ಇದು ಆಕಾಶವಾಣಿ ಬೆಂಗಳೂರು ನಿಲಯ ಚಿತ್ರದ ಹಾಡುಗಳ ಧ್ವನಿಮುದ್ರಣ
ಕಮಲಾನಂದ ಚಿತ್ರಾಲಯ ಸಂಸ್ಥೆಯಲ್ಲಿ ಶಿವಾನಂದಪ್ಪ ಬಳ್ಳಾರಿ ಅವರು ನಿರ್ಮಿಸುತ್ತಿರುವ ಇದು ಆಕಾಶವಾಣಿ ಬೆಂಗಳೂರು ನಿಲಯ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಇತ್ತೀಚೆಗೆ ನಡೆಯಿತು. ಚಿತ್ರೀಕರಣಕ್ಕೆ ಅನುಮತಿ ದೊರೆತ ನಂತರ ಚಿತ್ರೀಕರಣ ನಡೆಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ವಿಷಯ: ಹಿರಿಯ ಚಲನಚಿತ್ರ ಪತ್ರಕರ್ತರಾದ ಶ್ರೀ ಗಣೇಶ್ ಕಾಸರಗೋಡು ಅವರ ಪ್ರಸಿದ್ಧ ಚಲನಚಿತ್ರ ಕೃತಿ “ಶುಭಂ” ಧ್ವನಿರೂಪದ ಅಳವಡಿಕೆಯನ್ನು ‘ಚಿತ್ತಾರ’ ಯೂಟ್ಯೂಬ ನಿರ್ಮಿಸಿ ಪ್ರಸಾರ ಮಾಡುವ ಕುರಿತಂತೆ. ಕನ್ನಡ ಚಲನಚಿತ್ರ ರಸಿಕರ ಮನಗೆದ್ದ ಪತ್ರಿಕೆ ‘ಚಿತ್ತಾರ’ಕ್ಕೆ ಈಗ ಹನ್ನೊಂದು ವರ್ಷದ ಪ್ರಾಯ. ಈ ಅವಧಿಯಲ್ಲಿ ಹಲವಾರು ಏಳುಬೀಳುಗಳ ಮಧ್ಯೆ ‘ಚಿತ್ತಾರ’ ಪತ್ರಿಕೆಯು ಕನ್ನಡ ಚಿತ್ರರಂಗದ ಇತಿಹಾಸ. ಪ್ರಸ್ತುತ ವಿದ್ಯಾಮಾಗಳು ಸೇರಿದಂತೆ ವರದಿ, ವಿವರಣೆಗಳೊಂದಿಗೆ ಚಿತ್ರಾಕರ್ಷಕ ಛಾಯಾಚಿತ್ರಗಳ ಸಮೇತ ತಿಂಗಳಿಗೊಮ್ಮೆ ಪ್ರಕಟಿಸಿ ‘ಚಿತ್ತಾರ’ ಪತ್ರಿಕೆಯನ್ನು ಓದುಗರಿಗೆ ಸಮರ್ಪಿಸಿಕೊಂಡು ಬರುತ್ತಿದೆ. ಪತ್ರಿಕೆಯ ಅಭಿರುಚಿಯನ್ನು ....
'ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರೀಕರಣ ಪೂರ್ಣ. ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ ’ದಾರಿ ಯಾವುದಯ್ಯಾ ವೈಕುಂಠಕ್ಕೆ’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಲಾಕ್ ಡೌನ್ ತೆರವಿನ ನಂತರ ಸರ್ಕಾರ ಅರ್ಧ ಭಾಗ ಚಿತ್ರೀಕರಣವಾಗಿರುವ ಚಿತ್ರಗಳ ಚಿತ್ರೀಕರಣ ಪೂರ್ಣ ಮಾಡಲು ಅನುಮತಿ ನೀಡಿತು. ನಂತರ ಸರ್ಕಾರದ ಆದೇಶ ಪಾಲಿಸಿ ಬೆಂಗಳೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಪೂರ್ಣ ಗೊಳಿಸಿ ಕುಂಬಳಕಾಯಿ ಒಡೆಯಲಾಯಿತು. ವರ್ಧನ್, ಅನುಷ, ಬಲ ರಾಜವಾಡಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ನಂತರ ಚಟುವಟಿಕೆ ....
ಪ್ರಚಂಡ ಪುಟಾಣಿಗಳಿಗೆ
ಕಾಳಿ ಮಠದ ಶ್ರೀ ಗಾನ ಬಜಾನ
ಇತ್ತೀಚೆಗಷ್ಟೇ ಮುಹೂರ್ತ ಕಂಡಿದ್ದ ರಾಜೀವ್ ಕೃಷ್ಣ ನಿರ್ದೇಶನದ "ಪ್ರಚಂಡ ಪುಟಾಣಿಗಳು" ಚಿತ್ರದ
ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.
ನಿರ್ದೇಶಕರೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ "ಪ್ರಚಂಡ ಪುಟಾಣಿಗಳು"
ಚಿತ್ರವನ್ನು ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ವಿ ಸುನಿತ ಹಾಗು ಎನ್ ರಘ ರವರ ಸಹಕಾರದಲ್ಲಿ ನಿರ್ಮಾಣವಾಗುತ್ತಿದೆ.
ಇತ್ತೀಚೆಗೆ ರಾಜಾಜಿನಗರದ ವಿನುಮನಸು ಸ್ಟುಡಿಯೋದಲ್ಲಿ ಹಾಡುಗಳ ಧ್ವನಿ ಮುದ್ರಣ ಕಾರ್ಯ
ನೆರವೇರಿತು.
ರಮೇಶ್ ಅರವಿಂದ್ ರವರ 101 ನೇ ಚಿತ್ರವಾದ ಶಿವಾಜಿ ಸುರತ್ಕಲ್ ಫೆಬ್ರವರಿ 21 ರಂದು ಬಿಡುಗಡೆಯಾಗಿ ಮೂರು ವಾರದ ವರೆಗೆ ಯಶಸ್ವಿ ಪ್ರದರ್ಶನ ಕಂಡಿತು. ಪತ್ರಕರ್ತರಿಂದ ಹಾಗೂ ಸಿನಿ ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಬಂದಿತ್ತು. ಜಗತ್ತಿನಾದ್ಯಂತ ಹರಡಿರುವ covid 19 ಡಿಸೀಸ್ ನ ಕಾರಣದಿಂದ ಸಾರ್ವಜನಿಕರು ಚಿತ್ರಮಂದಿರಗಳಿಂದ ದೂರ ಉಳಿಯಬೇಕಾಯಿತು.
ಒಂದು ಖುಷಿಯ ವಿಷಯ ಏನೆಂದರೆ ಈ ಚಿತ್ರದ ಹಿಂದಿ ರಿಮೇಕ್ ರೈಟ್ಸ್ ಹಾಗೂ ಉತ್ತರ ಭಾರತದ ಎಲ್ಲ ಭಾಷೆಯ ಡಬ್ಬಿಂಗ್ ರೈಟ್ಸ್ ಅನ್ನು B4u movies ಅವರು ಪಡೆದುಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಹಿಂದಿ ಅವತರಣೆಯ ನಾಯಕ ನಟ, ನಿರ್ದೇಶನ ಯಾರು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
ಶ್ 2 ಚಿತ್ರದ ಹಾಡುಗಳ ಧ್ವನಿಮುದ್ರಣ.
27 ವರ್ಷಗಳ ಹಿಂದೆ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಶ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿತ್ತು.
ಈಗ ಅದೇ ಹೆಸರಿನಲ್ಲಿ ಶ್ 2 ಚಿತ್ರ ನಿರ್ಮಾಣವಾಗುತ್ತಿದೆ.
ಡಿ.ಪಿ.ಕಂಬೈನ್ಸ್ ಮೂಲಕ ಉದ್ಯಮಿ ಡಿ.ಪಿ.ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಹೇಶ್ ಪಿ ( ತಿಟ್ಟಮಾರನ ಹಳ್ಳಿ ಚನ್ನಪಟ್ಟಣ)
ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಡಿ.ಪಿ.ವೆಂಕಟೇಶ್ ಅವರೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡುತ್ತಿದ್ದಾರೆ.
ಸಾರಾ ಅಬೂಬಕ್ಕರ್ ಅವರ ಜನ್ಮದಿನದಂದು ’ಸಾರಾ ವಜ್ರ’ ಚಿತ್ರದ ಟ್ರೇಲರ್ ಬಿಡುಗಡೆ.
ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ ’ಸಾರಾ ವಜ್ರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಹಂಸಲೇಖ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ.
ಜೂನ್ ೩೦ ಸಾರಾ ಅಬೂಬಕ್ಕರ್ ಅವರ ೮೫ನೇ ಹುಟ್ಟುಹಬ್ಬ. ಅದರ ಪ್ರಯುಕ್ತ ’ಸಾರಾ ವಜ್ರ’ ಚಿತ್ರತಂಡದಿಂದ ಲಹರಿ ಮ್ಯೂಸಿಕ್ ಮೂಲಕ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಬಗ್ಗೆ ಸಾರಾ ಅಬೂಬಕ್ಕರ್ ಅವರು ಹಿತನುಡಿಗಳನ್ನು ನುಡಿದಿದ್ದಾರೆ.
'ಕಲಾವಿದ’ ತೆರೆಗೆ ಬರಲು ಸಿದ್ದ. ಪದ್ಮರಾಜ್ ಫಿಲಂಸ್ ನಿರ್ಮಿಸಿರುವ ’ಕಲಾವಿದ’ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಶಿವಾನಂದ್ ಹೆಚ್.ಡಿ ನಿರ್ದೇಶಿಸಿದ್ದಾರೆ. ಹನ್ನೆರಡು ವರ್ಷಗಳಿಂದ ಹಲವು ಕನ್ನಡ ಚಿತ್ರಗಳಿಗೆ ಸಹಾಯಕ ಹಾಗೂ ಸಹ ನಿರ್ದೇಶನ ಮಾಡಿರುವ ಅನುಭವ ಇವರಿಗಿದೆ. ’ಕಲಾವಿದ’ ಶಿವಾನಂದ್ ನಿರ್ದೇಶನದ ಮೊದಲ ಚಿತ್ರ. 'ಕಲಾವಿದ’ ಚಿತ್ರದ ನಾಯಕನಾಗಿ ಪ್ರದೀಪ್ ಕುಮಾರ್ ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಆಗಿರುವ ಪ್ರದೀಪ್ ಕುಮಾರ್ ಮೂಲತಃ ಹಾಸನ ಜಿಲ್ಲೆಯವರು. ಬಾಲ್ಯದಿಂದಲೇ ಸಿನಿಮಾ ದಲ್ಲಿ ನಟಿಸಬೇಕೆಂಬ ಆಸೆ ಹೊತ್ತು, ....
ಕನ್ನಡ ಸಿನಿ ರಂಗಕ್ಕೆ ಎನಿ ಟೈಮ್ ಥಿಯೇಟರ್ ಪ್ರವೇಶ ದಕ್ಷಿಣ ಭಾರತದ ನ. 1 ಸಿನಿಮಾ ಇವೆಂಟ್ ಮತ್ತು ಪ್ರಚಾರದ ಸಂಸ್ಥೆಯಾದ ಶ್ರೇಯಸ್ ಇದೀಗ ಹೊಸ ಕನಸಿನೊಂದಿಗೆ ಮತ್ತಷ್ಟು ಸಿನಿಮಾ ರಂಗಕ್ಕೆ ಹತ್ತಿರವಾಗಿದೆ. ಶ್ರೇಯಸ್ ಗ್ರೂಪ್ ಆಫ್ ಕಂಪೆನಿಸ್ ಆರಂಭಿಸಿರುವ ಎಟಿಟಿ (ಎನಿ ಟೈಮ್ ಥಿಯೇಟರ್)ಗೆ ಎಲ್ಲೆಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ ಟಾಲಿವುಡ್ ಜಗತ್ತನ್ನು ಕನ್ನಡದ ಪ್ರೇಕ್ಷಕರ ಹೃದಯಕ್ಕೆ ತರುವ ಪ್ರಯತ್ನಕ್ಕೆ ಶ್ರೇಯಸ್ ಕಂಪೆನಿ ಮುಂದಾಗಿದೆ. ಶ್ರೇಯಸ್ ET, ಕನ್ನಡದಲ್ಲಿ ವೆಬ್ ಸೀರೀಸ್, ಕಿರು ಚಲನಚಿತ್ರಗಳು ಹಾಗೂ ಇನ್ನಿತರ ಮನೋರಂಜನಾ ಕಾರ್ಯಕ್ರಮಗಳ ತಯಾರಿಕೆಗೆ ಹಣ ಹೂಡಲಿದೆ. ಭಾರತೀಯ ಸಿನಿಮಾ ರಂಗದಲ್ಲಿ ....
ಕಲ್ಯಾಣ್ ದೇವ್ _ ರಚಿತಾರಾಂ ಅಭಿನಯದ ’ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಚಿತ್ರಕ್ಕೆ ರಾಮ ನಾಯ್ಡು ಸ್ಟುಡಿಯೋದಲ್ಲಿ ಕೊನೆಯ ಹಂತದ ಚಿತ್ರೀಕರಣ.. ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ ಕಲ್ಯಾಣ್ ದೇವ್ ಹಾಗೂ ರಚಿತಾರಾಂ ಅಭಿನಯದ ’ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಲಾಕ್ ಡೌನ್ ನಂತರ ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿದೆ.. ರಾಜ್ಯ ಸರ್ಕಾರ ವಿಧಿಸಿರುವ ಕಟ್ಟುನಿಟ್ಟಿನ ಕ್ರಮ ಅನುಸರಿಸಿ ಚಿತ್ರೀಕರಣ ನಡೆಸುತ್ತಿರಿವುದಾಗಿ ತಿಳಿಸಿರುವ ನಿರ್ಮಾಪಕರು, ಚಿತ್ರೀಕರಣದ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಸಹ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಕಲ್ಯಾಣ್ ದೇವ್ ಹಾಗೂ ....
' ಹರಿಕಥೆ ಅಲ್ಲ ಗಿರಿಕಥೆ’ ಹೇಳುತಾರಂತೆ ರಿಷಬ್ ಶೆಟ್ಟಿ..
ನಿರ್ದೇಶಕರಾಗಿ ಕನ್ನಡ ಸಿನಿರಸಿಕರ ಮನಸೂರೆಗೊಂಡಿದ್ದ ರಿಷಬ್ ಶೆಟ್ಟಿ, ನಂತರದ ದಿನಗಳಲ್ಲಿ ನಾಯಕ ನಟನಾಗೂ ಯಶಸ್ವಿಯಾದರು .
ಈಗ ರಿಷಬ್ ಶೆಟ್ಟಿ ’ಹರಿಕಥೆ ಅಲ್ಲಾ ಗಿರಿಕಥೆ’ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ.
ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಅವರು ರಿಷಬ್ ಶೆಟ್ಟಿ ಫಿಲಂಸ್ ಸಹಭಾಗಿತ್ವದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಚಿತ್ರದ ಮುಹೂರ್ತ ಸಮಾರಂಭ ಜೂನ್ 19ರಂದು ರಿಷಬ್ ಶೆಟ್ಟಿ ಅವರ ಕಚೇರಿಯಲ್ಲಿ ಸರಳವಾಗಿ ನೆರವೇರಿತು.
`ಮೇಲೊಬ್ಬ ಮಾಯವಿ’ಗೆ ಸೆನ್ಸಾರ್ ಅಸ್ತು
ಅ್ಯಕ್ರೊಮೊಟಾಪ್ಸಿಯಾ (Achromatopsia) ನ್ಯೂನತೆ ಮತ್ತು ಹಲವು ಸಾವು-ನೋವುಗಳಿಗೆ ಇಂದಿಗೂ ಸಾಕ್ಷಿಯಾಗಿರುವ ಮಾಫಿಯಾದ ವಿಭಿನ್ನ ಕಥಾಹಂದರ ಹೊಂದಿರುವ, ನೈಜ ಘಟನೆಗಳ ಕುರಿತಾದ ವಿನೂತನ ಹೆಸರಿನ ‘ಮೇಲೊಬ್ಬ ಮಾಯಾವಿ’ ಚಿತ್ರವನ್ನು ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ‘ಎ’ ಪ್ರಮಾಣಪತ್ರ ನೀಡಿದ್ದಾರೆ.
ಫ್ಯಾಮಿಲಿ ಪ್ಯಾಕ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ.
ಸದಭಿರುಚಿ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ಪಿ ಆರ್ ಕೆ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ಫ್ಯಾಮಿಲಿ ಪ್ಯಾಕ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ ಈ ಚಿತ್ರದ ನಿರ್ಮಾಪಕರು.
ಮನೋರಂಜನೆ ಪ್ರಧಾನವಾಗಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.
SRiKRISHNA@ Gmail. Com
ಚಿತ್ರಕ್ಕೆ ಚಾಲನೆ...
ಸದಭಿರುಚಿಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಹೆಮ್ಮೆಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಎಂ.ಎಲ್. ಸಿ (ರಾಷ್ಟಪ್ರಶಸ್ತಿ ವಿಜೇತ)
ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಿಸುತ್ತಿರುವ srikrishna@gmail.com ಚಿತ್ರದ ಮುಹೂರ್ತ ಸಮಾರಂಭ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಸರಳವಾಗಿ ನೆರವೇರಿತು..
ನಾಗಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸುತ್ತಿದ್ದಾರೆ.
ನಟಸಾರ್ವಭೌಮ ಡಾ||ರಾಜಕುಮಾರ್ ಅವರ ಭಾವಚಿತ್ರದ ಮೇಲೆ ಚಿತ್ರದ ಪ್ರಥಮ ಸನ್ನಿವೇಶವನ್ನು ಸೆರೆಹಿಡಿಯಲಾಯಿತು..
ಪ್ರಚಂಡ ಪುಟಾಣಿಗಳು ಚಿತ್ರಕ್ಕೆ ಮುಹೂರ್ತ ಮಾರ್ಚ್ ತಿಂಗಳ ಕೊನೆಯವಾರದಲ್ಲಿ ಪ್ರಾರಂಭವಾಗಬೇಕಿದ್ದ ಪ್ರಚಂಡ ಪುಟಾಣಿಗಳು ಚಲನಚಿತ್ರವು ಕರೋನಾ ಸಮಸ್ಯಗಳಿಂದ ಚಿತ್ರೀಕರಣ ಮುಂದೂಡಿ ಮುಂದೂಡಿ ಕೊನೆಗೂ ಈಗ ಮುಹೂರ್ತವನ್ನು ಆಚರಿಸಿಕೊಂಡಿದೆ. ಶ್ರೀಮತಿ ಡಿ ಸುನಿತ ಹಾಗು ಎನ್ ರಘು ಅವರ ಸಹಕಾರದಲ್ಲಿ ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಚಂಡ ಪುಟಾಣಿಗಳು ಚಲನಚಿತ್ರಕ್ಕೆ ಇದೇ ಸೋಮುವಾರ ಚಿಕ್ಕಬಳ್ಳಾಪುರ ಜಿಲ್ಲೆ ಚಿತಾಮಣಿ ತಾಲ್ಲೂಕಿನ ಬಂಡಕೋಟ ಗ್ರಾಮದ ಶ್ರೀ ಸತ್ಯಮ್ಮದೇವಿ ದೇವಾಲಯದಲ್ಲಿ ಮುಹೂರ್ತ ನೆರವೇರಿತು. ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀ ಸುನಂದಮ್ಮ ವೆಂಕಟೇಶ್ ರವರು ಚಿತ್ರಕ್ಕೆ ....
ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದ ನಂತರ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ಸೂಪರ್ ಸ್ಟಾರ್ "ಉಪೇಂದ್ರ" ಅಭಿನಯದ "ಕಬ್ಜ". ಭಾರತದ ಹೆಸರಾಂತ ಪತ್ರಿಕೆ ಹಾಗೂ ವೆಬ್ಸೈಟ್ಗಳು ನಡೆಸಿರುವ ಟಾಪ್ 10 ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್ ಎರಡನೇ ಸ್ಥಾನದಲ್ಲಿದ್ದರೆ," ಕಬ್ಜ" ಚಿತ್ರ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಘಟಾನುಘಟಿಗಳ ಸಿನಿಮಾಗಳು ಸ್ಥಾನಗಳನ್ನು ಪಡೆದಿದೆ, ಇಂಡಿಯಾದ ಮೋಸ್ಟ್ ಎಕ್ಸ್ಪೆಕ್ಟೆಡ್ ಟಾಪ್ ಟೆನ್ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಎರಡು ಚಿತ್ರಗಳು ಸ್ಥಾನವನ್ನು ಪಡೆದಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ. ಸೂಪರ್ ಸ್ಟಾರ್ ....
ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಡಿಯಲ್ಲಿ ತಯಾರಗುತ್ತಿರುವ ಹೊಸ ಸಿನಿಮಾದ ಪೋಸ್ಟರ್ ನನ್ನು ಇಂದು ಲಕ್ಷ್ಮೀ ಬಾರಮ್ಮಾ ಖ್ಯಾತಿಯ ಚಂದು ಗೌಡರವರು ಬಿಡುಗಡೆ ಮಾಡಲಾಯಿತು ಈ ಹಿಂದೆ ಅಭಯ ಹಸ್ತ ಎಂಬ ವಿಭಿನ್ನ ಸಿನಿಮಾವನ್ನು ಡೈರೆಕ್ಟ್ ಮಾಡುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯುವ ನಿರ್ದೇಶಕ ನವಿಲುಗರಿ ನವೀನ್ ಪಿ ಬಿ ರವರು ಈಗ ಹೊಸ ಕಥೆಯೊಂದಿಗೆ ಹಳೇಯ ಹೆಸರಾಂತ ಕನ್ನಡ ಶೀರ್ಷಿಕೆಯನ್ನು ಇಟ್ಟುಕೊಂಡು ಕನ್ನಡ ಭಾಷೆಯ ಉಳಿವಿನ ಬಗ್ಗೆ ಸಿನಿಮಾ ಡೈರೆಕ್ಟ್ ಮಾಡಲು ಒರಟಿದ್ದಾರೆ. ಹಳೆಯ ಅಭಯ ಹಸ್ತ ಸಿನಿಮಾದಲ್ಲಿ ಹೆಸರಾಂತ ಮುತ್ತಪ್ಪ ರೈ, ಜೇಡರಹಳ್ಳಿ ಕೃಷ್ಣಪ್ಪ, ಡಾ. ಶಿವರಾಜ್ ಕುಮಾರ, ನವೀನ್ ಕೃಷ್ಣ, ಅನಿರುದ್ದ್ ಇನ್ನೂ ಹಲವರು ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದರು, ಈ ....
'ತ್ರಿಕೋನ’ ಚಿತ್ರಕ್ಕೆ ಸೆನ್ಸಾರ್ ಅಸ್ತು... ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜಶೇಖರ್ ಅವರು ನಿರ್ಮಿಸಿರುವ ’ತ್ರಿಕೋನ` ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ.. ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ರಾಜಶೇಖರ್ ಅವರೆ ಕಥೆ ಬರೆದದ್ದು, 143 ಚಿತ್ರದ ಖ್ಯಾತಿಯ ಚಂದ್ರಕಾಂತ್ ನಿರ್ದೇಶನ ಮಾಡಿದ್ದಾರೆ... ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ವಿಭಿನ್ನ ಚಿತ್ರಕಥೆಯೊಂದಿಗೆ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಮೊದಲು ಕನ್ನಡದಲ್ಲಿ ಸೆನ್ಸಾರ್ ಆಗಿದೆ... ತೆಲುಗು, ತಮಿಳಿನಲ್ಲೂ ....
ಸದ್ಯದಲ್ಲೇ ಹೋಂ ಮಿನಿಸ್ಟರ್ ಬರುತ್ತಿದ್ದಾರೆ... ಶ್ರೇಯಸ್ಸ್ ಚಿತ್ರ ಹಾಗೂ ವಾಟರ್ ಕಲರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ವಿ ಅವರು ನಿರ್ಮಿಸಿರುವ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ’ಹೋಂ ಮಿನಿಸ್ಟರ್’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹಾತ ಪತ್ರ ನೀಡಿದೆ.. ಸರ್ಕಾರ ಚಿತ್ರಮಂದಿರ ತೆರೆಯಲು ಒಪ್ಪಿಗೆ ನೀಡಿದ ಕೂಡಲೆ, ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆದಿದೆ... ಶ್ರೀಹರಿ ನಾನು ನಿರ್ದೇಶನದ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ.. ’ಹೋಂ ಮಿನಿಸ್ಟರ್’ ಅಂದರೆ ರಾಜಕೀಯ ಚಿತ್ರ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಅದರ ಹೊರತಾಗಿ ಈ ಚಿತ್ರದಲ್ಲಿ ಈ ಪದ ಯಾವ ರೀತಿ ಬಳಕೆಯಾಗಿದೆ ....
ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಶಾರ್ದೂಲ ಭೈರವ ಸಿನಿಮಾಸ್ ಲಾಂಛನದಲ್ಲಿ ಕಲ್ಯಾಣ್ ಸಿ ಹಾಗೂ ರೋಹಿತ್ .ಎಸ್ ಅವರು ನಿರ್ಮಿಸಿರುವ ಶಾರ್ದೂಲ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಕೊರೋನ ಹಾವಳಿಯಿಂದ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಅನುಮತಿ ದೊರಕಿದ ಕೂಡಲೆ ಚಿತ್ರವನ್ನು ತೆರೆಗ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ... ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲ್ಲರ್ ಕೂಡ ವಿಭಿನ್ನವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ... ನಮ‌್ ಏರಿಯಲ್ಲೊಂದು ದಿನ, ತುಘಲಕ್ ಹಾಗೂ ಹುಲಿರಾಯ ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್ ಕೌಶಿಕ್ ಈ ಚಿತ್ರದ ನಿರ್ದೇಶಕರು. ಇವರೆ ....