ಚಿತ್ರ: ಶ್ರೀಮತಿ ಸಿಂಧೂರ****
ತಾರಾಗಣ: ವಿಜಯರಾಘವೇಂದ್ರ ಪ್ರಿಯಾ ಹೆಗ್ಡೆ, ಮಾನಸಿ ಸುಧೀರ್, ಡಿ.ಎನ್.ಲಿಯೋ ಮನೋಜ್,ರೇಷ್ಮಾ.ವಿಗೌಡ, ಗಣೇಶ್ರಾವ್ ಕೇಸರ್ಕರ್, ಪ್ರಸನ್ನ ಬಾಗೀನ, ಉಗ್ರಂರವಿ ಮುಂತಾದವರು
ಚಿತ್ರಕಥೆ ಮತ್ತು ನಿರ್ದೇಶನ: ಆರ್.ಅನಂತರಾಜು
ಕಥೆ ಮತ್ತು ನಿರ್ಮಾಪಕ: ಡಿ.ಎನ್.ನಾಗೀರೆಡ್ಡಿ
ಸಂಗೀತ: ರಾಜೇಶ್ ರಾಮನಾಥ್
ಆಧುನಿಕ ಕಥೆಯಲ್ಲಿ ಮಾರುತಿ ರಾಯನ ಪವಾಡಗಳು
ಶ್ರೀಮಂತ ಮನೆತನದ ಮುರಳಿ ಒಂದು ಸಂದಿಗ್ದ ಸ್ಥಿತಿಯಲ್ಲಿ ಹಳ್ಳಿಯ ಮುಗ್ದ ಹುಡುಗಿ, ಆಂಜನೇಯ ಪರಮಭಕ್ತೆ ಇಂದುಶ್ರೀಯನ್ನು ಮದುವೆ ಮಾಡಿಕೊಂಡು ಮನೆಗೆ ಕರೆತರುತ್ತಾನೆ. ಅಲ್ಲಿ ಸೋದರಮಾವ ಶಂಭುಲಿಂಗ ತನ್ನ ಮಗಳಿಗೆ ಮುರಳಿ ಕೊಟ್ಟು ಆಸ್ತಿಯನ್ನು ಲಪಟಾಯಿಸಲು ಸಂಚು ಹಾಕಿರುತ್ತಾನೆ. ಆದರೆ ವಿಧಿ ಬೇರೆಯದೇ ಮಾಡುತ್ತದೆ.
ಇಷ್ಟಕ್ಕೆ ಸುಮ್ಮನಾಗದೆ ಮನೆಯಲ್ಲಿ ಆಕೆಯ ಗುಣದ ಮೇಲೆ ಇನ್ನಿಲ್ಲದ ಸಂಶಯ ಬರುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತನೆ. ಗರ್ಭಿಣಿಯಾಗಿದ್ದ ಇಂದುಶ್ರೀ ಹೊರ ಹೋಗುತ್ತಾಳೆ. ನಂತರ ಅಲ್ಲಿಂದ ಕಥೆಯು ಭಕ್ತಿಭಾವದತ್ತ ಸಾಗುತ್ತದೆ. ಕೊನೆಗೆ ದುರಳರನ್ನು ಶಿಕ್ಷಿಸಿ, ಭಕ್ತೆಯನ್ನು ಯಾವ ರೀತಿ ಆಂಜನೇಯಸ್ವಾಮಿ ಕಾಪಾಡುತ್ತಾನೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು. ಕ್ಲೈಮಾಕ್ಸ್‌ದಲ್ಲಿ ಕೈಲಾಸ್ ಖೇರ್ ಹಾಡು ನೋಡುಗರಿಗೆ ಭಕ್ತಿಭಾವದಲ್ಲಿ ಮಿಂದಂತೆ ಭಾಸವಾಗುತ್ತದೆ.
ನಾಯಕನಾಗಿ ವಿಜಯರಾಘವೇಂದ್ರ, ನಾಯಕಿ ಪ್ರಿಯಾ ಹೆಗ್ಡೆ ಪರದೆ ಮೇಲೆ ಚೆಂದ ಕಾಣಿಸುತ್ತಾರೆ. ಕಾಂತಾರ ಖ್ಯಾತಿಯ ಮಾನಸಿ ಸುಧೀರ್ ನಾಯಕನ ತಾಯಿಯಾಗಿ ಗಮನ ಸೆಳೆಯುತ್ತಾರೆ. ಉಳಿದಂತೆ ಡಿ.ಎನ್.ಲಿಯೋಮನೋಜ್, ರೇಷ್ಮಾ.ವಿ.ಗೌಡ, ಪ್ರಸನ್ನಬಾಗೀನ, ಗಣೇಶ್‌ರಾವ್ ಕೇಸರ್‌ಕರ್, ಉಗ್ರಂರವಿ ಹಾಗೂ ಆಂಜನೇಯನ ಪಾತ್ರದಲ್ಲಿ ಮಾರುತಿ ತಮಗೆ ನೀಡಿದ ಪಾತ್ರ್ಕೆ ನ್ಯಾಯ ಒದಗಿಸಿದ್ದಾರೆ.
ಎರಡು ಹಾಡುಗಳು ಕೇಳಬಲ್. ಚಿಕ್ಕಮಗಳೂರು ಅಕ್ಕಪಕ್ಕದ ರಮಣೀಯ ತಾಣವನ್ನು ಪಿ.ಕೆ.ಹೆಚ್.ದಾಸ್ ಕ್ಯಾಮಾರ ಕೆಲಸ ಕಣ್ಣಿಗೆ ತಂಪು ಕೊಡುತ್ತದೆ. ೭೦-೮೦ ದಶಕದ ಚಿತ್ರ ನೋಡುವಂತ, ಅಲ್ಲದೆ ಸಿನಿಮಾವು ಪಕ್ಕಾ ಪೈಸಾ ವಸೂಲ್ ಎನ್ನಬಹುದು.
****