ಈ ವಾರ ಶಿವಾಜಿ ಸುರತ್ಕಲ್ ( ಕೇಸ್ ಆಫ್ ರಣಗಿರಿ ರಹಸ್ಯ) ಮರು ಬಿಡುಗಡೆ.
ಲಾಕ್ ಡೌನ್ ಆರಂಭಕ್ಕೂ ಕೆಲವು ದಿನಗಳ ಮುಂಚೆ ತೆರೆ ಕಂಡು, ಎಲ್ಲರ ಮನಸೂರೆಗೊಂಡ ಶಿವಾಜಿ ಸುರತ್ಕಲ್ ಚಿತ್ರ ಅಕ್ಟೋಬರ್ ೧೬ ರಂದು ಮರು ಬಿಡುಗಡೆಯಾಗುತ್ತಿದೆ.
*ಹಾಲಿವುಡ್ ಶೈಲಿಯಲ್ಲಿ ಸಿದ್ಧವಾಗಲಿದೆ ಸೂಪರ್ ಹೀರೋ ಪರಿಕಲ್ಪನೆಯ ಕನ್ನಡ ಸಿನಿಮಾ*
ಸ್ಯಾಂಡಲ್ವುಡ್ ಸಿನಿಮಾರಂಗ ಬದಲಾವಣೆಯ ಪರ್ವದತ್ತ ಸಾಗುತ್ತಿದೆ. ಹೊಸಬರ ನವನವೀನ ಪ್ರಯತ್ನಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದೇ ರೀತಿ ನಿರ್ದೇಶಕ ಮನೋಜ್ ಪಿ. ನಡಲುಮನೆ ಚೊಚ್ಚಲ ಚಿತ್ರದಲ್ಲಿಯೇ ಇಡೀ ಭಾರತದಲ್ಲಿಯೇ ಯಾರೂ ಮಾಡದ ಹೊಸ ಪರಿಕಲ್ಪನೆಯ ಸಿನಿಮಾದೊಂದಿಗೆ ಆಗಮಿಸುತ್ತಿದ್ದಾರೆ. ಅವರ ಈ ಸಾಹಸಕ್ಕೆ ಯೂ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಪೂಜಾ ವಸಂತ್ ಕುಮಾರ್ ಬಂಡವಾಳ ಹೂಡಿದ್ದಾರೆ.
ತಾಳಟ್ಟಿ ಚಿತ್ರ ಚಿತ್ರೀಕರಣ ಮುಕ್ತಾಯ ೭ಸ್ಟಾರ್ ಪ್ರೊಡಕ್ಷನ್ ಮತ್ತು ಸೃಜನ ಮೀಡಿಯಾ ಹೌಸ್ ನ ಸಹಕಾರದಲ್ಲಿ ಕಲ್ಪತರು ಕಂಬೈನ್ಸ್ ನಾ ಅಡಿ ಯಲ್ಲಿ ನಿರ್ಮಾಣ ವಾಗಿದ್ದು. ಹರ್ಶವರ್ಧನ್, ಹಯಾತ್ ಖಾನ್, ರಾಕೇಶ್.ಡಿ, ದಿಲೀಪ್ ಕುಮಾರ್. ಬಂಡವಾಳ ಹೊಡಿದ್ದು ಈ ಚಿತ್ರಕ್ಕೆ ಗಿಲ್ಲಿ ವೆಂಕಟೇಶ್ ನಿರ್ದೇಶನದ ಜವಾಬ್ದಾರಿ ಇದೆ. ಈ ಚಿತ್ರಕ್ಕೆ ಇಮ್ತಿಯಾಜ್ ಖಾನ್ ಹಾಗೂ ಅಶೋಕ್ ಹಣಗಿ ಕ್ಯಾಮರಾ ದ ಕೈ ಚಳ ಕ ವಿದ್ದು ರಕ್ಷಿತ್ ಜಿ ಮಲ್ಲಪ್ಪಾ ಸಂಕಲನ ಕಾರ್ಯ ನಿರ್ವಹಿಸಿದ್ದು ಅಭಿನಂದನ್ ಕಶ್ಯಪ್ ಸಂಗೀತ ಸಂಯೂಜನೆ ಮಾಡಿದ್ದಾರೆ. ಇನ್ನು ಮುಖ್ಯ ಭೂಮಿಕೆಯಲ್ಲಿ ನಾಯಕನಟನಾಗಿ ಯತೀಶ್, ನಾಯಕಿಯಾಗಿ ಪ್ರತಿಮಾ, ಹಯಾತ್ ಖಾನ್, ದೀಪಾ, ಬೇಬಿ ಕೃತಿನಟರಾಜ್, ....
ಚಿರು ಹುಟ್ಟುಹಬ್ಬಕ್ಕೆ ಕ್ಷತ್ರಿಯ ಚಿತ್ರದ ಟೀಸರ್ ಬಿಡುಗಡೆ ಶ್ರೀಮೂಕಾಂಬಿಕಾ ಕಂಬೈನ್ಸ್ ಲಾಂಛನದಲ್ಲಿ ಎ. ವೆಂಕಟೇಶ್ ಅವರ ನಿರ್ಮಾಣದ, ಅನಿಲ್ ಮಂಡ್ಯ ಅವರ ನಿರ್ದೇಶನದ ಕ್ಷತ್ರಿಯ ಚಿತ್ರದ ಟೀಸರ್ ಇದೇ ತಿಂಗಳ ೧೭ರಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಚಿರು ಸರ್ಜಾ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಈಗಾಗಲೇ ಶೇ.೯೦ರμ ಭಾಗದ ಚಿತ್ರೀಕರಣ ಮುಗಿದಿದ್ದು, ಈ ತಿಂಗಳ ಅಂತ್ಯದಲ್ಲಿ ಕೊನೆಯ ಹಂತದ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ. ಸಮಾಜದ ಒಳಿತಿಗಾಗಿ ಹೋರಾಡುವ ಒಬ್ಬ ಆಧುನಿಕ ಕ್ಷತ್ರಿಯನ ಪಾತ್ರದಲ್ಲಿ ನಟ ಚಿರು ಸರ್ಜಾ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ....
ಕೊಟ್ಟಿಗೆ ಹಾರದಲ್ಲಿ ಕಸ್ತೂರಿ ಮಹಲ್ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ. ಕರುನಾಡ ಪ್ರಕೃತಿ ಸೌಂದರ್ಯ ಹೆಚ್ಚಿಸಿರುವಲ್ಲಿ ಕೊಟ್ಟಿಗೆ ಹಾರದ್ದು ಮಹತ್ವದ ಪಾತ್ರ. ಮಳೆಗಾಲದಲ್ಲಿ ಇದರ ವೈಭವ ಕೇಳುವುದೇ ಬೇಡ. ಇಂತಹ ಸುಂದರ ಪರಿಸರದಲ್ಲಿ ಕಸ್ತೂರಿ ಮಹಲ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅಕ್ಟೋಬರ್ 5ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮಾತಿನ ಭಾಗದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಶಾನ್ವಿ ಶ್ರೀವಾಸ್ತವ್, ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಹಾರಾರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ದಿನೇಶ್ ಬಾಬು ....
ಚಂದನವನದ ಇತಿಹಾಸ ಒಳಗೊಂಡ ಚಲನಚಿತ್ರ ಭಂಡಾರ ೮೪ ವರ್ಷದ ಇತಿಹಾಸವಿರುವ ಕನ್ನಡ ಚಿತ್ರರಂಗದ ವಿವರಗಳು ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡುವ ಸಲುವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಯು ‘ಚಲನಚಿತ್ರ ಭಂಡಾರ’ ಸ್ಥಾಪಿಸಲು ಯೋಜನೆ ಕೈಗೊಂಡಿದೆ. ಇದಕ್ಕಾಗಿ ಆರ್ಥಿಕ ನೆರವನ್ನು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವನ್ನು ಕೋರಲಾಗಿತ್ತು. ಪ್ರಾಧಿಕಾರವು ಅಕಾಡೆಮಿ ಕೋರಿಕೆಗೆ ಸ್ಪಂದಿಸಿದ್ದು ಭಂಡಾರ ಸ್ಥಾಪನೆಗೆ ಒಂದು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಇದೊಂದು ಅಕಾಡೆಮಿಯ ಬಹುದಿನದ ಕನಸು ಈಗ ನನಸಾಗುತ್ತಿದೆ ಎಂದು ಅಧ್ಯಕ್ಷ ಸುನಿಲ್‌ಪುರಾಣಿಕ್ ಸುದ್ದಿಗೋಷ್ಟಿಯಲ್ಲಿ ಸಂತಸ ಹಂಚಿಕೊಂಡಿದ್ದಾರೆ. ....
ಪ್ರೇಕ್ಷಕರ ಒತ್ತಾಯದ ಮೇರೆಗೆ ಲವ್ ಮಾಕ್‌ಟೈಲ್ ಮರುಬಿಡುಗಡೆ ಜನವರಿ ತಿಂಗಳಲ್ಲಿ ಬಿಡುಗಡೆಗೊಂಡ ‘ಲವ್ ಮಾಕ್‌ಟೇಲ್’ ಚಿತ್ರವು ಮೊದಲ ಎರಡು ವಾರಗಳು ಗಳಿಕೆಯಲ್ಲಿ ಕಡಿಮೆ ಬಂದಿತ್ತು. ವಿಚಲಿತರಾಗದ ನಾಯಕ,ನಿರ್ದೇಶಕ ಮತ್ತು ನಿರ್ಮಾಪಕ ಕೃಷ್ಣ ತಂಡದೊಂದಿಗೆ ಚಿತ್ರಮಂದಿರಗಳಿಗೆ ಭೇಟಿ ನೀಡಿರುವುದರ ಪರಿಣಾಮ ಸಿನಿಮಾವು ಒಂದು ಹಂತಕ್ಕೆ ನಿಂತುಕೊಂಡಿತ್ತು. ಮುಂದೆ ಯಶಸ್ವಿಯಾಗಿ ೫೦ದಿನ ಪೂರೈಸುತ್ತದೆ ಎಂದು ಆಶಾಭಾವನೆಯಲ್ಲಿ ಇದ್ದ ತಂಡಕ್ಕೆ ಕರೋನದಿಂದ ಎಲ್ಲವು ನಿರಾಸೆ ಆಯಿತು. ಕೊನೆಗೆ ಓಟಿಟಿದಲ್ಲಿ ಪ್ರಸಾರಗೊಂಡು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನರು ....
ಕ್ಯಾನ್ಸರ್ ರೋಗಿಗಳಿಗೆ ಚಿತ್ರದ ಗಳಿಕೆ ಹಣ ೮೦ರ ದಶಕದಲ್ಲಿ ‘ಬೆಂಕಿಯ ಬಲೆ’ ಸಾಂಸರಿಕ ಸಿನಿಮಾ ತರೆಕಂಡು ಹಿಟ್ ಆಗಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಕಾರ್ಯನಿರತವಾಗಿದೆ. ಇದರಲ್ಲಿ ಹಲವು ವಿಶೇಷತೆಗಳು ಕೂಡಿದೆ. ಕತೆ,ಚಿತ್ರಕತೆ, ಸಾಹಿತ್ಯ, ನಿರ್ಮಾಪಕ,ನಿರ್ದೇಶನ ಮತ್ತು ನಾಯಕನಾಗಿ ನಟಿಸಿರುವ ಮೈಸೂರಿನ ಶಿವಾಜಿ ಹೇಳುವುದಿಷ್ಟು: ನನಗೆ ಯಾವುದೇ ರೀತಿಯ ಚಿತ್ರರಂಗದ ಅನುಭವವಿಲ್ಲ. ಸ್ಕ್ರಿಪ್ಟ್ ಬರೆದುಕೊಂಡಿಲ್ಲ. ಶೂಟಿಂಗ್ ಜಾಗಕ್ಕೆ ಹೋದಾಗ ಅಲ್ಲಿಯೇ ನಾನು ಈ ಡೈಲಾಗ್ ಹೇಳುತ್ತೇನೆ. ನೀವು ಇದನ್ನು ಹೇಳಿ ಎಂದು ....
ನಿವೃತ್ತ ಕ್ಯಾಪ್ಟನ್ ಆಗಿ ರಾಘವೇಂದ್ರ ರಾಜ್‍ಕುಮಾರ್ ರಾಘವೇಂದ್ರ ರಾಜ್‍ಕುಮಾರ್ ಅಭಿನಯದ ರಾಜತಂತ್ರ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ನಿವೃತ್ತ ಕ್ಯಾಪ್ಟನ್ ಆಗಿ ರಾಘವೇಂದ್ರ ರಾಜ್‍ಕುಮಾರ್ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಅಮ್ಮನಮನೆ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಟನಟ ಪ್ರಶಸ್ತಿ ಪಡೆದಿದ್ದರು. ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಪಿ.ವಿ.ಆರ್.ಸ್ವಾಮಿ ಈಗ ಕ್ಯಾಮರಾ ಹಿಡಿಯುವ ಜೊತೆಗೆ ಇದೇ ಮೊದಲಬಾರಿಗೆ ನಿರ್ದೇಶಕನ ಸ್ಥಾನವನ್ನು ಅಲಂಕರಿಸಿದ್ದಾರೆ. ಹಿರಿಯನಟ ರಾಘವೇಂದ್ರ ರಾಜ್‍ಕುಮಾರ್ ಅವರ ಜೊತೆಗೆ ....
ಲಂಕೇಶ್ ಆಡಿಯೋಬುಕ್ಸ್-ಲಂಕೇಶ್ ಆ್ಯಪ್ ಬಿಡುಗಡೆ ಪತ್ರಕರ್ತ ಹಾಗೂ ನಿರ್ದೇಶಕರೂ ಆದ ಇಂದ್ರಜಿತ್ ಲಂಕೇಶ್ ತಮ್ಮ ತಂದೆ ಲಂಕೇಶ್ ಅವರ ಕೃತಿಗಳು ಓದುಗರೆಲ್ಲರಿಗೂ ಸುಲಭವಾಗಿ ಸಿಗಲೆಂದು ಅವುಗಳನ್ನೆಲ್ಲ ಡಿಜಿಟಲ್ ರೂಪಕ್ಕೆ ತಂದಿದ್ದಾರೆ. ಅಂದರೆ ಲಂಕೇಶ್ ಅವರ ಪುಸ್ತಕಗಳನ್ನು ಇನ್ನುಮುಂದೆ ಮೊಬೈಲ್ ಅಥವಾ ಲ್ಯಾಪ್‍ಟ್ಯಾಪ್‍ಗಳ ಮೂಲಕವೂ ಓದಬಹುದಾಗಿದ್ದು, ಈ ಲಂಕೇಶ್ ಆಡಿಯೋಬುಕ್ಸ್ ಹಾಗೂ ಲಂಕೇಶ್ ಆ್ಯಪ್‍ನ ಬಿಡುಗಡೆ ಕಾರ್ಯಕ್ರಮ ಗಾಂಧಿಭವನದಲ್ಲಿ ನಡೆಯಿತು. ಇದರ ಜೊತೆಗೆ ಲಂಕೇಶ್ ಪತ್ರಿಕೆಯ 41ನೇ ವರ್ಷದ ವಿಶೇಷ ಸಂಚಿಕೆ ಸಹ ಬಿಡುಗಡೆಯಾಯಿತು. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಹಾಗೂ ಸಿದ್ದರಾಮೇಶ್ವರ ಮಹಾಸಂಸ್ಥಾನದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ....
ಭ್ರಮೆ ಆಡಿಯೋ ಬಿಡುಗಡೆ, ಬೈಕ್ ವಿಜೇತರ ಘೋಷಣೆ ರೇಣುಕಾಂಬ ಥಿಯೇಟರಿನಲ್ಲಿ ಭ್ರಮೆ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಹಾಗೂ ಮೊದಲ ಲಕ್ಕಿಡ್ರಾ ವಿಜೇತರ ಆಯ್ಕೆ ಕಾರ್ಯಕ್ರಮ ನಡೆಯಿತು. ಕುಂದಾಪುರದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಚರಣರಾಜ್ ಈ ಚಿತ್ರವನ್ನು ನಿರೂಪಿಸಿದ್ದಾರೆ. ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದಲ್ಲಿ ಅಂಜನಾಗೌಡ ಹಾಗೂ ಇಶಾನಾ ನಾಯಕಿಯರ ಪಾತ್ರದಲ್ಲಿದ್ದಾರೆ. ಇದೊಂದು ಹಾರರ್ ಕಾಮಿಡಿ ಕಥೆಯ ಮೇಲೆ ನಡೆಯುವ ಸಬ್ಜೆಕ್ಟ್ ಆಗಿದ್ದು, ಚಿತ್ರಕ್ಕೆ ಚರಣರಾಜ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ನಾಯಕ ....
ಕನ್ನಡಾಭಿಮಾನಿ ಪಂಪನ ಮರ್ಡರ್ ಮಿಸ್ಟರಿ! ** ಮತ್ತೆ ಬಂದರು ನಾದಬ್ರಹ್ಮ ಹಂಸಲೇಖ * ಎಸ್ ಮಹೇಂದರ್ ನಿರ್ದೇಶನದ ಅಪರೂಪದ ಸಿನಿಮಾ ಪಂಪ * ಕನ್ನಡ ಸಾರಸ್ವತ ಬನದಲ್ಲರಳಿತ ರೋಚಕ ಪುಷ್ಪ - ಪಂಪ ತೀರಾ ಅಪರೂಪಕ್ಕೆ ಎನ್ನುವಂತೆ ಕನ್ನಡದಲ್ಲೊಂದು ಸಿನಿಮಾ ತಯಾರಾಗುತ್ತಿದೆ. ನಿಜಕ್ಕೂ ವಿಭಿನ್ನವಾದ ಕಥಾ ಹಂದರ ಮತ್ತು ನಿರೂಪಣೆ ಇದರಲ್ಲಿದೆ. ಕನ್ನಡಾಭಿಮಾನವನ್ನೇ ವ್ಯಕ್ತಿತ್ವವನ್ನಾಗಿಸಿಕೊಂಡ, ಆದಿ ಕವಿ ಪಂಪನ ಮತ್ತೊಂದು ಅವತಾರದಂಥಾ ಕಥಾನಾಯಕ. ಪಂಚಳ್ಳಿ ಪರಶಿವಮೂರ್ತಿ ....
'90 ಹೊಡಿ ಮನೀಗ್ ನಡಿ’ ಅಂತಿದ್ದಾರೆ ಬಿರಾದಾರ್. ತಮ್ಮ ಅಮೋಘ ಅಭಿನಯದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿ, ಕನಸೆಂಬ ಕುದುರೆಯನೇರಿ ಚಿತ್ರದ ಅಭಿನಯಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ನಟ ವೈಜನಾಥ್ ಬಿರಾದಾರ್. ಬಿರಾದಾರ್ ಎಂದೆ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾಗಿರುವ ಇವರು, ಈಗ ’90 ಹೊಡಿ ಮನೀಗ್ ನಡಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಇವರ ಅಭಿನಯದ 500ನೇ ಚಿತ್ರ. ಮದ್ಯಪಾನದಿಂದಾಗುವ ದುಷ್ಪರಿಣಾಮಗಳನ್ನು ಮನೋರಂಜನೆಯ ಮೂಲಕ ಉತ್ತಮ ಸಂದೇಶ ಹೇಳುವ ಕಥಾಹಂದರ ಈ ಚಿತ್ರದಲ್ಲಿದೆ. ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆ ಲಾಂಛನದಲ್ಲಿ ರತ್ನಮಾಲ ಬಾದರದಿನ್ನಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಉಮೇಶ್ ಬಾದರದಿನ್ನಿ ....
ಮಂಜುನಾಥನ ಸನ್ನಿಧಿಯಲ್ಲಿ ’ಶಂಭೋ ಶಿವ ಶಂಕರ’ ಚಿತ್ರಕ್ಕೆ ಚಾಲನೆ. ಅಘನ್ಯ ಪಿಕ್ಚರ್ಸ್ ಅವರು ನಿರ್ಮಿಸುತ್ತಿರುವ ’ಶಂಭೋ ಶಿವ ಶಂಕರ’ ಚಿತ್ರದ ಮುಹೂರ್ತ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಆರ್ ವಿ ಮಮತ ಆರಂಭ ಫಲಕ ತೋರಿದರೆ, ನಿರ್ಮಾಪಕ ವರ್ತೂರು ಮಂಜು ಕ್ಯಾಮೆರಾ ಚಾಲನೆ ಮಾಡಿದರು. ಶೀರ್ಷಿಕೆ ಕೇಳಿದರೆ ಭಕ್ತಿ ಪ್ರಧಾನ ಚಿತ್ರ ಅನಿಸುತ್ತದೆ. ಆದರೆ ಇದೊಂದು ಸಸ್ಪೆನ್ಸ್ ಚಿತ್ರ. ಶಂಭೋ ಶಿವ ಶಂಕರ ಎನ್ನುವುದು ಮೂರು ಪಾತ್ರಗಳ ಹೆಸರು. ಶಂಭುವಿನ ಪಾತ್ರದಲ್ಲಿ ಅಭಯ್ ಪುನೀತ್, ಶಿವನ ಪಾತ್ರವನ್ನು ರಕ್ಷಕ್ ಹಾಗೂ ಶಂಕರನ ಪಾತ್ರ ರೋಹಿತ್ ನಿರ್ವಹಣೆ ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಯಶಸ್ಸು ಕಂಡ ....
ಸದ್ಯದಲ್ಲೇ ’ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಬಿಡುಗಡೆ. ನಾಲ್ಕು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ವಸಿಷ್ಠ ಸಿಂಹ. ವಸಿಷ್ಠ ಎನ್ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ’ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ತಮ್ಮ ಕಂಚಿನ ಕಂಠ ಹಾಗೂ ಸಹಜ ಅಭಿನಯದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ ವಸಿಷ್ಠ ಸಿಂಹ ಈ ಚಿತ್ರದಲ್ಲಿ 25 ರಿಂದ 60 ವಯೋಮಾನದಲ್ಲಿ ಬರುವ ನಾಲ್ಕು ಪಾತ್ರಗಳ ನಿರ್ವಹಣೆ ಮಾಡಿದ್ದಾರೆ. ಲಾಕ್ ಡೌನ್ ಗೂ ಮುನ್ನ ಕಿಚ್ಚ ಸುದೀಪ ಅವರು ಬಿಡುಗಡೆ ಮಾಡಿದ್ದ ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ....
ಕಸ್ತೂರಿ ಮಹಲ್ ನಲ್ಲಿ ಶಾನ್ವಿ ಶ್ರೀವಾಸ್ತವ್.
ಕಸ್ತೂರಿ ನಿವಾಸ ಶೀರ್ಷಿಕೆಯೊಂದಿಗೆ ಆರಂಭವಾದ ಈ ಚಿತ್ರ ಡಾ||ರಾಜ್ ಕುಟುಂಬ ಹಾಗೂ ಅಭಿಮಾನಿಗಳ ಮೇಲಿರುವ ಗೌರವದಿಂದ ಕಸ್ತೂರಿ ಮಹಲ್ ಎಂದು ಹೆಸರು ಬದಲಿಸಿದ್ದು ಎಲ್ಲರಿಗೂ ತಿಳಿದ ವಿಷಯ.
ಈ ಚಿತ್ರದ ನಾಯಕಿಯಾಗಿ ಮೊದಲು ರಚಿತಾರಾಂ ಆಯ್ಕೆಯಾಗಿದ್ದರು. ಕಾರಣಾಂತರದಿಂದ ರಚಿತಾರಾಂ ಚಿತ್ರತಂಡದಿಂದ ಹೊರನಡೆದಿದ್ದು, ಈಗ ಕಸ್ತೂರಿ ಮಹಲ್ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ.
ಲಾಸ್ಟ್‌ಸೀನ್ ವಿಡಿಯೋ ಹಾಡು ಬಿಡುಗಡೆ ಹೊಸಬರೇ ಸೇರಿಕೊಂಡು ‘ಲಾಸ್ಟ್ ಸೀನ್’ ಎನ್ನುವ ೪.೩೦ ನಿಮಿಷದ ವಿಡಿಯೋ ಹಾಡನ್ನು ಸಿದ್ದಪಡಿಸಿದ್ದಾರೆ. ಶನಿವಾರ ರೇಣುಕಾಂಬ ಪ್ರಿವ್ಯೂ ಚಿತ್ರಮಂದಿರದಲ್ಲಿ ಕನ್ನಡ ಭಾಷೆಯ ಗೀತೆ ಅನಾವರಣಗೊಂಡಿತು. ರಚನೆ ಮತ್ತು ನಿರ್ದೇಶನ ಮಾಡಿರುವ ಎನ್.ವಿನಾಯಕ ಮಾತನಾಡಿ ಮೊದಲ ಬಾರಿ ನಮ್ಮ ಭಾಷೆ ಸೇರಿದಂತೆ ತೆಲುಗು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಹಾಡನ್ನು ಸಿದ್ದಪಡಿಸಲಾಗಿದೆ. ಮೂರು ದಿನಗಳ ಕಾಲ ಬೆಂಗಳೂರು, ಮಂಗಳೂರು, ದಾಬಸ್‌ಪೇಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಮಾಜದಲ್ಲಿ ಒಂದು ಹುಡುಗಿ ಅತ್ಯಾಚಾರವಾದಾಗ ಆಕೆ ಅನುಭವಿಸುವ ನೋವು. ಎಲ್ಲದಕ್ಕಿಂತ ....
ಹಿರಿಯ ಕಲಾವಿದರನ್ನು ಗೌರವಿಸಿದ ಇಂದ್ರಜಿತ್ ಲಂಕೇಶ್ ನಟ,ನಿರ್ದೇಶಕ,ಪತ್ರಕರ್ತ ಇಂದ್ರಜಿತ್‌ಲಂಕೇಶ್ ಪ್ರತಿ ಬಾರಿ ತಮ್ಮ ಹುಟ್ಟುಹಬ್ಬವನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸರಳವಾಗಿ ಆಚರಿಸಿಕೊಳ್ಳುತ್ತಿದ್ದರು. ಈ ಬಾರಿ ಹಿರಿಯ ಕಲಾವಿದರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ಸಾರ್ಥಕ ಬರ್ತ್‌ಡೇಯಿಂದ ಖುಷಿಗೊಂಡಿದ್ದಾರೆ. ಎಂ.ಎಸ್.ಉಮೇಶ್, ಬೆಂಗಳೂರು ನಾಗೇಶ್, ಶೈಲಶ್ರೀ, ಜಯಲಕ್ಷೀಪಾಟೀಲ್ ಮತ್ತು ಆರ್.ಟಿ.ರಮಾ ಗೌರವಕ್ಕೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಹಿರಿಯರೊಂದಿಗೆ ಜನ್ಮದಿನವನ್ನು ಸಂಭ್ರಮ ಮಾಡಿಕೊಳ್ಳುತ್ತಿರುವುದು ದೊಡ್ಡ ವಿಷಯವೇನಲ್ಲ. ಕೊರೋನಾ ಸಂಕಷ್ಟದಲ್ಲಿ ಇಂತಹ ....