Austin Na Mahan Mouna.Reviews

Friday, September 05, 2025

ಚಿತ್ರ: ಆಸ್ಟಿನ್ ಮಹಾಮೌನ****

ನಿರ್ದೇಶನ ಮತ್ತು ನಿರ್ಮಾಣ: ವಿನಯ್ಕುಮಾರ್ ವೈದ್ಯನಾಥನ್

ತಾರಾಗಣ: ವಿನಯ್ಕುಮಾರ್ ವೈದ್ಯನಾಥನ್, ರಿಷಾ, ಪ್ರಕೃತಿ, ಬಲರಾಜವಾಡಿ, ರಘುರಾಮನಕೊಪ್ಪ ಮುಂತಾದವರು

ಪ್ರೀತಿಯಲ್ಲಿ ದ್ವೇಷ, ಪ್ರತಿಷ್ಠೆ ಇದೆ

        ವಿಭಿನ್ನ ಕತೆಯನ್ನು ಹೊಂದಿರುವ ‘ಆಸ್ಟಿನ್‌ನ ಮಹಾಮೌನ’ ಚಿತ್ರದಲ್ಲಿ ದೊಡ್ಡವರ ಪ್ರತಿಷ್ಟೆಯಿಂದ ನವ ಜೋಡಿಗಳಿಗೆ ಯಾವ ರೀತಿ ಸಂಕಟ ತಂದಿಡುತ್ತದೆ. ಅವರ ಆಸೆಗಿಂತ ತಮ್ಮ ಸೇಡು ಮುಖ್ಯವೆಂದು ಭಾವಿಸುವ ಪೋಷಕರು ಮುಂದೆ ಮಕ್ಕಳಿಗೆ ದೊಡ್ಡ ಅವಾಂತರಕ್ಕೆ ದಾರಿ ಮಾಡಿಕೊಡುತ್ತಾರೆ. 

ಇದರಲ್ಲಿ ಲವ್ ಜತೆಗೆ ಪ್ರತಿಷ್ಠೆ, ದ್ವೇಷ ಎರಡು ಕಾಣಿಸಿಕೊಂಡು, ತನ್ನ ಹಠವೇ ಮೇಲಾಗಬೇಕೆಂಬ ಕೆಟ್ಟ ಮನಸ್ಥಿತಿಯೂ ಇದೆ. ಒಂದಷ್ಟು ಸನ್ನಿವೇಶಗಳು ಎಮೋಷನಲ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಡಿಸೋಜಾ ಹಾಗೂ ಜಾರ್ಜ್ ಕುಟುಂಬಗಳ ಸುತ್ತ ಸಾಗಲಿದ್ದು, ೯೦ರ ಕಾಲಘಟ್ಟದಲ್ಲಿ ನಡೆಯುವ ಕ್ರಿಶ್ಚಿಯನ್ ಧರ್ಮದ ವಿಷಯಗಳು ತುಂಬಿಕೊಂಡಿದೆ.

      ವಿನಯ್‌ಕುಮಾರ್ ವೈದ್ಯನಾಥನ್ ನಾಯಕ, ನಿರ್ದೇಶನ ಹಾಗೂ ನಿರ್ಮಾಣದ ಜವಬ್ದಾರಿಯನ್ನು ಒಟ್ಟಿಗೆ ಚೆನ್ನಾಗಿ ನಿಭಾಯಿಸಿದ್ದಾರೆ. ನಾಯಕಿ ರಿಷಾಜಾಸ್ಮಿನ್ ಗಮನ ಸೆಳೆಯುತ್ತಾರೆ. ಉಳಿದಂತೆ ಪ್ರಕೃತಿ, ಬಲರಾಜವಾಡಿ, ರಘುರಾಮನಕೊಪ್ಪ, ಜಗ್ಗಪ್ಪ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆ ಸಿನಿಮಾವು ಪೈಸಾ ವಸೂಲ್ ಎನ್ನಬಹುದು.

****

 

 

Copyright@2018 Chitralahari | All Rights Reserved. Photo Journalist K.S. Mokshendra,