ಮಟಾಶ್ ಏನಿದರ ಗಮ್ಮತ್ತು ಕೇಂದ್ರ ಸರ್ಕಾರವು ೨೦೧೬ರ ಅಂತ್ಯದಲ್ಲಿ ನೋಟು ಅನಾಣ್ಯೀಕರಣ ಮಾಡಿದಾಗ ಇಡೀ ದೇಶವೆ ತಲ್ಲಣಗೊಂಡಿತ್ತು. ಇದರ ಕುರಿತಂತೆ ಕೆಲವು ಚಿತ್ರಗಳು ಬಂದಿವೆ. ಅದರಂತೆ ‘ಮಟಾಶ್’ ಅಡಿಬರಹದಲ್ಲಿ ‘ಮಾಡ್ತಾ ಇರ್ತಿವಿ ಆಗ್ತಾ ಇರುತ್ತ್ತೆ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಕತೆಯ ಕುರಿತು ಹೇಳುವುದಾದರೆ ಮೈಸೂರು, ಬಿಜಾಪುರ ಕಡೆಯಿಂದ ಯುವಕರ ತಂಡ, ಬೆಂಗಳೂರಿನಿಂದ ಗ್ಯಾಂಗ್ಸ್ಟರ್ಸ್ ತಂಡ ಇರುತ್ತದೆ. ಮೈಸೂರಿನ ಯುವಕರು ಸಕಲೇಶಪುರದ ರೆಸಾರ್ಟ್ಗೆ ಮಸ್ತಿ ಮಾಡಲು ಹೋಗುತ್ತಾರೆ. ಅಲ್ಲಿ ಬಿಜಾಪುರ ಯುವಕರು ಸೇರಿಕೊಂಡು ಪಾರ್ಟಿ ಮಾಡುವಾಗ ಬೆಂಗಳೂರಿನ ಇಬ್ಬರು ....
ಕೊಯಮತ್ತೂರು ಘಟನೆ ಕನ್ನಡ ಚಿತ್ರ ೨೦೧೬ ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ‘ಅರಬ್ಬಿ ಕಡಲ ತೀರದಲ್ಲಿ’ ಎನ್ನುವ ಕುತೂಹಲ ಚಿತ್ರವೊಂದು ಬಿಡುಗಡೆ ಹಂತಕ್ಕೆ ಬಂದಿದೆ. ಕಥಾನಾಯಕ ಮಾಡಲ್ ಕ್ಷೇತ್ರದಲ್ಲಿ ಛಾಯಾಗ್ರಾಹಕನಾಗಿ ಹೆಸರು ಮಾಡಿದ್ದು, ವಯಸ್ಸು ಮೀರಿದ್ದರೂ ಮದುವೆ ಆಗಿರುವುದಿಲ್ಲ. ಕಡಲ ತೀರದಲ್ಲಿ ಅಪ್ಪನ ಭವ್ಯ ಬಂಗಲೆಯ ಅಧಿಪತಿಯಾಗಿದ್ದರೂ ಅಲ್ಲಿಗೆ ಹೋಗದೆ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾನೆ. ಒಮ್ಮೆ ತಾನು ಮೆಚ್ಚಿದ ಹುಡುಗಿಗೆ ತಾಳಿ ಕಟ್ಟುವ ಮುನ್ನವೆ ಕೊಲೆಯಾಗುತ್ತಾಳೆ. ಮುಂದೆ ಖಿನ್ನತೆಗೆ ಒಳಗಾಗಿ ಮಾನಸಿಕ ರೋಗಿಯೆಂದು ವ್ಯವಸ್ಥೆಯಲ್ಲಿ ....
ಒಂದು ಕಥೆಯಲ್ಲಿ ನಾಲ್ಕು ಉಪಕಥೆಗಳು ಚಿತ್ರಬ್ರಹ್ಮ ಪುಟ್ಟಣ್ಣಕಣಗಾಲ್ ೧೯೭೪ರಲ್ಲಿ ನಾಲ್ಕು ಕಥೆಗಳು ಇರುವ ‘ಕಥಾ ಸಂಗಮ’ ಚಿತ್ರವನ್ನು ಪ್ರಯೋಗಾತ್ಮಕವಾಗಿ ನಿರ್ದೇಶಿಸಿ ಯಶಸ್ಸು ಪಡೆದಿದ್ದರು. ಅದರಂತೆ ಹೊಸಬರ ‘ಒಂದು ಕಥೆ ಹೇಳ್ಲಾ’ ಹಾರರ್ ಐದು ಕಥೆಗಳ ಚಿತ್ರವೊಂದು ತೆರೆಗೆ ಬರಲು ಸನ್ನಿಹಿತವಾಗಿದೆ. ವಿಷಯವನ್ನು ತಿಳಿಸಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಟ್ರೈಲರ್ಗೆ ಚಾಲನೆ ನೀಡಿದ ನಟ,ನಿರ್ದೇಶಕ ರಿಶಬ್ಶೆಟ್ಟಿ ಮಾತನಾಡಿ ನಮ್ಮ ಪ್ರೇಕ್ಷಕರು ಅನ್ನಸಾಂಬರ್ ಅಲ್ಲದೆ ಬಿರಿಯಾನಿ ಇಷ್ಟಪಡುತ್ತಾರೆ. ಅದಕ್ಕಾಗಿ ಹಲವು ಹೊಸಬಗೆಯ ....
ಹಾಡಿನ ಪದ ಚಿತ್ರದ ಶೀರ್ಷಿಕೆ ಯೋಗರಾಜ್ಭಟ್ ನಿರ್ದೇಶನ, ಜಯಂತ್ಕಾಯ್ಕಣಿ ಸಾಹಿತ್ಯ, ಮನೋಮೂರ್ತಿ ಸಂಗೀತದ ಮುಂಗಾರುಮಳೆ ಚಿತ್ರದಲ್ಲಿ ‘ಅನಿಸುತಿದೆ ಯಾಕೋ ಇಂದು’ ಹಾಡು ಈಗಲೂ ಚಾಲ್ತಿಯಲ್ಲಿದೆ. ಇದನ್ನು ಹೇಳಲು ಪೀಠಿಕೆ ಇದೆ. ಹಾಡಿನಲ್ಲಿ ಬರುವ ಒಂದು ಪದ ‘ಅನಿಸುತಿದೆ’ ಈಗ ಸಿನಿಮಾದ ಶೀರ್ಷಿಕೆಯಾಗಿದ್ದು, ಎ ಲವ್ ಸ್ಟೋರಿ ಆಫ್ ಎ ಫೈಟರ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಐದು ವರ್ಷಗಳ ಹಿಂದೆ ಶುರುವಾಗಿ ಪ್ರಸಕ್ತ ತರೆಗೆ ಬರುವ ಹಂತಕ್ಕೆ ಬಂದಿದೆ. ಅಂದು ಇದೇ ಹೆಸರಿನ ಮೇಲೆ ಕತೆ ಸಿದ್ದ ಮಾಡಿಕೊಂಡು ನಟ ಗಣೇಶ್ ಬಳಿ ಹೋದಾಗ ಒಂದು ಬಾರಿ ನಿರ್ದೇಶನ ಮಾಡಿರುವವರಿಗೆ ಕಾಲ್ಶೀಟ್ ಕೊಡುವುದಾಗಿ ಹೇಳಿದ್ದಾರೆ. ....
ಶಿರಡಿ ಸಾಯಿ ಗೀತೆಗಳು ಭಾನುವಾರ ಕಲಾವಿದರ ಸಂಘದಲ್ಲಿ ಮೂವತ್ತಕ್ಕೂ ಹೆಚ್ಚು ಮುತ್ತೈದೆಯರು ಸಾಯಿರಾಂ ಭಜನೆ ಮಾಡುತ್ತಿರುವುದರಿಂದ ವೇದಿಕೆಯು ದೇವಸ್ಥಾನದಂತೆ ಕಂಡು ಬರುವುದಕ್ಕೆ ‘ಪ್ರತ್ಯಕ್ಷ ದೈವ ಶಿರಡಿ ಸಾಯಿ’ ಚಿತ್ರದ ಧ್ವನಿಸಾಂದ್ರಿಕೆ ಲೋಕಾರ್ಪಣೆ ಬಿಡುಗಡೆ ಕಾರಣವಾಗಿತ್ತು. ಖಳ ಮಾಂತ್ರಿಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ತೆಲುಗು ನಟ ಭಾನುಚಂದರ್ ಆಡಿಯೋ ಬಿಡಗುಡೆ ಮಾಡಿ ಸಾಯಿ ಕುರಿತ ಯಾವುದೇ ಭಾಷೆಯಲ್ಲಿ ಚಿತ್ರ ಮಾಡಿದರೂ ಭಕ್ತರು ನೋಡುತ್ತಾರೆ ನಿರ್ಮಾಪಕರು ೧೮ ತಿಂಗಳುಗಳ ಕಾಲ ಮಾಂಸಹಾರ ಸೇವಿಸದೆ ಸಾಯಿರಾಂ ಪಾತ್ರಕ್ಕೆ ಜೀವ ತುಂಬಿದ್ದಾರೆಂದು ಮೊದಲ ಹಾಡಿನ ತುಣುಕುಗಳಿಗೆ ಚಾಲನೆ ....
ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ನಿರಂತರ ಖಾಯಿಲೆ ಇರುವ ರೋಗಿಗಳು ಅದರಲ್ಲೂ ಹಿರಿಯ ನಾಗರಿಕರಿಗೆ ಪ್ರತಿ ಸಲ ಆಸ್ಪತ್ರೆಗೆ ಹೋಗುವುದು ಕಷ್ಟಕರವಾಗಿರುತ್ತದೆ. ಇದರಿಂದ ಖಾಯಿಲೆಯು ಮತ್ತಷ್ಟು ಉಲ್ಬಣಗೊಳ್ಳುವ ಸಾದ್ಯತೆ ಇರುತ್ತದೆ. ಇವೆಲ್ಲವನ್ನು ಮನಗಂಡು ಅನುಭವಿ ವೈದ್ಯರುಗಳಾದ ಡಾ.ಸುದೀಂದ್ರ ಮತ್ತು ಡಾ.ಉಜ್ವಾಲ ‘ಮಾರಿ ಗೋಲ್ಡ್ ಹಾಸ್ಪಿಟಲ್’ನ್ನು ಮೈಕೋ ಲೇ ಔಟ್, ಬಿಟಿಎಂ ೨ನೇ ಹಂತ, ಬೆಂಗಳೂರು ಇಲ್ಲಿ ನಾಲ್ಕು ಮಹಡಿಯ ಸುಸಜ್ಜಿತ ಆಸ್ಪತ್ರೆಯನ್ನು ಪ್ರಾರಂಭ ಮಾಡಿದ್ದಾರೆ. ಇದರಲ್ಲಿ ರೋಗಿಗಳು ನೊಂದಣಿ ಮಾಡಿಸಿದಲ್ಲಿ ‘ಯೂನಿಕ್ ಐಡಂಟಿಟಿ ಕೋಡ್’ ಎನ್ನುವ ಕಾರ್ಡ್ನ್ನು ....
ಶ್ರೀ ರಾಘವೇಂದ್ರ ಚಿತ್ರವಾಣಿಗೆ ಪ್ರಶಂಸೆಗಳ ಸುರಿಮಳೆ ಶುಕ್ರವಾರ ಕಲಾವಿದರ ಸಂಘದಲ್ಲಿ ಶ್ರೀ ರಾಘವೆಂದ್ರ ಚಿತ್ರವಾಣಿ ಸಂಸ್ಥೆಯಿಂದ ಏರ್ಪಡಿಸಲಾಗಿದ್ದ ೧೮ನೇ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪುರಸ್ಕ್ರತರುಗಳು ಸಂಸ್ಥೆಯ ಕೆಲಸವನ್ನು ಗುಣಗಾನ ಮಾಡಿದರು. ವಿವಿದ ಸಾಧಕರ ಹೆಸರಿನಲ್ಲಿ ಪ್ರಶಸ್ತಿಯನ್ನು ಪಡೆದಿರುವ ಹೆಸರಾಂತ ನಿರ್ಮಾಪಕ ರಾಕ್ಲೈನ್ವೆಂಕಟೇಶ್, ಹಿರಿಯ ಚಲನಚಿತ್ರ ಪತ್ರಕರ್ತ ಡಾ.ಬನ್ನಂಜೆ ಗೋವಿಂದಚಾರ್ಯ, ನಿರ್ದೇಶಕರುಗಳಾದ ಪಿ.ವಾಸು,ರಿಷಬ್ಶೆಟ್ಟಿ, ಕಾರ್ತಿಕ್ ಸರಗೂರು, ಚಂಪಾಶೆಟ್ಟಿ, ಸಂಗೀತ ನಿರ್ದೇಶಕರುಳಾದ ಕೆ.ಕಲ್ಯಾಣ್,ವಾಸುಕಿವೈಭವ್, ಅನುಭವಿ ....
ಪ್ರೇಮಿಗಳ ದಿನದಂದು ಕಣ್ಸೆನ್ನೆ ಕಿರಿಕ್ ಮಾಡ್ತಾರೆ ಮೊಟ್ಟ ಮೊದಲಬಾರಿ ಮಲೆಯಾಳಂ ಚಿತ್ರವು ‘ಕಿರಿಕ್ ಲವ್ ಸ್ಟೋರಿ’ ಹೆಸರಿನಲ್ಲಿ ಕನ್ನಡದಲ್ಲಿ ಡಬ್ ಆಗಿದೆ. ವಿಷಯವನ್ನು ತಿಳಿಸಲು ತಂಡವು ಸಿಲಿಕಾಟ್ ಸಿಟಿಗೆ ಪ್ರಚಾರದ ಸಲುವಾಗಿ ಆಗಮಿಸಿದ್ದರು. ತೊಂಬತ್ತು ನಿಮಿಷ ಮಾದ್ಯಮದವರನ್ನು ಕಾಯಿಸಿದ್ದಕ್ಕಾಗಿ ಮಾಲಿವುಡ್ ನಿರ್ದೇಶಕ ಓಮರ್ಲೂಲು ಕ್ಷಮೆ ಕೋರಿದರು. ನಂತರ ಮಾತು ಶುರುಮಾಡಿ ತೆಲುಗು, ಹಿಂದಿ ಸೇರಿದಂತೆ ನಾಲ್ಕು ಭಾಷೆಯಲ್ಲಿ ಸಿದ್ದಗೊಂಡಿದೆ. ಕತೆಯು ಸಾರ್ವತ್ರಿಕವಾಗಿರುವುದರಿಂದ ಎಲ್ಲಾ ಭಾಷೆಗೆ ಹೊಂದಿ ಕೊಳ್ಳುತ್ತದೆ. ಹದಿಹರೆಯದ ಹುಡುಗ-ಹುಡುಗಿಯರ ಮ್ಯೂಸಿಕಲ್ ಲವ್ ....
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ನಾಳೆ ಬಿಡುಗಡೆಯಾಗುತ್ತಿರುವ ’ಸೀತಾರಾಮ ಕಲ್ಯಾಣ’ ಚಿತ್ರದ ಪೂರ್ವ ಭಾವಿ ಪ್ರದರ್ಶನದಲ್ಲಿ ಎಲ್ಲ ಪಕ್ಷಗಳ ಶಾಸಕರೊಂದಿಗೆ ಚಿತ್ರ ವೀಕ್ಷಿಸಿದರು.
ನಾನು ನಮ್ಮುಡ್ಗಿ ಖರ್ಚ್ಗೊಂದ್ ಮಾಫಿಯಾ ಮೇಲಿನ ಸಾಲು ಚಿತ್ರದ ಶೀರ್ಷಿಕೆ ಅಂದುಕೊಂಡಲ್ಲಿ ನಿಮ್ಮ ಊಹೆ ಸರಿಯಾಗಿದೆ. ತಂತ್ರಜ್ಘಾನ ಬೆಳದಂತೆ ಇದರಿಂದ ಉಪಯೋಗ, ದುರಪಯೋಗ ಎರಡು ನಡೆಯುತ್ತಿದೆ. ಪ್ರಚಲಿತ ಯುವ ಜನಾಂಗವು ದೈನಂದಿನ ಖರ್ಚು ನಿರ್ವಹಿಸಲು ದುರಳ ಕೆಲಸವನ್ನು ಮಾಡುತ್ತಿದ್ದಾರೆ. ಅಂದರೆ ಹುಡುಗರುಗಳೇ ಸೇರಿಕೊಂಡು ಹುಡುಗಿಯನ್ನು ಅಪಹರಿಸಿ ಆಕೆಯಿಂದ ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿಸಿಕೊಳ್ಳುವುದನ್ನು ಮೊಬೈಲ್ದಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಯುಟ್ಯೂಬ್ಗೆ ಬಿಡುತ್ತಾರೆ. ಇದನ್ನು ಇಂತಿಷ್ಟು ಜನರು ನೋಡಿದರೆ ಸಂಸ್ಥೆಯಿಂದ ದುಡ್ಡು ಸಿಗುತ್ತದಂತೆ. ಭಾರತೀಯ ಸಂವಿಧಾನದಲ್ಲಿ ....
ಬಿಡುಗಡೆ ಮುಂಚೆ ಲಾಭದಲ್ಲಿ ಸೀತಾರಾಮ ಕಲ್ಯಾಣ ‘ಸೀತಾರಾಮ ಕಲ್ಯಾಣ’ ಕೌಟಂಬಿಕ ಚಿತ್ರ. ಎಲ್ಲರೂ ಕೂತು ಚರ್ಚೆ ಮಾಡಿ ಹೊರಭಾಷೆಯ ಪೈಪೋಟಿಗಳ ಮಧ್ಯೆ ನಮ್ಮದು ಯಶಸ್ಸು ಆಗಬೇಕೆಂಬ ಸಣ್ಣದೊಂದು ಪ್ರಯತ್ನ ಮಾಡಲಾಗಿದೆ ಎಂದು ನಾಯಕ ನಿಖಿಲ್ಕುಮಾರ್ ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಅಣ್ಣಾವ್ರ ಚಿತ್ರಗಳಲ್ಲಿ ಸಾಮಾಜಿಕ ಕಳಕಳಿ ಇರುವ ಅಂಶಗಳು ಇದ್ದವು. ಅದರ ಪ್ರೇರಣೆಯಿಂದ ಅಂತಹುದೇ ರೀತಿಯಲ್ಲಿ ಕತೆ ಮಾಡಲಾಗಿದೆ. ಅನೂಪ್ರೂಬಿನ್ಸ್ ಸಂಗೀತ ಪ್ಲಸ್ ಪಾಯಿಂಟ್. ‘ನಿನ್ನ ರಾಜ ನಾನು, ನನ್ನ ರಾಣಿ ನೀನು’ ಹಾಡು ಹಿಟ್ ಆಗಿರುವುದು ಸಂತಸ ತಂದಿದೆ. ಇದು ಸಿನಿಮಾಗೋಷ್ಟಿ ....
ಆನಂದ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಗೊಂಡಿರುವ ಚಿತ್ರ "ಸೆಪ್ಲಿಮೆಂಟರಿ" ಈ ಚಿತ್ರವನ್ನು ಪ್ರಾಧ್ಯಾಪಕರಾದ ಡಾ,, ದೇವರಾಜ್ ರವರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡಿ ಹಾಗೂ ಮುಖ್ಯವಾದ ಪಾತ್ರದಲ್ಲಿ ಅಭಿನಯಿಸಿರುವ ಮಹೇಂದ್ರ ಮುನ್ನೋತ್ ಸಮಾಜಕ್ಕೆ ಒಂದು ಸಾಮಾಜಿಕ ಜವಾಬ್ದಾರಿಯ ಹಾಗೂ ....
ಕರಿಯಪ್ಪ ಮತ್ತು ಮಗನ ಪ್ರಸಂಗಗಳು ‘ಕೆಮಿಸ್ಟ್ರೀ ಆಪ್ ಕರಿಯಪ್ಪ’ ಇದು ಚಿತ್ರವೊಂದರ ಹೆಸರು. ಶೀರ್ಷಿಕೆ ಹೀಗಿದೆ. ಚಿತ್ರ ಹೇಗಿದೆಯೋ ಎಂಬ ಪ್ರಶ್ನೆ ಕಾಡುವುದು ದಿಟ. ಪರಂತು, ಚಿತ್ರವು ಹಿಂಗೇ ಇರುತ್ತೆ ಅನ್ನುವುದಕ್ಕೊಂದು ಹಾಡುಗಳು, ಟ್ರೈಲರ್ ಸಾಕು. ವಿಶೇಷವೆಂದರೆ ನೈಜ ಘಟನೆಯನ್ನು ತೆಗೆದುಕೊಂಡು ಕತೆಯನ್ನು ಸಿದ್ದಪಡಿಸಲಾಗಿದೆ. ಇದರ ಬಗ್ಗೆ ಹೇಳಿಕೊಳ್ಳಲೆಂದೇ ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದ ಮುಂದೆ ಬಂದಿದ್ದರು. ಸಿನಿಮಾ ಹುಟ್ಟಿದ ಬಗೆಯನ್ನು ನೆನಪು ಮಾಡಿಕೊಂಡ ....
ಬೆಂಕೋಶ್ರೀ ಫಿಲಿಂ ಫ್ಯಾಕ್ಟರಿಯಿಂದ ಎರಡು ಚಿತ್ರಗಳು ಗಾಂಧಿನಗರದಲ್ಲಿ ಬೆಂಕೋಶ್ರೀ ಹೆಸರು ಪರಿಚಿತವಾಗಿದೆ. ಪುತ್ರ ಎಂ.ಎಸ್.ಅಕ್ಷರ್ ಚಿತ್ರರಂಗಕ್ಕೆ ಬರುತ್ತಿರುವುದು ತಿಳಿದ ವಿಷಯವಾಗಿದೆ. ಅವರು ಯಾವ ತರಹದ ಪಾತ್ರಗಳಿಗೆ ಹೊಂದಿಕೊಳ್ಳುತ್ತಾರೆ ಎನ್ನುವ ಹಾಗೆ ಕಲ್ಪನೆಗೆತಕ್ಕಂತೆ ಫೋಟೋ ಶೂಟ್ ಮಾಡಿಸಿದ್ದಾರೆ. ಹಳ್ಳಿಯಲ್ಲಿ ಅನಾಥ ಬದುಕು, ಗೊತ್ತು ಗುರಿ ಇಲ್ಲದೆ ಹೊಸ ಪ್ರಪಂಚಕ್ಕೆ ಹೊರಡುವುದು. ಪಟ್ಟಣಕ್ಕೆ ಬಂದಾಗ ದಾರಿ ಕಾಣೆದೆ ಕಷ್ಟಪಡುವುದು. ಕೆಲಸಕ್ಕೆ ಸೇರಿಕೊಂಡು ಪ್ರೀತಿಗೆ ದಾಸನಾಗಿ ಸೋಲು ಕಾಣುವುದು. ಇದರಿಂದ ಹೆಣ್ಣಿನ ಮೇಲಿನ ಮೋಹ, ....
ಕರಿಯಪ್ಪ ಮತ್ತು ಮಗನ ಪ್ರಸಂಗಗಳು ‘ಕೆಮಿಸ್ಟ್ರೀ ಆಪ್ ಕರಿಯಪ್ಪ’ ಇದು ಚಿತ್ರವೊಂದರ ಹೆಸರು. ಶೀರ್ಷಿಕೆ ಹೀಗಿದೆ. ಚಿತ್ರ ಹೇಗಿದೆಯೋ ಎಂಬ ಪ್ರಶ್ನೆ ಕಾಡುವುದು ದಿಟ. ಪರಂತು, ಚಿತ್ರವು ಹಿಂಗೇ ಇರುತ್ತೆ ಅನ್ನುವುದಕ್ಕೊಂದು ಹಾಡುಗಳು, ಟ್ರೈಲರ್ ಸಾಕು. ವಿಶೇಷವೆಂದರೆ ನೈಜ ಘಟನೆಯನ್ನು ತೆಗೆದುಕೊಂಡು ಕತೆಯನ್ನು ಸಿದ್ದಪಡಿಸಲಾಗಿದೆ. ಇದರ ಬಗ್ಗೆ ಹೇಳಿಕೊಳ್ಳಲೆಂದೇ ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದ ಮುಂದೆ ಬಂದಿದ್ದರು. ಸಿನಿಮಾ ಹುಟ್ಟಿದ ಬಗೆಯನ್ನು ನೆನಪು ಮಾಡಿಕೊಂಡ ....
ಬೆಂಕೋಶ್ರೀ ಫಿಲಿಂ ಫ್ಯಾಕ್ಟರಿಯಿಂದ ಎರಡು ಚಿತ್ರಗಳು ಗಾಂಧಿನಗರದಲ್ಲಿ ಬೆಂಕೋಶ್ರೀ ಹೆಸರು ಪರಿಚಿತವಾಗಿದೆ. ಪುತ್ರ ಎಂ.ಎಸ್.ಅಕ್ಷರ್ ಚಿತ್ರರಂಗಕ್ಕೆ ಬರುತ್ತಿರುವುದು ತಿಳಿದ ವಿಷಯವಾಗಿದೆ. ಅವರು ಯಾವ ತರಹದ ಪಾತ್ರಗಳಿಗೆ ಹೊಂದಿಕೊಳ್ಳುತ್ತಾರೆ ಎನ್ನುವ ಹಾಗೆ ಕಲ್ಪನೆಗೆತಕ್ಕಂತೆ ಫೋಟೋ ಶೂಟ್ ಮಾಡಿಸಿದ್ದಾರೆ. ಹಳ್ಳಿಯಲ್ಲಿ ಅನಾಥ ಬದುಕು, ಗೊತ್ತು ಗುರಿ ಇಲ್ಲದೆ ಹೊಸ ಪ್ರಪಂಚಕ್ಕೆ ಹೊರಡುವುದು. ಪಟ್ಟಣಕ್ಕೆ ಬಂದಾಗ ದಾರಿ ಕಾಣೆದೆ ಕಷ್ಟಪಡುವುದು. ಕೆಲಸಕ್ಕೆ ಸೇರಿಕೊಂಡು ಪ್ರೀತಿಗೆ ದಾಸನಾಗಿ ಸೋಲು ಕಾಣುವುದು. ಇದರಿಂದ ಹೆಣ್ಣಿನ ಮೇಲಿನ ಮೋಹ, ....
ಒಂದು ಪ್ರೀತಿಯಲ್ಲಿ ಎರಡು ಕತೆಗಳು ಹೃದಯಕ್ಕಿಲ್ಲ ಪಂಚರ್ ಅಂಗಡಿ ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ‘ಒನ್ ಲವ್ ೨ ಸ್ಟೋರಿ’ ಚಿತ್ರವು ಮೊದಲರ್ದದಲ್ಲಿ ಮೂರು ಕತೆಗಳು ಹುಟ್ಟಿಕೊಂಡು, ನಂತರ ಎರಡು ಕತೆಗೆ ಮಾರ್ಪಾಟು ಆಗುವುದೇ ಸಿನಿಮಾದ ಸಾರಾಂಶವಾಗಿದೆ. ಒಂದೊಂದು ದೃಶ್ಯಗಳು ನೋಡುಗನಿಗೆ ತನಗೆ ಹತ್ತಿರ ಇರುವಂತೆ ಭಾಸವಾಗುತ್ತದೆ. ಬಾಗಲಕೋಟೆಯ ವಸಿಷ್ಠಬಂಟನೂರ ಅವರು ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದು, ಅವರ ಚಿತ್ರಗಳನ್ನು ನೋಡುತ್ತಾ ತಾನು ಚಿತ್ರ ಮಾಡಬೇಕೆಂದು ಠರಾವೊಂದನ್ನು ತೆಗೆದುಕೊಂಡಿದ್ದಾರೆ. ಅದಕ್ಕಾಗಿ ಯಾವುದೇ ನಿರ್ದೇಶಕರ ಬಳಿ ಕೆಲಸ ಮಾಡದೆ, ....
ನೆಲದ ಮೇಲಿನ ನಕ್ಷತ್ರಗಳಿಂದ ಹಾಡುಗಳು ಬಿಡುಗಡೆ ನಾಯಕರುಗಳ ಪೋಸ್ಟರ್ಗೆ ಅಲಂಕಾರ ಮಾಡುವುದು, ಕಟ್ಔಟ್ಗೆ ಹಾರ, ಅಭಿಷೇಕ ಮಾಡುತ್ತಿರುವುದರಿಂದಲೇ ಸ್ಟಾರ್ಗಳಾಗಿ ಪರದೆ ಮೇಲೆ ಗುರುತಿಸಿ ಕೊಳ್ಳುತ್ತಿದ್ದಾರೆ. ಆದರೆ ಇವರನ್ನು ಈ ಮಟ್ಟಕ್ಕೆ ತರಲು ಶ್ರಮ ಪಡುವುದು ನೆಲದ ಮೇಲಿನ ನಕ್ಷತ್ರಗಳು. ಅಂದರೆ ಹೋಟೆಲ್ ಕಾರ್ಮಿಕರು, ಆಟೋ ಚಾಲಕರು, ವಾರಕ್ಕೆ ಕನಿಷ್ಟ ಎರಡು ಕನ್ನಡ ಚಿತ್ರಗಳನ್ನು ನೋಡುವ ಹುಡುಗರು. ಚಿತ್ರಕತೆ, ಸಾಹಿತ್ಯ ಮತ್ತು ಮುಖ್ಯ ಪಾತ್ರ ಮಾಡಿರುವ ಪತ್ರಕರ್ತ,ಚಿಂತಕ ಚಕ್ರವರ್ತಿಚಂದ್ರಚೂಡ್ ಇಂತಹ ಮೂವರು ಮಹನಿಯರನ್ನು ಗುರುತಿಸಿ ಅವರಿಂದಲೇ ....
ನಾಲ್ಕು ತಲೆಮಾರಿನ ಕಥನ ಎರಡು ವರ್ಷದ ಹಿಂದೆ ಮಹೂರ್ತ ಆಚರಿಸಿಕೊಂಡ ತೆಲುಗು ತಂಡದ ‘ಸುವರ್ಣ ಸುಂದರಿ’ ಚಿತ್ರವು ಬಿಡುಗಡೆ ಹಂತಕ್ಕೆ ಬಂದಿದೆ. ಕ್ರಿ.ಶ ೧೫೦೮ ರಿಂದ ಪ್ರಸಕ್ತ ೨೦೧೮ರ ವರೆಗಿನ ನಾಲ್ಕು ತಲೆಮಾರಿನ ಕತೆಯಾಗಿದೆ. ಕೃಷ್ಣದೇವರಾಯ ಅವಧಿಯಲ್ಲಿ ರಾಜಾ ಮಹಾದೇವಿರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ. ಸಾಮಾನ್ಯ ಸಿನಿಮಾವಾಗಿರದೆ ವಿಶೇಷ ಚಿತ್ರವಾಗಿದೆ. ಫೈಟ್ಸ್ ಇರೋಲ್ಲ. ಸ್ಟಂಟ್ಸ್ ಇರುತ್ತದೆ. ಕೇರಳ, ಹೈದರಾಬಾದ್, ಬೀದರ್, ವಿಧಾನಸೌಧ ರಸ್ತೆ, ನೈಸ್ ರೋಡ್ಗಳಲ್ಲಿ ೯೦ ದಿನಗಳ ಕಾಲ ಚಿತ್ರೀಕರಣ ....
ಗೂಸಿ ಗ್ಯಾಂಗ್ದಲ್ಲಿ ಕಾಲೇಜು ಹುಡುಗರು ಕಾಲೇಜುದಲ್ಲಿ ನಡೆಯುವ ತುಂಟಾಟ, ಹಾಸ್ಟೆಲ್ ಪ್ರಕರಣ ಜೊತೆಗೆ ಪ್ರಸಕ್ತ ಏನೇನು ನಡೆಯುತ್ತದೆ. ಯುವ ಜನಾಂಗವು ಜೀವನದಲ್ಲಿ ಒಳ್ಳೆಯದನ್ನು ಆರಿಸಿಕೊಂಡರೆ ಸುಂದರ ಬದುಕನ್ನು ಕಾಣಬಹುದೆಂದು ನೀತಿ ಪಾಠವನ್ನು ‘ಗೂಸಿ ಗ್ಯಾಂಗ್’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗರು ಅರಿವಿಲ್ಲದೆ ಕೆಟ್ಟ ಚಾಳಿಗೆ ಹೋಗುವುದು. ಅದರಿಂದ ಎದುರಾಗುವ ಸಂಕಷ್ಟಗಳು, ತಪ್ಪು ಮಾಡಿದವರು ಯಾವತ್ತು ಇದ್ದರೂ ಶಿಕ್ಷೆ ಅನುಭವಿಸಬೇಕೆಂದು ಸನ್ನಿವೇಶದಲ್ಲಿ ಬರಲಿದೆ. ....