Nee Iralu Joteyalli.News

Wednesday, August 06, 2025

 

*ಸ್ಟಾರ್ ಸುವರ್ಣದಲ್ಲಿ ನೀ ಇರಲು ಜೊತೆಯಲ್ಲಿ*

 

        ಕಿರುತೆರೆ ವೀಕ್ಷಕರಿಗೆ ಸದಾ ಹೊಸತನ್ನು ನೀಡುತ್ತಿರುವ *ಸ್ಟಾರ್ ಸುವರ್ಣ* ವಾಹಿನಿಯು ಈಗ ಹೊಸ ಧಾರವಾಹಿ *ನೀ ಇರಲು ಜೊತೆಯಲ್ಲಿ* ಪ್ರಸಾರ ಮಾಡಲು ಸಜ್ಜಾಗಿದೆ.

 

     ಮುದ್ದುಲಕ್ಷೀ,  ಮರಳಿ ಬಂದಳು ಸೀತೆ, ಮರಳಿ ಮನಸಾಗಿದೆ ಇನ್ನು ಮುಂತಾದ ಯಶಸ್ವಿ ಧಾರವಾಹಿಗಳನ್ನು ನಿರ್ದೇಶಿಸಿರುವ *ಧರಣಿ.ಜಿ.ರಮೇಶ್*  ನಿರ್ಮಾಣ ಜತೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

 

      ಸ್ವಾತಂತ್ರ ಹೋರಾಟಗಾರನ ಕುಟುಂಬದಲ್ಲಿ ಬೆಳೆದ ನಾಯಕ ಕೃಷ್ಣ ತಂತ್ರದಲ್ಲಿ ಕಪಟಿಯಾಗಿದ್ದರೂ, ಮಾಡಿದ ಸಹಾಯಕ್ಕೆ ಪ್ರತಿಫಲವನ್ನು ನಿರೀಕ್ಷಿಸದ ಆಧುನಿಕ ಯುಗದ ಶ್ರೀ ಕೃಷ್ಣ. ಆದರೆ ಅತ್ತಿಗೆ ಮನೆ ಮಂದಿಯರನ್ನೆಲ್ಲಾ ತನ್ನ ಕೈಗೊಂಬೆಯಾಗಿಸಿ ಕೊಂಡಿರುತ್ತಾಳೆ.

     ಅಪ್ಪನ ಮುದ್ದಿನ ಮಗಳು ನಾಯಕಿ ರಚನಾಪಾಟೀಲ್ ವಿದ್ಯಾವಂತೆ. ಯಾರನ್ನು ನೋಯಿಸದ ಮಾತೃ ಹೃದಯಿ. ಮುಂದೆ ಸೊಕ್ಕಿನಿಂದ ಮರೆಯುತ್ತಿರುವ ಅತ್ತಿಗೆಗೆ ಕೃಷ್ಣ ತಕ್ಕ ಪಾಠ ಕಲಿಸುತ್ತಾನಾ? ತದ್ವಿರುದ್ದ ಭಾವಗಳನ್ನು ಹೊಂದಿರುವ ಕೃಷ್ಣಾ-ರಚನಾ ಹೇಗೆ ಒಂದಾಗುತ್ತಾರೆ? ಆಕೆಗೆ ಆದರ್ಶವಾಗಿರೋ ಅತ್ತಿಗೆ. ತನ್ನನ್ನೇ ಎದುರಾಳಿಯಾಗಿ  ನೋಡಿದ್ರೆ ಮುಂದೇನಾಗಬಹುದು ಎಂಬುದು ಮುಖ್ಯ ಕಥಾ ಸಾರಾಂಶವಾಗಿದೆ.

 

      ನಾಯಕನಾಗಿ ಪವನ್ ರವೀಂದ್ರ, ನಾಯಕಿಯಾಗಿ ಸಲೋಮಿ ಡಿಸೋಜ. ’ಅಮೃತವರ್ಷಿಣಿ’ ಧಾರವಾಹಿಯಲ್ಲಿ ಹೆಸರು ಮಾಡಿದ್ದ ರಜಿನಿ, ಗ್ಯಾಪ್ ನಂತರ ಊರ್ಮಿಳಾ ದಿವಾನ್ ಹೆಸರಿನಲ್ಲಿ ದುರಳ ಅತ್ತಿಗೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರಲ್ಲದೆ ಮೋಹನ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ನಟ-ನಟಿಯರು ಅಭಿನಯಿಸುತ್ತಿದಾರೆ.

 

      ಇದೇ *ಆಗಸ್ಟ್ 11ರಿಂದ ಪ್ರತಿ ದಿನ ರಾತ್ರಿ 7 ಘಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.*

 

.

Copyright@2018 Chitralahari | All Rights Reserved. Photo Journalist K.S. Mokshendra,