Dodmansa.Film Reviews

Friday, June 19, 2026

 

ರಿಕ್ಷಾ ಚಾಲಕನೇ ಇಲ್ಲಿ ನಿಜವಾದ  ’ದೊಡ್ಮನ್ಸ’

 

ಚಿತ್ರ: ದೊಡ್ಮನ್ಸ****

ನಿರ್ದೇಶನ: ಆರ್.‌ಶರತ್ ಕೃಷ್ಣ

ನಿರ್ಮಾಪಕರು: ವೇದಿಕ್ ವೀರ ಮತ್ತು ಕವಿತಾ ಮಂಜುನಾಥ್

ತಾರಾಗಣ: ಆರ್. ಶರತ್ ಕೃಷ್ಣ, ರೇಶ್ಮಾ ಲಿಂಗರಾಜಪ್ಪ, ಬಲರಾಜ್ವಾಡಿ, ಶಿಲ್ಪಾ ಶಿವಕುಮಾರ್ ಮೊದಲಾದವರು.

 

 

ಶಿವು ಒಬ್ಬ ಆಟೋರಿಕ್ಷಾ ಚಾಲಕ. ಒಮ್ಮೆ ತನ್ನ ಆಟೋದಲ್ಲಿ ಪ್ರಯಾಣಿಸಲು ಬಂದ ಯುವತಿಯೊಬ್ಬಳು ಕಣ್ಣೀರು ಹಾಕುವುದನ್ನು ಕಾಣುತ್ತಾನೆ. ಕಾರಣ ವಿಚಾರಿಸಿದಾಗ ಆ ಹುಡುಗಿ ತನ್ನ ಬಗ್ಗೆ ಹೇಳಿಕೊಳ್ಳುತ್ತಾಳೆ. ಆಕೆಯ ಹೆಸರು ಸ್ನೇಹ. ಸಿನಿಮಾ‌ ಆಡಿಶನ್ ಗೆ ಎಂದು ಹೋದಾಗ  ಅಲ್ಲಿ ಮಂಚಕ್ಕೆ ಕರೆದಂಥ ಕೆಟ್ಟ ಅನುಭವ ಆಯಿತೆಂದು ಹೇಳಿ ಮತ್ತೆ ಅಳುತ್ತಾಳೆ. ಆಗ ಅಪರಿಚಿತರ ಬಳಿ‌ ಆಡಿಶನ್ ಗೆ ಹೋಗದಂತೆ ಸಲಹೆ ನೀಡುತ್ತಾನೆ.

 

ಶಿವು ಮತ್ತು ಸ್ನೇಹ ಆ ಪರಿಚಯದ ಬಳಿಕ  ಆತ್ಮೀಯರಾಗುತ್ತಾರೆ. ಸಿನಿಮಾ ಮಾಡಲೆಂದು ಹೊರಟಿದ್ದ ತನ್ನ ಮೂವರು ಸ್ನೇಹಿತರನ್ನು ಶಿವು ಆಕೆಗೆ ಪರಿಚಯಿಸುತ್ತಾನೆ. ಅವರು ಶಿವುನನ್ನೇ ಚಿತ್ರದ ನಾಯಕನಾಗಿಸಲು ಹೊರಟಿರುತ್ತಾರೆ. ಆದರೆ ಈ ಪ್ರಯತ್ನ ಮುಂದೇನಾಗುತ್ತದೆ? ಇವರಿಬ್ಬರು ಜೋಡಿಯಾಗಿ ನಟಿಸುತ್ತಾರ? ಎನ್ನುವುದನ್ನು ’ದೊಡ್ಮನ್ಸ’ ಚಿತ್ರದ ಮೂಲಕ ನೀವು ಪರದೆಯ ಮೇಲೆ ನೋಡಬಹುದು.

ಕಥಾ ನಾಯಕ ಶಿವು ಪಾತ್ರದಲ್ಲಿ ಸ್ವತಃ ನಿರ್ದೇಶಕ ಆರ್ ಶರತ್ ಕೃಷ್ಣ ಅವರೇ ನಟಿಸಿದ್ದಾರೆ. ‌ಮೊದಲ ಚಿತ್ರವಾದರೂ ಆಕರ್ಷಕ ನಟನೆ ನೀಡಿದ್ದಾರೆ. ಶಿವು ಬಾಮೈದ ಎಂದು ಕರೆಯುವ ಆತ್ಮೀಯ ಸ್ನೇಹಿತನಾಗಿ, ಸಹ ರಿಕ್ಷಾ ಚಾಲಕನಾಗಿ ಕಾಮಿಡಿ‌ಕಿಲಾಡಿಗಳು‌ ಕಾರ್ತಿಕ್ ನಟಿಸಿದ್ದಾರೆ. ಶಿವು ಸ್ನೇಹಿತೆಯಾಗಿ, ಬಳಿಕ ಪ್ರೇಯಸಿಯಾಗುವ ಸ್ನೇಹ ಪಾತ್ರವನ್ನು ರೇಶ್ಮಾ ಲಿಂಗರಾಜಪ್ಪ ನಿಭಾಯಿಸಿದ್ದಾರೆ. ಚಿತ್ರದ ಒಳಗಿನ‌ ಸಿನಿಮಾ ನಿರ್ಮಾಣದ ಕಥೆಯಲ್ಲಿ

ನಿರ್ಮಾಪಕರಾಗಿ ಬಲ ರಾಜ್ ವಾಡಿ ನಟಿಸಿದ್ದಾರೆ.

 

 

ಹೊಡೆದಾಟದ ದೃಶ್ಯಗಳನ್ನು ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಹಾಡುಗಳು ಕೂಡ ಸುಮಧುರವಾಗಿ ಮೂಡಿ ಬಂದಿದೆ. ಜಮ್ಮು ಕಾಶ್ಮೀರ ಸೇರಿದಂತೆ ಆಕರ್ಷಕ ಲೊಕೇಶನ್ ಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಆನಂದ್ ಇಳಯರಾಜ ಛಾಯಾಗ್ರಹಣ ಮೆಚ್ಚುವಂತಿದೆ.

 

ಚಿತ್ರರಂಗದೊಳಗಿನ‌ ಕಥೆ ಹೇಳುವ ಈ ಸಿನಿಮಾದಲ್ಲಿ ಒಬ್ಬ ಸಾಮಾನ್ಯ ಆಟೋ‌ರಿಕ್ಷಾ ಡ್ರೈವರ್ ಹೇಗೆ ದೊಡ್ಮನ್ಸನಾಗಬಲ್ಲ ಎನ್ನುವುದನ್ನು ತೋರಿಸಿಕೊಡಲಾಗಿದೆ. ರಿಕ್ಷಾಚಾಲಕರು ಸೇರಿದಂತೆ ಸಾಮಾನ್ಯರು ಕುಟುಂಬ ಸಮೇತ ಹೋಗಿ ನೋಡಬಹುದಾದ ಚಿತ್ರ ಇದು.

 

Copyright@2018 Chitralahari | All Rights Reserved. Photo Journalist K.S. Mokshendra,