ಒಂಟಿಯಾಗಿ ಹೋರಾಡುವವ ಕಥನ ಈ ಸಂಜೆ ಚಿತ್ರದ ನಾಯಕ ಆರ್ಯ, ನಿರ್ದೇಶಕ ಶ್ರೀ ಸಂಗಮದಲ್ಲಿ ‘ಒಂಟಿ’ ಸಿನಿಮಾವು ಸಿದ್ದಗೊಂಡಿದೆ. ಪ್ರಚಾರದ ಹಂತವಾಗಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು, ನಾಯಕ ಹೂರತುಪಡಿಸಿ ವೇದಿಕೆಯಲ್ಲಿ ಒಬ್ಬರನ್ನೊಬ್ಬರು ಹೊಗಳುವುದರಲ್ಲೆ ಕಾಲ ಕಳೆದು ಚಿತ್ರದ ಕುರಿತಂತೆ ಮಾಹಿತಿ ನೀಡಲಿಲ್ಲ. ನಾಯಕನ ಅಣ್ಣನಾಗಿ ಕಾಣಿಸಿಕೊಂಡಿರುವ ನೀನಾಸಂಅಶ್ವಥ್ಗೆ ಭರಾಟೆ,ಕೆಜಿಎಫ್ ಮತ್ತು ಈ ಚಿತ್ರದಲ್ಲಿ ನಟಿಸಿದ್ದು ಖುಷಿ ತಂದಿದೆ. ಅಲ್ಲದೆ ಪ್ರಶಸ್ತಿ ಸಿಗಬಹುದೆಂಬ ಆಶಾಭಾವನೆಯಲ್ಲಿದ್ದಾರೆ. ಬಲಿಷ್ಟ ಕಾಲೇಜು ಹುಡುಗಿಯ ಪಯಣದಲ್ಲಿ ಹುಡುಗನೊಬ್ಬನ ಪ್ರವೇಶವಾದಾಗ ಏನಾಗುತ್ತದೆ. ಆತನ ಗುಣಕ್ಕೆ ....
ಸಿನಿ ನಾಟಕದ ಸುದ್ದಿಗೋಷ್ಟಿ ಸಾಮಾನ್ಯವಾಗಿ ಸುದ್ದಿಗೋಷ್ಟಿಯಲ್ಲಿ ಕಲಾವಿದರು,ತಂತ್ರಜ್ಞರು ತಮ್ಮ ಚಿತ್ರದ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇಲ್ಲೋಂದು ಹೊಸಬರ ತಂಡವು ರಂಗಭೂಮಿ ಕಲಾವಿದರಾಗಿರುವುದರಿಂದ ಹಲವು ಮಾಹಿತಿಗಳನ್ನು ನಾಟಕ ರೂಪದಲ್ಲಿ ಹೇಳಿಕೊಂಡಿದ್ದು ವಿಶೇಷ,ನೋಡುವಂತೆ ಮಾಡಿತು. ಹಿರಿಯ ಪತ್ರಕರ್ತ ಜೋಗಿ ವಿರಚಿತ ‘ನದಿಯ ನೆನಪಿನ ಹಂಗು’’ ಕಾದಂಬರಿಯು ನಾಟಕರೂಪದಲ್ಲಿ ಯಶಸ್ಸನ್ನು ಕಂಡಿದೆ. ಮುಂದೆ ಇದೇ ಹಸರಿನಲ್ಲಿ ನೊಂದಣಿ ಮಾಡಿಸಲು ವಾಣಿಜ್ಯ ಮಂಡಳಿಗೆ ಹೋದಾಗ ಸಿಗಲಿಲ್ಲ. ನಂತರ ‘ಸಮಯದ ಹಿಂದೆ ಸವಾರಿ’ ಹೆಸರಿನಲ್ಲಿ ಕುಂದಾಪುರ, ಮಂಗಳೂರು ಮುಂತಾದ ಸುಂದರ ತಾಣಗಳಲ್ಲಿ ....
ಸಿನಿಮಾ ಜೀವನ ಎರಡು ಒಂದೇ ಆಗಿರುವುದಿಲ್ಲ ೧೯೯೦ರಲ್ಲಿ ಮೊಬೈಲ್, ಇಂಟರ್ನೆಟ್ ಇರಲಿಲ್ಲ. ಅಂದು ಚಿತ್ರದಲ್ಲಿ ಇದ್ದಂತೆ ನಿಜ ಜೀವನದಲ್ಲಿ ಇರುತ್ತದೆಂದು ಯುವ ಮನಸ್ಸುಗಳು ಭ್ರಮಿಸಿಕೊಳ್ಳುತ್ತಿದ್ದರು. ಆದರೆ ಸಿನಿಮಾದ ಹಾಗೆಯೇ ಜೀವನ ಇರುವುದಿಲ್ಲವೆಂದು ‘ಗಂಟುಮೂಟೆ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ಆಗಿನ ಕಾಲಕ್ಕೆ ತಕ್ಕಂತೆ ಸ್ಥಳಗಳಾದ ಬೆಂಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎಸ್ಎಸ್ಎಲ್ಸಿ ಓದುತ್ತಿರುವ ಹದಿನಾರರ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೂ ಅಷ್ಟೇ ತೀವ್ರತೆಯಿಂದ ಕೂಡಿದ ಭಾವದ ....
ಕೌತುಕಗಳ ಆಪರೇಶನ್ ನಕ್ಷತ್ರ ನಾವು ಒಬ್ಬರಿಗೆ ಯಾಮಾರಿಸಿದರೆ, ಬೇರೆಯವರಿಂದ ನಾವುಗಳು ಯಾವ ರೀತಿ ಮೋಸ ಹೋಗುತ್ತೇವೆ. ಎಲ್ಲಿಯವರೆವಿಗೂ ಮೋಸ ಮಾಡುವವರು ಇರುತ್ತಾರೋ, ಅಲ್ಲಿಯವರೆಗೂ ಇದೆಲ್ಲವೂ ನಡೆಯುತ್ತಲೇ ಇರುತ್ತದೆ. ನಿಸ್ವಾರ್ಥ ಮುಖವಾಡಗಳ ಮಧ್ಯೆ ಸ್ವಾರ್ಥ ಮನಸ್ಸು ಇದ್ದವರಿಗೆ ದುಡ್ಡು ಬಂದಾಗ ಏನಾಗುತ್ತಾರೆ. ಇಂತಹ ಅಂಶಗಳನ್ನು ತೆಗೆದುಕೊಂಡು ‘ಆಪರೇಶನ್ ನಕ್ಷತ್ರ’ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಮಧೂಸೂಧನ್.ಕೆ.ಆರ್. ಟೆಂಟ್ ಸಿನಿಮಾ ವಿದ್ಯಾರ್ಥಿಯಾಗಿ ಹೂರಬಂದ ನಂತರ ಆಕ್ಷನ್ ಕಟ್ ಹೇಳಿದ್ದಾರೆ. ಮೈಂಡ್ ಗೇಮ್ ಕತೆಯಾಗಿದ್ದು, ನಾಲ್ಕು ಪಾತ್ರಗಳು ಜೀವಾಳವಾಗಿದೆ. ....
ಪರಕಾಯ ಪ್ರವೇಶ ಮಾಡಿದರೆ ಆಗುವ ಅನಾಹುತಗಳು ಚಂದನವನಕ್ಕೆ ಬಂದಲ್ಲಿ ಬಂಡವಾಳ ವಾಪಸ್ಸು ಬರುತ್ತದೆಂಬ ಯಾವ ಪುಣ್ಯಾತ್ಮ ಹೇಳಿದರೋ ಗೊತ್ತಿಲ್ಲ. ಅದರ ನಂಬಿಕೆಯಿಂದಲೇ ಟಾಲಿವುಡ್, ಕಾಲಿವುಡ್, ಬಾಲಿವುಡ್ ನಿರ್ಮಾಪಕರು ಒಮ್ಮೆ ನೋಡುವ ಅಂತ ಸಿನಿಮಾ ಮಾಡುತ್ತಿದ್ದಾರೆ. ಅದರಂತೆ ತೆಲುಗಿನ ಟಿ.ಸುಲ್ತಾನ್ ನಾಲ್ಕಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ಮೊದಲಬಾರಿ ಕನ್ನಡ ಚಿತ್ರಕ್ಕೆ ಕತೆ ಬರೆದು ಹಣ ಹೂಡುತ್ತಿದ್ದಾರೆ. ಭಾರತೀಯ ಸಂಸ್ಕ್ರತಿಯಲ್ಲಿ ಭೂತ, ಪ್ರೇತಗಳನ್ನು ನಂಬುತ್ತಾರೆ. ಅದರ ಆಧಾರದ ಮೇಲೆ ‘ದೇವಯಾನಿ’ ಚಿತ್ರವೊಂದು ಶೇಕಡ ೬೦ರಷ್ಟು ....
ತಿಥಿ ಆಯ್ತು ಮಾರ್ಲಾಮಿ ಬಂತು ಪೂರ್ವಿಕರನ್ನು ನೆನಸಿಕೊಳ್ಳಲು ಮಹಾಲಯ ಅಮಾವಾಸ್ಯೆಯೆಂದು ಪಟ್ದಣದಲ್ಲಿ ನಡೆಸುತ್ತಾರೆ. ಇದನ್ನೆ ಹಳ್ಳಿಯಲ್ಲಿ ಮಾಡಿದಾಗ ‘ಮಾರ್ಲಾಮಿ’ ಎಂದು ಕರೆಯುತ್ತಾರೆ. ಈಗ ಇದರ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಮಂಡ್ಯಾ, ಚಾಮರಾಜನಗರ,ಮದ್ದೂರು, ಹಾಸನ, ಚನ್ನರಾಯಪಟ್ಟಣ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ದಸರಾ, ಗೌರಿ ಹಬ್ಬದಲ್ಲಿ ಸಂಭ್ರಮದಿಂದ ಆಚರಿಸುವುದಕ್ಕೆ ಇದೇ ಹೆಸರನ್ನು ಹೇಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಲಭ್ಯವಾಗಿಲ್ಲದ ಕಾರಣ ಸಿಟಿ ಜನರಿಗೆ ಇದರ ಕುರಿತಂತೆ ವಿಷಯ ತಿಳಿದಿರುವುದಿಲ್ಲ. ಅದರಿಂದಲೇ ಈ ಸಿನಿಮಾದ ಮೂಲಕ ಎಲ್ಲವನ್ನು ಹೇಳುವ ....
ವೈಜಾಗ್ ತೀರದಲ್ಲಿ ಐ ಲವ್ ಯೂ ಟ್ರೈಲರ್ ಈ ವರ್ಷದ ಅದ್ದೂರಿ ಚಿತ್ರ ‘ಐ ಲವ್ ಯು’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬರುತ್ತಿರುವ ಬಗ್ಗೆ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಉಪೇಂದ್ರ ಸಿನಿಮಾಗಳು ಟಾಲಿವುಡ್ನಲ್ಲಿ ಹೆಸರು ಮಾಡಿದ ಕಾರಣ ಪ್ರಚಾರದ ಕೊನೆ ಹಂತವಾಗಿ ಮೊದಲಬಾರಿ ಅಲ್ಲಿನ ಜನರಿಗೆ ಅಂತಲೇ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ವಿಶಾಖಪಟ್ಟಣದಲ್ಲಿ ನಡೆಯಿತ್ತು. ಇದಕ್ಕಾಗಿ ಬೆಂಗಳೂರಿನ ಪತ್ರಕರ್ತರು ವೈಜಾಗ್ಗೆ ಪ್ರಯಾಣ ಬೆಳೆಸಿದ್ದರು. ಒಂದು ಕಡೆ ಕಡಲತೀರದ ಭೋರ್ಗರೆತ, ಬಿಸಿಲು, ಸೆಕೆಯಿಂದ ಮಾದ್ಯಮದವರು ತತ್ತರಿಸಿ ಹೋಗಿದ್ದರು. ನಿರ್ಮಾಪಕ ಮತ್ತು ನಿರ್ದೇಶಕ ....
ಮಂಡ್ಯಾ ಸೊಗಡಿನ ಸತ್ಯ ಘಟನೆ ಮಂಡ್ಯಾ ಸೊಗಡಿನಲ್ಲಿ ಬಿಡುಗಡೆಯಾದ ಅಯೋಗ್ಯ, ರಾಜಾಹುಲಿ ಚಿತ್ರಗಳು ಯಶಸ್ವಿಯಾದಂತೆ ಇದರ ಸಾಲಿಗೆ ‘ರಾಜಲಕ್ಷೀ’ ಚಿತ್ರವು ಸೇರ್ಪಡೆಯಾಗಿದೆ. ಕೆರಗೂಡು ಸಮೀಪ ಸಿದ್ದಗೌಡನ ಹೋಬ್ಲಿಯಲ್ಲಿ ನಡೆದಂತ ಘಟನೆಗಳನ್ನು ಹೆಕ್ಕಿಕೊಳ್ಳಲಾಗಿದೆ. ವೃತ್ತಿಯಲ್ಲಿ ವಕೀಲ, ಅಂಶಕಾಲಿಕವಾಗಿ ಸಹಾಯಕ ನಿರ್ದೇಶನ, ಸಾಹಿತ್ಯ, ಕತೆ ಬರೆಯುವ ಹವ್ಯಾಸ ರೂಡಿಸಿಕೊಂಡಿರುವ ಕಾಂತರಾಜ್ಗೌಡ ಸಿನಿಮಾಕ್ಕೆಂದು ಶ್ರೀಕಾಂತ್ ಆಗಿ ಗುರುತಿಸಿಕೊಂಡಿದ್ದಾರೆ. ಅವಕಾಶಕ್ಕಾಗಿ ಹದಿನೇಳು ಕತೆಗಳನ್ನು ನಿರ್ಮಾಪಕರಿಗೆ ಹೇಳಿದಾಗ ಎಲ್ಲವನ್ನು ತಿರಸ್ಕರಿಸಿದ್ದಾರೆ. ಕೊನೆಗೆ ಸಕ್ಕರೆ ನಾಡಿನ ಶೈಲಿಯ ....
ಉಧ್ಭವ, ಮತ್ತೆ ಉಧ್ಭವ ಆಯ್ತು ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವ ಚಿತ್ರ ಮುಂದುವರೆದ ಭಾಗದಂತೆ ‘ಮತ್ತೆ ಉಧ್ಭವ’ ಹೆಸರಿನೊಂದಿಗೆ ಬರುತ್ತಿದೆ. ಅನಂತನಾಗ್ ಮಾಡಿದ ಪಾತ್ರವನ್ನು ರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿ ಅಪ್ಪನಿಗೆ ಸಹಾಯ ಮಾಡುತ್ತಾರೆ. ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪ ಕಾಪೋರೇಶನ್ ಲೆವಲ್ದಲ್ಲಿ ಇದ್ದರೆ ಮಗ ವಿಧಾನಸೌದ ಸಂಪರ್ಕ ಬೆಳಸಿಕೊಂಡಿರುವ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಹಿರಿಮಗ. ವಕೀಲನಾಗಿ ಮಂಡ್ಯಾರವಿ ....
ವಿಜಯ್ ಚಿತ್ರಕ್ಕೆ ಸುದೀಪ್ ಶುಭಹಾರೈಕೆ ನಟನಾಗಿ ಗುರುತಿಸಿಕೊಂಡಿದ್ದ ದುನಿಯಾವಿಜಯ್ ‘ಸಲಗ’ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಕತೆ,ಚಿತ್ರಕತೆ ಬರೆದಿರುವುದು ವಿಶೇಷ. ನಡೆದಿದ್ದೇ ದಾರಿ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಬಂಡಿ ಕಾಳಮ್ಮ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಸುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ನಂತರ ಮಾತನಾಡುತ್ತಾ ವಿಜಯ್ ಹಳೇ ಪರಿಚಯವಾಗಿದ್ದು ಅವರ ಕಷ್ಟದ ದಿನಗಳಿಂದಲೂ ನೋಡುತ್ತಾ ಬಂದಿರುತ್ತೇನೆ. ನಿರ್ದೇಶಕನಾಗುವುದರ ಮೂಲಕ ಸರಿಯಾದ ದಾರಿಗೆ ಬಂದಿದ್ದಾರೆ. ಪ್ರತಿಯೊಬ್ಬ ನಿರ್ದೇಶಕನ ಹಿಂದೆ ಕಲಾವಿದ ಇರುವಂತೆ, ....
ಸುವರ್ಣ ಸುಂದರಿಗೆ ಗೆಲುವಿನ ಗರಿ ಕಳೆದ ವಾರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ ‘ಸುವರ್ಣ ಸುಂದರಿ’. ಈ ಚಿತ್ರದಲ್ಲಿ ಸುಂದರ ಬೊಂಬೆಯು ಶೀರ್ಷಿಕೆಯಾಗಿರುವುದನ್ನು ಜನರು ಇಷ್ಟಪಟ್ಟಿದ್ದಾರೆ. ಕ್ರಿ.ಶ ೧೫೦೮ ರಿಂದ ಪ್ರಸಕ್ತ ೨೦೧೯ರ ವರೆಗಿನ ನಾಲ್ಕು ತಲೆಮಾರು ಮತ್ತು ಕಾಲಘಟ್ಟದ ಕತೆಯಾಗಿರುವುದರಿಂದ ನೋಡುಗರಿಗೆ ಕೊನೆವರೆಗೂ ಕುತೂಹಲ ಹುಟ್ಟಿಸುವಲ್ಲಿ ನಮ್ಮ ಶ್ರಮ ಸಾರ್ಥಕವಾಗಿದೆ. ಕತೆಗೆ ಪೂರಕವಾಗಿ ೫೦ ನಿಮಿಷ ಗ್ರಾಫಿಕ್ಸ್ ಇರುವುದು ಪ್ರೇಕ್ಷಕರಿಗೆ ಬೋನಸ್ ಆಗಿದೆ. ಮಾದ್ಯಮದ ಕಡೆಯಿಂದ ಉತ್ತಮ ವಿಮರ್ಶೆ ಬಂದ ಕಾರಣ ಗಳಿಕೆಯಲ್ಲಿ ಚೇತರಿಕೆ ಕಂಡುಬರುತ್ತಿದೆ. ಅದಕ್ಕಾಗಿ ಥ್ಯಾಂಕ್ಸ್ ಹೇಳಲು ಭೇಟಿ ಮಾಡಲಾಗಿದೆ ....
ಬುಕ್ ಮೈ ಷೋದಿಂದ ಕನ್ನಡ ಚಿತ್ರಗಳಿಗೆ ಪೆಟ್ಟು ಪ್ಯಾರನಾರ್ಮಲ್ ಕತೆ ಹೊಂದಿರುವ ‘ಕಮರೊಟ್ಟು ಚೆಕ್ಪೋಸ್ಟ್’ ಶುಕ್ರವಾರದಂದು ಬಿಡುಗಡೆಗೊಂಡು ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದಾಗಿ ನಿರ್ದೇಶಕ ಎ.ಪರಮೇಶ್ ಸಂತೋಷ ಕೂಟದಲ್ಲಿ ಮಾತನಾಡುತ್ತಿದ್ದರು. ಅವರು ಹೇಳುವಂತೆ ವಿರಾಮದ ನಂತರ ಬರುವ ಸನ್ನಿವೇಶಗಳು ಇಷ್ಟವಾಗಿದೆ, ಕಾಡುತ್ತದೆಂದು ನೋಡುಗರು ಹೇಳುತ್ತಿದ್ದಾರೆ. ಹೊಸಬರ ಚಿತ್ರವೆಂದರೆ ಸಾಮಾನ್ಯವಾಗಿ ಇಳಿಕೆಯಾಗುವುದುಂಟು. ಆದರೆ ನಮ್ಮದು ಏರಿಕೆಯಾಗುತ್ತಿದೆ. ತುಮಕೂರಿನಲ್ಲಿ ಎರಡು ಪ್ರದರ್ಶನಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ಗಳಿಕೆ ಕಂಡು ....
ಪ್ರೀತಿಗೆ ಫಿದಾ ಆದರೆ ಬದುಕು ನಶ್ವರ
ಸಿನಿಮಾ, ಸ್ಟಾರ್ ನಟರು, ಹಾಡುಗಳು, ಪ್ರೀತಿ ಇವುಗಳಿಗೆ ಮಾರುಹೋಗುವುದನ್ನು ಮತ್ತೋಂದು ಭಾಷೆಯಲ್ಲಿ ‘ಫಿದಾ’ ಎಂದು ಕರೆಯುತ್ತಾರೆ. ಈಗ ಹೊಸಬರೇ ಸೇರಿಕೊಂಡು ಎರಡು ಭಾಷೆಯಲ್ಲಿ ಸಿದ್ದಪಡಿಸಿರುವ ಇದೇ ಹೆಸರಿನ ಚಿತ್ರವು ಸುಂದರ ಪ್ರೇಮಕತೆ ಜೊತೆಗೆ ಫ್ಯಾಮಲಿ ಸೆಂಟಿಮೆಂಟ್ ಇರಲಿದೆ. ನಿನ್ನನ್ನು ನೋಡಿ.
ಮೊದಲ ರಾತ್ರಿಯ ಮಹಾಕಾವ್ಯ ಮಜ್ಜಿಗೆ ಹುಳಿ ಹಾಸ್ಯ ಚಿತ್ರ ‘ಮಜ್ಜಿಗೆ ಹುಳಿ’ ಒಳ್ಳೆ ಬಾಡೂಟ ಗುರು ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಸನಿಹದಲ್ಲಿ ತೆರೆಕಾಣುತ್ತಿರುವುದರಿಂದ ಸಿನಿಮಾದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ಎರಡನೆ ಬಾರಿ ಮಾದ್ಯಮದವರನ್ನು ತಂಡವು ಭೇಟಿ ಮಾಡಿತು. ರಚನೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿರುವ ರವೀಂದ್ರಕೊಟಕಿ ಮಾತನಾಡಿ ಒಂದು ಕೋಣೆಯೊಳಗೆ ನಡೆಯುವ ಕತೆಯಲ್ಲಿ ೨೮ ಪಾತ್ರಗಳು ಬರುತ್ತವೆ. ನವಜೋಡಿಗಳು ಮೊದಲ ರಾತ್ರಿ ಸುಖವನ್ನು ಅನುಭವಿಸಲು ಗೋವಾದ ಹೋಟೆಲ್ಗೆ ಬಂದಾಗ ಅಲ್ಲಿ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ....
ಎಸ್.ಎ.ಚಿನ್ನೆಗೌಡರ ಹುಟ್ಟುಹಬ್ಬ ಮತ್ತು ವಿವಾಹ ಮಹೋತ್ಸವ
ಶಕ್ತಿ ಕೇಂದ್ರವನ್ನು ವಿಶ್ವವಿದ್ಯಾಲಯ ಮಾಡಬೇಕು - ಉಪೇಂದ್ರ ಉಪೇಂದ್ರ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಗ್ಯಾಪ್ನಲ್ಲಿ ಪ್ರಜಾಕೀಯ ಕುರಿತಂತೆ ಒಂದು ಡೈಲಾಗ್ ಹೇಳಿ ಮಾತು ಮುಗಿಸುತ್ತಾರೆ. ಲಿಂಗರಾಜ್ ಸಾರಥ್ಯದಲ್ಲಿ ‘ಸಿನಿಮಾ-ಟಿವಿ ಡೈರಕ್ಟರಿ’ ಮಾಹಿತಿ ಪುಸ್ತಕದ ೮ನೇ ಆವೃತ್ತಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಪ್ರಥಮ ಪ್ರತಿಯನ್ನು ಬಿಡುಗಡೆ ಮಾಡಿದ್ದು ನೆನಪು ಇದೆ. ಇಂದು ಸಂತೋಷ ಪಡುವ ವಿಷಯವಾಗಿದೆ. ಆದರೆ ಕೊನೆ ಪ್ರಯತ್ನವೆಂದು ಹೇಳಿರುವುದು ಸರಿಯಲ್ಲ. ಎಲ್ಲಿ ಮೊದಲು ಇರುತ್ತದೆಯೋ ಅಲ್ಲಿ ಕೊನೆ ಇರುತ್ತೆ. ....
ಧಾರವಾಹಿ ಸ್ಟಾರ್ ನಟ ಮತ್ತು ಅಭಿಮಾನಿಯ ಕಥನ ರಂಗಭೂಮಿ, ರಿಯಾಲಿಟಿ, ಸಿನಿಮಾರಂಗ ಅಂಶಗಳನ್ನು ತೆಗೆದುಕೊಂಡ ಚಿತ್ರಗಳು ಬಂದಿರುವುದು ತಿಳಿದಿರುವ ಸಂಗತಿಯಾಗಿದೆ. ಇಲ್ಲೋಂದು ತಂಡವು ತಮ್ಮದು ಅದ್ಬುತ, ವಿನೂತನ ಅಲ್ಲದ, ಹೊಸತನದ ಏಳೆ ಹೊಂದಿರುವ ‘ಫ್ಯಾನ್’ ಚಿತ್ರದ ಕತೆಯಾಗಿದೆ ಎಂಬುದಾಗಿ ಹೇಳಿಕೊಂಡಿದೆ. ಪ್ರತಿ ದಿನ ಕಡಿಮೆ ಎಂದರೂ ಎಲ್ಲಾ ಚಾನಲ್ಗಳಲ್ಲಿ ೫೦ಕ್ಕೂ ಹೆಚ್ಚು ಸೀರಿಯಲ್ಗಳು ಪ್ರಸಾರವಾಗುತ್ತಿದ್ದು, ಇದನ್ನು ನೋಡುವ ಒಂದು ಬಳಗವಿದೆ. ಫೇಸ್ಬುಕ್, ವ್ಯಾಟ್ಸ್ಪ್, ಟ್ವಿಟರ್ ಮೂಲಕ ಇವುಗಳ ಕುರಿತಂತೆ ಪ್ರತಿಕ್ರಿಯೆಗಳು, ವಿಮರ್ಶೆ, ಕಟುಟೀಕೆಗಳು ಬರುತ್ತಲೆ ....
ಲಯನ್ಸ್ ಕ್ಲಬ್ಗೆ ಚಂದನವನದ ತಾರೆಯರು