Lo Naveena.Film Reviews

Friday, May 15, 2026

 

ಅಮರ ಪ್ರೇಮಿ ನವೀನನ ರಾದ್ಧಾಂತಗಳು!

 

ಚಿತ್ರ: ಲೋ ನವೀನ****

ನಿರ್ದೇಶಕರು: ಧನುರ್ಧಾರಿ ಪವನ್

ನಿರ್ಮಾಪಕರು: ಕೀರ್ತಿ ಸ್ವಾಮಿ

ತಾರಾಗಣ: ನವೀನ್ ಸಜ್ಜು, ವರ್ಷಾ ಗಿರಿಧರ್ ಮೊದಲಾದವರು.

 

ಅದೊಂದು ಹಳ್ಳಿ. ಅಲ್ಲಿರುವ ಸೀದಾ ಸಾದಾ ಹಳ್ಳಿ ಹುಡುಗನ ಕಲ್ಯಾಣದ ಕಥೆ ಇದು‌. ಇಲ್ಲಿ ಪ್ರೇಮವಿದೆ. ಭಗ್ನ ಪ್ರೇಮವಿದೆ. ಲಗ್ನವೂ ಇದೆ. ಆದರೆ ಈ ಎಲ್ಲವನ್ನೂ ಕಟ್ಟಿಕೊಟ್ಟಿರುವ ರೀತಿ ಮಾತ್ರ ತುಂಬ ಆಕರ್ಷಣೀಯ ಎಂದು ಹೇಳಲೇಬೇಕು.

 

ಸೋದರ ಮಾವನ ಮಗಳು ಆಶಾಗೆ ನಡೆಯುವ ನಿಶ್ಚಿತಾರ್ಥ. ಆದರೆ ಆಶಾ ತನ್ನ ಮನದಾಸೆಯನ್ನು ತೆರೆದಿಡುವುದು ಅತ್ತೆಮಗ ನವೀನನಲ್ಲಿ. ಆಕೆಯ ಆಸೆಗೆ ಸಾಥ್ ನೀಡುವ ನವೀನನ ಪ್ರಯತ್ನಕ್ಕೆ ಚಿತ್ರದ ಮಧ್ಯಂತರಕ್ಕೂ ಮೊದಲೇ ಫಲಿತಾಂಶ ಲಭಿಸುತ್ತದೆ. ಆ ಫಲಿತಾಂಶ ಏನು? ಅದನ್ನು ರಸವತ್ತಾಗಿ ಹೇಳಿರುವ ರೀತಿ ಹೇಗಿದೆ ಎನ್ನುವುದನ್ನು ’ಲೋ ನವೀನ’ ಚಿತ್ರ ನೋಡಿಯೇ ಅನುಭವಿಸಬೇಕು.

 

ನವೀನನಾಗಿ ನವೀನ್ ಸಜ್ಜು ಇದು ತಮ್ಮದೇ ಬದುಕೇನೋ ಎನ್ನುವಂತೆ ಜೀವಿಸಿ ತೋರಿಸಿದ್ದಾರೆ. ಚಿತ್ರ ಶುರುವಾದ ಹದಿನೈದು ನಿಮಿಷದಲ್ಲೇ ಮೂರು ಹಾಡುಗಳು ಬಂದು ಹೋಗುತ್ತವೆ. ಆದರೆ 45 ನಿಮಿಷಗಳ ಪ್ರಥಮಾರ್ಧ ಕೇವಲ ಐದೇ ನಿಮಿಷದಲ್ಲಿ ಮುಗಿದಂಥ ಅನುಭವ ನೀಡುತ್ತದೆ. ಅಷ್ಟೊಂದು ವೇಗವಾಗಿ, ಕುತೂಹಲಕಾರಿಯಾಗಿ ದೃಶ್ಯಗಳನ್ನು ಕಟ್ಟಿಕೊಟ್ಟ ಕೀರ್ತಿ   ನಿರ್ದೇಶಕ ಧನುರ್ಧಾರಿ ಪವನ್ ಅವರಿಗೆ ಸಲ್ಲಬೇಕು.

ನವೀನನ ಜೋಡಿ ಆಶಾ ಪಾತ್ರದಲ್ಲಿ ನವನಟಿ ವರ್ಷಾ ಗಿರಿಧರ್ ಎಂಟ್ರಿ ನೀಡಿದ್ದಾರೆ. ಅವರು ತಮ್ಮ ಸೌಂದರ್ಯ ಮತ್ತು ಅಭಿನಯ ಪ್ರತಿಭೆಯಿಂದ ಚಿತ್ರೋದ್ಯಮದಲ್ಲಿ ಗುರುತಿಸಬಲ್ಲ ನಟಿಯಾಗುವ ಎಲ್ಲ ನಿರೀಕ್ಷೆಗಳನ್ನು ಸೃಷ್ಟಿಸಿದ್ದಾರೆ. ನಾಯಕ, ನಾಯಕಿ ಪಾತ್ರಗಳ ಜತೆಯಲ್ಲಿ ನಿಂಗಣ್ಣ ಪಾತ್ರಧಾರಿ ಕೂಡ ಚಿತ್ರದ ಆಕರ್ಷಣೆಯಾಗಿದ್ದಾರೆ. ಅಡುಗೆ ಭಟ್ಟನಾಗಿ ಪ್ರಕಾಶ್ ತೂಮಿನಾಡು ಕೂಡ ಕಳೆನೀಡಿದ್ದಾರೆ. ಪ್ರತಿಯೊಂದು ಪಾತ್ರಗಳು ಕೂಡ ನೆನಪಲ್ಲಿ ಉಳಿಯುವಂತಿವೆ.

 

ಈ ವಾರ ಕುಟುಂಬ ಸಮೇತ

ನೋಡಲು ಒಂದು ಶುದ್ಧ ಮನರಂಜನಾ ಚಿತ್ರದ ಹುಡುಕಾಟದಲ್ಲಿ ನೀವಿದ್ದರೆ ’ಲೋ‌ ನವೀನ’ ನಿಮ್ಮ ಮೊದಲ‌ ಆಯ್ಕೆಯಾಗಿರಲಿ.

 

Copyright@2018 Chitralahari | All Rights Reserved. Photo Journalist K.S. Mokshendra,