ತೆರೆಗೆ ಸಿದ್ದ ಒಂದುಗಂಟೆಯಕಥೆ
ಕೆಲವು ವರ್ಷದ ಕೆಳಗೆ ಕೋಣನಕುಂಟೆ ಪ್ರದೇಶದಲ್ಲಿ ನಡೆದಘಟನೆಯನ್ನು ‘ಒಂದುಗಂಟೆಯಕತೆ’ ಚಿತ್ರದಲ್ಲಿ ತೋರಿಸಿರುವ ರಾಘವದ್ವಾರ್ಕಿಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ.ಇಡೀರಾಜ್ಯ ಸುದ್ದಿ ಮಾಡಿದಂತಗಂಭೀರ ವಿಷಯವನ್ನು ಹಾಸ್ಯದಲ್ಲಿತೋರಿಸಲಾಗಿದೆ.ಪ್ರೀತಿಯಿಂದ ವಂಚಿತಳಾದ ಆಕೆಯ ಮನಸ್ಸುಜರ್ಜರಿತಗೊಂಡು, ಇವನಿಗೆ ತಕ್ಕ ಬುದ್ದಿಕಲಿಸಬೇಕೆಂದು ಪಣತೊಟ್ಟು, ಯಾರು ಊಹಿಸಲಾರದಂತ ಶಿಕ್ಷೆ ಕೊಡುತ್ತಾಳೆ.ಅಲ್ಲಿಂದ ಮುಂದೇನುಎನ್ನುವುದನ್ನುಚಿತ್ರದಲ್ಲಿ ನೋಡಬೇಕಂತೆ.
ಮಹಾಶಿವರಾತ್ರಿಯಂದು ಚಾಲೆಂಜಿಂಗ್ ಸ್ಟಾರ್ ಅಭಿನಯದ "ರಾಬರ್ಟ್" ಚಿತ್ರ ಬಿಡುಗಡೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ , ಬಹು ನಿರೀಕ್ಷಿತ "ರಾಬರ್ಟ್" ಚಿತ್ರ ಮಹಾಶಿವರಾತ್ರಿಯ ಶುಭದಿನದಂದು ಬಿಡುಗಡೆಯಾಗುತ್ತಿದೆ.
ಉಮಾಪತಿ ಫಿಲಂಸ್ ಲಾಂಛನದಲ್ಲಿ ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ವಿ.ಹರಿಕೃಷ್ಣ ಅವರದು.
*ಚಿಂದಿ ಆಯುವ ಮಕ್ಕಳ ಕಥೆಯೇ ಪಾರು; ಇದೇ ತಿಂಗಳ 26ಕ್ಕೆ ಬಿಡುಗಡೆ* *-ಸ್ನೇಹಿತನ ಚಿತ್ರಕ್ಕೆ ಶುಭಹಾರೈಸಿದ ನೀನಾಸಂ ಸತೀಶ್* *- ಆಡಿಯೋ ಬಿಡುಗಡೆ ಮಾಡಿ ಸಂಭ್ರಮಿಸಿದ ಚಿತ್ರತಂಡ* ದುರ್ಗಾ ಸಿನಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ ಪಾರು ಸಿನಿಮಾ ಶನಿವಾರ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ನೀನಾಸಂ ಸತೀಶ್ ಮತ್ತು ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ವಿಶೇಷ ಅತಿಥಿಗಳಾಗಿ ಆಗಮಿಸಿ ಸ್ನೇಹಿತನ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಅಂದಹಾಗೆ, ಈಗಾಗಲೇ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವ ಹನುಮಂತ ಪೂಜಾರ್ ಮೊದಲ ಬಾರಿಗೆ ಪಾರು ಎಂಬ ಮಕ್ಕಳ ಸಿನಿಮಾ ಮೂಲಕ ....
*ಮಾರ್ಚ್ 26ಕ್ಕೆ ಕರ್ನಾಟಕ ಸೇರಿ ಗಲ್ಫ್ ದೇಶಗಳಲ್ಲಿಯೂ ತುಳು ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಬಿಡುಗಡೆ* *- ಅಕ್ಮೆ(ACME ) ಮೂವೀಸ್ ಇಂಟರ್ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣ* *- ಸಿನಿಮಾ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಬಂಡವಾಳ* *- ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕ, ನವ್ಯಾ ಪೂಜಾರಿ ನಾಯಕಿ, ಸೂರಕ್ ಶೆಟ್ಟಿ ನಿರ್ದೇಶನ* ತುಳು ಭಾಷೆಯ ಚಿತ್ರಗಳು ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೇ ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪಬೇಕು ಹಾಗು ಕನ್ನಡ ಭಾಷೆಯ ಚಿತ್ರಕ್ಕೆ ಎಷ್ಟು ಪ್ರಾಧಾನ್ಯ ನೀಡುತ್ತೇವೆಯೋ ಅಷ್ಟೇ ಪ್ರಾಧಾನ್ಯತೆ ತುಳು ಭಾಷೆಯ ಚಿತ್ರಕ್ಕೂ ನೀಡುವ ಮೂಲಕ ಕರುನಾಡಿನ ಸಮಸ್ತ ಜನತೆಯು ತುಳು ....
*ನೋಡು ಶಿವ ಆಲ್ಬಂ ಹಾಡು ಬಂದೇ ಬಿಡ್ತು ಶಿವ....* *-ಅದ್ದೂರಿ ಕಾರ್ಯಕ್ರಮದ ಮೂಲಕ ಗೀತೆ ಬಿಡುಗಡೆ* *-ಅತಿಥಿಗಳಾಗಿ ಆಗಮಿಸಿ ಹಾರೈಸಿದ ನಿರ್ದೇಶಕ ಭಗವಾನ್, ಮತ್ತು ರಾಕ್ಲೈನ್ ವೆಂಕಟೇಶ್* ಕನ್ನಡದಲ್ಲಿ ಸಾಕಷ್ಟು ಆಲ್ಬಂ ಸಾಂಗ್ ಬಿಡುಗಡೆಯಾಗಿವೆ. ಅದೇ ರೀತಿ "ನೋಡು ಶಿವ" ಆಲ್ಬಂ ಸಾಂಗ್ ನಿರ್ಮಾಣವಾಗಿದ್ದು, ಮೇಕಿಂಗ್ ಮೂಲಕವೇ ಈ ಹಾಡು ರಿಚ್ ಆಗಿ ಮೂಡಿಬಂದಿದೆ. ಸುಮಿತ್ ಎಂ.ಕೆ ಹಾಗೂ ಕಿರುತೆರೆ ನಟಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಚಂದನ್ ಶೆಟ್ಟಿ ಸಹ ಕಾಣಿಸಿಕೊಂಡಿದ್ದಾರೆ. ಎಂ.ಕೆ ಆರ್ಟ್ಸ್ ಲಾಂಛನದಲ್ಲಿ ಮೋನಿಕಾ ಕಲ್ಲುರಿ ಅವರು ಈ ಆಲ್ಬಂ ಸಾಂಗ್ ನಿರ್ಮಾಣ ಮಾಡಿದ್ದು, ಗುರುವಾರ ಹಾಡಿನ ಬಿಡುಗಡೆ ಸಮಾರಂಭ ನಡೆದಿದ್ದು, ಆನಂದ್ ಆಡಿಯೋ ....
*ಸಮಾಜದ ಜ್ವಲಂತ ಸಮಸ್ಯೆಗಳ ಕನ್ನಡಿ ಈ ನನ್ನ ಕನಸುಗಳು* *-ಶ್ರೀಗುರು ಅನುಗ್ರಹ ಪ್ರೊಡಕ್ಷನ್ಸ್ ನಿಂದ ನಿರ್ಮಾಣ, ರಾಜು ನಿರ್ದೇಶನ* *-ಗಿರಿಜಾ ಲೋಕೇಶ್ ಅತಿಥಿಯಾಗಿ ಶುಭ ಹಾರೈಕೆ* ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ಮಕ್ಕಳ ಸಿನಿಮಾಗಳ ಸಂಖ್ಯೆ ತುಂಬ ಕಡಿಮೆ ಆಗಿದೆ. ಇದೀಗ ಆ ಹಸಿವನ್ನು ತುಂಬಿಸಲು ನನ್ನ ಕನಸುಗಳು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲೆಂದೇ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಚಿತ್ರದ ಬಗ್ಗೆ ಒಂದೊಂದಾಗಿ ಮಾಹಿತಿಯನ್ನು ಹಂಚಿಕೊಂಡಿತು. ವಿಶೇಷ ಅತಿಥಿಯಾಗಿಹಿರಿಯ ನಟಿ ಗಿರಿಜಾ ಲೋಕೇಶ್ ಆಗಮಿಸಿ ಇಡೀ ತಂಡಕ್ಕೂ ಶುಭ ಹಾರೈಸಿದ್ದಾರೆ. ಶ್ರೀಗುರು ಅನುಗ್ರಹ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ....
*ಅಜಯ್ ಡೈರೆಕ್ಟರ್ ಸರ್ಕಲ್ ನಲ್ಲಿ ಹನ್ನೆಡರಡು ಸಿನಿಮಾಗಳ ಶೀರ್ಷಿಕೆ ಅನಾವರಣ* ಸಿನಿಮಾವೊಂದನ್ನು ಆರಂಭಿಸಿ ಅದನ್ನು ತೆರೆಗೆ ತರುವುದು ಕಷ್ಟದ ಕೆಲಸ ಅನ್ನೋದು ಬಹುತೇಕರ ಅಭಿಪ್ರಾಯ. ಕಳೆದ ಒಂದು ವರ್ಷದಲ್ಲಿ ಕೊರೋನ ಸಮಸ್ಯೆಯಿಂದ ಚಿತ್ರರಂಗ ತತ್ತರಿಸಿದೆ. ಸಿನಿಮಾ ಆರಂಭಿಸಲು ನಿರ್ಮಾಪಕರು ಹಿಂದುಮುಂದು ನೋಡುತ್ತಿರುವ ಈ ಸಂದರ್ಭದಲ್ಲೇ ನಿರ್ದೇಶಕ ಅಜಯ್ ಕುಮಾರ್ 12 ಸಿನಿಮಾಗಳನ್ನು ಒಂದೇ ಸಲಕ್ಕೆ ಆರಂಭಿಸುತ್ತಿದ್ದಾರೆ. ಅಜಯ್ ಡೈರೆಕ್ಟರ್ ಸರ್ಕಲ್ ಹೆಸರಿನ ತಂಡವನ್ನು ಕಟ್ಟಿಕೊಂಡು ತಾವೂ ನಿರ್ದೇಶನ, ನಿರ್ಮಾಣದೊಂದಿಗೆ ಇತರೆ ಯುವ ನಿರ್ದೇಶಕ, ನಿರ್ದೇಶಕಿಯರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ʻನೀವು ಸಿನಿಮಾ ಮಾಡಿದಾಗ ಹೇಳಿ ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆʼ ....
ಹೊಸಬರ ಪಾರಿವಾಳ ವಿಡಿಯೋ ಗೀತೆ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರುವ ಮೊದಲು ಮುಖ ಮಾಡುವುದು ಕಿರುಚಿತ್ರ, ವಿಡಿಯೋ ಆಲ್ಬಂ. ಅದರಂತೆ ರಾಂಕಿರಣ್ ಇವರು ಹೆಸರಾಂತ ನೃತ್ಯ ಸಂಯೋಜಕ ಚಿನ್ನಿಪ್ರಕಾಶ್ ಅವರಲ್ಲಿ ಬಹುಕಾಲದಿಂದ ಸಹಾಯಕರಾಗಿ ಕೆಲಸ ಮಾಡಿದ್ದರು. ಇದರ ಅನುಭವದಿಂದ ‘ಪಾರಿವಾಳ’ ವಿಡಿಯೋ ಹಾಡಿಗೆ ಕೋರಿಯೋಗ್ರಾಫ್ ಮಾಡುವುದರ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ತೇಜಸ್ವಿನಿಶರ್ಮ ಹೆಜ್ಜೆ ಹಾಕಿದ್ದಾರೆ. ಮೊನ್ನೆಯಷ್ಟೇ ಮಾದ್ಯಮದವರಿಗೆ ಗೀತೆಯನ್ನು ತೋರಿಸಲಾಯಿತು. ಶಿಷ್ಯನಿಗೆ ಶುಭಹಾರೈಸಲು ಆಗಮಿಸಿದ್ದ ಚಿನ್ನಿಪ್ರಕಾಶ್ ಮಾತನಾಡಿ ‘ಯುವರತ್ನ’ ಸಮಯದಲ್ಲಿ ಇದನ್ನು ಕೇಳಿಸಿದ್ದ. ನಾನೇ ....
ಅನ್ನದಾತನ ಬದುಕು,ಬವಣೆಕುರಿತಾದಚಿತ್ರ
ನಮಗೆಲ್ಲರಿಗೂಆಹಾರಕೊಡುವರೈತನನ್ನುಅನ್ನದಾತನೆಂದುಕರೆಯುತ್ತೇವೆ. ಆತನ ಬದುಕುದುಸ್ತರವಾಗಿರುತ್ತದೆ.ಸಾಲ ಮಾಡಿತೀರಿಸಲಾಗದೆ, ಫಸಲು ಸಿಗದೆ ಹೋದಾಗಆತ್ಯಹತ್ಯೆಗೆ ಶರಣಾಗುತ್ತಾನೆ. ಮಿಷನ್ ಬಳಸದೆ ಸೈಕೆಲ್ಚಕ್ರದ ಮೂಲಕ ಹೊಲ ಹೂಳಬಹುದು.ಇವೆಲ್ಲಾ ಅಂಶಗಳು ‘ಮುನಿಯನ ಮಾದರಿ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.೧೯೮೦ರ ದಶಕದಲ್ಲಿ ಶಂಕರ್ನಾಗ್ಅಭಿನಯದಚಿತ್ರವುಇದೇ ಹೆಸರಿನಲ್ಲಿತೆರೆಕಂಡಿತ್ತು.ಅದಕ್ಕೂಇದಕ್ಕೂ ಸಂಬಂದವಿಲ್ಲವೆಂದುಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಮಹೇಶ್ಮರಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಸೆಪ್ಟಂಬರ್ ೧೦ ಟೀಸರ್ ಬಿಡುಗಡೆ ಪ್ರಸಕ್ತ ಬದುಕಿನಲ್ಲಿ ಸಣ್ಣದಾದಖಿನ್ನತೆಗೆ ಒಳಗಾದರೆ ಆತ್ಮಹತ್ಯೆ ಪರಿಹಾರವೆಂದುಅದಕ್ಕೆ ಶರಣಾಗುತ್ತಾರೆ.ಪ್ರಪಂಚದಲ್ಲಿ ಪ್ರತಿ ಮೂರು ಸೆಕಂಡ್ಗೆ ಹಲವರುಇದೇದಾರಿಗೆ ಹೋಗುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.ಇದನ್ನು ಹೇಳಲು ಪೀಠಿಕೆಇದೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ಗ್ಯಾಪ್ ನಂತರ‘ಸೆಪ್ಟಂಬರ್ ೧೦’ ಚಿತ್ರಕ್ಕೆ ನಿರ್ಮಾಣಜೊತೆಗೆ ನಿರ್ದೇಶನದ ಸಾರಥ್ಯವಹಿಸಿಕೊಂಡಿದ್ದಾರೆ. ಅವರುಕ್ಯಾಪ್ಟನ್ಜಿ.ಜಿ.ರಾವ್ ಬರೆದಿರುವಇಂಗ್ಲೀಷ್, ತೆಲುಗು ಪುಸ್ತಕವನ್ನುತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಬಿಡುಗಡೆಯಾದಪ್ರತಿಗೆಅನುಗುಣವಾಗಿಅಲ್ಲಿನ ಸರ್ಕಾರವುಸೂಕ್ತ ....
ರೈಮ್ಸ್ ಅಪರಾಧಿಗಳ ಬೆನ್ನಟ್ಟಿ
ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿದೆ.ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್ಕುಮಾರ್ಅವರು ಕಮಲಹಾಸನ್ಅವರೊಂದಿಗೆ ಸಹಾಯಕರಾಗಿ ಕೆಲಸ ಮಾಡಿದಅನುಭವವಿದೆ.ಇವರುಹೇಳುವಂತೆ ೧೯೮೯ರಂದು ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ.
ಜನರಿಗೆಜಾಗೃತಿ ಮೂಡಿಸುವ ಸ್ವಚ್ಚಕರ್ನಾಟಕ
ಹಿರಿಯ ಸಾಹಿತಿಡಾ.ದೊಡ್ಡರಂಗೇಗೌಡರು ಸಾಹಿತ್ಯ ರಚಿಸಿರುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಸ್ವಚ್ಚಕರ್ನಾಟಕ’ ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವು ಭಾರತ್ ಸ್ಕೌಟ್ಸ್ಅಂಡ್ಗೈಡ್ಸ್ಆವರಣದಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಿತು.ಮಾಜಿ ಶಾಸಕ ಹೇಮಚಂದ್ರಸಾಗರ್, ಮೋಹನ್ಕೊಂಡಜ್ಜಿರಮೇಶ್ಕಾಮತ್ ಮುಂತಾದ ಗಣ್ಯರುಗಳು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ನಮ್ಮ ಸುತ್ತಲಿನ ಪರಿಸರವನ್ನುಹೇಗೆ ಸ್ವಚ್ಚವಾಗಿಟ್ಟುಕೊಳ್ಳಬೇಕು.ನಾವು ಇನ್ನೊಬ್ಬರನ್ನುದೂಷಿಸುವುದಕ್ಕಿಂತತನ್ನಿಂದಲೇ ಸ್ವಚ್ಚತಾಕಾರ್ಯ ಆರಂಭಿಸಿದರೆ,
ಪೊಗರು ಖುಷಿ ಮತ್ತು ಬೇಸರ
ಕಳೆದವಾರ ಬಿಡುಗಡೆಗೊಂಡ ‘ಪೊಗರು’ ಚಿತ್ರದ ಸಂತೋಷಕೂಟದಲ್ಲಿ ೪೫ ಕೋಟಿ ಗಳಿಕೆ ಆಗಿದ್ದಕ್ಕೆ ಸಂತಸ, ಮತ್ತೋಂದುಕಡೆಒಂದುಕೋಮಿನವರನ್ನು ಅವಹೇಳನ ಮಾಡಲಾದ ದೃಶ್ಯಗಳನ್ನು ಕಡಿತ ಮಾಡಿದ್ದರಿಂದಎಂಟು ನಿಮಿಷ ಟ್ರಿಮ್ಆಗಿರುವುದು ಬೇಸರ ತರಿಸಿದೆ.ಇವರೆಡು ವಿಷಯಗಳು ಅಂದಿನ ಗೋಷ್ಟಿಯಲ್ಲಿ ಮಾಹಿತಿ ಲಭ್ಯವಾಯಿತು.ನಿರ್ದೇಶಕ ನಂದಕಿಶೋರ್ ಮಾತನಾಡಿ ಹೊಸದಾಗಿ ಸೆನ್ಸಾರ್ ಮಾಡಿಸಲಾಗಿದೆ.ಸರ್ಟಿಫಿಕೇಟ್ ಸಿಕ್ಕ ತಕ್ಷಣಕ್ಯೂಬ್ಗೆಅಪ್ಲೋಡ್ ಮಾಡಲಾಗುವುದು.ಶುಕ್ರವಾರದಿಂದ ಹೊಸ ಪೊಗರು ನೋಡಬಹುದುಎಂದರು. ಬಂಡವಾಳದಲ್ಲಿ ಲಾಭ ಬಂದಿರುವುದಕ್ಕೆ ನಿರ್ಮಾಪಕ ಬಿ.ಕೆ.ಗಂಗಾಧರ್ ಮಂದಹಾಸವೇಎಲ್ಲವನ್ನು ಹೇಳುತ್ತಿತ್ತು.
ಕುತೂಹಲಕಾರಿ ಕಥಾಹಂದರದ ’ಸ್ಕೇರಿ ಫಾರೆಸ್ಟ್’ ಈ ವಾರ ತೆರೆಗೆ. ಕನ್ನಡದಲ್ಲಿ ಸಾಕಷ್ಟು ಹಾರಾರ್ ಕಥಾಹಂದರವಿರುವ ಚಿತ್ರಗಳು ಬಂದಿವೆ. ಆದರೆ ಎಲ್ಲಕಥೆಗಳಿಗಿಂತ ವಿಭಿನ್ನ ಕಥೆಯುಳ್ಳ ’ಸ್ಕೇರಿ ಫಾರೆಸ್ಟ್’ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಪ್ರೀತಿ- ಭಯ- ಆತ್ಮ ಎಂಬ ಅಡಿಬರಹವಿದೆ. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯವರಾದ ಜಯಪ್ರಭು ಆರ್ ಲಿಂಗಾಯಿತ್ ಈ ಚಿತ್ರದ ನಿರ್ಮಾಪಕರು. . ಬಾಲಿವುಡ್ ನಲ್ಲಿ ಅನುಭವ ಹೊಂದಿರುವ ಸಂಜಯ್ ಅಭೀರ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಿನ್ನೆಲೆ ....
ಹೊಸಬರ ಸ್ಕೇರಿ ಫಾರೆಸ್ಟ್
ಹಾರರ್, ಥ್ರಿಲ್ಲರ್ಕತೆ ಹೊಂದಿರುವ ‘ಸ್ಕೇರಿ ಫಾರೆಸ್ಟ್’ ಚಿತ್ರವನ್ನು ಹೊಸಬರೇ ಸೇರಿಕೊಂಡು ಸಿದ್ದಪಡಿಸಿದ್ದಾರೆ. ಸಂಜಯ್ಅಬಿರ್ ರಚನೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜನ್ಮಭೂಮಿಕರ್ನಾಟಕ, ನೆಲೆ ಕಂಡಿದ್ದು ಮುಂಬೈ. ಆದರೂತಾಯಿ ನಾಡಿಗೆಏನಾದರೂಕೊಡುಗೆಕೊಡಬೇಕೆಂಬ ಬಯಕೆಯಿಂದಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡಿರುವ ಜಯಪ್ರಭು.ಆರ್.ಲಿಂಗಾಯತ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಮಂದಿರದಲ್ಲಿಕರ್ತ
ದುರ್ಗಾ.ಪಿ.ಎಸ್. ಚಿತ್ರಕತೆ,ಸಂಭಾಷಣೆ,ಸಂಕಲನ ಹಾಗೂ ನಿರ್ದೇಶನ ಮಾಡಿರುವ ‘ಕರ್ತ’ ಚಿತ್ರದಕತೆಯು ವೈಷು ಮತ್ತುಆತನ ಸಹೋದರತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಒಂದುಅನಾಥಶ್ರಮಕಟ್ಟಬೇಕೆಂದು ಬಯಕೆ ಹೊಂದಿರುತ್ತಾರೆ. ಆದರೆ ಮಂತ್ರಿಯೊಬ್ಬರುಇವರ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಯೋಜನೆ ರೂಪಿಸಿ, ಸಹೋದರನನ್ನು ಕೊಲೆ ಮಾಡಿಸುತ್ತಾನೆ. ವಿಷಯ ತಿಳಿದ ವೆಂಕಿ ಜಾಗವನ್ನು ಹೇಗೆ ಕಾಪಾಡುತ್ತಾನೆಎನ್ನುವುದು ಸಿನಿಮಾದ ಸಾರಾಂಶವಾಗಿದೆ.ವೆಂಕಿ ಕತೆ, ನಿರ್ಮಾಣ ಮಾಡುವಜೊತೆಗೆ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
*ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯ 1980 ಟೀಸರ್ ಬಿಡುಗಡೆ* *-ರಾಜ್ಕಿರಣ್ ಚೊಚ್ಚಲ ನಿರ್ದೇಶನ* *- ಪೂಜಶ್ರೀ ಪ್ರೊಡಕ್ಷನ್ ಮತ್ತು ನೇಸರ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಾಣ* ಪೂಜಶ್ರೀ ಪ್ರೊಡಕ್ಷನ್ ಮತ್ತು ನೇಸರ ಪ್ರೊಡಕ್ಷನ್ ಬ್ಯಾನರ್ನಲ್ಲಿ ಮೂಡಿಬಂದಿರುವ 1980 ಸಿನಿಮಾ ಸೋಮವಾರ ನಗರದ ಮಂತ್ರಿಮಾಲ್ನಲ್ಲಿ ಟೀಸರ್ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ, ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿದ್ದು, ಇನ್ನೇನು ಚಿತ್ರಮಂದಿರಕ್ಕೂ ಆಗಮಿಸಿಲಿದೆ. ಟೀಸರ್ ಲಾಂಚ್ ನೆಪದಲ್ಲಿ ಮಾಧ್ಯಮದ ಮುಂದೆ ಬಂದಿದ್ದ ತಂಡ, ಸಿನಿಮಾದ ಹಿನ್ನೆಲೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತು. ಮೊದಲಿಗೆ ....
*ಗುರು 70 ರ ಸಂಭ್ರಮಕ್ಕೆ ಗಾನ ನಮನ* *-ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನೆರವೇರಿತು ವಿಶೇಷ ಕಾರ್ಯಕ್ರಮ* *- ಕೆ. ಗುರುರಾಜ್ ಜನ್ಮದಿನದ ಪ್ರಯುಕ್ತ ’ಸಂಗೀತ ಸಂಪತ್ತು’ ಸಮಾರಂಭ* ಸೌಂಡ್ ಆಫ್ ಮ್ಯೂಸಿಕ್ ವಾದ್ಯಗೋಷ್ಠಿಯ ರೂವಾರಿ ಶ್ರೀ ಕೆ. ಗುರುರಾಜ್ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಗುರು 70, ಸಂಗೀತ ಸಂಪತ್ತು’ ಕಾರ್ಯಕ್ರಮ ಚಾಮರಾಜಪೇಟೆಯ ಸಿನಿಮಾ ಕಲಾವಿದರ ಸಂಘದ ಡಾ. ರಾಜಕುಮಾರ್ ಕಲಾಭವನದಲ್ಲಿ ಇತ್ತೀಚೆಗೆಷ್ಟೇ ನೆರವೇರಿತು. 'ಸ್ನೇಹ’ ರೆಟ್ರೋ ಸಂಗೀತ ತಂಡದ ಮುಖ್ಯ ಕಾರ್ಯನಿರ್ವಾಹಕರು, ಗಾಯಕರು, ನಿವೃತ್ತ ಅಬಕಾರಿ ಅಧಿಕಾರಿಗಳು ಮತ್ತು ಸಮಾರಂಭದ ಪ್ರಧಾನ ಸಂಚಾಲಕರಾಗಿರುವ ವೆಂಕಟೇಶ ಮೂರ್ತಿ ಶಿರೂರ ಅವರು ಅದ್ದೂರಿ ಕಾರ್ಯಕ್ರಮವನ್ನು ....
ಒಂದೇ ಶಾಟ್ದಲ್ಲಿಚಿತ್ರೀಕರಣಗೊಂಡ ಸಿನಿಮಾ ‘ದಕ್ಷ’ ಮತ್ತು ‘ಬಿಂಬ’ ಚಿತ್ರಗಳು ಒಂದೇಜಾಗ ಮತ್ತುಶಾಟ್ದಲ್ಲಿಚಿತ್ರೀಕರಣಗೊಂಡಿದ್ದು ಸುದ್ದಿಯಾಗಿತ್ತು. ಅದೆಲ್ಲಾಕ್ಕಿಂತಲೂ ಭಿನ್ನಎನ್ನುವಂತೆ ‘ರಕ್ತ ಗುಲಾಬಿ’ ಸಿನಿಮಾವೊಂದು ಸಕಲೇಶಪುರ, ಅರೇಹಳ್ಳಿ, ಬೆಳ್ಳಾವರ ಸೇರಿದಂತೆಇಪ್ಪತ್ತೈದು ಸ್ಥಳಗಳಲ್ಲಿ ಶೂಟಿಂಗ್ ನಡೆಸಿರುವುದು ವಿಶೇಷ. ಮುಂಜಾನೆ ೫.೫೫ಕ್ಕೆ ಕ್ಯಾಮಾರಆನ್ ಆಗಿ ನಿರಂvರವಾಗಿ ಹತ್ತು ಕಿ.ಮೀ ಓಡಾಡಿ ಬೆಳಿಗ್ಗೆ ೮.೦೮ಕ್ಕೆ ಮುಗಿಸಿದ್ದು ಸಾಹಸಗಾಥೆಯಾಗಿದೆ. ಇದರಿಂದಚಿತ್ರವು ಲಿಮ್ಕಾ/ಇಂಡಿಯಾ ಬುಕ್ಆಫ್ರೆಕಾರ್ಡ್ದಲ್ಲಿದಾಖಲಾಗಿದೆ ಹಾಗೂ ಏಷ್ಯಾ ಬುಕ್ಆಫ್ರೆಕಾರ್ಡ್ಸ್ ....
ಆಕ್ಷನ್ಚಿತ್ರದಲ್ಲಿ ಪೂಜಾಗಾಂಧಿ
ಅನೇಕ ಪಾತ್ರಗಳಲ್ಲಿ ನಟಿಸಿರುವ ಪೂಜಾಗಾಂಧಿ ಮೊದಲಬಾರಿ ‘ಸಂಹಾರಿಣಿ’ ಚಿತ್ರದಲ್ಲಿ ಬರೋಬ್ಬರಿಆರು ಫೈಟ್ಸ್ಗಳನ್ನು ಮಾಡಿದ್ದಾರೆ.ಆಕ್ಷನ್ ಸಿನಿಮಾಗಳನ್ನು ನೋಡಿದ್ದೆ.ಈ ರೀತಿಇರುತ್ತದೆಂದು ತಿಳಿದಿರಲಿಲ್ಲ. ಈಗ ನಾನೇ ಕ್ಯಾಮಾರ ಮುಂದೆ ನಿಂತು ಸಾಹಸಗಳನ್ನು ಮಾಡುವಾಗಇದು ಸುಲಭವಲ್ಲ. ಕಷ್ಟದ ಕೆಲಸವೆಂದುಅರಿವಾಯಿತು.ಮಾಲಾಶ್ರೀ ಸೇರಿದಂತೆ ಹಲವು ನಾಯಕಿಯರುಮಾಡಿದ್ದರಿಂದಅವರೆಲ್ಲರಿಗೂ ಹ್ಯಾಟ್ಸಾಫ್ಅಂತಾರೆ.