The Devil.Film Reviews

Thursday, December 11, 2025

ಇಬ್ಬರಾಗಿ ಅಬ್ಬರಿಸಿದ ಡೆವಿಲ್!

ಚಿತ್ರ : ದಿ ಡೆವಿಲ್

ನಿರ್ದೇಶಕರು : ಪ್ರಕಾಶ್ ವೀರ್

ನಿರ್ಮಾಪಕರು : ಜೆ ಜಯಮ್ಮ, ಸರೆಗಮ

ತಾರಾಗಣ : ದರ್ಶನ್, ರಚನಾ ರೈ, ಅಚ್ಯುತ್ ಕುಮಾರ್ ಮೊದಲಾದವರು.

ಒಬ್ಬ ಸಿನಿಮಾ‌ ನಟನಾಗಲು ಕನಸು ಕಾಣುವಾತ.‌ ಮತ್ತೋರ್ವ ಹಣ ಮತ್ತು ಹೆಣ್ಣಿನ ಮೋಹದಲ್ಲಿ ಕಳೆದು ಹೋದವನು. ಎರಡು ಗುಣಗಳ ಇಬ್ಬಿಬ್ಬರನ್ನು ಅದ್ಭುತವಾಗಿ ನಟಿಸಿ ತೋರಿಸಿದ್ದಾರೆ ಛಾಲೆಂಜಿಂಗ್ ಸ್ಟಾರ್ ದರ್ಶನ್.

ಡೆವಿಲ್ ನಲ್ಲಿ ದರ್ಶನ್ ರದ್ದು ದ್ವಿಪಾತ್ರ. ಇದು ಸಿನಿಮಾ ಶುರುವಾದ ಅರ್ಧ ಘಂಟೆಯಲ್ಲೇ ಅರಿವಾಗುವ ಸತ್ಯ. ಒಬ್ಬಾತ ಭ್ರಷ್ಟ ರಾಜಕಾರಣಿಯ ಪುತ್ರ ಆತನೇ ಡೆವಿಲ್ ಧನುಷ್. ಮತ್ತೋರ್ವ ಸಾಮಾನ್ಯ ಹೋಟೆಲ್ ನಡೆಸುತ್ತಾ ಕಲಾವಿದನಾಗಲು ಪ್ರಯತ್ನ‌‌ ನಡೆಸುವ ಕೃಷ್ಣ.

ಸರಳ ವಿರಳ ಗಂಭೀರ ಸುಂದರನಾಗಿ ದರ್ಶನ್ ಅವರನ್ನು ನಾವು ಈಗಾಗಲೇ ಸಾಕಷ್ಟು ಬಾರಿ ನೋಡಿದ್ದೇವೆ. ಆದರೆ ಡೆವಿಲ್ ಅಬ್ಬರ ಇದೆಯಲ್ಲ? ಅದು ತೀರ ತೀರ ಹೊಸತು. ಪಕ್ಕ‌ ಖಳನಟನಂತೆ ನಟಿಸಿ ಅಚ್ಚರಿ ಮೂಡಿಸಿದ್ದಾರೆ ದರ್ಶನ್.

ಎರಡು ಪಾತ್ರಗಳಿಗೆ ಎರಡು ಜೋಡಿಗಳಿದ್ದಾರೆ. ಕೃಷ್ಣನಿಗೆ ಆತನ ಪ್ರಾಣಸಖಿಯಾಗಿ ರುಕ್ಮಿಣಿ ಇದ್ದಾಳೆ. ನವನಟಿ ರಚನಾ ರೈ ರುಕ್ಮಿಣಿ ಪಾತ್ರವನ್ನು ನಿಭಾಯಿಸಿದ್ದಾರೆ. ಧನುಷ್ ನ ಆಸಕ್ತಿಯ ಚೆಲುವೆಯರಲ್ಲೊಬ್ಬಳು ರಾಜಕೀಯ ಕ್ಷೇತ್ರದಲ್ಲೇ ಇರುತ್ತಾಳೆ. ಈ ಡೀಲ್ ರಾಣಿಯಾಗಿ ಶರ್ಮಿಳಾ‌ ಮಾಂಡ್ರೆ ನಟಿಸಿದ್ದಾರೆ.

ಚಿತ್ರದಲ್ಲಿ ನಿರ್ದೇಶಕ ಪ್ರಕಾಶ್ ವೀರ್ ಸಮಾಜದ ಎರಡು ಸ್ಥರಗಳ‌ ವ್ಯತ್ಯಾಸವನ್ನು ಎರಡು ಪಾತ್ರಗಳ ಮೂಲಕವೇ ಕಟ್ಟಿಕೊಟ್ಟಿದ್ದಾರೆ. ರಾಜಕೀಯ ರಂಗದ ಧನುಷ್ ಸಮಕಾಲೀನ ರಾಜಕೀಯದ ದುರುಳರ ಸಂಕೇತವಾಗಿ ಕಾಣಿಸುತ್ತಾನೆ. ಇದೇ ಸಂದರ್ಭದಲ್ಲಿ ಕೃಷ್ಣ ಸಾಮಾನ್ಯ ಜನಗಳ ನಾಡಿ ಮಿಡಿತ ಅರಿತ ವ್ಯಕ್ತಿಯಾಗಿ ನಿರೂಪಿತಗೊಂಡಿದ್ದಾನೆ.

ಧನುಷ್ ತಂದೆಯಾಗಿ ಭ್ರಷ್ಟ ಮುಖ್ಯಮಂತ್ರಿಯ ಪಾತ್ರವನ್ನು ಬಾಲಿವುಡ್ ನಟ ಮಹೇಶ್ ಮಾಂಜ್ರೇಕರ್ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿಯ ಆಪ್ತ ಸಹಾಯಕ ಅನಂತ ನಂಬಿಯಾರ್ ಪಾತ್ರವನ್ನು ಅಚ್ಯುತ್ ಕುಮಾರ್ ಮಾಡಿದ್ದಾರೆ. ಉಳಿದಂತೆ ಶ್ರೀನಿವಾಸ ಪ್ರಭು, ತುಳಸಿ ಶಿವಮಣಿ, ಗಿಲ್ಲಿ ನಟ, ಶೋಭರಾಜ್ ಮೊದಲಾದ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

ಸಿನಿಮಾ‌ ದರ್ಶನ್ ಅಭಿಮಾನಿಗಳನ್ನು ಮಾತ್ರವಲ್ಲದೆ, ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಂತಿದೆ.

Copyright@2018 Chitralahari | All Rights Reserved. Photo Journalist K.S. Mokshendra,