ಟೇಕ್ ಆಫ್ ಗೆ ಬಿಗ್ ಬಾಸ್ ಸಜ್ಜು
ಸೆಪ್ಟೆಂಬರ್ 6ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಗ್ರ್ಯಾಂಡ್ ಪ್ರೀಮಿಯರ್
ರಾಜ್ಯದೆಲ್ಲೆಡೆ ಈಗ ‘ಬಿಗ್ ಬಾಸ್’ ಜ್ವರ ಶುರುವಾಗಿದೆ! ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾತರದಿಂದ ಕಾಯುತ್ತಿರುವ ಸೀಸನ್ 13ರಲ್ಲಿ ದೊಡ್ಮನೆಗೆ ಯಾರು ಎಂಟ್ರಿ ಕೊಡಲಿದ್ದಾರೆ? ಯಾವ ಸೆಲೆಬ್ರಿಟಿಗಳು ಮನೆ ಸೇರಲಿದ್ದಾರೆ? ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದೆ!
ಬೆಂಗಳೂರು, ಆಗಸ್ಟ್ 30: ಕರ್ನಾಟಕದ ಬಹುದೊಡ್ಡ ಹಬ್ಬ ಬಿಗ್ ಬಾಸ್ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಸೆಪ್ಟೆಂಬರ್ 6ರಿಂದ Colors Kannada ಮತ್ತು JioHotstarನಲ್ಲಿ ರಾತ್ರಿ 7:00 ಗಂಟೆಗೆ ಅದ್ಧೂರಿಯಾಗಿ ಆರಂಭವಾಗಲಿದೆ. ‘ಬಿಗ್ ಬಾಸ್’ ಕಾರ್ಯಕ್ರಮವನ್ನು Banijay Asia ಮತ್ತು EndemolShine India ಜಂಟಿಯಾಗಿ ನಿರ್ಮಿಸುತ್ತಿವೆ.
ಹೊಸತನದ ಮನರಂಜನೆ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದ ಜನಪ್ರಿಯ ಮನರಂಜನಾ ವಾಹಿನಿ “Colors Kannada" ದಲ್ಲಿ ಎಲ್ಲರ ನೆಚ್ಚಿನ ಹಾಗೂ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಗ್ರ್ಯಾಂಡ್ ಓಪನಿಂಗ್ ಆಗಲಿದ್ದು, ವೀಕ್ಷಕರನ್ನು ರಂಜಿಸಲಿದೆ.
ಬಿಗ್ ಬಾಸ್ ಎಲ್ಲರ ಮನಗೆದ್ದು ಇಷ್ಟು ಜನಪ್ರಿಯತೆಗಳಿಸಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ನಟ ಕಿಚ್ಚ ಸುದೀಪ್. ಅವರ ವಿಶಿಷ್ಟ ನಿರೂಪಣಾ ಶೈಲಿ, ಧ್ವನಿ, ಸ್ಪರ್ಧಿಗಳೊಂದಿಗೆ ಅವರು ನಡೆಸುವ ಸಂಭಾಷಣೆ ‘ಬಿಗ್ ಬಾಸ್’ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದರಿಂದಲೇ ಬಿಗ್ ಬಾಸ್ ಬಹುತೇಕರ ಮನಸ್ಸನ್ನು ತಲುಪಿದೆ.
ಮತ್ತೊಂದು ವಿಶೇಷವೆಂದರೆ ಬಿಗ್ ಬಾಸ್ ಪ್ರಾರಂಭವಾದಾಗಿನಿಂದಲೂ ಕಾರ್ಯಕ್ರಮದ ನಿರೂಪಣಾ ಹೊಣೆಯನ್ನು ಕಿಚ್ಚ ಸುದೀಪ್ ಅವರು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿರುವುದು. ಇದು ಕಾರ್ಯಕ್ರಮದ ಹೆಮ್ಮೆ, ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ.
ಹೀಗೆ ಸತತ 12 ಸೀಸನ್‌ಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ, ಹಲವು ದಾಖಲೆಗಳನ್ನು ನಿರ್ಮಿಸಿರುವ ‘ಬಿಗ್ ಬಾಸ್ ಕನ್ನಡ’ ಇದೀಗ 13ನೇ ಸೀಸನ್‌ಗೆ ಕಾಲಿಡುತ್ತಿದೆ. ಈ ಬಾರಿ ‘Flight’ ಎಂಬ ವಿಭಿನ್ನ ಹಾಗೂ ರೋಚಕ ಥೀಮ್‌ನೊಂದಿಗೆ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಸಾಮಾನ್ಯ ಜನರನ್ನೂ ಒಂದೇ ವೇದಿಕೆಗೆ ಕರೆತರುವ ಮೂಲಕ, ಪ್ರತಿಯೊಬ್ಬ ಸ್ಪರ್ಧಿಯೂ ತನ್ನದೇ ಆದ ಕಥೆಯನ್ನು ಹೊಂದಿರುವ ಹಾಗೂ ಪ್ರತಿಯೊಂದು ಕ್ಷಣವೂ ಆಟದ ದಿಕ್ಕನ್ನೇ ಬದಲಾಯಿಸಬಹುದಾದಂತಹ ಸೀಸನ್ ಇದಾಗಿದೆ.
ಹೊಸ ಮುಖಗಳು, ಹೊಸ ಕಥೆಗಳು, ಹೊಸ ಸವಾಲುಗಳು ಮತ್ತು ಅನಿರೀಕ್ಷಿತ ತಿರುವುಗಳೊಂದಿಗೆ ಬಿಗ್ ಬಾಸ್ ಕನ್ನಡ ಸೀಸನ್ 13 ಪ್ರೇಕ್ಷಕರಿಗೆ ಊಹಿಸಲೂ ಸಾಧ್ಯವಾಗದ ಪ್ರಯಾಣವನ್ನು ನೀಡಲಿದೆ.
ಬಿಗ್ ಬಾಸ್ ಈಗ 24x7 ಲಭ್ಯ!
ಇನ್ನು ಮುಂದೆ ಪ್ರೇಕ್ಷಕರು ಬಿಗ್ ಬಾಸ್ ಮನೆಯ ಪ್ರತಿಯೊಂದು ಕ್ಷಣವನ್ನೂ ನೋಡಬಹುದು. ಬಿಗ್ ಬಾಸ್ ಕನ್ನಡ ಸೀಸನ್ 13 ಈಗ JioHotstarನಲ್ಲಿ 24x7 ಲಭ್ಯವಿದ್ದು, ಟಿವಿ ಎಪಿಸೋಡ್‌ಗಳನ್ನು ಮೀರಿ ಮನೆಯೊಳಗಿನ ಪ್ರತಿಯೊಂದು ಬೆಳವಣಿಗೆಯನ್ನೂ ವೀಕ್ಷಿಸುವ ಅವಕಾಶ ಸಿಗಲಿದೆ.
ಕ್ಯಾಂಡಿಡ್ ಮಾತುಕತೆಗಳು, ಅನಿರೀಕ್ಷಿತ ಕ್ಷಣಗಳು, ಬದಲಾಗುವ ಸಂಬಂಧಗಳು, ಭರಪೂರ ಡ್ರಾಮಾ ಸಿಗಲಿದೆ. ಬಿಗ್ ಬಾಸ್ ಮನೆಯ ರೋಚಕ ಕ್ಷಣಗಳನ್ನು ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ JioHotstarನಲ್ಲಿ ವೀಕ್ಷಿಸಿ!
ದಕ್ಷಿಣ ಕ್ಲಸ್ಟರ್‌ನ ಎಂಟರ್‌ಟೈನ್‌ಮೆಂಟ್ ಬಿಸಿನೆಸ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ
"ಕರ್ನಾಟಕದಲ್ಲಿ ಬಿಗ್ ಬಾಸ್ ಕೇವಲ ಒಂದು ಟಿವಿ ಕಾರ್ಯಕ್ರಮವಾಗಿ ಉಳಿದಿಲ್ಲ. ಪ್ರತಿ ಸೀಸನ್‌ಗೂ ಪ್ರೇಕ್ಷಕರು ಇದನ್ನು ತಮ್ಮ ಚರ್ಚೆಯ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಸಂಬಂಧವನ್ನು ಪ್ರೇಕ್ಷಕರೊಂದಿಗೆ ಬೆಳೆಸಿಕೊಳ್ಳುವ ಮನರಂಜನಾ ಫ್ರಾಂಚೈಸಿಗಳು ಬಹಳ ವಿರಳ. ಈ ಪಯಣದ ಹೃದಯಭಾಗದಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಕಳೆದ 12 ವರ್ಷಗಳಲ್ಲಿ ಅವರು ಈ ಕಾರ್ಯಕ್ರಮವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ರೂಪಿಸಿದ್ದಾರೆ. ಜನರನ್ನು ಅರ್ಥಮಾಡಿಕೊಳ್ಳುವ ಅವರ ಸಹಜ ಸಾಮರ್ಥ್ಯ, ಪ್ರೇಕ್ಷಕರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ನಿಖರವಾಗಿ ಹೇಳುವ ಗುಣ ಹಾಗೂ ವೀಕ್ಷಕರೊಂದಿಗೆ ಅವರು ನಿರ್ಮಿಸಿರುವ ಆತ್ಮೀಯ ಸಂಬಂಧ, ಇವೆಲ್ಲವೂ ಮರುಕಳಿಸಲು ಕಷ್ಟವಾದಂಥದ್ದು. ಮತ್ತೊಂದು ಸೀಸನ್‌ಗೆ ಅವರೇ ಕಾರ್ಯಕ್ರಮವನ್ನು ಮುನ್ನಡೆಸುತ್ತಿರುವುದಕ್ಕೆ ನಾವು ಅತ್ಯಂತ ಸಂತೋಷಪಡುತ್ತೇವೆ.
ಬಿಗ್ ಬಾಸ್ ಯಶಸ್ವಿಯಾಗಲು ನಿಜವಾದ ಕಾರಣ ಜನರು. ಬಿಗ್ ಬಾಸ್ 13ನೇ ಸೀಸನ್ ಅನ್ನು ಕರ್ನಾಟಕದಾದ್ಯಂತದ ಪ್ರೇಕ್ಷಕರಿಗೆ ಮರೆಯಲಾಗದ ಅನುಭವವನ್ನಾಗಿ ರೂಪಿಸಲು ನಾವು ಉತ್ಸುಕರಾಗಿದ್ದೇವೆ."
ದೀಪಕ್ ಧರ್, ಗ್ರೂಪ್ ಸಂಸ್ಥಾಪಕ ಹಾಗೂ ಸಿಇಒ, ಬನಿಜಯ್ ಏಷ್ಯಾ ಮತ್ತು ಎಂಡೆಮೋಲ್ ಶೈನ್ ಇಂಡಿಯಾ
"ಕಳೆದ ಹನ್ನೆರಡು ಸೀಸನ್‌ಗಳಲ್ಲಿ ಬಿಗ್ ಬಾಸ್ ಕನ್ನಡ ಒಂದು ಸಾಂಸ್ಕೃತಿಕ ವಿದ್ಯಮಾನವಾಗಿ ಬೆಳೆದಿದೆ. ಈ ಪಯಣದ ಕೇಂದ್ರಬಿಂದುವಾಗಿ ಕಿಚ್ಚ ಸುದೀಪ್ ಅವರು ಇದ್ದಾರೆ. ಸೀಸನ್ 13ರೊಂದಿಗೆ, ಈ ಪರಂಪರೆಯನ್ನು ನಾವು ಮತ್ತೊಂದು ಹೊಸ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ. ಪ್ರೇಕ್ಷಕರೊಂದಿಗೆ ಅವರಿಗಿರುವ ನಿರಂತರ ನಂಟು ಹಾಗೂ JioHotstarನ 24x7 ಅನುಭವವನ್ನು ಒಗ್ಗೂಡಿಸುವ ಮೂಲಕ, ಬಿಗ್ ಬಾಸ್‌ನ ಜಗತ್ತನ್ನು ಹಿಂದೆಂದಿಗಿಂತಲೂ ಹೆಚ್ಚು ಆಳವಾದ ಮತ್ತು ರೋಚಕ ಅನುಭವವನ್ನು ರೂಪಿಸಲು ನಾವು ಸಜ್ಜಾಗಿದ್ದೇವೆ."
ತಪ್ಪದೇ ವೀಕ್ಷಿಸಿ
‘ಬಿಗ್ ಬಾಸ್ ಕನ್ನಡ ಸೀಸನ್ 13’ ಗ್ರ್ಯಾಂಡ್ ಪ್ರೀಮಿಯರ್
ಸೆಪ್ಟೆಂಬರ್ 6ರಂದು ಸಂಜೆ 7:00 ಗಂಟೆಗೆ
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ,
ಶನಿವಾರ ಮತ್ತು ಭಾನುವಾರ ರಾತ್ರಿ 9:00ಕ್ಕೆ ಕಲರ್ಸ್ ಕನ್ನಡದಲ್ಲಿ.
ಬಿಗ್ ಬಾಸ್ ಮನೆಯ ಕ್ಷಣಗಳು JioHotstarನಲ್ಲಿ 24×7 ಲಭ್ಯವಿದೆ.