ಚಿತ್ರ: ಭಾರತಿ ಟೀಚರ್ ಏಳನೇ ತರಗತಿ ****
ನಿರ್ಮಾಪಕ: ರಾಘವೇಂದ್ರ ರೆಡ್ಡಿ
ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ, ಸಂಗೀತ ಮತ್ತು ನಿರ್ದೇಶನ: ಎಂ.ಎಲ್.ಪ್ರಸನ್ನ
ತಾರಾಗಣ: ರೋಹಿತ್ ರಾಘವೇಂದ್ರ, ಕು.ಯಶಿಕ, ಸಿಹಿಕಹಿ ಚಂದ್ರು, ಅಶ್ವಿನ್ ಹಾಸನ್, ಗೋವಿಂದೇಗೌಡ, ದಿವ್ಯಾ ಅಂಚನ್, ಸೌಜನ್ಯ ಸುನಿಲ್. ವಿಶೇಷ ಪಾತ್ರದಲ್ಲಿ ಹಾಲಿ ಕಾರ್ಮಿಕ ಸಚಿವ ಸಂತೋಷ್.ಎಸ್.ಲಾಡ್ ಮತ್ತು ಆದಿತ್ಯ
ಕನ್ನಡ ಕಾಳಜಿ ಸಾರುವ ಭಾರತಿ ಟೀಚರ್ ಏಳನೇ ತರಗತಿ
ಹೆಸರಿನಲ್ಲೇ ಆಕರ್ಷಣೆ ಹುಟ್ಟಿಸುವ ‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾವು ಶಿಕ್ಷಣ ಕುರಿತಾದ ಹಾಗೂ ಕನ್ನಡ ಕಾಳಜಿ ಇರುವ ಕಥೆಯನ್ನು ಹೊಂದಿರುವುದು ವಿಶೇಷ. ಈ ತಲೆಮಾರಿನ ಮಕ್ಕಳಲ್ಲಿ ಕಲಿಯುವ ಮತ್ತು ಕಲಿಸುವ ಕಿಚ್ಚನ್ನು ಹುಟ್ಟಿ ಹಾಕಬೇಕು. ಇಂತಹ ಸಾತ್ವಿಕ ಆಶಯಕ್ಕೆ ಸಾರ್ವಜನಿಕರ ಬೆಂಬಲ ಅವಶ್ಯಕವಾಗಿದೆ. ಅದಕ್ಕಿಂತ ಹಚ್ಚಾಗಿ ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧ್ಯ ಆಗುತ್ತೆ. ಭಾರತಿ ಎನ್ನುವಂತಹ ಏಳನೇ ತರಗತಿ ವಿದ್ಯಾರ್ಥಿಗೆ ತನ್ನ ಊರಿನ ಪ್ರತಿಯೊಬ್ಬರು ಕನ್ನಡ ಓದಬೇಕು, ಬರಿಬೇಕು ಎನ್ನುವ ಕನಸನ್ನು ಹೊತ್ತುಕೊಂಡಿರುತ್ತಾಳೆ. ಇದಕ್ಕೆ ಮೇಷ್ಟ್ರು ಧೈರ್ಯ ತುಂಬುತ್ತಾರೆ. ಇದನ್ನು ಸಾಧಿಸುವ ಹೊತ್ತಿನಲ್ಲಿ ಅನುಭsವಿಸುವಂತಹ ನೋವು, ನಲಿವು, ಉತ್ಸಾಹ, ಪ್ರಯತ್ನ, ಇದೆಲ್ಲಾದರ ಮಧ್ಯೆ ವ್ಯವಸ್ಥೆಯನ್ನು ಬಳಸಿಕೊಳ್ಳಲು ಯೋಚನೆ ಮಾಡುತ್ತಾಳೆ. ಕೊನೆಗೆ ಭಾರತಿ ಟೀಚರ್ ಆಗಿ ಹೇಗೆ ಬದಲಾಗುತ್ತಾಳೆ ಎಂಬುದನ್ನು ತೋರಿಸಲಾಗಿದೆ.
ನಿರ್ದೇಶಕ ಎಂ.ಎಲ್.ಪ್ರಸನ್ನ ಪ್ರತಿಯೊಂದು ದೃಶ್ಯವನ್ನು ಹೂ ಪೋಣಿಸಿದಂತೆ ಮಾಡಿರುವುದರಿಂದ ನೋಡುಗರಿಗೆ ಬೋರ್ ಅನಿಸುವುದಿಲ್ಲ. ಅವರ ನಿರಂತರ ಶ್ರಮ ಪರದೆ ಮೇಲೆ ಚೆನ್ನಾಗಿ ಕಾಣಿಸುತ್ತದೆ.
ನವ ಪ್ರತಿಭೆ ರೋಹಿತ್ ರಾಘವೇಂದ್ರ ಯುವ ಹೋರಾಟಗಾರನಾಗಿ ಚೆನ್ನಾಗಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಹೊಸ ಸ್ಪುರದ್ರೂಪಿ ನಾಯಕ ಸಿಕ್ಕಿದ್ದಾರೆಂದು ಹೇಳಬಹುದು. ಭಾರತಿಯಾಗಿ ಕು.ಯಶಿಕಾ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಶಿಕ್ಷಕರಾಗಿ ಸಿಹಿಕಹಿ ಚಂದ್ರು, ಖಳನಾಗಿ ಗೋವಿಂದೇಗೌಡ, ಇನ್ಸ್‌ಪೆಕ್ಟರ್ ಆಗಿ ಅಶ್ವಿನ್ ಹಾಸನ್ ನೆನಪಿನಲ್ಲಿ ಉಳಿಯುತ್ತಾರೆ. ಹಾಗೆ ಬಂದು ಹೋಗುವ ಆದಿತ್ಯ ಜಿಲ್ಲಾಧಿಕಾರಿ ಮತ್ತು ಕ್ಲೈಮಾಕ್ಸ್‌ದಲ್ಲಿ ಕಾಣಿಸಿಕೊಳ್ಳುವ ಸಚಿವ ಸಂತೋಷ್.ಎಸ್.ಲಾಡ್ ಚಿತ್ರಕ್ಕೆ ತೂಕ ಹೆಚ್ಚಿಸಿದ್ದಾರೆ. ಉಳಿದಂತೆ ಕಲಾವಿದರುಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಹತ್ತು ಹಾಡುಗಳು ಇದ್ದರೂ ಸನ್ನಿವೇಶಕ್ಕೆ ಪೂರಕವಾಗಿದ್ದು, ಒಂದೆರಡು ಸಾಂಗ್ಸ್ ಕೇಳಬಲ್. ಎಂ.ಬಿ.ಹಳ್ಳಿಕಟ್ಟಿ ಕ್ಯಾಮಾರ ಕೆಲಸ ಗ್ರಾಮೀಣ ಭಾಗದ ಸುಂದರ ತಾಣಗಳನ್ನು ಅದ್ಬುತವಾಗಿ ಸೆರೆಹಿಡಿದ್ದಾರೆ. ಒಟ್ಟಾರೆ ಈಗೀನ ಮಕ್ಕಳು ನೋಡಲೇ ಬೇಕಾದ ಚಿತ್ರವಾಗಿದೆ.
****