ಚಿತ್ರ: ಚಾಮಯ್ಯ ಸನ್ ಆಫ್ ರಾಮಾಚಾರಿ****
ಕಥೆ,ನಿರ್ದೇಶನ: ಪಲ್ಲಕ್ಕಿ
ನಿರ್ಮಾಣ: ರಾಧಾಕೃಷ್ಣ ಪಲ್ಲಕ್ಕಿ
ಸಹ ನಿರ್ಮಾಪಕರು: ಗೌತಮ್ ಪಲ್ಲಕ್ಕಿ, ವಿ.ಗೋವಿಂದರಾಜು
ತಾರಾಗಣ: ಜಯಶ್ರೀರಾಜ್, ಪ್ರದೀಪ್ ಶಾಸ್ತ್ರಿ, ಚೈತ್ರಾ, ಪ್ರೇಮಾಗೌಡ, ವಿನುತ, ರಾಘವೇಂದ್ರ ಮುಂತಾದವರು
ರಾಮಾಚಾರಿ, ಚಾಮಯ್ಯ ನೆನಪಿಸುವ ಚಿತ್ರ
೭೦ ದಶಕದಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿದ್ದ ‘ನಾಗರ ಹಾವು’ ನೆನಪಿಸುವ ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರದಲ್ಲಿ ತೋರಿಸಲಾಗಿದೆ. ‘ಕೋಟೆ ನಾಡಿನ ನಾಗರ ಹಾವು’ ಎಂಬ ಅಡಿಬರಹವಿದೆ.
ಒಂದು ಕೊಲೆ ಆಗುವುದರೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ. ಇನ್ಸ್‌ಪೆಕ್ಟರ್ ಚೋಟಾ ಜಲೀಲ್ ತನಿಖೆ ಆರಂಭಿಸುತ್ತಾನೆ. ಆಗ ರಾಮಾಚಾರಿ, ಚಾಮಯ್ಯ ಯಾರು ಅಂತ ಕಥೆ ಬಿಚ್ಚಿಕೊಳ್ಳುತ್ತದೆ. ರಂಗಭೂಮಿ ಕಲಾವಿದ ರಾಮಾಚಾರಿ ಶುರುವಿನಿಂದಲೂ ಚಾಮಯ್ಯ ಮೇಷ್ಟ್ರು ಆದರ್ಶಗುಣಗಳನ್ನು ಪಾಲಿಸಿಕೊಂಡು ಬರುವುದಲ್ಲದೆ ಮಗನಿಗೆ ಚಾಮಯ್ಯ ಎಂದು ನಾಮಕರಣ ಮಾಡಿರುತ್ತಾನೆ. ಆದರೆ ಆತ ಕಾಲೇಜಿನಲ್ಲಿ ಪುಂಡರ ಸಹವಾಸದಿಂದ ದುಶ್ಚಟಗಳ ದಾಸನಾಗಿರುತ್ತಾನೆ. ಇದಕ್ಕೆ ಅಮ್ಮನ ಕುಮ್ಮಕ್ಕು ಇರುತ್ತದೆ. ಅಲ್ಲದೆ ಒಂದಷ್ಟು ಜನರಿಂದ ವೈರತ್ವವನ್ನು ಕಟ್ಟಿಕೊಂಡಿರುತ್ತಾನೆ. ಇದರಿಂದ ಚಾಮಯ್ಯ ಮರ್ಡರ್ ಆಗುತ್ತಾನೆ. ಇದನ್ನು ಮಾಡಿಸಿದವರು ಯಾರು? ಕಾರಣ ಏನು? ಅಷ್ಟಕ್ಕೂ ಅವನು ಮಾಡಿದ್ದಾದರೂ ಏನು? ಎಂಬುದಕ್ಕೆ ಉತ್ತರ ಚಿತ್ರಮಂದಿರಕ್ಕೆ ಬಂದರೆ ಸಿಗುತ್ತದೆ.
ರಾಮಾಚಾರಿ ಪಾತ್ರ ನಿರ್ವಹಿಸಿರುವ ಜಯಶ್ರೀರಾಜ್ ಧ್ವನಿ, ಹಾವಬಾವ ಎಲ್ಲವು ಪರದೆ ಮೇಲೆ ಸಾಕ್ಷಾತ್ ವಿಷ್ಣುವರ್ಧನ್‌ರಂತೆ ಕಂಡು ಬಂದಿದ್ದು, ಇಡೀ ಚಿತ್ರಕ್ಕೆ ಇವರದೇ ಕಳಸ ಇಟ್ಟಂತೆ ಆಗಿದೆ. ಚೋಟಾ ಜಲೀಲ್ ಆಗಿ ಪಲ್ಲಕ್ಕಿ ನಟನೆ ಮತ್ತು ನಿರ್ದೇಶನ, ಹೀಗೆ ಎರಡು ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಚೈತ್ರಾ, ಪ್ರಕಾಶ್‌ಅರಸು, ಪ್ರೇಮಾಗೌಡ, ವಿನುತ, ರಾಘವೇಂದ್ರ ಸುಧಾಕರ, ಸಊರ್ಯತೇಜ ಮುಂತಾದವರು ತಮಗೆ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ.
ಡಾ.ಕುಮಾರ್‌ಚಲ್ಯಾ ಮತ್ತು ಹೈತೋ ಸಾಹಿತ್ಯದ ಗಜಲ್ ಗೀತೆಗಳಿಗೆ ಸ್ಯಾಂ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಎಂ.ಆರ್.ಸೀನು, ಸಂಕಲನ ಶಿವಕುಮಾರ್.ಎ ಇದೆಲ್ಲಕ್ಕೂ ಪೂರಕವಾಗಿದೆ. ಹೆಸರಿಗೆ ತಕ್ಕಂತೆ ಸಿನಿಮಾವು ತೂಕ ಇರುವುದರಿಂದ ಪೂಸಾ ವಸೂಲ್ ಎನ್ನಬಹುದು.
****