Lambodhara 2.0.Film Reviews

Friday, November 13, 2026

 

ಉದರ ನಿಮಿತ್ತಂ ಮತ್ತು ಲಂಬೋದರ ನಿಮಿತ್ತಂ!

ಚಿತ್ರ: ಲಂಬೋದರ 2.0

ನಿರ್ದೇಶನ: ಸುನಿ

ನಿರ್ಮಾಣ: ಮಾಸ್ ಪ್ರೊಡಕ್ಷನ್

ತಾರಾಗಣ: ಅನಿಲ್ ಶೆಟ್ಟಿ, ಸಾಚಿ ಬಿಂದ್ರ, ಕುನಾಲ್ ಕಪೂರ್ ಮೊದಲಾದವರು.

 

ಹ್ಯಾಕರ್ ಕೂಡ ಜೀವನದಲ್ಲಿ ಕಷ್ಟಗಳನ್ನು ಎದುರಿಸುವ ಸಂದರ್ಭ ಸೃಷ್ಟಿಯಾದರೆ ಹೇಗಿರುತ್ತದೆ? ಅದಕ್ಕೆ ಮತ್ತೊಬ್ಬ ಹ್ಯಾಕರ್ ಕಾರಣವಾಗಿದ್ದರೆ ಅದು ಹೇಗಿರುತ್ತದೆ? ಅದರಲ್ಲೂ ಆ ಹ್ಯಾಕರ್ ತಾನು ಪ್ರೀತಿಸಿದ ಹುಡುಗಿಯ ಕಡೆಯವರೇ ಆಗಿದ್ದರೆ ಏನಾಗಬಹುದು? ಹೀಗೆ ಯಂತ್ರಗಳ ಲೋಕದಲ್ಲಿದ್ದುಕೊಂಡೇ ಪ್ರೀತಿಯ ಕಥೆ ಹೇಳುವ ಚಿತ್ರವೇ ಲಂಬೋದರ 2.0

ಕನ್ನಡದ ಮಟ್ಟಿಗೆ ಇದು ಖಂಡಿತವಾಗಿ ಹೊಸ ಕಾನ್ಸೆಪ್ಟ್. ಈ ಹಿಂದೆ ಕಂಡಿರದ ಮಾದರಿಯ ಕಥೆ ಎಂದು ಕಣ್ಮುಚ್ಚಿಕೊಂಡೇ ಹೇಳಬಹುದು. ಹಾಗಾಗಿಯೇ ಇಲ್ಲಿ ಹೋಲಿಕೆಗೆ ಅವಕಾಶಗಳಿಲ್ಲ. ಎಲ್ಲಿಯೂ ನಾವು ಈ ಹಿಂದೆ ನೋಡಿದ್ದೇವೆ ಎನ್ನುವ ನೆನಪು ಮೂಡಿಸುವುದಿಲ್ಲ. ಅದಕ್ಕೆ ಕಾರಣ ಸಬ್ಜೆಕ್ಟ್ ನಲ್ಲಿನ ಹೊಸತನ. ಸೈಂಟಿಫಿಕ್ ಚಿತ್ರವನ್ನು ಆಯ್ಕೆಮಾಡಿಕೊಂಡು ಅದರಲ್ಲಿ ಇಷ್ಟೊಂದು ಹಾಸ್ಯವನ್ನು ತರಲು ಸಾಧ್ಯವಾಗಿರುವುದು ವಿಶೇಷ.

ಇಲ್ಲಿ ನಾಯಕನ ಹೆಸರು ಅವ್ಯಕ್ತ. ಬಹುಶಃ ಹ್ಯಾಕರ್ ಆಗಲು ಇಷ್ಟೊಂದು ಸೂಕ್ತವಾದ ಹೆಸರು ಮತ್ತೊಂದು ಸಿಗುವುದು ಕಷ್ಟ. ಈ ಪಾತ್ರವನ್ನು ಅನಿಲ್ ಶೆಟ್ಟಿ ಮಾಡಿದ್ದಾರೆ. 

ಸುನಿ ನಿರ್ದೇಶನದಲ್ಲಿ ಈ ಪಾತ್ರಧಾರಿ ಒಬ್ಬ ನವನಟ ಎಂದು ಅನಿಸುವುದೇ ಇಲ್ಲ. ಇಲ್ಲಿ ಮತ್ತೊಂದು ಪ್ರಮುಖ ಪಾತ್ರ ಶ್ರೀಕೃಷ್ಣನದ್ದು ಅಂದರೆ ನಂಬಲೇಬೇಕು. ಕೃಷ್ಣ ಎಐ ರೂಪ ಪ್ರತಿ ಪ್ರೇಕ್ಷರನ್ನು ಕೂಡ ಸೆಳೆಯುವಂತಿದೆ. ಅಲ್ಲಿಗೆ ಈ ಚಿತ್ರಕ್ಕೆ ವೈಜ್ಞಾನಿಕ ಕಥೆಯ ಆವರಣ, ಪುಟಾಣಿಗಳ ಮೆಚ್ಚಿನ ಹೆಸರು ಲಂಬೋದರ ಹಾಗೂ ಆಧ್ಯಾತ್ಮಿಕತೆಯ ಉತ್ತುಂಗ ಶಿಖರ ಶ್ರೀಕೃಷ್ಣ ಹೀಗೆ ವಿವಿಧತೆಯ ಸಂಗಮವಿದೆ. ಇದೇ ಕಾರಣದಿಂದಲೇ ಸಿನೆಮಾ ಯಾರವ ವರ್ಗವನ್ನು ಕೂಡ ನಿರಾಶೆಗೊಳಿಸದಂತೆ ಮುಂದುವರಿಯುತ್ತದೆ.

 

ಅನಿಲ್ ಶೆಟ್ಟಿ, ಸಾಚಿ ಬಿಂದ್ರ,ಆ ಕುನಾಲ್ ಕಪೂರ್ ಹೀಗೆ ಪ್ರತಿಯೊಬ್ಬ ಕಲಾವಿದರ ನಟನೆಯೂ ಅಮೋಘ. ಅದರಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿರುವ ಮೇಘನಾ ಗಾಂವ್ಕರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿರುವ ರಘು ರಾಮನ ಕೊಪ್ಪ ಕೂಡ ನಟನೆಯಿಂದ ಸೆಳೆಯುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಹ್ಯೂಮನೈಯ್ಡ್ ರೋಬೋಟ್ ಜಿಯಾ ನಟನೆ ಚಿತ್ರಮಂದಿರದಿಂದ ಹೊರಗೆ ಬಂದ ಬಳಿಕ ಕೂಡ ನೆನಪಲ್ಲಿ ಉಳಿಯುತ್ತದೆ. ಕನ್ನಡದ ಪ್ರಯೋಗಾತ್ಮಕ ಚಿತ್ರಗಳ ಪಟ್ಟಿಯಲ್ಲಿ ಸೇರಿಕೊಳ್ಳುವ ಜೊತೆಯಲ್ಲೇ ಸರ್ವ ರೀತಿಯ ಪ್ರೇಕ್ಷಕರನ್ನು ಸೆಳೆಯುವ ಗುಣಮಟ್ಟ  ಈ ಚಿತ್ರದಲ್ಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,