Love U Muddu.Reviews

Friday, November 07, 2025

 

'ಲವ್ ಯು ಮುದ್ದು’ ಸತ್ಯ ಘಟನೆಗೆ ಸ್ಪರ್ಧೆ ನೀಡುವ ನಟನೆ

 

 

ಚಿತ್ರ: ಲವ್ ಯು ಮುದ್ದು

ನಿರ್ದೇಶಕ: ಕುಮಾರ್ ಎಲ್

ನಿರ್ಮಾಪಕ: ಕಿಶನ್ ಟಿ. ಎನ್

ತಾರಾಗಣ: ಸಿದ್ದು ಮೂಲಿಮನಿ, ರಾಜೇಶ್ ನಟರಂಗ, ರೇಷ್ಮಾ. ಮೊದಲಾದವರು.

 

ಪ್ರೇಮ ಕಥೆಯೊಂದಿಗೆ ಬಂದು ಪ್ರೇಕ್ಷರಿಗೆ ಸ್ಫೂರ್ತಿಯಾಗುವ ಎಷ್ಟೋ ಸಿನಿಮಾಗಳು ನಮಗೆಲ್ಲ ಗೊತ್ತು. ಆದರೆ ನಿಜವಾದ ಪ್ರೀತಿಯೇ ಸಿನಿಮಾದ ಕತೆಯಾಗುವುದು ತೀರ ಅಪರೂಪ. ಆದರೆ ಅಂಥ್ದೊಂದು ಸಂದರ್ಭವನ್ನು ಸೃಷ್ಟಿಸಿದ ಚಿತ್ರವೇ ಲವ್ ಯು ಮುದ್ದು.

ಇಬ್ಬರು ಪ್ರೇಮಿಗಳನ್ನೇ ಮುಖ್ಯವಾಗಿಸಿ ಹೆಣೆಯಲಾದ  ಕಥೆ  ಈ ಚಿತ್ರದ್ದು. ಪ್ರೇಮಕ್ಕೂ ಮೊದಲು ತಂದೆ ಮಗನ ಮಮತೆಯನ್ನು ಸಾರುವ ದೃಶ್ಯಗಳೊಂದಿಗೆ ಚಿತ್ರ ಶುರುವಾಗುತ್ತದೆ. ಮಗನನ್ನು ಪ್ರೀತಿಯಿಂದ ಸಾಕಿರುವ ತಂದೆ. ಮಗನಲ್ಲಿ ಒತ್ತಡ ಹೇರಿರುವ ಒಂದೇ ವಿಚಾರ ಮದುವೆ ಅಂದರೆ ಮದುವೆ ಮಾತ್ರ. ಇಂಥ ಪುತ್ರ ಒಮ್ಮೆ ಕಾರ್ಕಳದ ತಾಯಿ ಮನೆಯ ಪರಿಸರಕ್ಕೆ ಹೋದಾಗ ನವೆಯುವ ಘಟನೆ ಹೊಸದೊಂದು ತಿರುವು ತಂದು ಕೊಡುತ್ತದೆ. ಕಾರಣ ಒಬ್ಬಳು ಅನಾಥ ಹುಡುಗಿ. ಟೀಚರ್ ವೃತ್ತಿಯಲ್ಲಿರುವ ಯುವತಿಗೆ ಮನಸು ಕೊಡುವ ನಾಯಕ ತನ್ನ ಈ ಪ್ರೇಯಸಿಯನ್ನು ಪ್ರೀತಿಯನ್ನು ತಂದೆಗೆ ಸರ್ಪ್ರೈಸ್ ನೀಡಲೆಂದು ಕರೆದುತರುತ್ತಾನೆ. ಆದರೆ ಆಗ ನಡೆಯುವ ಅನಿರೀಕ್ಷಿತ ಘಟನೆ ಇಡೀ ಚಿತ್ರಣವನ್ನೇ ಬದಲಾಯಿಸುತ್ತದೆ. ಮಹಾರಾಷ್ಟ್ರದ  ರಿಯಲ್ ಜೋಡಿಗಳಾದ ಆಕಾಶ್ ಮತ್ತು ಅಂಜಲಿ ಬಾಳಲ್ಲಿ ನಡೆದ ನೈಜ ಘಟನೆಗೆ ಬಗ್ಗೆ ಅರಿತವರಿಗೆ ಇದು ವಿಶೇಷ ಎಂದು ಅನಿಸದೆ ಇರಬಹುದು. ಆದರೆ ಈ ಕತೆಗೆ ನಿರ್ದೇಶಕರು ಕೊಟ್ಟ ಸಿನಿಮೀಯ ಬದಲಾವಣೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.

 

ಪ್ರೇಮಿಯಾಗಿ ಕಾಣಿಸಿರುವ ನಟ ಸಿದ್ದು ಮೂಲಿಮನಿಗೆ ನವ ಪ್ರತಿಭೆ ರೇಷ್ಮಾ ಜೋಡಿಯಾಗಿದ್ದಾರೆ. ಸೆಂಟಿಮೆಂಟ್ ದೃಶ್ಯಗಳಲ್ಲಿ ಇಬ್ಬರು ಕೂಡ ಪ್ರಶಸ್ತಿ ಗೆಲ್ಲಬಲ್ಲ ಅಭಿನಯ ನೀಡಿದ್ದಾರೆ. ನಾಯಕನ ತಂದೆಯಾಗಿ ರಾಜೇಶ್ ನಟರಂಗ ತುಂಬ ಚೆನ್ನಾಗಿ ಹೊಂದಿಕೊಂಡಿದ್ದಾರೆ.

 

ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಿಂದ ಜನಪ್ರಿಯರಾಗಿದ್ದ ನಿರ್ದೇಶಕ ಕುಮಾರ್ ಎಲ್ ಈ ಸಲ ಹೊಸ ಪ್ರಯೋಗ ನಡೆಸಿ  ಪ್ರೇಕ್ಷಕ ಹೃದಯ ಸೇರಿದ್ದಾರೆ. ತಬಲಾ ನಾಣಿಯವರಿಗೆ ಇಲ್ಲಿಯೂ ಒಂದೊಳ್ಳೆಯ ಪಾತ್ರವನ್ನೇ ನೀಡಲಾಗಿದೆ. ಸಿನಿಮಾ ಜನಮನಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,