ವೈಯಕ್ತಿಕ ಸಮಸ್ಯೆಯನ್ನು ಹೇಳಿಕೊಳ್ಳುವ ಬ್ರಹ್ಮಚಾರಿ ಹಾಸ್ಯ ಚಿತ್ರ ‘ಬ್ಯಹ್ಮಚಾರಿ’ ಚಿತ್ರದ ಟೀಸರ್‌ದಲ್ಲಿ ಕತೆಯ ಒಂದು ಏಳೆಯನ್ನು ತೋರಿಸಿದ್ದು ವೈರಲ್ ಆಗಿತ್ತು. ಈಗ ಪಾತ್ರಗಳ ಪರಿಚಯ ಮಾಡಿಸಲು ತುಣುಕುಗಳು ಬಿಡುಗಡೆಯಾಗಿದೆ. ಏನು ತಪ್ಪು ಮಾಡದೆ ಇದ್ದವನಿಗೆ ಕಷ್ಟಗಳು ಎದುರಾಗುತ್ತವೆ. ಪ್ರಸಕ್ತ ಸಮಾಜದಲ್ಲಿ ಹಲವರಿಗೆ ವೈಯಕ್ತಿಕ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಮುಜುಗರ ಅನಿಸುತ್ತದೆ. ಇದರಿಂದ ಅಂತರಾಳದಲ್ಲಿ ವೇದನೆ ಅನುಭವಿಸುತ್ತಿರುತ್ತಾರೆ. ಇವುಗಳ ಪರಿಹಾರಕ್ಕೆ ಹುಡುಕಿಕೊಂಡು ಹೋಗುವಾಗ ಬೇರೊಂದು ವಿಷಯದ ಪಯಣವು ತೆರೆದುಕೊಳ್ಳುತ್ತದೆ. ಸನ್ನಿವೇಶಗಳು ಕಾಮಿಡಿಯಾಗಿರುವುದರಿಂದ ಕುಟುಂಬಸಮೇತ ....
ಚಿತ್ರಮಂದಿರದಲ್ಲಿ ರಣಭೂಮಿ ಹುಟ್ಟು ಅನಿವಾಯವಾದ್ರು... ಸಾವು ಚರಿತ್ರೆ ಆಗಬೇಕು... ಎಂದು ಅಡಿಬರಹದಲ್ಲಿರುವ ‘ರಣಭೂಮಿ’ ಚಿತ್ರಕ್ಕೆ ಬರವಣಿಗೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮಾಡಿರುವ ಚಿರಂಜೀವಿದೀಪಕ್ ಮಾನಸಿ ಫಿಲ್ಮ್ಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಜೋಕಾಲಿ ನಂತರ ಇದಕ್ಕಿಂತಲೂ ಒಳ್ಳೆ ಚಿತ್ರ ಕೊಡಬೇಕೆಂಬ ಗಮ್ಯದಿಂದ ಸಾಹಸಕ್ಕೆ ಕೈ ಹಾಕಿದ್ದಾರೆ. ನಲವತ್ತೈದು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಅದರಲ್ಲೂ ಎರಡು ದಿನ ಮಾತ್ರ ಬೆಳಗಿನ ಹೊತ್ತು, ಉಳಿದಂತೆ ರಾತ್ರಿ ವೇಳೆಯಲ್ಲಿ ಸೆರೆಹಿಡಿಯಲಾಗಿದೆ. ಸೆಸ್ಪನ್ಸ್, ಹಾರರ್, ....
ರಿಲಾಕ್ಸ್, ಕೂಲ್ ಸತ್ಯ ಕ್ರೈಂ, ಥ್ರಿಲ್ಲರ್ ಹಾಗೂ ಕಾಮಡಿ ಜಾನರ್ ಹೊಂದಿರುವ ‘ರಿಲ್ಯಾಕ್ಸ್ ಸತ್ಯ’ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಬದುಕಿನಲ್ಲಿ ಮನುಷ್ಯನ ಭಾವನೆಗಳು ಗರಿಷ್ಟ ಮಟ್ಟಕ್ಕೆ ತಲುಪುತ್ತದೆ. ಈ ಹಂತದಲ್ಲಿ ಹತಾಶಗೆ ಒಳಗಾದಾಗ ಆತನ ಅಂತರಾಳದ ಮನಸ್ಸು ಗೊಂದಲ ಬೇಡ, ರಿಲಾಕ್ಸ್‌ವೆಂದು ಹೇಳುತ್ತಿರುತ್ತದೆ. ಮುಂದೇನು ಎಂಬುದನ್ನು ನಿರ್ದೇಶಕ ನವೀನ್‌ರೆಡ್ಡಿ ಕುತೂಹಲ ಕಾಯ್ದಿರಿಸಿದ್ದಾರೆ. ಅಖಿರಾ ನಿರ್ದೇಶನ ಮಾಡಿರುವ ಇವರಿಗೆ ಎರಡನೆ ಅನುಭವ. ವಾಹನ ಚಾಲನ ತರಭೇತಿ ಶಾಲೆಯಲ್ಲಿ ಶಿಕ್ಷಕನಾಗಿ ಕಾಣಿಸಿಕೊಂಡಿರುವ ಪ್ರಭುಮುಂಡೇಕರ್ ನಾಯಕ. ನಂದೇ, ನನ್ನಲೇ, ನನ್ನಿಂದ ಎಂದು ಸ್ವಗತವಾಗಿ ಮಾತನಾಡಿಕೊಳ್ಳುವ ಪಾತ್ರ. ....
ಕುತೂಹಲ ಕೆರಳಿಸುವ ಐ೧ ತಂತ್ರಜ್ಘಾನ ಬೆಳೆದಂತೆ ಪ್ರಸಕ್ತ ಯುವ ತಂತ್ರಜ್ಘರು ಹೊಸ ಬಗೆಯ ಚಿತ್ರಗಳನ್ನು ಕೊಡುತ್ತಿದ್ದಾರೆ. ಇದರಲ್ಲಿ ಕೆಲವು ಯಶಸ್ವಿಯಾಗುತ್ತಿರುವುದು ನಮ್ಮ ಕಣ್ಣ ಮುಂದಿದೆ. ಈ ಸಾಲಿಗೆ ಕೊಂಡಿಯಾಗಿ ಯು ಪ್ರಮಾಣ ಪತ್ರ ಪಡೆದುಕೊಂಡಿರುವ ‘ಐ ೧’ ಚಿತ್ರವು ಸೇರ್ಪಡೆಯಾಗಿದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಹದಿನೈದು ಸ್ಪರ್ಧಿಗಳು ಲಾಕ್ ಆಗಿದ್ದಾರೆ. ಅದರಂತೆ ಚಿತ್ರದ ಕತೆಯಲ್ಲಿ ಮೂವರು ಅಮಾಯಕ ಹುಡುಗರನ್ನು ಒಬ್ಬನು ಟೆಂಪೋ ಟ್ರಾವಲ್ (ಟಿಟಿ)ದಲ್ಲಿ ಬಂದಿಯಾಗಿಸುತ್ತಾನೆ. ಅದನ್ನು ಮಾಡಲು ಕಾರಣವಾದರೂ ಏನು? ಕೆಟ್ಟ ಮನುಷ್ಯರು ಎಷ್ಟು ಕೆಟ್ಟತನ ಮಾಡುತ್ತಾ ಇದ್ದರೂ, ಅದನ್ನು ವೀಕ್ಷಣೆ ಮಾಡೋ ಒಬ್ಬ ವ್ಯಕ್ತಿ ಅವನ ....
ಪ್ರೀತಿ ಕಥನ ನಾನು ನನ್ ಜಾನು ಬದುಕೇ ಚೆಂದ ಇನ್ನು ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ‘ನಾನು ನನ್ ಜಾನು’ ಚಿತ್ರದ ಕತೆಯು ಶೀರ್ಷಿಕೆ ಹೇಳುವಂತೆ ಸುಂದರ ಪ್ರೇಮ ಕತೆ ಜೊತೆಗೆ ತೆಳು ಹಾಸ್ಯ ಇರಲಿದೆ. ಒಬ್ಬನು ಸಾಧನೆ ಮಾಡಲು ಹೋಗುವಾಗ ಅವನಿಗೆ ಉತ್ತೇಜನ ಕೊಡುವ ಬದಲು ನಿಂದನೆ ಮಾಡುತ್ತಾರೆ. ಆಡೋ ಜನರು ಕಡೆಗಣಿಸಿದರೂ ಕೊನೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆ ಎಲ್ಲವನ್ನು ಕಳೆದುಕೊಂಡಿರುತ್ತಾನೆ. ದುಡಿಮೆ ಮಾಡೋರಿಕೆ ಸಿಗೋ ಬೆಲೆ ಸಾಧನೆ ಮಾಡೋರಿಕೆ ಸಿಗೋಲ್ಲ. ಸಾಧನೆ ಮಾಡಿದ ಮೇಲೆ ಸಿಗೋಬೆಲೆ ಸತ್ತರೂ ಕಮ್ಮಿ ಆಗೊಲ್ಲ. ಸಾಧನೆ ಮಾಡೋ ಮುಂಚೆ ಈ ಸಮಾಜ ಆಡೋ ಮಾತಿಂದ ನಾವು ಏನೆಲ್ಲಾ ಕಳೆದುಕೊಳ್ತವೆ ಎಂಬುದು ಸಾರಾಂಶವಾಗಿದೆ. ....
ರೈತಾಪಿ ಜನಗಳ ಬದುಕು ಬವಣೆ ಯಾವುದೇ ಸರ್ಕಾರ ಬರಲಿ ರೈತರ ಬದುಕು ಅಸನಾಗಿಲ್ಲ. ಇಂತಹುದೆ ಕತೆಯುಳ್ಳ ‘ರಣಹೇಡಿ’ ಚಿತ್ರವೊಂದು ತೆರೆಗೆ ಬರಲು ಸಿದ್ದಗೊಂಡಿದೆ. ಶೀರ್ಷಿಕೆ ಕೇಳಿದರೆ ಮಾಸ್ ಸಿನಿಮಾ ಅಂದುಕೊಳ್ಳಬಹುದು. ಆದರೆ ಪೋಸ್ಟರ್‌ನ ಟೈಟಲ್ ಕಾರ್ಡಿನಲ್ಲಿ ನೇಗಿಲು, ಗಾಡಿಯ ಚಕ್ರ, ನೇಣು ಕುಡಿಕೆ ತೋರಿಸಲಾಗಿ, ಬಲರಾಮನ ಕಡೆ ನೋಡಿ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಹೊಟ್ಟೆಗೆ ಆಹಾರ ಪ್ರಧಾನ, ಅನ್ನ ನೀಡುವ ಕೈಗಳು ದೇಶಕ್ಕೆ ಪ್ರಧಾನಿ. ರೈತಾಪಿ ಜನಗಳ ಬದುಕು ಬವಣೆ. ಅದರಲ್ಲೂ ಕಬ್ಬು ಬೆಳೆಗಾರರು ಅನುಭವಿಸುವ ಯಾತನೆಗಳು. ಸರ್ಕಾರಿ-ಖಾಸಗಿ ಶಾಲೆಗಳ ತಾರತಮ್ಯ. ಇದರ ಮದ್ಯೆ ನವಿರಾದ ಪ್ರೀತಿ, ಪ್ರೇಮ ಇರಲಿದೆ. ರೈತ ದೇವೋಭವ, ಗ್ರಾಮೀಣ ಭಾಗದ ....
ಕೌಟಂಬಿಕ ಕಥನ ಈಶ ಮಹೇಶ ಸತ್ಯ ಘಟನೆ, ಹಾರರ್, ಮರ್ಡರ್, ಪ್ರಯೋಗಾತ್ಮಕ ಚಿತ್ರಗಳ ನಡುವೆ ‘ಈಶ ಮಹೇಶ’ ಕೌಟಂಬಿಕ ಕತೆ ಹೊಂದಿರುವ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ನೀರಾವರಿ ಪ್ರದೇಶವುಳ್ಳ ಚಿಕ್ಕ ಹಳ್ಳಿಯು ಕತೆಯು ನಡೆಯುತ್ತದೆ. ಸಮಾಜ ಸೇವೆ ಮಾಡುವ ಊರಿನ ಮುಖ್ಯಸ್ಥನಿಗೆ ಇಬ್ಬರು ಮಕ್ಕಳು. ಅಣ್ಣ ಶ್ರೀಮಂತ, ತಮ್ಮ ಬಡವ. ಒಮ್ಮೆ ಸೋದರ ಚುನಾವಣೆಯಲ್ಲಿ ನಿಲ್ಲುತ್ತಾನೆ. ಫಲಿತಾಂಶದಲ್ಲಿ ಸೋತು ಹೋಗಿದ್ದೆನೆಂದು ಬೇಸರಗೊಂಡು ಮನೆಗೆ ಹೋಗಿ ಆರೋಗ್ಯ ಸಮಸ್ಯೆಯಿಂದ ಮರಣ ಹೊಂದುತ್ತಾನೆ. ಆದರೆ ಎಲೆಕ್ಷನ್‌ದಲ್ಲಿ ಗೆಲುವು ಕಂಡಿರುತ್ತಾನೆ. ಪತ್ನಿ ಇಲ್ಲಿಯ ಕಷ್ಟ, ವಾತವರಣ ನೋಡಲಾಗದೆ ದೂರದ ಊರಿಗೆ ಹೋಗುತ್ತಾರೆ. ಮುಂದೇನು ಎನ್ನುವುದು ....
ಕ್ರೇಜಿ ಸ್ಟಾರ್‌ಗೆ ತ್ರಿಬಲ್ ಖುಷಿ ರವಿಚಂದ್ರನ್ ಅವರಿಗೆ ಮೂರು ಖುಷಿ ಒಂದರ ಹಿಂದೆ ಬಂದಿದೆ. ಮೊದಲನೆಯದಾಗಿ ಪಿಎಂಆರ್ ವಿಶ್ವವಿದ್ಯಾಲಯವು ಇವರನ್ನು ಡಾಕ್ಟರೇಟ್ ಗೌರವ ನೀಡಲು ನಿರ್ಣಯ ತೆಗೆದುಕೊಂಡಿದೆ. ಎರಡನೆಯದು ‘ಆ ದೃಶ್ಯ’ ಚಿತ್ರವು ಒಂದು ವಾರ ಮುಂಚಿತವಾಗಿ ಅದು ಅಪ್ಪನ ಹುಟ್ಟುಹಬ್ಬ ದಿವಸದಂದು ಬಿಡುಗಡೆಯಾಗುತ್ತಿರುವುದು. ಕೊನೆಯದಾಗಿ ಮಗಳ ಹುಟ್ಟುಹಬ್ಬ. ಸೆಸ್ಪನ್ಸ್, ಥ್ರಿಲ್ಲರ್ ಸಿನಿಮಾವು ‘ಧ್ರುವಂಗಳ್ ೧೬’ ತಮಿಳು ಚಿತ್ರದ ಕತೆಯನ್ನು ಕನ್ನಡಿಕರಣಗೊಳಿಸಲಾಗಿದೆ. ಮೊದಲ ಚಿತ್ರದಲ್ಲಿ ರವಿಚಂದ್ರನ್ ಪೋಲೀಸ್‌ರಿಂದ ಹೊಡೆಸಿಕೊಂಡಿದ್ದರು. ಇದರಲ್ಲಿ ತನಿಖಾದಿಕಾರಿಯಾಗಿ ಅಪರಾದಿಗಳನ್ನು ಕಂಡಿ ಹಿಡಿಯುವ ....
ಹಿಂದಿ ಪದ ಚಿತ್ರದ ಶೀರ್ಷಿಕೆ ಶೀರ್ಷಿಕೆ ಕ್ಯಾಚಿ ಆಗಿದ್ದರೆ ಜನರು ಸಿನಿಮಾ ನೋಡಲು ಬರುತ್ತಾರೆಂದು ಯಾವ ಪುಣ್ಯಾತ್ಮ ಹೇಳಿದರೋ ತಿಳಿಯದು. ಇಲ್ಲೊಂದು ತಂಡವು ಹಿಂದಿ ಪದ ‘ಜಾಗೊ’ ಹೆಸರನ್ನು ಟೈಟಲ್ ಆಗಿ ಬಳಸಿಕೊಂಡಿದ್ದಾರೆ. ಮೇಲಿ ಹೇಳಿರುವಂತೆ ಇದನ್ನೆ ಇಡಲಾಗಿದೆ ಎಂಬುದಾಗಿ ನಿರ್ಮಾಪಕರು ಹೇಳಿಕೊಂಡಿದ್ದಾರೆ. ರಾಜಕೀಯದಲ್ಲಿ ಅಧಿಕಾರಕ್ಕೆ ಬರಲು ನಾಲ್ಕು ಕಾಲುಗಳು ಇರುವ ಕುರ್ಚಿ ಮುಖ್ಯವಾಗಿರುತ್ತದೆ. ಒಂದೊಂದು ಕಾಲಿಗೂ ಮಹತ್ವ ಇದೆ. ಆ ಪೈಕಿ ಒಂದು ಕಾಲು ವಿದ್ಯಾರ್ಥಿ ಎಂದು ಹೇಳುತ್ತದೆ. ಇದನ್ನೆ ಭಾಗವಾಗಿಟ್ಟುಕೊಂಡು ಸನ್ನಿವೇಶಗಳು ತೆರೆದುಕೊಳ್ಳುತ್ತವೆ. ೧೯೯೦ರ ಕಾಲಘಟ್ಟದಲ್ಲಿ ಕಾಲೇಜು ಘಟನೆಗಳು ಬರಲಿದೆ. ಅಂದು ....
ಎರಡು ಭಾಷೆಯಲ್ಲಿ ತಿರುಗ್ಸೋಮೀಸೆ ‘ಕಿರಿಕ್ ಲವ್‌ಸ್ಟೋರಿ’, ‘ಇಬ್ಬರು ಬಿಟೆಕ್ ಸ್ಟೂಡೆಂಟ್ಸ್ ಜರ್ನಿ’ ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದ ಎಸ್.ಶ್ರೀನಿವಾಸ್ ‘ತಿರುಗ್ಸೋಮೀಸೆ’ ಚಿತ್ರಕ್ಕೆ ಪೂರ್ಣ ಪ್ರಮಾಣದ ನಿರ್ಮಾಪಕರಾಗಿದ್ದಾರೆ. ಮತ್ತು ತೆಲುಗುದಲ್ಲಿ ‘ಮೀಸಂ ತಿಪ್ಪಂದಿ’ಗೆ ಬಂಡವಾಳ ಹೂಡಿರುವುದು ರಿಜ್ವಾನ್. ಕತೆ ಕುರಿತು ಹೇಳುವುದಾದರೆ ಪಬ್‌ನಲ್ಲಿ ಡಿಜೆ ಪ್ಲೇಯರ್ ಆಗಿರುವ ನಾಯಕ, ಚಿಕ್ಕ ವಯಸ್ಸಿನಲ್ಲಿ ಕೆಟ್ಟ ಚಾಳಿಗೆ ಮರುಳಾಗಿ ಜೀವನವನ್ನು ಹಾಳು ಮಾಡಿ ಕೊಂಡಿರುತ್ತಾನೆ. ನಂತರ ಒಂದು ಸಾಹಸಭರಿತ ಪ್ರಯಾಣ ಕೈಗೊಂಡು ತನ್ನ ಬದುಕನ್ನು ಹೇಗೆ ....
ಏಳರ ಅದ್ಬುತ ೧೯೭೬ರಲ್ಲಿ ಚಿತ್ರಬ್ರಹ್ಮ ಪುಟ್ಟಣ್ಣಕಣಗಾಲ್ ನಿರ್ದೆಶನದ ‘ಕಥಾಸಂಗಮ’ ಚಿತ್ರದಲ್ಲಿ ಮೂರು ಕತೆಗಳು ಇದ್ದವು. ಬರೋಬ್ಬರಿ ೪೩ ವರ್ಷಗಳ ನಂತರ ಇದೇ ಹೆಸರಿನಲ್ಲಿ ಏಳು ಕಥನಗಳ ಚಿತ್ರವೊಂದು ಸದ್ದಿಲ್ಲದೆ ಮುಗಿದಿದೆ. ಕಿರಿಕ್‌ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿರ್ದೇಶಕ ರಿಶಬ್‌ಶೆಟ್ಟಿ ಇದಕ್ಕಿಂತ ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಅಂದರೆ ಏಳು ಕತೆಗಳು, ನಿರ್ದೇಶಕರುಗಳು, ಸಂಗೀತ ನಿರ್ದೇಶಕರುಗಳು, ಛಾಯಾಗ್ರಾಹಕರುಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಪೈಕಿ ಆಕ್ಷನ್ ಕಟ್ ಹೇಳಿದವರು, ಕ್ಯಾಮಾರ ಕೆಲಸ ಮಾಡಿದವರು ಸಂಪೂರ್ಣ ಹೊಸಬರು. ಪ್ರತಿ ಕಿರುಚಿತ್ರವು ಅಂದಾಜು ೧೮-೨೦ ನಿಮಿಷ ಇರಲಿದ್ದು ....
ಆಯುಷ್ಮಾನ್‌ಭವ ಮುಂದೂಡಿಕೆಗೆ ಕಾರಣಗಳು ಅದ್ದೂರಿ ‘ಆಯುಷ್ಮಾನ್‌ಭವ’ ಚಿತ್ರವು ಕನ್ನಡ ರಾಜ್ಯೋತ್ಸವ ದಿನದಂದು ಬಿಡುಗಡೆಯಾಗುವುದಾಗಿ ಸುದ್ದಿ ಹರಡಿತ್ತು. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ನಿರ್ಮಾಪಕರು ಹೇಳಿಕೆ ನೀಡಿದ್ದರು. ಸಿನಿಮಾವು ಅದೇ ದಿನದಂದು ತೆರೆ ಕಾಣದೆ ಇರುವುದರಿಂದ ವಾಹಿನಿ, ಅಭಿಮಾನಿಗಳು ಗೊಂದಲದ ವಾತಾವರಣವನ್ನು ಬಿಂಬಿಸುತ್ತಿದ್ದಾರೆ. ಇದೆಲ್ಲಾಕ್ಕೂ ಉತ್ತರ ನೀಡಲು ನಿರ್ಮಾಪಕ ಯೋಗೀಶ್‌ದ್ವಾರಕೀಶ್ ತಂಡದೊಂದಿಗೆ ಮಾದ್ಯಮದವರನ್ನು ಭೇಟಿ ಮಾಡಿ ಎಲ್ಲವನ್ನು ಕೂಲೂಂಕುಷವಾಗಿ ನಿರ್ದೇಶಕರು ಹೇಳುತ್ತಾರೆಂದು ಮೈಕ್‌ನ್ನು ಹಸ್ತಾಂತರಿಸಿದರು. ಚಿತ್ರವು ಯುಎ ಪ್ರಮಾಣ ಪಡೆದುಕೊಂಡಿದೆ. ಕೇರಳ, ....
ತಮಿಳಿಗೆ ಅಂದವಾದ
ಉತ್ತಮ ಚಿತ್ರಕ್ಕೆ ಯಾವಾಗಲೂ ಬೆಲೆ ಇರುತ್ತದೆ ಎಂಬುದಕ್ಕೆ ‘ಅಂದವಾದ’ ಚಿತ್ರ ಸಾಕ್ಷಿಯಾಗುತ್ತದೆ. ಸಿನಿಮಾವು ಕಳೆದವಾದ ಬಿಡುಗಡೆಯಾಗಿ, ಪತ್ರಿಕೆಗಳಿಂದ ಬಂದ ವಿಮರ್ಶೆ ನೋಡಿ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ನಾಯಕ ಜೈ, ನಿರ್ದೆಶಕ ಚಲ ಇಬ್ಬರಿಗೂ ಹೊಸ ಅನುಭವ. ಕಾಲಿವುಡ್‌ನಲ್ಲಿ ‘೯೬’ ಚಿತ್ರಕ್ಕೆ ನಿರ್ದೇಶನ ಮಾಡಿರುವ ನಂದಕುಮಾರ್ ಇದನ್ನು ತಮಿಳಿನಲ್ಲಿ ರಿಮೇಕ್ ಮಾಡಲು ಮುಂದೆ ಬಂದಿರುವುದು ತಂಡಕ್ಕೆ ಸಂತಸ ತಂದಿದೆ. ಇವೆರಡು ಅಂಡಮಾನ್‌ದಲ್ಲಿ ಚಿತ್ರೀಕರಣಗೊಂಡಿದ್ದು, ಇಬ್ಬರಿಗೂ ಮಧ್ಯವರ್ತಿಯಿಂದ ತೊಂದರೆ ಆಗಿತ್ತು.
ಜಾತ್ರೆಯಲ್ಲಿ ಜನುಮದ ಜಾತ್ರೆ ಹಾಡುಗಳು ಹಳ್ಳಿಗಳಲ್ಲಿ ಸಡಗರ, ಸಂಭ್ರಮ, ವ್ಯಾಪಾರ ನಡೆಯುವುದನ್ನು ಅಲ್ಲಿನ ಭಾಷೆಯಲ್ಲಿ ಜಾತ್ರೆ ಅಂತ ಕರೆಯುತ್ತಾರೆ. ಅಂತಹದೇ ಕಾರ್ಯಕ್ರಮವು ‘ಜನುಮದ ಜಾತ್ರೆ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣವು ಸಿಲಿಕಾನ್ ಸಿಟಿಯಲ್ಲಿ ನಡೆಯಿತು. ಹಾಗೆಂದ ಮಾತ್ರಕ್ಕೆ ಇದು ಯಾವುದೋ ಮೈದಾನದಲ್ಲಿ ನಡೆಯಲಿಲ್ಲ. ಅದು ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದರದಲ್ಲಿ ಜರುಗಿತು. ಅಲ್ಲಿನ ಸಾಮರ್ಥ್ಯ ೮೬ ಆಸನಗಳು. ಆದರೆ ಕಾರ್ಯಕ್ರಮಕ್ಕೆ ಬಂದವರ ಸಂಖ್ಯೆ ಇದರ ನಾಲ್ಕುಪಟ್ಟು ಇತ್ತು. ಇನ್ನು ಚಿತ್ರದ ಕುರಿತು ಹೇಳುವುದಾದರೆ ಹಳ್ಳಿ ಸೊಗಡಿನ ಕತೆಯಾಗಿದೆ. ಪ್ರತಿ ಮನುಷ್ಯನ ಬದುಕಿನಲ್ಲಿ ಕಷ್ಟಗಳು ಎದುರಾದಾಗ ಮನಸ್ಸು ....
ನಾನೇ ರಾಜನಿಗೆ ಅಧ್ಯಕ್ಷರುಗಳ ಶುಭಹಾರೈಕೆ ನಟ ಗಣೇಶ್ ಕಿರಿಯ ಸೋದರ ಉಮೇಶ್ ‘ನಾನೇ ರಾಜ’ ಚಿತ್ರದ ಮೂಲಕ ಸೂರಜ್‌ಕೃಷ್ಣ ಹೆಸರಿನೊಂದಿಗೆ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಮನರಂಜನೆ, ಸಾಹಸ ಮತ್ತು ಪ್ರೀತಿ ಕತೆ ಹೊಂದಿದೆ. ಅಜ್ಜಿಯ ಮುದ್ದಿನ ಮೊಮ್ಮಗ, ಸ್ನೇಹಿತರ ಅಚ್ಚುಮೆಚ್ಚಿನ ಗೆಳೆಯ ರಾಜ, ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಹಾಗೆ ಯಾರೇ ಯಾವ ಸಮಯದಲ್ಲೂ ಸಹಾಯ ಕೇಳಿದರೂ ಮುಂದಾಗುವ ಅಪಾಯವನ್ನು ಲೆಕ್ಕಿಸದೆ ಸಹಾಯ ಮಾಡುವ ಗುಣವುಳ್ಳವನು. ಅಕಸ್ಮಾತ್ ಸಿಕ್ಕ ಹುಡುಗಿಯೊಬ್ಬಳು ತನ್ನ ಕಷ್ಟವನ್ನು ಹೇಳಿ ಸಹಾಯವನ್ನು ಮಾಡಲು ಕೋರಿಕೊಳ್ಳುತ್ತಾಳೆ. ಅವಳನ್ನು ರಕ್ಷಿಸಲು ಹೋಗಿ ತಾನೇ ಕಷ್ಟಕ್ಕೆ ಸಿಲುಕುತ್ತಾನೆ. ಅವೆಲ್ಲಾವನ್ನು ಎದುರಿಸಿ, ....
ಹಾಡುತೈತಿ ಹಾಲಕ್ಕಿ ಹಾಡುತೈತಿ ನುಡಿತೈತೆ ಹಸಿವು, ವಿದ್ಯೆ ನಡುವಿನ ಭವಿಷ್ಯ ಅಂತ ಹೇಳಿಕೊಂಡಿರುವ ‘ಹಾಲಕ್ಕಿ’ ಕತೆಯು ಭವಿಷ್ಯ ಹೇಳುವ ಚಿತ್ರವಾಗಿರುವುದಿಲ್ಲ. ಶಿಕ್ಷಣಕ್ಕೆ ಸಂಬಂದಿಸಿದಂತೆ ಸರ್ಕಾರವು ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ಆದರೆ ಮಧ್ಯವರ್ತಿಗಳ ಹಾವಳಿಯಿಂದ ಸರಿಯಾದವರಿಗೆ ತಲುಪುತ್ತಿಲ್ಲ. ಶಾಲೆಯ ಸ್ಥಿತಿ ಗತಿ ಏನಾಗಿದೆ. ಸತ್ಯ ಅನ್ನೋದು ಎಲ್ಲರಿಗೂ ಒಂದೇ. ಅದು ಪಟ್ಟಣ, ಹಳ್ಳಿ ಆಗಿರಬಹುದು. ಹಳ್ಳಿಯವರೇನು ತಪ್ಪು ಮಾಡುವುದಿಲ್ಲವಾ? ಒಳ್ಳೇದು ಯಾವಾಗಲೂ ತಾನಾಗೇ ಕರೆದುಕೊಂಡು ಹೋಗುತ್ತದೆ. ಇಂತಹ ಅಂಶಗಳು ಇರುವ ಹಳ್ಳಿಯ ಸೊಗಡಿನ ಕತೆ ಇದಾಗಿದೆ. ತಮ್ಮ ಗಿರೀಶ್‌ಮಾಧು ನಿರ್ಮಾಪಕ, ಅಣ್ಣ ....
ಸಾಧಕರ ಸಾಧನೆ ತೋರಿಸುವುದು ಶ್ರೇಯಸ್ಸು - ಪೋಲೀಸ್ ಆಯುಕ್ತ ಹೊಸಬರೇ ಸೇರಿಕೊಂಡು ಮಡಕೇರಿಯಲ್ಲಿ ೧೯೯೦ರಂದು ನಡೆದ ಸತ್ಯ ಘಟನೆಯನ್ನು ತೆಗೆದುಕೊಂದು ಅದಕ್ಕೆ ಕಾಲ್ಪನಿಕ ಕತೆಯ ಸ್ಪರ್ಶ ನೀಡಿರುವ ‘ಕುಥಸ್ಥ’ ಸೆಸ್ಪೆನ್ಸ್, ಥ್ರಿಲ್ಲರ್ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಪ್ರಾರಂಭದಲ್ಲಿ ಸಾಧಕರನ್ನು ಹೊಗಳುವ ಹಾಡಿನಲ್ಲಿ ಅಗಲಿದ ಕಲಾವಿದರು, ತಂತ್ರಜ್ಘರ, ಕವಿಗಳ ಭಾವಚಿತ್ರದ ಜೊತೆಗೆ ಕೆಲವೊಂದು ಚಿರನಿದ್ರೆಗೆ ಹೋಗುತ್ತಿರುವ ಸ್ಟಿಲ್ಸ್‌ಗಳನ್ನು ತೋರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೋಲೀಸ್ ಆಯುಕ್ತ ಭಾಸ್ಕರರಾವ್ ಇದರ ಬಗ್ಗೆ ಆರೋಗ್ಯಕರವಾದ ಆಕ್ಷೇಪ ವ್ಯಕ್ತಪಡಿಸಿದರು. ಜನರ ....
ಬಿಡುಗಡೆ ಸನಿಹದಲ್ಲಿ ಕನ್ನಡ್ ಗೊತ್ತಿಲ್ಲ ಕನ್ನಡ ಅಭಿಮಾನಿಯ ಎದುರು ಪರಭಾಷಿಗನು ಕನ್ನಡ್ ಗೊತ್ತಿಲ್ಲವೆಂದು ಹೇಳಿದಾಗ ಅವನು ಏನಾಗ್ತಾನೆ. ಸಿಲಿಕಾನ್ ಸಿಟಿಯಲ್ಲಿ ಪ್ರಸಕ್ತ ಹೆಚ್ಚಾಗಿ ಕನ್ನಡೇತರರು ಇದ್ದಾರೆ. ಅವರುಗಳು ನಮ್ಮ ಭಾಷೆ ಬಾರದಿದ್ದರೂ ಕನ್ನಡ್ ಗೊತ್ತಿಲ್ಲವೆಂದು ಹೇಳಿದಾಗ ಇಲ್ಲಿನವರಿಗೆ ಕೆಂಡದಂತ ಕೋಪ ಬರುತ್ತದೆ. ಇಂತಹ ಅಂಶಗಳನ್ನು ಹೆಕ್ಕಿಕೊಂಡು ‘ಕನ್ನಡ್ ಗೊತ್ತಿಲ್ಲ’ ಎನ್ನುವ ಚಿತ್ರವೊಂದು ಸಿದ್ದಗೊಂಡಿದೆ. ಮರ್ಡರ್ ಮಿಸ್ಟರ್ ಕತೆಯಲ್ಲಿ ಕನ್ನಡ ಯಾಕೆ ಸಂಬಂದವಿದೆ ಎಂದು ತಿಳಿಯಲು ಸಿನಿಮಾ ನೋಡಬೇಕು. ಐಟಿ, ಸ್ಥಳೀಯ ಘಟನೆಗಳು, ಕನ್ನಡಿಗರು, ಪರಭಾಷಿಗರು ಕುರಿತಂತೆ ಸನ್ನಿವೇಶಗಳು ಬರಲಿದೆ. ....
ಆರು ಭಾಷೆಗಳ ಟ್ರೈಲರ್ ಬಿಡುಗಡೆ ಸಂಪೂರ್ಣ ಮಕ್ಕಳ ಕಮರ್ಷಿಯಲ್ ಚಿತ್ರ ‘ಗಿರ್ಮಿಟ್’ ಕನ್ನಡ ಸೇರಿದಂತೆ ಹಿಂದಿ, ಇಂಗ್ಲೀಷ್, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಕೊನೆ ಹಂತದ ಪ್ರಚಾರ ಕಾರ್ಯಕ್ರಮದಲ್ಲಿ ಹೆಸರಾಂತ ವಾಹಿನಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಎಲ್ಲಾ ಭಾಷೆಯ ಟ್ರೈಲರ್‌ಗೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಂಬಲಾಗದ ಪ್ರಯತ್ನವನ್ನು ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ತುಣುಕುಗಳನ್ನು ನೋಡಿದಾಗ ಎರಡು ವಿಷಯಕ್ಕೆ ಗಾಬರಿ ಆಯಿತು. ಒಂದು ಚಿಣ್ಣರ ಪರಿಪೂರ್ಣ ಅಭಿನಯ. ಎರಡನೆಯದು ಎಂಥ ಅಪಾಯದಲ್ಲಿದೆ ನಮ್ಮ ಯುಗ. ಹಿಂದೆ ಖ್ಯಾತ ಗಾಯಕರು ಮಕ್ಕಳಂತೆ ಹಾಡುತ್ತಿದ್ದರು. ....
ಹಿರಿಯ ಹಾಸ್ಯ ಕಲಾವಿದರನ್ನು ಸನ್ಮಾನಿಸಿದ ರಾಂಧವ ಚಂದನವನದಲ್ಲಿ ಚಿತ್ರಗಳು ೨೩,೫೦,೧೦೦ ಹಾಗೂ ೧೨೫ನೇ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿವೆ. ಈ ಸರಪಣಿಗೆ ಹೊಸಕೊಂಡಿ ‘ರಾಂಧವ’ ಚಿತ್ರ. ಯಸ್ ಭರ್ಜರಿ ಐವತ್ತು ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಸಣ್ಣದೊಂದು ಕಾರ್ಯಕ್ರಮವನ್ನು ನಾಯಕ ಭುವನ್‌ಪೊನ್ನಣ್ಣ ಏರ್ಪಾಟು ಮಾಡಿದ್ದರು. ಕಲಾವಿದರು ಮತ್ತು ತಂತ್ರಜ್ಘರಿಗೆ ಫಲಕಗಳನ್ನು ಕಂದಾಯ ಸಚಿವ ಆರ್.ಅಶೋಕ್ ವಿತರಿಸಿದರು. ನಂತರ ಮಾತನಾಡುತ್ತಾ ನಾನು ಸಹ ಕನ್ನಡ ಚಿತ್ರಗಳನ್ನು ಹೆಚ್ಚು ನೋಡುತ್ತಿದ್ದೆ. ಆಪರೇಶನ್ ಡೈಮೆಂಡ್ ರಾಕೇಟ್ ಸಿನಿಮಾದ ಟಿಕೆಟ್ ಸಿಗಲಿಲ್ಲ. ಆದರೆ ರಾಜಕೀಯದಲ್ಲಿ ಟಿಕೆಟ್ ದಕ್ಕಿ ಇಲ್ಲಿಯವರೆಗೂ ಬಂದಿದ್ದೇನೆ. ನಮ್ಮ ....