ನವೆಂಬರ್ ನಲ್ಲಿ ಆಕ್ಟ್ 1978 ತೆರೆಗೆ ಮುಕ್ಕಾಲು ವರ್ಷವನ್ನು ಕೊರೊನಾ ವೈರಸ್ ಹುರಿದು ಮುಕ್ಕಿದೆ. ಜಗತ್ತು ತಲ್ಲಣಗೊಂಡಿದೆ. ಲಾಕ್ ಮತು ್ತ ಅನ್ ಲಾಕ್ ನಡುವಿನ ಸರ್ಕಸ್ ಇನ್ನೂ ನಡೆಯುತ್ತಲೇ ಇದೆ. ಈ ಆತಂಕವನ್ನು ಕೊಂಚ ಬದುಕಿಟು ್ಟ, ಬದುಕು ಸಾಗುತ್ತಿದೆ. ನಾವೂ ಸಾಗಬೇಕಿದೆ. ಕೊರೊನಾದಿಂದಾಗಿ ಸಿನಿಮಾ ರಂಗ ಕೂಡ ತನ್ನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿತ್ತು. ಈಗ ಒಂದೊಂದೆ ಸಿನೆಮಾ ಕೆಲಸಗಳು ಶುರುವಾಗಿವೆ. ಥಿಯೇಟರ್ ಬಾಗಿಲು ತೆರೆದಿವೆ. ಇತ್ತೀಚೆಗಷ್ಟೇ ನಮ್ಮ ಆಕ್ಟ್ 1978 ಸಿನೆಮಾ ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದೇ `ಯು’ ಪ್ರಮಾಣ ಪತ್ರ ಪಡೆದಿದ್ದು, ಇದನ್ನು ಬಿಡುಗಡೆ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಮಾಡಿದೆವು. ಒಟ್ಟಾರೆ ನಮ್ಮ ತಂಡ ಹಾಗೂ ನಿರ್ಮಾಪಕರ ....
ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ "ಪದವಿಪೂರ್ವ" ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ’ಆಳ್ವಾಸ್ ಕಾಲೇಜ್’ನ ಇಂಜಿನಿಯರಿಂಗ್ ವಿದ್ಯಾರ್ಥಿನಿ ’ಯಶಾ ಶಿವಕುಮಾರ್’ " ಕನ್ನಡ ಚಿತ್ರರಂಗವನ್ನು ಪ್ರವೇಶಿಸಲು ಸಜ್ಜಾಗಿದ್ದಾಳೆ. 2019 ವರ್ಷದಲ್ಲಿ ’ಫ್ಯಾಶನ್ ಎಬಿಸಿಡಿ’ ಸಂಸ್ಥೆ ಆಯೋಜಿಸಿದ್ದ "ಮಿಸ್ ಬೆಂಗಳೂರು 2019 " "ಮಿಸ್ ಕರ್ನಾಟಕ ಇಂಟರ್ನ್ಯಾಷನಲ್ 2019" ಹಾಗೂ ಮುಂಬೈನಲ್ಲಿ ನಡೆದ "ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019" ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಮೂಲಕ ಅನೇಕ ಫ್ಯಾಶನ್ ಕಿರೀಟಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಈಕೆ ....
*ಫ್ಯಾಂಟಸಿ ಪ್ರಪಂಚದೊಳಗೊಂದು ವಿಸ್ಮಯ ಕಥೆ* ಹೊಸಬರ ಹೊಸ ಹೊಸ ಆವಿಷ್ಕಾರಗಳು ಸ್ಯಾಂಡಲ್ವುಡ್ನಲ್ಲಿ ಸೃಷ್ಟಿಯಾಗುತ್ತಿವೆ. ಕಾಲ್ಪನಿಕ ಕಥೆಗಳನ್ನು ಹೆಣೆದು, ಅದಕ್ಕೆ ಫ್ಯಾಂಟಸಿ ಸ್ಪರ್ಶ ಕೊಡುವ ಕೆಲಸ ನಡೆಯುತ್ತಿದೆ. ಇದೀಗ ಅಂಥದ್ದೇ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದು ಚಂದನವನದಲ್ಲಿ ಸಿದ್ಧವಾಗಿದೆ. ಆ ಚಿತ್ರದ ಹೆಸರು ‘ಫ್ಯಾಂಟಸಿ’. ಪವನ್ ಡ್ರೀಮ್ ಫಿಲಂಸ್ ಲಾಂಛನದಲ್ಲಿ ಸಿದ್ಧವಾಗಿರುವ ‘ಫ್ಯಾಂಟಸಿ’ ಚಿತ್ರಕ್ಕೆ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಪವನ್ ಕುಮಾರ್ ಆರ್. ನಿರ್ದೇಶಕರ ತಂದೆ ತಾಯಿಯವರಾದ ಎಂ. ಮಹಾದೇವಿ, ಟಿ. ರಂಗಸ್ವಾಮಿ ಸಹ- ನಿರ್ಮಾಪಕರಾಗಿದ್ದಾರೆ. ಶೀರ್ಷಿಕೆಗೆ ....
ಪ್ರಯೋಗ್ ಸ್ಟುಡಿಯೋ ಸಂಸ್ಥೆಯ ಓನ್ಲಿ ಕನ್ನಡ (Only ಕನ್ನಡ ) ಕನ್ನಡದ ಓ.ಟಿ.ಟಿ. ಸಧ್ಯದಲ್ಲೆ ನಾಡಿನ ಜನರ ಮುಂದೆ ತರಲು ಸನ್ನದ್ಧರಾಗಿದ್ದಾರೆ ಶ್ರೀ ಪ್ರದೀಪ್ ಮುಳ್ಳೂರು ಹಾಗು ಶ್ರೀಮತಿ ರಜನಿ ಪ್ರದೀಪ್. ಕನ್ನಡದ ಸಿನಿಮಾ ಹಾಗೂ ಕನ್ನಡದ ಕಲಾವಿದರಿಗೆ ಆರ್ಥಿಕ ಅನುಕೂಲಗಳನ್ನು, ಅವಕಾಶಗಳನ್ನು ಒದಗಿಸುವ ಮೂಲಕ ಕನ್ನಡ ರಾಜ್ಯೋತ್ಸವ ನವೆಂಬರ್ ೧ರಿಂದ ಕನ್ನಡಕ್ಕಾಗಿ ಕನ್ನಡದ ಕಲಾವಿದರಿಗೆ ಕನ್ನಡದ ಕಲಾರಸಿಕರ ಮನ ಮನೆಗಳಲ್ಲಿ ರಂಜಿಸಲು ಸಿದ್ದರಾಗುತ್ತಿದ್ದಾರೆ. ಕನ್ನಡದ ಸಿನಿಮಾ,ನಾಟಕ ಸಂಗೀತ ಸಾಹಿತ್ಯ ಹಾಗೂ ಕರುನಾಡಿನ ಎಲ್ಲಾ ಕಲಾಪ್ರಕಾರಗಳನ್ನು ಹಳ್ಳಿಯಿಂದ ದಿಲ್ಲಿವರೆಗೆ, ದೇಶದ ಹಾಗೂ ವಿದೇಶದ ಎಲ್ಲಾ ಕನ್ನಡ ಪ್ರೇಮಿಗಳಿಗೆ ಕನ್ನಡದ ಕಂಪನ್ನು ಮತ್ತೆ ಪಸರಿಸಲು ....
ನವೆಂಬರ್ ನಲ್ಲಿ ’ಮುಖವಾಡ ಇಲ್ಲದವನು 84' ಚಿತ್ರ ಬಿಡುಗಡೆ.
ಕೆಲವು ಚಿತ್ರಗಳ ಶೀರ್ಷಿಕೆ ಕೇಳಿದರೆ ಆ ಚಿತ್ರ ನೋಡಬೇಕೆಂಬ ಕುತೂಹಲ ಹುಟ್ಟಿಸುತ್ತದೆ. ಆ ಸಾಲಿಗೆ ಸೇರ್ಪಡೆಯಾಗಲಿದೆ ’ಮುಖವಾಡ ಇಲ್ಲದವನು 84' ಚಿತ್ರ.
ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸೆನ್ಸಾರ್ ಕೂಡ ಮುಗಿದಿದೆ. ನವೆಂಬರ್ ನಲ್ಲಿ ತೆರೆಗೆ ಬರಲಿದೆ.
'ಒಬ್ಬ ಮನುಷ್ಯ ತಾನು ಹುಟ್ಟಿದಾಗಿನಿಂದ ಸಾಯುವ ತನಕ ಯಾವಯಾವ ರೀತಿ ಮುಖವಾಡ ಹಾಕುತ್ತಾನೆ’ ಎನ್ನುವುದೇ ಚಿತ್ರದ ಕಥಾಹಂದರ.
ತೆರೆಗೆ ಬರಲು ಸಂಪೂರ್ಣ ಸಿದ್ದವಾಗಿರುವ ಈ ಚಿತ್ರದ ಹಾಡು ಹಾಗೂ ಟ್ರೇಲರ್ ಸಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.
ಜಿ-9 ಕಮ್ಯುನಿಕೆಷನ್ ಮೀಡಿಯಾ ಆಂಡ್ ಎಂಟರಟೆನಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಅಮೃತ್ ಅಪಾರ್ಟ್ಮಮೆಂಟ್ಸ್” ಪೋಸ್ಟ್ ಪ್ರೊಡಕ್ಷನ್ ಕೆಲಸಗಳನೆಲ್ಲಾ ಮುಗಿಸಿಕೊಂಡು, ಸೆನ್ಸಾರ್ ಮನೆಗೆ ತಲುಪಿದೆ. ಸಿನೆಮಾ ತಂಡ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಗುರುರಾಜ ಕುಲಕರ್ಣಿ (ನಾಡಗೌಡ) ರಚಿಸಿ ನಿರ್ಮಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ತಾರಕ ಪೊನ್ನಪ್ಪ, ಊರ್ವಶಿ ಗೋವರ್ಧನ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ವಿಶಿಷ್ಟ ನಟನೆಗೆ ಹೆಸರಾಗಿರುವ ರಾಜ್ಯ ಪ್ರಶಸ್ತಿ ವಿಜೇತ, ಬಾಲಾಜಿ ಮನೋಹರ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಮುಖ ಪ್ರತಿಭೆಯ ಸಂಪತ ಕುಮಾರ ತಮ್ಮ ಎಂದಿನ ನೈಜ ನಟನೆಯಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಾನಸಾ ಜೋಷಿ ಪೋಲಿಸ್ ....
'ಬಡವ ರಾಸ್ಕಲ್’ ಚಿತ್ರೀಕರಣ ಪೂರ್ಣ. ಕಾರ್ಮಿಕರಿಗೆ ಉಡುಗೊರೆ ನೀಡಿ ಕುಂಬಳಕಾಯಿ ಒಡೆದ ಡಾಲಿ. ಡಾಲಿ ಧನಂಜಯ ನಾಯಕನಾಗಿ ನಟಿಸುತ್ತಿರುವ ’ಬಡವ ರಾಸ್ಕಲ್’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಬೆಂಗಳೂರು, ಮೈಸೂರು ಹಾಗೂ ಪಾಂಡವಪುರದಲ್ಲಿ ಚಿತ್ರೀಕರಣ ನಡೆದಿದೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗುತ್ತದೆ. ಆದರೆ ಚಿತ್ರಕ್ಕಾಗಿ ದುಡಿದವರನ್ನು ನೆನಪಿಸಿಕೊಳ್ಳುವುದು ವಿರಳ. ಆದರೆ ’ಬಡವ ರಾಸ್ಕಲ್’ ಚಿತ್ರದ ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ ಅವರು ಚಿತ್ರೀಕರಣದ ಕೊನೆಯ ದಿವಸ ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನಬಳಕೆಯ ವಸ್ತುಗಳಾದ ಕುಕ್ಕರ್, ತವ, ಹಾಟ್ ವಾಟರ್ ಬಾಟಲ್ ಮುಂತಾದ ....
‘ಯೆಲ್ಲೋ ಗ್ಯಾಂಗ್ಸ್’ ವಿಭಿನ್ನ ಸ್ಟುಡಿಯೊಸ್ ನಿರ್ಮಾಣದಲ್ಲಿ ರವೀಂದ್ರ ಪರಮೇಶ್ವರಪ್ಪ ಅವರ ರಚನೆ ಮತ್ತು ನಿರ್ದೇಶನವಿರುವ ಕ್ರೈಂ-ಥ್ರಿಲ್ಲರ್ ಕನ್ನಡ ಚಲನಚಿತ್ರ. ಎರಡು ಹಂತಗಳಲ್ಲಿ ಒಟ್ಟು ೩೫ ದಿನಗಳ ಕಾಲ ನಡೆದ ಚಿತ್ರೀಕರಣವು ಸಂಪೂರ್ಣವಾಗಿ ಬೆಂಗಳೂರಿನಲ್ಲಿ ನಡೆದಿದೆ. ಛಾಯಾಗ್ರಹಣವನ್ನು ಸುಜ್ಞಾನ್ ಅವರು ನಿರ್ವಹಿಸಿದ್ದಾರೆ. ಚಿತ್ರಕ್ಕೆ ರೋಹಿತ್ ಸೋವರ್ ಅವರ ಸಂಗೀತ, ಸುರೇಶ್ ಆರ್ಮುಗಂ ಅವರ ಸಂಕಲನ ಮತ್ತು ಪ್ರವೀಣ್ ಕುಮಾರ್ ಜಿ ಅವರ ಸಂಭಾಷಣೆ ಇದೆ. ಮನೋಜ್ ಪಿ, ಜಿ.ಎಂ.ಆರ್ ಕುಮಾರ್ (ಕೆವಿಜಿ) ಹಾಗೂ ಜೆ.ಎನ್.ವಿ, ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ತಾರಾಗಣದಲ್ಲಿ ಬಲರಾಜ್ವಾಡಿ, ನಾಟ್ಯ ರಂಗ, ನವೀನ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಸತ್ಯ ....
ಅಂದು ಬಾಲ ನಟಿ ಕೀರ್ತನ ಇಂದು ಐ.ಎ.ಎಸ್. ಅಧಿಕಾರಿ ಕೀರ್ತನ. IAS ಪರೀಕ್ಷೆಯಲ್ಲಿ 167ನೇ ಟಾಪರ್ ಆಗಿ ಉತ್ತೀರ್ಣರಾಗಿದ್ದಾರೆ. ಕಲೆ ಅನ್ನೋದು ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎನ್ನುವುದು ನಾನ್ನುಡಿ ಹಾಗೂ ಹಳೆಯ ಮಾತು. ಇದು ನಿಜ ಕೂಡ ಆದರೆ ಅದೆಷ್ಟೋ ಜನ ಕಲೆಯ ಬರ ಸೆಳೆತಕ್ಕೆ ಸೂಜಿಗಲ್ಲಿನಂತೆ ಆಕರ್ಷಿತರಾಗಿ ಅದನ್ನು ಮೈಗೂಡಿಸಿಕೊಂಡು ತಲೆಯ ಮೇಲೆ ಹೊತ್ತು ಮೆರೆಸಿ ಉತ್ತುಂಗದ ಮಜಲನ್ನು ಏರಿದವರು ಇದ್ದಾರೆ, ಹಾಗೆಯೇ ಬಣ್ಣದ ಲೋಕದ ಪಾತರಗಿತ್ತಿಯಂತ ಆಸೆಯ ಕಡಲಿಗೆ ಧುಮುಕಿ ಈಜಲಾಗದೇ ಮುಳುಗಿ ಮತ್ತೆ ಮೇಲೇಳದವರು ಇದ್ದಾರೆ!. ಹಾಗೆಯೇ ಬಾಲ ಕಲಾವಿದರು ಸಿನಿಮಾಲೋಕಕ್ಕೆ ಕಾಲಿಟ್ಟು ಅಲ್ಲಿನ ಆಕರ್ಷಣೆಗೆ ....
ಅಮ್ಮಾ ಟಾಕೀಸ್ ಬಾಗಲಕೋಟೆ ಲಾಂಛನದಲ್ಲಿ, ರತ್ನಮಾಲಾ ಬಾದರದಿನ್ನಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಹಾಸ್ಯ ನಟ *ಬಿರಾದಾರ್ ಮುಖ್ಯ ಭೂಮಿಕೆಯ* *ನೈಂಟಿ ಹೊಡಿ ಮನೀಗ್ ನಡಿ* ಚಿತ್ರದ *ಟೈಟಲ್ ಸಾಂಗ್* ಚಿತ್ರೀಕರಣವು ಇತ್ತೀಚೆಗೆ ಬೆಂಗಳೂರಿನ *ಎಚ್ ಎಮ್ ಟಿ* ಯಲ್ಲಿ ನೆರವೇರಿತು. ಕಿರಣ್ ಶಂಕರ್ ಸಂಗೀತದ ಈ ಹಾಡಿಗೆ ಸಾಹಿತ್ಯ ಚತುರ ಡಾ// ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ. ಇನ್ನು ಚುಟು-ಚುಟು ಖ್ಯಾತಿಯ ಭೂಷಣ್ ಕೊರಿಯೋಗ್ರಫಿ ಮಾಡಿದ್ದು, ಕೃಷ್ಣ ನಾಯ್ಕರ್ ಛಾಯಾಗ್ರಹಣ ಮಾಡಿದ್ದಾರೆ. ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಟೈಟಲ್ ....
ವಸಿಷ್ಠ ಸಿಂಹ ಅಭಿನಯದ ’ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಗೆ ಭರ್ಜರಿ ಪ್ರಶಂಸೆ.
ವಸಿಷ್ಠ ಎನ್ ಸಿಂಹ ನಾಯಕರಾಗಿ ನಾಲ್ಕು ಪಾತ್ರಗಳಲ್ಲಿ ನಟಿಸಿರುವ ’ಕಾಲಚಕ್ರ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ.
ರಶ್ಮಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ’ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಅಪಾರ ಮೆಚ್ಚುಗೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ , ವಸಿಷ್ಠ ಸಿಂಹ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.
ಈ ಹಿಂದೆ ಕಿಚ್ಚ ಸುದೀಪ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಪ್ರಶಂಸೆ ಮಾತುಗಳಾಡಿದ್ದರು.
ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ "ಪದವಿಪೂರ್ವ" ಚಿತ್ರಕ್ಕೆ ನಾಯಕಿಯಾಗಿ ’ಅಂಜಲಿ ಅನೀಶ್’ ಆಯ್ಕೆಯಾಗಿದ್ದು, ಇವರು ’ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ 2020' ಸ್ಪರ್ಧೆಯಲ್ಲಿ ಗೆದ್ದು, ’ನ್ಯಾಷನಲ್ ಟೈಮ್ಸ್ ಫ್ರೆಶ್ ಫೇಸ್ ಆಫ್ ದಿ ಇಯರ್ 2020'ಯ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಇವರು ಶಿಕಾಗೋದ ’ಸೆಕೆಂಡ್ ಸಿಟಿ’ ಆಕ್ಟಿಂಗ್ ಸ್ಕೂಲ್ ಹಾಗು ’ಅನುಪಮ್ ಖೇರ್’ ಆಕ್ಟಿಂಗ್ ಸ್ಕೂಲ್ನಲ್ಲಿ ನಟನೆಯ ತರಬೇತಿಯನ್ನು ಪಡೆದುಕೊಂಡಿದ್ದು ಕೆಲ ಬಾಲಿವುಡ್ ಮತ್ತು ಕನ್ನಡ ಸಿನಿಮಾಗಳಿಗೆ ಸಹಾಯಕ ನಿರ್ದೇಶಕಿಯಾಗಿಯೂ ಸಹ ಕೆಲಸ ಮಾಡಿದ್ದಾರೆ.
ನವೆಂಬರ್ ನಲ್ಲಿ ’ಸ್ಪೂಕಿ ಕಾಲೇಜ್’ ಆರಂಭ. 'ರಂಗಿತರಂಗ’, ’ಅವನೇ ಶ್ರೀ ಮನ್ನಾರಾಯಣ’ ನಿರ್ಮಾಪಕರಿಂದ ಮತ್ತೊಂದು ವಿಭಿನ್ನ ಚಿತ್ರ. 'ರಂಗಿತರಂಗ’ ಹಾಗೂ ’ಅವನೇ ಶ್ರೀಮನ್ನಾರಯಣ’ ಭರ್ಜರಿ ಯಶಸ್ಸು ಕಂಡ ಚಿತ್ರಗಳು. ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಚಿತ್ರಗಳನ್ನು ನಿರ್ಮಿಸಿದ್ದ ಹೆಚ್.ಕೆ.ಪ್ರಕಾಶ್ ಅವರು ’ಸ್ಪೂಕಿ ಕಾಲೇಜ್’ ಎಂಬ ಮತ್ತೊಂದು ವಿಭಿನ್ನ ಚಿತ್ರ ನಿರ್ಮಿಸುತ್ತಿದ್ದಾರೆ ತಮ್ಮದೇ ಆದ ಶ್ರೀದೇವಿ ಎಂಟರ್ ಟೈನರ್ ಸಂಸ್ಥೆ ಮೂಲಕ. ಈ ಚಿತ್ರದ ಚಿತ್ರೀಕರಣ ನವೆಂಬರ್ ಮೊದಲವಾರದಲ್ಲಿ ಧಾರವಾಡದ ೧೦೩ ವರ್ಷಗಳ ಇತಿಹಾಸವಿರುವ ಕಾಲೇಜೊಂದರಲ್ಲಿ ಆರಂಭವಾಗಲಿದೆ. ದ್ವಿತೀಯ ಹಂತದ ಚಿತ್ರವು ದಾಂಡೇಲಿ ದಟ್ಟ ಅರಣ್ಯ ಪ್ರದೇಶದಲ್ಲಿ ....
*ಪ್ಲಶ್ ಎಂಬುದು ವೆಡ್ಡಿಂಗ್ ಸೂಪರ್ ಮಾರ್ಕೇಟ್ ಥರ; ಸಂತೋಷಿ ಶ್ರೀಕರ್* *ಬೆಂಗಳೂರು*: ಹನಿಮೂನ್ ಎಕ್ಸ್ಪ್ರೆಸ್ ಮತ್ತು ತೆನಾಲಿ ರಾಮ ಸಿನಿಮಾ ಮೂಲಕ ಕನ್ನಡಕ್ಕೆ ಆಗಮಿಸಿದ್ದೆ. ಜಗ್ಗೇಶ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದೆ. ಇದೀಗ ಇದೇ ಕರ್ನಾಟಕದ ಬೆಂಗಳೂರಿನಲ್ಲಿ ಹೊಸ ಉದ್ಯಮ ಆರಂಭಿಸುತ್ತಿದ್ದೇನೆ. ಕಲಾವಿದರಿಗೆ ನಟನೆಯೊಂದೇ ಶಾಶ್ವತ ಅಲ್ಲ. ಅದರ ಜತೆಗೆ ಬೇರೆ ಕ್ಷೇತ್ರದತ್ತಲೂ ಗಮನಹರಿಸಬೇಕು. ಹಾಗಾಗಿ ಸೌಂದರ್ಯ ಕ್ಷೇತ್ರವನ್ನು ಆಯ್ದುಕೊಂಡು ಇದೀಗ ಪ್ಲಶ್ ಹೆಸರಿನ ಶಾಖೆಯನ್ನು ಬೆಂಗಳೂರಿನಲ್ಲಿ ತೆರೆದಿದ್ದೇನೆ. ವೆಡ್ಡಿಂಗ್ ಸೂಪರ್ ಮಾರ್ಕೆಟ್ ರೀತಿಯಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲ ಸೇವೆಗಳು ಪ್ಲಶ್ ಅಡಿಯಲ್ಲಿ ಸಿಗಲಿವೆ ಎಂದು ನಟಿ ಸಂತೋಷಿ ....
ತ್ರಿಮೂರ್ತಿ ಸನ್ನಿಧಿಯಲ್ಲಿ ’ವಿಧಿಬರಹ’ ಆರಂಭ.
ನಾಡಹಬ್ಬ ದಸರಾ ಮೊದಲ ದಿನ ’ವಿಧಿಬರಹ’ ಚಿತ್ರದ ಮುಹೂರ್ತ ಸಮಾರಂಭ ಕನಕಪುರ ರಸ್ತೆಯಲ್ಲಿರುವ ತ್ರಿಮೂರ್ತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಿರ್ಮಾಪಕ ಮಂಜುನಾಥ್.ಈ ಅರಂಭ ಫಲಕ ತೋರಿದರು.
ಎಲ್ಲರ ಜೀವನದದಲ್ಲೂ ವಿಧಿ ಒಂದಲ್ಲ ಒಂದು ರೀತಿ ಆಟವಾಡುತ್ತದೆ ಎಂಬ ಕಥಾಹಂದರ ’ವಿಧಿಬರಹ’ ಚಿತ್ರದಲ್ಲಿದೆ.
ಡಿಸೆಂಬರ್ ೨೪ಕ್ಕೆ ಭೂಮಿಕಾ ಆಗಮನ
ನೈಜ ಘಟನೆ ಆಧರಿಸಿದ " ಡಿಸೆಂಬರ್-೨೪" ಚಿತ್ರಕ್ಕೆ ಎರಡನೇ ಹಂತದ ಚಿತ್ರೀಕರಣ ಸದ್ಯದಲ್ಲಿಯೇ ಆರಂಭವಾಗಲಿದೆ. ನಾಗರಾಜ್ ಎಂಜಿ ಗೌಡ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರಕ್ಕೆ ಎ.ದೇವು ಹಾಸನ್, ವಿ.ಬೆಟ್ಟೇಗೌಡ ಬಂಡವಾಳ ಹಾಕಿದ್ದಾರೆ. ಉಸಿರಾಟದ ಸಾಯುತ್ತಿರುವ ಮಕ್ಕಳನ್ನು ಉಳಿಸಿಕೊಳ್ಳಲು ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವ ಘಟನೆಯನ್ನು ಮುಂದಿಟ್ಟುಕೊಂಡು ಅದಕ್ಕೆ ಸಿನಿಮಾ ರೂಪ ನೀಡಲಾಗುತ್ತದೆ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಗೌಡ.
“ಕ್ರಿಟಿಕಲ್ ಕೀರ್ತನೆಗಳು” ಚಿತ್ರಕ್ಕೆ ನವೀನ್ ಸಜ್ಜು ಹಾಡಿದ ಹಾಡು ಬಿಡುಗಡೆ
ಕೇಸರಿ ಫಿಲಂ ಕ್ಯಾಪ್ಚರ್, ಲಾಂಛನದಲ್ಲಿ ಕುಮಾರ್ ಮತ್ತು ಸ್ನೇಹಿತರು ಸೇರಿ ನಿರ್ಮಿಸಿರುವ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಕ್ಕೆ ‘ಐಪಿಎಲ್ಲ್ಲು ಎತ್ಕೊಂಡೆ ಕಾಲು ಮುಂದೇನ್ ಮಾಡ್ಲಿ ಊರ್ ಬಿಡ್ಲ ಹೇಳು ಐಪಿಎಲ್ ನಮ್ಮೆಲ್ಲರ ಬಾಳು ಜೂಜಲ್ಲಿ ಬಿದ್ರೆ ಬಾಳೆಲ್ಲ ಗೋಳು” ಎಂಬ ಹಾಡು ಆನಂದ್ ಆಡಿಯೋ ಯೂಟ್ಯೂಬ್ನಲ್ಲಿ ಬಿಡುಗಡೆಗೊಂಡು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಗೀತೆಯನ್ನು ನವೀನ್ ಸಜ್ಜು ಹಾಡಿದ್ದಾರೆ.
ಯುಎಫ್ಓ ಕ್ಯೂಬ್ಗೆ ಎರಡು ವರ್ಷ ಶುಲ್ಕ ಬೇಡ ಸರ್ಕಾರವು ಚಿತ್ರ ಪ್ರದರ್ಶಿಸಲು ಅನುಮತಿ ನೀಡಿದೆ. ಆದರೆ ಯುಎಫ್ಓ ಕ್ಯೂಬ್ಗೆ ವೆಚ್ಚ ಭರಿಸಲು ನಿರ್ಮಾಪಕರ ಬಳಿ ಹಣವಿಲ್ಲ. ಆದಕಾರಣ ಕ್ಯೂಬ್ ಸಂಸ್ಥೆಯವರು ಎರಡು ವರ್ಷಗಳ ಕಾಲ ನಿರ್ಮಾಪಕರ ಬಳಿ ಹಣ ಕೇಳಬಾರದು. ಈ ಮೂಲಕ ಚಿತ್ರ ಪ್ರದರ್ಶಿಸಲು ಅನುವು ಮಾಡಿಕೊಡಬೇಕು ಎಂದು ನಿನ್ನೆ ನಡೆದ ಸಭೆಯಲ್ಲಿ ನಿರ್ಮಾಪಕರು ಬೇಡಿಕೆ ಇಟ್ಟಿದಾರೆಂದು ಸಂಘದ ಅಧ್ಯಕ್ಷ ಪ್ರವೀಣ್ಕುಮಾರ್ ಸುದ್ದಿಗೋಷ್ಟಿಯಲ್ಲಿ ವಿಚಾರ ತಿಳಿಸಿದರು. ವಾಣಿಜ್ಯ ಮಂಡಳಿ ಮುಂದೆ ಸುಮಾರು ೨೮೦ ಚಿತ್ರಗಳು ಬಿಡುಗಡಗೆ ....
*ಇದೇ ಶುಕ್ರವಾರ ಚಿತ್ರಮಂದಿರದಲ್ಲಿ ಚಿರು ’ಶಿವಾರ್ಜುನ’* ಲಾಕ್ಡೌನ್ಗೆ ಕೆಲವೇ ದಿನಗಳ ಮುನ್ನ ಬಿಡುಗಡೆ ಆಗಿದ್ದ ಚಿರಂಜೀವಿ ಸರ್ಜಾ ನಾಯಕತ್ವದ ಶಿವಾರ್ಜುನ ಸಿನಿಮಾ ಇದೀಗ ಮರು ಬಿಡುಗಡೆಗೆ ಸಿದ್ಧವಾಗಿದೆ. ಅ.16ರರ ಶುಕ್ರವಾರ ರಾಜ್ಯಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿರಂಜೀವಿಯನ್ನು ಮತ್ತೆ ಕಣ್ತುಂಬಿಕೊಳ್ಳಬಹುದು. ‘ಶಿವಾರ್ಜುನ’ ಸಿನಿಮಾ ಮರು ಬಿಡುಗಡೆ ನಿಮಿತ್ತ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ಕರೆದ ಇಡೀ ತಂಡ, ಮರುಬಿಡುಗಡೆಯ ರೂಪರೇಷೆ ಬಗ್ಗೆ ಮಾಹಿತಿ ನೀಡಿತು. ಮೊದಲಿಗೆ ಚಿತ್ರದ ನಿರ್ಮಾಪಕ ಶಿವಾರ್ಜುನ ಮಾತನಾಡಿ, ‘ಇದು ನಾನು ನಿರ್ಮಾಣ ಮಾಡಿದ ಮೊದಲ ಸಿನಿಮಾ. ಮಾ. 12ಕ್ಕೆ ಅದ್ಧೂರಿಯಾಗಿ ಬಿಡುಗಡೆ ಮಾಡಿ ಒಳ್ಳೇಯ ....
ಈ ವಾರ ಶಿವಾಜಿ ಸುರತ್ಕಲ್ ( ಕೇಸ್ ಆಫ್ ರಣಗಿರಿ ರಹಸ್ಯ) ಮರು ಬಿಡುಗಡೆ.
ಲಾಕ್ ಡೌನ್ ಆರಂಭಕ್ಕೂ ಕೆಲವು ದಿನಗಳ ಮುಂಚೆ ತೆರೆ ಕಂಡು, ಎಲ್ಲರ ಮನಸೂರೆಗೊಂಡ ಶಿವಾಜಿ ಸುರತ್ಕಲ್ ಚಿತ್ರ ಅಕ್ಟೋಬರ್ ೧೬ ರಂದು ಮರು ಬಿಡುಗಡೆಯಾಗುತ್ತಿದೆ.