Love OTP.Film Reviews

Wednesday, November 12, 2025

 

ಕುರುಡು ಪ್ರೀತಿಯ ಎರಡು ರೀತಿ

 

 

ಚಿತ್ರ: ಲವ್ ಒಟಿಪಿ

ನಿರ್ದೇಶಕ: ಅನೀಶ್

ನಿರ್ಮಾಪಕ: ವಿಜಯ್ ಎಂ ರೆಡ್ಡಿ

ತಾರಾಗಣ: ಅನೀಶ್, ಸ್ವರೂಪಿಣಿ, ಜಾಹ್ನವಿಕಾ ಕಲಕೇರಿ

 

ಲವ್ ಗೆ ಯಾವ ಒಟಿಪಿ ಎನ್ನುವ ಸಂದೇಹ ಸಹಜ.‌ ಇಲ್ಲಿ ಒಟಿಪಿ ಅಂದರೆ ಓವರ್ ಟಾರ್ಚರ್ ಪ್ರೆಷರ್. ಪ್ರೀತಿಯ ಹೆಸರಲ್ಲಿ ಓವರ್ ಟಾರ್ಚರ್ ಮತ್ತು ಪ್ರೆಷರ್ ಅನುಭವಿಸಿದರೆ ಮುಂದೇನಾದೀತು ಎನ್ನುವುದಕ್ಕೆ ಇರುವ ಉತ್ತರವೇ ಲವ್ ಒಟಿಪಿ.

 

ಕಾಲೇಜ್ ನಲ್ಲಿ ಅಕ್ಷಯ್ ಒಬ್ಬ ಉತ್ತಮ‌ ಕ್ರಿಕೆಟಿಗ. ಆತನ ಕ್ರಿಕೆಟ್ ಮತ್ತು ಸಹಾಯಹಸ್ತ ಚಾಚುವ ರೀತಿ ಕಂಡು ಪ್ರೀತಿಯಲ್ಲಿ ಬಿದ್ದವಳು ಸನಾ. ಆದರೆ ಸನಾಳ ಪ್ರೀತಿಯನ್ನು ಒಪ್ಪಿಕೊಳ್ಳಲು ಅಕ್ಷಯ್ ಗೆ ಭಯ.‌ ಕಾರಣ ಬೇರೇನಲ್ಲ, ತಂದೆಯ ಶಿಸ್ತು.

ಅಕ್ಷಯ್ ತಂದೆ ಒಬ್ಬರು ಪೊಲೀಸ್ ಅಧಿಕಾರಿ. ಅವರಿಗೆ ಪ್ರೇಮಿಗಳು ಅಂದರೇನೇ ಅಲರ್ಜಿ. ಹಾಗಾಗಿಯೇ ಮಗ ಪ್ರೀತಿಗೆ ಬೀಳಬಾರದು ಎಂದು ಸದಾ ಎಚ್ಚರಿಕೆ ವಹಿಸುತ್ತಿರುತ್ತಾನೆ. ಹೀಗಾಗಿಯೇ ಸನಾ ಜತೆಗಿನ ಪ್ರೀತಿಯನ್ನು ಮನೆಯಲ್ಲಿ ಅಡಗಿಸುತ್ತಾನೆ. ಆದರೆ ಸನಾ ಮನೆಯಲ್ಲಿ ಎಲ್ಲವೂ ಗೊತ್ತು. ತಾಯಿ, ತಂದೆ, ಅಣ್ಣ ಎಲ್ಲರೂ ಸನಾ ಪ್ರೀತಿಗೆ ಬೆಂಬಲವಾಗಿರುತ್ತಾರೆ. ಆದರೆ ಇದರ ಮಧ್ಯೆ ಮಾತ್ರ ಸನಾ ತುಂಬಾನೇ ಪೊಸೆಸಿವ್ ನಂತೆ ವರ್ತಿಸತೊಡಗುತ್ತಾಳೆ. ಓವರಾಗಿ ಟಾರ್ಚರ್ ನೀಡತೊಡಗುತ್ತಾಳೆ. ಅಕ್ಷಯ್ ಇವಳಿಂದ ಹೇಗಾದರೂ ಕಳಚಿಕೊಳ್ಳಬೇಕು ಎನ್ನುವ ಪ್ರಯತ್ನಕ್ಕೆ ಬೀಳುತ್ತಾನೆ‌. ಇಂಥ ಸಂದರ್ಭದಲ್ಲೇ ಫಿಸಿಯೋ ಕೋಚ್ ಆಗಿ ಬರುವ ನಕ್ಷತ್ರ ಆಪ್ತವಾಗುತ್ತಾಳೆ. ಎರಡು ದೋಣಿಗೆ ಕಾಲಿಡುವ ಅಕ್ಷಯ್ ಬದುಕು ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಕಥೆ.

 

ಒಂದೊಳ್ಳೆಯ ಲವಲವಿಕೆಯ ಕಥೆಯನ್ನು ಅದಕ್ಕಿಂತ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅನೀಶ್.‌ ನಿರ್ದೇಶನದ ಜತೆಯಲ್ಲೇ ನಾಯಕನಾಗಿಯೂ ಮನಸೆಳೆದಿದ್ದಾರೆ. ಸನಾ ಪಾತ್ರದಲ್ಲಿ ಸ್ವರೂಪಿಣಿ ಹಲವು ಬಗೆಯಾಗಿ ಕಾಣಿಸಿದ್ದಾರೆ. ಅಪರೂಪಕ್ಕೆ ‌ಸಿಕ್ಕ ಉತ್ತಮ‌‌ ಪಾತ್ರವನ್ನು ತಕ್ಕ ಹಾಗೆ ಬಳಸಿಕೊಂಡಿದ್ದಾರೆ. ಅಕ್ಷಯ್ ತಂದೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಾಜೀವ್ ಕನಕಲ ನಟನೆ ಆಕರ್ಷಕವಾಗಿದೆ. ಸನಾ ತಂದೆಯಾಗಿ ರವಿಭಟ್‌ ನಟಿಸಿದ್ದರೆ ನಕ್ಷತ್ರಾ ತಾಯಿಯಾಗಿ ತುಳಸಿ ಶಿವಮಣಿ ಅಭಿನಯಿಸಿದ್ದಾರೆ. ‌ನಕ್ಷತ್ರಾ ಪಾತ್ರದಲ್ಲಿ ಜಾಹ್ನವಿಕಾ‌ ಕಲಕೇರಿ ಅಭಿನಯ ಆಪ್ತವಾಗುತ್ತದೆ. ಆನಂದ್ ರಾಜಾ ವಿಕ್ರಮ್ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಅದ್ಭುತ.

 

ಇದು ಕುಟುಂಬ ಸಮೇತ ನೋಡಬಹುದಾದ ಒಂದೊಳ್ಳೆಯ ಪ್ರೇಮ ಕಥೆ ಎನ್ನುವುದರಲ್ಲಿ ಎರಡು ಮಾತಿಲ್ಲ.

 

Copyright@2018 Chitralahari | All Rights Reserved. Photo Journalist K.S. Mokshendra,