ಸ್ವಯಂಕಲ್ಪನೆಯಿಂದ ಆಗುವ ಘಟನೆಗಳು ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ‘ಕಪೋ ಕಲ್ಪಿತ’ ಸದ್ಯದಲ್ಲೆ ಸನ್ಸಾರ್ ಅಂಗಳಕ್ಕೆ ಹೋಗಲಿದೆ.ಪ್ರಚಾರದ ಸಲುವಾಗಿಟ್ರೈಲರ್ ಬಿಡುಗಡೆಕಾರ್ಯಕ್ರಮರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.ನಾಯಕಿ ಮತ್ತು ನಿರ್ದೇಶಕಿ ಸುಮಿತ್ರಾರಮೇಶ್ಗೌಡ ಸಿನಿಮಾದಕುರಿತಂತೆ ಮಾಹಿತಿ ಹಂಚಿಕೊಂಡರು.ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ.ಸ್ವಯಂಕಲ್ಪನೆಎಂಬುದುಅರ್ಥಕೊಡುತ್ತದೆ.ಅಂದರೆಒಂದು ವಿಷಯವುಒಬ್ಬರಿಂದ ಮತ್ತೋಬ್ಬರಿಗೆತಲುಪುವಾಗ ಹೆಚ್ಚಿಗೆ ಸೇರಿಕೊಂಡು ಸಂಶಯಕ್ಕೆ ನಾಂದಿಯಾಗುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಅಂಗಾಯ್ತು, ....
ಕೆ.ಜಿ.ಎಫ್ 2 ಚಿತ್ರದ ಆಡಿಯೋ ಹಕ್ಕು ಲಹರಿ ಮಡಿಲಿಗೆ.
ರಾಕಿಂಗ್ ಸ್ಟರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯ್ ಕಿರಂಗದೂರು ಅವರು ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ 2 ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಖ್ಯಾತ ಮ್ಯೂಸಿಕ್ ಸಂಸ್ಥೆ ಲಹರಿ ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದ್ದಾರೆ.
ಹಲವು ಭಾಷೆಗಳಲ್ಲಿ ಕೆ.ಜಿ.ಎಫ್ 2 ಚಿತ್ರ ನಿರ್ಮಾಣವಾಗಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ.
ಎಲ್ಲಾ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆಯೇ ಖರೀದಿಸಿದೆ.
ಶ್ರೇಯಸ್ಸ್ ಕೆ ಮಂಜು ಈಗ "ರಾಣ"
ಜುಲೈ 7 ರಂದು ಮುಹೂರ್ತ.
ಖ್ಯಾತ ನಿರ್ಮಾಪಕ ಕೆ.ಮಂಜು ಅರ್ಪಿಸುವ, ನಂದಕಿಶೋರ್ ನಿರ್ದೇಶನದ ಹಾಗೂ ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಇಂದು ಬೆಳಗ್ಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.
ಚಿತ್ರಕ್ಕೆ "ರಾಣ" ಎಂದು ಹೆಸರಿಡಲಾಗಿದೆ. ಶೀರ್ಷಿಕೆ ಅನಾವರಣ ಸಮಾರಂಭದಲ್ಲಿ ಕೆ.ಮಂಜು, ನಿರ್ಮಾಪಕ ಪುರುಷೋತ್ತಮ ಗುಜ್ಜಾಲ್, ನಿರ್ದೇಶಕ ನಂದಕಿಶೋರ್, ನಾಯಕ ಶ್ರೇಯಸ್ಸ್ ಹಾಗೂ ನಾಯಕಿ ರೇಶ್ಮಾ ನಾಣಯ್ಯ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ಭಾರಿ ಸದ್ದು ಮಾಡುತ್ತಿದೆ.."ವ್ಹೀಲ್ ಚೇರ್ ರೋಮಿಯೋ" ಚಿತ್ರದ ಲಿರಿಕಲ್ ಸಾಂಗ್.. ವಿಭಿನ್ನ ಕಥಾಹಂದರ ಹೊಂದಿರುವ "ವ್ಹೀಲ್ ಚೇರ್ ರೋಮಿಯೋ" ಚಿತ್ರದ ಲಿರಿಕಲ್ ಸಾಂಗ್ ಇತ್ತೀಚೆಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಿಡುಗಡಯಾದ ಮೂರೇ ದಿನಕ್ಕೆ ಆರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈ ಹಾಡು ವೀಕ್ಷಣೆಗೊಂಡು ಜನಪ್ರಿಯವಾಗಿದೆ. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಬರೆದಿರುವ "ಕನಸಿನಲ್ಲಿ ನಾ ನಡೆವೆ" ಎಂಬ ಸುಂದರಹಾಡನ್ನು ಸುಮಧುರ ಕಂಠದ ಗಾಯಕ ಸಂಚಿತ್ ಹೆಗ್ಡೆ ಸುಶ್ರಾವ್ಯವಾಗಿ ಹಾಡಿದ್ದಾರೆ. ಬಿ.ಜೆ.ಭರತ್ ಈ ಚಿತ್ರದ ಸಂಗೀತ ನಿರ್ದೇಶಕರು. ಕಾಲು ಕಳೆದುಕೊಂಡಿರುವ ಹುಡುಗ ಹಾಗೂ ಕಣ್ಣಿಲ್ಲದಿರುವ ಹುಡುಗಿಯ ಪ್ರೇಮಕಥೆಯ "ವ್ಹೀಲ್ ಚೇರ್ ....
"ಹೆದರದಿರು ಓ ಮನಸೇ..." "ಕೊರೋನಾ ಮೆಟ್ಟು ನಿಲ್ಲೋಣ ಕೊರೋನಾ ಸುಟ್ಟು ಸಾಗೋಣ" ಕರೋನ ದಿಂದಾಗಿ ಲಾಕ್ ಡೌನ್ ಆಗಿ ಚಿತ್ರರಂಗ ಸಂಪೂರ್ಣ ಸ್ಥಗಿತಗೊಂಡು ಹೆಚ್ಚು ಕಮ್ಮಿ ಎರಡುವರೆ ತಿಂಗಳಗಿತ್ತು. ಈಗ ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಂಡು ಒಂದೊಂದೆ ಉದ್ಯಮಗಳು ಬಾಗಿಲು ತೆಗೆದು ಧೂಳು ಕೊಡವಿಕೊಂಡು ನಿತ್ಯ ಜೀವನಕ್ಕೆ ಸಿದ್ಧವಾಗುತ್ತಿವೆ. ಇಂತಹ ಸಂಧರ್ಭದಲ್ಲಿ ಸಿನಿಮಾ ಮಾಧ್ಯಮ ಕೂಡ ಹೊರತೇನಲ್ಲ . ಇಂದು ಎರಡು ಮಾಧ್ಯಮಗೋಷ್ಠಿ ಶುರುವಾಗಿದ್ದು ಬಹಳ ದಿನಗಳ ನಂತರ ಮಾಧ್ಯಮ ಮಿತ್ರರು ಒಟ್ಟಿಗೆ ಸೇರಿದ್ದು ಒಂದು ಸಂತಸದ ವಿಷಯ. ಇಂದು ನಡೆದ ಮಾಧ್ಯಮಗೋಷ್ಠಿ ಯಲ್ಲಿ ನಟ, ನಿರ್ಮಾಪಕ, ಗೋಪ್ರೇಮಿ ಉದ್ಯಮಿ ಮಹೇಂದ್ರ ಮುನ್ನೋತ್ ರವರು ಎರಡು ....
ಎರಡೇ ಪಾತ್ರಗಳ ಅಭಿನಯದಲ್ಲಿ, ಎರಡು ಭಾಷೆಗಳಲ್ಲಿ ಸಿದ್ದವಾಗಿದೆ “ಅನಿರೀಕ್ಷಿತ”. ಚಿತ್ರದ ಟ್ರೇಲರ್ ಗೆ ಚಂದನವನದ ತಾರೆಯರ ಮೆಚ್ಚುಗೆ. ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಸಿನಿರಸಿಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂತಹದೊಂದು ವಿಭಿನ್ನ ಕಥಾಹಂದರ ಹೊಂದಿರುವ "ಅನಿರೀಕ್ಷಿತ" ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಕೇವಲ ಎರಡೇ ಪಾತ್ರಗಳು ಈ ಚಿತ್ರದಲ್ಲಿದ್ದು, ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಲಾಕ್ ಡೌನ್ ನಂತರ ಸುಮಾರು ಎರಡುವರೆ ತಿಂಗಳ ಬಳಿಕ ಆಯೋಜಿಸಿದ್ದ ಮೊದಲ ಪತ್ರಿಕಾಗೋಷ್ಠಿ ಇದು. ಚಿತ್ರದ ಪ್ರಮುಖ ....
*ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರೀಕರಣ ಸ್ಥಳಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ* ಯೋಜನೆಗಳ ಪ್ರಕಾರ ಈ ಹೊತ್ತಿಗೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರವೊಂದನ್ನು ಸತ್ಯಪ್ರಕಾಶ್ ನಿರ್ದೇಶನ ಮಾಡಬೇಕಿತ್ತು. ಕೋವಿಡ್ ಮತ್ತು ಲಾಕ್ ಡೌನ್ ನಿರ್ಬಂಧಗಳಿಂದಾಗಿ ಆ ಚಿತ್ರವು ಸ್ವಲ್ಪ ತಡವಾಗುತ್ತಾ ಬಂದಿತ್ತು. ಆ ಚಿತ್ರದ ಚರ್ಚೆಯ ಸಂದರ್ಭದಲ್ಲೇ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಎಳೆಯನ್ನು ಸತ್ಯಪ್ರಕಾಶ್ ಪುನೀತ್ ಅವರ ಬಳಿ ಹೇಳಿದ್ದರು. ಹೊಸ ಕಲಾವಿದರಿಗಾಗಿಯೇ ತಯಾರಿಸಿದ್ದ ಆ ಕಥೆಯ ವಸ್ತು ಹಾಗೂ ಚಿತ್ರಕಥೆಯಲ್ಲಿದ್ದ ಹೊಸತನ, ಪುನೀತ್ ಅವರಿಗೂ ಸಹ ಮೆಚ್ಚುಗೆಯಾಗಿ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಇತ್ತರು. ಆಗ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಕ್ಕೆ ....
ನಾಳೆ ಬೆಳಗ್ಗೆ 6 ಗಂಟೆಗೆ ಬಿಡುಗಡೆಯಾಗಲಿದೆ ಪ್ಯಾನ್ ಇಂಡಿಯಾ ಸಿನಿಮಾ ’ಕಬ್ಜ’ ದ ವಿಶೇಷ ಪೋಸ್ಟರ್ . ಕುತೂಹಲ ಕೆರಳಿಸಿದೆ ಹಾಲಿವುಡ್ ಶೈಲಿಯ ವಿಭಿನ್ನ ಪೋಸ್ಟರ್. ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ’ಕಬ್ಜ’. ಈ ಚಿತ್ರದ ವಿನೂತನ ಹಾಲಿವುಡ್ ಶೈಲಿಯ ಪೋಸ್ಟರ್ ನಾಳೆ ಬೆಳಗ್ಗೆ 6 ಗಂಟೆಗೆ ಬಿಡುಗಡೆಯಾಗಲಿದೆ. ತ್ರಿಬಲ್ ಆರ್, ಕೆ.ಜಿ.ಎಫ್ 2, ವಿಕ್ರಾಂತ್ ರೋಣ ಚಿತ್ರಗಳ ಪೋಸ್ಟರ್ ನೋಡುಗರ ಗಮನ ಸೆಳೆದಿದೆ. ನಾಳೆ ಬಿಡುಗಡೆಯಾಗಲಿರುವ ಕಬ್ಜ ಚಿತ್ರದ ಪೋಸ್ಟರ್ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಈ ವಿಭಿನ್ನ ಪೋಸ್ಟರ್ ಬಗ್ಗೆ ಮುಂಬೈ ಟೈಮ್ಸ್ ವರದಿ ಮಾಡಿದೆ. ಯಶ್ ಅವರ ಕೆ.ಜಿ.ಎಫ್ ....
ಶ್ರೇಯಸ್ಸ್ ಕೆ ಮಂಜು ಅಭಿನಯದ,
ನಂದ ಕಿಶೋರ್ ನಿರ್ದೇಶನದ ನೂತನ ಚಿತ್ರಕ್ಕೆ ಜುಲೈ 7ರಂದು ಮುಹೂರ್ತ.
ಜುಲೈ 1 ರಂದು ಶೀರ್ಷಿಕೆ ಅನಾವರಣ
ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ಸ್ ಅವರು ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರವನ್ನು ನಂದ ಕಿಶೋರ್(ಪೊಗರು) ನಿರ್ದೇಶಿಸುತ್ತಿದ್ದಾರೆ.
ಈ ನೂತನ ಚಿತ್ರದ ಮುಹೂರ್ತ ಸಮಾರಂಭ ಜುಲೈ 7ರಂದು ಗವಿಪುರಂನ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನಡೆಯಲಿದೆ.
*ಸ್ನೇಹರ್ಷಿ ಕಿರಣ್ ನಾರಾಯಣ್ ನೆರವಿನ ಹಸ್ತ* ಕೊರೋನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಸ್ನೇಹರ್ಷಿ ನಾಯಕ ಕಿರಣ್ ನಾರಾಯಣ್ ಇದೀಗ ಚಿತ್ರರಂಗದ ಅಸಂಘಟಿತರಿಗೆ ತಮ್ಮ ಸಹಾಯಹಸ್ತ ಚಾಚಿದ್ದಾರೆ. ಗುರುತಿನ ಚೀಟಿ ಇಲ್ಲದೆ ಸರ್ಕಾರದ ಸಹಾಯ ಧನದಿಂದ ವಂಚಿತರಾದವರ ಹಸಿವನ್ನು ನೀಗಿಸುವ ಪುಣ್ಯದ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಬಾಮ ಹರೀಶ್ ಅವರ ಉಲ್ಲಾಸ್ ಶಾಲೆಯ ಆವರಣದಲ್ಲಿ ೧೫೦ಕ್ಕೂ ಹೆಚ್ಚು ಸಿನಿಕಾರ್ಮಿಕರಿಗೆ ಕಿರಣ್ ನಾರಾಯಣ್ ಅವರು ದಿನಸಿ ಕಿಟ್ಗಳನ್ನು ವಿತರಣೆ ಮಾಡಿದರು. ಅವರ ಈ ಕಾರ್ಯದಲ್ಲಿ ಭಾಮ ಹರೀಶ್ ನೆರವಾದರು. ಇದೇ ಸಮಯದಲ್ಲಿ ಅನಾಥ ಶವಗಳ ಬಂಧು ಎನಿಸಿಕೊಂಡ ನಟ ಅರ್ಜುನ್ಗೌಡ, ಪತ್ರಿಕಾ ....
ಚಲನಚಿತ್ರ ಅಕಾಡೆಮಿಯಲ್ಲಿ ಚಿತ್ರರಂಗದ ವಿಶೇಷ ಪ್ಯಾಕೇಜ್ ಸಹಾಯವಾಣಿ ಬೆಂಗಳೂರು, ಜೂನ್ 24- ಸೇವಾಸಿಂಧು ಮೂಲಕ ವಿಶೇಷ ಪ್ಯಾಕೇಜ್ ಪಡೆಯುವ ಕನ್ನಡ ಚಿತ್ರರಂಗದ ಫಲಾನುಭವಿಗಳ ಅನುಕೂಲಕ್ಕಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಗುರುವಾರ ಚಾಲನೆ ದೊರೆತಿದೆ. ಸಹಾಯವಾಣಿಗೆ ಚಾಲನೆ ನೀಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕೋವಿಡ್-19 ಎರಡನೆ ಅಲೆಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ನೀಡಿರುವ ವಿಶೇಷ ಪ್ಯಾಕೇಜ್ ಸೇವಾಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ದಾಖಲೆಗಳನ್ನು ಸಲ್ಲಿಸಿ ಫಲಾನುಭವಿಗಳು ಸಹಾಯಧನ ಪಡೆಯಬಹುದಾಗಿದೆ. ....
ಪ್ಯಾನ್ ಇಂಡಿಯಾ ಸಿನಿಮಾದ ಲಿರಿಕಲ್ ಹಾಡು ಬಿಡುಗಡೆ
ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ‘ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್ಕಶ್ಯಪ್, ತೆಲುಗುದಲ್ಲಿ ರವಿತೇಜ ಮತ್ತು ಮಲೆಯಾಳಂದಲ್ಲಿ ಪೃಥ್ವಿರಾಜ್ ಟೈಟಲ್ನ್ನು ಲೋಕಾರ್ಪಣೆ ಮಾಡಿದ್ದರು. ಸದ್ಯ ಕನ್ನಡದ ಶೀರ್ಷಿಕೆಯನ್ನು ತಂಡವು ರಿವೀಲ್ ಮಾಡಿರುವುದಿಲ್ಲ.
ನಿರ್ಮಾಣ ನಿರ್ವಾಹಕರುಗಳಿಗೆ ಫುಡ್ಕಿಟ್ ವಿತರಣೆ
ಕೊರೋನ ಬಂದಾಗಿನಿಂದಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡಿದೆ.
ಲಾಕ್ ಡೌನ್ ಸಮಯದಲ್ಲಿ ಸಿದ್ದವಾಯಿತು “ಅನಿರೀಕ್ಷಿತ”.
ಮಿಮಿಕ್ರಿ ಮೂಲಕ ಜಮಮನಸೂರೆಗೊಂಡಿರುವ ಮಿಮಿಕ್ರಿ ದಯಾನಂದ್ ಪ್ರಥಮ ನಿರ್ದೇಶನ.
ಜೀವನದ ಅನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ,ಯಾರೂ ಕಲಿಸದ ಪಾಠವನ್ನು ಕಲಿಸಿಬಿಡುತ್ತವೆ. ಇಂತಹ ತಾತ್ವೀಕವಾದ ಎಳೆಯೊಂದು, ಕುತೂಹಲ ಹಿಡಿದಿಟ್ಟುಕೊಂಡು ಹೇಗೆ ಎಳೆಎಳೆಯಾಗಿ ರಹಸ್ಯ ಬಿಚ್ಚಿಕೊಳ್ಳುತ್ತ ಸಾಗುತ್ತದೆ ಎಂಬುದನ್ನು ನಿರೂಪಿಸುವುದೇ, “ಅನಿರೀಕ್ಷಿತ” ಚಿತ್ರದ ಕಥಾಹಂದರ.
ಲಾಕ್ ಡೌನ್ ಸಮಯ ವ್ಯರ್ಥ ಮಾಡಬಾರದೆಂದು ತಿಳಿದ ಹದಿಮೂರು ಜನ ಪ್ರತಿಭಾವಂತರ ತಂಡದ ಪರಿಶ್ರಮದ ಫಲವಾಗಿ ಈ ಚಿತ್ರ ಮೂಡಿಬಂದಿದೆ.
*ಕಲಾವಿದರ ಕತ್ತಲ ಬದುಕನ್ನು ಅನಾವರಣಗೊಳಿಸಿದ ಅಣ್ತಮ್ಮ…*
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಕಾದಿರುವ ಅದೆಷ್ಟೋ ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಇಲ್ಲಿದ್ದಾರೆ. ಕೊರೋನಾ ಎನ್ನುವ ದುಷ್ಟ ವೈರಸ್ಸು ಅಂಥ ಎಲ್ಲರ ಬದುಕನ್ನೂ ಅಕ್ಷರಶಃ ನರಕವನ್ನಾಗಿಸಿದೆ.
ಕೊರೋನ ಸಂಕಷ್ಟ ಸಮಯದಲ್ಲಿ ಹುಟ್ಟೂರಿನ ಜನರಿಗೆ ನೆರವಾದ ಆರ್ ಚಂದ್ರು.
ಎಷ್ಟೋ ಜನ ತಾವು ಹುಟ್ಟಿಬೆಳೆದ ಊರನ್ನು ಬೆಳೆದ ಮೇಲೆ ಮರೆಯುವುದುಂಟು. ಆದರೆ ಕೆಲವರು ಮಾತ್ರ ತಮ್ಮೂರಿನ ಜನರ ಕಷ್ಟಕ್ಕೆ ಸ್ಪಂದಿಸುವ ಗುಣವಿರುತ್ತದೆ.
ಕನ್ನಡ ಚಲನಚಿತ್ರರಂಗದಲ್ಲಿ ತಮ್ಮದೇ ಹೆಸರು ಮಾಡಿರುವ ನಿರ್ದೇಶಕ ಆರ್ ಚಂದ್ರು ಕೊರೋನ ಸಂಕಷ್ಟ ಸಮಯದಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ.
ನಿಜಕ್ಕೂ ನೀವೇ "ರಾಜಕುಮಾರ" ಕಳೆದವರ್ಷದಿಂದ ಈ ಕೊರೋನ ಬರೀ ಜೀವದ ಮೇಲಲ್ಲ. ಜೀವನದ ಮೇಲೂ ತುಂಬಾ ಕೆಟ್ಟ ಪರಿಣಾಮ ಬೀರಿದೆ. ಅದರಲ್ಲೂ ಚಿತ್ರರಂಗಕ್ಕಾಗಿರುವ ನಷ್ಟ ಅಷ್ಟಿಷ್ಟಲ್ಲ. ಸಿನಿರಂಗದ ಸಾವಿರಾರು ಕಾರ್ಮಿಕರು ಇಷ್ಟು ದಿವಸ ಕೆಲಸವಿಲ್ಲದೇ ಇದ್ದದ್ದು, ಇದೇ ಮೊದಲು ಎನ್ನಬಹುದು. ಇಂತಹ ಸಂದರ್ಭದಲ್ಲಿ ನೊಂದವರಿಗೆ ಆಸರೆಯಾಗುವ ವ್ಯಕ್ತಿಗಳು ಬಹಳ ವಿರಳ. ಉದ್ಯೋಗಿಗಳನ್ನು ತಮ್ಮವರೇ ಅಂದುಕೊಳ್ಳುವವರು ಬೆರಳೆಣಿಕೆಯಷ್ಟು. ಹೊಂಬಾಳೆ ಸಂಸ್ಥೆಯ ಮಾಲೀಕರಾದ ವಿಜಯ್ ಕಿರಗಂದೂರು ಅವರು ಕೊರೋನ ಸಂದರ್ಭದಲ್ಲಿ ಯಾವುದೇ ಪ್ರಚಾರವಿಲ್ಲದೇ ಮಾಡಿರುವ ಸತ್ಕಾರ್ಯಗಳು ನಿಜಕ್ಕೂ ಆದರ್ಶನೀಯ. ಕಳೆದವರ್ಷವೇ ಪ್ರಾರಂಭವಾದ ಈ ಸಾಂಕ್ರಾಮಿಕ ರೋಗದ ....
ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ *ಶುಗರ್ ಫ್ಯಾಕ್ಟರಿ* ವಿಡಿಯೋ ಟೀಸರ್ ಜೂನ್ 12 ನಟ ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬ. ಕೃಷ್ಣ ಅವರ ಹುಟ್ಟುಹಬ್ಬಕ್ಕೆ "ಶುಗರ್ ಫ್ಯಾಕ್ಟರಿ" ಚಿತ್ರದ ವಿಡಿಯೋ ಟೀಸರ್ ಬಿಡುಗಡೆಯಾಗಲಿದೆ. ಟೀಸರ್ ನಲ್ಲಿ ಸಾಮಾನ್ಯವಾಗಿ ಪೋಸ್ಟರ್ ಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ನಾವು ವಿಡಿಯೋ ತುಣುಕುಗಳನ್ನು ಬಳಸಿಕೊಂಡು ವಿಭಿನ್ನವಾಗಿ ಟೀಸರ್ ನಿರ್ಮಾಣ ಮಾಡಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ದೀಪಕ್ ಅರಸ್. ಜೂನ್ 12ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಟೀಸರ್ ಬಿಡುಗಡೆಯಾಗಲಿದೆ. ಜೂನ್ 11 ರಂದು ಸಂಜೆ 5 ಗಂಟೆಗೆ ಇನ್ ಸ್ಟಾಗ್ರಾಂ ಮೂಲಕ ಲೈವ್ ನಲ್ಲಿ ಚಿತ್ರತಂಡದ ಸದಸ್ಯರು ಟೀಸರ್ ಹಾಗೂ ಸಿನಿಮಾ ಬಗ್ಗೆ ....
ಕಲಾವಿದರು ಮತ್ತು ಮಂಗಳಮುಖಿಯರುಗಳಿಗೆ ನೆರವು ನೀಡುತ್ತಿರುವ ಭರತ್ಗೌಡ ಚಾರಿಟಬಲ್ ಟ್ರಸ್ಟ್
ಕನ್ನಡ ಚಿತ್ರರಂಗದ ಪೋಷಕ ಕಲಾವಿದರುಗಳು, ತಂತ್ರಜ್ಘರುಗಳಿಗೆ ’ಭರತ್ಗೌಡ ಚಾರಿಟಬಲ್ ಟ್ರಸ್ಟ್’ ಸಂಸ್ಥೆಯು ಆಹಾರದ ಕಿಟ್ಗಳನ್ನು ವಿತರಣೆ ಮಾಡುತ್ತಿದೆ. ಭಾನುವಾರದಂದು ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ.ಅಶ್ವಥ್ನಾರಾಯಣ್ ಅವರು ಕಿಟ್ಗಳನ್ನು ವಿತರಣೆ ಮಾಡುವುದರ ಮೂಲಕ ಚಾಲನೆ ನೀಡಿ, ಭರತ್ಗೌಡರವರ ಸಮಾಜ ಸೇವೆಯನ್ನು ಶ್ಲಾಘನೆ ಮಾಡಬೇಕಾಗಿದೆ. ಇವರು ಸಿನಿಮಾ ಕೃಷಿಗೆ ಪಾದಾರ್ಪಣೆ ಮಾಡಿ ’ಕಟ್ಲೆ’ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ತಿಳಿದು ಬಂದಿದೆ. ಇವರಿಗೆ ಎರಡರಲ್ಲೂ ಯಶಸ್ಸು ಸಿಗಲೆಂದು ಶುಭ ಹಾರೈಸಿದ್ದರು.
ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ಅಭಿನಯದ "ರೌಡಿ ಬೇಬಿ" ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ.
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಪಾಲ್ಗೊಂಡು, ಜನಪ್ರಿಯರಾಗಿರುವ ದಿವ್ಯ ಸುರೇಶ್ ಅಭಿನಯದ ’ರೌಡಿ ಬೇಬಿ" ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರೆಡ್ಡಿ ಕೃಷ್ಣ ನಿರ್ದೇಶಿಸಿದ್ದಾರೆ.
ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ರೆಡ್ಡಿ ಕೃಷ್ಣ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.