Sarala Subbarao.Reviews

Friday, February 20, 2026

 

ಎಪ್ಪತ್ತರ ದಶಕದ ಒಂದು ಸರಳ ಸುಂದರ ಪ್ರೇಮ ಕಥೆ

 

 

ಚಿತ್ರ: ಸರಳ ಸುಬ್ಬಾರಾವ್ ****

ನಿರ್ದೇಶನ: ಮಂಜು ಸ್ವರಾಜ್

ನಿರ್ಮಾಣ: ಲೋಹಿತ್ ಎಚ್ ನಂಜುಂಡಯ್ಯ

ತಾರಾಗಣ: ಅಜಯ್ ರಾವ್, ಮಿಶಾ ನಾರಂಗ್, ರಂಗಾಯಣ ರಘು ಮೊದಲಾದವರು.

 

ಎಪ್ಪತ್ತರ ದಶಕದ ಕಥೆ. ಒಬ್ಬ ಪ್ರೊಫೆಸರ್ ಮತ್ತು ಒಬ್ಬಳು ಬರಹಗಾರ್ತಿ ಅನಿರೀಕ್ಷಿತವಾಗಿ ಭೇಟಿಯಾಗುತ್ತಾರೆ. ಪರಿಚಯ ಪ್ರೇಮವಾಗುತ್ತದೆ. ಮುಂದೇನು? ಆ ಮದುವೆ ನೆರವೇರುವುದೇ? ಅವರಿಬ್ಬರ ಸಂಬಂಧದಲ್ಲಿ ಅಂದಿನ ದೇಶದ ಪರಿಸ್ಥಿತಿ ಬೀರುವ ಪರಿಣಾಮ ಏನು? ಇವೆಲ್ಲಕ್ಕೂ ಉತ್ತರ ನೀಡುವ ಚಿತ್ರ ಸರಳ ಸುಬ್ಬಾರಾವ್.

 

ಸರಳ ಎನ್ನುವುದು ಕಥಾ‌ನಾಯಕಿಯ ಹೆಸರು. ಅದರಾಚೆಗೂ ಇದು ಸುಬ್ಬಾರಾವ್ ನ ಕುರಿತಾದ ಸರಳವಾದ ಕಥೆ. ಆತನ ವರ್ತನೆಯೂ ಸರಳ. ಸುಬ್ಬಾರಾವ್ ಆಗಿ ಅಜಯ್ ರಾವ್ 70ರ ದಶಕದ ರೊಮ್ಯಾಂಟಿಕ್ ಕೃಷ್ಣನಾಗಿದ್ದಾರೆ. ಸರಳ ಕೂಡ ತಾನೇನು ಕಡಿಮೆ ಇಲ್ಲ ಎನ್ನುವ ಹಾಗೆ ಮೋಹಕ‌ ಮಾತುಗಳನ್ನಾಡುತ್ತಾಳೆ. ಒಟ್ಟಿನಲ್ಲಿ ಇಬ್ಬರ ಜೋಡಿ ಚಿತ್ರದ ಉದ್ದಕ್ಕೂ ಆಕರ್ಷಕವಾಗಿ ಮನಸೆಳೆಯುತ್ತದೆ.

 

ಸುಬ್ಬಾರಾವ್ ತಾಯಿಯಾಗಿ ಚಿತ್ಕಳಾ‌ ಬಿರಾದಾರ್ ನಟಿಸಿದ್ದಾರೆ.

ಈ‌ ಚಿತ್ರದಲ್ಲಿ ಮತ್ತೊಂದು‌ ಹಿರಿಯ ಜೋಡಿಯ ಪ್ರೇಮಕಥೆಯೂ ಇದೆ. ಆ ಜೋಡಿಯ ಪಾತ್ರವನ್ನು ರಂಗಾಯಣ ರಘು ಮತ್ತು ವೀಣಾ ಸುಂದರ್ ನಿಭಾಯಿಸಿದ್ದಾರೆ.

ಪ್ರೊಫೆಸರ್ ಸುಬ್ಬಾರಾವ್ ಸಹೋದ್ಯೋಗಿಗಳಾಗಿ ವಿಜಯ್ ಚೆಂಡೂರ್, ರಾಮಕೃಷ್ಣ, ರಘು ರಾಮನ‌ಕೊಪ್ಪ ಮೊದಲಾದವರು ಅಭಿನಯಿಸಿದ್ದಾರೆ. ಪ್ರತಿಯೊಂದು ಪಾತ್ರಗಳು ಕೂಡ ಎಪ್ಪತ್ತು ಎಂಬತ್ತರ ಕಾಲಘಟ್ಟವನ್ನು ನೆನಪಿಸುವ ರೀತಿಯಲ್ಲಿಯೇ ‌ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಗೀತ ಕೂಡ ನಮ್ಮನ್ನು ಅದೇ ಕಾಲಕ್ಕೆ ಕರೆದೊಯ್ಯುತ್ತದೆ.

 

ಸದಾ ಸದಭಿರುಚಿಯ ಚಿತ್ರಗಳ‌ ಮೂಲಕ ಪ್ರೇಕ್ಷಕರ ಮನಗೆಲ್ಲುವ ಮಂಜು ಸ್ವರಾಜ್ ಈ‌ ಬಾರಿ ಮತ್ತೊಮ್ಮೆ ಕೌಟುಂಬಿಕ ಚಿತ್ರದೊಂದಿಗೆ‌ ಬಂದಿದ್ದಾರೆ. ಎಂಬತ್ತರ ದಶಕದಿಂದ ಈಚೆಗೆ ಸಿನಿಮಾ ಇಷ್ಟಪಡುವ ಪ್ರತಿಯೊಬ್ಬರು ಕೂಡ ಮೆಚ್ಚುವಂಥ ಚಿತ್ರವಾಗಿ ಸರಳಾ ಸುಬ್ಬರಾವ್ ಮೂಡಿ‌ಬಂದಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,