ಚಿತ್ರ: ನಾನು ಮತ್ತು ಗುಂಡ-೨
ನಿರ್ದೇಶನ ಮತ್ತು ನಿರ್ಮಾಣ: ರಘುಹಾಸನ್
ತಾರಾಗಣ: ರಾಕೇಶ್ ಅಡಿಗ, ರಚನ ಇಂದೂರ್, ಅವಿನಾಶ್, ಗೋವಿಂದೆಗೌಡ ಮುಂತಾದವರು
ಸಂಗೀತ: ಆರ್.ಪಿ.ಪಟ್ನಾಯಕ್
ಶಂಕರ ಮತ್ತು ಗುಂಡನ ಮುಂದುವರಿದ ಕಥೆ
ಎರಡು ವರ್ಷಗಳ ಹಿಂದೆ ತೆರೆಕಂಡು ಹಿಟ್ ಆಗಿದ್ದ ‘ನಾನು ಮತ್ತು ಗುಂಡ’ ಚಿತ್ರದ ಮುಂದುವರಿದ ಭಾಗ ‘ನಾನು ಮತ್ತು ಗುಂಡ-೨’ ಕತೆಯನ್ನು ಹೇಳಿದೆ. ಶಂಕರನ ಅಗಲಿಕೆಯ ನೋವನ್ನು ಅರಗಿಸಿಕೊಳ್ಳಲಾಗದ ಗುಂಡ ಆತನ ಸಮಾಧಿಯ ಬಳಿಯೇ ಕಾಲ ಕಳೆಯುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ಶಂಕರನ ಪತ್ನಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವೇ ಶಂಕರನೆಂದು ತಿಳಿದು ಆತನ ಹಿಂದೆ ಸುತ್ತುತ್ತಲೇ ಇರುತ್ತಾನೆ. ಸ್ನೇಹಿತ ಗೋವಿಂದೆಗೌಡ ಶಂಕರನಿಗೂ ಇದ್ದ ಸಂಬಂದವೇನೆಂದು ಮನವರಿಕೆ ಮಾಡಿಕೊಡುತ್ತಾನೆ. ಅಂದಿನಿಂದ ಗುಂಡ ಅವನ ಜೀವನದ ಭಾಗವಾಗುತ್ತಾನೆ. ಗುಂಡ ವಯಸ್ಸು ಆಗಿ ಒಂದು ದಿನ ಉಸಿರು ನಿಲ್ಲಿಸುತ್ತಾನೆ.
ತನ್ನ ಹಾಗೆ ಗುಂಡನು ಎಲ್ಲೋ ಒಂದು ಕಡೆ ಪುನರ್ಜನ್ಮ ತಾಳಿರುತ್ತಾನೆಂದು ಹುಡುಕುತ್ತಾ ತಮಿಳುನಾಡಿಗೆ ಹೋಗುತ್ತಾನೆ. ಅಲ್ಲಿ ನಾಯಕಿಯ ಪರಿಚಯವಾಗುತ್ತದೆ. ಅವಳು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬೆಟ್ಟದ ಮೇಲೆ ನಿಂತಿರುವಾಗ ಗುಂಡ ತಡೆಯುತ್ತಾನೆ. ಇದರಿಂದ ಇಬ್ಬರಿಗೂ ಸಂಬಂದ ಬೆಳೆಯುತ್ತದೆ. ಮುಂದೆ ಮತ್ತೋಂದು ಜನ್ಮ ತಾಳಿರುವುದು ಇದೇ ಅಂತ ತಿಳಿದು ಆಕೆಯನ್ನು ಕೇಳಿದಾಗ ಅದನ್ನು ಕೊಡಲು ತಯಾರಿರುವುದಿಲ್ಲ. ಹೀಗೆ ಇಬ್ಬರ ವಾದ ವಿವಾದ ನಡೆದು ಯಾರ ಬಳಿಗೆ ಹೋಗುತ್ತಾನೆ ಎಂಬುದು ಕ್ಲೈಮಾಕ್ಸ್‌ದಲ್ಲಿ ತಿಳಿಯುತ್ತದೆ.
ನಿರ್ದೇಶಕ ರಘುಹಾಸನ್ ನೋಡುಗರ ಮನಸ್ಸನ್ನು ತಟ್ಟುವಲ್ಲಿ ಸಪಲರಾಗಿದ್ದಾರೆ. ಶಂಕರನ ಮಗನಾಗಿ ರಾಕೇಶ್‌ಅಡಿಗ ಕೊಟ್ಟ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ನಾಯಕಿ ರಚನಾ ಇಂದೂರ್, ಗೋವಿಂದೆಗೌಡ, ಅಪ್ಪನಾಗಿ ಅವಿನಾಶ್ ಮೂವರು ಚಿತ್ರಕ್ಕೆ ಜೀವ ತುಂಬಿದ್ದಾರೆ. ಆರ್.ಪಿ.ಪಟ್ನಾಯಕ್ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ. ಅದರಲ್ಲೂ ಶಿವನ ಸಾಂಗ್ ಜೀವ ತುಂಬಿದೆ. ಒಟ್ಟಾರೆ ಶ್ವಾನ ಪ್ರೀತಿಸುವವರಿಗೆ ಇದು ಹೇಳಿ ಮಾಡಿಸಿದ ಸಿನಿಮಾ ಎನ್ನಬಹುದು.
****