ಚಿತ್ರ: ಪಂಚ ರತ್ನಗಳು****
ನಿರ್ಮಾಣ: ಜಿ.ಆರ್.ನಾರಾಯಣ ಗೌಡ
ನಿರ್ದೇಶನ: ಗೌತಂ.ಎಂ.
ತಾರಾಗಣ: ಚಿಣ್ಣರುಗಳಾದ ಪ್ರಥಮ್, ಯಶಸ್, ವಿಹಾನ್, ತನ್ವಿ, ಆಧ್ಯ ಪ್ರಥಮ್, ಇವರೊಂದಿಗೆ ಆನಂದ್ ನಗರ್ಕರ್, ಬಿಂದೂ ಆಚಾರ್ಯ ಮುಂತಾದವರು
ಸಂಗೀತ: ಪ್ರಣವ್
ಇವರೇ ನಮ್ಮ ಪಂಚ ರತ್ನಗಳು
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅನ್ನುವ ಹಾಗೆ ಪ್ರಸಕ್ತ ಮಕ್ಕಳು ಎಷ್ಟು ಚೂಟಿ ಎನ್ನುವುದಕ್ಕೆ ‘ಪಂಚ ರತ್ನಗಳು’ ಚಿತ್ರದಲ್ಲಿ ತೋರಿಸಲಾಗಿದೆ. ಸಮಾಜದ ದೈನಂದಿಕ ಸಮಸ್ಯೆಗಳನ್ನು ದೊಡ್ಡವರು ಗಮನಕ್ಕೆ ತೆಗೆದುಕೊಳ್ಳದೆ ಇರುವುದರಿಂದ ವಿಷಯವು ಸರ್ಕಾರಕ್ಕೆ ತಲುಪುವುದಿಲ್ಲ. ಇದಕ್ಕಾಗಿ ಯಾರನ್ನು ದೂರುವುದರಿಂದ ಪ್ರಯೋಜನವಿಲ್ಲ. ಇದನ್ನು ಅರಿತ ಐದು ಮಕ್ಕಳು ನಾವೇ ಮುಂದಾಗಿ ಏಕೆ ಸರಿಪಡಿಸಬಾರದು ಅಂತ ತೀರ್ಮಾನಕ್ಕೆ ಬರುತ್ತಾರೆ. ಪ್ರಕೃತಿಯ ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಇವುಗಳನ್ನು ಭುವನ್, ಜೀವಿತ, ಜ್ಯೋತಿ, ಅನಿಲ್ ಹಾಗೂ ಆಕಾಶ್ ಪಾತ್ರದ ಹೆಸರಿನಲ್ಲಿ ಬಿಂಬಿಸಲಾಗಿದೆ.
ಅಷ್ಟಕ್ಕೂ ಮಕ್ಕಳು ಯಾವ ವಿಷಯದ ಮೇಲೆ ಆಸಕ್ತಿ ವಹಿಸುತ್ತಾರೆ. ತಮ್ಮ ಪ್ರಯತ್ನದಲ್ಲಿ ಗೆಲುವು ಕಾಣದೆ ಹೋದಾಗ, ಇದಕ್ಕೆ ಕಾರಣ ಕಂಡುಹಿಡಿದು ಮತ್ತೆ ಛಲದಿಂದ ಮುಂದಕ್ಕೆ ಹೆಜ್ಜೆ ಇಟ್ಟಾಗ ಏನಾಗುತ್ತದೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು
ತಾರಾಗಣದಲ್ಲಿ ಚಿಣ್ಣರುಗಳಾದ ಪ್ರಥಮ್, ಯಶಸ್, ವಿಹಾನ್, ತನ್ವಿ, ಆಧ್ಯ ಪ್ರಥಮ್, ತಾಯಿಯಾಗಿ ಬಿಂದೂ ಆಚಾರ್ಯ, ಶಿಕ್ಷಣ ಸಚಿವರಾಗಿ ಆನಂದ್ ನಗರ್ಕರ್ ಮುಂತಾದವರು ಅಭಿನಯಿಸಿದ್ದಾರೆ.
ಅರ್ಥ ಪೂರ್ಣ ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಗೌತಂ.ಆರ್. ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಸಂಗೀತ ಪ್ರಣವ್, ಛಾಯಾಗ್ರಹಣ ಅನಿಲ್ ಕಶ್ಯಪ್, ಸಂಕಲನ ಅಭಿಷೇಕ್, ಸಿಂಕ್ ಸೌಂಡ್ ಅಜಿತ್ ಅವರದಾಗಿದೆ. ಪೋಷಕರು ತಮ್ಮ ಮಕ್ಕಳು ಧೈರ್ಯಶಾಲಿಯಾಗಬೇಕು ಅಂತ ಬಯಸುವುದಾದರೆ ಖಂಡಿತ ಇಂತಹ ಚಿತ್ರವನ್ನು ತೋರಿಸಲೇ ಬೇಕು.
****