ಕೊಳಗ ಇಪ್ಪತ್ತು ವರ್ಷಗಳ ರೈತಹೋರಾಟದ ಕಥನ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ರೈತ ಹೋರಾಟದ ಕಥನಗಳು ತೆರೆಮೇಲೆ ಮೂಡಿಬಂದಿವೆ. ಆ ಸಾಲಿಗೆ ಮತ್ತೊಂದು ಚಿತ್ರ ಹೊಸದಾಗಿ ಸೇರ್ಪಡೆಯಾಗುತ್ತಿದೆ. ಅದರ ಹೆಸರು ಕೊಳಗ. ನಾ.ಡಿಸೋಜಾ ಅವರ ಕಾದಂಬರಿ ಆಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಪ್ರಸನ್ನ ಗೂರಲಕೆರೆ ಸಂಭಾಷಣೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರ ಪತ್ನಿ ಶ್ರೀಮತಿ ನಿಶಿತಾಗೌಡ ಚಿತ್ರಕಥೆ ಹೆಣೆಯುವುದರ ಜೊತೆಗೆ ಚಿತ್ರದ ನಾಯಕಿಯಾಗೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ನಿಮಿಶಾಂಭ ದೇವಸ್ಥಾನದಲ್ಲಿ ನೆರವೇರಿತು. ರೈತ ಹೋರಾಟಗಾರ ಕೋಡಿಹಳ್ಳಿ ....
*ಆಡಿಯೋ ಬಿಡುಗಡೆಗೆ ಮಾಡಿಕೊಂಡ ಖೇಲ್ ಚಿತ್ರತಂಡ* *-ಹೊಸಬರ ಹೊಸಸಾಹಸಕ್ಕೆ ಮುರಳಿ ಮೋಹನ್, ನಿರ್ದೇಶಕ ಶಿವಗಣೇಶ್ ಸಾಥ್* *-ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಆಗಮಿಸುವ ಸುಳಿವು* ಸಿನಿಮಾ ಹೆಸರು ಖೇಲ್. ಶೀರ್ಷಿಕೆಗೆ ಸೂಕ್ತ ಎನಿಸುವಂತೆ ಇಲ್ಲಿ ಆಟವೇ ಪ್ರಧಾನ. ಹಾಗಂತ ಆ ಆಟ ಯಾವುದು? ಕಳ್ಳ ಯಾರು ಹೀರೋ ಯಾರು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಎಂದು ಕುತೂಹಲಕ್ಕೆ ಒಗ್ಗರಣೆ ಹಾಕಿತು ಚಿತ್ರತಂಡ. ಅಂದಹಾಗೆ, ಯೋಗಿತ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸತೀಶ್ ಎಚ್ (ಮಾರ್ಕೇಟ್) ನಿರ್ಮಾಣ ಮಾಡಿರುವ ಖೇಲ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಾಡನ್ನು ಬಿಡುಗಡೆ ಮಾಡಿಕೊಂಡ ತಂಡ, ಬಿಡುಗಡೆಗೆ ನಾವು ಸಿದ್ಧರಿದ್ದೇವೆ ಎಂಬ ಮುನ್ಸೂಚನೆಯನ್ನು ನೀಡಿದೆ. ಈಗಾಗಲೇ ....
*ಲಾಕ್ಡೌನ್ ಬಳಿಕ 25 ದಿನಗಳನ್ನು ಪೂರೈಸಿದ ಮೊದಲ ಸಿನಿಮಾ ಆ್ಯಕ್ಟ್ 1978* *- ಸಾರ್ಥಕತೆಯ ನಗು ಬೀರಿದ ಚಿತ್ರತಂಡ* ಲಾಕ್ಡೌನ್ ಬಳಿಕ ಕನ್ನಡದ ಮೊದಲ ಹೊಸ ಸಿನಿಮಾ ಬಿಡುಗಡೆ ಆಗಿದ್ದು ಮಂಸೋರೆ ನಿರ್ದೇಶನದ ಆ್ಯಕ್ಟ್ 1978. ಇದೀಗ ಆ ಚಿತ್ರದ ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 25 ದಿನಗಳನ್ನು ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ. ಈ ಖುಷಿಯ ವಿಚಾರಕ್ಕೆ ಇಡೀ ತಂಡ ಮತ್ತೆ ಮಾಧ್ಯಮದ ಮುಂದೆ ಬಂದಿತ್ತು. ಕೊರೊನಾ ಸಮಯದಲ್ಲಿ ಆ 25 ದಿನ ಪೂರೈಸಿದ ಬಗೆಯನ್ನು ಚಿತ್ರತಂಡದವರು ಒಂದೊಂದಾಗಿ ಮಾಹಿತಿ ಹಂಚಿಕೊಂಡರು. ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಆ್ಯಕ್ಟ್ 1978 ಸಿನಿಮಾವನ್ನು ದೇವರಾಜ್ ಆರ್ ಬಂಡವಾಳ ಹೂಡಿದ್ದು, ಮಂಸೋರೆ ನಿರ್ದೇಶನ ....
ಅಪ್ಪ ಮಗನ ಬಾಂದವ್ಯದ ಕಥನ ಮದ್ಯಪಾನ ಮಾಡಲು ಹಲವು ಕಾರಣಗಳು ಇರುತ್ತದೆ. ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಮರೆಯಲು ಕುಡಿತದ ದಾಸನಾಗುತ್ತಾರೆ. ಅಂಥದ್ದೇ ಮದ್ಯವ್ಯಸನಿಯ ಕತೆ ಹೊಂದಿರುವ ಚಿತ್ರ ‘ನಾನೊಂಥರ’. ತನ್ನದೆ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದ ಆತನಿಗೆ ನಡೆದ ಒಂದು ಘಟನೆ ಕುಡುಕನಾಗುವಂತೆ ಮಾಡುತ್ತದೆ. ಅಂಥವನ ಬಾಳಿನಲ್ಲಿ ಹುಡುಗಿಯೊಬ್ಬಳು ಪ್ರವೇಶಿಸುತ್ತಾಳೆ. ಅವನ ಸಾಮಾಜಿಕ ಕಳಕಳಿ, ಸೇವಾ ಮನೋಭಾವ ನೋಡಿ ಪ್ರೀತಿ ಮಾಡುತ್ತಾಳೆ. ಕುಡಿತಕ್ಕೆ ಕಾರಣವೇನೆಂದು ಪತ್ತೆ ಹಚ್ಚಿ ಅವನನ್ನು ಮತ್ತೆ ಮೊದಲಿನಂತೆ ಮಾಡುತ್ತಾಳೆ. ಅವನ ಬದುಕನ್ನು ಒಳ್ಳೆ ದಾರಿಗೆ ತರುವಾಗ ಎದುರಾಗುವ ಅಡೆತಡೆಗಳು, ಜೊತೆಗೆ ತಂದೆ ಮಗನ ....
ಚಂದನವನದಲ್ಲಿ ಪ್ರಜ್ವಲ್ದೇವರಾಜ್ ಅಬ್ಬರ
ಪ್ರಜ್ವಲ್ದೇವರಾಜ್ ಸದ್ಯ ‘ಅಬ್ಬರ’ ಮಾಡುತ್ತಿದ್ದಾರೆ. ಹಾಗಂತ ಇವರ ಮೇಲೆ ಆರೋಪ ಮಾಡುವುದು ಸರಿ ಅನಿಸುವುದಿಲ್ಲ. ಏಕೆಂದರೆ ಇವರು ಇದೇ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಂದೆ-ಮಗನ ಬಾಂದವ್ಯ, ಮೂವರು ಹುಡುಗಿಯರೊಂದಿಗೆ ಪ್ರೀತಿಗಳ ಸಂಘರ್ಷ, ಖಳನೊಂದಿಗೆ ಸೇಡು ಕುರಿತಾದ ಕತೆಯಾಗಿದೆ. ಸಂಪೂರ್ಣ ಮನರಂಜನೆ, ಸಾಹಸ, ಹಾಸ್ಯ ಮತ್ತು ಕುಟುಂಬಸಮೇತ ನೋಡಬಹುದಾದ ಚಿತ್ರವಾಗಿರುವುದು ವಿಶೇಷ. ಸಾಹಿತಿ ಕೆ.ರಾಮನಾರಾಯಣ್ ಗ್ಯಾಪ್ ನಂತರ ಸಿನಿಮಾಗೆ ಕತೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಹೊಸಬರ ವಿಡಿಯೋ ಆಲ್ಬಂ ಚಿತ್ರರಂಗಕ್ಕೆ ಬರಬೇಕು ಎಂಬ ಹೊಸ ಪ್ರತಿಭೆಗಳು ಮೊದಲು ಮುಖ ಮಾಡುವುದು ಕಿರುಚಿತ್ರ, ಆಲ್ಬಂಗಳತ್ತ. ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಇವುಗಳು ಉತ್ತಮ ವೇದಿಕೆಯಾಗುತ್ತದೆ ಅಂಥ ನಂಬಿರುವವರು. ಇತ್ತೀಚೆಗೆ ಇದರ ಮೂಲಕವೆ ಗುರುತಿಸಿಕೊಂಡು, ಭರವಸೆ ಮೂಡಿಸಿ ಚಿತ್ರ ನಿರ್ದೇಶಕರಾಗುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈ ಸಾಲಿಗೆ ‘ಓ ಮೈ ಲವ್’ ವಿಡಿಯೋ ಹಾಡು ಸಿದ್ದಗೊಂಡಿದೆ. ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಜೀವನ್ಗಂಗಾಧರಯ್ಯ ಹಾಡಿಗೆ ಪರಿಕಲ್ಪನೆ,ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಡ್ಯಾಮಾ ಜ್ಯೂನಿಯರ್ಸ್ ಖ್ಯಾತಿಯ ತುಷಾರ್ಗೌಡ ನಾಯಕ. ಮಜಾಭಾರತ್ದಲ್ಲಿ ಕಾಣಿಸಿಕೊಂಡಿದ್ದ ....
ಪೈರಸಿ ಕಾಟ ಪುರುಸೋತ್ರಾಮನಿಗೂ ತಟ್ಟಿದೆ ಕಳೆದ ಶುಕ್ರವಾರ ರಿಲೀಸ್ ಆಗಿದ್ದ ಹಾಸ್ಯ ಚಿತ್ರ ‘ಪುರ್ಸೋತ್ ರಾಮ’ನಿಗೆ ಪೈರಸಿ ಕಾಟದಿಂದ ಗಳಿಕೆ ಕಡಿಮೆ ಆಗಿದೆ ಎಂದು ನಾಯಕಿ,ನಿರ್ಮಾಪಕಿ ಮಾನಸಾ ಮಾದ್ಯಮದ ಎದುರು ಬೇಸರ ವ್ಯಕ್ತಪಡಿಸಿದರು. ಸೋಮವಾರ ತುರ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ನಮ್ಮ ಚಿತ್ರವನ್ನು ಕಷ್ಟಪಟ್ಟು ಕೋವಿಡ್ ಸಮಯದಲ್ಲೂ ಬಿಡುಗಡೆ ಮಾಡಿದ್ದೇವೆ. ಆದರೆ ಚಿತ್ರಮಂದಿರದಲ್ಲಿ ದುರುಳನೊಬ್ಬ ರೆಕಾರ್ಡ್ ಮಾಡಿಕೊಂಡು ಯೂಟ್ಯೂಬ್, ಟೆಲಿಗ್ರಾಮ್ಗಳಲ್ಲಿ ಹರಿಯಬಿಟ್ಟಿದ್ದಾನೆ. ಇದರಿಂದ ಸುಮಾರು ೮೦೦೦ ಮಂದಿ ಡೌನ್ಲೋಡ್ ಮಾಡಿದ್ದಾರೆ. ಈ ಸಂಬಂದ ಸೈಬರ್ ಪೋಲೀಸ್ ಠಾಣೆಗೂ ದೂರು ದಾಖಲಿಸಲಾಗಿದೆ. ....
ಸೇತುಬಂದು ಸಾಹಸಿಗನ ಸಿನಿಮಾ ಪ್ರಪಂಚದಲ್ಲಿ ಕೆಲವರು ಮಾತ್ರ ಯಾವುದೇ ಅಪೇಕ್ಷೆ ಹೊಂದದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಯಶಸ್ವಿಯಾದ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಆ ಪೈಕಿ ಸುಳ್ಯಾದ ಗಿರೀಶ್ಭಾರದ್ವಾಜ್ ಒಬ್ಬರು. ಮಂಡ್ಯಾದಲ್ಲಿ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಲ್ಲಿ ಉದ್ಯೋಗ ಮಾಡಿಕೊಂಡಿದ್ದ, ಇವರು ತೂಗು ಸೇತುವೆUಳು ನಿರ್ಮಾಣ ಮಾಡುವುದರ ಮೂಲಕ ಮನುಷ್ಯರ ಬದುಕು ಸಂಬಂದಗಳನ್ನು ಕಟ್ಟಿದವರು. ಇವರ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸೇರಿದಂತೆ ಭಾರತದಾದ್ಯಂತ ೧೩೯ ಸೇತುವೆಗಳನ್ನು ಕಟ್ಟಿ, ೨೪೦ ಹಳ್ಳಿಗಳಲ್ಲಿ ಸಂಪರ್ಕ ಕ್ರಾಂತಿಗೆ ನಾಂದಿಯಾಗಿ, ಮೂರು ....
ಸೆಟ್ಟೇರಿತು ಎಂಆರ್ ಚಿತ್ರ ‘ಎಂಆರ್’ ಅಂದರೆ ಮುತ್ತಪ್ಪರೈ ಬಯೋಪಿಕ್ ಕುರಿತಾದ ಚಿತ್ರದ ಫೋಟೋ ಶೂಟ್ ರಾಮನಗರದಲ್ಲಿ ಶ್ರೀಮಂತವಾಗಿ ನಡೆದಿತ್ತು. ಶುಕ್ರವಾರ ಬೆಸ್ಟ್ ಕ್ಲಬ್ದಲ್ಲಿ ಮಹೂರ್ತ ಆಚರಿಸಿಕೊಂಡಿದೆ. ನಿರ್ದೇಶಕ ರವಿಶ್ರೀವತ್ಸ ಮೂರು ವರ್ಷದ ನಂತರ ಕಮರ್ಷಿಯಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಂತರ ನಿರ್ದೇಶಕರು ಮಾದ್ಯಮದೊಂದಿಗೆ ಮಾತನಾಡಿ ಒಂದಷ್ಟು ಮಾಹಿತಿಗಳನ್ನು ತೆರೆದಿಟ್ಟರು. ಕಳೆದ ಇಪ್ಪತ್ತು ವರ್ಷಗಳಿಂದ ಹಲವರು ಸರ್ ಅವರ ಚಿತ್ರ ಮಾಡಬೇಕೆಂದು ಯೋಚಿಸಿದ್ದರು. ನಿರ್ಮಾಪಕರುಗಳಾದ ರಾಮು, ಧೀರಜ್ ಹಾಗೂ ದಿನೇಶ್ಬಾಬು ಸಾರಥ್ಯದಲ್ಲಿ ಉಪೇಂದ್ರ ನಟಿಸಲಿದ್ದಾರೆಂದು ಹೇಳಲಾಗಿತ್ತು. ಕಳೆದ ವರ್ಷ ....
*ಪೊಲೀಸ್ ವರ್ಸಸ್ ಪೊಲೀಸ್; ಶೀತಲ ಸಮರಕ್ಕೆ ಸಜ್ಜಾದ ವಸಿಷ್ಠ ಮತ್ತು ಕಿಶೋರ್* *ಮಲ್ಲೇಶ್ವರದ ಮಹಾಗಣಪತಿ ದೇವಸ್ಥಾನದಲ್ಲಿ ಮುಹೂರ್ತ: ಜನವರಿಯಲ್ಲಿ ಶೂಟಿಂಗ್* ವಸಿಷ್ಟ ಸಿಂಹ ಮತ್ತು ಕಿಶೋರ್ ಮುಖ್ಯ ಭೂಮಿಕೆ ನಿಭಾಯಿಸಲಿರುವ ಚಿತ್ರದ ಮುಹೂರ್ತ ಶುಭ ಶುಕ್ರವಾರ ಮಲ್ಲೇಶ್ವರದ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ಜನರತ್ನ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಇನ್ನೂ ಶೀರ್ಷಿಕೆ ಅಂತಿಮವಾದ ಈ ಚಿತ್ರವನ್ನು ವೃತ್ತಿಯಲ್ಲಿ ರಿಯಲ್ ಎಸ್ಟೆಟ್ ಉದ್ಯಮಿಯಾಗಿರುವ ಜನಾರ್ಧನ್ ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕ ಜರ್ನಾಧನ್ ಅವರ ಸಹೋದರಿ ಲತಾ ಶಿವಣ್ಣ ಆಗಮಿಸಿ ಕ್ಲಾಪ್ ಮಾಡಿದರೆ, ನಿರ್ಮಾಪಕರ ಪುತ್ರಿ ಸ್ವೀಕೃತಿ ಕ್ಯಾಮರಾಕ್ಕೆ ಚಾಲನೆ ....
*ಹಾಡಾಗಿ ಬಂದ ಡಿಯರ್ ಸತ್ಯ* *-ಪುನೀತ್ ರಾಜ್ಕುಮಾರ್, ವಿಜಯ ರಾಘವೇಂದ್ರ ಅವರಿಂದ ಆಡಿಯೋ ರಿಲೀಸ್* *-ಫೆಬ್ರವರಿ ಮಾರ್ಚ್ ಗೆ ಬಿಡುಗಡೆ ಸಾಧ್ಯತೆ* ಪರ್ಪಲ್ ರಾಕ್ ಎಂಟರ್ ಪ್ರೈಸಸ್ ಮತ್ತು ವಿಂಟರ್ ಬ್ರಿಡ್ಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಡಿಯರ್ ಸತ್ಯ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಓರಾಯನ್ ಮಾಲ್ನಲ್ಲಿ ಶನಿವಾರ ನೆರವೇರಿತು. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅತಿಥಿಗಳಾಗಿ ಆಗಮಿಸಿ ಆಡಿಯೋ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಅಂದಹಾಗೆ p r e ಮ್ಯೂಸಿಕ್ ಚಿತ್ರದ ಹಾಡುಗಳನ್ನು ಹೊರತಂದಿದೆ. ಶಿವಗಣೇಶನ್ ನಿರ್ದೇಶನಲ್ಲಿ ಮೂಡಿಬಂದಿರುವ ಈ ಸಿನಿಮಾಕ್ಕೆ ಗಣೇಶ್ ಪಾಪಣ್ಣ, ....
ಎರಡು ಭಾಗದಲ್ಲಿ ಜಯರಾಜ್ ಚಿತ್ರ ೮೦-೯೦ರ ದಶಕದಲ್ಲಿ ಬೆಂಗಳೂರು ನಗರವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಜಯರಾಜ್ ಕುರಿತಾದ ಸಾಕಷ್ಟು ಚಿತ್ರಗಳು ತೆರೆಗೆ ಬಂದಿದೆ. ಬರುತ್ತಲೆ ಇದೆ. ಆ ಸಾಲಿಗೆ ‘ಜಾಂಟಿ ಸನ್ ಆಫ್ ಜಯರಾಜ್’ ಸಿನಿಮಾವು ಶುಕ್ರವಾರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ವಸತಿ ಸಚಿವ ಸೋಮಣ್ಣ ಕ್ಯಾಮಾರ ಆನ್ ಮಾಡಿದರೆ, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಚಿತ್ರದಲ್ಲಿ ಜಯರಾಜ್ ಪುತ್ರ ನಾಯಕನಾಗಿ ಅಭಿನಯಿಸುತ್ತಿರುವುದು ವಿಶೇಷ. ಹಾಗಂತ ಅಪ್ಪನಾಗಿ ಕಾಣಿಸಿಕೊಳ್ಳುತ್ತಿಲ್ಲ. ಸಾಮಾನ್ಯ ಹುಡುಗನಾಗಿ ....
*ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟರೆ ಏನಾಗುತ್ತದೆ ಎಂಬುದನ್ನು ಕಿಲಾಡಿಗಳು ಹೇಳಲಿದ್ದಾರೆ* *- ಡಿ. 18ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ* *- ಕಿಲಾಡಿಗಳು ಚಿತ್ರದ ಟ್ರೇಲರ್ ರಿಲೀಸ್* *- ಚಿತ್ರದಲ್ಲಿನ ಮೂರು ಹಾಡುಗಳು ಪೊಲೀಸರಿಗೆ ಅರ್ಪಣೆ* ಆನಂದ್ ಸಿನಿಮಾಸ್ ಅರ್ಪಿಸುವ ಪೂರ್ವಿಕಾಮೃತ ಕ್ರಿಯೇಷನ್ಸ್ ಲಾಂಛನದ ಅಡಿಯಲ್ಲಿ ನಿರ್ಮಾಣವಾಗಿರುವ ಕಿಲಾಡಿಗಳು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಡಿ. 18ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದು. ಆ ನಿಮಿತ್ತ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ಇತ್ತೀಚೆಗಷ್ಟೇ ನಗರದ ಓರಾಯನ್ ಮಾಲ್ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪರಮಾತ್ಮ ಸ್ಡುಡಿಯೋಸ್ ನಲ್ಲಿ ಟ್ರೇಲರ್ ....
ತೆರೆ ಮೇಲೆ ಶ್ರೀ ಅಲ್ಲಮಪ್ರಭು ದಿವ್ಯ ಚರಿತ್ರೆ ಹಿರಿಯ ನಿರ್ದೇಶಕ ನಾಗಭರಣ ಸಾರಥ್ಯದಲ್ಲಿ ‘ಅಲ್ಲಮ’ ಚಿತ್ರವೊಂದು ತೆರೆಕಂಡಿತ್ತು. ಈಗ ಬೇರೊಂದು ತಂಡದಿಂದ ‘ಶ್ರೀ ಅಲ್ಲಮಪ್ರಭು’ ಸಿನಿಮಾ ಸೆಟ್ಟೇರಿದೆ. ದಿವ್ಯ ಸ್ವಾಮೀಜಿಗಳು ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ಬಿದರಿ ಉಪಸ್ಥಿತಿಯಲ್ಲಿ ಮಹೂರ್ತ ಸಮಾರಂಭವು ಸರಳವಾಗಿ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕ್ರತ ಡಿ.ಕೆ.ಶಿವರಾಜ್ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಾಧವಾನಂದ ಕತೆ,ಚಿತ್ರಕತೆ ಹಾಗೂ ಪಾಲುದಾರರು. ಶ್ರೀ ಶ್ರೀ ಮಹಾವೀರಪ್ರಭು ಅವರು ಅಮರಜ್ಯೋತಿ ಪಿಕ್ಚರ್ಸ್ ಮುಖಾಂತರ ನಿರ್ಮಾಣ ....
*ಅಂಬಾ ಭವಾನಿ ಸನ್ನಿಧಿಯಲ್ಲಿ ಮುಹೂರ್ತ ಮುಗಿಸಿದ ಫಾರ್ ರಿಜಿಸ್ಟ್ರೇಷನ್ ಚಿತ್ರ* *ನವೀನ್ ದ್ವಾರಕಾನಾಥ್ ನಿರ್ದೇಶನ; ನವೀನ್ ರಾವ್ ನಿರ್ಮಾಣ* *ಕ್ಲಾಪ್ ಮಾಡಿ ಶುಭ ಹಾರೈಸಿದ ನಟ ನಿಖಿಲ್ ಕುಮಾರಸ್ವಾಮಿ* ಬಾಲ್ಯದ ಸ್ನೇಹಿತರೇ ಒಂದಾಗಿ ಇದೀಗ ಸಿನಿಮಾ ಮಾಡುತ್ತಿದ್ದಾರೆ. ಅದನ್ನು ಈಗಾಗಲೇ ನೋದಂಣಿಯನ್ನೂ ಮಾಡಿಸಿದ್ದಾರೆ. ಅಂದರೆ ಚಿತ್ರದ ಹೆಸರೇ ಫಾರ್ ರಿಜಿಸ್ಟ್ರೇಷನ್ ಎಂದು ಹೆಸರಿಟ್ಟಿದ್ದಾರೆ. ಶುಭ ಶುಕ್ರವಾರದಂದು ವಸಂತನಗರದಲ್ಲಿನ ಅಂಬಾಭವಾನಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಮುಗಿಸಿಕೊಂಡಿದೆ. ನಟ ನಿಖಿಲ್ ಕುಮಾರಸ್ವಾಮಿ ಅತಿಥಿಯಾಗಿ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ನಿರ್ಮಾಪಕ ನವೀನ್ ಕುಮಾರ್ ಅವರ ಪುತ್ರ ನಿಶ್ಚಲ್ ಕ್ಯಾಮರಾ ಸ್ವೀಚ್ ಆನ್ ....
ಯಲ್ಲೋ ಗ್ಯಾಂಗ್ಸ್ ಭಟ್ಟರ ಶುಭಹಾರೈಕೆ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಯಲ್ಲೋ ಗ್ಯಾಂಗ್ಸ್’ ಕ್ರೈಂ ಥ್ರಿಲ್ಲರ್ ಚಿತ್ರಕ್ಕೆ ಶುಭ ಹಾರೈಸಲು ಯೋಗರಾಜಭಟ್ ಆಗಮಿಸಿದ್ದರು. ಟ್ರೈಲರ್ ಬಿಡುಗಡೆ ಮಾಡಿದ ಭಟ್ಟರು ನಂತರ ಮಾತನಾಡಿ ಇದೇ ರೀತಿ ಜನಸಂದಣಿ ಚಿತ್ರಮಂದಿರಕ್ಕೆ ಬಂದಲ್ಲಿ ನಿರ್ಮಾಪಕರು ಉಳಿಯುತ್ತಾರೆ. ‘ಮುಗುಳುನಗೆ’ಯಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದ ನಿರ್ದೇಶಕರ ಶ್ರಮ, ನಿಯತ್ತು ನೋಡಿದಾಗ ಇವರು ಮುಂದೆ ನಿರ್ದೇಶಕರಾಗಿ ಬರುತ್ತಾರೆಂದು ಮನಸ್ಸು ಹೇಳಿತ್ತು. ಅದು ನಿಜವಾಗಿದೆ. ಚಿತ್ರವನ್ನು ಗುದ್ದಾಡಿ, ಬಡಿದಾಡಿ ಮಾಡಿದ್ದರೂ ಅಂತಿಮವಾಗಿ ಫಲಿತಾಂಶ ಪರದೆ ಮೇಲೆ ಬಂದಾಗ ಎಲ್ಲವು ಮರೆತು ....
*ಕಲಾವಿದರ ಸಂಘದ ಭವನದಲ್ಲಿ ಟ್ರೇಲರ್ ಬಿಡುಗಡೆ ಮಾಡಿಕೊಂಡ ಆರ್ಎಚ್ 100* ಶೀರ್ಷಿಕೆ ಮೂಲಕವೇ ಗಮನಸೆಳೆದಿದ್ದ ಆರ್ಎಚ್ 100 ಸಿನಿಮಾ ಇದೀಗ ಟ್ರೇಲರ್ ಬಿಡುಗಡೆ ಮಾಡಿಕೊಂಡ ಸಂಭ್ರಮದಲ್ಲಿದೆ. ಎಸ್.ಎಲ್.ಎಸ್ ಪ್ರೊಡಕ್ಷನ್ಸ್ನಡಿ ಹರೀಶ್ ಕುಮಾರ್ ಎಲ್ ನಿರ್ಮಿಸುತ್ತಿರುವ ‘ಆರ್ಎಚ್ 100’ ಚಿತ್ರವನ್ನು ಮಹೇಶ್ ಎಂ.ಸಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಭವನದಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭ ಹಮ್ಮಿಕೊಂಡಿತ್ತು. ಆ್ಯಕ್ಟ್ 1978 ಚಿತ್ರದ ನಿರ್ಮಾಪಕ ದೇವರಾಜ್ ಆರ್, ನಿರ್ದೇಶಕ ಹರಿ ಸಂತು ನಟ ಚೇತನ್ ರಾಜ್ ಅತಿಥಿಗಳಾಗಿ ಆಗಮಿಸಿ, ಟ್ರೇಲರ್ ಲಾಂಚ್ ಮಾಡಿದರು. ಬಹುತೇಕ ಹೊಸಬರೇ ....
ಈ ವಾರ ತೆರೆಗೆ *ಪುರಸೋತ್ ರಾಮ*
*ಮಾನಸದೇವಿ* ಪ್ರೊಡಕ್ಷನ್ಸ್ ಲಾಂಛನದಲ್ಲಿ *ಮಾನಸ* ಅವರು ನಿರ್ಮಿಸಿರುವ *ಪುರಸೋತ್ ರಾಮ* ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
*ಪ್ರಭುದೇವ್* ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳನ್ನು *ಪ್ರಭುದೇವ* ಹಾಗೂ *ಧ್ರುವ* ಬರೆದಿದ್ದಾರೆ. *ಸುದ್ದೋರಾಯ್* ಸಂಗೀತ ನೀಡಿದ್ದಾರೆ.
ಶಕೀಲಾ ಮಾದಕಟಿಯೊಬ್ಬಳ ಜೀವನಗಾಥೆ ದಕ್ಷಿಣ ಭಾರತ ಸಿನಿಮಾ ನಟಿಯೊಬ್ಬರ ಬಯೋಪಿಕ್ ಇರೋ ಚಿತ್ರವೊಂದು ಹಿಂದಿ, ಕನ್ನಡ ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲೆನ್ನಬಹುದು. ಅಂಥಾ ಹಿರಿಮೆಗೆ ಕಾರಣವಾಗಿರೋ ಚಿತ್ರ ಶಕೀಲಾ. ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನ ಈ ಚಿತ್ರ ಇದೇ ತಿಂಗಳು ಬಿಡುಗಡೆಯಾಗಲು ಸಿದ್ದವಾಗಿದೆ. ಚಿತ್ರದ ಫಸ್ಟ್ಲುಕ್ ಹಾಗೂ ಟ್ರೈಲರ್ ಬಿಡುಗಡೆ ಬೆಂಗಳೂರಿನ ಸ್ಟಾರ್ ಹೋಟೆಲ್ವೊಂದರಲ್ಲಿ ನೆರವೇರಿತು. ಹಿಂದಿ ಭಾಷೆಯಲ್ಲಿ ಶುರುವಾಗಿದ್ದ ಈ ಚಿತ್ರ ಈಗ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸಾಗುತ್ತಿದೆ. ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲೇ ಅಭಿನಯಿಸುವ ಮೂಲಕ ಗುರ್ತಿಸಿಕೊಂಡ ಮಲಯಾಳಂನ ....
ತೆರೆಗೆ ಸಿದ್ದ ನಾನೊಂಥರ ‘ನಾನೊಂಥರ’ ಗುಣದವರು ಮೇಲಿನಂತೆ ಹೇಳುತ್ತಿರುತ್ತಾರೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಕತೆಯಲ್ಲಿ ಅಪ್ಪನನ್ನು ಇಷ್ಟಪಟ್ಟರೆ ಪ್ರೀತಿ ಮಾಡುತ್ತಾನೆ. ಹುಡುಗಿಯನ್ನು ಲವ್ ಮಾಡಬೇಕು ಅನಿಸಿದರೆ ಅದರಲ್ಲೆ ಮುಂದುವರೆಯುತ್ತಾನೆ. ಕುಡಿಬೇಕು ಎಂದುಕೊಂಡರೆ ಬಾರ್ಗೆ ಹೋಗುತ್ತಾನೆ. ಸಿಗರೇಟ್ ಸೇದಬೇಕೆಂಬ ಅಸೆ ಬಂದರೆ ದಂ ಎಳೆಯುತ್ತಾನೆ. ಇಂತಹ ವಿಶೇಷ ಗುಣ ಕಥಾನಾಯಕನಲ್ಲಿ ಇರುತ್ತದೆ. ಎಲ್ಲಾ ಚಿತ್ರದಲ್ಲಿ ಪ್ರಿಯತಮೆ ಸಿಗದೆ ಇದ್ದಾಗ ದೇವದಾಸ ಆಗುತ್ತಾನೆ. ಆದರೆ ಇದರಲ್ಲಿ ಕುಡುಕ ಆದ ನಂತರ ಹುಡುಗಿ ಬಂದರೆ ಹೆಂಗಿರುತ್ತೆ. ರೌಡಿಯಾಗ ಬೇಕಾದ ಹುಡುಗ ಇದ್ದಕ್ಕಿದ ಹಾಗೆ ಎಣ್ಣೆ ....