೇರೆ ಭಾಷೆಯಲ್ಲಿ ಸದ್ದು ಮಾಡುತ್ತಿರುವುದು ಸಂತಸ ತಂದಿದೆ. ಇಲ್ಲಿನ ಮಹೂರ್ತಕ್ಕೆ ಅಲ್ಲಿನ ಕಲಾವಿದರು ಭೇಟಿ ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಅದರಂತೆ ‘ಒಂಬತ್ತನೇ ದಿಕ್ಕು’ ಚಿತ್ರ ಮಹೂರ್ತ ಸಮಾರಂಭಕ್ಕೆ ತಮಿಳು ಸ್ಟಾರ್ ನಟ ಆರ್ಯ ಆಗಮಿಸಿ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ದಯಾಳ್‌ಪದ್ಮನಾಬನ್ ಈ ಹಿಂದೆ ಸಾರಾಂಶ, ಕಮರ್ಷಿಯಲ್ ಹೊಂದಿರುವ ‘ಯಶವಂತ’ ಚಿತ್ರ ಮಾಡಿದ್ದರು. ನಂತರ ಈಗ ಅಂತಹುದೆ ಕತೆ ಹೊಂದಿರುವ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ....
ಕನ್ನಡ್ ಗೊತ್ತಿಲ್ಲ ಚಿತ್ರಕ್ಕೆ ಮೂರು ಹೊಸ ಗಾಯಕರುಗಳು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ‘ಕನ್ನಡ್ ಗೊತ್ತಿಲ್ಲ’ ಚಿತ್ರತಂಡವು ಒಂದು ಹಾಡಿಗೆ ಧ್ವನಿ ನೀಡಲು ಪ್ರಚಾರ ಮಾಡಿದ್ದರು. ೧೩೮೪ ಆಕಾಂಕ್ಷಿಗಳು ಭಾಗವಹಿಸಿ, ಅದರಲ್ಲಿ ಅಳೆದು ತೂಕ ಮಾಡಿ ೩೫ಕ್ಕೆ ಇಳಿಸಿ, ಅಂತಿಮವಾಗಿ ಮೂರು ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡು ಅವರಿಂದ ಗೀತೆಯನ್ನು ಹಾಡಿಸಿದ್ದಾರೆ. ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಅವರುಗಳನ್ನು ಗೌರವಿಸಲಾಯಿತು. ಸಿನಿಮಾಕ್ಕೆ ನಾಯಕ ಕನ್ನಡ, ನಾಯಕಿ ಹರಿಪ್ರಿಯಾ ಎಂದು ಹೇಳಿರುವ ಕತೆಯು ಮರ್ಡರ್ ಮಿಸ್ಟರಿಯನ್ನು ಹೊಂದಿದೆ. ಒನ್ ಲೈನ್ ಸ್ಟೋರಿ, ....
ಬಂದ ನೋಡು ಪೈಲ್ವಾನ್ ಬಹು ದಿನಗಳಿಂದ ಸುದ್ದಿಯಾಗಿದ್ದ ಅದ್ದೂರಿ ಚಿತ್ರ’ ‘ಪೈಲ್ವಾನ್’ ಏಕಕಾಲಕ್ಕೆ ಕರ್ನಾಟಕದಲ್ಲಿ ೪೦೦ ಕೇಂದ್ರಗಳು, ಇತರೆ ರಾಜ್ಯಗಳಲ್ಲಿ ಸೇರಿಕೊಂಡು ಒಟ್ಟಾರೆ ೪೦೦೦ ಪರದೆಗಳಲ್ಲಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಹಿಂದಿಯಲ್ಲಿ ಶುಕ್ರವಾರದಂದು ತೆರೆಕಾಣಲಿದೆ. ಮಲೆಯಾಳಂ ಹೂರತುಪಡಿಸಿ ಉಳಿದ ಭಾಷೆಗಳಿಗೆ ಸುದೀಪ್ ಧ್ವನಿ ನೀಡಿದ್ದಾರೆ. ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ ದೊಡ್ಡ ಮಗನ ಚಿತ್ರಕ್ಕೆ ಶುಭ ಹಾರೈಸಲು ಆಗಿಮಿಸಿದ್ದ ರವಿಚಂದ್ರನ್ ಮಾತನಾಡುತ್ತಾ ಚಿತ್ರದಲ್ಲಿ ಮಿಂಚು, ಬೆಂಕಿ ಇದ್ದರೆ ಜನರು ಚಿತ್ರಮಂದಿರಕ್ಕೆ ಹೋಗುತ್ತಾರೆ. ....
ತ್ಯಾಗರಾಜನ ಹುಟ್ಟುಹಬ್ಬಕ್ಕೆ ಶಿವಾಜಿ ಸುರತ್ಕಲ್ ಟ್ರೈಲರ್ ಬಿಡುಗಡೆ ಸಾಕಷ್ಟು ವರ್ಷಗಳ ನಂತರ ಗನ್ ಹಿಡಿದು, ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿರುವ ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರದ ಟ್ರೈಲರ್ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಅನಾವರಣಗೊಂಡಿತು. ನಿರ್ದೇಶಕ ಆಕಾಶ್‌ಶ್ರೀವತ್ಸ ಮಾತನಾಡಿ ದಿ ಕೇಸ್ ಆಫ್ ರಣಗಿರಿ ರಹಸ್ಯವೆಂದು ಅಡಬರಹದಲ್ಲಿ ಹೇಳಲಾಗಿದೆ. ಶಿವಾಜಿ ಮತ್ತೋಂದು ಪದ ಪವರ್, ಸುರತ್ಕಲ್ ಎಂದರೆ ಮೆದುಳು. ಇವರಡು ಸೇರಿಕೊಂಡು ಹೇಗೆ ಕೊಲೆಯನ್ನು ಭೇದಿಸುತ್ತಾರೆ ಎಂಬುದು ಒಂದು ಏಳೆಯ ಕತೆಯಾಗಿದೆ. ನಾಲ್ಕು ಹಾಡುಗಳು ಇರಲಿದೆ. ....
ಹಾಡಿನ ಚಿತ್ರೀಕರಣದಲ್ಲಿ ತ್ರಿವಿಕ್ರಮ ‘ಪಕ್ಕದ ಮನೆ ಪಮ್ಮಿ, ಕೊಡುತಾಳೆ ಸಿಗ್ನಲ್ ಕೆಮ್ಮಿ’‘ ಗೀತೆಯು ‘ತ್ರಿವಿಕ್ರಮ’ ಸಿನಿಮದಾಗಿದೆ. ಇದರ ಚಿತ್ರೀಕರಣವು ಮಿಲ್ಕ್ ಕಾಲೋನಿ ರಸ್ತೆ, ಮೈದಾನದಲ್ಲಿ ನಡೆಯುತ್ತಿತ್ತು. ಪತ್ರಕರ್ತರು ಭೇಟಿ ನೀಡಿದಾಗ ಚಿಕ್ಕಣ್ಣ ಒಂದು ಕಡೆ ಹುಡುಗಿಯನ್ನು ನೋಡುತ್ತಾ ಹಾಡುತ್ತಿದ್ದರೆ, ನಂತರ ನಾಯಕ ಹುಡುಗರೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಒಂದು ಹಂತದಲ್ಲಿ ಎರಡು ದೃಶ್ಯಗಳು ಓಕೆ ಆದಾಗ ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಕ್ಯಾಪ್ಟನ್ ಸಹನಮೂರ್ತಿ ಮಾತನಾಡಿ ಇಲ್ಲಿಯವರೆಗೂ ಶೇಕಡ ೨೫ ರಷ್ಟು ಶೂಟಿಂಗ್ ಮುಗಿದಿದೆ. ಅಮ್ಮ ಸಂಪ್ರದಾಯ, ಆಚಾರ-ವಿಚಾರ ನಂಬುವವರು, ಮಗ ಇವತ್ತಿನ ....
ಪತ್ರಕರ್ತರ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿ ಯಾವುದೇ ಚಿತ್ರ ಬಿಡುಗಡೆಯಾದರೆ ಅದರ ಮಾಹಿತಿ ಮಾದ್ಯಮದ ಮೂಲಕ ಲಭ್ಯವಾಗುತ್ತದೆ. ಅದರಿಂದಲೇ ಪತ್ರಕರ್ತರು ಚಿತ್ರರಂಗ ಮತ್ತು ಮಾದ್ಯಮಕ್ಕೆ ಸೇತುವೆಯಾಗಿರುತ್ತಾರೆ. ಪ್ರತಿ ವರ್ಷ ಉತ್ತಮ ಚಿತ್ರಗಳು, ಕಲಾವಿದರು, ತಂತ್ರಜ್ಘರಿಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿಗಳನ್ನು ನೀಡುವ ಸಂಪ್ರದಾಯ ಬೆಳೆದುಬಂದಿದೆ. ಈ ಸಂದರ್ಭದಲ್ಲಿ ಪ್ರಶಸ್ತಿಗೆ ವಂಚಿತರಾದವರು ತಮ್ಮ ಬೇಸರವನ್ನು ಮಾದ್ಯಮದವರೊಂದಿಗೆ ಹಂಚಿಕೊಳ್ಳುತ್ತಾರೆ. ಈಗ ಅಂತಹುದೇ ದಕ್ಷಿಣ ಭಾರತದಲ್ಲಿ ಮೊದಲು ಎನ್ನುವಂತೆ ಸ್ಯಾಂಡಲ್‌ವುಡ್ ಪತ್ರಕರ್ತರು ಸೇರಿಕೊಂಡು ‘ಚಂದನವನ ....
ಪ್ರಚಲಿತ ಸಮಾಜದಲ್ಲಿ ನಡೆಯುವ ಘಟನೆಗಳ ಗಾಥೆ ಓದಿದ್ದು ಇಂಜಿನಿಯರಿಂಗ್, ಅಂತರಾಳದಲ್ಲಿ ಆಸೆ ಹುಟ್ಟಿದ್ದು ಚಿತ್ರರಂಗ. ಅದರಂತೆ ಉದ್ಯೋಗಕ್ಕೆ ತಾತ್ಕಲಿಕ ರಜೆ ತೆಗೆದುಕೊಂಡಿರುವ ಸ್ವಾಮಿ.ವೈ.ಬಿ.ಎನ್ ‘ಧೀರನ್’ ಚಿತ್ರಕ್ಕೆ ರಚನೆ, ಎರಡು ಹಾಡಿಗೆ ಸಾಹಿತ್ಯ, ನಿರ್ದೇಶನ ಜೊತೆಗೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗಂತ ನೇರ ಬಣ್ಣದ ಲೋಕಕ್ಕೆ ಕಾಲಿಟ್ಟಿಲ್ಲ. ಹತ್ತು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡ ಧೈರ್ಯದಿಂದಲೇ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ದಿ ರನ್, ಥೀರೇಂದ್ರಕುಮಾರ್ ಅಂತಲೂ ಶೀರ್ಷಿಕೆಗೆ ಹೋಲಿಸಬಹುದು. ಪ್ರಸಕ್ತ ಸಮಾಜದಲ್ಲಿ ನಡೆಯುವ ....
ಚಿತ್ರರಂಗಕ್ಕೆ ಗಣೇಶ್ ಸೋದರ ನಟ ಗಣೇಶ್ ಕಿರಿಯ ಸೋದರ ಮಹೇಶ್ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಈಗ ಮತ್ತೋಬ್ಬ ತಮ್ಮ ಉಮೇಶ್ ‘ನಾನೇ ರಾಜ’ ಚಿತ್ರದ ಮೂಲಕ ಸೂರಜ್‌ಕೃಷ್ಣ ಹೆಸರಿನೊಂದಿಗೆ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ೧೯೮೨ರಂದು ರವಿಚಂದ್ರನ್ ಮೊದಲ ಚಿತ್ರ ಇದೇ ಹೆಸರಿನಲ್ಲಿ ಬಿಡುಗಡೆಗೊಂಡಿತ್ತು. ಮನರಂಜನೆ, ಸಾಹಸ ಮತ್ತು ಪ್ರೀತಿ ಕತೆ ಹೊಂದಿದೆ. ಅಜ್ಜಿಯ ಮುದ್ದಿನ ಮೊಮ್ಮಗ, ಸ್ನೇಹಿತರ ಅಚ್ಚುಮೆಚ್ಚಿನ ಗೆಳೆಯ ರಾಜ, ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಹಾಗೆ ಯಾರೇ ಯಾವ ಸಮಯದಲ್ಲೂ ಸಹಾಯ ಕೇಳಿದರೂ ಮುಂದಾಗುವ ಅಪಾಯವನ್ನು ಲೆಕ್ಕಿಸದೆ ಸಹಾಯ ಮಾಡುವ ಗುಣವುಳ್ಳವನು. ಅಕಸ್ಮಾತ್ ಸಿಕ್ಕ ಹುಡುಗಿಯೊಬ್ಬಳು ....
ಸಿಲಿಕಾನ್ ಸಿಟಿಯಲ್ಲಿ ಗಿರಿಗಿಟ್ ಅಬ್ಬರ ಬೆಂಗಳೂರಿನಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ಜನರು ನೋಡುತ್ತಾರೆ. ಅದರಿಂದಲೇ ಟಾಲಿವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್ ಚಿತ್ರಗಳು ಹೆಚ್ಚಾಗಿ ತೆರೆಕಾಣುತ್ತವೆ. ಆ ಸಾಲಿಗೆ ಕೋಸ್ಟಲ್‌ವುಡ್‌ನ ತುಳು ಚಿತ್ರವು ಸೇರಿಕೊಂಡಿದೆ. ಅಪರೂಪಕ್ಕೆ ಎನ್ನುವಂತೆ ಒಂದು ಕಡೆ ಈ ಭಾಷೆಯ ಸಿನಿಮಾ ಬಿಡುಗಡೆಗೊಂಡು ಸುದ್ದಿಯಾಗದೆ ಮಾಯವಾಗುತ್ತಿತ್ತು. ಈಗ ‘ಗಿರಿಗಿಟ್’ ಎನ್ನುವ ಹಾಸ್ಯ ತುಳು ಸಿನಿಮಾವು ಕಳೆದ ವಾರ ಬೆಂಗಳೂರಿನ ೧೧ ಕೇಂದ್ರಗಳಲ್ಲಿ ವಿತರಕ ಜಯಣ್ಣ ಶಿಪಾರಸ್ಸಿನ ಮೇರೆಗೆ ತೆರೆ ಕಂಡಿತ್ತು. ಮಾಲ್‌ಗಳು ಒಲ್ಲದ ಮನಸ್ಸಿನಿಂದ ಬಿಡುಗಡೆ ಮಾಡಿದ್ದರು. ಮುಂದೆ ಇದರ ....
ಹೊಸಬರ ವಿಕ್ರಮ ಚಿತ್ರ ಮಹೂರ್ತ ಜನರು ಅನಿರೀಕ್ಷಿತ ಕತೆಗಳನ್ನು ಇಷ್ಟಪಡುತ್ತಾರೆಂದು ತಿಳಿದಿರುವ ಮಂಡ್ಯಾದ ಶ್ರೀಯುತ್ ‘ವಿಕ್ರಮ ಚಿತ್ರ’ ಸಿನಿಮಾಕ್ಕೆ ರಚನೆ,ಚಿತ್ರಕತೆ, ನಿರ್ದೇಶನ ಜವಬ್ದಾರಿ, ಇದರೊಂದಿಗೆ ಕಾಲೇಜು ಹುಡುಗನ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಕುರಿತು ಹೇಳುವುದಾದರೆ ಎಂಟಿಎ ಮುಗಿಸಿ ಉತ್ತಮ ಹುದ್ದೆಯಲ್ಲಿದ್ದರೂ ಬಣ್ಣದ ವ್ಯಾಮೋಹದಿಂದ ಕೆಲಸಕ್ಕೆ ಬೆನ್ನು ತೋರಿಸಿ ಪೂರ್ಣ ಪ್ರಮಾಣದಲ್ಲಿ ಇದರಲ್ಲಿ ತೊಡಗಿಕೊಂಡಿದ್ದಾರೆ. ಕರ್ವ ಸೇರಿದಂತೆ ಹಲವರ ಬಳಿ ಅನುಭವ ಪಡೆದುಕೊಂಡು, ಗ್ಯಾಪ್‌ನಲ್ಲಿ ಧಾರವಾಹಿ, ಸಣ್ಣ ಪುಟ್ಟ ಪಾತ್ರಗಳಲ್ಲಿ ನಟನೆ ....
ಟಕ್ಕರ್‌ಗೆ ದರ್ಶನ್‌ರಿಂದ ಬಂಪರ್ ದರ್ಶನ್ ಹತ್ತಿರದ ಸಂಬಂದಿ ಮನೋಜ್ ನಾಯಕನಾಗಿ ನಟಿಸಿರುವ ‘ಟಕ್ಕರ್’ ಚಿತ್ರದ ಶುರುವಿನಿಂದಲೂ ಕುರುಕ್ಷೇತ್ರದ ದುಯೋರ್ಧನ ಸಲಹೆ, ಸಹಕಾರ ನೀಡುತ್ತಿರುವುದರಿಂದ ಬಿಡುಗಡೆ ಮುಂಚೆ ಬಂಪರ್ ಹೊಡೆದಂತೆ ಆಗಿದೆ ಎಂಬುದಾಗಿ ತಂಡವು ಆಶಾಭಾವನೆಯಲ್ಲಿದೆ. ಸದರಿ ವಿಷಯವನ್ನು ನಿರ್ಮಾಪಕ ಕೆ.ಎನ್.ನಾಗೇಶ್‌ಕೋಗಿಲು ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಖುಷಿಯಿಂದ ಹೇಳಿಕೊಂಡರು. ಮೊದಲ ಭೇಟಿಯಲ್ಲೆ ನಿರ್ಮಾಪಕರನ್ನು ಮೊದಲು ಉದ್ಯಮದಲ್ಲಿ ಉಳಿಸುವ ಕೆಲಸ ಮಾಡಬೇಕು ಅಂತ ಕಿವಿಮಾತನ್ನು ತಂಡಕ್ಕೆ ಹೇಳಿದರು. ಚಿತ್ರೀಕರಣದ ಸಮಯದಲ್ಲಿ ಏನೇನು ಆಗುತ್ತಿದೆ ಎಂದು ....
ಮೂಡನಂಬಿಕೆ, ಕಂದಾಚಾರ ನಿರ್ಮೂಲನ ಮಾಡುವ ಚಿತ್ರ ಜಗತ್ತು ೨೧ನೇ ಶತಮಾನದಲ್ಲಿ ಇದ್ದರೂ ಜನರು ಮೂಡನಂಬಿಕೆ, ಕಂದಾಚಾರಗಳನ್ನು ನಂಬುತ್ತಲೆ ಇದ್ದಾರೆ. ಇದರಿಂದ ಅಮಾಯಕ ಜನರು ತತ್ತರಕ್ಕೆ ಒಳಗಾಗುತ್ತಿದ್ದಾರೆ. ಇಂತಹ ನಂಬಿಕೆಗಳನ್ನು ಹೋಗಲಾಡಿಸಿ, ಬದಲಾವಣೆ ಸಾರುವ ‘ಆವಂತಿಕ’ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ತಾಯಿ ಮಗನ ಬಾಂದವ್ಯದ ಕತೆಯಲ್ಲಿ ಇದರ ಅಡಿಗೆ ಸಿಲುಕಿದ ಹಾಗೂ ನಿಧಿ ಆಸೆಗಾಗಿ ಮಗನಿಗೆ ತೊಂದರೆ ಕೊಡುತ್ತಾರೆ. ಇದರ ವಿರುದ್ದ ಹೋರಾಡಿ ಮಗನನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ. ಹಾಗೆಯೇ ಬದಲಾವಣೆ ಮಾಡಲು ಯಾವ ರೀತಿಯಲ್ಲಿ ಶ್ರಮಪಡುತ್ತಾಳೆ ಎಂಬುದು ಒಂದು ಏಳೆಯ ....
ವಿಜ್ಘಾನಿಯ ವಿಜ್ಘಾನದ ಕತೆ ಬಣ್ಣದ ಲೋಕ ಅಷ್ಟು ಸುಲಭವಾಗಿ ಮರೆಯಲಿಕ್ಕೆ ಸಾಧ್ಯವಿಲ್ಲ. ಎಲ್ಲೇ ಹೋದರೂ ಅದು ಕಾಡುತ್ತಲೇ ಇರುತ್ತದೆ. ಇದನ್ನು ಹೇಳಲು ಪೀಠಿಕೆ ಇದೆ. ಸುಂದರ್‌ರಾಜ್-ಪ್ರಮೀಳಾಜೋಷಾಯ್ ಹತ್ತಿರದ ಸಂಬಂದಿ ತೇಜ್ ಬಾಲಕನಾಗಿ ಶಂಕರ್‌ನಾಗ್ ಅಭಿನಯದ ‘ಮಹೇಶ್ವರ’ ಚಿತ್ರದಲ್ಲಿ ಅಭಿನಯಿಸಿ, ಮೀಸೆ ಚಿಗುರಿದಾಗದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಮುಂದೆ ಅಪ್ಪನ ಬಯಕೆಯಂತೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಪಿ.ಹೆಚ್‌ಡಿ ಮುಗಿಸಿ, ವಿಜ್ಘಾನಿಯಾಗಿ ಸಿಂಗಪೂರ್‌ದಲ್ಲಿ ಕಚೇರಿಯನ್ನು ತೆರೆದಿದ್ದಾರೆ. ಆದರೆ ನಟನೆ ಗೀಳು ಮಾಸದ ಕಾರಣ ಮಧ್ಯೆ ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಆದರೂ ಮಾತೃಭಾಷೆಯಲ್ಲಿ ....
ಹೊಸ ತಂತ್ರಜ್ಘಾನದಲ್ಲಿ ನಿಷ್ಕರ್ಷ ೧೯೯೪ರಲ್ಲಿ ಬಿಡುಗಡೆಗೊಂಡ ‘ನಿಷ್ಕರ್ಷ’ ಸೂಪರ್ ಹಿಟ್ ಚಿತ್ರದಲ್ಲಿ ಡಾ.ವಿಷ್ಣುವರ್ಧನ್, ಅನಂತ್‌ನಾಗ್, ಸುಮನ್‌ನಗರ್‌ಕರ್, ಪ್ರಕಾಶ್‌ರೈ, ರಮೇಶ್‌ಭಟ್ ಮತ್ತು ವೈಟ್ ಕಾಲರ್ ವಿಲನ್ ಆಗಿ ಬಿ.ಸಿ.ಪಾಟೀಲ್ ಮೊದಲ ಬಾರಿ ಬಣ್ಣ ಹಚ್ಚಿದ್ದರು. ರಾಜ್ಯ ಸರ್ಕಾರದಿಂದ ಮೂರು ಪ್ರಶಸ್ತಿಗಳು, ಉದಯ ವಾಹಿನಿಯಿಂದ ಒಂಬತ್ತು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿತು. ಸದರಿ ಚಿತ್ರಕ್ಕೆ ಅಧುನಿಕ ತಂತ್ರಜ್ಘಾನದ ಸ್ಪರ್ಶ ನೀಡಿದೆ. ಇದರನ್ವಯ ಮಾಹಿತಿ ನೀಡಲು ನಿರ್ಮಾಪಕಿ ವನಜಾ.ಬಿ.ಪಾಟೀಲ್ ಮಾದ್ಯಮದವರನ್ನು ಭೇಟಿ ಮಾಡಿದ್ದರು. ಬಿ.ಸಿ.ಪಾಟೀಲ್ ಮಾತನಾಡುತ್ತಾ ಒಂದು ದಿನ, ....
ವಾರ್ಡ್ ನಂ.೧೧ರಲ್ಲಿ ನಡೆಯುವ ಗಾಥೆ ವಾರ್ಡ್ ಅಂತ ಆಸ್ಪತ್ರೆ, ಪಟ್ಟಣಗಳಲ್ಲಿ ಬಳಸುವ ಪದವಾಗಿದೆ. ಈಗ ‘ವಾರ್ಡ್ ನಂ.೧೧’ ಎನ್ನುವ ಪೊಲಟಿಕಲ್ ಥ್ರಿಲ್ಲರ್ ಚಿತ್ರವೊಂದು ಸೆಟ್ಟೇರಿದೆ. ಪಾಂಡವಪುರದ ಶ್ರೀಕಾಂತ್ ಇಂಜನಿಯರಿಂಗ್ ಓದುವಾಗಲೇ ಕತೆಗಳನ್ನು ಬರೆಯುವ ಹವ್ಯಾಸ ರೂಡಿಸಿಕೊಂಡಿದ್ದರು. ಅದರಲ್ಲಿ ಇದು ಒಂದಾಗಿದೆ. ಹಲವು ನಿರ್ದೇಶಕ ಬಳಿ ಸಹಾಯಕರಾಗಿ ಕೆಲಸ, ಕಿರುಚಿತ್ರ ಸಿದ್ದಪಡಿಸಿದ್ದು, ಈಗ ಅನುಭೂತಿಯಿಂದ ಚಿತ್ರಕ್ಕೆ ರಚನೆ, ನಿರ್ದೇಶನ ಮಾಡುತ್ತಿದ್ದಾರೆ. ಕಾಲ್ಪನಿಕ ವಾರ್ಡ್‌ನಲ್ಲಿ ನಾಲ್ಕು ಗೆಳಯರು ಇರುತ್ತಾರೆ. ಅದರಲ್ಲಿ ಒಬ್ಬನ ಕೊಲೆಯಾಗುತ್ತದೆ. ಇದನ್ನು ತನಿಖೆ ....
ಸಂಪ್ರದಾಯ ಮತ್ತು ಸ್ವಾದಕ್ಕೆ ಮತ್ತೋಂದು ಹೆಸರು ಓಗರ ಓಗರ ಅಂದರೆ ಕರ್ನಾಟಕದಲ್ಲಿ ಅನ್ನ ಎಂದರ್ಥ ಕೊಡುತ್ತದೆ. ಸ್ವಾದಿಷ್ಟ ಆರೋಗ್ಯಕರ ಅಡುಗೆಯನ್ನು ದಿಢೀರ್ ತಯಾರಿಸಲು ಸಾಂಪ್ರದಾಯಿಕ ಮಸಾಲಾ ಮಿಶ್ರಣಗಳ ಶ್ರೀಮಂತ ಪರಂಪರೆಯನ್ನು ಇದು ಮನೆ ಮನೆಗೆ ತರುತ್ತದೆ. ಇದರಲ್ಲಿ ತಯಾರಾಗುವ ಸಿದ್ದ ತಿನಿಸುಗಳು ಗ್ರಾಹಕರ ನಾಲಿಗೆಗೆ ರುಚಿಕರವಾಗಿ ಧೀರ್ಘಕಾಲದವರೆಗೂ ಉಳಿಸುತ್ತದೆ. ಶ್ರೀಚಕ್ರ ಫುಡ್ಸ್ ಅಂಡ್ ಬಿವರೇಜಸ್ (ಪ್ರೈ) ಲಿ. ಸಂಸ್ಥೆಯ ‘ಓಗರ’ ಮಾಲೀಕ ರಘುನಾಥ್ ರಾಷ್ಟದಲ್ಲಿ ಅಂದಾಜು ೫೦ ಸಾವಿರ ಓಗರ ಮಳಿಗೆ ಸ್ಥಾಪಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ೮ ಸಾವಿರ ಮಳಿಗೆಗಳು, ....