Hagga.Reviews

Friday, September 20, 2024

205

ಕುತೂಹಲಗಳ ಹಿಂಡು ಹಗ್ಗ****

     ಹಾರರ್ ಅಂಶಗಳನ್ನು ಒಳಗೊಂಡಿರುವ ‘ಹಗ್ಗ’ ಚಿತ್ರವು ನೋಡುಗರಿಗೆ ಖುಷಿ ಕೊಡುತ್ತದೆ. ಅದೊಂದು ನಾಗೇಕೊಪ್ಪು ಕಾಡಿನಲ್ಲಿರುವ ಊರು. ಅಲ್ಲಿ ಹೆಣ್ಣು ಮಗು ಜನನವಾದರೆ ಮನೆಯ ಅತ್ತೆ ನೇಣು ಬಿಗಿದ ಸ್ಥಿತಿಯಲ್ಲಿ ಸುಟ್ಟು ಹೋಗಿರುತ್ತಾಳೆ. ಇದು ಊರಿಗೆ ಸಂಕಷ್ಟವಾಗಿ ಗೌಡರು ಪರಿಹಾರಕ್ಕಾಗಿ ದಾರಿ ಹುಡುಕುತ್ತಿರುತ್ತಾರೆ. ಆದರೆ ಈತನ ಮಗ ಒಂದು ಹುಡುಗಿಯ ಮೇಲೆ ಕಣ್ಣು ಬೀಳುತ್ತದೆ. ಅವಳ ಗುಂಗಿನಲ್ಲಿದ್ದ ಕಂಡ ತಾಯಿ ಸೋದರಮಾವನ ಬಳಿ ಕಳಿಸುತ್ತಾಳೆ. ಅಲ್ಲಿಯೂ ಟಿವಿ ವರದಿಗಾರ್ತಿನ್ನು ಇಷ್ಟಪಡುತ್ತಾನೆ. ಅವಳು ಮಾಟ, ಮಂತ್ರದ ವಿಚಾರ ತಿಳಿದು ಸತ್ಯದ ಹಿಂದೆ ಬೆನ್ನಟ್ಟಿದಾಗ, ಘೋರ ಘಟನೆಯ ಕಥೆ ಬಿಚ್ಚಿ ಕೊಳ್ಳುತ್ತದೆ. ಅದು ಯಾವುದು. ಉದ್ದೇಶ ಏನು? ಹಗ್ಗದ ಹಿಂದಿರುವ ಸತ್ಯ ತಿಳಿಯಲು ಸಿನಿಮಾ ನೋಡಬೇಕು.

       ನಿರ್ದೇಶಕ ಅವಿನಾಶ್ ಚಿತ್ರಕಥೆಯನ್ನು ಚೆನ್ನಾಗಿ ನಿರೂಪಿಸಿರುವುದು ತೆರೆ ಮೇಲೆ ಕಾಣಿಸುತ್ತದೆ. ಸಾವಿತ್ರಿಯಾಗಿ ಅನುಪ್ರಭಾಕರ್ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಇವರೊಂದಿಗೆ ಹರ್ಷಿಕಾಪೂರ್ಣಚ್ಚಾ,  ಪ್ರಿಯಾಹೆಗಡೆ, ಅವಿನಾಶ್, ತಬಲನಾಣಿ, ನಗಿಸಲು ಸಂಜುಬಸಯ್ಯ ಮುಂತಾದವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬಂದಿದ್ದು, ಗ್ರಾಫಿಕ್ಸ್, ವಿಎಫ್‌ಎಕ್ಸ್ ಚಿತ್ರಕ್ಕೆ ಶಕ್ತಿ ತುಂಬಿದೆ ಎನ್ನಬಹುದು. ಮ್ಯಾಥ್ಯೂಸ್‌ಮನು ಸಂಗೀತ, ಸಿನಿಟೆಕ್ ಸೂರಿ ಛಾಯಾಗ್ರಹಣ, ಎಂ.ಎನ್.ವಿಶ್ವ ಸಂಕಲನ, ಮನೋಹರ್.ಎಸ್.ಪಿ ಸಂಭಾಷಣೆ ಇದೆ.  ಒಟ್ಟಿನಲ್ಲಿ ಟಿಕೆಟ್‌ಗೆ ಮೋಸ ಮಾಡುವುದಿಲ್ಲ.   ರಾಜ್ ಭಾರದ್ವಾಜ್  ಕಥೆ ಬರೆದು  ವಸಂತ ಸಿನಿ ಕ್ರಿಯೇಶನ್ಸ್ ಲಾಂಛನದಡಿಯಲ್ಲಿ ಬಂಡವಾಳ ಹೂಡಿದ್ದಾರೆ.

****

Copyright@2018 Chitralahari | All Rights Reserved. Photo Journalist K.S. Mokshendra,