Kempu Haunted Hasiru.Reviews

Friday, December 05, 2025

 

ಚಿತ್ರ: *ಕೆಂಪು ಹಳದಿ ಹಸಿರು*

*ನಿರ್ಮಾಣ*: ಸನ್‌ರೈಸ್ ಎಂಟರ್‌ಟೈನ್‌ಮೆಂಟ್ ಅಂಡ್ ಫಿಲಂಸ್

*ನಿರ್ಮಾಪಕರು*: ಪ್ರಸಾದ್‌ಕುಮಾರ್ ನಾಯ್ಕ್

*ಸಹ ನಿರ್ಮಾಪಕರು*: ಪ್ರಸಾದ್ ಈರ್ಲಾ ಮತ್ತು ಹರೀಶ್ ಧಾಸ್ಮಾನ

*ನಿರ್ದೇಶನ*: ಮಣಿ.ಎಜೆ.ಕಾರ್ತಿಕೇಯನ್

*ಕಲಾವಿದರು*: ಶ್ರೀಹನ್‌ದೀಪಕ್, ದಿವ್ಯಾಸುರೇಶ್, ಅರವಿಂದ್ ಬೋಳಾರ್, ಶೈಲಶ್ರೀಮುಲ್ಕಿ ಮುಂತಾದವರು

*ಸಂಗೀತ*: ವಿಕಾಸ್ ವಿಶ್ವಕರ್ಮ

*ಛಾಯಾಗ್ರಹಣ*: ಮಂಜುನಾಥ್ ನಾಯಕ್

 

*ಕುತೂಹಲಗಳ ಗುಚ್ಚ ಕೆಂಪು ಹಳದಿ ಹಸಿರು*

 

       *ಕೆಂಪು ಹಳದಿ ಹಸಿರು* ಚಿತ್ರದ ಹೆಸರು ಕೇಳಿದೊಡನೆ ಇದೊಂದು ಟ್ರಾಫಿಕ್ ಸಿಗ್ನಲ್ ಕಥೆ ಇರಬಹುದೇನೋ ಅಂತ ಭಾಸವಾಗುವುದುಂಟು. ಆದರೆ ಸಿನಿಮಾವು  ಸೆಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ’ಸ್ಟಾಪ್, ಥಿಂಕ್ ಅಂಡ್ ಪ್ರೊಸೀಡ್ ಇನ್ ಲೈಫ್’ ಎಂಬ ಅರ್ಥಪೂರ್ಣ ಅಡಿಬರಹ ಇರಲಿದೆ.

 

       ಕೆಂಪು, ಹಳದಿ, ಹಸಿರು ಎನ್ನುವಂತ ಮೂರು ಪಾತ್ರಗಳು ಇಡೀ ಸಿನಿಮಾ ಆವರಿಸಿಕೊಂಡಿದೆ. ಅರ್ಜುನ್ ಶ್ರೀಮಂತ ಉದ್ಯಮಿಯ ಮಗನಾಗಿದ್ದರೂ, ಎಲ್ಲವನ್ನು ತೊರೆದು ಡಿಲಿವರಿ ಬಾಯ್ ಆಗಿ ಕೆಲಸ ಮಾಡಲು ಕಾರಣ ಏನು? ಸಾಕ್ಷಿ ಕುಡಿತದ ಚಟ ಇದ್ದರೂ ದೈವಭಕ್ತೆ. ಒಂದು ಹಂತದಲ್ಲಿ ಇಬ್ಬರಲ್ಲೂ ಪ್ರೀತಿ ಚಿಗುರುತ್ತದೆ. ಇದಕ್ಕೂ ಮುನ್ನ ಧನ್ಯಳೊಂದಿಗೆ ಲವ್ ಆಗಿ ತಪ್ಪಿ ಹೋಗಲು ಕಾರಣ ಏನು? ಇತ್ತ ಅರ್ಜುನ್ ಸನ್ನಿವೇಶಗಳನ್ನು ಹುಡುಕಲು ಹೋದಾಗ ತನಗೆ ತಿಳಿಯದಂತೆ ಪ್ರಶ್ನೆಗಳು ಹುಟ್ಟುತ್ತಾ ಹೋಗುತ್ತದೆ. ಇದಕ್ಕೆ ಉತ್ತರ ಹುಡುಕಲು ಮುಂದಾದಾಗ ಒಂದಷ್ಟು ಘಟನೆಗಳು ನಡೆಯುತ್ತದೆ.  ಅರ್ಜುನ್-ಸಾಕ್ಷಿ ಸಂಬಂದ ಏನಾಯಿತು? ಕೊನೆಗೆ ಆತ ಮನೆಗೆ ವಾಪಸ್ಸು ಬರುತ್ತನಾ? ಎಲ್ಲದನ್ನು ನಾವು ಹೇಳುವುದಕ್ಕಿಂತ ಒಮ್ಮೆ ಚಿತ್ರ ನೋಡಿ ಬರುವುದು ಒಳಿತು.

       ಚಿತ್ರದ ವೇಗ ಕಡಿಮೆ ಆಯ್ತು ಅಂದುಕೊಳ್ಳುವ ಹೊತ್ತಿಗೆ ಕುತೂಹಲ ದೃಶ್ಯಗಳು ಬಂದು ಅದೆಲ್ಲಾವನ್ನು ಮರೆಸುವಂತೆ ಮಾಡುವಲ್ಲಿ ಹಾಗೂ ಪ್ರೇಕ್ಷಕನ ನಿರೀಕ್ಷೆಗಳಿಗೆ ನ್ಯಾಯ ಒದಗಿಸುವಲ್ಲಿ ನಿರ್ದೇಶಕ ಮಣಿ.ಎಜೆ.ಕಾರ್ತಿಕೇಯನ್ ಒಳ್ಳೆಯ ಚಿತ್ರಕಥೆ ಸಪಲವಾಗಿದೆ. ರೈಡ್ ಮಾಡುವಾಗ ಹೆಲ್ಮೆಟ್ ಹಾಕುವುದು ಸುರಕ್ಷಿತವೆಂದು ಪಾತ್ರಗಳ ಮೂಲಕ ಹೇಳಿಸಿದ್ದಾರೆ.

 

        ಶ್ರೀಹನ್‌ದೀಪಕ್ ನಾಯಕನಾಗಿ ಗಮನ ಸೆಳೆಯುತ್ತಾರೆ. ಬಿಗ್ ಬಾಸ್ ಸ್ಪರ್ಧಿಯಾಗಿದ್ದ ದಿವ್ಯಾಸುರೇಶ್ ನಾಯಕಿಯಾಗಿ ಪರದೆ ಮೇಲೆ ಚೆಂದ ಕಾಣಿಸುತ್ತಾರೆ. ಬಂಟಿಯಾಗಿ ನಗಿಸುವ ಅರವಿಂದ್ ಬೋಳಾರ್, ಟ್ರಾಫಿಕ್ಸ್ ಇನ್ಸ್‌ಪೆಕ್ಟರ್ ಆಗಿ ಶೈಲಶ್ರೀ ಮುಲ್ಕಿ. ಉಳಿದಂತೆ ಚಿಂದೋಡಿ ವಿಜಯ್‌ಕುಮಾರ್, ಮೀನಾಕ್ಷಿಹರ್ತಿ, ಶ್ರೀಜನ್, ಮಾನಸ್, ಉಮೇಶ್‌ಹೆಗಡೆ ಕಡ್ತಲಾ ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಎರಡು ಹಾಡುಗಳು ಕೇಳಬಲ್. ಮಂಜುನಾಥ್ ನಾಯಕ್ ಕ್ಯಾಮಾರದಿಂದ ಮಂಗಳೂರು, ಉಡುಪಿ ಸುಂದರ ತಾಣಗಳು ಕಣ್ಣಿಗೆ ತಂಪು ಕೊಡುತ್ತದೆ.

 

Copyright@2018 Chitralahari | All Rights Reserved. Photo Journalist K.S. Mokshendra,