ಚಿತ್ರ: ಜೈ****
ತಾರಾಗಣ: ರೋಪೇಶ್ಶೆಟ್ಟಿ, ಅದ್ವಿತಿಶೆಟ್ಟಿ, ನವೀನ್.ಡಿ.ಪೆಡಿಲ್, ರಾಜ್ ದೀಪಕ್ಶೆಟ್ಟಿ ಹಾಗೂ ವಿಶೇಷ ಪಾತ್ರದಲ್ಲಿ ಬಾಲಿವುಡ್‌ನ ಸುನಿಲ್ ಶೆಟ್ಟಿ ಮುಂತಾದವರು
ನಿರ್ದೇಶನ: ರೂಪೇಶ್ ಶೆಟ್ಟಿ
ನಿರ್ಮಾಣ: ಕೂಲಿನ್ ಫಿಲಂಸ್, ಮಂಜುನಾಥ್ ಅತ್ತಾವರ, ಮುಗ್ರೊಡಿ ಫಿಲಂಸ್
ಊರ ಸೇತುವೆ ಕಟ್ಟಲು ಮಾಡುವ ಹೋರಾಟ
ಗ್ರಾಮೀಣ ಭಾಗದ ಕಡಲ ತೀರದಲ್ಲಿ ಜನರು ಮೂಲಭೂತ ಸೌಕರ್ಯಕ್ಕಾಗಿ ಪರದಾಡುತ್ತಿರುತ್ತಾರೆ. ಜತೆಗೆ ಕಬ್ಬಡ್ಡಿ ಆಟ, ಪ್ರೀತಿ ಸುತ್ತ ಸಾಗುವ ಕಥೆಯು ‘ಜೈ ಚಿತ್ರದಲ್ಲಿದೆ. ಚಿಕ್ಕವನಾಗಿದ್ದನಿಂದಲೂ ಹೋರಾಟ ಮಾಡುತ್ತಲೇ ಬೆಳೆದ ಸತ್ಯ, ಶಾಸಕನ ಪರವಾಗಿ ಕೆಲಸ ಮಾಡುತ್ತಾ ಒಂದಷ್ಟು ಹಣ ಸಂಪಾದಿಸಿರುತ್ತಾನೆ. ಮಗನ ಭವಿಷ್ಯ ಹಾಳಾಗಬಾರದೆಂದು ಪೋಷಕರು ನಿರೂಪಕಿಯೊಂದಿಗೆ ನಿಶ್ಚಿತಾರ್ಥ ಮಾಡಲು ಮುಂದಾಗುತ್ತಾರೆ. ಆದರೆ ಅವನು ಮದುವೆ ಬೇಡವೆಂದು ಹೋಗುತ್ತಾನೆ. ಯಾವ ಹುಡುಗನನ್ನು ಒಪ್ಪದ ಆಕೆಗೆ ಇದು ಪ್ರಶ್ನೆಯಾಗಿ ಕಾಡುತ್ತದೆ.
ಇದರ ನಡುವೆ ಗೆಳೆಯರೊಂದಿಗೆ ಊರಿನ ವಿಚಾರವಾಗಿ ಚರ್ಚೆ ನಡೆಸಿ, ಜನರ ಉಪಯೋಗಕ್ಕಾಗಿ ಸೇತೆವು ಬೇಕೆಂದು ಪಟ್ಟು ಹಿಡಿಯುತ್ತಾರೆ. ಇದರ ಮಧ್ಯೆ ಶಾಸಕ ಅಲ್ಲಿನ ಜಾಗದಲ್ಲಿ ಕಾರ್ಖಾನೆ ಕಟ್ಟಲು ಊರ ಜನರನ್ನು ಖಾಲಿ ಮಾಡುವಂತೆ ಹಣದ ಅಮಿಷ ನೀಡುತ್ತಾನೆ. ಮುಂದೆ ಚುನಾವಣೆ ಹತ್ತಿರ ಬಂದಿದ್ದರಿಂದ ಪ್ರಚಾರಕ್ಕಾಗಿ ಬಾಲಿವುಡ್ ನಟನನ್ನು ಕರೆತರುತ್ತಾರೆ. ಸೇತುವೆ ಒಂದಡೆಯಾದರೆ, ಎಲೆಕ್ಷನ್‌ನಲ್ಲಿ ಗೆಲ್ಲುವುದೇ ಗುರಿಯಾಗಿರುತ್ತದೆ. ಕ್ಲೈಮಾಕ್ಸ್‌ದಲ್ಲಿ ಯಾರು ಜಯ ಸಾಧಿಸುತ್ತಾರೆ ಎಂಬುದು ಕಥೆಯ ಸಾರಾಂಶವಾಗಿದೆ.
ರೂಪೇಶ್ ಶೆಟ್ಟಿ ನಾಯಕ ಮತ್ತು ನಿರ್ದೇಶಕರಾಗಿ ಎರಡು ಜವಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದ್ಚಿತಿಶೆಟ್ಟಿ ನಾಯಕಿಯಾಗಿ ಗಮನ ಸೆಳೆಯುತ್ತಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಸಿನಿಮಾಕ್ಕೆ ಕಳಸಇಟ್ಟಂತೆ ಬಂದು ಹೋಗುತ್ತಾರೆ. ಉಳಿದಂತೆ ರಾಜ್ ದೀಪಕ್‌ಶೆಟ್ಟಿ, ನವೀನ್.ಡಿ.ಪಡಿಲ್ ಮುಂತಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆ ‘ಜೈ’ ಪೈಸಾ ವಸೂಲ್ ಎನ್ನಬಹುದು.
****