ಬ್ಯಾನರ್: ವಿಷ್ಣುದುರ್ಗಾ ಪ್ರೊಡಕ್ಷನ್
ನಿರ್ಮಾಪಕರು: ರಾಧಿಕಾ.ಎಸ್.ಆರ್ ಮತ್ತು ಚಿತ್ರಲೇಖಾ.ಎಸ್
ಕಥೆ,ಚಿತ್ರಕಥೆ, ಛಾಯಾಗ್ರಹಣ ಮತ್ತು ನಿರ್ದೇಶನ: ಸೆಲ್ವಂ ಮಾದಪ್ಪನ್
ತಾರಾಗಣ: ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್. ಉಳಿದಂತೆ ಅಚ್ಯುತಕುಮಾರ್, ಜಯಶ್ರೀ, ಉಗ್ರಂಮಂಜು, ಸಂದೀಪ್ಮಲಾನಿ, ಟಿ.ಎಸ್.ನಾಗಾಭರಣ, ಅವಿನಾಶ್, ಜಾಕ್ ಜಾಲಿಜಾಲಿ, ಚಂದ್ರಪ್ರಭಾ, ಪವನ್ಕುಮಾರ್ ಮುಂತಾದವರು
ಸಂಗೀತ: ಪಳನಿ ಸೇನಾಪತಿ
ಸರ್ಕಾರಿ ಶಾಲೆ ಉಳುವಿಗಾಗಿ ಚಿಣ್ಣರ ಹೋರಾಟ
ನಗರ ಹಾಗೂ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳು ಅಧೋಗತಿಗೆ ಬರುತ್ತಿದೆ. ಅಂತಹ ಶಾಲೆಗಳನ್ನು ಉಳಿಸುವ ಕುರಿತಾದ ‘ಗುರಿ’ ಚಿತ್ರ ಇದಾಗಿದೆ. ‘ನನ್ನ ಶಾಲೆಯನ್ನು ಪ್ರೀತಿಸುತ್ತೇನೆ’ ಎಂಬ ಅಡಿಬರಹ ಅರ್ಥಪೂರ್ಣವಾಗಿದೆ.
ವಿದ್ಯಾರ್ಥಿ ಮತ್ತು ಶಿಕ್ಷಕನ ಬಾಂದವ್ಯ, ಸರ್ಕಾರಿ ಹಾಗೂ ಖಾಸಗಿ ಶಾಲೆಯ ಸಂಘರ್ಷಗಳು. ಒಂದು ಹಂತದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹಂತ ತಲುಪುತ್ತದೆ. ವಿಷಯ ತಿಳಿದ ೩ನೇ ತರಗತಿಯ ಇಬ್ಬರು ಬುದ್ದಿವಂತ, ಧೈರ್ಯಶಾಲಿ ವಿದ್ಯಾರ್ಥಿಗಳು ಇದರ ವಿರುದ್ದ ಹೋರಾಟ ನಡೆಸಲು ಮುಂದಾಗಿ ಯಾರಿಗೂ ಹೇಳದೆ ಪಟ್ಟಣಕ್ಕೆ ಬರುತ್ತಾರೆ. ಅಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹರಸಾಹಸ ಪಡುತ್ತಾರೆ. ಹಾದಿಯಲ್ಲಿ ಯಾವ ಯಾವ ರೀತಿ ಅಡಚಣೆಗಳು ಬರುತ್ತದೆ. ಚಿಣ್ಣರಿಗೆ ಸಹಾಯ ಮಾಡಲು ಯಾರ‍್ಯಾರು ಮುಂದೆ ಬರುತ್ತಾರೆ. ಕೊನೆಗೆ ಹೋರಾಟದದಲ್ಲಿ ಹೇಗೆ ಸಪಲರಾಗುತ್ತಾರೆ? ಎಂಬುದನ್ನು ನವಿರಾಗಿ ತೋರಿಸಲಾಗಿದೆ.
ನಿರ್ದೇಶಕ ಸೆಲ್ವಂ ಮಾದಪ್ಪನ್ ಹೂ ಪೋಣಿಸಿದಂತೆ ಸನ್ನಿವೇಶಗಳನ್ನು ಸೃಷ್ಟಿಸಿರುವುದರಿಂದ ಎಲ್ಲಿಯೂ ಬೋರ್ ಆಗುವುದಿಲ್ಲ. ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಮೇಲೆ ಬೆಳಕು ಚಲ್ಲಿದ್ದು, ಅವರ ಶ್ರಮ ತೆರೆ ಮೇಲೆ ಕಾಣಿಸುತ್ತದೆ.
ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಮಾಸ್ಟರ್ ಮಹಾನಿಧಿ ಮತ್ತು ಮಾಸ್ಟರ್ ಜೀವಿತ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಶಿಕ್ಷಕರಾಗಿ ಅಚ್ಯುತಕುಮಾರ್, ಪೋಷಕರಾಗಿ ಉಗ್ರಂಮಂಜು-ಜಯಶ್ರೀ, ಮುಖ್ಯಮಂತ್ರಿಯಾಗಿ ಟಿ.ಎಸ್.ನಾಗಾಭರಣ, ಸರ್ಕಾರಿ ಅಧಿಕಾರಿಯಾಗಿ ಸಂದೀಪ್‌ಮಲಾನಿ, ಚಾನಲ್ ಮುಖ್ಯಸ್ಥರಾಗಿ ಅವಿನಾಶ್ ಉಳಿದಂತೆ ಜಾಕ್ ಜಾಲಿಜಾಲಿ, ಪವನ್‌ಕುಮಾರ್ ತಮ್ಮಗಳ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪಳನಿ.ಡಿ.ಸೇನಾಪತಿ ಸಂಗೀತ ಇದಕ್ಕೆ ಪೂರಕವಾಗಿದೆ.
****