ಚಿತ್ರ: ದೂರ ತೀರ ಯಾನ ****
ನಿರ್ದೇಶನ: ಮಂಸೋರೆ
ನಿರ್ಮಾಣ: ಆರ್.ದೇವರಾಜ್
ತಾರಾಗಣ: ವಿಜಯ್ಕೃಷ್ಣ, ಪ್ರಿಯಾಂಕಕುಮಾರ್, ಶ್ರುತಿಹರಿಹರನ್, ಶರತ್ಲೋಹಿತಾಶ್ವ, ಸುಧಾರಾಣಿ,ಅರುಣ್ಸಾಗರ್, ಸುಧಾಬೆಳವಾಡಿ ಮುಂತಾದವರು.
ಪಯಣದಲ್ಲಿ ಸಾಗುವ ಸಂಬಂಧಗಳ ಮಿಲನ
ಪ್ರೀತಿಗಾಗಿ ಹೋರಾಡುವ, ತ್ಯಾಗ ಮಾಡುವ ಹಲವು ಚಿತ್ರಗಳು ಬಂದಿವೆ. ಆದರೆ ‘ದೂರತೀರ ಯಾನ’ ಸಿನಿಮಾದಲ್ಲಿ ಇಂತಹುದೆ ಅಂಶಗಳು ಇದ್ದರೂ ವಿಭಿನ್ನ ರೀತಿಯಲ್ಲಿ ಹೇಳಿರುವುದು ಪ್ಲಸ್ ಪಾಯಿಂಟ್ ಆಗಿದೆ. ಕಥೆಯಲ್ಲಿ ವಯಲಿನ್ ನುಡಿಸುಕೊಂಡು ಹಾಡುವ ಗಾಯಕ ಆಕಾಶ್ ಮತ್ತು ಫ್ಲೂಟ್ ನುಡಿಸುವ ಭೂಮಿ ಐದು ವರ್ಷಗಳಿಂದ ಲವ್ ಮಾಡುತ್ತಾ ಒಂದೇ ಮನೆಯಲ್ಲಿ ಲಿವಿಂಗ್ ಟುಗೆದರ್‌ದಲ್ಲಿ ಇರುತ್ತಾರೆ. ಸಣ್ಣ ಸಣ್ಣ ವಿಷಯಗಳಿಗೂ ಇಬ್ಬರಲ್ಲೂ ಜಗಳ ಆಗುತ್ತಲೆ ಇರುತ್ತದೆ.
ನಮ್ಮಿಬ್ಬರಲ್ಲಿ ಏನೋ ಒಂದು ಸರಿಯಿಲ್ಲವೆಂದು ತಿಳಿದಾಗ, ಒಂದು ವಾರ ಪಯಣ ಮಾಡಲು ನಿರ್ಧರಿಸುತ್ತಾರೆ. ಎಲ್ಲಿಗೆ ಹೋಗಬೇಕೆಂದು ಕಾರಿನಲ್ಲೇ ಚರ್ಚಿಸುತ್ತಾರೆ. ಕೆಲವೊಮ್ಮೆ ಈತನ ಗುಣ ಆಕೆ ಇಷ್ಟವಾಗುತ್ತಿರುವುದಿಲ್ಲ. ಅದೇ ರೀತಿ ಅವಳ ವರ್ತನೆ ಇವನ ಮನಸ್ಸಿಗೆ ನೋವುಂಟು ಮಾಡುತ್ತಿರುತ್ತದೆ. ಕೊನೆಯಲ್ಲಿ ಕಂಡುಕೊಂಡ ಸತ್ಯವೇನು? ಅಂತಿಹವಾಗಿ ಯಾವ ನಿರ್ಧಾರಕ್ಕೆ ಬರುತ್ತಾರೆ. ಮದುವೆಯಾಗ್ತಾರಾ ಎಂಬುದಕ್ಕೆ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ.
ವಿಜಯ್‌ಕೃಷ್ಣ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಪ್ರಿಯಾಂಕಕುಮಾರ್ ನಾಯಕಿಯಾಗಿ ಗಮನ ಸೆಳೆದಿದ್ದಾರೆ. ಹೊಸ ಗೆಟಪ್‌ದಲ್ಲಿ ಶರತ್‌ಲೋಹಿತಾಶ್ವ, ಉಳಿದಂತೆ ಶ್ರುತಿಹರಿಹರನ್, ಸುಧಾರಾಣಿ, ಅರುಣ್ಸಾಗರ್, ಸುಧಾಬೆಳವಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಾರ್ತಿಕ್‌ಬಕ್ಕೇಶ್ ಹಿನ್ನಲೆ ಸಂಗೀತ ಸಿನಿಮಾಕ್ಕೆ ಶಕ್ತಿ ತುಂಬಿದೆ. ಶೇಖರ್‌ಚಂದ್ರ ಕ್ಯಾಮಾರದಲ್ಲಿ ಕಡಲ ಕಿನಾರೆ, ಮೀನುಗಾರರ ಫಿಷಿಂಗ್, ಬೋಟ್‌ಹೌಸ್ ತಾಣಗಳು ಕಣ್ಣಿಗೆ ತಂಪು ಕೊಡುತ್ತದೆ. ಒಂದು ಸಣ್ಣದಾದ ಅಂಶವನ್ನು ನೋಡುಗರಿಗೆ ಬೋರ್ ಆಗದಂತೆ ನಿರ್ದೇಶನ ಮಾಡಿರುವ ಮಂಸೋರೆ ಶ್ರಮ ತೆರೆ ಮೇಲೆ ಕಾಣಿಸುತ್ತದೆ.
****