*ಉಘೇ ಉಘೇ ಭಾಗ್ಯವಂತರು*
ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ’ಸನ್ ಉದಯ’ದಲ್ಲಿ ಹೊಸ ಧಾರವಾಹಿ *’ಭಾಗ್ಯವಂತರು’* ಜುಲೈ 6ರಿಂದ ರಾತ್ರಿ 7.30ಕ್ಕೆ ಪ್ರಸಾರವಾಗಲಿದ್ದು, ವಿಭಿನ್ನ ಪ್ರಯತ್ನ ಎನ್ನುವಂತೆ ಪ್ರಸಾರದ ಮುನ್ನದಿನ ಭಾನುವಾರದಂದು ಬೇಡರಹಳ್ಳಿಯಲ್ಲಿರುವ ಸ್ಪೂರ್ತಿಧಾಮ ಹಾಲ್‌ದಲ್ಲಿ ಎರಡು ಕಂತುಗಳ ಪ್ರೀಮಿಯರ್ ಷೋ ಏರ್ಪಾಟು ಮಾಡಲಾಗಿತ್ತು. ತುಂಬಿದ ಸಭಾಂಗಣದಲ್ಲಿ ಸೀರಿಯಲ್ ವೀಕ್ಷಿಸಿದ ಅಭಿಮಾನಿಗಳ ಒಂದಷ್ಟು ಪ್ರಶ್ನೆಗಳಿಗೆ ತಂಡವು ಉತ್ತರ ನೀಡಿತು.
ನಾಯಕಿ ತನ್ವಿರಾವ್ ಮಾತನಾಡಿ, ಈ ತರಹದ ಪ್ರೀಮಿಯರ್ ಷೋ ಚಿತ್ರರಂಗದಲ್ಲಿ ಜರಗುತ್ತದೆ. ಆದರೆ ನನಗೆ ಮೊಟ್ಟ ಮೊದಲಬಾರಿ ವೀಕ್ಷಕರ ಸಮ್ಮುಖದಲ್ಲಿ ಕುಳಿತುಕೊಂಡು ಧಾರಾವಾಹಿ ನೋಡಿರುವುದು ಖುಷಿ ತಂದಿದೆ ಎಂದರು.
ಇದು ಕೇವಲ ಸ್ಯಾಂಪಲ್ ಅಷ್ಟೇ. ಎಲ್ಲರ ಪರಿಶ್ರಮದಿಂದ ಸಿದ್ದಗೊಮಡಿರುವ ಈ ಧಾರವಾಹಿ ಬಹಳ ವಿಭಿನ್ನವಾಗಿದ್ದು ಎಲ್ಲರ ಮೆಚ್ಚುಗೆ ಪಡೆಯುವುದರಲ್ಲಿ ಸಂಶಯವಿಲ್ಲ. ನಿಮ್ಮಗಳ ಹಾರೈಕೆ ಸದಾ ನಮ್ಮ ಮೇಲೆ ಇರಲೆಂದು ಹಿರಿಯ ನಟ ಸುರೇಶ್ ರೈ ಕೋರಿಕೊಂಡರು.
ಬಹುತಾರಾಗಣ ಧಾರವಾಹಿಯಲ್ಲಿ ಎಲ್ಲಾ ಹಿರಿಯ ನಟರು ಸಹಕಾರ ನೀಡಿದ್ದಾರೆ. ನಾನು ಛಾಲೆಂಜ್ ಆಗಿ ತೆಗೆದುಕೊಂಡಿದ್ದು, ಇದಕ್ಕೆ ಬೆನ್ನಲುಬಾಗಿ ತಂತ್ರಜ್ಞರು ಹಗಲಿರುಳು ದುಡಿದು ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದರೆಂದು ನಿರ್ದೇಶಕ ಸಂಪೃಥ್ವಿ ಹೇಳಿದರು.
ಕಲಾವಿದರುಗಳಾದ ಆರ್.ಕೆ.ಚಂದನ್, ಶಾಲಿನಿ, ಸಮೀಕ್ಷಾ, ಧನ್ಯಾ, ವರ್ಷಾ, ಶ್ರೀವಾಯು, ಮಧುಸಾಗರ, ಲಕ್ಷೀಹೆಗಡೆ, ರಿಷಾ, ವಿಠಲ್‌ಕಾಮತ್, ಪ್ರಕೃತಿಪಾಟೀಲ್, ಜಯಲಕ್ಷೀಪಟೇಲ್ ಧಾರವಾಹಿಯ ಬಗ್ಗೆ ಅನುಭವ ಹಂಚಿಕೊಂಡರು.
ಎ.ಎಸ್.ಎಮ್.ಪ್ರೊಡಕ್ಷನ್ ಅಡಿಯಲ್ಲಿ ರಮಣ ಬಂಗಾರು ನಿರ್ಮಾಣ ಮಾಡುತ್ತಿದ್ದು, ’ಭಾಗ್ಯವಂತರು’ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ಸನ್ ಉದಯವಾಹಿನಿಯಲ್ಲಿ ಪ್ರಸಾರವಾಗಲಿದೆ