Spark.Film Reviews

Friday, September 25, 2026

 

ಆ್ಯಕ್ಷನ್, ಸಸ್ಪೆನ್ಸ್,  ರೊಮಾನ್ಸ್  ತುಂಬಿದ ಪ್ಯಾಕೇಜ್ ಸ್ಪಾರ್ಕ್

 

ಚಿತ್ರ: ಸ್ಪಾರ್ಕ್

ನಿರ್ದೇಶನ: ಮಹಾಂತೇಶ

ಹಂದ್ರಾಳ್

ನಿರ್ಮಾಣ: ಗರೀಮಾ ಅವಿನಾಶ್

ತಾರಾಗಣ: ನಿರಂಜನ್ ಸುಧೀಂದ್ರ, ಪ್ರೇಮ್ ಮತ್ತು ಭಾವನಾ ಮೊದಲಾದವರು.

 

ಒಂದು ದಿವಾಳಿಯಾದ ಬ್ಯಾಂಕ್ ಹಿಂದೆ ಸಾವಿರಾರು ಗ್ರಾಹಕರ ನೋವಿನ ಕಥೆಗಳಿರುತ್ತವೆ. ಒಂದು ಕಡೆ ಅವರ ನೋವಿನ ಬಗ್ಗೆ ಬೆಳಕು ಚೆಲ್ಲುತ್ತಾ ಸಾಗುವ ಚಿತ್ರ ಇದು. ಮತ್ತೊಂದೆಡೆ ಮೋಸಮಾಡುವ ಬ್ಯಾಂಕ್ ಹಿಂದೆ ಎಷ್ಟು ದೊಡ್ಡ ಕುಳಗಳು ಇರುತ್ತಾರೆ ಎನ್ನುವುದನ್ನು ತೋರುತ್ತಾ ಸಾಗುತ್ತದೆ.

 

ಜರ್ನಲಿಸಮ್ ಕೋರ್ಸ್ ಮುಗಿಸಿ ವೃತ್ತಿಗೆ ಸೇರಿಕೊಳ್ಳುವ ಅಭಿರಾಮ್ ಗೆ ಸ್ಟಿಂಗ್ ಆಪರೇಷನ್ ನಡೆಸುವ ಕಲೆ ಗೊತ್ತು. ಹೀಗೆ  ಇನ್ವೆಸ್ಟಿಗೇಶನ್ ಜರ್ನಲಿಸಮ್ ನಡೆಸುವಾಗ ಕುತೂಹಲಕಾರಿಯಾದ ಒಂದೊಂದೇ ಅಂಶಗಳು ಹೊರಗೆ ಬರತೊಡಗುತ್ತದೆ. ಈ ಅಂಶಗಳೇ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕುಳಿತು ಸಿನೆಮಾ ನೋಡುವಂತೆ ಮಾಡುತ್ತದೆ.

ಲವ್ಲಿಸ್ಟಾರ್  ಪ್ರೇಮ್ ಯಾಕೆ ವಿಲನ್ ರೋಲ್ ಚಾಯ್ಸ್ ಮಾಡಿದ್ದಾರೆ? ವಕೀಲೆ ಭಾವನಾ ಅವರ ಪಾತ್ರದ ಹಿನ್ನೆಲೆ ಏನು? ಮೊದಲಾದ ಪ್ರಶ್ನೆಗಳಿಗೆ ಚಿತ್ರದ ದ್ವಿತೀಯಾರ್ಧದಲ್ಲಿ ಸ್ಪಷ್ಟ ಉತ್ತರ ದೊರಕುತ್ತದೆ.

 

ಪತ್ರಕರ್ತ ಅಭಿರಾಮ್ ಪಾತ್ರವನ್ನು ನಿರಂಜನ್ ಸುಧೀಂದ್ರ ಆಕರ್ಷಕವಾಗಿ ನಿರ್ವಹಿಸಿದ್ದಾರೆ. ನಟನೆ ಮಾತ್ರವಲ್ಲ ಪೈಟ್, ಡಾನ್ಸ್ ಗಳಲ್ಲಿ ಕೂಡ ತಾನೋರ್ವ ನಿಪುಣನೆಂದು ತೋರಿಸಿದ್ದಾರೆ. ನಿರಂಜನ್ ಗೆ ಜೋಡಿಯಾಗಿ ರಚನಾ ಇಂದರ್ ಕಾಣಿಸಿಕೊಂಡಿದ್ದಾರೆ. ಸಚಿನ್ ಬಸ್ರೂರು ಸಂಗೀತದಲ್ಲಿ ಇವರಿಬ್ಬರಿಗೆ ನೀಡಿರುವ ಹಾಡುಗಳು ಆಕರ್ಷಕ.

 

ವಂಚಕ ರತ್ನಾಕರನಾಗಿ ನೀನಾಸಂ ಅಶ್ವಥ್

ಅಶ್ವಿನ್ ಹಾಸನ್ ಅವರು ನಿರ್ವಹಿಸಿರುವ ಧನರಾಜ್ ಪಾತ್ರ, ವಿಜಯ್ ಚೆಂಡೂರ್ ನಟನೆಯ ತುಮಕೂರು ಸಂಪಂಗಿ ಪಾತ್ರಗಳು ಹೆಸರಲ್ಲಿ ಮಾತ್ರ ವಿಭಿನ್ನವಾಗಿಲ್ಲ. ಪಾತ್ರಗಳ  ಕೆಲಸಗಳಿಂದ, ವಿಭಿನ್ನ ವರ್ತನೆಯಿಂದ ನೆನಪಲ್ಲಿ ಉಳಿಯುತ್ತದೆ.

 

ಸ್ಪಾರ್ಕ್ ನೋಡಲು ಬರುವ ಪ್ರೇಕ್ಷಕನಿಗೆ ಕುತೂಹಲಕಾರಿ ಕಥೆ ಮಾತ್ರವಲ್ಲ, ನಿರಂಜನ್ ಅವರ ರೊಮಾನ್ಸ್,  ಧರ್ಮಣ್ಣ ಕಡೂರು ಅವರ ತಿಳಿಹಾಸ್ಯ ಹೀಗೆ ಎಲ್ಲವೂ ಸೇರಿದ ಮನರಂಜನೆಯ ಪ್ಯಾಕೇಜ್ ಸಿಕ್ಕ ಅನುಭವ ನೀಡುತ್ತದೆ.

 

Copyright@2018 Chitralahari | All Rights Reserved. Photo Journalist K.S. Mokshendra,