Hacche.Reviews

Friday, August 22, 2025

ಚಿತ್ರಹಚ್ಚೆ****

ನಿರ್ದೇಶಕ: ಯಶೋದರ

ನಿರ್ಮಾಪಕ: ಅಣ್ಣಪ್ಪ.ದಿ-ಮಧೂಸೂದನ್.

ತಾರಾಗಣ: ಅಭಿಮನ್ಯು, ಆದ್ಯಪ್ರಿಯ, ಅನುಪ್ರೇಮ, ಗುರುರಾಜ್ ಹೊಸಕೋಟೆ ಮುಂತಾದವರು

ಸಂಗೀತ: ವಿವೇಕ್ ಚಕ್ರವರ್ತಿ

 

ಪುನರ್ಜನ್ಮ ಸಾರುವ ಹಚ್ಚೆ

      ಹೊಸಬರ ‘ಹಚ್ಚೆ’ ಚಿತ್ರವು ಪುನರ್‌ಜನ್ಮದ ಕಥೆಯನ್ನು ಹೇಳಲಿದೆ. ವಿಜಯನಗರ  ಸಾಮ್ರಾಜ್ಯದಲ್ಲಿ ಶ್ರೀ ಕೃಷ್ಣದೇವರಾಯರ ಆಳ್ವಿಕೆಯ ವೈಭವದ ಕಾಲದಲ್ಲಿ ಅಮೂಲ್ಯ ಗ್ರಂಥ ಭಂಡಾರ, ಸಿರಿಸಂಪತ್ತು, ವಜ್ರ ವೈಡೂರ್ಯಗಳ ರಾಶಿಗಳನ್ನು ನಿಗೂಡ ಸ್ಥಳದಲ್ಲಿ ಸುರಕ್ತಿತವಾಗಿಟ್ಟರು. ಅದನ್ನು ವಶಪಡಿಸಿಕೊಳ್ಳಲು ಹೊರಟವರ ಹಾಗೂ ಸಂರಕ್ಷಿಸುವನ ಮಧ್ಯೆ ನಡೆಯೋ ಹೋರಾಟದ ಹಾದಿಯೇ ಒಂದು ಏಳೆಯ ಕಥೆಯನ್ನು ಹೊಂದಿದೆ. ತನ್ನ ಕೆಲಸವಾಯಿತು ಎಂದು ಸುಮ್ಮನಿದ್ದ ಸೂರ್ಯನಿಗೆ ಯಾರಾದರೂ ವೈರಿಗಳು ಎದುರಾದರೆ, ಅವರಿಗೆ ತಕ್ಕ ಶಾಸ್ತ್ರ ಮಾಡುತ್ತಾನೆ. ಪತ್ರಕರ್ತೆ ಸಮಾಜದಲ್ಲಿ ನಡೆಯುವ ದುಷ್ಕ್ರತ್ಯಗಳ ಬಗ್ಗೆ ಬೆಳಕು ಚೆಲ್ಲುತ್ತಾಳೆ. ಭೂಗತ ಲೋಕದಲ್ಲಿ ತನ್ನದೆ ಸಾಮ್ರಾಜ್ಯ ಕಟ್ಟಿಕೊಂಡು ಓಡಾಡುತ್ತಿದ್ದ ಉಗ್ರಸೇನಾನ ಶಿಷ್ಯಂದಿರು ಕೆಟ್ಟ ಕೆಲಸ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಿಸಿಬಿ ಅಧಿಕಾರಿ ರಣವೀರ್ ಇವರನ್ನು ಸದೆಬಡಿಯಲು ಮುಂದಾಗುತ್ತಾರೆ. ಮತ್ತೋಂದು ಕಡೆ ಇಬ್ಬರು ಹುಡುಗಿಯ ಪ್ರೀತಿ. ಕೊನೆಗೆ ಇವೆಲ್ಲಾವನ್ನು ಸಾಧಿಸಿ ಹೊರಗೆ ಬರುತ್ತಾನಾ ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು.

      ನಾಯಕನಾಗಿ ಅಭಿಮನ್ಯು ಮೆಕ್ಯಾನಿಕ್ ಆಗಿ ಗಮನ ಸೆಳೆಯುತ್ತಾರೆ. ಅನುಪ್ರೇಮ ಮತ್ತು ಆದ್ಯಪ್ರಿಯ ನಾಯಕಿಯರಾಗಿ ತೆರೆ ಮೇಲೆ ಚೆಂದ ಕಾಣಿಸುತ್ತಾರೆ. ಗುರುರಾಜ ಹೊಸಕೋಟೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಯಶೋಧರ ನಿರ್ದೇಶನದಲ್ಲಿ ಕತೆಗೆ ಪೂರಕವಾಗುವಂತೆ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತದಲ್ಲಿ ಹಾಡುಗಳು ಕೇಳಬಲ್. ಅಂತಿಮವಾಗಿ ಸೆಸ್ಪನ್ಸ್ ಥ್ರಿಲ್ಲರ್ ಸಿನಿಮಾವನ್ನು ಸುಂದರವಾಗಿ ತೋರಿಸಿದ್ದಾರೆಂದು ಹೇಳಬಹುದು.

****

 

Copyright@2018 Chitralahari | All Rights Reserved. Photo Journalist K.S. Mokshendra,