Premi.Film Reviews

Friday, April 03, 2026

 

ಪ್ರೇಮದ ಕಥೆಯಲ್ಲೇ ಪ್ರೇಮಿಯ ಪ್ರಯಾಣ

 

ಚಿತ್ರ: ಪ್ರೇಮಿ ****

ನಿರ್ದೇಶನ: ಪ್ರದೀಪ್ ವರ್ಮಾ

ನಿರ್ಮಾಣ: ಸಿದ್ದಲಿಂಗಯ್ಯ ಬಿ

ತಾರಾಗಣ: ಅದ್ವಿಕ್, ಸಾತ್ವಿಕಾ, ಶೋಭಿತಾ ಎಂ., ಪ್ರದೀಪ್ ವರ್ಮಾ, ಬೇಬಿ ದ್ವಿತಾ ಕೆ. ಗೌಡ ಮತ್ತಿತರರು.

 

 

ಆತನ ಹೆಸರು ಪ್ರೇಮ್. ತೀರ ಸಣ್ಣ ವಯಸ್ಸಲ್ಲೇ ಅಪ್ಪ ಅಮ್ಮನ ಕಳೆದುಕೊಂಡಿರುತ್ತಾನೆ.  ಆದರೆ ಈತ ಪ್ರಸ್ತುತ  ಬೆಂಗಳೂರಿನಲ್ಲಿಯೇ ಬದುಕು ಕಟ್ಟಿಕೊಂಡಿರುತ್ತಾನೆ. ಟೀನಾ‌ ಈತನ ಗೆಳತಿ.  ಆದರೆ ಆಕೆಯ ಪಾಲಿಗೆ ಪ್ರೇಮ್ ಪ್ರೇಮಿಯಾಗಿರುತ್ತಾನೆ. ಆದರೆ,  ಪ್ರೇಮ್ ಈ ಪ್ರೀತಿಗೆ ನಿರಾಕರಿಸಲು ಮುಖ್ಯ ಕಾರಣ ಆತನಿಗೆ ಈಗಾಗಲೇ ಮದುವೆಯಾಗಿರುತ್ತದೆ. ಹಾಗಾದರೆ ಪ್ರೇಮ್ ಗೆ ಮದುವೆಯಾಗಿದ್ದು ಯಾವಾಗ? ಆ ಪತ್ನಿ ಎಲ್ಲಿದ್ದಾಳೆ? ಅವಳೇಕೆ ಜತೆಗಿಲ್ಲ? ಮೊದಲಾದ ಪ್ರಶ್ನೆಗಳಿಗೆ ಪ್ರೇಮಿ ಚಿತ್ರದಲ್ಲಿ ಉತ್ತರವಿದೆ.

 

ತೀರ ಸರಳವೆಂಬಂತೆ ಶುರುವಾಗುವ ಈ ಚಿತ್ರ, ಅನಿರೀಕ್ಷಿತ ತಿರುವುಗಳ ಆಕರ್ಷಕ ಪಯಣವಾಗಿ ಕಾಣಿಸುತ್ತದೆ. ಅಕ್ಕ ಮಹಾದೇವಿಯವರು ರಚಿಸಿದ ಆಕರ್ಷಕ ಕಥೆಯನ್ನು ಅದ್ಭುತವಾಗಿ ನಿರ್ದೇಶಿಸಿದ ಕೀರ್ತಿ ಪ್ರದೀಪ್ ವರ್ಮಾಗೆ ಸಲ್ಲುತ್ತದೆ.

ನಾಯಕ ಪ್ರೇಮ್ ಪಾತ್ರದ ಮೂಲಕ ಎಂಟ್ರಿ ನೀಡಿರುವ ಅದ್ವಿಕ್ ಗೆ ಒಂದೊಳ್ಳೆಯ ಅವಕಾಶವೇ ದೊರಕಿದೆ. ಟೀನಾ ಪಾತ್ರದಲ್ಲಿ ಶೋಭಿತಾ ಮತ್ತು ಮಧುವತಿ ಪಾತ್ರದಲ್ಲಿ ಸಾತ್ವಿಕಾ ಅದ್ಭುತ ಅಭಿನಯ ನೀಡಿದ್ದಾರೆ. ಸಾತ್ವಿಕಾ ನಟನೆ ಮಾತ್ರವಲ್ಲ ತಮ್ಮ ಲಂಗದಾವಣಿ ಮೊದಲಾದ ಆಕರ್ಷಕ  ವಸ್ತ್ರ ವೈವಿಧ್ಯಗಳಿಂದ ಮನ ಸೆಳೆಯುತ್ತಾರೆ.

 

ಲವ್ ಸ್ಟೋರಿಗಳನ್ನು ಇಷ್ಟಪಡುವವರು ನೋಡಲೇ ಬೇಕಾದ ಚಿತ್ರ ಇದು.‌ ಯಾಕೆಂದರೆ ಹಿಂಸೆ ತುಂಬಿದ ಭಾರೀ  ಹೊಡೆದಾಟಗಳಿಗೆ ಅವಕಾಶವಿಲ್ಲ. ಆದರೆ ಅಪಹರಣ ಮುಂತಾದ ತಿರುವುಗಳಿವೆ. ಎಲ್ಲವನ್ನು ಪರದೆ ಮೇಲೆ ನೋಡುವುದೇ ಖುಷಿ.‌ ಸ್ವತಃ ಸಂಗೀತ ನಿರ್ದೇಶಕರೂ ಆಗಿರುವ ಪ್ರದೀಪ್ ವರ್ಮ ಈ ಕಥೆಯನ್ನು ಸಂಗೀತಮಯವಾಗಿಸಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,