Bhinna.Film Show Press Meet.

Tuesday, October 01, 2019

ಡಿಜಿಟಲ್ ಮೂಲಕ ನೇರವಾಗಿ ಬಿಡುಗಡೆಯಾದ ಚಿತ್ರ        ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ರೀಲ್ ಕಾಲದಿಂದ,  ಈಗ ಡಿಜಿಟಲ್ ಯುಗ ಬಂದಿರುವುದರಿಂದ ಎಲ್ಲವು ಅಂಗೈನಲ್ಲೆ ಸಿಗುತ್ತದೆ. ಬೇರೆ ಭಾಷೆಯ ಚಿತ್ರಗಳನ್ನು ಅಮೆಜಾನ್, ನೆಟ್‌ಫ್ಲಿಕ್ಸ್‌ನವರು ಖರೀದಿಸುತ್ತರುವಂತೆ, ಕನ್ನಡ ಸಿನಿಮಾಗಳು ಸೇರ್ಪಡೆಯಾಗುತ್ತಾ ಬಂದಿರುವುದು ಆರೋಗ್ಯಕರ  ಬೆಳವಣಿಗೆಯಾಗಿದೆ.  ಹೆಸರಾಂತ ಜೀ ವಾಹಿನಿ ಅವರ ಜಿ ೫ ಆನ್‌ಲೈನ್ ಸಂಸ್ಥೆಯು ೧೯೦ ದೇಶಗಳಲ್ಲಿ ತಮ್ಮದೆ ಆದ ವೀಕ್ಷಕರನ್ನು  ಸೆಳದುಕೊಂಡಿದೆ. ಅದರಿಂದಲೇ  ಹಿಂದಿ, ತಮಿಳು, ಮರಾಠಿ ತೆಲುಗು ಸೇರಿದಂತೆ ಹಲವು ಭಾಷೆಯ ಚಿತ್ರಗಳನ್ನು ಪ್ರಸಾರ ....

335

Read More...

Gantu Moote.Film Press Meet.

Tuesday, October 01, 2019

ಗಂಟುಮೂಟೆಗೆ ಪ್ರಶಸ್ತಿಗಳ ಸುರಿಮಳೆ            ಎಸ್‌ಎಸ್‌ಎಲ್‌ಸಿ ಓದುತ್ತಿರುವ ಹದಿನಾರರ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೇ ಅಷ್ಟೇ ತೀವ್ರತೆಯಿಂದ ಕೂಡಿದ ಭಾವದ ತುಡಿಗಳ ಸಮ್ಮಿಲದಿಂದ ಕೂಡಿದ ಚಿತ್ರ ‘ಗಂಟುಮೂಟೆ’  ಪ್ರದರ್ಶನವಾದ ಕಡೆಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ೨೦೧೯ರ ನ್ಯೂಯಾರ್ಕ್ ಇಂಡಿಯನ್ ಫಿಲಿಂ ಫಿಸ್ಟಿವಲ್‌ದಲ್ಲಿ ಉತ್ತಮ ಚಿತ್ರಕತೆ ಪಡೆದುಕೊಂಡ ಮೊದಲ ಕನ್ನಡ ಸಿನಿಮಾವಾಗಿದೆ. ಕೆನಡಾ, ಆಸ್ಟ್ರೇಲಿಯಾ, ಯುಎಸ್ ಇಟಲಿ ಮುಂತಾದ ದೇಶದ ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.  ೧೯೯೦ರ ಕಾಲಘಟ್ಟದಲ್ಲಿ ನಡೆಯುವ ಕತೆಯಲ್ಲಿ  ವಿದ್ಯಾಭ್ಯಾಸದ ಒತ್ತಡ, ....

397

Read More...

Savarnadeerga Sandhi..Film Audio Rel.

Tuesday, October 01, 2019

ಬ್ದಕ್ಕೆ ಅದರದೇ ಆದ ಸಂಗೀತ ಇರುತ್ತದೆ – ಜಯಂತ್ ಕಾಯ್ಕಣಿ        ಸದಭಿರುಚಿಯ ಸಾಹಿತಿ ಜಯಂತ್ ಕಾಯ್ಕಣಿ ಅವರ ಮಾತುಗಳನ್ನು ಕೇಳುವುದೇ ಚೆಂದ.  ‘ಸವರ್ಣ ಧೀರ್ಘ ಸಂದಿ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಲು ಅವರು ಆಗಮಿಸಿದ್ದರು. ನಂತರ ಮಾತನಾಡುತ್ತಾ  ಇದೊಂದು  ಸುಂದರ ಆವರಣ. ನಾವು ಮೊದಲ ಹಾಡು ಬರೆದಾಗ ಹುಟ್ಟಿದಂತ ಏಳೆ ಚೇತನಗಳು ಈಗ ವಯಸ್ಕರಾದ ಮೇಲೆ ಚಿತ್ರ ಮಾಡಿದ್ದಾರೆ.  ನಾವು ಅಲ್ಲೆ ಈಜುತ್ತಾ ಇದ್ದೇವೆ. ನಾನು ಯಾವತ್ತು ಹಾಡು ಬರೆದಿರಲಿಲ್ಲ. ಗೀತೆ ಬರೆಯುವ ಕಾಯಕಕ್ಕೆ ತಳ್ಳಿದವರು ಯೋಗರಾಜಭಟ್ಟರು. ನನ್ನ ಜೀವನದಲ್ಲಿ ಹೊಸ ಅಧ್ಯಾಯ, ಮಗ್ಗಲು, ಕಲೆ, ಕೌಶಲವನ್ನು  ಕಲಿಯುವಂತ ....

346

Read More...

Garuda.Film Trailer Rel.

Monday, September 30, 2019

ಅದ್ದೂರಿ  ತಾರಗಣದ  ಗರುಡ         ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಉಗ್ರಗಾಮಿಗಳನ್ನು ಸೆದೆ ಬಡಿಯುವಾಗ  ‘ಗರುಡ’ ಹೆಸರಿನ  ಅಸ್ತ್ರವನ್ನು  ಬಳಸಲಾಗಿತ್ತು. ಈಗ ಇದೇ ಹಸೆರಿನ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾದಲ್ಲಿ ಇದಕ್ಕೆ ಸಣ್ಣದೊಂದು ಲಿಂಕ್ ಇದೆಯಂತೆ. ನೂರಕ್ಕೂ ಹೆಚ್ಚು ಚಿತ್ರಗಳಿಗೆ ಕಲಾವಿದರುಗಳನ್ನು  ಕುಣಿಸಿದ್ದ ಕೆ.ಧನಕುಮಾರ್ ಇದೆಲ್ಲಾ ಸಂವೇದನೆಯಿಂದ ಚೂಚ್ಚಲಬಾರಿ ನಿರ್ದೇಶಕನ ಸೀಟನ್ನು ಅಲಂಕರಿಸಿದ್ದಾರೆ.  ಕುಟುಂಬದ ಜವಬ್ದಾರಿಯನ್ನು ಹೊತ್ತುಕೊಂಡಿರುವ ಹುಡುಗ ಅವರಿಗಾಗಿ ಏನು ಮಾಡ್ತಾನೆ, ಯಾವ ರೀತಿಯ ತ್ಯಾಗಕ್ಕೆ ಮುಂದಾಗುತ್ತಾನೆ.  ಸುಂದರ  ಕುಟುಂಬದಲ್ಲಿ  ಎಲ್ಲವು  ....

322

Read More...

Raaja Patha.Film Audio Rel.

Monday, September 30, 2019

ರಾಜಪಥ  ಹಾಡುಗಳ  ಪರ್ವ        ಕಳೆದ ವರ್ಷ ರಾಜರಥ ಎನ್ನುವ ಚಿತ್ರವೊಂದು ಬಿಡುಗಡೆಗೊಂಡಿತ್ತು. ಈಗ ‘ರಾಜಪಥ’ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿರುವುದಿಲ್ಲ. ನಿಜವಾದ ದಾರಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.  ಹೊಸಬರೇ ಸೇರಿಕೊಂಡು ಸಿದ್ದಪಡಿಸಿದ್ದಾರೆ. ಹಿರಿಯ ನಿರ್ದೇಶಕರುಗಳಾದ ಕೆ.ವಿ.ಜಯರಾಂ, ರಾಮದಾಸನಾಯ್ಡು ಬಳಿ ಕೆಲಸ ಕಲಿತಿರುವ ಸಿದ್ದುಮೂಗೂರು ಚಿತ್ರಕ್ಕೆ ರಚನೆ ಮತ್ತು ನಿರ್ದೇಶನದ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಪ್ರತಿಯೊಬ್ಬರ ಜೀವನದಲ್ಲಿ ಪುಟ್ಟ ಪುಟ್ಟ ಕನಸುಗಳು ಇರುತ್ತವೆ.  ಅದನ್ನು ನನಸು ಮಾಡಿಕೊಳ್ಳಬೇಕಾದರೆ ತಾಳ್ಮೆ, ನಂಬಿಕೆ  ....

295

Read More...

Lighthaagi Lovehagidhe.Film Audio Rel.

Monday, September 30, 2019

ಉತ್ತರ  ಕರ್ನಾಟಕದವರ  ಲೈಟಾಗಿ  ಲವ್ವಾಗಿದೆ        ಇತ್ತೀಚಗೆ ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು  ಪ್ರತಿಭೆಗಳು ಹೊರಬರುತ್ತಿದ್ದಾರೆ.  ಈಗ ‘ಲೈಟಾಗಿ ಲವ್ವಾಗಿದೆ’ ಚಿತ್ರವು  ಸಂಪೂರ್ಣ ಆ ಭಾಗದವರಿಂದ ಸಿದ್ದಗೊಂಡಿದೆ.  ಕ್ಯಾಸೆಟ್ ಇರುವ ಕಾಲದಲ್ಲಿ ಜನಪದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದ ಗುರುರಾಜ ಗದಾಡಿ ಬದುಕಿಗಾಗಿ ಕಿರುಚಿತ್ರ ನಿರ್ದೇಶನ ಮಾಡಿದ್ದರು. ಈಗ ಸಿನಿಮಾಕ್ಕೆ ಕತೆ,ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ ಮತ್ತು ಪಾಲುದಾರರು.  ಹಾಡುಗಳಿಗೆ ತಾನು ಸಾಹಿತ್ಯ ರಚಿಸದೆ ಇತರೆ ಹೊಸ ಪ್ರತಿಭೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.  ಪ್ರತಿಯೊಬ್ಬರ ಬದುಕಿನಲ್ಲಿ ಲೈಟಾಗಿ ಲವ್ ಆಗಿರುತ್ತದೆ. ....

914

Read More...

College Kumaari.Film Press Meet.

Monday, September 30, 2019

ಪ್ರೀತಿಯ ಮೌಲ್ಯ ಸಾರುವ ಕಾಲೇಜು ಕುಮಾರಿ         ಮಹಾಭಾರತ-ರಾಮಾಯಣ ಒಂದು ಹೆಣ್ಣಿಂದ ಅಂತ್ಯವಾಯಿತು. ಕಾಲ ಕಾಲಕ್ಕೂ ಹೆಣ್ಣು ಎಂಬ ಶಕ್ತಿಯಿಂದ ಗಂಡು ಜಾತಿ ಪ್ರಪಾತಕ್ಕೆ ಬೀಳುತ್ತಿದ್ದಾರೆ. ಹಾಗಂತ ಇವರಿಂದ ಕೇವಲ ದುರಂತಗಳು ನಡೆಯುವುದಿಲ್ಲ, ಸಾತ್ವಿಕ ಕೆಲಸಗಳು ಆಗುತ್ತದೆಂದು ಹೇಳುವ ‘ಕಾಲೇಜು ಕುಮಾರಿ’ ಚಿತ್ರವೊಂದು ಸಿದ್ದಗೊಂಡಿದೆ. ಮೂರನೆ ಬಾರಿ ನಿರ್ದೇಶಕ ರಾಗಿರುವ ಶಂಕರ್‌ಅರುಣ್ ಹೇಳುವಂತೆ ಸಿನಿಮಾದಲ್ಲಿ ಕಾಮಿಡಿ, ಡಬ್ಬಲ್ ಮೀನಿಂಗ್ ಸಂಭಾಷಣೆ, ಸಾಹಸ ಎಲ್ಲವು ಪೂರ್ಣ ಪ್ರಮಾಣದ ಮನರಂಜನೆಯಿಂದ ಕೂಡಿದೆ ಅಂತ ಬಣ್ಣಸಿಕೊಳ್ಳುತ್ತಾರೆ. ಜೊತೆಗೆ ತಂದೆ-ತಾಯಿ ಹೆಣ್ಣುಮಕ್ಕಳನ್ನು ಯಾವ ರೀತಿ ಬೆಳೆಸ್ತಾರೆ. ಅವರ ....

956

Read More...

www.Meena Bazaar.Film Press Meet.

Monday, September 30, 2019

ಮೀನಾ ಬಜಾರ್  ಪೋಸ್ಟರ್, ಟೀಸರ್ ಬಿಡುಗಡೆ         ಕನ್ನಡ ಚಿತ್ರಗಳಿಗೆ ಆಟೋ ಚಾಲಕರು, ಹೋಟೆಲ್ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ರಂಗಭೂಮಿ ಕಲಾವಿದರುಗಳು  ನಿಜವಾದ ಪ್ರೇಕ್ಷಕರಾಗಿರುತ್ತಾರೆ. ಇವರಿಂದಲೇ ನಿರ್ಮಾಪಕರು ನಿರಾಳರಾಗಿದ್ದಾರೆ. ಆ ಕಾರಣದಿಂದ  ‘www..ಮೀನಾಬಜಾರ್.,’ ಚಿತ್ರದ ನಾಲ್ಕು ಪೋಸ್ಟರ್‌ಗಳನ್ನು ಮೇಲೆ ಹೇಳಿದವರಿಂದ ಅನಾವರಣಗೊಳಿಸಲಾಯಿತು. ಶೀರ್ಷಿಕೆ ಕೊನೆಯಲ್ಲಿ ಡಾಟ್ ಕಾಮಾ ಎಂಬುದು ಇರಲಿದೆ.  ಇದು ಕಾಮಾ, ಕಾಮ ಅಂದರೆ ಸೆಕ್ಸ್ ಇರಬಹುದು. ಬಯಕೆ ಅಥವಾ ಮುಂದುವರೆದ ಭಾಗವಾದರೂ ಆಗಬಹುದೆಂದು ಹೇಳಿಕೊಂಡಿದೆ. ಕತೆಯ ಗುಟ್ಟನ್ನು ಬಿಟ್ಟುಕೊಡದ ನಿರ್ದೇಶಕರು ಅದನ್ನು ....

1485

Read More...

Syeraa.Film Release Event.

Tuesday, October 29, 2019

ಸೈರಾ ಇಂಡಿಯನ್ ಸಿನಿಮಾ – ಚಿರಂಜೀವಿ            ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಅದ್ದೂರಿ  ‘ಸೈರಾ ನರಸಿಂಹಾ ರೆಡ್ಡಿ’ ಚಿತ್ರದ ಪ್ರಚಾರಕ್ಕಾಗಿ ತಂಡವು ಸಿಲಿಕಾನ್ ಸಿಟಿಗೆ ಆಗಮಿಸಿತ್ತು. ಉಪ ಮುಖ್ಯ ಮಂತ್ರಿ ಸಿ.ಅಶ್ವಥನಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಗಾಂಧಿಜಯಂತಿ ದಿನದಂದು ಚಿತ್ರವು ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ. ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಪುರುಷನ ಕತೆಯಾಗಿದೆ. ನಮ್ಮ ಸುದೀಪ್ ಅಭಿನಯಿಸಿದ್ದಾರೆ. ಆಂದ್ರ-ಕರ್ನಾಟಕ ಸ್ನೇಹಭಾವದಿಂದ ಇದೆ ಎನ್ನುವುದಕ್ಕೆ ಸೈರಾ ಸಾಕ್ಷಿಯಾಗಿದೆ ಎಂದರು.           ನಮಸ್ಕಾರ ಎಂದು ....

961

Read More...

Adhyaksha in America.Film Rel Press Meet.

Tuesday, October 29, 2019

ರಾಗಿಣಿ ೨೫ನೇ ಚಿತ್ರ ಅಧ್ಯಕ್ಷ ಇನ್ ಅಮೇರಿಕಾ         ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರವು ರಾಗಿಣಿ  ಅವರ ೨೫ನೇ ಸಿನಿಮಾವಾಗಿದೆ ಎಂದು ನಿರ್ದೇಶಕ ಯೋಗಾನಂದ್‌ಮುದ್ದಾನ್ ಬಿಡುಗಡೆ[ಪೂರ್ವ ಸುದ್ದಿಗೋಷ್ಟಿಯಲ್ಲಿ ಮಾಹಿತಿ ಬಿಚ್ಚಿಟ್ಟರು.  ಮಲೆಯಾಳಂದಲ್ಲಿ ತೆರೆಕಂಡಿರುವ ‘ಟು ಸ್ಟೇಟ್ಸ್’ ಚಿತ್ರದ ಏಳೆಯನ್ನು ತೆಗೆದುಕೊಂಡು, ಇಲ್ಲಿನ ನೇಟಿವಿಟಿ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ. ೬೭ ದಿವಸದ ಚಿತ್ರೀಕರಣದಲ್ಲಿ ಶೇಕಡ ೭೦ರಷ್ಟು ಸನ್ನಿವೇಶಗಳು ಹಾಗೂ  ಮೂರು ಹಾಡುಗಳನ್ನು  ಅಮೇರಿಕಾದ ಸಿಯಾಟಲ್ ಪ್ರದೇಶದಲ್ಲಿ ಹದಿನೇಳು ಜನರ ತಂಡದೊಂದಿಗೆ  ಶೂಟ್ ಮಾಡಿರುವುದು ವಿಶೇಷ. ಗಂಡ ....

923

Read More...

Aayushmanbhava.Film Press Meet.

Friday, September 27, 2019

ಕನ್ನಡ  ದಿನದಂದು  ಆಯುಷ್ಮಾನ್‌ಭವ        ಕಳೆದ ನವೆಂಬರ್‌ದಲ್ಲಿ ಸದ್ದಿಲ್ಲದೆ ಶುರುವಾಗಿದ್ದ ‘ಆಯುಷ್ಮಾನ್‌ಭವ’ ಸಿನಿಮಾವು ತೆರೆಗೆ ಬರುತ್ತಿರುವ ಕಾರಣ ಸುದ್ದಿ ಮಾಡಲು ಮೊದಲಬಾರಿ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.  ಇದರಲ್ಲಿ ಹಲವು ವಿಶೇಷತೆಗಳು ಇರಲಿದೆ. ದ್ವಾರಕೀಶ್ ಬ್ಯಾನರ್‌ದಲ್ಲಿ ಐವತ್ತೆರಡನೇ ನಿರ್ಮಾಣ, ಗುರುಕಿರಣ್ ನೂರನೇ ಚಿತ್ರ, ಶಿವರಾಜ್‌ಕುಮಾರ್ ಮೊದಲಬಾರಿ ಕರ್ನಾಟಕದ ಕುಳ್ಳನ ಚಿತ್ರದಲ್ಲಿ ನಟಿಸಿರುವುದು. ಮೈಕ್ ತೆಗೆದುಕೊಂಡ ಗುರುಕಿರಣ್ ಮಾತನಾಡಿ ಇಷ್ಟದ ನಾಯಕ ನಟ ಶಿವಣ್ಣ. ಸತ್ಯ ಇನ್ ಲವ್ ಐವತ್ತನೇ ಚಿತ್ರವಾಗಿತ್ತು.  ಈಗ ನೂರು ಸಂಖ್ಯೆಗೂ ಅವರದೇ ಆಗಿರುವುದು ಸುಕೃತ ಎನ್ನಬಹುದು.  ಈ ಸಿನಿಮಾದ ....

391

Read More...

Lakshya.Film Audio Rel.

Thursday, September 26, 2019

ಬಿಡುಗಡೆ  ಮುಂಚೆ  ಭಾಗ-೨ಕ್ಕೆ  ಸಿದ್ದತೆ         ಒಂದು ಚಿತ್ರವು ಯಶಸ್ಸು ಗಳಿಸಿದರೆ  ಹಿಂದೆ ಮುಂದೆ ಕತೆಯನ್ನು ಕೊಂಚ ಬದಲಾವಣೆ ಮಾಡಿಕೊಂಡು  ಮುಂದುವರೆದ ಭಾಗದಂತೆ ಬರುವುದು ಇತ್ತೀಚೆಗೆ ವಾಡಿಕೆಯಾಗಿದೆ. ಆದರೆ ಬಿಡುಗಡೆ ಮುಂಚೆ ಭಾಗ-೨ ಬರುವುದು ತೀರಾ ವಿರಳ. ಮೊನ್ನೆ ತಾನೆ ಜಗ್ಗೇಶ್ ಅಭಿನಯದ ‘ತೋತಾಪುರಿ’ ಎರಡು ಭಾಗದಂತೆ ಚಿತ್ರೀಕರಣ ನಡೆಸುತ್ತಿರುವುದು ಸುದ್ದಿಯಾಗಿದೆ. ಅದರಂತೆ ಹೊಸಬರ ‘ಲಕ್ಷ್ಯ’ ಚಿತ್ರದ ಕತೆ ಮತ್ತು ಕ್ಲೈಮಾಕ್ಸ್  ಮುಂದುವರೆಸಿಕೊಂಡು ಹೋಗುತ್ತದೆ.  ಇದಕ್ಕೆ ನಿರ್ಮಾಪಕರು ಯಾರು ಸಿದ್ದರಿದ್ದರೆಂದು ಈಗಲೇ ಹೇಳಲು ಬರುವುದಿಲ್ಲವೆಂದು ರಚನೆ,ನಿರ್ದೇಶನ ....

1809

Read More...

Bharaate.Film Song Release.

Wednesday, September 25, 2019

ಹೊರಬಂತು  ಭರಾಟೆ  ಇಂಟ್ರಡಕ್ಷನ್  ಸಾಂಗ್         ಒಂದು ವರ್ಷದಿಂದ ಸದ್ದು ಮಾಡುತ್ತಿರುವ ‘ಭರಾಟೆ’ ಚಿತ್ರದ ಎರಡು ಹಾಡುಗಳು ವೈರಲ್ ಆಗಿದೆ. ಚಿತ್ರವು ಅಕ್ಟೋಬರ್ ೧೮ರಂದು ತೆರೆ ಕಾಣುತ್ತಿರುವುದರಿಂದ ತಂಡವು ಮೂರನೇ ಗೀತೆ ನಾಯಕನ ಪರಿಚಯದ ವಿಡಿಯೋ ಸಾಂಗ್‌ನ್ನು ಬುಧುವಾರ ಬಿಡುಗಡೆಮಾಡಿದೆ. ಯುವ ಸ್ಟಾರ್ ನಿರ್ದೇಶಕರುಗಳಾದ ಅಯೋಗ್ಯದ ಮಹೇಶ್‌ಕುಮಾರ್, ಮಫ್ತಿಯ ನರ್ತನ್, ಮತ್ತು ರಾಬರ್ಟ್‌ನ ತರುಣ್‌ಸುದೀರ್ ವಿಡಿಯೋ ಹಾಡಿಗೆ ಚಾಲನೆ ನೀಡಿದರು.  ಅರ್ಜುನ್‌ಜನ್ಯಾ ಸಂಗೀತ ಮತ್ತು ಮುರಳಿ ನೃತ್ಯ ಇರಲಿದೆ.  ‘ಹೀ ಇಸ್ ಎ ಗೈಡೋ, ರಾಜಸ್ಥಾನ್ ಪೈಡೋ’ ಹಾಡಿಗೆ ಚಂದನ್‌ಶೆಟ್ಟಿ ಧ್ವನಿಯಾಗಿದ್ದಾರೆ. ದೃಶ್ಯದಲ್ಲಿ ....

827

Read More...

Kiss.Film Audio Hit Function.

Tuesday, September 24, 2019

ಅರ್ಜುನ್  ಹರಿಕೃಷ್ಣ  ಜೋಡಿ  ಹಾಡುಗಳ  ಮೋಡಿ         ನಿರ್ದೇಶಕ ಎ.ಪಿ.ಅರ್ಜುನ್ ಮತ್ತು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಜೋಡಿಯಲ್ಲಿ ಬಂದಿರುವ ಸಾಂಗ್ಸ್  ಹಿಟ್ ಆಗಿದೆ. ಆ ಸಾಲಿಗೆ ‘ಕಿಸ್’ ಚಿತ್ರ ಸೇರಿಕೊಂಡಿದೆ. ಇದರಲ್ಲಿರುವ ಆರು ಹಾಡುಗಳು ವೈರಲ್ ಆಗಿದ್ದು ಇಲ್ಲಿಯವರೆವಿಗೂ ಎರಡೂವರೆ ಕೋಟಿ ಜನರು ವೀಕ್ಷಿಸಿದ್ದಾರೆ. ಆಡಿಯೋ ಎಲ್ಲರಿಗೂ ತಲುಪಿದ್ದರಿಂದ  ನಿರ್ಮಾಪಕ ಅರ್ಜುನ್ ಸಣ್ಣದೊಂದು ಸಂತೋಷಕೂಟವನ್ನು ದೊಡ್ಡ ಹೋಟೆಲ್‌ದಲ್ಲಿ  ಏರ್ಪಾಟು ಮಾಡಿದ್ದರು. ನಂತರ ಮಾತನಾಡಿದ ನಿರ್ದೇಶಕರು  ಉತ್ತರ ಕರ್ನಾಟಕದ ಕಡೆ ಹೋದಾಗ ‘ನೀನೇ ಮೊದಲು’ ಗೀತೆಯನ್ನು ರಾಷ್ಟ್ರಗೀತೆಯಂತೆ ಹಾಡುತ್ತಾರೆ. ಈ ....

885

Read More...

Muddu Krishna.Film Press Meet.

Tuesday, September 24, 2019

ಇಬ್ಬರು ಹುಡುಗರ ಮುದ್ದು ಕೃಷ್ಣ          ಪ್ರಸಕ್ತ ಯುವಜನಾಂಗದ ತುಂಟಾಟ ಅವರಿಗೆ ಸರಿ ಅನಿಸುತ್ತದೆ. ಅದು ಸೋತಾಗ ತಪ್ಪು ಅನಿಸಿ, ಗೆದ್ದಾಗ ನಾವು ಮಾಡಿದ್ದು ಸರಿಯಾಗಿದೆ ಅಂದುಕೊಳ್ಳುತ್ತಾರೆ. ಸಾಲ ಅಂತ ಬಂದಾಗ ಜೀವನವೆಲ್ಲಾ ಹತಾಶೆಗೆ ಒಳಪಡಬೇಕಾಗುತ್ತದೆ. ಕೊನೆಗೆ ಸುಖಕರ, ದುರಂತ ಹೀಗೆ ಎರಡು ಇರುವ   ಅಂಶಗಳನ್ನು ಒಳಗೊಂಡ ‘ಮುದ್ದು ಕೃಷ್ಣ’ ಚಿತ್ರವೊಂದು ಬೆಂಗಳೂರು, ಹೈದರಬಾದ್ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ಕೊನೆಯ ಹಂತದ ಕೆಲಸವನ್ನು ಉಳಿಸಿಕೊಂಡಿದೆ. ನಾಲ್ಕು ಚಿತ್ರಗಳ ನಿರ್ದೇಶನ, ಎರಡು ನಿರ್ಮಾಣ ಮಾಡಿರುವ ಜನಾರ್ಧನ್ ಜವಬ್ದಾರಿಯುತ ಪತ್ರಕರ್ತನ ಪಾತ್ರದಲ್ಲಿ ನಟಿಸುವ ಜೊತೆಗೆ ಬಂಡವಾಳ ಮತ್ತು ಆಕ್ಷನ್ ಕಟ್ ಹೇಳಿದ್ದರೆ. ಫೇಸ್‌ಬುಕ್ ಜೀವನಸಂಗಾತಿ ....

900

Read More...

Inject 0.7.Film Press Meet.

Tuesday, September 24, 2019

ವಿಕೆಂಡ್  ಖಾಯಿಲೆಯವರ   ಇಂಜೆಕ್ಟ್  ೦.೭          ವಿಕೆಂಡ್ ಎನ್ನುವುದನ್ನು ಹೆಚ್ಚಾಗಿ ಟೆಕ್ಕಿಗಳು ಬಳಸುತ್ತಾರೆ. ವಾರದ ಎರಡು ದಿನ ಶನಿವಾರ,ಭಾನುವಾರವನ್ನು ಕೆಲವರು ವಿಶ್ರಾಂತಿ, ಉನ್ನತ ವ್ಯಾಸಾಂಗ, ಬೇರೆ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುತ್ತಾರೆ. ಈಗ ನಾವು ಹೇಳುತ್ತಿರುವುದು ಮೂರನೆ ವಿಷಯ.  ಅಂದರೆ ಸಾಫ್ಡ್‌ವೇರ್ ಇಂಜಿನಯರ್‌ಗಳೇ  ಸೇರಿಕೊಂಡು ತಾವು  ಕೂಡಿಟ್ಟ ಹಣದಲ್ಲಿ ‘ಇಂಜೆಕ್ಟ್ ೦.೭’ ಚಿತ್ರವನ್ನು ಇಪ್ಪತ್ತೈದು  ಲಕ್ಷದಲ್ಲಿ ಮುಗಿಸಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಒಬ್ಬ ಸಾಧಾರಣ ವ್ಯಕ್ತಿಯು ಸಿಮೆಂಟ್ ವ್ಯಾಪಾರವನ್ನು   ವಿಸ್ತರಿಸಲು ಪತ್ನಿಯೊಂದಿಗೆ ಊರಿನ ಹೊರಗಡೆ ಇರುವ ....

1191

Read More...

Geetha.Film Press Meet.

Monday, September 23, 2019

ಗೋಕಾಕ್ ಚಳುವಳಿ ಹಿನ್ನಲೆಯ  ಗೀತಾ        ಚಂದನವನದಲ್ಲಿ ಇಲ್ಲಿಯವರೆಗೂ ಯಾರೂ ಟಚ್ ಮಾಡದ ಗೋಕಾಕ್ ಚಳವಳಿ ಘಟನೆಯನ್ನು ‘ಗೀತಾ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮಹಿಳಾ ಪ್ರಧಾನ ಕತೆಯು ೮೦ರ ಕಾಲಘಟ್ಟದಿಂದ ಪ್ರಸಕ್ತ ಕಾಲದವರೆಗೂ ಕಾಣಿಸಿಕೊಳ್ಳುತ್ತದೆ. ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗಣೇಶ್ ನಿರ್ದೇಶಕರು ಹೇಳಿದ ಒನ್ ಲೈನ್ ಕತೆ ಮಿಂಚು ಬಂದಂತೆ ಆಯಿತು. ಶಂಕರ್‌ನಾಗ್ ನಟಿಸಿದ ಚಿತ್ರದ ಹೆಸರು ಇಡಲಾಗಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಸಾರ್ವಭೌಮ. ಯುವಕನಾಗಿದ್ದಾಗ ಕನ್ನಡ ಚಳುವಳಿ ನಾಯಕ.  ಮೊದಲಬಾರಿ ಆಂಗ್ರಿ ಯಂಗ್‌ಮ್ಯಾನ್ ಆಗಿ ಕಾಣಸಿಕೊಂಡಿದ್ದೇನೆ. ಅಂದು ಘಟನೆ ನಡೆದಿದ್ದು ಸತ್ಯ. ಸನ್ನವೇಶವನ್ನು ....

774

Read More...

Lungi.Film Press Meet.

Monday, September 23, 2019

ಪ್ರೀತಿ ಸಂಸ್ಕ್ರತಿ ಸೌಂದರ್ಯ ಸಾರುವ ಲುಂಗಿ         ಕರಾವಳಿ ಸೊಗಡಿನ ಕತೆ ಹೊಂದಿರುವ ‘ಲುಂಗಿ’ ಚಿತ್ರದ ಹಾಡನ್ನು ಸಿಂಪಲ್‌ಸುನಿ ಅನಾವರಣಗೊಳಿಸಿದರು. ಅವರು ಮಾತನಾಡುತ್ತಾ  ಹಿನ್ನಲೆ ಶಬ್ದ ಒದಗಿಸುವ ಸಂದರ್ಭದಲ್ಲಿ ಭೇಟಿ ನೀಡಿದಾಗ ‘ಲುಂಗಿ  ಎತ್ತಿ ತೋರಿಸೋಣ’ವೆಂದು ಅಡಿಬರಹದಲ್ಲಿ ಹೇಳಿದ್ದರು. ಇದನ್ನು ನೋಡಿ ನಮ್ಮ ನೇಟಿವಿಟಿಗೆ ಹೊಂದಿಕೊಳ್ಳುತ್ತದಾ ಅಂತ ಕೇಳಿದ್ದುಂಟು. ಈಗ ನೋಡಿದರೆ ಅದರ ಜಾಗದಲ್ಲಿ ಪ್ರೀತಿ-ಸಂಸ್ಕ್ರತಿ-ಸೌಂದರ್ಯವೆಂದು ಹೇಳಲಾಗಿದೆ.  ಕೇರಳ, ತಮಿಳುನಾಡು ಕಡೆಗಳಲ್ಲಿ ಇದನ್ನು ಹೆಚ್ಚು ಉಪಯೋಗಿಸುತ್ತಾರೆ. ಚಿತ್ರವು ಹಿಟ್ ಆಗಿ ಪ್ರತಿಯೊಬ್ಬರ ಮನೆಯಲ್ಲಿ ಲುಂಗಿ ಇರಲೆಂದು ಆಶಿಸಿದರು. ....

893

Read More...

Navaraathri.Film Press Meet.

Monday, September 23, 2019

ದುಷ್ಟಶಕ್ತಿ  ವರ್ಸಸ್  ದೈವಶಕ್ತಿ             ಮುಂದಿನ ದಿನಗಳಲ್ಲಿ ವಿಜಯದಶಮಿ ಹಬ್ಬ ಬರಲಿದೆ. ಇದರಲ್ಲಿ ‘ನವರಾತ್ರಿ’ ಪೂಜೆಯನ್ನು ಆಚರಿಸುತ್ತಾರೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ರಿಯಲ್ ಎಸ್ಟೇಟ್ ಕುರಿತಾದ ಕತೆಯಲ್ಲಿ, ಕಾಶಿ ದೇವಿಯು ವಾಸ ಮಾಡುವ ಸ್ಥಳದಲ್ಲಿ ಮನೆಯನ್ನು ಕಟ್ಟುತ್ತಾರೆ. ಸದರಿ ಮನೆಗೆ ಹೋಗುವವರಿಗೆ ಅವಘಢಗಳು ಸಂಭವಿಸುತ್ತದೆ. ಹೀಗೆ ದುಷ್ಟಶಕ್ತಿ ಮತ್ತು ದೈವಶಕ್ತಿ ನಡುವೆ ಬರುವ ಸನ್ನಿವೇಶಗಳೇ ಸಿನಿಮಾದ ಸಾರಾಂಶವಾಗಿದೆ. ಇದರ ಜೊತೆಗೆ ಭಯ, ದೇವರು ಮತ್ತು ಗ್ರಾಫಿಕ್ಸ್ ಎಲ್ಲವು ಸೇರಿಕೊಂಡಿದೆ. ಹಾಡುಗಳಿಗೆ ಅವಕಾಶ ಇರುವುದಿಲ್ಲ.  ಪದ್ಮಾವತಿ ಧಾರವಾಹಿ ಖ್ಯಾತಿಯ ತ್ರಿವಿಕ್ರಮ್ ಹಿರಿತೆರೆಗೆ ....

778

Read More...

Kapata Nataka Patradhari.Film Trailer Rel.

Monday, September 23, 2019

ಕಪಟ  ನಾಟಕದ  ಮಾತುಗಳು           ಯಾವುದೇ ಚಿತ್ರದ ಪ್ರಚಾರಕ್ಕೆ ಮುಖ್ಯ ಪಾತ್ರಧಾರಿಗಳು ಬರುವುದು ಅವರ ಜವಬ್ದಾರಿಯಾಗಿರುತ್ತದೆ.  ಆದರೆ ಕೆಲವೊಂದು ಸಿನಿಮಾಕ್ಕೆ ಕಲಾವಿದರ ಗೈರು ಹಾಜರಿ ತಂಡಕ್ಕೆ ಬೇಸರ ತರಿಸುತ್ತದೆ. ಅಂತಹುದೇ ಘಟನೆ ‘ಕಪಟ ನಾಟಕ ಪಾತ್ರಧಾರಿ’ ಚಿತ್ರದ ಸುದ್ದಿಗೋಷ್ಟಿಯಲ್ಲಿ  ನಡೆಯಿತು. ನಾಯಕ ಬಾಲುಮಹೇಂದ್ರ ವೈಯಕ್ತಿಕ ಸಮಸ್ಯೆ ಇರುವ ಕಾರಣ ಬಂದಿರಲಿಲ್ಲ. ಮೀಟೂ ಖ್ಯಾತಿಯ  ಸಂಗೀತಭಟ್ ವಿದೇಶದಲ್ಲಿ ನೆಲಸಿದ್ದಾರೆ. ತಂಡದಲ್ಲಿ ಕೆಲಸ ಮಾಡಿದ್ದು ಖುಷಿ ನೀಡಿದೆ. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಮರೆಯಲಾಗದು. ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಬೇಕನ್ನುವ ಆಸೆ ಇದರ ಮೂಲಕ ನೆರವೇರಿದೆ ಎಂದು ....

374

Read More...
Copyright@2018 Chitralahari | All Rights Reserved. Photo Journalist K.S. Mokshendra,